ಬರೀ ನಿನ್ನ ಗೆಳತಿಯರ ಬಗ್ಗೆನೇ ಬರೀ .... ನಾವೆಲ್ಲಾ ನಿಂಗೆ ಏನೂ ಅಲ್ಲ ಅಲ್ವಾ ?ಎಂದು ಹುಸಿ ಕೋಪ ಮಾಡೋ ಗೆಳೆಯರಿಗಾಗಿ :)
ದೊಡ್ಡ ಗುಂಪು .... ಬರಿಯ ಮಾತು ,ಮಸ್ತಿ ,ಹರಟೆ ,ತುಂಟಾಟ ,ಜಗಳ ,ಹುಸಿ ಕೋಪ ,ಪಾರ್ಟಿ ,treats ಇಷ್ಟೇ ಗೊತ್ತಿರೋ ಗ್ರೂಪ್ ಇದು ..
. ಅಪ್ಪಿ ತಪ್ಪಿ syllabus ವಿಷಯಗಳನ್ನ ಮಾತಾಡೋ ಜಾಯಮಾನದವರಲ್ಲ :)
ಕಾಲೇಜ್ ನ ಗಾಸಿಪ್ ಗಳು ಬೇಕೆಂದ್ರೆ ನಮ್ಮ ಪಕ್ಕಾ source ಗಳು ಈ ತರ್ಲೆಗಳೇ .... ಪಾರ್ಕಿಂಗ್ ಪ್ಲೇಸ್ನಲ್ಲಿ ವೀಲಿಂಗ್ ಮಾಡ್ತಾ ಜಗತ್ತಿನ ವಿಷಯಗಳನ್ನೆಲ್ಲಾ ಒಮ್ಮೆ ಸುತ್ತಿ ಬರ್ತಾರೆ .... ಬಹುಷಃ ಕಾಲೇಜ್ ಗಿಂತ ಹೆಚ್ಚಾಗಿ ಇವರ ಕ್ಲಾಸೆಸ್ ಆಗೋದು ಕ್ಯಾಂಟೀನಲ್ಲಿ ಅನ್ನೋದೂ ಜಗತ್ತಿಗೇ ಗೊತ್ತಿರೋ ಸತ್ಯ ಬಿಡಿ :)
ಇವರೊಟ್ಟಿಗೆ ಮಾಡಿದ ಜಗಳಗಳೆಷ್ಟೋ .... ಮಾಡಿದ ಪಾರ್ಟಿ ಗಳಿಗೆ ಲೆಕ್ಕಾನೆ ಇಲ್ಲ .... ಇವರ ಮನೆಯಲ್ಲಿ ನಡಿಯೋ functions ಗಳು ನಮ್ಮ ಮನೆಯಲ್ಲಿ ನಡೆದಂತೆಯೇ ಅನಿಸೋದು ..... ಮನೆಯಲ್ಲಿ ಅಮ್ಮ ಮಾಡಿಟ್ಟ ಸ್ವೀಟ್ಸ್ ಗಳನ್ನ ನನ್ಗಿಂತ ಜಾಸ್ತಿ ಇವ್ರೆ ಖಾಲಿ ಮಾಡೋದು ....
ಇಷ್ಟೇ ಆತ್ಮೀಯತೆ ,ಸ್ನೇಹ ನಮ್ಮ ನಡುವೆ ಇರೋದು !!
ಟ್ರೆಕ್ಕಿಂಗ್ ಅಂತ ಹೋಗೋವಾಗ ಒತ್ತಾಯ ಮಾಡೋ ಮೊದಲ ಕಾರಣ ಏನಂದ್ರೆ ಆಂಟಿ ,ಅಂಕಲ್ ಹತ್ರ ಪರ್ಮಿಷನ್ ಕೇಳೋಕೆ ನಾವ್ ಬೇಕು .... ಇಲ್ಲ ಅಂದ್ರೆ ಈ ಕೋತಿ ಹುಡುಗರನ್ನ ಮಾತ್ರಾ ಕಳ್ಸೋಕೆ ಒಪ್ಪಲ್ಲ ಅವ್ರು ... ಪರ್ಮಿಷನ್ ಸಿಗೋದೇ ತಡ ನಮ್ಮನ್ನ ಹಿಂದೆ ಬಿಟ್ಟು ಹೋಗೋದೊಂದೇ ಗೊತ್ತು ಅಲ್ವಾ ನಿಮ್ಗೆ ?:( ಇರ್ಲಿ ಇರ್ಲಿ ನಮ್ಗೂ ಕಾಲ ಬರುತ್ತೆ
ನಿಮ್ಮಲ್ಲಿ ಬತ್ತಿಯ ಹೊಗೆಯಿದೆ ...
