ಸುಮ್ಮನೆ ನೋಡಿದ್ದ ಮೊನ್ನೆಯ ಫೋಟೋ ಅದು ....ಒಂದಿಷ್ಟು ದುಃಖ ,ಹೇಳಲಾಗದ ಬೇಸರ ,ಆ ಅಸಹಾಯಕತೆಯ ವಿಧಿಯ ಬದುಕಿದು ಅನ್ನೋ ಭಾವಕ್ಕೆ ...ಅದೇನೋ ಸ್ಪಷ್ಟವಾಗಿರದ ಭಾವವನ್ನ ಕೇಳೋಕೆ ಶಬ್ದ ಸಿಗದೆ ಕಷ್ಟ ಪಟ್ಟು ಕೇಳಿದ್ದೆ
"ಬದುಕು ನಾವಂದುಕೊಂಡಂತಿಲ್ಲ ಗೆಳತಿ....ಒಮ್ಮೆ ಹೊರ ಬಂದು ನೋಡು ದುಃಖಿಸೋ ಇಳಿ ಜೀವಗಳೆಷ್ಟಿವೆಯೆಂದು "ಎಂದು ಹೇಳಿ ಇನ್ನೂ ಗೋಜಲು ಮಾಡಿದ್ದ ಭಾವ ಗೊಂಚಲಿನಲ್ಲಿ ಶ್ರೀವತ್ಸ ಕಂಚಿಮನೆ ...
ನಿನ್ನೀ "ಮಂಜಾದ ಬದುಕು " ನಾ ನೋಡಿರದ ಬದುಕನ್ನ ಕಣ್ಣ ಮುಂದಿಟ್ಟಿದೆ ..
ದುಸ್ತರ ಬದುಕಿನ ಸುತ್ತ......
ಮುರುಕು ಮನೆಯೆದುರು ಒಂಟಿಯಾಗಿ ಬಿಕ್ಕುತ್ತಿರೋ ಜೀವ
ಸಂಗಾತಿಯ ಅಗಲುವಿಕೆ ನೀಡಿದ ಒಂಟಿತನದ ನೋವ ....
ಹಾಯಿ ದೂರ ನೋಡೋ ದಾರಿಯಲ್ಲೊಂದು ಭರವಸೆಯ ನಿರೀಕ್ಷೆ
ಎಂದಿನಂತೆ ಮುಂದುವರೆಯೋ ಒಪ್ಪತ್ತೂಟದ ನಿರಾಸೆ ...
ಕೊಲ್ಮಿಂಚಿನ ಅಂಚಿಂದ ಕಾರ್ಗತ್ತಲೆಯ ಕೂಪದಲ್ಲಿ....
ನನ್ನೊಟ್ಟಿಗೆ ನನ್ನ ಬೆಕ್ಕೂ ಕಣ್ಣೀರಿಡುತ್ತಿದೆ ನನ್ನರಮನೆಯಲ್ಲಿ...
ಇಬ್ಬರ ಬೇಸರಕ್ಕೂ ....
ನಿನ್ನ ಖುಷಿಗೂ ...
ನನ್ನ ಕಲ್ಪನೆಯ ಬದುಕು ಇವರ ವಾಸ್ತವದ ಬದುಕಲ್ಲಿ ಕಳೆದೋದ ಭಾಸ ...
ವಾಸ್ತವಕ್ಕೂ ಕಲ್ಪನೆಗೂ ನಡುವೆ ಇರೋ ಆಭಾಸ ...
ಓ ಬದುಕೆ ..
ನಿನಗದೆಷ್ಟು ಧಾರಾಳ ತನ !!!
ನಾ ನನ್ನ ಮನೆಯ ಯಜಮಾನಿಯಾಗಿ ಮೆರೆಯಬೇಕೆಂದು ಕೇಳಿರಲಿಲ್ಲ ...
