ವರ್ಷವೊಂದು ಕಳೀತು....!
ಲೀಕ್ ಆದ ಪೇಪರ್,ಬಿಡದೇ ಕಾಡಿದ್ದ ಟೆನ್ಷನ್,ಮನೆಯವರ ಅತೀಯಾಗಿದ್ದ ಕಾಳಜಿ ,ಮುಗಿಯದ ಸಾಲು ಸಾಲು ನಿರೀಕ್ಷೆ !!
ಅವತ್ತಿದೇ ದಿನ ಅಂತೂ ಇಂತೂ ಮುಗಿದ ಪರೀಕ್ಷೆಗೆ ಪಟ್ಟ ಸಣ್ಣದೊಂದು ಖುಷಿ ಇತ್ತು ....
ಹೇಳಲಾಗದ ,ತೋರಲಾಗದ ಭಾವ ಬೇಸರ ತರಿಸಿತ್ತು !
ವರ್ಷದ ಹಿಂದಿನ ಈ ಭಾವವೇ ಎನೋ ಕಳೆದೊಂದು ತಿಂಗಳಿನಿಂದ ಮತ್ತದೇ ಗೊಂದಲ,ಗೋಜಲಿನ ಭಾವ ಮೂಡಿಸುತ್ತಿದೆ ...
ಇವತ್ತಿನ ಮುಸ್ಸಂಜೆಯ ಈ ಭಾವವೂ ಕೂಡಾ ಹೇಳಲಾಗದ ಆ ಭಾವಕ್ಕೆ ಹೊರತಾಗಿಲ್ಲ ...
ಮನ ಜಾತ್ರೆಯಾಗಿದೆ.....ನೆನಪುಗಳ ತೇರಲ್ಲಿ ತನ್ನವರು ದೂರಾದ ಭಾವದಲ್ಲಿ ಕೊರಗ ಹತ್ತಿದೆ ,
ವರ್ಷದ ಹಿಂದಿನ ಮಾತು...
ಅಲ್ಲಿ ಪುಟ್ಟದೊಂದು ಅಡ್ಡವಿತ್ತು ....
ಅವಳವರೆನ್ನುವವರು ತುಂಬಾ ಮಂದಿ ಇದ್ದರು....ಕೀಟಲೆಗಳನ್ನೆಲ್ಲಾ ಸಹಿಸಿಕೊಳ್ಳೋರಿದ್ದರು .....ಹಟ ಮಾಡಿದ್ರೆ ರಮಿಸೋರಿದ್ದರು...ಕಣ್ಣೀರನ್ನು ಒರೆಸೊ ಕೈಗಳಿತ್ತು ....ಜಗಳ ಮಾಡೋಕೆ ಅಂತಾನೆ ತಮ್ಮನಿದ್ದ:)...ಮಾತುಗಳನ್ನ ಕೇಳೋ ಕಿವಿಗಳಿತ್ತು.....ತಮಾಷೆ ಮಾಡೋ ,ನಗಿಸೋ ಆತ್ಮೀಯರಿದ್ದರು .....
ಪ್ರೀತಿಯ ಮನೆ ಇತ್ತು .... ಮನದಲ್ಲೊಂದು ಅರಮನೆಯಿತ್ತು ... ಅದಕ್ಕೆ ಅವಳದ್ದೇ ಅಧಿಪತ್ಯ ಇತ್ತು ... ಚಿಲ್ಲು ಚಿಲ್ಲು ಕನಸುಗಳಿತ್ತು .... committed ಮಂದಿಗೆ ಗೋಳು ಹೊಯ್ಯೋ ಸಲುಗೆಯಿತ್ತು....
ಮಾಡೋಕೆ ಕೀಟಲೆಗಳಿದ್ದವು....ಆಡೋಕೆ ಓರಿಗೆಯವರಿದ್ದರು.....ಮಾತಾಡೋಕೆ ಬಾಯಿ ನೋಯೋ ಅಷ್ಟು ಮಾತುಗಳಿದ್ದವು....
ಈಗಲೂ ಇವುಗಳೆಲ್ಲವೂ ಇದೆ ...ಆದರೆ......ಅಂತರವನ್ನು ಕಾಯ್ದುಕೊಂಡು......ಅಂತರದ ದೂರದಲ್ಲಿ !!!
ಏನನ್ನೋ ಕಳಕೊಂಡ ಭಾವ ;(
ವರ್ಷ ಒಂದರಲ್ಲೇ ಬದಲಾದ ನೂರೆಂಟು ಭಾವ....ವರ್ಷವೊಂದರ ಹಿಂದಿದ್ದ ಸಮಾಜ ಪೂರ್ತಿ ಬದಲಾದ ಅನುಭಾವ....ಎನೋ ಹೇಳಲಾಗದ ಅನುಭವ ....
