Wednesday, September 26, 2012

ಇಲ್ಲೊಬ್ಬರು ಆತ್ಮೀಯರು

ಹಬ್ಬ ಮುಗೀತು ,,,
ಊರಿಗೆ ಹೋಗಬೇಕೆಂದು ತುಂಬಾನೇ ಅಂದುಕೊಂಡಿದ್ದೆ .ಪರೀಕ್ಷೆ ಸನಿಹ ,ಕ್ಲಾಸ್, labs ಗಳ ದರ್ಬಾರಿನಿಂದಾಗಿ ಅಂದುಕೊಂಡಿದ್ದನ್ನು ಕೈ ಬಿಡಬೇಕಾಯಿತು .ನಾನಂದುಕೊಂಡಿದ್ದನ್ನು ಮಾಡದೇ  ಇರುವ ಕಾರ್ಯ ಮುಂದುವರೆಯಿತು .!
pg ಕ್ಲೋಸ್ ಆಗಿತ್ತು .ಕ್ಲಾಸ್ ಗಳನ್ನು ಹೇಗೆ attend ಮಾಡೋದು ಎಂಬ ಪ್ರಶ್ನೆ ತುಂಬಾ ತಲೆ ತಿಂತು !!..ಈಗಷ್ಟೇ ಬಂದು 1 ತಿಂಗಳಾಯಿತು .ಹೇಳಿಕೊಳ್ಳುವಂತಹ ಆತ್ಮೀಯ ಸ್ನೇಹಿತರು ಇನ್ನೂ ಆಗಿಲ್ಲ .
ಆಗ ನೆನಪಾದುದ್ದು ನಮ್ಮ ಊರೀನವರೆ ಆದ ಈಗ ಇಲ್ಲಿಯೇ stay ಆಗಿರುವ ಪರಿಚಿತರು .(ಈಗ ಪರಿಚಿತರಾಗಿ ಆತ್ಮೀಯರಾಗಿದ್ದಾರೆ ಎನ್ನಬಹುದು ).4 ದಿನ ಅವರ ಮನೆಯಿಂದಲೇ ಕಾಲೇಜ್ ಗೆ ಓಡಾಡಿದೆ !.ನಾನು ಬರ್ಲಾ ಹಬ್ಬಕ್ಕೆ ?ಅಂತ ಕೇಳಬೇಕೆಂದಿದ್ದೆ .ಆದರೆ ಅವರ ಆತ್ಮೀಯತೆ ನೋಡಿ ."ಹಬ್ಬಕ್ಕೆ ಬಾರಮ್ಮ ,ಮನೆ ಅಂತ ತಿಳ್ಕೊಂಡು "ಅಂತ ಆಮಂತ್ರಿಸಿದರು .!!
ನಿಜಕ್ಕೂ ಆಶ್ಚರ್ಯವಾಯಿತು .ಯಾಕಂದ್ರೆ ಊರು ಒಂದೇ ಆದ್ರು ನಾನ್ ಊರಿಗ್ ಹೋಗೋದೇ ಅಪರೂಪ .ಹೋದ್ರು ಮನೆ,ಹೊಳೆ ,ಬೆಟ್ಟ ,ಗುಡ್ಡ ,ಸ್ನೇಹಿತರೊಟ್ಟಿಗೆ ಸಮಯ ಸರಿದು ಹೋಗುತ್ತೆ .ಹೀಗಿರುವಾಗ ಜನರ ಪರಿಚಯ ಹೇಗೆ ಸಾದ್ಯ ಹೇಳಿ ?..ಅದೂ ನನ್ನಂತಹ ಮಾತೇ ಆಡದೇ ಸುಮ್ಮನಿರುವವಳಿಗೆ  !.ತೀರ ಇತ್ತೀಚಿಗೆ ಪರಿಚಿತರಾದರು .ತಿಳಿಯದ ಊರಿನಲ್ಲಿ ಸ್ವಲ್ಪ ಆತ್ಮೀಯತೆ ತೋರಿದ್ರೂ ಸಾಕು ಅಂತಿದ್ದೆ .ಆದರೆ ಇವರ ಪ್ರೀತಿ ಆತ್ಮೀಯತೆಗೆ ಮಾತುಗಳೇ ಬರುತ್ತಿಲ್ಲ ,ಹಬ್ಬದ ಸಂಬ್ರಮ ಮನೆಯ ಹಬ್ಬದಂತೆಯೇ ಅನಿಸಿತು .ಅವರ ಮಗ 'ತನು 'ತಮ್ಮನಂತೆಯೇ ಆಗಿದ್ದಾನೆ .ಅಕ್ಕಾ ನನ್ drawing ನೋಡು ,collections ನೋಡು ಅಂತ ಉತ್ಸಾಹದಿಂದ ತೋರಿಸುತ್ತಿದ್ದರೆ ತಮ್ಮನ ನೆನಪು ಆಗದಿರಲಿಲ್ಲ .ಇನ್ನು ಮಮತತ್ತೆ ಅಮ್ಮನಂತೆ ಆದರಿಸಿದರು .ಮನು ಆತ್ಮೀಯನಾದ .ಅವರ ಮನೆಯ ನಾಯೀ ಮರಿಗೆ ಅವರು ತೋರುವ ಪ್ರೀತಿ ಮೂಕವಿಸ್ಮಿತನನ್ನಾಗಿ ಮಾಡಿತು .ನನ್ನನ್ನು ಮನೆ ಮಗಳಂತೆ ನೋಡಿದ ಇವರ ತನಕ್ಕೆ ಮನಪೂರ್ವಕ ಧನ್ಯವಾದಗಳು .
ಅಷ್ಟೊಂದು ಮಾತಾಡಿ ಗೊತಿಲ್ಲದದ್ದರಿಂದ ನನ್ನ  ಮೌನ ಅವರಿಗೆ ಬೇಸರಿಸಿರಬಹುದು 
             ಜನರೊಂದಿಗಿನ interaction ಕಡ್ಮೆ ನಂದು .ಹೀಗಾಗಿ ಅಷ್ಟೊಂದು ಮಾತು ಬಂದಿಲ್ಲ .ಆದರೂ ಅವ್ರೆ ಮಾತಾಡಿಸುತ್ತ ,campus ,ಫ್ರೆಂಡ್ಸ್ ಬಗ್ಗೆ ಕೇಳುತ್ತಾ ಮಾತಾಡಿದಾಗ ಗಂಟೆಗಟ್ಟಲೇ ಮಾತಾಡಿದ್ದು ನಾನೇನಾ ?ಅನ್ನೋ ಸಂದೇಹ ಬೇರೆ .ಅದೆಷ್ಟೋ ಹರಟಿದೆ .ಮನೆಯಿಂದ ದೂರಾದ ಬೇಸರ ಸ್ವಲ್ಪ ಕಡಿಮೆಯಾದಂತಿತ್ತು .ಈ ದೂರದ ಊರಲ್ಲಿ ಪ್ರೀತಿ ತೋರುವ ಆತ್ಮೀಯರೊಬ್ಬರು ಸಿಕ್ಕಿದ್ದು ಖುಷಿಯಾಗಿದೆ .ಹತ್ತಿರದ ಬಂಧು ಆದರೂ ಸಹಾಯ ಮಾಡದೇ ತಮ್ಮ ಜೀವನ ಜಂಜಾಟದಲ್ಲಿ ಮುಳುಗಿ ಹೋಗಿರುವವರು ಒಂದು ಕಡೆ ಆದ್ರೆ ಕೇವಲ ಪರಿಚಿತರಾಗಿ "ನಮ್ಮೂರಿನ ಹುಡ್ಗಿ "ಎಂದು ಪ್ರೀತಿ ತೋರಿಸಿ ಆದರಿಸುವ ಇವರನ್ನು ನೋಡಿ ಖುಷಿಯಾಯಿತು .ಇವರೊಂದಿಗಿನ ಈ ದಿನಗಳ ಒಡನಾಟ ಮನದೊಳಗೆ ಹಾದು ಹೋದ ಮೌನ ಭಾವಕ್ಕೆ ಉತ್ತರ ಕೊಟ್ಟಿತ್ತು .
.ಮಾತು ಧಾತುವಿನ ಏರಿಳಿತದಲ್ಲಿನ ಸಮ್ಮಿಲನಕ್ಕೆ ನನಗೆ ಇಲ್ಲೊಬ್ಬ ಪರಿಚಿತರು ಆತ್ಮೀಯರಾಗಿದ್ದರೆ .

