Friday, December 28, 2012

ನಿಮ್ಮ ಆತ್ಮೀಯತೆಗೊಂದು ಸಲಾಮ್

ಬೆಳೆಗ್ಗೆ ಬೆಳಿಗ್ಗೆ exam !...BE ಲೈಫ್ ನಾ ಮೊದಲ ಪರೀಕ್ಷೆ ಬರೆಯ ಹೊರಟಿದ್ದೆ ..ಪರೀಕ್ಷೆ ಆದ್ರೂ daily routine ನಾ ಹೆಂಗೆ ಬಿಡೋಣಾ ಹೇಳಿ ?..ಫೇಸ್ ವಾಷ್ ಮಾಡೋಕೂ ಮುಂಚೆ ಫೇಸ್ ಬುಕ್ ನೋಡ್ಬೇಕು ..ದೇವ್ರಿಗೆ ಹಾಯ್ ಹೇಳೋಕೂ ಮುಂಚೆ ಫೇಸ್ ಬುಕ್  ಗೆ ಗುಡ್ ಮಾರ್ನಿಂಗ್ ಹೇಳಬೇಕಲ್ವಾ ?..ಹಂಗೇನೆ ನಿನ್ನೇನೂ ಬೆಳಿಗ್ಗೆ ೪ ಕ್ಕೆ ಸಿಸ್ಟಮ್ ಆನ್ ಆಗಿತ್ತು!
ಒಂದಿಪ್ಪತ್ತು notifications ,ಒಂದೈವತ್ತು messages ಗಳು ಅಣುಕಿಸುತ್ತಿತ್ತು .
ಯಪ್ಪಾ ..ಇದೇನಪ್ಪಾ ಅಂದುಕೊಂಡೆ ..ಆಮೇಲೆ ನೆನಪಾಗಿದ್ದು ..ನಂಗೂ ಹದಿನೆಂಟ್ ಆಯ್ತು ನಿನ್ನೇಗೆ ಅಂತ .೦ ೦
ಮರೆತೇ ಹೋಗಿತ್ತು ನೋಡಿ ..ಪರೀಕ್ಷೆಯ ಕಾರುಬಾರಿನಿಂದ mobile ಎಂಬ ಮುದ್ದು ಗೆಳೆಯ silent  ಆಗಿದ್ದ ೨ ದಿನದಿಂದ !..ಕಷ್ಟ ಪಟ್ಟು ಸೈಲೆಂಟ್ ಮಾಡಿದ್ದೆ ಬಿಡಿ .

'ಗೆಳೆತನ 'ದ ಮೊದಲ ಆತ್ಮೀಯತೆಯನ್ನು ತೋರಿಸಿದ್ದ ಗೆಳತಿ ಅರ್ಚನಾ ಮಾಡಿದ್ದ wishes ಗೆ ಕಣ್ಣಲ್ಲಿ ಮಾತು ಬಂದಿತ್ತು .this is the sentiment i have with u dear friend..!!
ನಿನ್ನ ಪರ್ಮಿಷನ್ ಕೇಳದೇ ನಿನ್ನ ಮಾತುಗಳನ್ನ ಇಲ್ಲಿ ಜೋಪಾನ ಮಾಡುತ್ತಿದ್ದೇನೆ ..sorry ಕೇಳು ಅನ್ಬೇಡ .. ನಾನ್ ಕೇಳಲ್ಲ..


'ನಲ್ಮೆಯ ಗೆಳತೀ ...
ಐದಾರು ತಿಂಗಳುಗಳೇ ಕಳೆದು ಹೋತು ನಿನ್ನ ನೋಡಿ !!..ದಿನಪೂರ್ತಿ ಹರಟಿದ್ದು ,ಜೊತೆಯಾಗಿ ನಕ್ಕಿದ್ದು,ಕುಣಿದಿದ್ದು ,ನಲಿದಿದ್ದು ..ಎಲ್ಲಾ ಮೊನ್ನೆ ಮೊನ್ನೆ ಅಂತಿದ್ದು ..ವಾಸ್ತವ ಮರೆತು ನಿನ್ನೊಟ್ಟಿಗೆ ಗತದಲ್ಲೇ ಇರುವ ಬಯಕೆ ನಂದು !ಹಮ್ ...ಮುಂದೆ ಹೋಗ್ಲೇ ಬೇಕು ..ಜೀವ್ನಾ ನೋಡ್ಲೆ ಬೇಕು ..ಅಲ್ವಾ ?
ಇಲ್ಲಿ ಪಾನಿಪುರಿ ತಿನ್ನೋವಾಗ , ಮಸ್ತಿ ಮಾಡುತ್ತಿರೋ ಫ್ರೆಂಡ್ಸ್ ಗ್ರೂಪ್ ಕಂಡಾಗ ,boaring lectures ಕೇಳೋವಾಗ ..ದಿನಕ್ಕೊಮ್ಮೆ ಆದ್ರೂ ನೆನಪಾಗ್ತೀಯಾ ..ಅದ್ಯಾವ ಪರಿ ಮನದೊಳಗೆ ಇಳಿದ್ಯೋ ನಾ ಕಾಣೆ ..
hischool ಮೊದಲ ದಿನದಿಂದ ಹಿಡಿದು  ಮುಗ್ಯೋ ತನಕ ನಾವ್ ಮಾಡಿರೋ ಮಸ್ತಿ ಗೆ ಲೆಕ್ಕಾನೇ ಇಲ್ವಲ್ಲೆ ಕೂಸೇ ..ಕಾರಿಡಾರ್ ನಲ್ಲಿ juniars ಎದ್ರು dummy ಮಾಡೋದು ,ನಾಟಕ ,ಪ್ರಾಕ್ಟೀಸ್ ,ಸ್ಪೋರ್ಟ್ಸ್ ,ಅದೂ ಇದು ಅಂತ  ಕ್ಲಾಸ್ ಬಂಕ್ ಮಾಡೋದು ...ಪಕ್ಕಾ ಹುಡುಗರ್ ತರಾನೇ ಆಡ್ತಿದ್ವಿ ..ನಿದ್ದೆ ಬಂದ್ರೆ ಎಳ್ಸು ಅಂತ ಫಸ್ಟ್ ಬೆಂಚ್ ನಲ್ಲೆ ನಿದ್ದೆ ಮಾಡ್ತಿದ್ದಿದ್ದು ,ಸುಮ್ನೆ ನಿಂಗೆ smile ಮಾಡೋ ಹುಡುಗರ ಹೆಸರು ಹೇಳಿ ದಿನಪೂರ್ತಿ ಕಾಲೆಳೆದು ಗೋಳು ಹೊಯ್ಕೊಳೋದು almost language ಕ್ಲಾಸ್ ಗಳು ಕ್ಯಾಂಟೀನ್  ನಲ್ಲಿ! ..ನೀ ಮಾತಾಡೋಕೆ ಸಿಗೋದೆ ಆಗ ಮಾತ್ರ ..
ಇದೆಲ್ಲಾ ಗೋಲ್ಡನ್ ಡೇಸ್ ಅಂತಾರಲ್ಲ ಅದು ..ಪ್ರತಿ ದಿನ ಕಳೆದ ಮೇಲೆ save changes ಅನ್ನೋ option  ಇದ್ದಿದ್ರೆ  ಎಷ್ಟು ಚಂದ ಇರ್ತಿತ್ತು ಅಲ್ವಾ ?

ಈಗ ಇದ್ಯಾವ್ದು  ಇಲ್ಲ .ಬರಿಯ ಫೇಸ್ಬುಕ್ ,ಫೋನ್ ,skype ಇಷ್ಟೇ ನಿನ್ನ ಭೇಟಿಯ ಡೆಡ್ end ...ಅದೂ ತೀರಾ ಅಪರೂಪ ..ಆದ್ರೂ ಬಿಟ್ಟಿಲ್ಲ ನಿನ್ನ ನಾ ..ಒಂದೇ status ನಲ್ಲಿ ೧೦೦ ಕಾಮೆಂಟ್ಸ್ ಮಾಡೋ ಅಷ್ಟು  ತರಲೆ !ಕಾಲು ಎಳ್ಯೋ ರೇಂಜ್ ಗೆ ಉದ್ದ ಮಾತ್ರ ಅಲ್ಲ ಅಲ್ಲ ..ಸ್ವಲ್ಪ ದಪ್ಪಾನೂ ಆಗಿದ್ದೀಯಾ ..ಇನ್ನೂ ಚಾನ್ಸ್ ಇದೆ ಎಳ್ಯೋಕೆ ..ನಿನ್ನ ಒಲವು ,ನಲಿವು ,ಒಂದು ಮುಗುಳ್ನಗು ,ಒಂದು ಕಂಬನಿಯ ಮೌನದ ಮಾತನ್ನು ನೋಡಿದ ಮೇಲಂತೂ ಬರಿಯ ಗೆಳತಿಯಾಗಿ ಉಳಿದಿಲ್ಲ ..!ಹುಡುಗ ಆಗಿದ್ರೆ ನಿಜವಾಗ್ಲು ನನ್ನೀ ಗೆಳತಿಗೆ propose ಮಾಡ್ತಿದ್ದೆ ..ಹಾ ಹಾ .

ಆದ್ರೂ ನೀನ್ ತುಂಬಾ careless ಕಣೆ ...ಅದೆಷ್ಟು ಮರೆವು ನಿಂಗೆ ..ನೆನಪಿಗೆ ಬಂದಾಗಲೆಲ್ಲಾ ಮುಖದಲ್ಲೊಂದು smile ಬಿಟ್ಟೆ ಹೋಗ್ತೀಯಾ ...!!
really missing a friend like u BHAGO ..
ಪ್ರೀತಿಯ ಗೆಳತಿ ..
ಮತ್ತೊಮ್ಮೆ ಜನುಮ ದಿನದ ಶುಭಾಷಯಗಳು ..
ಚಿರಾಯುವಾಗು "


ಗೆಳತಿ ...ನಿಜಕ್ಕೂ ಟೈಪ್ ಮಾಡೋವಾಗ್ಲೂ ಕಣ್ಣ ಹನಿಗಳು ಇದನ್ನ ಮಬ್ಬಾಗಿಸ್ತಿದೆ ..ನಿನ್ನೀ ಆತ್ಮೀಯತೆ  ,ಸ್ನೇಹಕ್ಕೆ ಎನೇನ್ನಬೇಕೋ ತಿಳಿದಿಲ್ಲಾ ..badly missing you ..
ಇಬ್ಬರಿಗೂ ಬದುಕು ಕಟ್ಟಿ ಕೊಳ್ಳುವ ಕಾತರ ನೋಡು ..


ನಿಂಗೊತ್ತಾ ಗೆಳತಿ ನನ್ನೀ ಬ್ಲಾಗ್ ಲೋಕ ಅದೆಷ್ಟೋ ಆತ್ಮೀಯರನ್ನು ನನ್ನವರನ್ನಾಗಿಸಿದೆ ..ಬರವಣಿಗೆ ಚೆನಾಗ್ ಇಲ್ದೆ ಇದ್ರೂ ಬೆನ್ನು ತಟ್ಟೋ ಅಣ್ಣಂದಿರಾದ ಪ್ರಕಾಶ್ ಜಿ ,azaad ಸರ್ ,ಚಿನ್ಮಯಣ್ಣ ,ಶ್ರೀಕಾಂತ್ ಜಿ, ಶ್ರೀವತ್ಸ ,ಬಾಲು ಸರ್,ಬದರಿ ಸರ್ ,ಪ್ರಶಸ್ತಿ ,ವಿಜಯ್ ಜಿ ..ಇನ್ನೂ ತುಂಬಾ ಮಂದಿ ..ಇವರ ಪ್ರೋತ್ಸಾಹ ಯಾರನ್ನಾದ್ರು ಹುರಿದುಂಬಿಸುತ್ತೆ ...
ನಂಗೆ ಮೊದಲ wishes ಯಾರದು ಗೊತ್ತಾ ..ಪುಟ್ಟಿ ಅಂತಾನೇ ಕರಿತಾರೆ ..ಒಂದ್ ಸಲ ಮಾತಾಡಿದ್ರೆ ಆತ್ಮೀಯರು ಅನ್ನಿಸದೆ ಇರಲ್ಲ ..ನೋಡು .ನನ್ನೆಲ್ಲ ಮಾತಿಗೂ ಇವರದ್ದೊಂದು ಆತ್ಮೀಯ ಪ್ರತಿಕ್ರಿಯೆ ಕಾದಿರುತ್ತೆ ..ನೀನೆ ನೋಡು ಶ್ರೀಕಾಂತ್ ಅಣ್ಣನ ಮಾತನ್ನ ...ನಿಜಕ್ಕೂ ಮನ  ತುಂಬಿ ಬಂದಿತ್ತು ..