. brandnes froster ಅಂತ ನೀವೇ ಇಟ್ಟುಕೊಂಡ ತೀರ್ಥದ ಸ್ವಾದವಿದೆ :)..
.ಜಿಮ್ ಗೆ ಹೋಗಿ six pack ತೋರ್ಸೋ craze ಇದೆ ....
ಕಿಲೋ ಮೀಟರ್ ದೂರ ಇದ್ರೂ ತಾಕೋ perfume ನಾ smell ಇದೆ ....
ಲೋ ಮಗಾ ಅಲ್ನೋಡೋ ಫಿಗರ್ ಅನ್ನೋ ಭಂಡತನವಿದೆ ...
spikes ,ಲೋವೆಸ್ಟ್ ಹಾಕ್ಕೊಂಡು VIP ಬ್ರಾಂಡ್ ತೋರ್ಸೋ ಹುಚ್ಚಿದೆ
ವೀಲಿಂಗ್ ಅಂತ ಮಾಡೋ ನೂರಾರು ಸ್ಕೋಪ್ ಗಳಿವೆ :)....
ಹುಡ್ಗೀರ ಒಂದೇ ಸ್ಮೈಲ್ ಗೆ ಕಳೆದೊಗೋ ಮುಗ್ಧ ಮನಸ್ಸೂ ಇದೆ ಕಣ್ರೋ ನಿಮ್ಗೆ :)
impress ಮಾಡೋಕೆ ಇಷ್ಟೊಂದು ಕಷ್ಟ ಪಡ್ಬೇಕಲ್ಲೋ ನೀವು .... ಪಾಪ ಹುಡ್ಗರು :)
.... ಹುಳುಕನ್ನೋ ಶಬ್ದ ನಿಮ್ಮ ಡಿಕ್ಷನರಿ ನಲ್ಲೇ ಇಲ್ಲ .... ಸ್ನೇಹಕ್ಕೆ ಜೀವ ಕೊಡ್ತೀರ .... ಹಾಗೇನೆ ದ್ವೇಷಕ್ಕೆ ಜೀವನ ಪೂರ್ತಿ ದ್ವೇಷ ಮಾಡ್ತೀರ .... ಗೆಳೆಯನ ಜಗಳ ಬಿಡಿಸೋಕೆ ಹೋಗಿ ಕೆಟ್ಟವರಾಗ್ತೀರ ... ನಿಮ್ಮ propose reject ಮಾಡಿದ್ದ ಹುಡುಗಿ ಬಗ್ಗೇನೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲ್ಲ ... ಆದರೆ ಪ್ರೀತಿಯಲ್ಲಿ ಸೋತು ಬಂದ ಗೆಳತಿಗೆ ಮಾತ್ರ ತುಂಬಾ ಫೀಲ್ ಮಾಡ್ಕೊಂತೀರ !
ಅಪ್ಪಟ ಪೋಲಿಗಳಾದ್ರು ನಿಮ್ಮೊಳಗಿರೋ ಪರಿಶುದ್ದ ಮನಸ್ಸು ,ಜಗತ್ತನ್ನೇ ಗೆಲ್ಲೋ ಉತ್ಸಾಹ ,ತೋರಿಕೆಯ ಮುಖವಾಡವಿರದ ಪ್ರೀತಿ ,ಹುಡುಗರೆಂಬ ಅಹಂ ,ತುಂಟತನ ,ಎಲ್ಲವೂ ನಂಗಿಷ್ಟ :)
ಇವಾಗ್ಲೂ ನಗು ಬರುತ್ತೆ .... ರೋಡ್ ನಲ್ಲಿ ಸುಮ್ ಸುಮ್ನೆ ಕೈ ಹಿಡ್ಕೊಳೋ ನಿಮ್ಮ ಪಾಡನ್ನ ನೋಡಿ .... ಯಾಕೋ ಗೂಬೆ ಅಂದ್ರೆ ಎದಿರು ಬರ್ತಿರೋ ಹುಡ್ಗೀನಾ ತೋರ್ಸಿ ಅವಳ್ಗೆ ಪ್ರೊಪೋಸ್ ಮಾಡಿದ್ದೆ .... ಬಟ್ :(
ಈಗ ''ನಿನಗಿಂತ ಚೆನ್ನಾಗಿರೋ ಹುಡ್ಗಿ ಇದಾಳೆ'' ಅಂತ ತೋರ್ಸೊಕೆ :)ಅಂತ ನೈಸ್ ಹೊಡಿತೀರ .... ನಾವೇನೋ ಪಾಪ ಕೊಡ್ಲಿ ಸ್ಕೋಪ್ ಅಂತ ಸುಮ್ನಾಗ್ತೀವಿ :)
ಕೋತಿ ಕಣ್ರೋ ನೀವು .... ನಿಮಗೆ ಬೇಕಾದಾಗ ಬೇಕಾದ ಪಟ್ಟ ಕೊಟ್ಬಿಡ್ತೀರ ....