ಪ್ರೀತಿ ತುಂಬಿದ ಸ್ನೇಹದ ಅಡ್ದ ದೂರಾದ ನೋವಾ ? ಅಥವಾ ಅವಳನ್ನೇ ಪೂರ್ತಿಯಾಗಿ ಬದಲಾಯಿಸಿತ್ತಾ ಆ ಹವಾ ? ಅಥವಾ ಬಿಸಿಲ ಕಾವಾ ??
ತಿಳಿಯದ ಗೊಂದಲ ನಂದು ......
ಎಲ್ಲವನ್ನೂ ತಾಳ್ಮೆಯಿಂದ ಕೇಳುತ್ತಿದ್ದ ಅವರಿಂದು ದಿನಕ್ಕೆ ೪ ಫೋನ್ ಮಾಡಿ ಊಟ ಆಯ್ತ,?ತಿಂಡಿ ಆಯ್ತ?ಕ್ಲಾಸ್ ಹೆಂಗ್ ಇತ್ತು? ಅಂತ ಪಾಪುವಿಗೆ ಕೇಳೋ ತರ ಕೇಳ್ತಾರೆ ...ಇದಕ್ಕಿಂತ ಆಚೆಯ ಒಂದು ಮಾತೂ ಇಲ್ಲ ......ಯಾವಾಗಲೂ ಜಗಳ ಮಾಡೊ ತಮ್ಮ ಕೂಡಾ "ನನಗಿನ್ನು ೨ ತಿಂಗಳು ರಜಾ ಅಕ್ಕ .. ನೀನಿಲ್ಲದ ರಜಾ ನಿಜಕ್ಕೂ boar ಮನೆಗೆ ಬಾ ಪ್ಲೀಸ್ "ಅಂತ matured ಆಗಿ ಮಾತಾಡ್ತಾನೆ !!....
.ಮನೆ ವರ್ಷಕ್ಕೊಮ್ಮೆ ಹೋಗೋ ಅತಿಥಿಯ ಅನುಭವ ನೀಡುತ್ತೆ! ....
ಪ್ರಸ್ತುತ ಸಿಗದೇನೇ ಕಳೆದು ಹೋದ ಒಲವ ಬಗ್ಗೆ ಬೇಸರವೂ ಇದೆ...
ಹಟ ಮಾಡೋದು ಮರೆತೇ ಹೊಗಿದೆ ಅಕ್ಷರಶಃ .......ಸಲುಗೆಯ ಸ್ನೇಹ ನನ್ನದೇ ಅಗಿತ್ತಾ ಅನ್ನೊ ಭಾವ ಮೂಡೋ ಅಷ್ಟು ಅಂತರದಲ್ಲಿದೆ ಜೀವದ ಸ್ನೇಹಿತರ ಬಳಗ !
ಅಂತರ ಮೂಡಿದ್ದಂತೂ ನಿಜ ...ಮೂಡಿಸಿದ್ದು ಯಾರೆಂದು ಒಂದೆರಡು ಕ್ಷಣ ಯೋಚಿಸಿ ಗೊಂದಲದಲ್ಲಿ ಬಿದ್ದೆ ....ಉತ್ತರ ಸಿಗದ ಗೊಂದಲ ...ಕಳಕೊಂಡ ಭಾವವನ್ನಿಲ್ಲಿ ಹೇಳೋಕೆ ಕಷ್ಟ ಆಗ್ತಿದೆ
dreams ಗಳನ್ನ aim ಗಳಾಗಿ ಮಾಡಿಕೊಂಡು ಖುಷಿ ಪಟ್ಟಿದ್ದಾಗಿದೆ ...ನಾವೇ ಇಷ್ಟ ಪಟ್ಟು ಆರಿಸಿಕೊಂಡ ಭಾವ...ಈಗಲೂ ಇಷ್ಟವಾಗೊ ಭಾವ..ಅದರೂ ಇವತ್ತಿನ ಈ ಸಂಜೆಗೆ ಮಾತ್ರ ಮುಜುಗರ ಮೂಡಿಸುತ್ತಿರೋ ಭಾವ.......ನಿರಾಶೆಯ ನೋವ ಭಾವ....ಕಣ್ಣಂಚಿನ ಬೇಸರದ ಭಾವ......ಕೋಲ್ಮಿಂಚಿನ ಭಾವ...ಒಂದು ಕ್ಷಣಕ್ಕೆ ಹೆಪ್ಪಾದ ಕನಸುಗಳ ಕನಸಿನ ಭಾವ......ಭಾವನೆಗಳ ಮಧ್ಯ ತೂರಿ ಬರುತ್ತಿರೊ ಭಾವ..
.ಭಾವ ಭಾವನೆಗಳ ನಡುವಿನ ಗೊಂದಲದ ಭಾವ...
