ನಡಿಗೆ
ಬದುಕು ದೊಡ್ಡದೂ ಆಗಬಹುದು ,ಚಿಕ್ಕದೂ ಆಗಬಹುದು .ಹುಟ್ಟಿನಿಂದ ಸಾವಿನ ತನಕ ಚಾಚಿಕೊಳ್ಳುವ ಇದರ ಅಂತರ ಇತರರ ಪಾಲಿಗೆ ಕಾರಣ ಸಿಗುವ ದೃಶ್ಯಗಳು ಮಾತ್ರ !ಜೀವನ ನಾವು ಅಂದುಕೊಂಡಿದ್ದು .ನಿರೀಕ್ಷೆ ನೀರಸೆಗಳೆನು ಹೊಸತಲ್ಲ .ಇವತ್ತು ಅನುಭವ ಆಗದಿದ್ದರೆ ನಾಳೆ ಇದೆ .ಖಂಡಿತ ಅನುಭೂತಿಯ ಅನುಭವ .ಬೇಡವೆಂದರೂ ಮಗ್ಗುಲು ಬದಲಿಸಿ ಕಣ್ಣ ಮುಂದೆ ಬರುತ್ತವೆ ನೆನಪುಗಳು ,ಕಾಣ ಸಿಗದ ,ಏನೋ ತುಂಟಾಟಕ್ಕೆ ಮಾಡಿದ ತರಲೆಗಳು ,
ಹೀಗೊಂದು ತುಂಟಾಟದ permission ಕೇಳಿದ್ದೆ ನೀನು ..ನೆನಪಿದ್ಯಾ ?
ತುಂಟ ಮನದಲ್ಲೊಂದು ತುಂಟ ಆಸೆ ,
ನಿನ್ನ ತುಂಟ ನೋಟ ,
ತುಂಟ ನಗುವಿನ ಹಿಂದೆ ,
ತುಂಟಾಟವಾಡಲು ,
ತಂಟೆ ಮಾಡದೇ ಒಪ್ಪಿಗೆ ನೀಡುವೆಯಾ ??
ಆವತ್ತು ನೀ ಕೇಳಿದ್ದು ಬರಿಯ ತಮಾಷೆಗಲ್ಲ ಎಂದು ಗೊತ್ತು
ಆದರೆ ನಾನೇನು ಹೇಳಲಿ ನಿಂಗೆ ,ಎಲ್ಲರನ್ನು ಅರ್ಥ ಮಾಡ್ಕೊಳೋ ನಂಗೆ ನೀನ್ ಅರ್ಥ ಆಗಿಲ್ಲ .
ಒಂದು ಸಲ ಆತ್ಮೀಯನಾಗಿ ಮಾತಾಡಿ ,ಇನ್ನೊಮ್ಮೆ ಆಡಿಕೊಂಡು ನಗ್ತೀಯಾ ?,ಮನಸ್ಸಿನ ಮೇಲೆ ಹೆಜ್ಜೆ ಇಟ್ಟು ,ಈಗ ,,,,,,,,,,,,,,,
ಏನೆಂದು ಕರೆಯಲಿ ನಿನ್ನ ನಾ ??
Na...ninna Neralu andare tappenu?
ReplyDeleteನೆರಳು ಕತ್ತಲಲ್ಲಿ ಕಾಣಸಿಗುವುದಿಲ್ಲ ಸ್ನೇಹಿತರೆ ...ಯಾವಾಗಲು ಜೋತೆಯಾಗಿರುವುದನ್ನು ಏನೆನ್ನೋಣ ಹೇಳಿ ???
ReplyDeleteನಡಿಗೆ ವಿಸ್ತಾರ ಅರ್ಥ ಸಾಕ್ಷಾತ್ಕಾರ.
ReplyDeleteತುಂಟಾಟಕೆ ಒಪ್ಪಿಗೆ ಕೇಳುವ ನಲ್ಲ, ಬಲು ತುಂಟನೇ ಇದ್ದಾನೆ.
ಎಲ್ಲ ಅರ್ಥ ಮಾಡಿಕೊಳ್ಳುವ ನಿಮ್ಮ, ಅವನು ಅರ್ಥ ಆಗಲೊಲ್ಲ. ಅದೇ ಒಲುಮೆ ಗೆಳತಿ.
www.badari-poems.blogspot.com
ನನ್ನೊಲುಮೆ ಕಳೆದಿಲ್ಲ ,ನನ್ನೊಲವು ಮುಗಿದಿಲ್ಲ .
ReplyDeleteಧನ್ಯವಾದಗಳು .ಬ್ಲಾಗ್ ಗೆ ಬರ್ತಾ ಇರಿ .
ಜೊತೆಯಲ್ಲೇ ಬರುವವ ಸ್ನೇಹಿತ..ಜೊತೆಯಲ್ಲೇ ಇರುವವ ಸಂಗಾತಿ...ಇವರೆಡರ ಮಧ್ಯೆ ಸಿಗುವ ನೆಮ್ಮದಿ.ಸುಂದರ ಅತಿ ಸುಂದರ...ಜೀವನ ಪಯಣದಲ್ಲಿ ಇಂತಹ ನೆನಪುಗಳೇ ಮೈಲಿಗಲ್ಲನ್ನು ಹಾಡು ಹೋಗಲು ಇರುವ ಕುರುಹುಗಳು...ಸುಂದರವಾಗಿದೆ..
ReplyDelete