ಕುಶಿಯಾದಾಗ ಪಾರ್ಟಿ ಮಿಡ್ ನೈಟ್ ತನಕ !! ,ಬೇಜಾರಾದಾಗ ಫಿಲೋಸೋಪಿ ಹೇಳ್ತೀರ ,ನೋವಾದಾಗ ಅಣ್ಣನಂತೆ ಸಮಾಧಾನ ಮಾಡ್ತೀರ .... ಮಾರ್ಕ್ಸ್ ಕಡ್ಮೆ ಬಂದ ಬೇಜಾರಲ್ಲಿ ನಾವಿದ್ರೆ .... ಪಾಸ್ ಆಗಿದ್ದಕ್ಕೆ ಪಾರ್ಟಿ ಕೊಡ್ಸ್ತೀವಿ ಬನ್ನಿ ಅಂತ ಕರೀತೀರ .... :)
ಎಲ್ಲವನ್ನೂ ಕೂಲ್ ಆಗಿ ತಗೊಳೋ ನಿಮ್ಮ ಈ ಸ್ವಭಾವಾನೇ ನಂಗೆ ತುಂಬಾ ಇಷ್ಟ ಆಗೋದು
ಪ್ರತಿ valentince ಡೇ ದಿನ propose ಮಾಡ್ಬಿಟ್ಟು ಹತ್ತು ವರ್ಷದಿಂದ ಹೇಳ್ತಿದೀವಿ ಈ ಬಾರಿ ಆದ್ರು ಒಪ್ಗೊಳೆ ಅಂತ ರೆಗಿಸ್ತಾರೆ .... ಪ್ರೀತಿ ಬಗ್ಗೆ ದಿನ ಪೂರ್ತಿ ಮಾತಾಡ್ತೀವಿ ಬಿಟ್ರೆ ಯಾರೊಬ್ರು ಅದರ ತಂಟೆಗೆ ಹೋಗಲ್ಲ .... ನಮ್ಮ ನಡುವೆ ಇರೋದು ಶುದ್ದ ಸ್ವಚ್ಛ ಸ್ನೇಹ ...
. ಒಂದಷ್ಟು ತಮಾಷೆ ,non stop ಮಸ್ತಿ ,ಜಾಸ್ತಿ ಅನ್ಸೋ ಅಷ್ಟು ಕೀಟಲೆ ,ಹೆಚ್ಚಾಗೋ ಆಟ ,ತುಂಬಾ ಕಡ್ಮೆ ಆಗೋ ಪಾಠ ,ಕ್ಲಾಸ್ ನಲ್ಲಿ ಮಾಡೋ ತರ್ಲೆ ,ಕಿಲಾಡಿಗಳು .....
