Wednesday, November 14, 2012

ಬಾಲ್ಯದ ನೆನಪು

day following day...
  ಬಾಲ್ಯ ಕಳೆದೆ ಹೋಗಿದೆ .(ಹುಡುಕೋಣ ಎಂದು !)
ಕಳೆದ ಬಾಲ್ಯದ ನೆನಪು ಮತ್ತೆ ಮತ್ತೆ ಕಾಡ್ತಾ ಇದೆ "
.childrens day " ಕೇಳಿದ್ರೆನೆ ಖುಷಿ .
                       ಹಳ್ಳಿಯ ಶಾಲೆ .ಮನೆಯಿಂದ ಅರ್ಧ ತಾಸಿನ ಹಾದಿ (ದಾರಿ ಎಂದು ಹೇಳಬೇಕಷ್ಟೆ !)
ದೊಡ್ಡ ಹೊಳೆ .ಹೊಳೆಯ ಆ ಕಡೆ ಒಂದು ಪುಟ್ಟ ಶಾಲೆ .ಒಬ್ಬರೇ ಮೇಸ್ಟ್ರು ..ಬೆರಳೆಣಿಕೆಯಷ್ಟು ಮಕ್ಕಳು ...ಅರ್ಧ ಮಳೆಗಾಲ ಶಾಲೆ ರಜಾ ...!ಮನೆಯಲ್ಲಿ ಮಜಾ !
ಒದ್ದೆಯಾಗಿ ಕ್ಲಾಸ್ ನಲ್ಲಿ ಕೂರೋದು ..ಮತ್ತೂ ಮಜಾ ! .ಆ ದಿನಗಳೆಲ್ಲ ಕಳೆದೆ ಹೋಗಿದೆ .ನೆನಪಿನ ಜಾತ್ರೆಯಲ್ಲಿ ಬೆಚ್ಚಗಿನ ಅನುಭವವನ್ನು ಯಾವಾಗಲೂ ಕೊಡೊ ನೆನಪುಗಳಿವು ...ಮರೆಯಲಾರದ childhood days !..
ಸಂಜೆ ಬೆಟ್ಟ ಗುಡ್ಡ ಸುತ್ತಿ ಸಿಕ್ಕ ಸಿಕ್ಕ ಹಣ್ಣುಗಳನ್ನು ತಿಂದು ಮನೆಗೆ ಬರುತ್ತಿದ್ದೆವು ..ಅಮ್ಮ ಮಾಡಿದ ಕಾಫೀ ಕುಡಿದು ಹೋಂ ವರ್ಕ್ ಮುಗಿಸಿ ಅಕ್ಕಂದಿರ ಜೊತೆ ಕಿತ್ತಾಡಿ ಊಟ ಮಾಡಿ ಮಲ್ಗೊದು  ಇಷ್ಟೇ ಕೆಲಸ ಅವಾಗ ...
ಅಜ್ಜ ಹೇಳುತ್ತಿದ್ದ ಕತೆಗಳು ,.ಸಣ್ಣ ಸಣ್ಣ ಜಗಳ ,ಕಿತ್ತಾಟ ,ತುಂಟಾಟ ಎಲ್ಲವೂ ಒಂದು memory  ಮಾತ್ರ .! 
ಈಗಲೂ ಹಬ್ಬದಲ್ಲಿ ಒಂದಾದ ಅಕ್ಕಂದಿರು ತಮ್ಮ ತಮ್ಮ ಬಾಲ್ಯದ ಚೇಷ್ಟೆಗಳನ್ನು ನೆನಪಿಸಿಕೊಳ್ಳುತ್ತಾರೆ ನನ್ನೊಟ್ಟಿಗೆ .ಅದೆಷ್ಟೋ ಬಿದ್ದ ಗಾಯಗಳು ,ದೊಡ್ದವರಾಗುತ್ತಿದ್ದಂತೆ ಮಾಡುತ್ತಿದ್ದ ಸೈಕಲ್ ರೇಸ್ ,ಹೊಳೆ ,ಬೆಟ್ಟ ಗುಡ್ಡದ ಪಯಣ ,ಸಣ್ಣ ಸಣ್ಣ ಪಾರ್ಟಿ ...ಹೀಗೆ ಏನೇನೋ ನೆನಪು ಇವತ್ತು ...ಅವತ್ತಿನ ಗಾಯ ಇಂದಿಲ್ಲ .ಆದರೆ ಕಲೆ ನೋಡಿದಾಗ ಗಾಯ ನೆನಪಾಗಲ್ಲ ಬದಲಾಗಿ ಅಂದು ಮಾಡಿದ್ದ ಕೀಟಲೆಗಳ ಸಾಲೆ ಕಣ್ಣ ಮುಂದೆ ...