'ನಿಧಿ' ಎಂಬ ಖುಷಿ

       ಪ್ರೀತಿಯ ನಿಧಿ ಪುಟ್ಟಿ ,
      ಸರಿಸುಮಾರು ಹತ್ತು ವರ್ಷದ ನಂತರ ನಮ್ಮ ಮನೆಗೆ ಬಂದ ಮುದ್ದು ಪುಟ್ಟಿ ನೀನು ನಿಧಿ .ನನ್ನ ತಮ್ಮನ ನಂತರ ನಮ್ಮನೆಗೆ ಬಂದ ಪಾಪು ನೀನು .ತಮ್ಮನ ಪುಟ್ಟ ಪುಟ್ಟ ಹೆಜ್ಜೆಯ ನೆನಪು ಅಷ್ಟೊಂದಾಗಿ ಇಲ್ಲ .ಆದರೆ ನಿನ್ನ ಆಟ ,ತುಂಟಾಟ, ಕಿಲ ಕಿಲ ನಗು ,,ದೊಡ್ಡ ದೊಡ್ಡ ಅಳು ,ಕೈ ಕಾಲಿನ ಡಬ ಡಬ ,,ಎಷ್ಟೊಂದು ಮುದ್ದಾಗಿ ಮಾಡುತ್ತೀಯ ನೀ !!ನಿನ್ನ ಪ್ರತಿಯೊಂದು ಕೆಲಸವೂ ತುಂಬಾ ಚೆಂದ .
     ಅದಾಗಲೇ ನಿನಗೆ ಒಂದು ವರ್ಷಕ್ಕೆ ಇನ್ನೆರಡು ತಿಂಗಳುಗಳು ಬಾಕಿ !.9 ತಿಂಗಳು ನಿನ್ನ ಅಮ್ಮನ ಜೋಪಾನದಲ್ಲಿ ಇರಬೇಕಿದ್ದ ನಿನಗೆ ಅದೇನೂ ಅಷ್ಟು ಆತುರವೋ ನಾ ಕಾಣೆ !7 ತಿಂಗಳಿಗೇ ಅಮ್ಮನಲ್ಲಿ ಹಠ ಮಾಡಿ ಬಂದೆ !ಬಹುಷಃ ಹೊಸದನ್ನು ನೋಡುವ ಕುತೂಹಲ ನಿನ್ನನ್ನು  ಹಾಗೆ ಮಾಡಿತು .ಬೇಗ ಬೇಗ ಹೊರಗೆ ಬಂದೆ .ಆದರೆ ಆ ದಿನ ನಮಗಾದ tension ಅಷ್ಟಿಷ್ಟಲ್ಲ ಪುಟ್ಟಿ .ನಿನ್ನ ಅಮ್ಮ (ನನ್ನ ಅಕ್ಕ )ಹಿಂದಿನ ದಿನ ಅಷ್ಟೇ ಗಂಟೆಗಟ್ಟಲೆ ಫೋನಿನಲ್ಲಿ ನಿನ್ನ ಬಗ್ಗೆಯೇ ಮಾತಾಡಿದ್ದಳು .ಆದರೆ ಅವತ್ತೇ ನೀನು ಬರುತ್ತಿಯ ಎಂಬ ನಿರೀಕ್ಷೆ ಇದ್ದಿರಲಿಲ್ಲ.ನಿನ್ನಅಮ್ಮ ತುಂಬಾ ಕಷ್ಟಪಟ್ಟಳು ನಿನ್ನ ಮುದ್ದು ಮುಖ ನೋಡಲು  .. .ಏನೇ ಇರಲಿ ಬಹುಬೇಗ ನಿನ್ನ ಮುದ್ದು ಮುಖವನ್ನು ತೋರಿಸಿದೆ .ಎಲ್ಲರ ಮನ ಗೆದ್ದೆ !
                             ಈಗಲೂ ಅಷ್ಟೇ  ಬಹು ಚೂಟಿ ನೀನು .ಅಂಬೆ ಕಾಲಿಡುತ್ತಾ ಮನೆ ತುಂಬಾ ಓಡಾಡುತ್ತಿಯಂತೆ .ಏನೇನೋ ಮುದ್ದು ಮುದ್ದು ಮಾತಾ ಡುತ್ತಿಯಂತೆ !!.ನಿನ್ನನ್ನು ಒಂದು ಸಲ ಮಾತ್ರ ನೋಡಿದ್ದೇನೆ ಈ ಒಂದು ವರ್ಷದಲ್ಲಿ !!ಅದೇಕೋ ಪುಟ್ಟಾ ,..ನಿನ್ನ ಜೊತೆ ನಾನೂ ಮಗುವಾಗಿ ಆಟ ಆಡಬೇಕೆಂದು ಅನಿಸುತ್ತೆ .ನಿನಗೊಂದು ಹಾಯ್ ಹೇಳೋಣವೆಂದು ಕಂಪ್ಯೂಟರ್ ಮುಂದೆ ಕೂತರೆ ನಿನ್ನ ಅಪ್ಪ ಅಮ್ಮ ನಿನ್ನನ್ನು ನನ್ನೊಟ್ಟಿಗೆ ಮಾತನಾಡಿಸಲು ಹರಸಾಹಸ ಪಡುತ್ತಾರೆ .ಅಷ್ಟೊಂದು ರಂಪ ಮಾಡುತ್ತಿಯಂತೆ .ಏನಾದರೊಂದು ಮಾತಾಡುತ್ತಿದ್ದ ನನ್ನ ಅಕ್ಕ (ನಿನ್ನ ಅಮ್ಮ !) ಈಗ ಫೋನಿನಲ್ಲಿ' ನಿಧಿ ಹಂಗೆ ಮಾಡಿದ್ಲು ಇವತ್ತು ,ಏನೋ ಮಾತನಾಡಿದಳು'ಅಂತೆಲ್ಲ ಗಂಟೆಗಟ್ಟಲೆ ನಿನ್ನ ಬಗೆಗೆ ಮಾತಾಡುತ್ತಾಳೆ .ನಿನ್ನ ಬಗ್ಗೆ ನೂರು ಮಾತು ಹೇಳದೆ ಹೋದರೆ ಅವಳಿಗೆ ಸಮಾಧಾನವಿಲ್ಲ ನಿನ್ನ ಚಿಕ್ಕ ಪುಟ್ಟ ಕೆಲಸವನ್ನೂ ಗಂಟೆಗಟ್ಟಲೇ ವರ್ಣಿಸುತ್ತಾಳೆ ..!!.ನಿನ್ನೆಲ್ಲಾ ಕಾರ್ಯಗಳೂ ನಮಗೊಂದು ಅಚ್ಚರಿ !ಖುಷಿ .ನಿನ್ನ ಅಪ್ಪ ನಿನ್ನ ಎಲ್ಲಾ ಭಂಗಿಗಳನ್ನು ಸೆರೆ ಹಿಡಿದು ಖುಷಿ ಪಟ್ಟರೆ ಅಮ್ಮ ನಮ್ಮೊಂದಿಗೆ ಹೇಳಿ ಖುಷಿಸುತ್ತಿದ್ದಾಳೆ !!ಒಟ್ಟಿನಲ್ಲಿ ಪುಟ್ಟಾಣಿ ನಿಧಿ ಬಗ್ಗೆ ಎಷ್ಟು ಮಾತಾಡಿದರೂ ಕಮ್ಮಿನೇ !
                                      ಅಜ್ಜನಮನೆಯಲ್ಲಿ ಕೆಲ ತಿಂಗಳು  ಮಾತ್ರ ಇದ್ದು ನಿನ್ನ ಮನೆಗೆ ಹೊರಟೆ ನೀ ,ಆ ಸ್ವಲ್ಪ ದಿನಗಳೇ ನಾವೆಲ್ಲಾ ನಿನ್ನನ್ನು ಎತ್ತಿಕೊಂಡೆ ಇದ್ದೆವು .ನಿನ್ನ ಮನೆಯಲ್ಲೂ ಕೂಡ ಪುಟ್ಟಿ ,,ನಿನ್ನನ್ನು ರಾಜಕುಮಾರಿ ಎಂದೇ ಓಡಾಡಿಸುತ್ತಾರೆ .ಮುತ್ತಜ್ಜ  ,ಅಜ್ಜ ಅಜ್ಜಿಯಂದಿರು ನಿನಗೆ ಕೆಳಗೆ ಬಿಡದೇ ಎತ್ತಿಕೊಂಡೆ ಓಡಾಡಿಸುತ್ತರೆಂದು ಅದೆಷ್ಟು ಮುದ್ದು ನೀನು !.ಅಜ್ಜನಮನೆಯಲ್ಲಿ ನಗು ಮೂಡಿಸಿ ,ಮನೆಯಲ್ಲಿ ಮುದ್ದಿನ ಸೋನು ಆಗಿ ನಿನ್ನದೇ ರಾಜ್ಯಭಾರ ಮಾಡುತ್ತಾ ಎಲ್ಲರೂ ನಿನ್ನ ಮಾತನ್ನೇ ಕೇಳುವಂತೆ ಮಾಡಿದ್ದೀಯಾ ??ನೀನು ಸುಮ್ಮನೆ ಅತ್ತರೂ ಎಲ್ಲರೂ ನಿನ್ನಮ್ಮನನ್ನು ಬಯ್ಯುತ್ತಾರೆ ನೋಡು ನಿನ್ನ ಈ ರಗಳೆ ನಿನ್ನಮ್ಮನಿಗೂ ರಗಳೆ .ಆದರೆ ಪುಟ್ಟಿ ಸದಾ ನಗುತ್ತ ,ಎಲ್ಲರನ್ನು ನಿನ್ನ ತೊದಲು ತೊದಲು ಪುಟಾಣಿ ಮಾತುಗಳಿಂದ ನಗಿಸುತ್ತಾ ಅವರ ತಲೆಬಿಸಿಗಳನ್ನು ನಿನ್ನ ಮುಖ ನೋಡಿದಕೂಡಲೇ ಮರೆಸುತ್ತಿದ್ದಿಯ .ಬೇಗ ದೊಡ್ಡವಳಾಗಬೇಡ ನೀನು ..ನಿನ್ನ ಪುಟ್ ಪುಟಾಣಿ ಮಾತುಗಳನ್ನು ನೋಡುವುದು ,ಕೇಳುವುದು ಇನ್ನೂ ಬಾಕಿ ಉಳಿದಿದೆ .