"
ಮತ  ಹಾಕಲು ಆಗಬೇಕು ಹದಿನೆಂಟು
ಅಲ್ಲಿಯ  ತನಕ ಸುಮ್ಮನೆ ತಿನ್ನಬೇಕು ಪೆಪ್ಪರಮೆಂಟು 
ಮನೋರಮೆಯಲ್ಲಿ ಇರಬೇಕಾದ ಪುಟ್ಟಿ
ಮಾಯ್ನೋರ್ಮನೆಯ ಭಾಗ್ಯಲಕ್ಷ್ಮಿಯಾಗಿ
ಬ್ಲಾಗಿನಲ್ಲಿ ಭಾಗ್ಯೋದಯಿಸಿರುವ
ಭಾಗ್ಯಾ ಪುಟ್ಟಿ ಹುಟ್ಟು ಹಬ್ಬದ ಶುಭಾಶಯಗಳು
ನಿನ್ನ ಎಲ್ಲಾ ಕನಸುಗಳು ನನಸಾಗಲಿ
ನನಸುಗಳೆಲ್ಲಾ ಸೊಗಸಾಗಲಿ
ಆ ಸೊಗಸಿನಲ್ಲಿ ಪದಗಳ ಭಾವ ಲಹರಿ  ಹರಿಯಲಿ "

ಶ್ರೀಕಾಂತ್ ಜಿ ನನ್ನೆಲ್ಲಾ ಭಾವಕ್ಕೆ ಪ್ರೋತ್ಸಾಹಿಸಿದ್ದೀರಿ ...ಈ ಪ್ರೋತ್ಸಾಹ ನಿರಂತರವಾಗಿರಲಿ ..ತುಂಬಾನೇ ಖುಷಿ ಆಯ್ತು .


ಸ್ವೀಟ್ teen ಮುಗೀತು ಗೆಳತಿ ..ಮುಂದಿನದೆಲ್ಲಾ ಬರಿಯ ಜವಾಬ್ದಾರಿಗಳು ಎಂಬುದನ್ನ ಸೂಕ್ಷ್ಮವಾಗಿ ತಿಳಿಸಿದಂತಿದೆ ..
you both made maa  ಡೇ ..ಹರಸಿ ಹಾರೈಸಿ ಶುಭಾಶಯವನ್ನಿತ್ತ ಎಲ್ರಿಗೂ ಇಲ್ಲಿಂದ ಧನ್ಯವಾದ ಹೇಳ ಹೊರಟಿದ್ದೇನೆ ...

ಇನ್ನೊಂದು ತಿಂಗಳು ಬರಿಯ exam ಗಳದ್ದೇ ಕಾರುಬಾರು ..ರೂಟೀನ್ ಚೇಂಜ್ ..ಪುಸ್ತಕಗಳ ಜೊತೆ ಇನ್ನಾದ್ರು ಮಾತಡ್ಲೇ ಬೇಕು ..ಕಷ್ಟ ಸುಖ ಮಾತಾಡ್ಕೊಂಡು ಮತ್ತೆ ವಾಪಸ್ ಆಗ್ತೀನಿ ಇನ್ನೊಂದು ತಿಂಗಳಲ್ಲಿ ..

ಹಂಗೆ ಸುಮ್ನೆ ಒಂದ್ wish ಮಾಡ್ಬಿಡಿ exam ಚೆನಾಗ್  ಆಗ್ಲಿ ಅಂತ ..


ಮತ್ತೆ ಸಿಗೋಣಾ ....
Tuesday, December 25, 2012

ನೀನ್ಯಾರೋ ಹುಡುಗಾ ...?!

ತುಂಬಾ ದಿನದಿಂದ ಇದೊಂದು ಪ್ರಶ್ನೆ ತಲೆ ತಿನ್ನುತ್ತಿತ್ತು ಗೆಳೆಯಾ ..ಯಾರೆದುರಿಗೋ ನನ್ನ ಕಣ್ಣೀರನ್ನು ಹಂಚಿಕೊಂಡಿರಲಿಲ್ಲ .ಆದರೆ ಅಂದು ಅಮ್ಮ ಬೇಕು ,ತುಂಬಾನೇ ನೆನಪಾಗ್ತಾ ಇದಾಳೆ ಎಂದು ಪಾಪು ತರ ಹಠ ಮಾಡಿದ್ದೆ ನಿನ್ನೆದುರು .ಆ ರಾತ್ರಿ ಅದೆಷ್ಟು ಸಮಾಧಾನಿಸಿದ್ದೆ ನೀ !!...
ಅವತ್ತೇ ಅಂದುಕೊಂಡಿದ್ದು ,ನನಗೆ ನಿನ್ನೊಟ್ಟಿಗಿರುವುದು ಬರಿಯ ಸ್ನೇಹವಲ್ಲ ..ನನ್ನ ಒಲವಿಗೆ ಕಣ್ಣ ಹನಿಗಳು ಸಾಕ್ಷಿಯಾಗಿತ್ತು .
ಈಗಲೂ ರೆಗಿಸ್ತೀಯಾ 'ಇವತ್ತು ಅಮ್ಮ ಬೇಡ್ವೆನೇ ನಿಂಗೆ .,ಮದ್ವೆ ಆದಮೇಲೆ ಏನ್ ಮಾಡ್ತೀಯಾ ?ಪಾಪ ಕಣೆ ನಿನ್ ಹುಡುಗ .ಸ್ವಲ್ಪ ಅವ್ನಿಗೂ ಪ್ರೀತಿ ಗೀತಿ ತೋರ್ಸು 'ಅಂತೆಲ್ಲಾ..  ನಕ್ಕು ಸುಮ್ಮನಾಗಿದ್ದೆ .ಈಗ ಗೊತ್ತಾಗಿದೆ ಗೆಳೆಯ  ನನ್ನ ಹುಡುಗನ ಬಗ್ಗೆ ನಿನಗ್ಯಾಕೆ ಅಷ್ಟೊಂದು ಕೇರ್ ಎಂದು !

ನೆನಪಿದ್ಯಾ ನಿಂಗೆ ..  ಅಂದು campus ನಲ್ಲಿ rag ಮಾಡಿದ್ದಾಗ ನಾ ಮಾಡಿದ್ದ ಸಿಟ್ಟು ..ತಪ್ಪನ್ನಿಟ್ಟುಕೊಂಡು sorry ಕೇಳದ ನಿನ್ನ ಮೇಲೆ ಮುನಿಸಿಕೊಂಡಿದ್ದೆ .ನಿನ್ನ attitude ನಾ ಮೊದಲ ಪರಿಚಯ ಆಗಿತ್ತು ಅವತ್ತು .. ಅಮ್ಮ ಫೋನ್ ಮಾಡಿ ಮಗನ ಕಿಲಾಡಿಗಳಿಗೆ sorry ಅಂದಿದ್ದರು .'ಬೇಸರಿಸದಿರು ಪುಟ್ಟಿ ,ನನ್ನ ಮಗ ಸ್ವಲ್ಪ ತುಂಟ ..ನಿನ್ನೆ ನಿಂಗೆ rag ಮಾಡಿದ್ದು ,ನೀನು ಬೇಸರಿಸಿದ್ದು ಎಲ್ಲಾ ತಿಳಿಯಿತು .ನಿನ್ನ ಬೇಸರ ಅವನಿಗೂ ಬೇಸರ ತಂದಿದೆ ,'ಎಂದೆಲ್ಲಾ ನಿನ್ನ ಬಗ್ಗೆ ,ನಿನ್ನ attitude .ego  ಗಳ ಬಗ್ಗೆ ತಿಳಿಸಿದ್ದರು ..ನಂತರ ನೀ sorry ಕೇಳಿದ್ದೆ ಬಿಡು !..ಮತ್ತೆ ಸಿಕ್ಕಿತ್ತು ನಿನ್ನ ಸ್ನೇಹ ..
ಒಳ್ಳೆಯ ಗೆಳೆಯನಾದೆ .ಅದೆಷ್ಟೋ ಮಾತುಗಳು ,ಕೀಟಲೆಗಳು ,proposals ಗಳ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಿದ್ದೆವು !.ಅಂದು ನಾ committed ಜನಗಳಿಗೆ ಬೈದು ಲೆಕ್ಚರ್ ಹೇಳಿದ್ದೆ ನಿಂಗೆ ..ಅವರವರ ಜೀವನ ಬಿಡು ..ಯಾರೋ ಅಷ್ಟೊಂದು ಆತ್ಮೀಯತೆ ,ಪ್ರೀತಿ ತೋರಿಸುತ್ತಾರೆ ಎಂದಾಗ ಯಾಕ್ reject ಮಾಡಬೇಕು ಎಂದು ಒಂದೇ ಲೈನ್ ಲಿ ನಿನ್ನ ಅಭಿಪ್ರಾಯ ಮುಂದಿಟ್ಟಾಗ  ನಿಜಕ್ಕೂ ಮೆಚ್ಚಿದ್ದೆ !..
'ನಿನ್ನ BE ಲೈಫ್ ಮುಗಿಯೋ ತನಕ ನಿನ್ನನ್ನು ಯಾವ ಹುಡುಗಿಯೂ ನೋಡೋಕೆ ಬಿಡಲ್ಲ ನಾನು ,ಕ್ಯಾಂಪಸ್ ಲಿ ಕೈ ಕೈ ಹಿಡಿದು ಓಡಾಡೋಕೆ ಆಗಲ್ಲ ನಿಂಗೆ ,no crush ,no touch ,no warmth of love ,ನಿಜವಾಗಲು ಪಾಪ ಅನಿಸ್ತಿದೆ ..ಇದ್ಯಾವ್ದು ಇಲ್ದೆ ಸ್ಟೂಡೆಂಟ್ ಲೈಫ್ ಮುಗಿಸ್ಬೇಕಲ್ವೋ ನೀನು 'ಅಂದಾಗ calm ಆಗಿ ಬೇರೆ ಹುಡುಗಿ ಯಾಕೆ ಮುದ್ದಿನ  ಗೆಳತಿ ನೀ ಇರುವಾಗ ಎಂದು ನನ್ನ ಬಳಿಯೇ ತಂದಿದ್ದೆ !!ಅದೊಂದು ಸಲ ಭಾವುಕನಾಗಿ ಹೇಳಿದ್ದೆ ..ದಿನದಿಂದ ದಿನಕ್ಕೆ ನಿನ್ನನ್ನು ತುಂಬಾನೇ ಹಚ್ಚಿ  ಕೊಳ್ಳುತ್ತಿದ್ದೇನೆ ಗೆಳತಿ ,ನೀನು ಮಾತಾಡದೆ ಮುನಿಸಿಕೊಂಡ ದಿನ ತುಂಬಾನೇ ಬೇಸರ..ಇದಕ್ಕೆ ಏನೆಂದು  ಕರೆಯಲಿ ಹೇಳು  ಅಂತೆಲ್ಲ ಕೇಳಿದ್ದೆ ...ಅವತ್ತು ಖಾತರಿ ಆಗಿತ್ತು ನಿನಗೂ ಒಲವಿದೆ ಎಂದು !..ನೀನೇ  ಹೇಳಲಿ ಎಂದು ಸುಮ್ಮನಾದೆ ..
ತಮಾಷೆ ಜಗಳವಾಗಿ ನನ್ನ  ಕೋಪ ನಿನ್ನ ಸಿಟ್ಟಿಗೆ ಸೇರಿ ದಿನಕ್ಕೆರಡು ಸಲ 'ನಿನ್ನೊಂದಿಗೇನು ಮಾತು ಹೋಗೋ 'ಎಂದು ಎನ್ನುತ್ತಿದ್ದ  ಕಾಲ ಅದು .ಬಹುಶಃ ನಿನಗೂ ನನ್ನೊಲವು ಫೀಲ್ ಆಗಿತ್ತೇನೋ .ಅದೊಂದು ಫೈನ್  ರಾತ್ರಿ ಪ್ರೋಪೋಸೆ ಮಾಡಿದ್ದೆ ನೀ ....

"you have given me life in everything i do,your smile warms my heart when i'm feeling sad or doubting my place in dis world , your words speak about how supportive you are in everything i do,ypur love and care fills me with the motivation i need...
you completed the part of me that i struggle to be perfect within myself,i'm incomplete without you!
dear ...i'm in love ...wid you...and my feelings are more than words can explain...tell me ..wil you b mine ??"
 ದಿನವೂ ರೇಗಿಸುತ್ತಾ ಕಾಲೆಯುತ್ತಿದ್ದ ಗೆಳೆಯ ನೀನೇನಾ?   ಎನಿಸದಿರಲಿಲ್ಲ .. ಹೀಗೆಲ್ಲ ಮಾತಾಡೋಕೂ ಬರುತ್ತೆ ನಿಂಗೆ !!
ಸುಮ್ಮನೆ ಸತಾಯಿಸಿದ್ದೆ ..ಪಾಪ ಕಣೋ ನಿನ್ ಹೆಂಡ್ತಿ ಗೆ ಏನ್ ಹೇಳ್ತೀಯಾ ಆಮೇಲೆ ಎಂದು ..ನನ್ನ ಪ್ರೀತಿ ನೀನು ಕಣೋ .ನಿನಗೂ ಗೊತ್ತು ಅದು ..ನಿನ್ನ ಪ್ರೀತಿ ,ನಾನಿದ್ದೇನೆಂಬ ಪ್ರೋತ್ಸಾಹ ,ಆತ್ಮೀಯತೆಗೆ ಯಾವತ್ತೋ ಕಳೆದು ಹೋಗಿದ್ದೆ  ನಿನ್ನಲ್ಲಿ !!... ಹೇಳಿರಲಿಲ್ಲ ಅಷ್ಟೇ ..
ಈಗಷ್ಟೇ ಬದುಕು ಕಟ್ಟಿಕೊಳ ಹೊರಟಿದ್ದೀಯ ..ನಿನ್ನ ಬದುಕಿನ ಪಾಳುದಾರಲಾಗಿ  ಬಾ ಎಂದು  ಪ್ರೀತಿಯ ಆಮಂತ್ರಣವನ್ನೂ ಕೊಟ್ಟಿರುವೆ !..ಗೆಳತಿ  ಎಂಬುದನ್ನು 'ಮುದ್ದು 'ಎಂದು replace ಮಾಡಿರುವೆ ನನ್ನ permission ಕೆಳದೇನೆ !! ಗೆಳೆಯ ಬೇಸರವಿಲ್ಲ ..ನಾನು ನಿನ್ನವಳು ...ಇಷ್ಟು ಮಾತ್ರ ಹೇಳಬಲ್ಲೆ ,,
i din't felt like this yet...
i don know what it is...
i cant able to say also..
its..
i love u..!
thanks for being mine ..
ಸ್ನೇಹಕ್ಕೊಂದು ನಾಮಕರಣ ಮಾಡಿದ್ದೀಯ ..ಬೆಚ್ಚಗಿನ ಆಪ್ತತೆ ನೀಡಿದ್ದೀ .. ನನ್ನ ಚಂದಿರ ನೀ ..ತಾರೆಗಳ ತೋಟವೇ ನಿನ್ನರಮನೆ ..ನಿನ್ನೀ ಪ್ರೀತಿಯ ನೋಟ ನನಗೊಂದು ಭರವಸೆ ನೀಡಿದೆ ..ಏನೆಂದು ಗೊತ್ತೇ ಗೆಳೆಯಾ ...??
ನೀನೆಂದೂ ನನ್ನವನೆಂದು ....