ಸಾಲು ಸಾಲು ದುಃಖಗಳ ಯಜಮಾನಿಯಾಗಿ ಮಾಡಿರೋ ನಿನ್ನೀ ಧಾರಾಳ ಪ್ರೀತಿಗೊಂದು ಪ್ರೀತಿಯ ನಮನ ...
ಖುಷಿಸೋ ಜೀವನ ಕೇಳಿರಲಿಲ್ಲ ನಿನ್ನ ನಾ ...
ಅತೀ ಪ್ರೀತಿಯ ಜೀವನ ಕೊಟ್ಟಿರೋ ನಿನ್ನ ಜೀವನ ಪ್ರೀತಿಗೊಂದು ಶರಣು .....
ಅತೀ ನಿರಾಸೆಯ ಸಾಲು ಸಾಲು ಸುಖಗಳ ಇಳಿ ವಯಸ್ಸಿನ ಸಂತುಷ್ಟ ಬದುಕು ನನ್ನದೆಂಬ ಹೆಮ್ಮೆ ನಂದು ...
ಬದುಕೇ ..ನೀ ಕೊಟ್ಟ ಬದುಕಿಗೆ ಭರವಸೆಯ ಅಂತರದ ಪ್ರೀತಿ ಮಾತ್ರ ನಂದು
(ಗೋದಾವರಿ ನದೀ ತೀರದಲ್ಲಿರೋ ಈ ಅಜ್ಜಿಯ ಪುಟ್ಟ ಪುಟ್ಟ ತೆಂಗಿನ ಕಾಯಿಗೆ ,ಬಿಸಿಲ ಬೇಗೆಗೆ ಬಾಯಾರಿಸೋ ನೀರು ..ಸಣ್ಣ ಸಣ್ಣ ಸ್ವೀಟ್ ಪ್ಯಾಕೆಟ್ ಗಳು ....ಬರಿಯ ಒಪ್ಪತ್ತಿನ ಊಟಕ್ಕಾಗಿ ಈ ಇಳಿ ವಯಸ್ಸಲ್ಲಿ ದಾರಿಯುದ್ದಕ್ಕೂ ನೋಡೋ ಈ ಕಣ್ಣುಗಳ ನೋವು
ಕ್ಷಣವೊಂದಕ್ಕೆ ನೋವು ,ಬೇಸರವಾಯ್ತು ...ಇಳಿ ವಯಸ್ಸಿನ ಈ ನೋವಿಗೆ ಮನ ಹಿಂಡಿದ್ದು ಸುಳ್ಳಲ್ಲ)
ಬದುಕಿನ ಇನ್ನೊಂದು ನೋವಿನ ಭಾವವನ್ನ ತೋರಗೊಟ್ಟಿದ್ದು ನಿನ್ನೀ "ಮಂಜಾದ ಬದುಕು "
ಥಾಂಕ್ಸ್ ಶ್ರೀವತ್ಸಾ ಜಿ
ಮತ್ತೊಂದಿಷ್ಟು ಗೊಜಲುಗಳೇ ಕಣ್ಣ ಮುಂದಿವೆ ಗೆಳತಿ...
ReplyDeleteಥಾಂಕ್ಸ್ ಮೌನರಾಗ ....ಗೋಜಲಿಲ್ಲದ ಬದುಕಿಲ್ಲ ...ಒಂದಿಷ್ಟು ಭಾವಗಳು ಗೋಜಲಾಗೇ ಉಳಿಯಲಿ ಅಲ್ವಾ ??
Deleteಸೃಜನಶೀಲ ಮನಕ್ಕೆ ,ವಸ್ತು ಯಾವುದಾದರೇನು ಭಾವಸ್ಪುರಣೆ ನಿಲ್ಲದು ಅಲ್ವಾ???ಅದಕ್ಕೊಂದು ಚಿಕ್ಕ ಎಳೆ ಸಿಕ್ಕರೆ ಸಾಕು ಅಷ್ಟೇ...