ಕಳೆದೊಂದು ತಿಂಗಳಿನಿಂದ ಸಾಲು ಸಾಲಾಗಿ ಕಾಡುತ್ತಿರೊ ಭಾವ ....ಇಷ್ಟವಾಗದ ಕಷ್ಟ ಪಟ್ಟು ದೂರ ಮಾಡ್ತಿದ್ದ ಈ ಭಾವ ಈ ಮುಸ್ಸಂಜೆಗ್ಯಾಕೊ ಇಷ್ಟವಾದಂತಿದೆ ....ಆದರಿದು ಇವತ್ತಿನ ಸಂಜೆಗೆ ಮಾತ್ರ ಮೀಸಲು ಎಂಬ ಧೈರ್ಯ ನಂದು .... ನಾಳೆಯ ಸುಪ್ರಭಾತಕ್ಕೆ ಮತ್ತದೇ ಹೊಸ ಕನಸುಗಳಿವೆ ....ನನ್ನದೇ ಸರ್ವಾಧಿಕಾರದ ಹೇಳಿದ್ದನ್ನೆಲ್ಲಾ ಆಲಿಸೋ ಸುಂದರ ಮನಸ್ಸಿದೆ.. ಖುಷಿಸೋ ಅಡ್ಡವಿದೆ .... ಕಾಲೆಳೆಯೊ ಹೊಸ ಸ್ನೇಹಿತರಿದ್ದಾರೆ ಅನ್ನೋ ಪ್ರಾಮಾಣಿಕ ಭಾವ ನಂದು.....
ಆದರೂ ಯಾಕೊ ನೆನಪುಗಳ ಹಾಳೆಯಲ್ಲಿನ ಪ್ರೀತಿ ತುಂಬಿದ ವರ್ಷದ ಹಿಂದಿನ ಭಾವವೇ ಅತೀ ಇಷ್ಟ ಆಗ್ತಿರೋ ಅನುಭವ ಇವತ್ತು .......
ಕಳೆದು ಹೋದ ಎಲ್ಲಾ ’ಇಲ್ಲ’ ಗಳನ್ನ ಸೇರಿಸಿ ಹುಡುಕ ಹೊರಟ ಭಾವ......
ಸಿಕ್ಕಿದ್ದರ ಬಗ್ಗೆ ಅರಿವಿಲ್ಲದ ಕಳ ಕೊಂಡರ ಬಗೆಗಿರುವ ಅತಿಯಾದ ವ್ಯಾಮೋಹ....
ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ಬಗೆಗಿನ ತುಡಿತ ...
ಅಸಲು ಈ ಭಾವ ನಾಳೆಯ ಖುಷಿಯನ್ನು ಕೊಲ್ಲದಿರಲಿ ಎಂಬ ಇಂಗಿತ
(ಭಾವ ಅವಳದು ಎಂದು ಹೇಳೋಕೆ ಹೋಗಿ ಪೂರ್ತಿಯಾಗಿ ಸೋತಿದ್ದೇನೆ ನಿಮ್ಮೆದುರು .... ಅವಳಿಂದ ಶುರುವಾದ ಭಾವ ಎರಡನೇ ಲೈನ್ ಗೆ ನನ್ನ ಭಾವವಾಗಿ ಕಾಡ ಹತ್ತಿದೆ ...ಭಾವಗಳು ನನ್ನದೇ ಅನ್ನೋ ಸಣ್ಣ ಅನುಮಾನ ನಂಗೆ.....ಸುಮ್ಮನೆ ಮನದ ಬೇಸರಕ್ಕೊಂದಿಷ್ಟು ಮಾತುಗಳು .... ನೀವು ಬೇಸರಿಸದಿರಿ .....)
ಕಳೆದು ಹೋದ ಎಲ್ಲಾ `ಇಲ್ಲ’ ಗಳನ್ನ ಸೇರಿಸಿ ಹುಡುಕ ಹೊರಟ ಭಾವ......
ReplyDeleteಸಿಕ್ಕಿದ್ದರ ಬಗ್ಗೆ ಅರಿವಿಲ್ಲದ ಕಳ ಕೊಂಡದ್ದರ ಬಗೆಗಿರುವ ಅತಿಯಾದ ವ್ಯಾಮೋಹ....
ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ಬಗೆಗಿನ ತುಡಿತ ...
ಅಸಲು ಈ ಭಾವ ನಾಳೆಯ ಖುಷಿಯನ್ನು ಕೊಲ್ಲದಿರಲಿ ಎಂಬ ಇಂಗಿತ...
ಈ ಭಾವ ಅವಳದು, ನಿನ್ನದು, ನನ್ನದು ಮತ್ತು ಭಾವ ಎಲ್ಲರದ್ದೂ...
ಬದುಕೆಂದರೆ ಹಾಗೇ - ಕಾಡುವ ಭಾವಗಳ ಕೂಟ...
ಚಂದದ ಬರಹ ಭಾಗ್ಯಾ...
ಥಾಂಕ್ಸ್ ಶ್ರೀವತ್ಸ ....