ಅಂದ ಹಾಗೆ  ,
ಇವತ್ತು childrens day ಅಂತ ನೆನಪಾದುದ್ದು msg  ಒಂದನ್ನು ನೋಡಿದಾಗ !!! 
"today is world diabeties day because childrens are verryyy sweet "
(ಹೀಗೊಂದು ಮೆಸೇಜ್ ಬಂದಿತ್ತು ತಿಳಿಯದ ನಂಬರ್ ಇಂದ ! ,ಅಂತೆ ಕಂತೆಗಳ ಸಂತೆಯಲ್ಲಿ ಟೆಂಟ್ ಒಂದನ್ನು ಈಗಷ್ಟೇ ಕಟ್ಟುತ್ತಿರುವ ಬಾಲ್ಯದ ಆತ್ಮೀಯ ಗೆಳತಿ ಅರ್ಚನಾ !ಪ್ರೀತಿಯಿಂದ ಬಾಲ್ಯವನ್ನು ನೆನೆಸಿದ್ದಳು !)
ಹೀಗೆ indirect ಆಗಿ ವಿಶ್ ಮಾಡುವವರು ಯಾರಿರಬಹುದೆಂದು ತುಂಬಾ ಯೋಚಿಸಿ ಆಮೇಲೆ ಹೊಳೆದಿದ್ದು ಈ ಗೆಳತಿ ,ಅದೆಷ್ಟ್ರೋ ದಿನಗಳ ನಂತರ ಬದಲಾದ ಲೈಫ್ ಸ್ಟೈಲ್ ಜೊತೆ ಬದಲಾಯಿಸಿದ ನಂಬರ್ ನಿಂದ ಮಾತಾಡಿದಳು ..
ಅದೆಷ್ಟೋ ಬಾಲ್ಯದ ನೆನಪುಗಳ ನೆನಪಾಯಿಸಿದೆವು ...ಬಾಲ್ಯ ನಿಜಕ್ಕೂ ಸುಂದರ ಎನಿಸಿತು ಬಾಲ್ಯದ ಗೆಳತಿಯ ಮಾತುಗಳೊಂದಿಗೆ..ಬಾಲ್ಯ ನೆನಪಿಸಿ  ಬಾಲ್ಯದ wishes ಹೇಳಿದ ಗೆಳತಿ...miss you .