ಮನದೊಳಗೆ ಹಾದು ಹೋದ ಮಧುರ ಭಾವಕ್ಕೊಂದು ಮಾತು ಸಿಕ್ಕಂತಿತ್ತು ನಿನ್ನೀ ಒಲವು ..

Wednesday, November 14, 2012

ಬಾಲ್ಯದ ನೆನಪು

day following day...
  ಬಾಲ್ಯ ಕಳೆದೆ ಹೋಗಿದೆ .(ಹುಡುಕೋಣ ಎಂದು !)
ಕಳೆದ ಬಾಲ್ಯದ ನೆನಪು ಮತ್ತೆ ಮತ್ತೆ ಕಾಡ್ತಾ ಇದೆ "
.childrens day " ಕೇಳಿದ್ರೆನೆ ಖುಷಿ .
                       ಹಳ್ಳಿಯ ಶಾಲೆ .ಮನೆಯಿಂದ ಅರ್ಧ ತಾಸಿನ ಹಾದಿ (ದಾರಿ ಎಂದು ಹೇಳಬೇಕಷ್ಟೆ !)
ದೊಡ್ಡ ಹೊಳೆ .ಹೊಳೆಯ ಆ ಕಡೆ ಒಂದು ಪುಟ್ಟ ಶಾಲೆ .ಒಬ್ಬರೇ ಮೇಸ್ಟ್ರು ..ಬೆರಳೆಣಿಕೆಯಷ್ಟು ಮಕ್ಕಳು ...ಅರ್ಧ ಮಳೆಗಾಲ ಶಾಲೆ ರಜಾ ...!ಮನೆಯಲ್ಲಿ ಮಜಾ !
ಒದ್ದೆಯಾಗಿ ಕ್ಲಾಸ್ ನಲ್ಲಿ ಕೂರೋದು ..ಮತ್ತೂ ಮಜಾ ! .ಆ ದಿನಗಳೆಲ್ಲ ಕಳೆದೆ ಹೋಗಿದೆ .ನೆನಪಿನ ಜಾತ್ರೆಯಲ್ಲಿ ಬೆಚ್ಚಗಿನ ಅನುಭವವನ್ನು ಯಾವಾಗಲೂ ಕೊಡೊ ನೆನಪುಗಳಿವು ...ಮರೆಯಲಾರದ childhood days !..
ಸಂಜೆ ಬೆಟ್ಟ ಗುಡ್ಡ ಸುತ್ತಿ ಸಿಕ್ಕ ಸಿಕ್ಕ ಹಣ್ಣುಗಳನ್ನು ತಿಂದು ಮನೆಗೆ ಬರುತ್ತಿದ್ದೆವು ..ಅಮ್ಮ ಮಾಡಿದ ಕಾಫೀ ಕುಡಿದು ಹೋಂ ವರ್ಕ್ ಮುಗಿಸಿ ಅಕ್ಕಂದಿರ ಜೊತೆ ಕಿತ್ತಾಡಿ ಊಟ ಮಾಡಿ ಮಲ್ಗೊದು  ಇಷ್ಟೇ ಕೆಲಸ ಅವಾಗ ...
ಅಜ್ಜ ಹೇಳುತ್ತಿದ್ದ ಕತೆಗಳು ,.ಸಣ್ಣ ಸಣ್ಣ ಜಗಳ ,ಕಿತ್ತಾಟ ,ತುಂಟಾಟ ಎಲ್ಲವೂ ಒಂದು memory  ಮಾತ್ರ .! 
ಈಗಲೂ ಹಬ್ಬದಲ್ಲಿ ಒಂದಾದ ಅಕ್ಕಂದಿರು ತಮ್ಮ ತಮ್ಮ ಬಾಲ್ಯದ ಚೇಷ್ಟೆಗಳನ್ನು ನೆನಪಿಸಿಕೊಳ್ಳುತ್ತಾರೆ ನನ್ನೊಟ್ಟಿಗೆ .ಅದೆಷ್ಟೋ ಬಿದ್ದ ಗಾಯಗಳು ,ದೊಡ್ದವರಾಗುತ್ತಿದ್ದಂತೆ ಮಾಡುತ್ತಿದ್ದ ಸೈಕಲ್ ರೇಸ್ ,ಹೊಳೆ ,ಬೆಟ್ಟ ಗುಡ್ಡದ ಪಯಣ ,ಸಣ್ಣ ಸಣ್ಣ ಪಾರ್ಟಿ ...ಹೀಗೆ ಏನೇನೋ ನೆನಪು ಇವತ್ತು ...ಅವತ್ತಿನ ಗಾಯ ಇಂದಿಲ್ಲ .ಆದರೆ ಕಲೆ ನೋಡಿದಾಗ ಗಾಯ ನೆನಪಾಗಲ್ಲ ಬದಲಾಗಿ ಅಂದು ಮಾಡಿದ್ದ ಕೀಟಲೆಗಳ ಸಾಲೆ ಕಣ್ಣ ಮುಂದೆ ...

ಅಂದ ಹಾಗೆ  ,
ಇವತ್ತು childrens day ಅಂತ ನೆನಪಾದುದ್ದು msg  ಒಂದನ್ನು ನೋಡಿದಾಗ !!! 
"today is world diabeties day because childrens are verryyy sweet "
(ಹೀಗೊಂದು ಮೆಸೇಜ್ ಬಂದಿತ್ತು ತಿಳಿಯದ ನಂಬರ್ ಇಂದ ! ,ಅಂತೆ ಕಂತೆಗಳ ಸಂತೆಯಲ್ಲಿ ಟೆಂಟ್ ಒಂದನ್ನು ಈಗಷ್ಟೇ ಕಟ್ಟುತ್ತಿರುವ ಬಾಲ್ಯದ ಆತ್ಮೀಯ ಗೆಳತಿ ಅರ್ಚನಾ !ಪ್ರೀತಿಯಿಂದ ಬಾಲ್ಯವನ್ನು ನೆನೆಸಿದ್ದಳು !)
ಹೀಗೆ indirect ಆಗಿ ವಿಶ್ ಮಾಡುವವರು ಯಾರಿರಬಹುದೆಂದು ತುಂಬಾ ಯೋಚಿಸಿ ಆಮೇಲೆ ಹೊಳೆದಿದ್ದು ಈ ಗೆಳತಿ ,ಅದೆಷ್ಟ್ರೋ ದಿನಗಳ ನಂತರ ಬದಲಾದ ಲೈಫ್ ಸ್ಟೈಲ್ ಜೊತೆ ಬದಲಾಯಿಸಿದ ನಂಬರ್ ನಿಂದ ಮಾತಾಡಿದಳು ..
ಅದೆಷ್ಟೋ ಬಾಲ್ಯದ ನೆನಪುಗಳ ನೆನಪಾಯಿಸಿದೆವು ...ಬಾಲ್ಯ ನಿಜಕ್ಕೂ ಸುಂದರ ಎನಿಸಿತು ಬಾಲ್ಯದ ಗೆಳತಿಯ ಮಾತುಗಳೊಂದಿಗೆ..ಬಾಲ್ಯ ನೆನಪಿಸಿ  ಬಾಲ್ಯದ wishes ಹೇಳಿದ ಗೆಳತಿ...miss you .
ನೆನಪಿನ ಭಾವಗಳಲ್ಲಿ ಬಾಲ್ಯದ ನೆನಪೇ ಬಹುಪಾಲು ..ಏಕೆಂದ್ರೆ ಈಗಷ್ಟೇ ಬಾಲ್ಯ ಮುಗಿದಿದೆ .ಬರಿಯ ಆಟ ಪಾಠ ಹಠ ,,ವಾಹ್ !!!
 ಈಗ ನೋಡಿ ಮುಗಿಯದ ಕ್ಲಾಸ್ ,unlimited assignments !!  non  stop seminars ,sleepless ನೈಟ್ಸ್ !...ಏನ್ ಬೇಕಿದ್ರೂ sacrifice ಮಾಡ್ತೀನಿ ..ಆದ್ರೆ ನಿದ್ದೆ (?)sacrifice ಮಾಡೋದೇ ಕಷ್ಟ ...ತುಂಬಾನೇ ಕಷ್ಟ ;) ನೋ sunday only monday !!
ಕೆಲವೊಂದಿಷ್ಟು ಜವಾಬ್ದಾರಿಗಳು ,ಕ್ಲಾಸ್ ಗೆ ಮೊದಲಿಗರಾಗಲೇ ಬೇಕೆಂಬ ಹಠ ,,ಜೊತೆಯಲ್ಲಿ ಒಂದಿಷ್ಟು ಹುಳುಕು 1
ಮುಗ್ಧತೆ ಇಲ್ಲ .ಮುಗುಳ್ನಗೆ ಇಲ್ಲವೇ ಇಲ್ಲ .ಎಲ್ಲವೂ ಮಾಯಾ ! 
ಇದು ಮುಗಿದ ಮೇಲೆ,,,, .ಬರಿಯ ಯಾಂತ್ರಿಕತೆ ...ಜೊತೆಗೊಂದಿಷ್ಟು ಮುಗ್ಧ ಮುಖವಾಡದ ಮಾಂತ್ರಿಕತೆ ! 
ಹೊಂದಾಣಿಕೆಯ ತಾಂತ್ರಿಕತೆ ...ಬರಿಯ ಯಾತ್ರೆಗಳ ಜಾತ್ರೆ ..ಜೊತೆಗೊಂದಿಷ್ಟು ತಲೆಬಿಸಿ ಗಳ ಸಂತೆ ..ಅಂತೆ ಕಂತೆ ..ಇಷ್ಟೇ !ಬಾಲ್ಯ ಕಳೆದೇ ಹೋಗಿದೆ ...ನಿಜ್ವಾಗ್ಲು ಸಮಯ ಹಿಂದೆ ಹೋದರೆ ನಾನು ಬಾಲ್ಯ ಬಿಟ್ಟು ಈ ಗೋಜಲಿನ ಜಗತ್ತಿಗೆ ತಿರುಗಲಾರೆ ,,ಅಲ್ಲೇ ಇದ್ದು ಬಿಡುವ ಆಸೆ  ನನಗೆ !
ಬಾಲ್ಯ ನೀನೊಂದು ಸಿಹಿ ನೆನಪು ಮಾತ್ರ ..,
ಬಾಲ್ಯದ ನೆನಪುಗಳ ನೆನಪಲ್ಲಿ,,,,  ನೆನಪೊಂದನ್ನು ನೆನಪಿಸಿಕೊಟ್ಟ ಗೆಳತಿ ಕೇಳಿಲ್ಲಿ ...,
broken pencils and unfilled homeworks are better than 
broken heart and unfilled thoughts !!
ಏನಂತೀಯಾ ?

(ಇವತ್ತೇ ಈ ಮೆಸೇಜ್ ಕೂಡಾ ನನ್ನ inbox ನಲ್ಲಿ ನಾನ್ ಎಳೋಕೂ ಮುಂಚೆನೇ ಬಂದು ಕೂತಿತ್ತು ..ಅಣುಕಿಸುತ್ತಿತ್ತು )

on the onset of children's day ...ಪುಟ್ಟ ಪುಟ್ಟ ಕನಸುಗಳ ನೆನಪಿನಲ್ಲೊಂದು ಪುಟ್ಟ ಪಯಣ ..

Sunday, November 11, 2012

ತೀರ ಸೇರದ ನಾವೆ ,,!