Deleteಬದುಕಿನ ಭಾವ ಬಂದಗಳು ಸಾಯಲಿರಲೆಂದು ಆಶಿಸುತ್ತಾ ....
ಖುಷಿಯ ಭಾವಗಳು ನಿನ್ನವಾಗಲಿ
ತುಂಬಾ ಚೆಂದದ ಬರಹ ಗೆಳತಿ....ನಿರಂತರ ಜೀವನದಲ್ಲಿ ಕಾಡುತ್ತಲೇ ಸಾಗುವ ಈ ಭಾವ ಮುಂದಿನ ಬಾಳಿಗೆ ಮುಳುವಾಗದೆ ಸ್ಪೂರ್ತಿಯಾಗಲಿ :)
ReplyDeleteಧನ್ಯವಾದ ಆದರ್ಶ ....
Deleteಮರು ಮುಂಜಾನೆಗೆ ಆ ಭಾವ ಮರೆತೇ ಹೋಗಿರುತ್ತೆ ಬಿಡು....ಮುಳುವಾಗೋ ಮಾತಿಲ್ಲ ...
ಬದುಕೊಂದು ಸಂತೆ. ಅಲ್ಲಿ ನಡೆವುದೆಲ್ಲಾ ವ್ಯಾಪಾರವೇ. ಒಂದು ಕೊಟ್ಟು ಒಂದು ಪಡೆಯಬೇಕಷ್ಠೇ........
ReplyDeleteನಿಜ ....ಆದರೆ ಬದುಕಿನ ಈ ವ್ಯಾಪಾರದಲ್ಲಿ ಪಡೆದುಕೊಂಡಿದ್ದಕ್ಕಿಂತ ಕೊಟ್ಟು ಕಳೆದುಕೊಂಡಿದ್ದರ ಮೇಲೆ ಹೆಚ್ಚು ಪ್ರೀತಿ ಇರೋದೆನೊ ಅನ್ನೋದು ನನ್ನ ಭಾವ ...
Deleteಧನ್ಯವಾದ ..ಬರ್ತಾ ಇರಿ
ಭಾವಗಳೇ ಹೀಗೆ.. ಕೆಲವೊಮ್ಮೆ ಕಾಡಿ ದಿನವಿಡೀ ಯೋಚನೆಗೆ ಹತ್ತಿದರೆ ಕೆಲವೊಮ್ಮೆ ನಗಿಸುತ್ತಿರುತ್ತವೆ.. ಬರಹಕ್ಕೂ ಕತೆಗೂ ಇದೇ ವ್ಯತ್ಯಾಸವಾ ಅನ್ನಿಸುತ್ತದೆ ಕೆಲವೊಮ್ಮೆ. ಕತೆಯಲ್ಲಿ ಕಲ್ಪನಾ ಲಹರಿಯಲ್ಲಿ ಸಾಗೋ ನಾವು ಬರಹದಲ್ಲಿ ವಾಸ್ತವಕ್ಕೆ ಹತ್ತಿರತ್ತಿರ. ಭಾವಗಳ ಬಗ್ಗೆ ಬರೆಯುತ್ತಾ ಪಾತ್ರಗಳು ನಾವೇ ಆಗಿ ಯಾರದೋ ಭಾವ ನಮ್ಮದೇ ಆಗಿಬಿಡೋದು,ಹೀಗೇ ಸುಮ್ಮನೆ ಅಂತ ಬರೆಯಲಾರಂಬಿಸಿ ನಮ್ಮ ಬಗ್ಗೆಯೇ ಬರೆದು ಮುಗಿಸೋದು ಸಾಮಾನ್ಯ :-) . ಲಹರಿ ಚೆನ್ನಾಗಿದೆ. ಭಾವಗಳ ತಾಕಲಾಟ ಮುಳುವಾಗದೇ, ಭವಿಷ್ಯಕ್ಕೆ ಸ್ಪೂರ್ತಿಯ ಸೆಲೆಯಾಗಲಿ :-)
ReplyDeleteಥಾಂಕ್ಸ್ ಪ್ರಶಸ್ತಿ ..
Deleteನಿಜ...ಅವಳಾಗಿ ಬರೆಯೋಕೆ ಹೊರಟು ಕೊನೆಗೆ ಅದು ನಾನೇ ಆಗಿರೋದು ನಂಗೂ ಹೊಸತಲ್ಲ:)
ನಿಮ್ಮೆಲ್ಲರ ಅದೆಷ್ಟೋ ಭಾವಗಳು ನಂದೂ ಕೂಡಾ...
ಮುದ ಕೊಡೋ ಮಧುರ ಭಾವಗಳನ್ನ ಹುಡುಕುತ್ತಾ ಪಯಣ ಮುಂದುವರೆಯಲಿ ....