ನೆನಪಿನ ಭಾವಗಳಲ್ಲಿ ಬಾಲ್ಯದ ನೆನಪೇ ಬಹುಪಾಲು ..ಏಕೆಂದ್ರೆ ಈಗಷ್ಟೇ ಬಾಲ್ಯ ಮುಗಿದಿದೆ .ಬರಿಯ ಆಟ ಪಾಠ ಹಠ ,,ವಾಹ್ !!!
 ಈಗ ನೋಡಿ ಮುಗಿಯದ ಕ್ಲಾಸ್ ,unlimited assignments !!  non  stop seminars ,sleepless ನೈಟ್ಸ್ !...ಏನ್ ಬೇಕಿದ್ರೂ sacrifice ಮಾಡ್ತೀನಿ ..ಆದ್ರೆ ನಿದ್ದೆ (?)sacrifice ಮಾಡೋದೇ ಕಷ್ಟ ...ತುಂಬಾನೇ ಕಷ್ಟ ;) ನೋ sunday only monday !!
ಕೆಲವೊಂದಿಷ್ಟು ಜವಾಬ್ದಾರಿಗಳು ,ಕ್ಲಾಸ್ ಗೆ ಮೊದಲಿಗರಾಗಲೇ ಬೇಕೆಂಬ ಹಠ ,,ಜೊತೆಯಲ್ಲಿ ಒಂದಿಷ್ಟು ಹುಳುಕು 1
ಮುಗ್ಧತೆ ಇಲ್ಲ .ಮುಗುಳ್ನಗೆ ಇಲ್ಲವೇ ಇಲ್ಲ .ಎಲ್ಲವೂ ಮಾಯಾ ! 
ಇದು ಮುಗಿದ ಮೇಲೆ,,,, .ಬರಿಯ ಯಾಂತ್ರಿಕತೆ ...ಜೊತೆಗೊಂದಿಷ್ಟು ಮುಗ್ಧ ಮುಖವಾಡದ ಮಾಂತ್ರಿಕತೆ ! 
ಹೊಂದಾಣಿಕೆಯ ತಾಂತ್ರಿಕತೆ ...ಬರಿಯ ಯಾತ್ರೆಗಳ ಜಾತ್ರೆ ..ಜೊತೆಗೊಂದಿಷ್ಟು ತಲೆಬಿಸಿ ಗಳ ಸಂತೆ ..ಅಂತೆ ಕಂತೆ ..ಇಷ್ಟೇ !



ಬಾಲ್ಯ ಕಳೆದೇ ಹೋಗಿದೆ ...ನಿಜ್ವಾಗ್ಲು ಸಮಯ ಹಿಂದೆ ಹೋದರೆ ನಾನು ಬಾಲ್ಯ ಬಿಟ್ಟು ಈ ಗೋಜಲಿನ ಜಗತ್ತಿಗೆ ತಿರುಗಲಾರೆ ,,ಅಲ್ಲೇ ಇದ್ದು ಬಿಡುವ ಆಸೆ  ನನಗೆ !
ಬಾಲ್ಯ ನೀನೊಂದು ಸಿಹಿ ನೆನಪು ಮಾತ್ರ ..,
ಬಾಲ್ಯದ ನೆನಪುಗಳ ನೆನಪಲ್ಲಿ,,,,  ನೆನಪೊಂದನ್ನು ನೆನಪಿಸಿಕೊಟ್ಟ ಗೆಳತಿ ಕೇಳಿಲ್ಲಿ ...,
broken pencils and unfilled homeworks are better than 
broken heart and unfilled thoughts !!
ಏನಂತೀಯಾ ?

(ಇವತ್ತೇ ಈ ಮೆಸೇಜ್ ಕೂಡಾ ನನ್ನ inbox ನಲ್ಲಿ ನಾನ್ ಎಳೋಕೂ ಮುಂಚೆನೇ ಬಂದು ಕೂತಿತ್ತು ..ಅಣುಕಿಸುತ್ತಿತ್ತು )





on the onset of children's day ...ಪುಟ್ಟ ಪುಟ್ಟ ಕನಸುಗಳ ನೆನಪಿನಲ್ಲೊಂದು ಪುಟ್ಟ ಪಯಣ ..

18 comments:

  1. ಬಾಲ್ಯದ ದಿನಗಳ ನೆನಪಿನ ಮೆರವಣಿಗೆ ಸೊಗಸಾಗಿ ಸಾಗಿದೆ, ನಾನು ಹಳ್ಳಿಯಲ್ಲಿ ಬಾಲ್ಯದದಿನಗಳ ನೆನಪಾಯಿತು. ನಿರೂಪಣೆ ಚೆನ್ನಾಗಿದೆ. ಮುಂದಿನ ಲೇಖನ ನಿರೀಕ್ಷಿಸುತ್ತೇನೆ.

    ReplyDelete
  2. ಭಾಗ್ಯಾ,
    ಹಳೆಯ ದಿನಗಳ ನೆನಪು...
    ಅದಕೊಂದಿಷ್ಟು ತುಂಟಾಟದ ಒನಪು...