ReplyDeleteಚೆನ್ನಾಗಿದೆ....:)
ಒಬ್ಬರ ಬರಹ ಇನ್ನೊಬ್ಬರ ಬರಹಕ್ಕೆ ಸ್ಪುರ್ತಿಯಾಗಿದ್ದು ಇದರ ಹೊಸತನ....
ಬರೆಯುತ್ತಿರಿ...
ನಮಸ್ತೆ :)
ಥಾಂಕ್ಸ್ ಚಿನ್ಮಯಣ್ಣ ...
Deleteಬದುಕೂ ಹಾಗೆ ಅಲ್ದಾ ...ಒಬ್ಬರ ಬದುಕು ಇನ್ನೊಬ್ಬರಿಗೆ ಸ್ಪೂರ್ತಿ ...ಆ ಸ್ಪೂರ್ತಿಯಲ್ಲೆ ಒಂದು ಹೊಸತನ...ಚೈತನ್ಯ :)
ಬರ್ತಾ ಇರಿ ನಮಸ್ತೆ
"ವಾಸ್ತವಕ್ಕೂ ಕಲ್ಪನೆಗೂ ನಡುವೆ ಇರೋ ಆಭಾಸ ..." ಇದೇ ವೈರುಧ್ಯ.
ReplyDeleteಯಾಕೋ ಮನಸ್ಸು ಆರ್ಧ್ರವಾಯಿತು. ಕಂಚಿಮನೆ ಮತ್ತು ನಿಮಗೂ ನಮನಗಳು.
ಥಾಂಕ್ಸ್ ಬದರಿ ಸರ್ ..
Deleteಕಲ್ಪನೆಯೆ ವಾಸ್ತವವಾಗಿರಬೇಕಿತ್ತು ..
.ಅಥವಾ ವಾಸ್ತವವೇ ಕನಸಾಗಬೇಕಿತ್ತು ....ಆಗ ಆಭಾಸ ಆಗ್ತಿರ್ಲಿಲ್ಲ ಅಲ್ವಾ ?
ಬರ್ತಾ ಇರಿ
ಭಾಗ್ಯ ಮರೀ -
ReplyDeleteಉತ್ತರಗಳಿಲ್ಲದ ಸಾವಿರ ಪ್ರಶ್ನೆಗಳಿವೆ ಬದುಕಿನೆಡೆಗೆ ನನ್ನಲ್ಲಿ...
ನೀ ಇನ್ನಷ್ಟು ಪ್ರಶ್ನೆಗಳ ಭಾವಗಳಲಿ ತೆರೆದಿಟ್ಟಿದ್ದೀಯ...
:::
ನನ್ನ ಚಿತ್ರಕ್ಕೆ ಭಾವ ನೀಡಿದ್ದೀಯ...
ನಾನೂ ಆ ಜೀವದ ಫೋಟೋ ತೆಗೆದೆನೇ ಹೊರತು ಬವಣೆ ಕೇಳಿಲ್ಲ...:(
ಅಷ್ಟು ಪುರುಸೊತ್ತು ನಮ್ಮ ಬದುಕಿಗೆಲ್ಲಿದೆ...:(
ಬದುಕಿನ ವ್ಯಂಗದ ಬಗ್ಗೆ ಬೇಸರ ವ್ಯಕ್ತಪಡಿಸಲಷ್ಟೇ ಶಕ್ಯನಾದೆ...
ನಿನ್ನ ಭಾವ ಇಷ್ಟವಾಯಿತು ಅನ್ನುವುದೂ ನೋವು ಇಷ್ಟವಾಯಿತು ಅಂದಂತೆನಿಸಿ ಕಂಗಾಲಾಗಿಸುತ್ತೆ ನನ್ನ...
ಮೊದಲ ಧನ್ಯವಾದ ನಿಂಗೆ ಶ್ರೀವತ್ಸಾ :)
Deleteನಾ ನೋಡಿರದ ಬದುಕನ್ನ ನನ್ನೆಡೆಗೆ ತೆರೆದಿಟ್ಟಿತ್ತು ಈ "ಮಂಜಾದ ಬದುಕು "....