ಹಮ್, ಬದುಕೆಂಬ ಸಂತೆಯಲಿ ಭಾವಗಳ ಹರಾಜು... ಕೊಳ್ಳುವವರಲ್ಲದಿದ್ದರೂ, ಹೆಗಲು ಕೋಟ್ಟು ಮುನ್ನಡೆಸುವವರಾದರೂ ಬೇಕು....
ReplyDeleteಚೆಂದದ ಬರಹ... ಮುಂದುವರೆಸು :)
ನಿಜ ಕಣೆ ....ಕೊಳ್ಳುವವರಿಲ್ಲ ...ಆದರೆ ಇಂತದ್ದೇ ಭಾವಗಳನ್ನ ಹರಾಜಿಗಿಡೊ,ಹಂಚಿಕೊಂಡು ಸಮಾಧಾನ ಪಡೋ ನನ್ನಂತಹ ಹಲವರಿದ್ದಾರೆ ಎಂಬ ಖುಷಿ ನಂದು :) ಇದಕ್ಕಾಗಿಯೇ ನಾನೂ ಕೂಡಾ " ನಿನ್ನ ಭಾವಗಳನ್ಯಾಕೆ ಊರಲ್ಲಿರೋರಿಗೆಲ್ಲಾ ಹೇಳೋಕ್ ಹೋಗ್ತೀಯಾ" ಅನ್ನೋರಿಗೆ ಏನೂ ಹೇಳದೇ ಇದ್ದಿದ್ದು:)
Deleteಬದುಕೆಂಬ ಸಂತೆಯಲ್ಲಿ ಅವರವರ ವಸ್ತುಗಳನ್ನ ಚೌಕಾಸಿ ಮಾಡಿ ಕೊಂಡು ಕೊಳ್ಳೋದ್ರಲ್ಲೆ ಎಲ್ರೂ ಬ್ಯುಸಿ ಆಗಿರೋದು ದುರಂತ ನೋಡು...
"ಈಗಲೂ ಇವುಗಳೆಲ್ಲವೂ ಇದೆ ...ಆದರೆ......ಅಂತರವನ್ನು ಕಾಯ್ದುಕೊಂಡು......ಅಂತರದ ದೂರದಲ್ಲಿ !!!" ಈ ಸಾಲುಗಳು ನಿಮ್ಮ ಬರಹದಾಚೆಗೂ ಹೊರಳಿ ಬದುಕಿನ ಎಲ್ಲಾ ಮಜಲುಗಳನ್ನು ತಾಕಿ ಬರುತ್ತದೆ ಗೆಳತಿ. ಅಡಿಗರೇ ಬರೆದಂತೆ 'ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ಬಗೆಗಿನ ತುಡಿತ ...' ಅದುವೇ ಜೀವನ.
ReplyDeleteಅಂತರವನ್ನು ಕಾಯ್ದುಕೊಂಡು ಬರಿಯ ಅಂತರದ ದೂರದಲ್ಲಲ್ಲ .....ಬಹು ದೂರದ ಅಂತರದಲ್ಲಿ ಅನ್ನೋದು ಬೇಸರ ಬದರಿ ಸರ್....
Deleteಭಾವಗಳನ್ನು ಓದಿದ್ದಕ್ಕೆ ಶರಣು:) (ನಿಮ್ಮ ಮಾತಿನಲ್ಲೇ ಹೇಳಿದ್ದು)
ReplyDeleteನಂಗೆ ಕೆಲವೊಮ್ಮೆ ಕಾಡುವ ಭಾವಗಳನ್ನು ನಿನ್ನ ಬರಹದಲ್ಲಿ ಕಂಡಂತಾಯಿತು. ನಾನೂ ಅಷ್ಟೇ ಇಂಥ ಭಾವಗಳು ಕಾಡುವಾಗೆಲ್ಲ ಇದು ಈ ಕ್ಷಣಕ್ಕೆ ಮಾತ್ರ ಎಂದು ಹೆದರುವ ಮನಕ್ಕೆ ಧೈರ್ಯ ಹೇಳುತ್ತಾ ಸಮಾಧಾನಿಸುತ್ತೇನೆ.
ಇಂಥಹ ಮುಸ್ಸಂಜೆಗಳಲೆಲ್ಲ ನಮ್ಮೊಳಗಿನ ಖುಷಿ ಪ್ರಪಂಚದ ದೀಪ ಬೆಳಗಬೇಕು. ಆಗ ಈ ಕತ್ತಲೆಯ ಭಾವಗಳೆಲ್ಲ ಕಳೆದು ಹೊಸ ಬೆಳಕು ಕಾಣಬಹುದೇನೋ. ಆದರೆ ಈ ಭಾವಗಳೇ ಹಾಗೆ ಏನು ಮಾಡದಂತೆ ಎಲ್ಲವನ್ನೂ ಕಟ್ಟಿಹಾಕಿಬಿಡುತ್ತವೆ ಬಿಟ್ಟರೂ ಬಿಡದಂತೆ .....