    ಹಮ್...ಚೆನಾಗಿತ್ತು...
    ಚಿಕ್ಕದಾದ ಆಪ್ತವಾದ ಬರಹ ಬರೆಯುತ್ತಿರಿ...

    ReplyDelete
  3. ಹಂ.. ಕಳೆದ ದಿನಗಳು ಯಾವುವೂ ಮರಳಿ ಬರಲಾರದು.ಅದರಲ್ಲಿ ಬಾಲ್ಯವೂ ಒಂದು.ಬಾಲ್ಯದ ನೆನಪುಗಳು ಬಲು ಮಧುರ... ಅದನ್ನು ಮತ್ತೆ ನೆನೆಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು.

    ReplyDelete
  4. ಗೆಳತಿ ಭಾಗ್ಯ, ನಿಜಕ್ಕೂ ಬಾಲ್ಯದ ದಿನಗಳು ಭಾಗ್ಯದ ದಿನಗಳು. ಆ ನೆನಪುಗಳೇ ಮಧುರ.........ಸುಮಧುರ. ಆದರೆ ಇನ್ನು ಕೆಲವು ವರ್ಷ ಕಳೆದು ಮುಪ್ಪು ನಿಮ್ಮನ್ನು ಆವರಿಸಿದಾಗ ನಿಮಗೆ ನಿಮ್ಮ ಈಗಿನ ಅವಸ್ಥೆ ಅಂದರೆ ಯೌವನದ ದಿನಗಳು ನೆನಪಾಗಿ ಹರುಷ ನೀಡುತ್ತವೆ. ಮನುಷ್ಯನ ಚಿಂತನೆಯ ರೀತಿಯೇ ಹಾಗೆ ಕಳೆದುಹೋದದ್ದರ ಬಗ್ಗೆ ಅದರಲ್ಲೂ ಮತ್ತೆ ಸಿಗದ ವಸ್ತುವಿನ ಬಗ್ಗೆ ಆಸೆ, ಅಭಿಮಾನ ಜಾಸ್ತಿ. ಆದರೂ ಬಾಲ್ಯದ ದಿನಗಳು ಭಾಗ್ಯದ ದಿನಗಳೇ :) :)

    ReplyDelete
  5. ಬಾಲ್ಯದ ನೆನಪು ಮನಸಿಗೆ ಮುದಕೊಡುವ ಮನದಾಳದ ಮೆಲುಕಿಗೆ ಸಿಗುವ ನಮ್ಮದೇ ಕೃತಿ...ಬಹಳ ಸೊಗಸಾಗಿದೆ ನಿಮ್ಮ ನೆನಪಿನಾಳದ ಕಲರವ

    ReplyDelete
  6. ಬಾಲ್ಯದ ನೆನಪುಗಳು ಚೆನ್ನಾಗಿದೆ ಭಾಗ್ಯ..

    ನಮಗೇ ಸಮಯವಿಲ್ಲದಷ್ಟು "ಬಿಸಿ"(? !) ಆಗಿರೋ ಈ ಕಾಲದಲ್ಲಿ ಸಮಯದ ಪರಿವೆಯೇ ಇಲ್ಲದೆ ಆಡುತ್ತಾ, ನಲಿಯುತ್ತಾ ಇದ್ದ ಬಾಲ್ಯದ ನೆನಪುಗಳು ಮನಸ್ಸಿಗೆ ನವಿರಾದ ಅನುಭವ ನೀಡುತ್ತದೆ. ಶಾಲೆಯಲ್ಲಿ ಒಬ್ರೇ ಮೇಷ್ಟ್ರು, ಮಳೆಗಾಲದಲ್ಲಿ ಅರ್ಧ ರಜಾ ಎಲ್ಲಾ ಮಲೆನಾಡ ಕಡೆ ಸಾಮಾನ್ಯವೇ ಏನೋ ಅಲ್ವಾ ? ಒದ್ದೆಯಾದ ಬಟ್ಟೆಯಲ್ಲಿ ಶಾಲೆಗೆ ಹೋಗೋ, ಕೂರೋ ಈ ಅನುಭವದ ಬಗ್ಗೆ ನಾನೂ ಇತ್ತೀಚೆಗಷ್ಟೇ ಬರೆದಿದ್ದೆ ಬ್ಲಾಗಲ್ಲಿ. ಮೊನ್ನೆ ಅಷ್ಟೆ ಅಘನಾಶಿನಿ ಬ್ಲಾಗಲ್ಲೂ ಈ ತರದ ಶಾಲಾ ನೆನಪಿನ ಬಗ್ಗೆ ಓದಿದ್ದೆ.
    ಇವತ್ತು ನಿಮ್ಮ ಬ್ಲಾಗಲ್ಲೂ ಶಾಲೆ ಆ ದಿನಗಳ ಮಧುರ ನೆನಪುಗಳ ಮೆರವಣಿಗೆ !!