ಅಂದಹಾಗೆ ನಿಧಿ ನನ್ನ ಅಕ್ಕನ ಮಗಳು .8 ತಿಂಗಳ ಪಾಪು .ತುಂಬಾ ತುಂಟಿ .ನಾನವಳನ್ನು ಕೆಲ ತಿಂಗಳ ಹಿಂದೆ ನೋಡಿದ್ದೇನೆ .ಈಗ ಅಂಬೆಗಾಲಿಡುತ್ತ ,ಮುದ್ದು ಮುದ್ದು ಮಾತಾಡುತ್ತಾಳಂತೆ .ಅವಳನ್ನೊಮ್ಮೆ ಮುದ್ದಿಸಬೇಕೆಂಬ ಆಸೆ .ಆದರೆ ನನ್ನಿಂದ 8 10 ತಾಸುಗಳ ಹಾದಿಯಷ್ಟು ದೂರ ಇದ್ದಾಳೆ ಅವಳು .ಏನೇ ಆಗಲಿ ನಿಧಿ ಪುಟ್ಟಾ ಈ ರಜಾದಲ್ಲಿ ನಾವಿಬ್ಬರೂ ಆಟ ಆಡೋಣ ,ಮಾತಾಡೋಣ ,
ರಜಾವನ್ನೇ ಎದುರು ನೋಡುತ್ತಾ  ,,,, 
ನಿನ್ನ ನಿರೀಕ್ಷೆಯಲ್ಲಿ .

Thursday, September 13, 2012

ನಡಿಗೆ 

ಬದುಕು ದೊಡ್ಡದೂ ಆಗಬಹುದು ,ಚಿಕ್ಕದೂ ಆಗಬಹುದು .ಹುಟ್ಟಿನಿಂದ ಸಾವಿನ ತನಕ ಚಾಚಿಕೊಳ್ಳುವ ಇದರ ಅಂತರ ಇತರರ ಪಾಲಿಗೆ ಕಾರಣ ಸಿಗುವ ದೃಶ್ಯಗಳು ಮಾತ್ರ !ಜೀವನ ನಾವು ಅಂದುಕೊಂಡಿದ್ದು .ನಿರೀಕ್ಷೆ ನೀರಸೆಗಳೆನು ಹೊಸತಲ್ಲ .ಇವತ್ತು ಅನುಭವ ಆಗದಿದ್ದರೆ ನಾಳೆ ಇದೆ .ಖಂಡಿತ ಅನುಭೂತಿಯ ಅನುಭವ .ಬೇಡವೆಂದರೂ ಮಗ್ಗುಲು ಬದಲಿಸಿ ಕಣ್ಣ ಮುಂದೆ ಬರುತ್ತವೆ ನೆನಪುಗಳು ,ಕಾಣ ಸಿಗದ ,ಏನೋ ತುಂಟಾಟಕ್ಕೆ ಮಾಡಿದ ತರಲೆಗಳು ,
ಹೀಗೊಂದು ತುಂಟಾಟದ permission ಕೇಳಿದ್ದೆ ನೀನು ..ನೆನಪಿದ್ಯಾ ?

