Wednesday, September 5, 2012

 ನನ್ನೀ ನಮನ ,

                                 ಬದುಕಿನ ಪುಟಗಳನ್ನು ತೆರೆಯುತ್ತಾ ಹೋದಂತೆ ಕಳೆದ ದಿನಗಳ ನೆನಪು ಮತ್ತೆ ಮತ್ತೆ ನೆನಪಾಗುತ್ತವೆ .ಇವತ್ಯಾಕೋ ಈ ನೆನಪಿನ ಗುಂಪಿನಲ್ಲಿ ಕಳೆದ ಬಾಲ್ಯದ ಗುರುಗಳು, ಈಗಿನ lecturers ನೆನಪು ಸುಳಿಯುತ್ತಿವೆ  .ಹೀಗಾಗಿ ನಿಮ್ಮೊಂದಿಗೆ ಒಂದಿಷ್ಟು ಮಾತುಕತೆ .........
             ಶಾಲೆಯಲ್ಲಿ ಅಮ್ಮ ಹೇಳಿಕೊಟ್ಟ ಶಿಕ್ಷಕರ ದಿನಾಚರಣೆಯ ಭಾಷಣ ,stege ಗೆ ಹೋದಾಗ ಮರೆತು ಹಾಗೆಯೇ ವಾಪಸ್ ಆಗಿದ್ದು ,ಪ್ರೀತಿಯ ಟೀಚರ್ ಹುರಿದುಂಬಿಸಿ ಮತ್ತೆ ಕಳುಹಿಸಿದ್ದು ...........ಹಾಗೆಯೇ ಹೈಸ್ಕೂಲ್ ಸೆಪ್ಟೆಂಬರ್ 5ರ ಸಂಬ್ರಮ .
ಕಾಲೇಜ್ ಅಲ್ಲಿಯ 'happy teachers day 'ನ crowd ...............ಇವತ್ತಿನ ತೋರಿಕೆಯ ವಿಧೇಯತೆ !!ಎಲ್ಲವೂ ನೆನಪಾಗಿವೆ .ನೆನಪಾದಾಗ ಹೇಳಿಬಿಡುತ್ತೇನೆ .
                           ಪುಟ್ಟ ಪುಟ್ಟ ಕನಸುಗಳನ್ನು ,ನನ್ನಲ್ಲಿನ ಇಷ್ಟಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿ ,ಸಂಸ್ಕೃತಿಯನ್ನು ಕಲಿಸಿ ಈ ತನಕ ಜೊತೆ ನೀಡಿದ ನನ್ನೆಲ್ಲಾ ಗುರುಗಳಿಗೆ 
                  ಇಗೋ ಒಂದು ಧನ್ಯವಾದ .
                     ಜೀವನ ಪಯಣದ ವೇಳೆ ಸೊಕ್ಕು ಕಾಡದ ಹಾಗೆ ,ತುಕ್ಕು ಹಿಡಿಯದ ಹಾಗೆ ಕಾಯುವ ದಕ್ಷ ಕಾವಲುಗಾರ .ಮೃಗಜಲದ ಬೆಂಬತ್ತಿದವರಿಗೆ ಜೀವಜಲದ ಹಾದಿ ತೋರುವ ದಿಕ್ಸೂಚಿ .
ಮಾನವನನ್ನು ದಾನವನನ್ನಾಗಿಸದೆ ಮಾಧವನನ್ನಾಗಿಸುವ ನಿಮ್ಮ ನಿರಂತರ ಶ್ರಮಕ್ಕೆ ಹೀಗೊಂದು ವಂದನೆ .
ನನಗೆ ಮಮತೆಯ ಸೆಲೆಗಳ ಜೊತೆಗೆ ಮಾನವೀಯ ನೆಲೆಗಳನ್ನೂ ತಿಳಿಸಿದ್ದೀರಿ ,,

ಈ ಜೀವನ ನಾಟಕದ ರಂಗ ಜಂಗಮ ,,
                                              ನಿಮಗಿದೋ ಪ್ರಣಾಮ ....
                                                                                  ಸದಾ ನಿಮ್ಮ ವಿಧೇಯ .


On the onset of TEACHERS DAY ,here is the dedication for all my teachers ,parents and well wishers  ..hoping  ur blessings wid me .

1 comment:

  1. ನಮ್ಮ ಸಂಸ್ಕೃತಿಯಲ್ಲಿ ಗುರುಗಳಿಗೆ ಮಾತಾ ಪಿತೃಗಳು ನಂತರದ ದೊಡ್ಡ ಸ್ಥಾನ ಕೊಟ್ಟಿದ್ದೇವೆ.ಅಂತಹ ಗುರುಗಳನ್ನು ನೆನೆಯುವುದು ಸುಂದರ ಅನುಭವ.ಮಾತು ಕೃತಜ್ಞತೆ ತೋರುವ ಪರಿ ಸೊಗಸಾಗಿದೆ...

    http://kantha-themagnet.blogspot.in/2010/07/guruve-namaha.html

    ReplyDelete