    ಒಂದೇ ಸಮಯದಲ್ಲಿ ಬೇರೆ ಬೇರೆ ವ್ಯಕ್ತಿಗಳ ವಿಚಾರಧಾರೆಯಲ್ಲಿ ಸಮಾನತೆ :-) ಕಾಕತಾಳೀಯ ಅಂದ್ರೆ ಇದೇ ಏನೋ ಅಲ್ವಾ?

    ReplyDelete
  7. ಇಂದಿನ ಹೈಟೆಕ್ ಯುಗದಲ್ಲಿ ಹಳೆಯ ನೆನಪುಗಳೇ ಕೊನೆಯೆವರೆಗೆ ನಮ್ಮ ಜೊತೆಯಲ್ಲಿರುವುದು.ಅದರಲ್ಲೂ ಬಾಲ್ಯದ ನೆನಪುಗಳೆಂದರೆ ಎಂದಿಗೂ ಮರೆಯದೆ ಇರುವಂತಹದ್ದು. ಬಾಲ್ಯದಲ್ಲಿದ್ದಾಗ ಎಂದು ದೊಡ್ದವರಾಗುತ್ತೆವೋ ಅನಿಸುತ್ತಾ ಇರುತ್ತೆ ಆದರೆ ದೊಡ್ಡವರಾಗಿ ಜೀವನದ ಸಿಹಿಕಹಿ ಉಂಡಾಗ ಕಳೆದ ಸುಂದರವಾದ ದಿನಗಳು ನೆನಪಿಗೆ ಬರುತ್ತೆ. ಮಧುರವಾದ ಬಾಲ್ಯದ ನೆನಪನ್ನ ಮತ್ತೆ ಕೆದಕಿದಾಗ ಸಿಗುವ ಅನುಭವವೇ ಬೇರೆ ಅಲ್ಲವೇ? ನಿಮ್ಮ ಅನುಭವ ಮತ್ತು ಅದರ ನಿರೂಪಣೆ ಸುಂದರವಾಗಿ ಮೂಡಿಬಂದಿದೆ. ಬಾಲ್ಯದ ದಿನಗಳನ್ನ ನೆನೆಪಿಸಿ ಮತ್ತೆ ಹೊಸ ಚೈತನ್ಯವನ್ನ ಮೂಡಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬರವಣಿಗೆ ಹೀಗೆ ದಿನದಿಂದ ದಿನಕ್ಕೆ ಸುಂದರವಾಗಿ ಮೂಡಿಬರುತ್ತಿರಲಿ. ಶುಭವಾಗಲಿ.

    ReplyDelete
  8. ಮತ್ತೆ ಮತ್ತೆ ಬರೆಯುತ್ತಿರಿ.......

    ReplyDelete
  9. ನಿಮ್ಮ ಬರಹ ನಮಗೂ ನಮ್ಮ ಬಾಲ್ಯ ನೆನಪಿಸಿತು..... ಸುಂದರವಾಗಿದೆ ಬರಹ... ಇಷ್ಟ ಆಯ್ತು.....