ತುಂಟ ಮನದಲ್ಲೊಂದು ತುಂಟ ಆಸೆ ,
ನಿನ್ನ ತುಂಟ ನೋಟ ,
ತುಂಟ ನಗುವಿನ ಹಿಂದೆ ,
ತುಂಟಾಟವಾಡಲು ,
ತಂಟೆ ಮಾಡದೇ ಒಪ್ಪಿಗೆ ನೀಡುವೆಯಾ ??

ಆವತ್ತು ನೀ ಕೇಳಿದ್ದು ಬರಿಯ ತಮಾಷೆಗಲ್ಲ ಎಂದು ಗೊತ್ತು 
ಆದರೆ ನಾನೇನು ಹೇಳಲಿ ನಿಂಗೆ ,ಎಲ್ಲರನ್ನು ಅರ್ಥ ಮಾಡ್ಕೊಳೋ ನಂಗೆ  ನೀನ್  ಅರ್ಥ ಆಗಿಲ್ಲ .
ಒಂದು ಸಲ ಆತ್ಮೀಯನಾಗಿ ಮಾತಾಡಿ ,ಇನ್ನೊಮ್ಮೆ ಆಡಿಕೊಂಡು ನಗ್ತೀಯಾ ?,ಮನಸ್ಸಿನ ಮೇಲೆ ಹೆಜ್ಜೆ ಇಟ್ಟು ,ಈಗ ,,,,,,,,,,,,,,,

ಏನೆಂದು ಕರೆಯಲಿ ನಿನ್ನ ನಾ ??

Sunday, September 9, 2012

ನಿರೀಕ್ಷೆ ,,,
                
                 ನಿನಗದೆಷ್ಟು ಧಾರಾಳತನ ,
                ಬೇಡವೆಂದರೂ ಬಂದು ,
                ಮನದಲ್ಲೊಂದು  ಮಹಲು ಮಾಡಿ ,
                  ಪದೆ ಪದೇ ನೆನಪಾಗುತ್ತಿಯಾ .!
                  ಮಗ್ಗುಲು ಬದಲಿಸಿ ಕಣ್ಣ ಮುಂದೆಯೇ ಬರುತ್ತಿ ..
              


                ಮುಸ್ಸಂಜೆಯ ತಂಗಾಳಿಗೆ ಮೈಯೊಡ್ಡಿ ,
                 ಹಿತವಾದ ಆಲೋಚನೆಯಲ್ಲಿ ಕುಳಿತಾಗ
                       ಹಾಗೆಯೇ ಸುಳಿದಾಡುವೆ  ...
               ಸದ್ದಿಲ್ಲದೇ ಬಂದು ,
                     ನನ್ನ ಕಲ್ಪನೆಗಳಲ್ಲಿ ನಿಂತು
                      ಮನದಾಳ ಸೇರಿದ 
                        ಒಂದು ಸಿಹಿ ನೆನಪು ನೀನು ..
                      ಬರಿಯ ನೆನಪಾಗಬೇಡ ಗೆಳೆಯಾ '
                           ಜೊತೆ ಆಗಿ ಪಯಣಿಸ ಬಾ
                                              
                                   ನಿನ್ನ ನಿರೀಕ್ಷೆಯಲ್ಲಿರುವ
                                                                    ನಿನ್ನ ಕನಸು ,,,,
              
                 
ನನಗಿಬ್ಬರು ಹೊಸ ಅಕ್ಕಂದಿರು 
                  ಭವಿಷ್ಯದ ಓದಿಗಾಗಿ ಮನೆಬಿಟ್ಟು 15 ದಿನಗಳೇ ಕಳೆದು ಹೋಯಿತು !!ಬಂದ ಒಂದು ವಾರ ಅಳುವುದರಲ್ಲಿಯೇ ಕಳೆದುಹೋಯಿತು ಕೂಡಾ !!ಅಮ್ಮನನ್ನು ಬಿಟ್ಟು 8 ತಾಸುಗಳ ದಾರಿ ಹಿಡಿದು  ಇಷ್ಟು ದೂರ ಬಂದುದ್ದಾಗಿದೆ,,, ತಿರುಗಿ ನೋಡದಷ್ಟು ದೂರ .ಮನದಲ್ಲಿ ಮನೆಯನ್ನೇ ತುಂಬಿಕೊಂಡು ಬೇಸರಿಸುತ್ತಲೇ ಬಂದೆ .ಹೊಸ ಜಾಗ   ಹೊಂದಿಕೊಳ್ಳಲು ತುಂಬಾ ಸಮಯ ಹಿಡಿಯುತ್ತೆ ,ಬೇಸರಿಸದೆ ಖುಷಿಯಾಗಿ ಇರು ,,ಗೊತ್ತಿರದ ಜಾಗದಲ್ಲಿ ಯಾರನ್ನೂ ಅಷ್ಟೊಂದಾಗಿ ಹಚ್ಚಿಕೊಳ್ಳಬೇಡ ,,,ಹೀಗೆ ಏನೇನೋ ನೂರಾರು ಮಾತುಗಳನ್ನು ಹೇಳಿ ಬಿಳ್ಕೊಟ್ತಿದ್ದರು !
                        ಬಂದ ದಿನ ಬೇಜಾರ್ ಆಗಿತ್ತು .ತುಂಬಾ ಅಳುತ್ತಿದ್ದೆ .ಕ್ಲಾಸ್ ಶುರುವಾಗಿರಲಿಲ್ಲ .ಸುಮ್ಮನೆ  ಕುಳಿತಿದ್ದೆ .ಆಗ ನನ್ನನ್ನು ಮಾತಾಡಿಸಿ ,ಆತ್ಮೀಯತೆ ತೋರಿಸಿದ್ದು ನನ್ನ pg seniars  !ನಾನ್ಯಾರೋ ಅವರ್ಯಾರೋ ?? ತಂಗಿ ತರಹ ಪ್ರೀತಿ ಮಾಡುತ್ತಾರೆ .ಅವರ ಆತ್ಮೀಯತೆಗೆ ಮಾತುಗಳೇ ಬರುತ್ತಿಲ್ಲ .ಮನೆಯ ನೆನಪು ಅಷ್ಟೊಂದು ಕಾಡುತ್ತಿಲ್ಲ .ಇವರನ್ನು ನೋಡುತ್ತಿದ್ದರೆ ನನಗೆ ನನ್ನ ಮನೆಯ ಅಕ್ಕಂದಿರೆ ನೆನಪಾಗುತ್ತಾರೆ .ಸ್ವಂತ ಅಕ್ಕಂದಿರಿಲ್ಲದಿದ್ದರು ನನಗೆ ಸ್ವಂತ ಎನಿಸುವಷ್ಟು ಆತ್ಮೀಯತೆ ತೋರುವರು ನನ್ನ ಮನೆಯ ಅಕ್ಕಂದಿರು ..ಇಲ್ಲಿಯೂ ಹಾಗೆಯೇ .ಯಾವುದೇ ಹುಳುಕಿಲ್ಲದೆ ನನಗೆಂದೆ ಅವರ ಕೆಲವು ಸಮಯ ,ವಸ್ತು ಗಳನ್ನು ಕೊಡುತ್ತಿದ್ದರೆ ನಿಜಕ್ಕೂ ಮನೆಯ ಭಾವ ಅನುಭವ !!...
                 ಅಮ್ಮಾ  ..ನನ್ನ ಬಗ್ಗೆ ಚಿಂತಿಸದಿರು ,ಒಳ್ಳೆಯ ಮನೆ ,ಒಳ್ಳೆಯ ಪರಿಸರ ನನ್ನದಾಗಿದೆ .ಹಾಗೆಯೇ ಎಂದಿನಂತೆ ಓದು ಸಾಗಿದೆ .ಒಮ್ಮೆ ಸ್ನೇಹಿತರಂತೆ ಮಾತಾಡುವ seniars ರೂಮ್ ಮೇಟ್ಸ್ ಗಳು ಇನ್ನೊಮ್ಮೆ ಅಕ್ಕಂದಿರಾಗಿ ಆದರಿಸುತ್ತಾರೆ ,!ಮಗದೊಮ್ಮೆ ಮನೆಯವರಂತೆ ಸಾಂತ್ವಾನಿಸುತ್ತಾರೆ ..ತುಂಬಾ ನಗಿಸುತ್ತಾರೆ .ಕೆಲವೊಮ್ಮೆ ಕಾಲೆಯುತ್ತಾರೆ ..ಯಾರೊಂದಿಗೂ ಅಷ್ಟಾಗಿ ಮಾತಾಡದ ನಾನು ಇಲ್ಲಿ ತುಂಬಾ ಮಾತಾಡುತ್ತಿದ್ದೇನೆ .ಮಾತಾಡದಿದ್ದರೆ ಇವರು ಬಿಡುವುದಿಲ್ಲ .ನಿನ್ನ ಜೊತೆ ಲೆಕ್ಕವಿಲ್ಲದಷ್ಟು ಸಾರಿ ಹೇಳ್ತಿದ್ದೆ ..ನನಗೊಬ್ಬ ಅಕ್ಕ ಬೇಕಿತ್ತೆಂದು !!ಆದರೆ ನನಗೇ  ಅಕ್ಕ ಎಂಬ ಪದವಿ ಕೊಟ್ಟಿದ್ದೆ ನೀನು .ಏನೇ ಆಗಲಿ ಅಮ್ಮ,,,,,,,, ನನಗೆ ಇಲ್ಲಿ ಇಬ್ಬರು ಆತ್ಮೀಯ  ಅಕ್ಕಂದಿರು ...ಕೇರ್ ಮಾಡುತ್ತಾ ಮನಸ್ಸಿಗೆ ಹತ್ತಿರದವರಾಗಿದ್ದಾರೆ ಎನ್ನಲು ಖುಷಿ ಪಡುತ್ತೇನೆ.