ಸಾವಿರ ಭಾವಗಳ ಜೊತೆಗೆ ನೂರು ನೋಟಗಳನ್ನ ಎದುರಿಸಲಾಗದೇ ದೈನ್ಯತೆಯ ನೋಟ ಬೀರುತಾ ಕುಳಿತ ಈ ಇಳಿ ಜೀವದ ಬವಣೆ ಕೇಳದಿದ್ದರೂ ಆ ಜೀವಕ್ಕಾದ ನೋವಿನ ಆಳವನ್ನ ಹೇಳೋ ನಿನ್ನೀ ಬದುಕ ಪ್ರೀತಿಗೊಂದು ನಮನ ಅಂತಷ್ಟೇ ಹೇಳಬಲ್ಲೆ ನಾ ಈಗ .....
ನನಗೆ ತುಂಬಾ ಇಷ್ಟವಾದ ಪದ ಮಂಜು.. ಕಾರಣ ಎಲ್ಲರಿಗೂ ಗೊತ್ತು. ಮಂಜಾದ ಬದುಕಿನ ಪರಿ ಹೇಳುತ್ತಲೇ ಸಾಗುವ ಚಿತ್ರ ಬರಹ ಸೊಗಸಾಗಿದೆ. ನೋಡುವ ಮನಸ್ಸು ಸುಂದರವಾಗಿದ್ದರೆ ಜಗವೇ ಸುಂದರ ಎನ್ನುವ ಬಾಲೂ ಸರ್ ಅವರ ಬ್ಲಾಗಿನ ತಲೆ ಬರಹದಂತೆ, ಭಾವುಕ ಮನಸ್ಸುಳ ಕಲಾವಿದರಿಗೆ ಪ್ರತಿಯೊಂದು ಚಿತ್ರಪಟವೇ. ಶ್ರೀವತ್ಸ ಅವರ ಚಿತ್ರಕ್ಕೆ ನೀನು ತೊಡಿಸಿರುವ ಭಾವದ ಪೋಷಾಕು ಸೊಗಸಾಗಿದೆ.
ReplyDeleteನಿಮ್ಮ ಹೆಸರಲ್ಲೇ ಮಂಜಿದೆ :)
Deleteಆದರದು ಮುಸುಕು ಕಳೆದಾದ ಮೇಲಿನ ಸ್ವಚ್ಚ ನೀರಿನ ಬೆಳ್ಳಂಬೆಳಗಿನ ಬಿಳಿಯ ..ಶುಬ್ರ ...ಎಲ್ಲರಿಗೂ ಇಷ್ಟವಾಗೋ ಮಂಜು...
ನಂಗೂ ಇಷ್ಟವಾಗೋದು "ಮಂಜು"...ಮಂಜು ಮುಸುಕಿದ ಹಾದಿ ..
ಬಾಚಿ ಬಾಚಿ ಪಡೆಯೋ ಅಷ್ಟು ಭಾವಕತೆಯ ಭಾವ ಆ ಚಿತ್ರಕ್ಕಿತ್ತು ಅಂತ ಮಾತ್ರ ಹೇಳಬಲ್ಲೆ ನಾ ...
ಚಿತ್ರದಲ್ಲಿನ ಸನ್ನಿವೇಶಕ್ಕೆ ತಕ್ಕ ಹಾಗೆ , ಅದ್ಭುತವಾಗಿ ನಿಮ್ಮ ಮನದ ಕಲ್ಪನೆ ಬರೆದಿದ್ದೀರಿ ವಾಹ್ ವಾಹ್ , ಹಾಗೆ ನನ್ನ ಚಿತ್ರಗಳಿಗೂ ತಂಗಿಯಿಂದ ಇಂತಹ ಕಾಣಿಕೆ ಸಿಗಬಹುದೇ ??