           ಪ್ರೀತಿಯ ಗೆಳತಿ ,!
                         ನೀನೊಂದು ಒಗಟು ಕಣೆ .,ಬದುಕು ಗೊಂದಲಗಳ ಜಾತ್ರೆಯಾದಾಗ ಬಂದವಳು ನೀನು ...ಹೀಗೊಬ್ಬ ಗೆಳತಿಯ ನಿರೀಕ್ಷೆ ಮಾಡಿರಲಿಲ್ಲ .ಬರಿಯ ಮಾತು, ಹರಟೆ ,ಮಸ್ತಿಯ ಸಾಮ್ರಾಜ್ಯದಲ್ಲಿ ಮುಳುಗಿ ಹೋಗಿದ್ದೆ .ಆಗ ಮೌನವಾಗಿ ಬಂದವಳು ನೀನು .ನಿನ್ನೀ ಮೌನ ನನಗ್ಯಾಕೋ ಇಷ್ಟ !ಕೆಲವೊಮ್ಮೆ ಕಷ್ಟ ಕೂಡ !!.ನಿನಗೆ ಅಂದು ಕ್ಯಾಂಪಸ್ ನಲ್ಲಿ ಸುಮ್ಮನೆ ರಾಗ್ ಮಾಡಿದ್ದೆ .ಅಂದು ನೀನು ಪ್ರತಿಕ್ರಯಿಸಿದ ರೀತಿ ನಿಜಕ್ಕೂ ಮರೆಯಲಾರದ್ದು ಗೆಳತಿ .
  ಬಿಡು ,,, ಆ ದಿನಗಳು ಕಳೆದು 2 3 ವರ್ಷಗಳೇ ಸರಿದಿವೆ .!
ಬದುಕು ಸರಿದಿದೆ !.ಕನಸುಗಳು ಕವಲೊಡೆದಿದೆ !ಬೇಕೆಂದಿದ್ದು ಸಿಗುವಷ್ಟು ಹತ್ತಿರದಲ್ಲಿದ್ದೇನೆ !..ಆದರೆ ನೀನು ಮಾತ್ರ ಅಂದಿನಿಂದ ದೂರಾಗಿದ್ದೀಯಾ !!,,ಏಕೆ ಹೀಗೆ ದೂರ ಸರಿದೆ ?
ಕಳೆದು ಹೋದ ವರ್ಷಗಳ ನೆನಪು ಮಾಸಲು ಮಾಸಲು ,,ಆ ನೆನಪಲ್ಲಿ ನಿನ್ನ ಮುದ್ದು ಮುಖ ಸ್ಪಷ್ಟ ,,ಇದಕ್ಕೆ ಏನೆನ್ನಬೇಕು ನೀನೆ ಹೇಳು ,
,ನಂಗೊತ್ತು ,,,,ನಿನ್ನ ಪುಟ್ಟ ಮನಸ್ಸಿನಲ್ಲಿ ಕೆಟ್ಟ ಕನಸುಗಳಿಲ್ಲ .ಮನದ ಬೇಸರ ,ಮಾಸದ ಮುಗುಳ್ನಗು ,ನಿನ್ನೀ ಹುಸಿ ಮುನಿಸು ...................ನನ್ನ ಒಲವು !
ಏನೆಂದು ಕರೆಯಲಿ ನಿನ್ನ ನಾ ....ಗೆಳತಿ ?ಪ್ರೀತಿ?ಆತ್ಮೀಯ?ನಲ್ಲೆ?,,ಇದಕ್ಕಾದರೂ ಉತ್ತರಿಸು ನೀ .
yes ,im here to confess my love to u .
you made  me think of u hundred times a day !!
tell me ,will u be MINE forever ???

ಮನದೊಳಗೆ ಹಾದು ಹೋದ ನನ್ನೀ ಭಾವನೆ ನಿನ್ನ ಗಂಭೀರತೆ ,ಲಾಸ್ಯ ,ಸೂಕ್ಷ್ಮತೆ ಗಳಲ್ಲಿ ಕಳೆದೇ ಹೋಗಿದೆ ಗೆಳತಿ
                                        ಉತ್ತರಿಸಿ ಹೋಗು ಒಮ್ಮೆ ನೀನು
                                                  ನಗು ನಗುತ ಸಾಗಲಿ ನಿನ್ನ ಪಯಣ .
                                                                                      ನಿನ್ನ ನಿರೀಕ್ಷೆಯಲ್ಲಿ ....,
                                                                                                       ನಿರಾಸೆಗೊಳಿಸದಿರು ಗೆಳತಿ ...,


                                               
                                   ಮತ್ತೆ ಮತ್ತದೇ ನೆನಪು ...,,
                                                 ನೆನಪುಗಳ ಬೆಚ್ಚನೆಯ ಪಯಣ ,,
                                                                  ಜೊತೆಯಾಗಿ ಹೋಗೋಣ ಬಾ ಗೆಳತಿ ,,,ಉತ್ತರ ಹೊಳೆಯದ ಗೊಂದಲ ನನ್ನದು ಗೆಳೆಯ ,,,
    ಸ್ನೇಹದ ಸಲುಗೆಯ ಸರಿಸಿ,ಆತ್ಮೀಯತೆಯನ್ನು ಮರೆಸಿ ...ಬದುಕಿನೊಂದಿಗೆ ಆರಮಗಿದ್ದೀಯಾ ಅಂದುಕೊಂಡಿದ್ದೆ !ಬೆಳಿಗ್ಗೆ ಇಂದ ಸಂಜೆಯ ತನಕ ಬದುಕೇ ಕಾಣೆಯಾಗಿದೆ !
ಬದುಕನ್ನು ನಯವಾಗಿ ಪ್ರೀತಿಸುವವಳು ನಾನು ,,,ಕಾಲಿಗೆ ಗಾಳಿ ಕಟ್ಟಿ ಕೊಂಡು ಬದುಕಿನ race ನಲ್ಲಿ ಮುಂದೆಯೇ ಇರಬೇಕೆಂಬ ಧಾವಂತವೇನೂ ಇಲ್ಲವೇ ಇಲ್ಲ !
ನಿನ್ನೀ ಬದುಕಿನ ಬಗ್ಗೆ ತೀವ್ರವಾದ ಆಲೋಚನೆಯಾಗಲಿ ,ಗೊಂದಲವಾಗಲಿ ಬೇಡ ಗೆಳೆಯ ನನ್ನ ಭಾವುಕತೆ ,ಮುಗ್ಧತೆ ,ಸರಳತೆಯನ್ನುಸಾರಾಸಗಟವಾಗಿ  ಅಲ್ಲಗಳೆದ ನಿನ್ನ ಕಾತುರ ಜಗತ್ತಿನಲ್ಲಿ ಒಂದಾಗಲು ಒಲ್ಲೆ ನಾನು !
ಬದುಕಿನಿಂದ ನಿರೀಕ್ಷೆಗಳು ಕಡಿಮೆಯಾಗಿವೆ !!
ಬೆಚ್ಚಗಿನ ಆಪ್ತತೆ ,ಧಾರಾಳ ಸ್ನೇಹ ,ಒಂಚೂರು ಒಲವು ಇಷ್ಟಿದ್ದರೆ ನನ್ನ ಬದುಕು ಸಂತುಷ್ಟ ..
ಸಾದ್ಯವಾದರೆ ನನ್ನ ಪ್ರಶ್ನೆಗೆ ಉತ್ತರಿಸು ನೀ ,,,
                             ಕವಲೊಡೆದ ಒಲವು ...
                              ಮಾಸಿದ ನಿಲುವು ....
                              ಬರಿಯ ಗೊಂದಲದ ದಿನಗಳಿಂದ ಏನು ಪಡೆದೆ ನೀ ???
                                                                               ..ನೆನಪುಗಳ ಹಾದಿಯಲ್ಲಿ ನಿನ್ನನ್ನು ನಿರೀಕ್ಷಿಸುತ್ತಾ ..,,

Wednesday, September 26, 2012

ಇಲ್ಲೊಬ್ಬರು ಆತ್ಮೀಯರು

ಹಬ್ಬ ಮುಗೀತು ,,,
ಊರಿಗೆ ಹೋಗಬೇಕೆಂದು ತುಂಬಾನೇ ಅಂದುಕೊಂಡಿದ್ದೆ .ಪರೀಕ್ಷೆ ಸನಿಹ ,ಕ್ಲಾಸ್, labs ಗಳ ದರ್ಬಾರಿನಿಂದಾಗಿ ಅಂದುಕೊಂಡಿದ್ದನ್ನು ಕೈ ಬಿಡಬೇಕಾಯಿತು .ನಾನಂದುಕೊಂಡಿದ್ದನ್ನು ಮಾಡದೇ  ಇರುವ ಕಾರ್ಯ ಮುಂದುವರೆಯಿತು .!
pg ಕ್ಲೋಸ್ ಆಗಿತ್ತು .ಕ್ಲಾಸ್ ಗಳನ್ನು ಹೇಗೆ attend ಮಾಡೋದು ಎಂಬ ಪ್ರಶ್ನೆ ತುಂಬಾ ತಲೆ ತಿಂತು !!..ಈಗಷ್ಟೇ ಬಂದು 1 ತಿಂಗಳಾಯಿತು .ಹೇಳಿಕೊಳ್ಳುವಂತಹ ಆತ್ಮೀಯ ಸ್ನೇಹಿತರು ಇನ್ನೂ ಆಗಿಲ್ಲ .
ಆಗ ನೆನಪಾದುದ್ದು ನಮ್ಮ ಊರೀನವರೆ ಆದ ಈಗ ಇಲ್ಲಿಯೇ stay ಆಗಿರುವ ಪರಿಚಿತರು .(ಈಗ ಪರಿಚಿತರಾಗಿ ಆತ್ಮೀಯರಾಗಿದ್ದಾರೆ ಎನ್ನಬಹುದು ).4 ದಿನ ಅವರ ಮನೆಯಿಂದಲೇ ಕಾಲೇಜ್ ಗೆ ಓಡಾಡಿದೆ !.ನಾನು ಬರ್ಲಾ ಹಬ್ಬಕ್ಕೆ ?ಅಂತ ಕೇಳಬೇಕೆಂದಿದ್ದೆ .ಆದರೆ ಅವರ ಆತ್ಮೀಯತೆ ನೋಡಿ ."ಹಬ್ಬಕ್ಕೆ ಬಾರಮ್ಮ ,ಮನೆ ಅಂತ ತಿಳ್ಕೊಂಡು "ಅಂತ ಆಮಂತ್ರಿಸಿದರು .!!
ನಿಜಕ್ಕೂ ಆಶ್ಚರ್ಯವಾಯಿತು .ಯಾಕಂದ್ರೆ ಊರು ಒಂದೇ ಆದ್ರು ನಾನ್ ಊರಿಗ್ ಹೋಗೋದೇ ಅಪರೂಪ .ಹೋದ್ರು ಮನೆ,ಹೊಳೆ ,ಬೆಟ್ಟ ,ಗುಡ್ಡ ,ಸ್ನೇಹಿತರೊಟ್ಟಿಗೆ ಸಮಯ ಸರಿದು ಹೋಗುತ್ತೆ .ಹೀಗಿರುವಾಗ ಜನರ ಪರಿಚಯ ಹೇಗೆ ಸಾದ್ಯ ಹೇಳಿ ?..ಅದೂ ನನ್ನಂತಹ ಮಾತೇ ಆಡದೇ ಸುಮ್ಮನಿರುವವಳಿಗೆ  !.ತೀರ ಇತ್ತೀಚಿಗೆ ಪರಿಚಿತರಾದರು .ತಿಳಿಯದ ಊರಿನಲ್ಲಿ ಸ್ವಲ್ಪ ಆತ್ಮೀಯತೆ ತೋರಿದ್ರೂ ಸಾಕು ಅಂತಿದ್ದೆ .ಆದರೆ ಇವರ ಪ್ರೀತಿ ಆತ್ಮೀಯತೆಗೆ ಮಾತುಗಳೇ ಬರುತ್ತಿಲ್ಲ ,ಹಬ್ಬದ ಸಂಬ್ರಮ ಮನೆಯ ಹಬ್ಬದಂತೆಯೇ ಅನಿಸಿತು .ಅವರ ಮಗ 'ತನು 'ತಮ್ಮನಂತೆಯೇ ಆಗಿದ್ದಾನೆ .ಅಕ್ಕಾ ನನ್ drawing ನೋಡು ,collections ನೋಡು ಅಂತ ಉತ್ಸಾಹದಿಂದ ತೋರಿಸುತ್ತಿದ್ದರೆ ತಮ್ಮನ ನೆನಪು ಆಗದಿರಲಿಲ್ಲ .ಇನ್ನು ಮಮತತ್ತೆ ಅಮ್ಮನಂತೆ ಆದರಿಸಿದರು .ಮನು ಆತ್ಮೀಯನಾದ .ಅವರ ಮನೆಯ ನಾಯೀ ಮರಿಗೆ ಅವರು ತೋರುವ ಪ್ರೀತಿ ಮೂಕವಿಸ್ಮಿತನನ್ನಾಗಿ ಮಾಡಿತು .ನನ್ನನ್ನು ಮನೆ ಮಗಳಂತೆ ನೋಡಿದ ಇವರ ತನಕ್ಕೆ ಮನಪೂರ್ವಕ ಧನ್ಯವಾದಗಳು .
ಅಷ್ಟೊಂದು ಮಾತಾಡಿ ಗೊತಿಲ್ಲದದ್ದರಿಂದ ನನ್ನ  ಮೌನ ಅವರಿಗೆ ಬೇಸರಿಸಿರಬಹುದು 
             ಜನರೊಂದಿಗಿನ interaction ಕಡ್ಮೆ ನಂದು .ಹೀಗಾಗಿ ಅಷ್ಟೊಂದು ಮಾತು ಬಂದಿಲ್ಲ .ಆದರೂ ಅವ್ರೆ ಮಾತಾಡಿಸುತ್ತ ,campus ,ಫ್ರೆಂಡ್ಸ್ ಬಗ್ಗೆ ಕೇಳುತ್ತಾ ಮಾತಾಡಿದಾಗ ಗಂಟೆಗಟ್ಟಲೇ ಮಾತಾಡಿದ್ದು ನಾನೇನಾ ?ಅನ್ನೋ ಸಂದೇಹ ಬೇರೆ .ಅದೆಷ್ಟೋ ಹರಟಿದೆ .ಮನೆಯಿಂದ ದೂರಾದ ಬೇಸರ ಸ್ವಲ್ಪ ಕಡಿಮೆಯಾದಂತಿತ್ತು .ಈ ದೂರದ ಊರಲ್ಲಿ ಪ್ರೀತಿ ತೋರುವ ಆತ್ಮೀಯರೊಬ್ಬರು ಸಿಕ್ಕಿದ್ದು ಖುಷಿಯಾಗಿದೆ .ಹತ್ತಿರದ ಬಂಧು ಆದರೂ ಸಹಾಯ ಮಾಡದೇ ತಮ್ಮ ಜೀವನ ಜಂಜಾಟದಲ್ಲಿ ಮುಳುಗಿ ಹೋಗಿರುವವರು ಒಂದು ಕಡೆ ಆದ್ರೆ ಕೇವಲ ಪರಿಚಿತರಾಗಿ "ನಮ್ಮೂರಿನ ಹುಡ್ಗಿ "ಎಂದು ಪ್ರೀತಿ ತೋರಿಸಿ ಆದರಿಸುವ ಇವರನ್ನು ನೋಡಿ ಖುಷಿಯಾಯಿತು .ಇವರೊಂದಿಗಿನ ಈ ದಿನಗಳ ಒಡನಾಟ ಮನದೊಳಗೆ ಹಾದು ಹೋದ ಮೌನ ಭಾವಕ್ಕೆ ಉತ್ತರ ಕೊಟ್ಟಿತ್ತು .
.ಮಾತು ಧಾತುವಿನ ಏರಿಳಿತದಲ್ಲಿನ ಸಮ್ಮಿಲನಕ್ಕೆ ನನಗೆ ಇಲ್ಲೊಬ್ಬ ಪರಿಚಿತರು ಆತ್ಮೀಯರಾಗಿದ್ದರೆ .