ನಿಮ್ಮ ಈ ಹೊಸ ಹೊಸ ತುಂಟಾಟಗಳಿಗೆ ನನ್ನದೊಂದು ದೊಡ್ಡ ಹಾ ಹಾ :)
ಕಾಲೆಸ್ತ್ರೋಲ್ (ಕೊಬ್ಬು )ಕಡ್ಮೆ ಮಾಡ್ಕೊಂಡು ಮಾತಾಡಿ ,ಮತ್ತದೇ ಎವರ್ ಮಸ್ತಿ ಯ ಮನೆಯಲ್ಲಿಯೇ ಅಪ್ಪ ಅಮ್ಮನೊಟ್ಟಿಗೆ
ಸಿಟ್ಟು ಪ್ರದರ್ಶನ ಮಾಡುತ್ತಾ ,roaming ಮಾಡ್ತಾ ಇರೋ unlimited ಖುಷಿಯ ಲೈಫ್ ಗೆ ಒಮ್ಮೆ ಹೋಗಿ ಬರೋಣ ಕಣ್ರೋ ... ಪ್ಲೀಸ್ಸ್ನೇಹಿತರ ದೊಡ್ಡ ಗುಂಪನ್ನೊಮ್ಮೆ ನೆನಪಿಸಿಕೊಂಡು ...
. ಭವಿಷ್ಯದೆಡೆಗೆ ಮುಖಮಾಡಿ ಎಲ್ಲರೂ ಚದುರಿ ಹೋಗಿ ಆರೆಂಟು ತಿಂಗಳುಗಳೇ ಆಯ್ತು ....
ಆ ದಿನಗಳನ್ನೊಮ್ಮೆ ನೆನಪಿಸಿಕೊಂಡು ....
ಕಳೆದ colourfull ದಿನಗಳ ನೆನಪಿನೊಟ್ಟಿಗೆ ....
ಎಲ್ಲದಕ್ಕೂ ಖುಷಿಸೋ ಗೆಳೆಯರಿಗಾಗಿ ....
ಪ್ರೀತಿಯಿಂದ ....
ಸೂಪರ್ ಆಗಿದೆ ತಂಗ್ಯವ್ವ ಬರಹ..
ReplyDeleteಹುಡುಗು ಬುದ್ದಿಯ ಹುಡುಗರ ಸ್ಪೆಶಾಲಿಟಿಗಳನ್ನು ನಾವು ಗಮನಿಸುವುದೇ ಇಲ್ಲ ನೋಡು..
ರಿಫ್ರೆಶ್ ಮೆಂಟ್ ಕೊಡೊ ಬರಹ.. ನಂಗೆ ಸಕ್ಕತ್ ಇಷ್ಟ ಆಯಿತು..
-ನಿನ್ನ ಕೋತಿ ಫ್ರೆಂಡ್ಸ್ ಗಳಿಗೆ ಮುದ್ದಾದ ಬರಹ.
ಥಾಂಕ್ಸ್ ಅಕ್ಕಯ್ಯ .... ಫ್ರೆಂಡ್ಸ್ ಗಳು ಕೆಲವೊಮ್ಮೆ ಕಪಿ ಚೇ ಷ್ಟೆ ಬಿಟ್ಟು serius ಫಿಲಸಪಿ ನೂ ಹೇಳ್ತಿರ್ತಾರೆ ಬಿಡಿ :)
Delete[ಕೋತಿಗಳು ಅಂದ್ರಲ್ವಾ .... ಸಿಟ್ ಆಗಿದ್ರೆ ಅಂತ ನೈಸ್ ಹೊಡಿತಿರೋದು ಆಯ್ತಾ .... ಹೇಳ್ಬೇಡಿ ಅವ್ರ್ಗೆ ;)]
ಬರ್ತಾ ಇರಿ
ಆನೆ ನಡೆಯುತ್ತ ಹೋದಾಗ ದಾರಿಗಳು ಹಾಗೆಯೇ ಹಾದಿ ಕೊಡುತ್ತವೆ ಎಂದು ಕೇಳಿದ್ದೆ. ನಿನ್ನ ಲೇಖನಗಳನ್ನು ನೋಡಿ ನನಗೆ ಆ ಅನುಭವವಾಗುತ್ತಿದೆ. ಬರೆಯುತ್ತ ಹೋದಾಗೆಲ್ಲ ವಿಷಯಗಳು ತನ್ನಂತೆ ತಾನೇ ಹೊರ ಹೊಮ್ಮುವ ನಿನ್ನ ಬರಹದ ಶೈಲಿ ಸೊಗಸಾಗಿದೆ . ಯಾವುದೇ ವಿಷಯಗಳ ಬಗ್ಗೆ ಬರೆಯುವ ನಿನ್ನ ಚತುರತೆ ಇಷ್ಟವಾಗುತ್ತದೆ. ಸುಂದರ ಲೇಖನ ಸಹಪಾತಿಗಳನ್ನು ಹೊಗಳುತ್ತಲೇ ಅವರನ್ನು ಅಟ್ಟಕ್ಕೆರಿಸುತ್ತಲೇ ಕಾಲು ಎಳೆಯುವ ಕೆಲವು ಹಾಸ್ಯ ಸನ್ನಿವೇಶಗಳು ಸೊಗಸಾಗಿವೆ. ಅಭಿನಂದನೆಗಳು ಬಿ.ಪಿ