                                  

Saturday, September 8, 2012

ನನ್ನೊಳಗಿನ ನಾನು

                            ಕಲ್ಪನೆಗೆ ವಾಸ್ತವಕ್ಕೆ ಎಷ್ಟು ವ್ಯತ್ಯಾಸ ನೋಡಿ ,,, ,ಕನಸಿನಲ್ಲಿ ಎಲ್ಲವನ್ನು ಪಡೆದವ ನೈಜದಲ್ಲಿ ಏನೂ ಇಲ್ಲದೆ ಗೊಂದಲದಲ್ಲಿ !!
ಕನಸಿನಲ್ಲಿ ಕಂಡ ರಾಜಕುಮಾರ ಎದುರು ಬರಲಾರ .ಬಂದರೂ ಮಾತನಾಡಲಾರ ,ಮಾತನಾಡಿದರೂ ಅನುಮೋದಿಸಲಾರ !.ರಾತ್ರಿಯ ಸುಂದರ ಸ್ವಪ್ನದಲ್ಲಿ ಎಷ್ಟೊಂದು ತಲೆ ಇರದ ಕನಸುಗಳು,,ವಿದ್ಯಾರ್ಥಿ ಜೀವನ ಮುಗಿಸಿ ಪ್ರತಿಷ್ಟಿತ ಕೆಲಸದಲ್ಲಿ ಇರುವಂತೆ ,ಏನೇನೋ ಮುಂದಿನ ಅರಿವಿಲ್ಲದ ಚಿತ್ರಗಳು,,ಹೇಳ್ತಾ ಹೋದರೆ ಪುಟಗಟ್ಟಲೆ ಇಂಥ ಕನಸುಗಳ ಆಕಾರ ..
                 ಬಿಡುವಿಲ್ಲದ boaring ಕ್ಲಾಸ್ ಗಳು ,homeworks ,ಪ್ರಾಜೆಕ್ಟ್ಸ್ ,assignments ಗಳು ,ಹಾಗೆ ಬರುವ exams ,,ಹೀಗೆ ಪರಂಪರೆ ಮುಂದುವರೆದಿದೆ .ಆದರೆ ಇಷ್ಟು ದಿನ ಒಂಟಿ ಎನಿಸಿಲ್ಲ .ನಾನು ನನ್ನ ಪಾಡಿಗೆ ಓದಿಕೊಂಡಿದ್ದೆ .ಈಗ ನಿಮ್ಮೆಲ್ಲರ ಬರಹಗಳನ್ನು ನೋಡಿದಾಗಿನಿಂದ ನನ್ನೊಳಗಿನ' ನಾನು '   ನಿಮ್ಮಂತೆಯೇ ಬರೆಯಲು ,ನಿಮ್ಮ ನೆನಪಿನ ಬುತ್ತಿಗಳನ್ನು ಓದಲು ಪ್ರಾರಂಬಿಸಿ ಸುಮಾರು ದಿನಗಳಾಗಿವೆ .ಈಗೀಗ ಯೋಚನೆಗಳು ,ಜವಾಬ್ದಾರಿಗಳು ಬರತೊಡಗಿವೆ .ನಾನೂ ಕೊಂಚ ಬದಲಾಗಿದ್ದೇನೆ .ಮೊದಲಿನ ಹುಡುಗಾಟ ಇಲ್ಲ .ಬದಲಾವಣೆ ಆಗಿದೆ .
                         ಅವರವರ ಭಾವಕ್ಕೆ ಎಂದು ಹೇಳುತ್ತಾರಲ್ಲ ...ಹಾಗೆ !!      .ಎಲ್ಲರನ್ನು ಮಾತಾಡಿಸುತ್ತಿದ್ದೆ .ಈಗ ಮಾತಾಡಿಸಿದವರನ್ನು ಮಾತ್ರ ಬೇಕಾದಷ್ಟು ಮಾತಾಡಿಸಿ ಸುಮ್ಮನಾಗುತ್ತೇನೆ.ಆಶ್ಚರ್ಯ ಎನಿಸುತ್ತೆ.ಪ್ರಬುದ್ದ ಯೋಚನೆಗಳೇ ಬರುತ್ತವೆ .silly silly ಜಗಳಗಳಿಲ್ಲ .ಕೋಪ ಬೇಸರಗಳಿಲ್ಲ ..ಅಮ್ಮನ ಜೊತೆ ಕಲಹವಿಲ್ಲ .ಮನೆಯಲ್ಲಿ ದಿನಕ್ಕೊಮ್ಮೆ ಅಮ್ಮ ಹೇಳುತ್ತಿದ್ದರು "ನಿಧಾನ ಮಾತಾಡು ,ಚೀರಾಡಬೇಡ" ಎಂದು.ಆದರೆ ಇವತ್ತು ಮಾತುಗಳೇ ಕಡಿಮೆಯಾಗಿವೆ ,ಇನ್ನು ಹಾರಾಟವೆಲ್ಲಿ !!ಅದ್ಯಾಕೋ ಗೊತ್ತಿಲ್ಲ ಮಾತಿಗಿಂತ ಮೌನ ಇಷ್ಟ ಆಗ್ತಾ ಇದೆ .ಕನಸುಗಳ ಜಗತ್ತಿನಲ್ಲಿ ನನ್ನದೊಂದು ಪುಟ್ಟ ಮನೆಯನ್ನು ಮಾಡಬೇಕೆಂದಿದ್ದೇನೆ ..ವಾಸ್ತವದ ಜಗತ್ತಿಗಿಂತ ನನ್ನ ಪುಟ್ಟ ಕನಸಿನ ಜಗತ್ತು ಬಹು ಸುಂದರ ,

