Sunday, July 22, 2012

ನಮ್ಮೀ ಪಯಣ .,,,,,,,,,.

ಗಡಿಯಾರದ ಮುಳ್ಳು ಓಡುತ್ತಿದೆ .ಸಿಹಿ ಕಹಿ ನೆನಪುಗಳ ದಿಬ್ಬಣ ಸಾಗುತ್ತಿದೆ.ಕೆಂಡ ಕಾರುವ ಸೂರ್ಯ ಕೆಂಪಾಗುತ್ತಿದ್ದಾನೆ.
ನೀಲ ಭಾನು ಕಪ್ಪಾಗುತ್ತಿದೆ .ಚಳಿಗೆ ಕನಸು ಹೆಪ್ಪಾಗುತ್ತಿದೆ .ಪ್ರತಿಯ ದಿನಕ್ಕೊಂದು ಸಂಜೆ ಇದೆ.ಹಾಗೆಯೇ ಪ್ರತಿಯ ಬದುಕಿಗೊಂದು ಸಂಜೆ.ಸಂಜೆಯ ನಂತರ ಕತ್ತಲು .ಕೆಲವೊಮ್ಮೆ ಕರಾಳ ರಾತ್ರಿ .ಮರು ಮುಂಜಾನೆ ಮರು ಸೂರ್ಯ ಮೂಡಲ ಭಾನು ಸೀಳುವುದು ಖಾತ್ರಿ.ಮತ್ತದೇ ಗಜಿಬಿಜಿ ಗೊಂದಲಗಳ ಜಾತ್ರಿ.
ಬದುಕು ಹೀಗೆಯೆ..........ಒಂದಕ್ಕೆ ದುಃಖಿಸುತ್ತ ,,ಇನ್ನೊಂದಕ್ಕೆ ಸಮಾಧಾನಿಸುತ್ತಾ ,,,,,,,,,,,
ನಮ್ಮೀ   ಪಯಣ ...ದಿಗಂತದೆಡೆಗೆ ...................ನಿರಂತರ .....’

6 comments:

  1. ಬ್ಲಾಗ್ ಲೋಕಕ್ಕೆ ಸ್ವಾಗತ.. ಹೊಸ ಹೊಸ ಕನಸುಗಳನ್ನು ಇಟ್ಟುಕೊಂಡು ಬ್ಲಾಗ್ ಬರೆಯ ಹೊರಟಿದ್ದೀರಿ, ಶುಭವಾಗಲಿ.
    ನಿಮ್ಮ ಮನಸ್ಸಿನ ವಿಷಯಗಳು ಲೇಖನ,ಕವಿತೆ ಕಥೆಯ ಸ್ವರೂಪದಲ್ಲಿ ಮೂಡಿಬರಲಿ.ಬೇರೆಯವರ ಬ್ಲಾಗ್ ಗಳನ್ನ ಓದಿ ಪ್ರೋತ್ಸಾಹಿಸಿ.

    ReplyDelete
  2. ಧನ್ಯವಾದಗಳು.ಖಂಡಿತವಾಗಿ ಒಳ್ಳೆಯ ಬರಹಗಳ ಓದು ಸಾಗುತ್ತದೆ .ಕನಸುಗಳ ,ಭಾವನೆಗಳ ಪ್ರಕಟಣೆ ಸಾಧ್ಯವಾದುದ್ದು ಖುಶಿಯಾಗಿದೆ

    ReplyDelete
  3. ಹಂ ಬರಹ ಚೆನ್ನಾಗಿದೆ. ನನ್ನ ಬ್ಲಾಗಿಗೂ ಭೇಟಿ ಕೊಡಿ.
    hindumane.blogspot.com

    ReplyDelete
  4. ಚಿತ್ರ ಚಿತ್ರಕ್ಕೊಂದು ಸುಂದರ ಸಾಲುಗಳು..ಸಾಲುಗಳಿಂದ ಭಾವನೆ..ಎಲ್ಲವುದರ ಸಂಗಮ ಸೊಗಸಾಗಿದೆ..

    ReplyDelete
  5. ಧನ್ಯವಾದಗಳು ..
    ನನ್ನ ಬ್ಲಾಗ್ ಗೆ ಸ್ವಾಗತ .ಬರ್ತಾ ಇರಿ .

    ReplyDelete
  6. ದುಃಖ, ಸಮಾಧಾನದ ನಿರಂತರ ಪಯಣದಲ್ಲಿ ಅದೆಷ್ಟೋ ಪಯಣಿಗರು ನೆನಪುಗಳ ದಿಬ್ಬಣಕ್ಕೆ ಸಾಕ್ಷಿಯಾಗುವುದಂತೂ ನಿಜ..

    ReplyDelete