Deleteಥಾಂಕ್ಸ್ ಬಾಲಣ್ಣ :)
Deleteನೀವು ಕೇಳೋದ್ ಹೆಚ್ಚೇ ನಾವ್ ಬರ್ಯೋದ್ ಹೆಚ್ಚೇ?
ಖುಷಿ ಆಯ್ತು ..ಬರ್ತಾ ಇರಿ
ಆ ಚಿತ್ರ ನನ್ನ ಭಾವಕ್ಕೆ ಸ್ಪಂದಿಸಿದ ರೀತಿ!
ReplyDeleteದೇವನೇ
"ಜೀವನವನ್ನು ದುಡಿಯುತ್ತಾ ನಂದನವನದಲ್ಲಿ ಕಳೆದ ನಾನು ಈ ಇಳಿವಯಸ್ಸಿನಲ್ಲಿ ಸುಮ್ಮನೆ ಕೂರಲಾರೆ. ನನ್ನ ಹಪ ಹಪಿಯನ್ನು ತಿಳಿದ ಮಕ್ಕಳು ಮುಪ್ಪಿನಲ್ಲಿ ಮನಕ್ಕೆ ಬೇಸರವನ್ನು ತಾರಲು ಒಪ್ಪದೇ ಅವ್ವಾ.. ಸುಮ್ಮನೆ ಕೂತು ಕೂತು ನಿನಗೂ ಬೇಸರವಾಗುತ್ತದೆ.. ನಾವು ಬಲ್ಲೆವು. ನೀನು ಸ್ವತಂತ್ರಳಾಗಿದ್ದೀಯ ಎನ್ನುವ ಭಾವ ನಿನ್ನನ್ನು ಇನ್ನಷ್ಟು ವರ್ಷ ನಮ್ಮ ಜೊತೆಯಲ್ಲಿ ಸಂತಸದ ಕಡಲಲ್ಲಿ ತೇಲಿಸಲು ಅನುಕೂಲವಾಗುತ್ತದೆ. ನಿನಗಾಗಿ ಈ ಗುಡಿ.. ನಾವು ನಿನ್ನ ಜೊತೆ ಇರುತ್ತೇವೆ.. ಸರಕುಗಳನ್ನು ಮಾರಿ ನೀನು ಜೀವಿಸಬೇಕಿಲ್ಲ ನಮಗೂ
ಅದರ ಅವಶ್ಯಕತೆಯಿಲ್ಲ. ಆದರೆ ನಿನ್ನ ಭಾವ ಸ್ವಾತಂತ್ರಕ್ಕೆ ಇದು ಬೇಕು ಎಂದಿದ್ದಾರೆ.
ಇಂತಹ ಮಕ್ಕಳನ್ನು ಸೊಸೆಯಂದಿರನ್ನು ಮೊಮ್ಮಕ್ಕಳನ್ನು ಕರುಣಿಸಿದ ನಿನ್ನ ದಯಾಮಯ ಗುಣಕ್ಕೆ ನನ್ನ ಶರಣು!!!"
ನಿಜ ಶ್ರೀಕಾಂತಣ್ಣ ...ಹೀಗೊಂದು ಕಲ್ಪನೆಯು ಬಂದಿರಲಿಲ್ಲ ನಂಗೆ ...
Deleteಬರಿಯ ಅಸಹಾಯಕತೆಯ ನೋಟವೊಂದೆ ಕಂಡಿತ್ತು ನನ್ನ ಕಣ್ಣಿಗೆ !!
ಹೀಗೂ ಇದ್ದೀತು ಅನ್ನೋದನ್ನ ತೋರಿಸಿರೋ ನಿಮ್ಮ ಪಾಸಿಟಿವ್ ಅಪ್ರೋಚ್ ಗೊಂದು ಶರಣು
ಬರ್ತಾ ಇರಿ ನಮಸ್ತೆ
mouni naanu putta... Hats off... ninagooo... Vatsanigu...:)
ReplyDeleteVatsa photo chennaagiddu..