ರಾತ್ರಿ 12 ಆಯ್ತು. ತಲೆ ಇರದ ಕನಸಿನ ರಾಜಕುಮಾರ ಬರುವ ಸಮಯ.ಅವನಷ್ಟಕ್ಕೆ ಅವನು ಮಾತಾಡುತ್ತಿರುತ್ತಾನೆ ಕಣ್ಣಲ್ಲೇ ನಗುತ್ತಾನೆ !! .ಈ ಮೌನದ ರಾತ್ರಿಯಲ್ಲಿ ನನ್ನೊಳಗಿನ  ಈ  ನಾನು  ನನಗೇನೋ ಇಷ್ಟ ಆಗಿದ್ದೇನೆ .ಇನ್ನು ನನ್ನ ಕನಸಿನ ಪ್ರಪಂಚದಲ್ಲಿ ಒಂದಿಷ್ಟು ಮಾತಾಡುತ್ತೇನೆ .

Wednesday, September 5, 2012

 ನನ್ನೀ ನಮನ ,

                                 ಬದುಕಿನ ಪುಟಗಳನ್ನು ತೆರೆಯುತ್ತಾ ಹೋದಂತೆ ಕಳೆದ ದಿನಗಳ ನೆನಪು ಮತ್ತೆ ಮತ್ತೆ ನೆನಪಾಗುತ್ತವೆ .ಇವತ್ಯಾಕೋ ಈ ನೆನಪಿನ ಗುಂಪಿನಲ್ಲಿ ಕಳೆದ ಬಾಲ್ಯದ ಗುರುಗಳು, ಈಗಿನ lecturers ನೆನಪು ಸುಳಿಯುತ್ತಿವೆ  .ಹೀಗಾಗಿ ನಿಮ್ಮೊಂದಿಗೆ ಒಂದಿಷ್ಟು ಮಾತುಕತೆ .........
             ಶಾಲೆಯಲ್ಲಿ ಅಮ್ಮ ಹೇಳಿಕೊಟ್ಟ ಶಿಕ್ಷಕರ ದಿನಾಚರಣೆಯ ಭಾಷಣ ,stege ಗೆ ಹೋದಾಗ ಮರೆತು ಹಾಗೆಯೇ ವಾಪಸ್ ಆಗಿದ್ದು ,ಪ್ರೀತಿಯ ಟೀಚರ್ ಹುರಿದುಂಬಿಸಿ ಮತ್ತೆ ಕಳುಹಿಸಿದ್ದು ...........ಹಾಗೆಯೇ ಹೈಸ್ಕೂಲ್ ಸೆಪ್ಟೆಂಬರ್ 5ರ ಸಂಬ್ರಮ .
ಕಾಲೇಜ್ ಅಲ್ಲಿಯ 'happy teachers day 'ನ crowd ...............ಇವತ್ತಿನ ತೋರಿಕೆಯ ವಿಧೇಯತೆ !!ಎಲ್ಲವೂ ನೆನಪಾಗಿವೆ .ನೆನಪಾದಾಗ ಹೇಳಿಬಿಡುತ್ತೇನೆ .
                           ಪುಟ್ಟ ಪುಟ್ಟ ಕನಸುಗಳನ್ನು ,ನನ್ನಲ್ಲಿನ ಇಷ್ಟಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿ ,ಸಂಸ್ಕೃತಿಯನ್ನು ಕಲಿಸಿ ಈ ತನಕ ಜೊತೆ ನೀಡಿದ ನನ್ನೆಲ್ಲಾ ಗುರುಗಳಿಗೆ 
                  ಇಗೋ ಒಂದು ಧನ್ಯವಾದ .
                     ಜೀವನ ಪಯಣದ ವೇಳೆ ಸೊಕ್ಕು ಕಾಡದ ಹಾಗೆ ,ತುಕ್ಕು ಹಿಡಿಯದ ಹಾಗೆ ಕಾಯುವ ದಕ್ಷ ಕಾವಲುಗಾರ .ಮೃಗಜಲದ ಬೆಂಬತ್ತಿದವರಿಗೆ ಜೀವಜಲದ ಹಾದಿ ತೋರುವ ದಿಕ್ಸೂಚಿ .
ಮಾನವನನ್ನು ದಾನವನನ್ನಾಗಿಸದೆ ಮಾಧವನನ್ನಾಗಿಸುವ ನಿಮ್ಮ ನಿರಂತರ ಶ್ರಮಕ್ಕೆ ಹೀಗೊಂದು ವಂದನೆ .
ನನಗೆ ಮಮತೆಯ ಸೆಲೆಗಳ ಜೊತೆಗೆ ಮಾನವೀಯ ನೆಲೆಗಳನ್ನೂ ತಿಳಿಸಿದ್ದೀರಿ ,,

ಈ ಜೀವನ ನಾಟಕದ ರಂಗ ಜಂಗಮ ,,
                                              ನಿಮಗಿದೋ ಪ್ರಣಾಮ ....
                                                                                  ಸದಾ ನಿಮ್ಮ ವಿಧೇಯ .


On the onset of TEACHERS DAY ,here is the dedication for all my teachers ,parents and well wishers  ..hoping  ur blessings wid me .