ಹಮ್ ಸಂಧ್ಯಕ್ಕ ...ಮರು ಮುಂಜಾನೆ ಮರು ಸೂರ್ಯ ಮೂಡಲ ಬಾನು ಸೀಳಿದಂತೆಯೆ ಇದು ...ನಿನ್ನೆಯ ಭಾವ ನಾಳೆಯದಲ್ಲ...ಕ್ಷಣ ಕ್ಷಣಕ್ಕೆ ಬದಲಾಗೋ ಭಾವ ಲಹರಿಯಲ್ಲಿ ಮನ ಕದಡಿದ್ದು ಮಾತ್ರ ಸುಳ್ಳಲ್ಲ ...
ReplyDeleteಆದರೆ ಈ ಭಾವ ಮಾತ್ರ ಆಗಾಗ ಕೆಲ ಖುಷಿಯನ್ನ ಕೊಲ್ಲೋಕೆ ಬರುತ್ತೆ ....ಓಡಿಸೋ ಅಷ್ಟರಲ್ಲಿ ಸುಸ್ತಾಗಿ ಹೋಗುತ್ತೆ ...
ಧನ್ಯವಾದ ..ಬರ್ತಾ ಇರಿ
ಭಾವ ಲಹರಿ ಚೆನ್ನಾಗಿದೆ.
ReplyDeleteಭಾವಗಳ ಬಗ್ಗೆ ಬಂದಾಗ ಪ್ರತಿಕ್ರಿಯಿಸುವುದು ಸ್ವಲ್ಪ ಕಷ್ಟ. ಈ ಭಾವಗಳೇ ಹೀಗೆ. ಒಮ್ಮೆ ಅದರ ಸುಳಿಯಲ್ಲಿ ಸಿಕ್ಕರೆ ಹೊರಬರುವುದು ಕಷ್ಟ.
"ಅಲ್ಲಿ ಪುಟ್ಟದೊಂದು ಅಡ್ಡವಿತ್ತು ...... ಈಗಲೂ ಇವುಗಳೆಲ್ಲವೂ ಇದೆ ...ಆದರೆ......ಅಂತರವನ್ನು ಕಾಯ್ದುಕೊಂಡು......ಅಂತರದ ದೂರದಲ್ಲಿ !!! ಏನನ್ನೋ ಕಳಕೊಂಡ ಭಾವ" -ನಿಜ, ಎಲ್ಲ ಇದ್ದರೂ ಏನೂ ಇಲ್ಲದಂತಿದೆ ನಮ್ಮ ಜೀವನ.
"ಎಲ್ಲವನ್ನೂ ತಾಳ್ಮೆಯಿಂದ......ಮನೆ ವರ್ಷಕ್ಕೊಮ್ಮೆ ಹೋಗೋ ಅತಿಥಿಯ ಅನುಭವ ನೀಡುತ್ತೆ!"- ಎಲ್ಲರಿಂದ ದೂರವಾದಾಗಲೇ ನಮಗೆ ಅವರ ಮಹತ್ವ ತಿಳಿಯುವುದು. "कुछ पाने के लिए कुछ खोना पड़ता है" ಅನ್ನುವಂತೆ ಜೀವನದಲ್ಲಿ ಗಳಿಕೆಗಾಗಿ ತ್ಯಾಗ ಅಗತ್ಯ.
"dreams ಗಳನ್ನ aim ಗಳಾಗಿ .........ಕಾಲೆಳೆಯೊ ಹೊಸ ಸ್ನೇಹಿತರಿದ್ದಾರೆ ಅನ್ನೋ ಪ್ರಾಮಾಣಿಕ ಭಾವ ನಂದು"- ಈ ಸಾಲುಗಳನ್ನ ಓದಿದಾಗ ಭಾವಗಳ ಗೊಂದಲದಲ್ಲಿ ಸಿಕ್ಕಿದ ಅನುಭವ. ಕನಸುಗಳನ್ನ ಒತ್ತೆಯಿಟ್ಟು ಗುರಿ ಮುಟ್ಟುವ ಆಶಯ ಚೆನ್ನಾಗಿದೆ. (ಆದರೆ ಜೀವನದಲ್ಲಿ ಸಾದಿಸಬೇಕಾಗಿದ್ದು ಇನ್ನೂ ತುಂಬಾ ಇದೆ, ಇಷ್ಟಕ್ಕೇ ಖುಷಿ ಪಟ್ಟರೆ ಹೇಗೆ?)
"ನೆನಪುಗಳ ಹಾಳೆಯಲ್ಲಿನ ಪ್ರೀತಿ ತುಂಬಿದ ವರ್ಷದ ಹಿಂದಿನ ಭಾವವೇ ಅತೀ ಇಷ್ಟ ಆಗ್ತಿರೋ ಅನುಭವ ಇವತ್ತು" -ಇದು ಬರೀ ಇವತ್ತಿಗಲ್ಲ , ನಮ್ಮ ಜೀವನದ ಕೊನೆಯವರೆಗೂ ಈ ಭಾವಗಳು ಕಾಡುತ್ತ ನಮ್ಮ ನೊಂದ ಮನಕ್ಕೆ ಮತ್ತೆ ಹೊಸ ಆಸೆಯನ್ನ ಹುಟ್ಟಿಸುತ್ತಾ ಇರುತ್ತೆ.