ಥಾಂಕ್ಸ್ ಸಂಧ್ಯಕ್ಕಾ ...
Deleteಆದರೂ ಆ ಜೀವದ ಭಾವವನ್ನ ಹೇಳೋಕೆ ನನ್ನಿಂದ ಆಗಿಲ್ಲ ...
ಚಿತ್ರಕ್ಕೊಂದು ಭಾವ ಕೊಡೋ ಪ್ರಯತ್ನದಲ್ಲಿ ಪೂರ್ತಿಯಾಗಿ ಸೋತೆ ಅನ್ನಿಸ್ತಿದೆ ....
ಭಾವ ತುಂಬಿದ ಚಿತ್ರಕ್ಕೆ ನನ್ನಿಂದ ಭಾವ ಕೊಡೋಕೆ ಆಗ್ತಿಲ್ಲ ಅನ್ನೋ ಬೇಸರ
ಭಾವ ಪರವಶತೆಯಿಂದ ಕೂಡಿರುವುದು ನಿನ್ನೀ ಲೇಖನ .. ಇಂಥ ಇಳಿ ವಯಸ್ಸಿನಲ್ಲೂ ಯಾರ ಅಂಗಿಲ್ಲದೆ ದುಡಿದು ತಿನ್ನುವ ಆ ಹೆಣ್ಣಿನ ಛಲ ನಿಜಕ್ಕೂ ಮೆಚ್ಚಬೇಕಾದ್ದು .. ಇಂಥ ಇಳಿ ಜೀವಗಳು ಅವೆಷ್ಟು ಇವೆಯೋ ...
ReplyDeleteಥಾಂಕ್ಸ್ ಗಿರೀಶ್ ....ಮುಪ್ಪಲ್ಲಿ ನೋಡೋ ಈ ಕಷ್ಟಗಳು ಇನ್ಯಾವ ಇಳಿ ಜೀವದ್ದೂ ಆಗದಿರಲಿ ಅನ್ನೊ ಆಸೆ ನಂದು
Deleteನೋವಿರಬಹುದು, ನೋವಿನಾಚೆಯ ನೋವನ್ನು ಮೀರಿದ ಬದುಕಿನ ಅನುಭವವೂ...
ReplyDeleteಮಂಜು ಮುಸುಕಿದಾಗ ಮಾತೆಲ್ಲ ಮೌನ, ಬರಹ ಇಷ್ಟವಾದರೆ ಬದುಕು ಕಾಡುತ್ತಿದೆ...
ಕಣ್ಣು ಚಿತ್ರಗಳ ಬಂಧಿಸಲು ಸೋಲುತ್ತದೆ, ಚೌಕಟ್ಟು ಸಿಕ್ಕಾಗ ಭಾವ ಕಾಡುತ್ತದೆ...
ಕಾಡುವ ಭಾವಗಳ ಬರಹಕ್ಕೂ ಚೌಕಟ್ಟು ಹಾಕಿದ ಚಿತ್ರಕ್ಕೂ ಸೋತಿದ್ದೇನೆ ಎಂದಷ್ಟೆ ಹೇಳಬಲ್ಲೆ.
ಕವಿದ ಮಂಜು ಸರಿಯಲೂ ಬಹುದು ...ಕಾಯೋ ತಾಳ್ಮೆ ಬೇಕಷ್ಟೆ
Deleteಬದುಕಿನ ಭಾವಗಳನ್ನ ಬರಹದಲ್ಲಿ ಹೇಳೋದು ಕಷ್ಟ ಅಲ್ವಾ
ಕ್ಷಣವೊಂದಕ್ಕೆ ಅನಿಸಿದ ಭಾವ ಅದು ..
ನೆನಪಾದದ್ದು ನನ್ನಜ್ಜಿ !!