'ನಿಧಿ' ಎಂಬ ಖುಷಿ

       ಪ್ರೀತಿಯ ನಿಧಿ ಪುಟ್ಟಿ ,
      ಸರಿಸುಮಾರು ಹತ್ತು ವರ್ಷದ ನಂತರ ನಮ್ಮ ಮನೆಗೆ ಬಂದ ಮುದ್ದು ಪುಟ್ಟಿ ನೀನು ನಿಧಿ .ನನ್ನ ತಮ್ಮನ ನಂತರ ನಮ್ಮನೆಗೆ ಬಂದ ಪಾಪು ನೀನು .ತಮ್ಮನ ಪುಟ್ಟ ಪುಟ್ಟ ಹೆಜ್ಜೆಯ ನೆನಪು ಅಷ್ಟೊಂದಾಗಿ ಇಲ್ಲ .ಆದರೆ ನಿನ್ನ ಆಟ ,ತುಂಟಾಟ, ಕಿಲ ಕಿಲ ನಗು ,,ದೊಡ್ಡ ದೊಡ್ಡ ಅಳು ,ಕೈ ಕಾಲಿನ ಡಬ ಡಬ ,,ಎಷ್ಟೊಂದು ಮುದ್ದಾಗಿ ಮಾಡುತ್ತೀಯ ನೀ !!ನಿನ್ನ ಪ್ರತಿಯೊಂದು ಕೆಲಸವೂ ತುಂಬಾ ಚೆಂದ .
     ಅದಾಗಲೇ ನಿನಗೆ ಒಂದು ವರ್ಷಕ್ಕೆ ಇನ್ನೆರಡು ತಿಂಗಳುಗಳು ಬಾಕಿ !.9 ತಿಂಗಳು ನಿನ್ನ ಅಮ್ಮನ ಜೋಪಾನದಲ್ಲಿ ಇರಬೇಕಿದ್ದ ನಿನಗೆ ಅದೇನೂ ಅಷ್ಟು ಆತುರವೋ ನಾ ಕಾಣೆ !7 ತಿಂಗಳಿಗೇ ಅಮ್ಮನಲ್ಲಿ ಹಠ ಮಾಡಿ ಬಂದೆ !ಬಹುಷಃ ಹೊಸದನ್ನು ನೋಡುವ ಕುತೂಹಲ ನಿನ್ನನ್ನು  ಹಾಗೆ ಮಾಡಿತು .ಬೇಗ ಬೇಗ ಹೊರಗೆ ಬಂದೆ .ಆದರೆ ಆ ದಿನ ನಮಗಾದ tension ಅಷ್ಟಿಷ್ಟಲ್ಲ ಪುಟ್ಟಿ .ನಿನ್ನ ಅಮ್ಮ (ನನ್ನ ಅಕ್ಕ )ಹಿಂದಿನ ದಿನ ಅಷ್ಟೇ ಗಂಟೆಗಟ್ಟಲೆ ಫೋನಿನಲ್ಲಿ ನಿನ್ನ ಬಗ್ಗೆಯೇ ಮಾತಾಡಿದ್ದಳು .ಆದರೆ ಅವತ್ತೇ ನೀನು ಬರುತ್ತಿಯ ಎಂಬ ನಿರೀಕ್ಷೆ ಇದ್ದಿರಲಿಲ್ಲ.ನಿನ್ನಅಮ್ಮ ತುಂಬಾ ಕಷ್ಟಪಟ್ಟಳು ನಿನ್ನ ಮುದ್ದು ಮುಖ ನೋಡಲು  .. .ಏನೇ ಇರಲಿ ಬಹುಬೇಗ ನಿನ್ನ ಮುದ್ದು ಮುಖವನ್ನು ತೋರಿಸಿದೆ .ಎಲ್ಲರ ಮನ ಗೆದ್ದೆ !
                             ಈಗಲೂ ಅಷ್ಟೇ  ಬಹು ಚೂಟಿ ನೀನು .ಅಂಬೆ ಕಾಲಿಡುತ್ತಾ ಮನೆ ತುಂಬಾ ಓಡಾಡುತ್ತಿಯಂತೆ .ಏನೇನೋ ಮುದ್ದು ಮುದ್ದು ಮಾತಾ ಡುತ್ತಿಯಂತೆ !!.ನಿನ್ನನ್ನು ಒಂದು ಸಲ ಮಾತ್ರ ನೋಡಿದ್ದೇನೆ ಈ ಒಂದು ವರ್ಷದಲ್ಲಿ !!ಅದೇಕೋ ಪುಟ್ಟಾ ,..ನಿನ್ನ ಜೊತೆ ನಾನೂ ಮಗುವಾಗಿ ಆಟ ಆಡಬೇಕೆಂದು ಅನಿಸುತ್ತೆ .ನಿನಗೊಂದು ಹಾಯ್ ಹೇಳೋಣವೆಂದು ಕಂಪ್ಯೂಟರ್ ಮುಂದೆ ಕೂತರೆ ನಿನ್ನ ಅಪ್ಪ ಅಮ್ಮ ನಿನ್ನನ್ನು ನನ್ನೊಟ್ಟಿಗೆ ಮಾತನಾಡಿಸಲು ಹರಸಾಹಸ ಪಡುತ್ತಾರೆ .ಅಷ್ಟೊಂದು ರಂಪ ಮಾಡುತ್ತಿಯಂತೆ .ಏನಾದರೊಂದು ಮಾತಾಡುತ್ತಿದ್ದ ನನ್ನ ಅಕ್ಕ (ನಿನ್ನ ಅಮ್ಮ !) ಈಗ ಫೋನಿನಲ್ಲಿ' ನಿಧಿ ಹಂಗೆ ಮಾಡಿದ್ಲು ಇವತ್ತು ,ಏನೋ ಮಾತನಾಡಿದಳು'ಅಂತೆಲ್ಲ ಗಂಟೆಗಟ್ಟಲೆ ನಿನ್ನ ಬಗೆಗೆ ಮಾತಾಡುತ್ತಾಳೆ .ನಿನ್ನ ಬಗ್ಗೆ ನೂರು ಮಾತು ಹೇಳದೆ ಹೋದರೆ ಅವಳಿಗೆ ಸಮಾಧಾನವಿಲ್ಲ ನಿನ್ನ ಚಿಕ್ಕ ಪುಟ್ಟ ಕೆಲಸವನ್ನೂ ಗಂಟೆಗಟ್ಟಲೇ ವರ್ಣಿಸುತ್ತಾಳೆ ..!!.ನಿನ್ನೆಲ್ಲಾ ಕಾರ್ಯಗಳೂ ನಮಗೊಂದು ಅಚ್ಚರಿ !ಖುಷಿ .ನಿನ್ನ ಅಪ್ಪ ನಿನ್ನ ಎಲ್ಲಾ ಭಂಗಿಗಳನ್ನು ಸೆರೆ ಹಿಡಿದು ಖುಷಿ ಪಟ್ಟರೆ ಅಮ್ಮ ನಮ್ಮೊಂದಿಗೆ ಹೇಳಿ ಖುಷಿಸುತ್ತಿದ್ದಾಳೆ !!ಒಟ್ಟಿನಲ್ಲಿ ಪುಟ್ಟಾಣಿ ನಿಧಿ ಬಗ್ಗೆ ಎಷ್ಟು ಮಾತಾಡಿದರೂ ಕಮ್ಮಿನೇ !
                                      ಅಜ್ಜನಮನೆಯಲ್ಲಿ ಕೆಲ ತಿಂಗಳು  ಮಾತ್ರ ಇದ್ದು ನಿನ್ನ ಮನೆಗೆ ಹೊರಟೆ ನೀ ,ಆ ಸ್ವಲ್ಪ ದಿನಗಳೇ ನಾವೆಲ್ಲಾ ನಿನ್ನನ್ನು ಎತ್ತಿಕೊಂಡೆ ಇದ್ದೆವು .ನಿನ್ನ ಮನೆಯಲ್ಲೂ ಕೂಡ ಪುಟ್ಟಿ ,,ನಿನ್ನನ್ನು ರಾಜಕುಮಾರಿ ಎಂದೇ ಓಡಾಡಿಸುತ್ತಾರೆ .ಮುತ್ತಜ್ಜ  ,ಅಜ್ಜ ಅಜ್ಜಿಯಂದಿರು ನಿನಗೆ ಕೆಳಗೆ ಬಿಡದೇ ಎತ್ತಿಕೊಂಡೆ ಓಡಾಡಿಸುತ್ತರೆಂದು ಅದೆಷ್ಟು ಮುದ್ದು ನೀನು !.ಅಜ್ಜನಮನೆಯಲ್ಲಿ ನಗು ಮೂಡಿಸಿ ,ಮನೆಯಲ್ಲಿ ಮುದ್ದಿನ ಸೋನು ಆಗಿ ನಿನ್ನದೇ ರಾಜ್ಯಭಾರ ಮಾಡುತ್ತಾ ಎಲ್ಲರೂ ನಿನ್ನ ಮಾತನ್ನೇ ಕೇಳುವಂತೆ ಮಾಡಿದ್ದೀಯಾ ??ನೀನು ಸುಮ್ಮನೆ ಅತ್ತರೂ ಎಲ್ಲರೂ ನಿನ್ನಮ್ಮನನ್ನು ಬಯ್ಯುತ್ತಾರೆ ನೋಡು ನಿನ್ನ ಈ ರಗಳೆ ನಿನ್ನಮ್ಮನಿಗೂ ರಗಳೆ .ಆದರೆ ಪುಟ್ಟಿ ಸದಾ ನಗುತ್ತ ,ಎಲ್ಲರನ್ನು ನಿನ್ನ ತೊದಲು ತೊದಲು ಪುಟಾಣಿ ಮಾತುಗಳಿಂದ ನಗಿಸುತ್ತಾ ಅವರ ತಲೆಬಿಸಿಗಳನ್ನು ನಿನ್ನ ಮುಖ ನೋಡಿದಕೂಡಲೇ ಮರೆಸುತ್ತಿದ್ದಿಯ .ಬೇಗ ದೊಡ್ಡವಳಾಗಬೇಡ ನೀನು ..ನಿನ್ನ ಪುಟ್ ಪುಟಾಣಿ ಮಾತುಗಳನ್ನು ನೋಡುವುದು ,ಕೇಳುವುದು ಇನ್ನೂ ಬಾಕಿ ಉಳಿದಿದೆ .


ಅಂದಹಾಗೆ ನಿಧಿ ನನ್ನ ಅಕ್ಕನ ಮಗಳು .8 ತಿಂಗಳ ಪಾಪು .ತುಂಬಾ ತುಂಟಿ .ನಾನವಳನ್ನು ಕೆಲ ತಿಂಗಳ ಹಿಂದೆ ನೋಡಿದ್ದೇನೆ .ಈಗ ಅಂಬೆಗಾಲಿಡುತ್ತ ,ಮುದ್ದು ಮುದ್ದು ಮಾತಾಡುತ್ತಾಳಂತೆ .ಅವಳನ್ನೊಮ್ಮೆ ಮುದ್ದಿಸಬೇಕೆಂಬ ಆಸೆ .ಆದರೆ ನನ್ನಿಂದ 8 10 ತಾಸುಗಳ ಹಾದಿಯಷ್ಟು ದೂರ ಇದ್ದಾಳೆ ಅವಳು .ಏನೇ ಆಗಲಿ ನಿಧಿ ಪುಟ್ಟಾ ಈ ರಜಾದಲ್ಲಿ ನಾವಿಬ್ಬರೂ ಆಟ ಆಡೋಣ ,ಮಾತಾಡೋಣ ,
ರಜಾವನ್ನೇ ಎದುರು ನೋಡುತ್ತಾ  ,,,, 
ನಿನ್ನ ನಿರೀಕ್ಷೆಯಲ್ಲಿ .