"ಕಳೆದು ಹೋದ ಎಲ್ಲಾ ’ಇಲ್ಲ’ ಗಳನ್ನ......ಅಸಲು ಈ ಭಾವ ನಾಳೆಯ ಖುಷಿಯನ್ನು ಕೊಲ್ಲದಿರಲಿ ಎಂಬ ಇಂಗಿತ" - ನಮ್ಮ ಜೀವನವೇ ಹೀಗೆ ಕಳೆದು ಹೋದದ್ದರ ಬಗ್ಗೆ ಚಿಂತಿಸುತ್ತಾ ಸಿಗಬೇಕಾದದ್ದನ್ನ ಕೂಡ ಕಳೆದುಕೊಳ್ಳುತ್ತೇವೆ. ಅಲ್ಲವೇ?
ಒಟ್ಟಿನಲ್ಲಿ ಹೇಳುವುದಾದರೆ ಇಷ್ಟು ಬೇಗ ಭಾವಗಳ ಸುಳಿಯಲ್ಲಿ ಸಿಕ್ಕರೆ ಹೇಗೆ?? ಇನ್ನೂ ಜೀವನದ ಪರೀಕ್ಷೆ ಬಾಕಿ ಇದೆ, ಆಗ ಇನ್ನಷ್ಟು ಭಾವಗಳು ಕಾಡುತ್ತವೆ. ಹಾಗಾಗಿ ಜಾಸ್ತಿ ಭಾವಗಳ ಗೊಂದಲದಲ್ಲಿ ಸಿಲುಕದೆ "ಆಲ್ ಇಸ್ ವೆಲ್" ಅನ್ನುತ್ತ ನಿನ್ನೆಯ ಚಿಂತೆ, ನಾಳಿನ ಯೋಚನೆ ಬಿಟ್ಟು ಇಂದು ನಮ್ಮದು ಎಂಜಾಯ್ ಮಾಡಿ.
ಬರಹಗಳು ದಿನದಿಂದ ದಿನಕ್ಕೆ ಹೆಚ್ಚು ಹಿಡಿತವನ್ನ ಸಾಧಿಸುತ್ತಿದೆ, ಹೀಗೆ ಬರೆಯುತ್ತಿರಿ.
ಶುಭವಾಗಲಿ.
ಧನ್ಯವಾದ ಗಣೇಶ್ ಜಿ:)
Deleteನಿಜ ಇನ್ನೂ ಅದೆ ಗೊಂದಲಗಳೇ ಇವೆ.....ಆ ಭಾವಗಳು ಅವತ್ತಿನ ಸಂಜೆಗೆ ಮಾತ್ರಾ ಸೀಮೀತ ಅಂತಾ ಅತಿಯಾಗಿ ಸಮರ್ತಿಸಬೇಕಾದುದ್ದು ಅನಿವಾರ್ಯವಾಗಿತ್ತು ....
ಮತ್ತದೇ ಭಾವ ಮಗ್ಗಲು ಬದಲಿಸಿ ಬದಲಿಸಿ ಬರೋದು ಬೇಕಿರಲಿಲ್ಲ .,,,
ಚಿಕ್ಕ ಚಿಕ್ಕ ಖುಷಿಗಳನ್ನ ಅನುಭವಿಸೊ ಮನ ಅದು....ಸಾಧಿಸಿದ ಜೀವನದ ಖುಷಿಯಲ್ಲಿರೊ ನಿಮಗೆ ನಮ್ಮೀ ಚಿಕ್ಕ ಚಿಕ್ಕ ಖುಷಿಗಳು ಸಿಲ್ಲಿ ಅನಿಸಿರಬಹುದು ...
ಆದರೀ ಭಾವದ ತೀವ್ರತೆ ಹೇಳೋಕೂ /ತೋರಿಸೋಕೂ ಕಷ್ಟ ...
ಆತ್ಮೀಯ ಪ್ರತಿಕ್ರಿಯೆಗೆ ಶರಣು ...
...ತಪ್ಪು ಒಪ್ಪುಗಳನ್ನ ತಿಳಿ ಹೇಳೋ ನಿಮ್ಮೀ ಪ್ರತಿಕ್ರಿಯೆ ನನ್ನ ಬರಹದ ಭಾವಕ್ಕೆ ಬೇಕು ...
ತಿದ್ತಾ ಇರ್ತೀರ ಅಂತ ಭಾವಿಸ್ತೀನಿ .