ಥಾಂಕ್ಸ್ ಜಿ ...ಬರ್ತಾ ಇರಿ
ಚೊಲೊ ಇದ್ದು ಗೆಳತಿ ...ಒಂದು ಚಿತ್ರ ನೂರೆಂಟು ಕಥೆ ಹೇಳುತ್ತೆ ಅಂತಾರೆ ...ನಿಜ ಗೆಳತಿ... ಬದುಕಿದ್ದಾಗ ಸಿಗದಿದ್ದು ಸತ್ತಾಗ ಸಿಕ್ತು...
ReplyDeleteಥಾಂಕ್ಸ್ ಆದರ್ಶ್ ....ನಿಜ ಅದರ ವ್ಯಾಲ್ಯು ತಿಳಿಯೋದು ಅದನ್ನ ನಾವ್ ಕಳಕೊಂಡ ಮೇಲೇ ಅಲ್ವಾ?..
Deleteಅಮೇಲೆ ತಿಳಿದು ಆಗೋದೇನು ಹೇಳು ...
ಒಂಚೂರು ಬೇಸರ ...ಒಂದಷ್ಟು ಕಂಬನಿ ...ಅಷ್ಟೆ ..
ಮೌನರಾಗ ಹೇಳ್ದಂಗೆ ನಂಗೂ ಪೂರ್ತಿ ಗೋಜಲುಗಳು.. ಉತ್ತರವಿಲ್ಲದೇ ನಾನಂತೂ ನಿರುಪಾಯ ...:-(
ReplyDeleteಹಾ ಹಾ ..ನಿರುಪಾಯಕ್ಕೇ "ನಿರುಪಾಯಾ "ಅಂದ್ರೆ ಹೆಂಗೆ ;)
Deleteಬದುಕಲ್ಲೊಂದಿಷ್ಟು ಗೊಂದಲಗಳು ,ಗೋಜಲುಗಳು ಇರಲೇ ಬೇಕಲ್ವಾ ಪ್ರಶಸ್ತಿ
ಬರೀ ಪ್ರೀತಿ ಪ್ರೇಮ, ಸ್ನೇಹದ ಬಗ್ಗೆ ಬರೀತಿದ್ದ ಭಾಗ್ಯ ಪುಟ್ಟಿ ಇದ್ದಕ್ಕಿದ್ದಂಗೆ ವೈರಾಗ್ಯ, ಆಧ್ಯಾತ್ಮ ,ಜೀವನ ಅನ್ನೋ ತರ ಉದಾತ್ತವಾಗಿ ಬರೆದಿದ್ದು ನೋಡಿ ಗೋಜಲಾಗಿದ್ದು ನನಗೆ..
ReplyDeleteಇವತ್ತು ನಿನ್ನತ್ರ ಮಾತನಾಡಿದಾಗ ಮತ್ಯಾಕೋ ಸಮಾಧಾನವಿಲ್ಲ.. ಈ ಫೋಟೋ ಬಗ್ಗೆ ನಾನೂ ಮತ್ತೊಮ್ಮೆ ಬರೆಯಲು ಪ್ರಯತ್ನಿಸಲಾ ಅನುಸ್ತಾ ಇತ್ತು.. ಅದಕ್ಕೇ ಈ ಸಾಲುಗಳು..