Thursday, September 13, 2012

ನಡಿಗೆ 

ಬದುಕು ದೊಡ್ಡದೂ ಆಗಬಹುದು ,ಚಿಕ್ಕದೂ ಆಗಬಹುದು .ಹುಟ್ಟಿನಿಂದ ಸಾವಿನ ತನಕ ಚಾಚಿಕೊಳ್ಳುವ ಇದರ ಅಂತರ ಇತರರ ಪಾಲಿಗೆ ಕಾರಣ ಸಿಗುವ ದೃಶ್ಯಗಳು ಮಾತ್ರ !ಜೀವನ ನಾವು ಅಂದುಕೊಂಡಿದ್ದು .ನಿರೀಕ್ಷೆ ನೀರಸೆಗಳೆನು ಹೊಸತಲ್ಲ .ಇವತ್ತು ಅನುಭವ ಆಗದಿದ್ದರೆ ನಾಳೆ ಇದೆ .ಖಂಡಿತ ಅನುಭೂತಿಯ ಅನುಭವ .ಬೇಡವೆಂದರೂ ಮಗ್ಗುಲು ಬದಲಿಸಿ ಕಣ್ಣ ಮುಂದೆ ಬರುತ್ತವೆ ನೆನಪುಗಳು ,ಕಾಣ ಸಿಗದ ,ಏನೋ ತುಂಟಾಟಕ್ಕೆ ಮಾಡಿದ ತರಲೆಗಳು ,
ಹೀಗೊಂದು ತುಂಟಾಟದ permission ಕೇಳಿದ್ದೆ ನೀನು ..ನೆನಪಿದ್ಯಾ ?

ತುಂಟ ಮನದಲ್ಲೊಂದು ತುಂಟ ಆಸೆ ,
ನಿನ್ನ ತುಂಟ ನೋಟ ,
ತುಂಟ ನಗುವಿನ ಹಿಂದೆ ,
ತುಂಟಾಟವಾಡಲು ,
ತಂಟೆ ಮಾಡದೇ ಒಪ್ಪಿಗೆ ನೀಡುವೆಯಾ ??

ಆವತ್ತು ನೀ ಕೇಳಿದ್ದು ಬರಿಯ ತಮಾಷೆಗಲ್ಲ ಎಂದು ಗೊತ್ತು 
ಆದರೆ ನಾನೇನು ಹೇಳಲಿ ನಿಂಗೆ ,ಎಲ್ಲರನ್ನು ಅರ್ಥ ಮಾಡ್ಕೊಳೋ ನಂಗೆ  ನೀನ್  ಅರ್ಥ ಆಗಿಲ್ಲ .
ಒಂದು ಸಲ ಆತ್ಮೀಯನಾಗಿ ಮಾತಾಡಿ ,ಇನ್ನೊಮ್ಮೆ ಆಡಿಕೊಂಡು ನಗ್ತೀಯಾ ?,ಮನಸ್ಸಿನ ಮೇಲೆ ಹೆಜ್ಜೆ ಇಟ್ಟು ,ಈಗ ,,,,,,,,,,,,,,,

ಏನೆಂದು ಕರೆಯಲಿ ನಿನ್ನ ನಾ ??

Sunday, September 9, 2012

ನಿರೀಕ್ಷೆ ,,,
                
                 ನಿನಗದೆಷ್ಟು ಧಾರಾಳತನ ,
                ಬೇಡವೆಂದರೂ ಬಂದು ,
                ಮನದಲ್ಲೊಂದು  ಮಹಲು ಮಾಡಿ ,
                  ಪದೆ ಪದೇ ನೆನಪಾಗುತ್ತಿಯಾ .!
                  ಮಗ್ಗುಲು ಬದಲಿಸಿ ಕಣ್ಣ ಮುಂದೆಯೇ ಬರುತ್ತಿ ..
              


                ಮುಸ್ಸಂಜೆಯ ತಂಗಾಳಿಗೆ ಮೈಯೊಡ್ಡಿ ,
                 ಹಿತವಾದ ಆಲೋಚನೆಯಲ್ಲಿ ಕುಳಿತಾಗ
                       ಹಾಗೆಯೇ ಸುಳಿದಾಡುವೆ  ...
               ಸದ್ದಿಲ್ಲದೇ ಬಂದು ,
                     ನನ್ನ ಕಲ್ಪನೆಗಳಲ್ಲಿ ನಿಂತು
                      ಮನದಾಳ ಸೇರಿದ 
                        ಒಂದು ಸಿಹಿ ನೆನಪು ನೀನು ..
                      ಬರಿಯ ನೆನಪಾಗಬೇಡ ಗೆಳೆಯಾ '
                           ಜೊತೆ ಆಗಿ ಪಯಣಿಸ ಬಾ
                                              
                                   ನಿನ್ನ ನಿರೀಕ್ಷೆಯಲ್ಲಿರುವ
                                                                    ನಿನ್ನ ಕನಸು ,,,,
              
                 
ನನಗಿಬ್ಬರು ಹೊಸ ಅಕ್ಕಂದಿರು 
                  ಭವಿಷ್ಯದ ಓದಿಗಾಗಿ ಮನೆಬಿಟ್ಟು 15 ದಿನಗಳೇ ಕಳೆದು ಹೋಯಿತು !!ಬಂದ ಒಂದು ವಾರ ಅಳುವುದರಲ್ಲಿಯೇ ಕಳೆದುಹೋಯಿತು ಕೂಡಾ !!ಅಮ್ಮನನ್ನು ಬಿಟ್ಟು 8 ತಾಸುಗಳ ದಾರಿ ಹಿಡಿದು  ಇಷ್ಟು ದೂರ ಬಂದುದ್ದಾಗಿದೆ,,, ತಿರುಗಿ ನೋಡದಷ್ಟು ದೂರ .ಮನದಲ್ಲಿ ಮನೆಯನ್ನೇ ತುಂಬಿಕೊಂಡು ಬೇಸರಿಸುತ್ತಲೇ ಬಂದೆ .ಹೊಸ ಜಾಗ   ಹೊಂದಿಕೊಳ್ಳಲು ತುಂಬಾ ಸಮಯ ಹಿಡಿಯುತ್ತೆ ,ಬೇಸರಿಸದೆ ಖುಷಿಯಾಗಿ ಇರು ,,ಗೊತ್ತಿರದ ಜಾಗದಲ್ಲಿ ಯಾರನ್ನೂ ಅಷ್ಟೊಂದಾಗಿ ಹಚ್ಚಿಕೊಳ್ಳಬೇಡ ,,,ಹೀಗೆ ಏನೇನೋ ನೂರಾರು ಮಾತುಗಳನ್ನು ಹೇಳಿ ಬಿಳ್ಕೊಟ್ತಿದ್ದರು !
                        ಬಂದ ದಿನ ಬೇಜಾರ್ ಆಗಿತ್ತು .ತುಂಬಾ ಅಳುತ್ತಿದ್ದೆ .ಕ್ಲಾಸ್ ಶುರುವಾಗಿರಲಿಲ್ಲ .ಸುಮ್ಮನೆ  ಕುಳಿತಿದ್ದೆ .ಆಗ ನನ್ನನ್ನು ಮಾತಾಡಿಸಿ ,ಆತ್ಮೀಯತೆ ತೋರಿಸಿದ್ದು ನನ್ನ pg seniars  !ನಾನ್ಯಾರೋ ಅವರ್ಯಾರೋ ?? ತಂಗಿ ತರಹ ಪ್ರೀತಿ ಮಾಡುತ್ತಾರೆ .ಅವರ ಆತ್ಮೀಯತೆಗೆ ಮಾತುಗಳೇ ಬರುತ್ತಿಲ್ಲ .ಮನೆಯ ನೆನಪು ಅಷ್ಟೊಂದು ಕಾಡುತ್ತಿಲ್ಲ .ಇವರನ್ನು ನೋಡುತ್ತಿದ್ದರೆ ನನಗೆ ನನ್ನ ಮನೆಯ ಅಕ್ಕಂದಿರೆ ನೆನಪಾಗುತ್ತಾರೆ .ಸ್ವಂತ ಅಕ್ಕಂದಿರಿಲ್ಲದಿದ್ದರು ನನಗೆ ಸ್ವಂತ ಎನಿಸುವಷ್ಟು ಆತ್ಮೀಯತೆ ತೋರುವರು ನನ್ನ ಮನೆಯ ಅಕ್ಕಂದಿರು ..ಇಲ್ಲಿಯೂ ಹಾಗೆಯೇ .ಯಾವುದೇ ಹುಳುಕಿಲ್ಲದೆ ನನಗೆಂದೆ ಅವರ ಕೆಲವು ಸಮಯ ,ವಸ್ತು ಗಳನ್ನು ಕೊಡುತ್ತಿದ್ದರೆ ನಿಜಕ್ಕೂ ಮನೆಯ ಭಾವ ಅನುಭವ !!...
                 ಅಮ್ಮಾ  ..ನನ್ನ ಬಗ್ಗೆ ಚಿಂತಿಸದಿರು ,ಒಳ್ಳೆಯ ಮನೆ ,ಒಳ್ಳೆಯ ಪರಿಸರ ನನ್ನದಾಗಿದೆ .ಹಾಗೆಯೇ ಎಂದಿನಂತೆ ಓದು ಸಾಗಿದೆ .ಒಮ್ಮೆ ಸ್ನೇಹಿತರಂತೆ ಮಾತಾಡುವ seniars ರೂಮ್ ಮೇಟ್ಸ್ ಗಳು ಇನ್ನೊಮ್ಮೆ ಅಕ್ಕಂದಿರಾಗಿ ಆದರಿಸುತ್ತಾರೆ ,!ಮಗದೊಮ್ಮೆ ಮನೆಯವರಂತೆ ಸಾಂತ್ವಾನಿಸುತ್ತಾರೆ ..ತುಂಬಾ ನಗಿಸುತ್ತಾರೆ .ಕೆಲವೊಮ್ಮೆ ಕಾಲೆಯುತ್ತಾರೆ ..ಯಾರೊಂದಿಗೂ ಅಷ್ಟಾಗಿ ಮಾತಾಡದ ನಾನು ಇಲ್ಲಿ ತುಂಬಾ ಮಾತಾಡುತ್ತಿದ್ದೇನೆ .ಮಾತಾಡದಿದ್ದರೆ ಇವರು ಬಿಡುವುದಿಲ್ಲ .ನಿನ್ನ ಜೊತೆ ಲೆಕ್ಕವಿಲ್ಲದಷ್ಟು ಸಾರಿ ಹೇಳ್ತಿದ್ದೆ ..ನನಗೊಬ್ಬ ಅಕ್ಕ ಬೇಕಿತ್ತೆಂದು !!ಆದರೆ ನನಗೇ  ಅಕ್ಕ ಎಂಬ ಪದವಿ ಕೊಟ್ಟಿದ್ದೆ ನೀನು .ಏನೇ ಆಗಲಿ ಅಮ್ಮ,,,,,,,, ನನಗೆ ಇಲ್ಲಿ ಇಬ್ಬರು ಆತ್ಮೀಯ  ಅಕ್ಕಂದಿರು ...ಕೇರ್ ಮಾಡುತ್ತಾ ಮನಸ್ಸಿಗೆ ಹತ್ತಿರದವರಾಗಿದ್ದಾರೆ ಎನ್ನಲು ಖುಷಿ ಪಡುತ್ತೇನೆ.


                                  