Tuesday, September 4, 2012

ಆಹ್ವಾನವೀಯಲಿಲ್ಲ ನಿನಗೆ
ನನ್ನ ಕಣ್ಣ ಮುಂದೆ ಬಾ ಎಂದು ,
ಸುಳಿ ಮಿಂಚೊಂದ ಮೂಡಿಸಿ ತೇಲಿಸೆಂದು
ಆದರೂ ಬಂದೆ ನೀನು ,,,,

ಬೇಡಲಿಲ್ಲ ನಿನ್ನ
ಮನದೊಳಗೆ ನಿಂತು
ನನ್ನ ಅರಳಿಸೆಂದು ,
ನೂರು ಕನಸ ಮೂಡಿಸಿ ಮೈ ಮರೆಸೆಂದು .!
ಈಗ ...

 
ನನ್ನ ನಾ ಕಳೆವ ಹೊತ್ತು
ನೀನಿರದ ಜಗವೇ ನನಗೆ ಬೇಕಿರಲಿಲ್ಲ ,,
ಆದರೂ ಹೊರಟೆ ನೀ
ನನಗೆ ಬೆನ್ನು ಮಾಡಿ !!
ಸಾಗುತ ದೂರ ,
     ಆಗಷ್ಟೇ results ಬಂದಿತ್ತು .ಶಿರಸಿಯ ಬೆಲ್ ಪೂರಿ ಸೆಂಟರ್ ನಲ್ಲಿ ನಿಂತುಕೊಂಡು ಗಂಟೆಗಟ್ಟಲೆ ಮಾತಾಡುತ್ತ ,ಹರಟುತ್ತಾ ಇದ್ದ ದಿನಗಳು ನಿನ್ನೆ ಮೊನ್ನೆಯವು ಎನಿಸುತ್ತಿದೆ ,!ಆದರೆ ಆ ದಿನಗಳು ಕಳೆದು 10 20 ವಾರಗಳೇ ಆಗಿವೆ!!ಬೆಳಿಗ್ಗೆಯಿಂದ ಸಂಜೆಯ ವರೆಗೂnonstop ಮಾತಾಡುತ್ತ ,ಕೆಲವೊಮ್ಮೆ ಮುನಿಸಿಕೊಲ್ಲುತ್ತಾ ಚಿಲ್ಲು ಚಿಲ್ಲಾಗಿ ಇಡಿ campus ನಮ್ಮದೇ ಎಂದು ಓಡಾಡುತ್ತಿದ್ದ ಸ್ನೇಹಿತರೆಲ್ಲ ಚದುರಿದ್ದೇವೆ .ಹಾಗಂತ ಮಾತುಗಳು ,ವಿಷಯ ವಿನಿಮಯ ,ತುಂಟತನ ಮುಗಿದಿಲ್ಲ .ವಾರಕ್ಕೆ ಒಂದುಸಲ ಮಾತಾಡುತ್ತೇವೆ .ಅವರವರ campus ಬಗ್ಗೆ ಗಂಟೆಗಟ್ಟಲೇ ಹರಟುತ್ತೇವೆ*
        .ನಿನ್ನೆಯಷ್ಟೇ ಆತ್ಮೀಯ ಗೆಳತಿಯೊಬ್ಬಳು 'ಮನೆ ತುಂಬಾ ನೆನಪಾಗ್ತಾ ಇದೆ ಕಣೋ ,ಮಿಸ್ ಮಾಡ್ಕೊಂತ ಇದೀನಿ 'ಅಂದ್ಲು .ನನಗೂ ಹಂಗೆ ಅನಿಸ್ತಿದೆ .ಮನೆಯಲ್ಲಿ 'ಪುಟ್ಟಿ 'ಆಗಿ ಇದ್ದು ಈ ಹೊಸ ಊರಲ್ಲಿ pay in guest ಆಗಿ ಇರೋದು ಕೊಂಚ ಕಷ್ಟ ಅನಿಸ್ತ ಇದೆ ..ಏನ್ ಮಾಡೋಣ ಹೇಳಿ .ಓದ್ಬೇಕಂದ್ರೆ ಕೆಲವೊಂದಿಷ್ಟು sacrifice ಮಾಡ್ಬೇಕು .ಆವತ್ತು ಮನೆ ಇಂದ ಚಿಕ್ಕಮಗಳೂರ್ ಗೆ ಹೊರಟು ನಿಂತಾಗ ಎಲ್ಲರೂ ಬೇಸರಿಸಿದರು .ಆದ್ರೆ ನಾನು ಖುಷಿ ಪಟ್ಟೆ !.ಹೊಸ ಜಾಗ ,ever cool campus ,ಏನೋ ಒಂದು ತರದ ಹುರುಪಿತ್ತು .!
                ಹಂಗೆ ರೂಂ ಮೇಟ್ಸ್ ಕೂಡಾ ತಂಗಿ ತರ ಪ್ರೀತಿ ಮಾಡ್ತಾರೆ .pg ಮನೆ ಅಗ್ಬಿಟಿದೆ .!ಆದ್ರೆ ನನ್ನೂರ ನೆನಪು ಅವಾಗ್ ಅವಾಗ ಬರ್ತಾ ಇದೆ.ಮನೆಯ ಅಪ್ಪೆಹುಳಿ ,ತೆಳ್ಲೆವು ಎಲ್ಲದು ಸಿಕ್ಕಾಪಟ್ಟೆ ನೆನಪು   .ಸ್ವಲ್ಪ ಬೇಜಾರ್ ಅನ್ಸುತ್ತೆ .ಪುಟ್ಟ ತಮ್ಮ ,ಅಜ್ಜ ಅಜ್ಜಿ  ಮನೆಯ ಭಾಂದವ್ಯ ,,,,,,,realy missing something ಅನ್ಸ್ತಿದೆ .!ಬದುಕು ಬದಲಾಗಿದೆ ,dreams ಗಳು aims ಗಳಾಗ್ತಾ ಮುಂದೆ ಮುಂದೆ ಸಾಗ್ತಾ ಬಡ್ತಿ ಪಡೆದಿವೆ ! !still ಮನಸ್ಸಿನ ಒಂದು ಮೂಲೆ ಮನೆ ,ಆತ್ಮೀಯ ಗೆಳತಿಯರ ಬಗೆಗೆ ದಿನಕ್ಕೊಮ್ಮೆ ಯೋಚಿಸುತ್ತೆ .!!ಏನೇ ಇರ್ಲಿ ,ಬದುಕನ್ನ ನೋಡುವ ರೀತಿ ಬದಲಾಗಿದೆ .ದೂರ ಆಗಿದ್ರಿಂದ value ತಿಳಿತಿದೆ .!ಹೇಳ್ತಾರಲ್ವ ,ದೂರ ಇದ್ರೆ ಮಾತ್ರ we can feel ಅಂತ !!ನಿಜ್ವಾಗ್ಲು ಕಣ್ರೀ ...ಲೈಫೂ ಹಿಂಗೇನೆ
ಕಳೆದುಹೋದ ನನ್ನ ಮನೆಯನ್ನು ಇಲ್ಲಿ ಹುಡುಕುತ್ತಾ ,,,,,,,,,
ಸಿಕ್ಕಿದ್ರೆ ಹೇಳ್ತೀರ ಅಲ್ವಾ ???!

ಹಾಗೆ ಸುಮ್ನೆ ,
          ಬೇಸರಕ್ಕೆ ಒಂದಷ್ಟು ಮಾತುಗಳು ,,,ನೀವು ಬೇಸರಿಸದಿರಿ .