    ReplyDelete
  10. ತುಂಬಾ ಚೆನಾಗಿದೆ .....ಓದುತ್ತಾ ಹೋದರೆ ಬಾಲ್ಯದ ನೆನಪುಗಳ ಲೋಕಕ್ಕೆ ಕರೆದೊಯ್ಯುತ್ತದೆ ....

    ReplyDelete
  11. This comment has been removed by the author.

    ReplyDelete
  12. ಒಂದು ಸಾರಿ ಬಾಲ್ಯಕ್ಕೆ ಹೋಗಿ ಬಂದೆ. ಮಹಾನ್ ತುಂಟನಾದ ನನ್ನನ್ನು ನನ್ನ ಅಮ್ಮ ಮತ್ತು ಶಾಲೆ ಪಾಪ ಹೇಗೆ ಸುಧಾರಿಸಿದರೋ?

    ನಿಮ್ಮ ಶೈಲಿ ಮತ್ತು ಭಾಷೆ ನವಿರಾದ ಭಾವ ಲಹರಿ.

    ReplyDelete
  13. ಇಷ್ಟ ಆಯಿತು ಭಾಗ್ಯ..
    ಚೆನ್ನಾಗಿದೆ... ಸುಂದರ ಲೇಖನ...

    ReplyDelete
  14. ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ...ಆ ನೆನಪುಗಳೇ ಹಾಗೆ..ಮಾಸೋಲ್ಲ..ಮಾಯೋಲ್ಲ..ಹಸಿಯಾಗೆ ಉಳಿದುಬಿಡುತ್ತದೆ...ಎಲ್ಲರೂ ಹೇಳುತ್ತಾರೆ.ಬಾಲ್ಯದಿಂದ ದೊಡ್ಡವರಾಗಲೇ ಬಾರದು ಅಂತ...ಗುಡ್ದವಾಗಲಿ, ಬೆಟ್ಟವಾಗಲಿ ಅದನ್ನು ಏರಿನಿಂತಾಗಲೇ ನಾವು ನೆಡೆದು ಬಂದ ದಾರಿ ಚಂದ ಎನಿಸುವುದು..ಅಲ್ಲವೇ....ಹಿಂತಿರುಗಿ ನೋಡಿ..ಅದರ ಸವಿಯನ್ನು ಸವಿದಾಗ ಸಿಗುವ ಆನಂದ ಕೊಹಿನೂರ್ ವಜ್ರಕ್ಕಿಂತ ಬೆಲೆ ಜಾಸ್ತಿ :-) ಸುಂದರವಾಗಿದೆ ಬಾಲ್ಯದ ನೆನಪು...

    ReplyDelete

  15. ನೆನಪುಗಳು ಇಷ್ಟವಾದವು, ಬರೆಯುವ ಶೈಲಿಯೂ ಕೂಡ.

    ಯಾಕೋ ನನ್ನದೇ ಬಾಲ್ಯದ ನೆನಪುಗಳನ್ನು ನೆನೆಸಿಕೊಮ್ದನ್ತಾಯ್ತು. ಇರುವುದೆಲ್ಲವ ಬಿಟ್ಟು ಇರದುದರ ಕಡೆಗಿನ ಪಯಣದಲ್ಲಿ ಇರುವುದೆಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನೂ ಗಮನಿಸದೆ ಬದುಕುತ್ತಿರುವ ನಮ್ಮ ನಡುವೆ ಕಳೆದುಕೊಂಡ ಬಾಲ್ಯಕ್ಕೆ ಹೋಗೋಣ ಎಂಬ ನಿಮ್ಮ ಬರಹ ಇಷ್ಟವಾಯ್ತು. ಬರೆಯುತ್ತಿರಿ.

    ReplyDelete
  16. ತಮ್ಮ ಬರವಣಿಗೆಯಲ್ಲಿ ಬಾಲ್ಯದ ಸ್ವರ್ಗವನ್ನೇ ತೋರಿಸಿದ್ದೀರಿ 🙏🙏🙏

    ReplyDelete