ನಮಸ್ತೆ
ಭಾವ ಎನ್ನುವ ಭಾವ ಬಾವಿಯ ತರಹ.. ಬಾಗಿ ನೋಡಿದಾಗ ಅವರ ಭಾವದಲ್ಲಿ ನಮ್ಮ ಮುಖ ಕಾಣುತ್ತದೆ. ಆ ಆಳವನ್ನು ತಲುಪಿದ ಮಾತುಗಳು ಮಾತ್ರ ಆ ಬಾವಿಯ ನೀರಿನಂತ ಮನದಲ್ಲಿ ಸಣ್ಣ ಅಲೆಗಳ ಉಂಗುರಗಳು ಏಳಲು ಸಾಧ್ಯ. ಎಷ್ಟು ಸುಂದರವಾಗಿ ಬರೀತೀಯ. ನಿನ್ನ ಲೇಖನಗಳನ್ನು ನೋಡಿದಾಗ ನನಗೆ ಹೂವಿನ ತೋಟ ನೆನಪಿಗೆ ಬರುತ್ತೆ. ವಿವಿಧ ಹೂಗಳು, ಬಗೆ ಬಗೆಯ ಪರಿಮಳ, ಬಣ್ಣಗಳು. ನಿನ್ನ ಪದಗಳ ಚಮತ್ಕಾರಕ್ಕೆ ಒಂದು ಸಲಾಂ. ಸೂಪರ್ ಬಿ.ಪಿ
ReplyDeleteಥಾಂಕ್ಸ್ ಶ್ರೀಕಾಂತಣ್ಣ ...ಭಾವಗಳೇ ಹಾಗೆ ಅಲ್ವಾ...ಇಳಿಯುತ್ತಾ ಹೋದಾಗ ಮಾತ್ರ ನಿಜದ ಆಳ ತಿಳಿಯೋದು ...
Deleteತುಂಬಾ ಆಳ ಅನಿಸೋ ಅಷ್ಟರಲ್ಲೇ ಕಂದರಕ್ಕೆ ಇಳಿದಾಗಿರುತ್ತೆ....ವಾಪಸ್ಸಾಗೋಕೆ ಕಷ್ಟ ಪಡಬೇಕಾಗುತ್ತೆ....
ಹಿಂತಿರುಗಿದ ಮೇಲೂ ಸಣ್ಣಗೆ ತಿರುಚಿದ ಗಾಯದ ನೋವಿರುತ್ತೆ ....
ಅಂದದ ಪ್ರತಿಕ್ರಿಯೆಗೆ ಆಭಾರಿ ...ಬರ್ತಾ ಇರಿ
ಪ್ರತಿಯೊಬ್ಬರು ಒಂದಲ್ಲ ಒಂದು ಬಾರಿ ಜೀವನದಲ್ಲಿನ ಈ ಭಾವವನ್ನು ಅನುಭವಿಸಿಯೇ ಬಂದಿರುತ್ತಾರೆ. ತನ್ನ ಕನಸಿನ ಈಡೇರಿಕೆ ಮತ್ತು ಮನೆಯವರನ್ನು ಬಿಡಬೇಕಾದ ಅನಿವಾರ್ಯತೆಗಳ ನಡುವೆ ಹೊಯ್ದಾಡುತ್ತಿರುತ್ತಾರೆ. ಹೇಗೂ ನಮ್ಮ ಕನಸನ್ನು ಬೆನ್ನತ್ತಿಯಾಯಿತು.. ಇನ್ನೇನಿದೆ..? ಎಷ್ಟೇ ಭೌತಿಕ ಅಂತರವಿದ್ದರೂ ಮಾನಸಿಕ ಅಂತರವನ್ನು ಕಾಯ್ದುಕೊಳ್ಳದೆ ಗುರಿಯತ್ತ ಸಾಗಬೇಕಷ್ಟೇ.. ಎಂದಿನಂತೆ ಸುಂದರ ಬರಹ.. ಎಲ್ಲರ ಭಾವವನ್ನು ಸುಂದರವಾಗಿ ದಾಟಿಸಿದ್ದೀರಿ..
ReplyDeleteಥಾಂಕ್ಸ್ ಅಜಯ್ ....ಕನಸ ಭಾವ ವಾಸ್ತವದ ಅರಿವಿನಡಿ ಸಿಕ್ಕು ಸಿಕ್ಕಾಗೋ ಭಾವದ ಅನುಭವ ಒಂದು ಕ್ಷಣಕ್ಕೆ ಬೇಸರ ತರಿಸಿದ್ರೂ ಹೊಸ ಹೊಸ ನಿರೀಕ್ಷೆಗಳ ಅಡಿಪಾಯ ಆಗೋದಕ್ಕೆ ಖುಷಿಯಿದೆ...
ReplyDeleteಖುಶಿಯಾಯ್ತು ...ಬರ್ತಾ ಇರು
That is TEEN. Perfect expressions :)
ReplyDeletethanks sis :)
Delete