Saturday, September 8, 2012

ನನ್ನೊಳಗಿನ ನಾನು

                            ಕಲ್ಪನೆಗೆ ವಾಸ್ತವಕ್ಕೆ ಎಷ್ಟು ವ್ಯತ್ಯಾಸ ನೋಡಿ ,,, ,ಕನಸಿನಲ್ಲಿ ಎಲ್ಲವನ್ನು ಪಡೆದವ ನೈಜದಲ್ಲಿ ಏನೂ ಇಲ್ಲದೆ ಗೊಂದಲದಲ್ಲಿ !!
ಕನಸಿನಲ್ಲಿ ಕಂಡ ರಾಜಕುಮಾರ ಎದುರು ಬರಲಾರ .ಬಂದರೂ ಮಾತನಾಡಲಾರ ,ಮಾತನಾಡಿದರೂ ಅನುಮೋದಿಸಲಾರ !.ರಾತ್ರಿಯ ಸುಂದರ ಸ್ವಪ್ನದಲ್ಲಿ ಎಷ್ಟೊಂದು ತಲೆ ಇರದ ಕನಸುಗಳು,,ವಿದ್ಯಾರ್ಥಿ ಜೀವನ ಮುಗಿಸಿ ಪ್ರತಿಷ್ಟಿತ ಕೆಲಸದಲ್ಲಿ ಇರುವಂತೆ ,ಏನೇನೋ ಮುಂದಿನ ಅರಿವಿಲ್ಲದ ಚಿತ್ರಗಳು,,ಹೇಳ್ತಾ ಹೋದರೆ ಪುಟಗಟ್ಟಲೆ ಇಂಥ ಕನಸುಗಳ ಆಕಾರ ..
                 ಬಿಡುವಿಲ್ಲದ boaring ಕ್ಲಾಸ್ ಗಳು ,homeworks ,ಪ್ರಾಜೆಕ್ಟ್ಸ್ ,assignments ಗಳು ,ಹಾಗೆ ಬರುವ exams ,,ಹೀಗೆ ಪರಂಪರೆ ಮುಂದುವರೆದಿದೆ .ಆದರೆ ಇಷ್ಟು ದಿನ ಒಂಟಿ ಎನಿಸಿಲ್ಲ .ನಾನು ನನ್ನ ಪಾಡಿಗೆ ಓದಿಕೊಂಡಿದ್ದೆ .ಈಗ ನಿಮ್ಮೆಲ್ಲರ ಬರಹಗಳನ್ನು ನೋಡಿದಾಗಿನಿಂದ ನನ್ನೊಳಗಿನ' ನಾನು '   ನಿಮ್ಮಂತೆಯೇ ಬರೆಯಲು ,ನಿಮ್ಮ ನೆನಪಿನ ಬುತ್ತಿಗಳನ್ನು ಓದಲು ಪ್ರಾರಂಬಿಸಿ ಸುಮಾರು ದಿನಗಳಾಗಿವೆ .ಈಗೀಗ ಯೋಚನೆಗಳು ,ಜವಾಬ್ದಾರಿಗಳು ಬರತೊಡಗಿವೆ .ನಾನೂ ಕೊಂಚ ಬದಲಾಗಿದ್ದೇನೆ .ಮೊದಲಿನ ಹುಡುಗಾಟ ಇಲ್ಲ .ಬದಲಾವಣೆ ಆಗಿದೆ .
                         ಅವರವರ ಭಾವಕ್ಕೆ ಎಂದು ಹೇಳುತ್ತಾರಲ್ಲ ...ಹಾಗೆ !!      .ಎಲ್ಲರನ್ನು ಮಾತಾಡಿಸುತ್ತಿದ್ದೆ .ಈಗ ಮಾತಾಡಿಸಿದವರನ್ನು ಮಾತ್ರ ಬೇಕಾದಷ್ಟು ಮಾತಾಡಿಸಿ ಸುಮ್ಮನಾಗುತ್ತೇನೆ.ಆಶ್ಚರ್ಯ ಎನಿಸುತ್ತೆ.ಪ್ರಬುದ್ದ ಯೋಚನೆಗಳೇ ಬರುತ್ತವೆ .silly silly ಜಗಳಗಳಿಲ್ಲ .ಕೋಪ ಬೇಸರಗಳಿಲ್ಲ ..ಅಮ್ಮನ ಜೊತೆ ಕಲಹವಿಲ್ಲ .ಮನೆಯಲ್ಲಿ ದಿನಕ್ಕೊಮ್ಮೆ ಅಮ್ಮ ಹೇಳುತ್ತಿದ್ದರು "ನಿಧಾನ ಮಾತಾಡು ,ಚೀರಾಡಬೇಡ" ಎಂದು.ಆದರೆ ಇವತ್ತು ಮಾತುಗಳೇ ಕಡಿಮೆಯಾಗಿವೆ ,ಇನ್ನು ಹಾರಾಟವೆಲ್ಲಿ !!ಅದ್ಯಾಕೋ ಗೊತ್ತಿಲ್ಲ ಮಾತಿಗಿಂತ ಮೌನ ಇಷ್ಟ ಆಗ್ತಾ ಇದೆ .ಕನಸುಗಳ ಜಗತ್ತಿನಲ್ಲಿ ನನ್ನದೊಂದು ಪುಟ್ಟ ಮನೆಯನ್ನು ಮಾಡಬೇಕೆಂದಿದ್ದೇನೆ ..ವಾಸ್ತವದ ಜಗತ್ತಿಗಿಂತ ನನ್ನ ಪುಟ್ಟ ಕನಸಿನ ಜಗತ್ತು ಬಹು ಸುಂದರ ,

ರಾತ್ರಿ 12 ಆಯ್ತು. ತಲೆ ಇರದ ಕನಸಿನ ರಾಜಕುಮಾರ ಬರುವ ಸಮಯ.ಅವನಷ್ಟಕ್ಕೆ ಅವನು ಮಾತಾಡುತ್ತಿರುತ್ತಾನೆ ಕಣ್ಣಲ್ಲೇ ನಗುತ್ತಾನೆ !! .ಈ ಮೌನದ ರಾತ್ರಿಯಲ್ಲಿ ನನ್ನೊಳಗಿನ  ಈ  ನಾನು  ನನಗೇನೋ ಇಷ್ಟ ಆಗಿದ್ದೇನೆ .ಇನ್ನು ನನ್ನ ಕನಸಿನ ಪ್ರಪಂಚದಲ್ಲಿ ಒಂದಿಷ್ಟು ಮಾತಾಡುತ್ತೇನೆ .

Wednesday, September 5, 2012

 ನನ್ನೀ ನಮನ ,

                                 ಬದುಕಿನ ಪುಟಗಳನ್ನು ತೆರೆಯುತ್ತಾ ಹೋದಂತೆ ಕಳೆದ ದಿನಗಳ ನೆನಪು ಮತ್ತೆ ಮತ್ತೆ ನೆನಪಾಗುತ್ತವೆ .ಇವತ್ಯಾಕೋ ಈ ನೆನಪಿನ ಗುಂಪಿನಲ್ಲಿ ಕಳೆದ ಬಾಲ್ಯದ ಗುರುಗಳು, ಈಗಿನ lecturers ನೆನಪು ಸುಳಿಯುತ್ತಿವೆ  .ಹೀಗಾಗಿ ನಿಮ್ಮೊಂದಿಗೆ ಒಂದಿಷ್ಟು ಮಾತುಕತೆ .........
             ಶಾಲೆಯಲ್ಲಿ ಅಮ್ಮ ಹೇಳಿಕೊಟ್ಟ ಶಿಕ್ಷಕರ ದಿನಾಚರಣೆಯ ಭಾಷಣ ,stege ಗೆ ಹೋದಾಗ ಮರೆತು ಹಾಗೆಯೇ ವಾಪಸ್ ಆಗಿದ್ದು ,ಪ್ರೀತಿಯ ಟೀಚರ್ ಹುರಿದುಂಬಿಸಿ ಮತ್ತೆ ಕಳುಹಿಸಿದ್ದು ...........ಹಾಗೆಯೇ ಹೈಸ್ಕೂಲ್ ಸೆಪ್ಟೆಂಬರ್ 5ರ ಸಂಬ್ರಮ .
ಕಾಲೇಜ್ ಅಲ್ಲಿಯ 'happy teachers day 'ನ crowd ...............ಇವತ್ತಿನ ತೋರಿಕೆಯ ವಿಧೇಯತೆ !!ಎಲ್ಲವೂ ನೆನಪಾಗಿವೆ .ನೆನಪಾದಾಗ ಹೇಳಿಬಿಡುತ್ತೇನೆ .
                           ಪುಟ್ಟ ಪುಟ್ಟ ಕನಸುಗಳನ್ನು ,ನನ್ನಲ್ಲಿನ ಇಷ್ಟಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿ ,ಸಂಸ್ಕೃತಿಯನ್ನು ಕಲಿಸಿ ಈ ತನಕ ಜೊತೆ ನೀಡಿದ ನನ್ನೆಲ್ಲಾ ಗುರುಗಳಿಗೆ 
                  ಇಗೋ ಒಂದು ಧನ್ಯವಾದ .
                     ಜೀವನ ಪಯಣದ ವೇಳೆ ಸೊಕ್ಕು ಕಾಡದ ಹಾಗೆ ,ತುಕ್ಕು ಹಿಡಿಯದ ಹಾಗೆ ಕಾಯುವ ದಕ್ಷ ಕಾವಲುಗಾರ .ಮೃಗಜಲದ ಬೆಂಬತ್ತಿದವರಿಗೆ ಜೀವಜಲದ ಹಾದಿ ತೋರುವ ದಿಕ್ಸೂಚಿ .
ಮಾನವನನ್ನು ದಾನವನನ್ನಾಗಿಸದೆ ಮಾಧವನನ್ನಾಗಿಸುವ ನಿಮ್ಮ ನಿರಂತರ ಶ್ರಮಕ್ಕೆ ಹೀಗೊಂದು ವಂದನೆ .
ನನಗೆ ಮಮತೆಯ ಸೆಲೆಗಳ ಜೊತೆಗೆ ಮಾನವೀಯ ನೆಲೆಗಳನ್ನೂ ತಿಳಿಸಿದ್ದೀರಿ ,,

ಈ ಜೀವನ ನಾಟಕದ ರಂಗ ಜಂಗಮ ,,
                                              ನಿಮಗಿದೋ ಪ್ರಣಾಮ ....
                                                                                  ಸದಾ ನಿಮ್ಮ ವಿಧೇಯ .


On the onset of TEACHERS DAY ,here is the dedication for all my teachers ,parents and well wishers  ..hoping  ur blessings wid me .

Tuesday, September 4, 2012

ಆಹ್ವಾನವೀಯಲಿಲ್ಲ ನಿನಗೆ
ನನ್ನ ಕಣ್ಣ ಮುಂದೆ ಬಾ ಎಂದು ,
ಸುಳಿ ಮಿಂಚೊಂದ ಮೂಡಿಸಿ ತೇಲಿಸೆಂದು
ಆದರೂ ಬಂದೆ ನೀನು ,,,,

ಬೇಡಲಿಲ್ಲ ನಿನ್ನ
ಮನದೊಳಗೆ ನಿಂತು
ನನ್ನ ಅರಳಿಸೆಂದು ,
ನೂರು ಕನಸ ಮೂಡಿಸಿ ಮೈ ಮರೆಸೆಂದು .!
ಈಗ ...

 
ನನ್ನ ನಾ ಕಳೆವ ಹೊತ್ತು
ನೀನಿರದ ಜಗವೇ ನನಗೆ ಬೇಕಿರಲಿಲ್ಲ ,,
ಆದರೂ ಹೊರಟೆ ನೀ
ನನಗೆ ಬೆನ್ನು ಮಾಡಿ !!
ಸಾಗುತ ದೂರ ,
     ಆಗಷ್ಟೇ results ಬಂದಿತ್ತು .ಶಿರಸಿಯ ಬೆಲ್ ಪೂರಿ ಸೆಂಟರ್ ನಲ್ಲಿ ನಿಂತುಕೊಂಡು ಗಂಟೆಗಟ್ಟಲೆ ಮಾತಾಡುತ್ತ ,ಹರಟುತ್ತಾ ಇದ್ದ ದಿನಗಳು ನಿನ್ನೆ ಮೊನ್ನೆಯವು ಎನಿಸುತ್ತಿದೆ ,!ಆದರೆ ಆ ದಿನಗಳು ಕಳೆದು 10 20 ವಾರಗಳೇ ಆಗಿವೆ!!ಬೆಳಿಗ್ಗೆಯಿಂದ ಸಂಜೆಯ ವರೆಗೂnonstop ಮಾತಾಡುತ್ತ ,ಕೆಲವೊಮ್ಮೆ ಮುನಿಸಿಕೊಲ್ಲುತ್ತಾ ಚಿಲ್ಲು ಚಿಲ್ಲಾಗಿ ಇಡಿ campus ನಮ್ಮದೇ ಎಂದು ಓಡಾಡುತ್ತಿದ್ದ ಸ್ನೇಹಿತರೆಲ್ಲ ಚದುರಿದ್ದೇವೆ .ಹಾಗಂತ ಮಾತುಗಳು ,ವಿಷಯ ವಿನಿಮಯ ,ತುಂಟತನ ಮುಗಿದಿಲ್ಲ .ವಾರಕ್ಕೆ ಒಂದುಸಲ ಮಾತಾಡುತ್ತೇವೆ .ಅವರವರ campus ಬಗ್ಗೆ ಗಂಟೆಗಟ್ಟಲೇ ಹರಟುತ್ತೇವೆ*
        .ನಿನ್ನೆಯಷ್ಟೇ ಆತ್ಮೀಯ ಗೆಳತಿಯೊಬ್ಬಳು 'ಮನೆ ತುಂಬಾ ನೆನಪಾಗ್ತಾ ಇದೆ ಕಣೋ ,ಮಿಸ್ ಮಾಡ್ಕೊಂತ ಇದೀನಿ 'ಅಂದ್ಲು .ನನಗೂ ಹಂಗೆ ಅನಿಸ್ತಿದೆ .ಮನೆಯಲ್ಲಿ 'ಪುಟ್ಟಿ 'ಆಗಿ ಇದ್ದು ಈ ಹೊಸ ಊರಲ್ಲಿ pay in guest ಆಗಿ ಇರೋದು ಕೊಂಚ ಕಷ್ಟ ಅನಿಸ್ತ ಇದೆ ..ಏನ್ ಮಾಡೋಣ ಹೇಳಿ .ಓದ್ಬೇಕಂದ್ರೆ ಕೆಲವೊಂದಿಷ್ಟು sacrifice ಮಾಡ್ಬೇಕು .ಆವತ್ತು ಮನೆ ಇಂದ ಚಿಕ್ಕಮಗಳೂರ್ ಗೆ ಹೊರಟು ನಿಂತಾಗ ಎಲ್ಲರೂ ಬೇಸರಿಸಿದರು .ಆದ್ರೆ ನಾನು ಖುಷಿ ಪಟ್ಟೆ !.ಹೊಸ ಜಾಗ ,ever cool campus ,ಏನೋ ಒಂದು ತರದ ಹುರುಪಿತ್ತು .!
                ಹಂಗೆ ರೂಂ ಮೇಟ್ಸ್ ಕೂಡಾ ತಂಗಿ ತರ ಪ್ರೀತಿ ಮಾಡ್ತಾರೆ .pg ಮನೆ ಅಗ್ಬಿಟಿದೆ .!ಆದ್ರೆ ನನ್ನೂರ ನೆನಪು ಅವಾಗ್ ಅವಾಗ ಬರ್ತಾ ಇದೆ.ಮನೆಯ ಅಪ್ಪೆಹುಳಿ ,ತೆಳ್ಲೆವು ಎಲ್ಲದು ಸಿಕ್ಕಾಪಟ್ಟೆ ನೆನಪು   .ಸ್ವಲ್ಪ ಬೇಜಾರ್ ಅನ್ಸುತ್ತೆ .ಪುಟ್ಟ ತಮ್ಮ ,ಅಜ್ಜ ಅಜ್ಜಿ  ಮನೆಯ ಭಾಂದವ್ಯ ,,,,,,,realy missing something ಅನ್ಸ್ತಿದೆ .!ಬದುಕು ಬದಲಾಗಿದೆ ,dreams ಗಳು aims ಗಳಾಗ್ತಾ ಮುಂದೆ ಮುಂದೆ ಸಾಗ್ತಾ ಬಡ್ತಿ ಪಡೆದಿವೆ ! !still ಮನಸ್ಸಿನ ಒಂದು ಮೂಲೆ ಮನೆ ,ಆತ್ಮೀಯ ಗೆಳತಿಯರ ಬಗೆಗೆ ದಿನಕ್ಕೊಮ್ಮೆ ಯೋಚಿಸುತ್ತೆ .!!ಏನೇ ಇರ್ಲಿ ,ಬದುಕನ್ನ ನೋಡುವ ರೀತಿ ಬದಲಾಗಿದೆ .ದೂರ ಆಗಿದ್ರಿಂದ value ತಿಳಿತಿದೆ .!ಹೇಳ್ತಾರಲ್ವ ,ದೂರ ಇದ್ರೆ ಮಾತ್ರ we can feel ಅಂತ !!ನಿಜ್ವಾಗ್ಲು ಕಣ್ರೀ ...ಲೈಫೂ ಹಿಂಗೇನೆ
ಕಳೆದುಹೋದ ನನ್ನ ಮನೆಯನ್ನು ಇಲ್ಲಿ ಹುಡುಕುತ್ತಾ ,,,,,,,,,
ಸಿಕ್ಕಿದ್ರೆ ಹೇಳ್ತೀರ ಅಲ್ವಾ ???!