Sunday, September 2, 2012

ಹೀಗೊಂದು ಮಾತು ,,
            ಈ ಬದುಕನ್ನೋದು ಮನಸ್ಸಿನ ಮೇಲಿನ ನಡಿಗೆ ನಂಬ್ತೀಯಾ?,ಏನು .......,ಇಂಥ ಒಂದು ಕಲ್ಪನೆ ಕೂಡ ಮಾಡಿರಲಾರೆ !
ಆದರೆ ನಾನು ಮಾತ್ರ ಈ ಮನಸ್ಸು ಹೋದತ್ತಲೇ ಹೋಗೋ ಹುಟ್ಟಿಲ್ಲದ ದೋಣಿ ಅಂತಾಗಿದ್ದೇನೆ .ನಿಜ !..ನಿನ್ನೆ ಮೊನ್ನೆಯ ತನಕ ಹೀಗಿರಲಿಲ್ಲ .ಎಲ್ಲಾ ವಿಚಾರದಲ್ಲೂ ನನ್ನದೇ ಆದ ನಿಲುವೊಂದಿತ್ತು !.ಯಾವ ಗೊಂದಲವೂ ಇರಲಿಲ್ಲ ..
                      ಆದರೀಗ ನನಗೆ ನಾನೇ ಒಂದು ಒಗಟಾಗಿ ಬಿಟ್ಟಿದ್ದಿನಿ !   ಹಾಗೆ ನೋಡಿದರೆ ಇತ್ತೀಚಿನವರೆಗೂ ನನಗೆ ನಿನ್ನ ಮೇಲೆ ಯಾವ ಭಾವನೆಯೂ ಇರಲಿಲ್ಲ ,ಎಲ್ಲರಂತೆ ನೀನಿದ್ದೆ .ಎಲ್ಲರೊಡನೆ ನಾನಿದ್ದೆ !!ಆದರೆ ಈಗ ನನ್ನ ಮನಸ್ಸಿಗೆ ಮಾತ್ರ ನೀನು ಎಲ್ಲರಂತಿಲ್ಲ ,,,,ಎಲ್ಲೋ ಇರಬೇಕಿದ್ದ ನೀನು ನನ್ನೊಳಗೆ ಬಂದು ಬಿಟ್ಟಿದ್ದಿ,,
ನವಿರು ಭಾವಗಳನ್ನು ಪ್ರತಿಫಲಿಸಬೇಕಾಗಿದ್ದ ನಿನ್ನ ಕಂಗಳಲ್ಲಿ ಅದೇಕೆ ಅಂತ ದಿವ್ಯ ನಿರ್ಲಕ್ಷವೋ ನಾ ಕಾಣೆ !ನನ್ನ ಮನ ನಿನ್ನ ಸುತ್ತಲೇ ತಿರುಗುತ್ತಿರಬೇಕಾದರೆ ನನಗೇನಾದರೂ  ಇನ್ನೇನು ಕೆಲಸ .?ನೀ ಹೋದೆಡೆ ಬರೋ ನಿನ್ನ ನೆರಳು ನಾನು ,,,,,ನಿನ್ನದೇ ನೆರಳನ್ನು AVOID ಮಾಡೋದು ನಿನ್ನಿಂದ ಸಾಧ್ಯನಾ ??,,,
ಯೋಚಿಸಿ ನೋಡು ........
           ಹೀಗೊಂದು ಮಧುರ ರವಾನೆ ....ಸಾಧ್ಯವಾದರೆ ಉತ್ತರಿಸು ...
ನಿನ್ನವ .

ಮನೋಬಲಕ್ಕೊಂದು ಮನೋಭಾವದ ಗುಟ್ಟು

ಬದುಕಿನಲ್ಲಿ ಕಳೆದುಕೊಂಡಿದ್ದನ್ನು ಮಾತ್ರ ಹುಡುಕಬೇಕಂತೆ .ಕಳೆದುಹೋಗದೇ ಹುಡುಕಹೊರಟ್ರೆ ಅದೊಂದು ಅತಿಶಯ .           ಇರದುದರೆಡೆಗಿನ ತುಡಿತ .!!!ಆದರೆ ಪ್ರಸ್ತುತ ಕಳೆದುಕೊಳ್ಳದೇ ಪಡೆಯಲಾಗದ (!!)ನನ್ನೊಲವಿಗಾಗಿ ಹಂಬಲಿಸುತ್ತಿರುವೆ ;        ನೆನಪುಗಳ ಬೆಚ್ಚನೆ ಹಾಸಿಗೆಯಲ್ಲಿ ಮಲಗಿ ಸುಂದರ ಕನಸುಗಳನ್ನು ಆಗ ತಾನೇ ಹೆಣೆದಿದ್ದೆ .ಕೊಟ್ಟಷ್ಟು ವಾಪಸ್ ಕೊಡಲೇ ಬೇಕೆನ್ನಲು 'ಪ್ರೀತಿ 'ಏನು ವ್ಯವಹಾರವಲ್ಲ .                                                                                                                                 ಬಾಯ್ಬಿಟ್ಟು ಹೇಳದೇನೇ ಸಂಭಂದ ಒಂದಕ್ಕೆ ನಾಮಕರಣ ಮಾಡದೆ ,ಪರಿಶುದ್ದ ಮನಸ್ಸಿಗೊಂದು ತೇಪೆ ಹಚ್ಚಿ ಹೋದೆಯಲ್ಲ ...............,!ನಿನಗರಿವಿಲ್ಲದೆ ನನ್ನತ್ತ ವಾಲಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರೆ ಕ್ಷಮಿಸಲಾರೆನೆಂಬ ಭಯವೇ ??                                                                                                                                                                  ಮೌನವಾಗಿ ನನ್ನಿಂದ ಕಳೆದುಹೋಗುತ್ತಿರುವ ನಿನ್ನದು ಮಧುರ ಮೋಸವಾ ??! ಅಥವಾ ಪರಿಸ್ತಿತಿಯ ಅನಿವಾರ್ಯವಾ ??! ಉತ್ತರ ಹೊಳೆಯದ ಗೊಂದಲ ನನ್ನದು .                                                                                    ಇಷ್ಟು ಮಾತ್ರ ಹೇಳಬಲ್ಲೆ ,ಕೇಳು ,,,,,                                                                                                                                ಬದುಕು ಕವಲೊಡೆದ ಮಾತ್ರಕ್ಕೆ ಒಲವು ಕವಲೊಡಿದಿಲ್ಲ      ,.!      ಬದುಕಿನ ಒಲವು ಚೆಲ್ಲಲು ಮೂಡಿ ಬಂದ ಚಂದಿರ ನೀನು....... .ತಾರೆಗಳ ತೋಟವೇ ನಿನ್ನರಮನೆ .....,      ನನ್ನೊಲವು ಕಳೆದಿಲ್ಲ .ಕಳೆದುಹೊದ್ದುದು ನೀನು !!ನಿನ್ನೊಲವು !!!ಈ ಒಲವಿಗೆ ಮಿಡಿಯದ ಹೃದಯದ ಉಪಯೋಗ ಏನು ?ಹೇಳು ...                                                                                                      ಉತ್ತರಿಸಿ ಹೋಗು ನೀ ..........,,,;