ಕಾದು ಸೋತೆನು ನಾನು ಮುಸ್ಸಂಜೆ ಹಾದಿಯಲಿ
ದಕ್ಕದಿಹ ಸೊಕ್ಕ ಮನೆ ಹೊಕ್ಕ ಸುತಗೆ
ಯಾರಿಲ್ಲ ಅಂಗಡಿಗೆ, ಒಣಗಿದೀ ಮನದಂತೆ
ಬರಿ ಧೂಳೆ ತಿನ್ನುತಿದೆ ಗಲ್ಲಾ ಪೆಟ್ಟಿಗೆ
ಆದರೂ ಕಾದಿರುವೆ , ಗ್ರಾಹಕರ ಹಾದಿಯಲಿ
ಜೀವಿಸಲು ಬೇಕಲ್ಲಾ ರೊಕ್ಕ, ಹೊದಿಕೆ
ಸತ್ತರೂ ಕೇಳದಿಹ ಸಂಬಂಧಿಗಳ ನಡುವೆ
ಚಳಿ, ಮಳೆಯ ಕಾಯಲಿದೊಂದೆ ಸೂರು
ನಿರ್ಗತಿಕಳಾಗಿರುವೆ, ಆದರೂ ಬಿಡಲೊಲ್ಲೆ
ಜೀವಿಸುವ ಆತ್ಮಬಲ ಇನ್ನು ಚೂರು
ಫೋಟೋ ನೋಡ್ತಾ ಇದ್ರೆ ಇನ್ನೂ ಏನೇನೋ ದಕ್ಕಬಹುದಿತ್ತೇನೋ.. ಆದರೆ ನಿನ್ನೆಯಿಂದಿದ್ದ ಗೋಜಲು ತೆರೆದಂತಹ ಈ ಕ್ಷಣದಲ್ಲಿ ಹೊಳೆದ ಚೂರುಗಳಿಷ್ಟೇ.. ಶುಭವಾಗಲಿ :-)
ನಿಜ ಕಣೋ ಗೆಳೆಯಾ ...
Deleteಮೋಡಗಟ್ಟಿದ ಆಗಸಕ್ಕೆ
ಮಳೆಯ ನಿರೀಕ್ಷೆಯ ಭರವಸೆ ...
ತುಕ್ಕುಗಟ್ಟಿದ ಬಾಳಿಗೆ ........?
ನಾನೇನು ನಿರೀಕ್ಷಿಸೀಯೇನು ?
ಬಾಳ ಪಥದಲಿ....
ಬರಿಯ ಕವಲುಗಳೇ ಇರೋ ಹಾದಿಯಲಿ .....
ಬದುಕಲ್ಲಿ ನಿರೀಕ್ಷೆಯಿಲ್ಲ...
ಒಂಟಿ ಬದುಕಲ್ಲಿ ಒಬ್ಬಂಟಿಯ ಭಾವವೇ ಎಲ್ಲಾ ...
ನಂಗೆ ಸಮಾಧಾನವಾಗಿರದ ಭಾವಕ್ಕೆ ನೀ ಪೂರ್ತಿ ನ್ಯಾಯ ದೊರಕಿಸಿದಂತಿದೆ ಪ್ರಶಸ್ತಿ ...
ಥಾಂಕ್ ಯು ..ಬರ್ತಾ ಇರು
ಅದ್ಭುತ ಗೊಂಚಲುಗಳಿಗೆ ತುಂಬು ಪ್ರಶಂಸೆ...
ReplyDeleteಭಾವಗಳನ್ನು ಅನುಭವಿಸಿದರಷ್ಟೇ ಸಾಲದು....
ಅನುಭವಿಸಿದ್ದನ್ನು ವ್ಯಕ್ತಪಡಿಸುವ ಗುಣ ದೊಡ್ಡದು....
ಗೋಚಲು ಗೊಂಚಲು ಬರಹಗಳೂ ಹಾಗೇ......
ಓದಿದವರನ್ನು ಸುಮ್ನೇ ಕೂರೋಕೆ ಬಿಡಲ್ಲಾ.....
ಒಟ್ಟಿನಲ್ಲಿ ಇಬ್ಬರ ಭಾವಗಳೂ ಸ್ಪಷ್ಟ.... ಸ್ಪುಟ....
ಅಂದವಾಗಿದೆ ಭಾಗ್ಯಾ.........
ಥಾಂಕ್ಸ್ ರಾಘವ್ ಜಿ
Deleteಅನುಭವಿಸಿರದ ಭಾವಗಳನ್ನ ಹೇಳೋಕೆ ಕಷ್ಟ ...ಅದ್ರೂ ಇಷ್ಟ ಪಟ್ರಿ ...ಖುಷಿ ಆಯ್ತು ..
ಬರ್ತಾ ಇರಿ
ಶುಕ್ರಿಯಾ