ಹಾಗೆ ಸುಮ್ನೆ ,
          ಬೇಸರಕ್ಕೆ ಒಂದಷ್ಟು ಮಾತುಗಳು ,,,ನೀವು ಬೇಸರಿಸದಿರಿ .

Sunday, September 2, 2012

ಹೀಗೊಂದು ಮಾತು ,,
            ಈ ಬದುಕನ್ನೋದು ಮನಸ್ಸಿನ ಮೇಲಿನ ನಡಿಗೆ ನಂಬ್ತೀಯಾ?,ಏನು .......,ಇಂಥ ಒಂದು ಕಲ್ಪನೆ ಕೂಡ ಮಾಡಿರಲಾರೆ !
ಆದರೆ ನಾನು ಮಾತ್ರ ಈ ಮನಸ್ಸು ಹೋದತ್ತಲೇ ಹೋಗೋ ಹುಟ್ಟಿಲ್ಲದ ದೋಣಿ ಅಂತಾಗಿದ್ದೇನೆ .ನಿಜ !..ನಿನ್ನೆ ಮೊನ್ನೆಯ ತನಕ ಹೀಗಿರಲಿಲ್ಲ .ಎಲ್ಲಾ ವಿಚಾರದಲ್ಲೂ ನನ್ನದೇ ಆದ ನಿಲುವೊಂದಿತ್ತು !.ಯಾವ ಗೊಂದಲವೂ ಇರಲಿಲ್ಲ ..
                      ಆದರೀಗ ನನಗೆ ನಾನೇ ಒಂದು ಒಗಟಾಗಿ ಬಿಟ್ಟಿದ್ದಿನಿ !   ಹಾಗೆ ನೋಡಿದರೆ ಇತ್ತೀಚಿನವರೆಗೂ ನನಗೆ ನಿನ್ನ ಮೇಲೆ ಯಾವ ಭಾವನೆಯೂ ಇರಲಿಲ್ಲ ,ಎಲ್ಲರಂತೆ ನೀನಿದ್ದೆ .ಎಲ್ಲರೊಡನೆ ನಾನಿದ್ದೆ !!ಆದರೆ ಈಗ ನನ್ನ ಮನಸ್ಸಿಗೆ ಮಾತ್ರ ನೀನು ಎಲ್ಲರಂತಿಲ್ಲ ,,,,ಎಲ್ಲೋ ಇರಬೇಕಿದ್ದ ನೀನು ನನ್ನೊಳಗೆ ಬಂದು ಬಿಟ್ಟಿದ್ದಿ,,
ನವಿರು ಭಾವಗಳನ್ನು ಪ್ರತಿಫಲಿಸಬೇಕಾಗಿದ್ದ ನಿನ್ನ ಕಂಗಳಲ್ಲಿ ಅದೇಕೆ ಅಂತ ದಿವ್ಯ ನಿರ್ಲಕ್ಷವೋ ನಾ ಕಾಣೆ !ನನ್ನ ಮನ ನಿನ್ನ ಸುತ್ತಲೇ ತಿರುಗುತ್ತಿರಬೇಕಾದರೆ ನನಗೇನಾದರೂ  ಇನ್ನೇನು ಕೆಲಸ .?ನೀ ಹೋದೆಡೆ ಬರೋ ನಿನ್ನ ನೆರಳು ನಾನು ,,,,,ನಿನ್ನದೇ ನೆರಳನ್ನು AVOID ಮಾಡೋದು ನಿನ್ನಿಂದ ಸಾಧ್ಯನಾ ??,,,
ಯೋಚಿಸಿ ನೋಡು ........
           ಹೀಗೊಂದು ಮಧುರ ರವಾನೆ ....ಸಾಧ್ಯವಾದರೆ ಉತ್ತರಿಸು ...
ನಿನ್ನವ .

ಮನೋಬಲಕ್ಕೊಂದು ಮನೋಭಾವದ ಗುಟ್ಟು

ಬದುಕಿನಲ್ಲಿ ಕಳೆದುಕೊಂಡಿದ್ದನ್ನು ಮಾತ್ರ ಹುಡುಕಬೇಕಂತೆ .ಕಳೆದುಹೋಗದೇ ಹುಡುಕಹೊರಟ್ರೆ ಅದೊಂದು ಅತಿಶಯ .           ಇರದುದರೆಡೆಗಿನ ತುಡಿತ .!!!ಆದರೆ ಪ್ರಸ್ತುತ ಕಳೆದುಕೊಳ್ಳದೇ ಪಡೆಯಲಾಗದ (!!)ನನ್ನೊಲವಿಗಾಗಿ ಹಂಬಲಿಸುತ್ತಿರುವೆ ;        ನೆನಪುಗಳ ಬೆಚ್ಚನೆ ಹಾಸಿಗೆಯಲ್ಲಿ ಮಲಗಿ ಸುಂದರ ಕನಸುಗಳನ್ನು ಆಗ ತಾನೇ ಹೆಣೆದಿದ್ದೆ .ಕೊಟ್ಟಷ್ಟು ವಾಪಸ್ ಕೊಡಲೇ ಬೇಕೆನ್ನಲು 'ಪ್ರೀತಿ 'ಏನು ವ್ಯವಹಾರವಲ್ಲ .                                                                                                                                 ಬಾಯ್ಬಿಟ್ಟು ಹೇಳದೇನೇ ಸಂಭಂದ ಒಂದಕ್ಕೆ ನಾಮಕರಣ ಮಾಡದೆ ,ಪರಿಶುದ್ದ ಮನಸ್ಸಿಗೊಂದು ತೇಪೆ ಹಚ್ಚಿ ಹೋದೆಯಲ್ಲ ...............,!ನಿನಗರಿವಿಲ್ಲದೆ ನನ್ನತ್ತ ವಾಲಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರೆ ಕ್ಷಮಿಸಲಾರೆನೆಂಬ ಭಯವೇ ??                                                                                                                                                                  ಮೌನವಾಗಿ ನನ್ನಿಂದ ಕಳೆದುಹೋಗುತ್ತಿರುವ ನಿನ್ನದು ಮಧುರ ಮೋಸವಾ ??! ಅಥವಾ ಪರಿಸ್ತಿತಿಯ ಅನಿವಾರ್ಯವಾ ??! ಉತ್ತರ ಹೊಳೆಯದ ಗೊಂದಲ ನನ್ನದು .                                                                                    ಇಷ್ಟು ಮಾತ್ರ ಹೇಳಬಲ್ಲೆ ,ಕೇಳು ,,,,,                                                                                                                                ಬದುಕು ಕವಲೊಡೆದ ಮಾತ್ರಕ್ಕೆ ಒಲವು ಕವಲೊಡಿದಿಲ್ಲ      ,.!      ಬದುಕಿನ ಒಲವು ಚೆಲ್ಲಲು ಮೂಡಿ ಬಂದ ಚಂದಿರ ನೀನು....... .ತಾರೆಗಳ ತೋಟವೇ ನಿನ್ನರಮನೆ .....,      ನನ್ನೊಲವು ಕಳೆದಿಲ್ಲ .ಕಳೆದುಹೊದ್ದುದು ನೀನು !!ನಿನ್ನೊಲವು !!!ಈ ಒಲವಿಗೆ ಮಿಡಿಯದ ಹೃದಯದ ಉಪಯೋಗ ಏನು ?ಹೇಳು ...                                                                                                      ಉತ್ತರಿಸಿ ಹೋಗು ನೀ ..........,,,;           

Tuesday, July 24, 2012

ಭಾವ ಭಾವನೆಯ ನಡುವೆ


ಗೆಳತಿ,

          ಇಂದೇಕೊ ತುಸು ಬೇಸರ. ಸಿಗದ ಆಗಸಕ್ಕೆ ಕೈ ಚಾಚಬೇಕೆಂಬ ತೀವ್ರ ಹಂಬಲ. ಈ ಸಂದಿಗ್ದ ಏಕಾಂತ ನಿರಂತರ!!
ಭಾವನೆಗಳ ಸುಂದರ ಲೋಕದಲ್ಲಿ ಒಂದಷ್ಟು ಆಲೋಚನೆ, ಇನ್ನೊಂದಿಷ್ಟು ತುಂಟತನ, ಮೊತ್ತೊಂದಿಷ್ಟು ಗಾಂಭೀರ್ಯ,

ಏಕಾಂಗಿಯಾಗಿ ನಿಂತು ಹಾಯಿ ದೂರ ನೋಡುತ್ತಿರುವಾಗ ಬದುಕಿನ ಸುಂದರ ಚಿತ್ರ ಕನಸಿನಂತೆ ಭಾಸ.
ಮನಸ್ಥಿತಿಯ ಅಲ್ಪಮಟ್ಟಿನ ಬದಲಾವಣೆ ಖಂಡಿತ ಆಗುವುದು ಆಭಾಸ!.

ಮುಸ್ಸಂಜೆಯ ಈ ಮೌನ ನಿಜಕ್ಕೂ ಅಸಹನೀಯ, ಇಬ್ಬರಿಗೂ ಬದುಕು ಕಟ್ಟಿಕೊಳ್ಳುವ ಕಾತರ!
ಏನೇ ಇರಲಿ,
                   ಭಾವ ನಾನಾದರೆ ಭಾವನೆ ನೀನು,

ಜೀವನದ ಯಶಸ್ಸು ನಿನ್ನದಾಗಲಿ... ಅದರ ಹಾದಿ ನನ್ನದಿರಲಿ

                                                                                                
                                                                        ಚಿರಾಯುವಾಗು.

Sunday, July 22, 2012

ನಮ್ಮೀ ಪಯಣ .,,,,,,,,,.

ಗಡಿಯಾರದ ಮುಳ್ಳು ಓಡುತ್ತಿದೆ .ಸಿಹಿ ಕಹಿ ನೆನಪುಗಳ ದಿಬ್ಬಣ ಸಾಗುತ್ತಿದೆ.ಕೆಂಡ ಕಾರುವ ಸೂರ್ಯ ಕೆಂಪಾಗುತ್ತಿದ್ದಾನೆ.
ನೀಲ ಭಾನು ಕಪ್ಪಾಗುತ್ತಿದೆ .ಚಳಿಗೆ ಕನಸು ಹೆಪ್ಪಾಗುತ್ತಿದೆ .ಪ್ರತಿಯ ದಿನಕ್ಕೊಂದು ಸಂಜೆ ಇದೆ.ಹಾಗೆಯೇ ಪ್ರತಿಯ ಬದುಕಿಗೊಂದು ಸಂಜೆ.ಸಂಜೆಯ ನಂತರ ಕತ್ತಲು .ಕೆಲವೊಮ್ಮೆ ಕರಾಳ ರಾತ್ರಿ .ಮರು ಮುಂಜಾನೆ ಮರು ಸೂರ್ಯ ಮೂಡಲ ಭಾನು ಸೀಳುವುದು ಖಾತ್ರಿ.ಮತ್ತದೇ ಗಜಿಬಿಜಿ ಗೊಂದಲಗಳ ಜಾತ್ರಿ.
ಬದುಕು ಹೀಗೆಯೆ..........ಒಂದಕ್ಕೆ ದುಃಖಿಸುತ್ತ ,,ಇನ್ನೊಂದಕ್ಕೆ ಸಮಾಧಾನಿಸುತ್ತಾ ,,,,,,,,,,,
ನಮ್ಮೀ   ಪಯಣ ...ದಿಗಂತದೆಡೆಗೆ ...................ನಿರಂತರ .....’