ReplyDeleteಧನ್ಯವಾದ ಜಿ .... ಎಲ್ಲರ ಬರಹಕ್ಕೂ ಅಭಿನಂದಿಸೋ ,ಪ್ರೋತ್ಸಾಹಿಸೋ ನಿಮ್ಮೀ ಮನಕ್ಕೆ ನನ್ನದೊಂದು ನಮನ :)
Deleteಅದೇನೋ ದಾರಿ ಬಗ್ಗೆ ಹೇಳಿದ್ದು ಗೊತ್ತಾಗಿಲ್ಲ .... ಆನೆ ಅಂತ ಅಂದಿದ್ದು ಮಾತ್ರ ತಿಳೀತು ನೋಡಿ ;);)
ಹಾ ಹಾ ... ಪ್ರೋತ್ಸಾಹ ಹೀಗೆ ಇರ್ಲಿ
tumba chennagide...nanna college, school, working days nenapaayitu...
Deletethanks .....nanna blog ge swagata...bartaa iri
Deleteಅಬ್ಬಾ ಮತ್ತೊಮ್ಮೆ ಕಾಲೇಜ್ ನೆನಪಿಸಿಬಿಟ್ಟೆ ಪುಟ್ಟು...
ReplyDeleteನನಗೂ ತುಂಬಾ ಒಳ್ಳೆಯ ಸ್ನೇಹಿತರಿದ್ದರು, ಈಗಲೂ ಇದ್ದಾರೆ...
ಅವರೆಲ್ಲ ಹೀಗೇನೆ... :)
ಮನೆಯವರಂತೆ ಆದವರಿದ್ದಾರೆ... ಅಮ್ಮನಿಗೆ ಮಕ್ಕಳಾದವರಿದ್ದಾರೆ ..
ಹುಳುಕಿನ ಸೋಂಕಿಲ್ಲದ ಒಳ್ಳೆಯ ಮನಸ್ಸಿರುವುದು ಹುಡುಗರಿಗೇನೆ..
ಎಲ್ಲರ ನೆನಪಾದರೆ ಈಗ ಬರುವ ಶಬ್ದ ..
Missing you idiots.. Please come back .. --
ನಿಜ ಅಕ್ಕ .... ಹುಳುಕು ,ಸ್ವಾರ್ಥ ಇಲ್ಲದ ನಿಷ್ಕಲ್ಮಶ ಸ್ನೇಹ ಸಿಗೋದು ಗೆಳೆಯರಿಂದ ...
Deleteಯಾರೇ ತೊಂದ್ರೆ ಕೊಟ್ರೂ ನಮ್ಮ ದೂರು ಮೊದಲು ಸಂದಾಯವಾಗೋದು ಇವ್ರಿಗೆ ತಾನೇ ....
even ನಂಗೂ ಅವರನ್ನ ಮಿಸ್ ಮಾಡ್ಕೊಂಡೆ ಅನ್ನಿಸಿ ಬರ್ದಿದ್ದು ...
ಆತ್ಮೀಯ ಪ್ರತಿಕ್ರಿಯೆ ;)
ಚೊಲೊ ಇದ್ದು ಗೆಳತಿ.....ಹಿಂದಿನ್ ಜನ್ಮದಲ್ಲಿ ಹುಡ್ಗ ಆಗಿದ್ದೆ ಕಾಣ್ತು ....
ReplyDeleteಹುಡುಗನ ಮನಸ್ಸಲ್ಲಿ ಹೊಕ್ಕು ಬರ್ದಂಗಿದ್ದು :)
ಥ್ಯಾಂಕ್ಸ್ ಜಿ :)ಹಾ ಹಾ .... ಜನ್ಮಾಂತರ something ಏನೋ ಪ್ರೊಗ್ರಾಮ್ ಬರುತ್ತಲ್ವಾ .... ಅದಕ್ಕೆ ಹೋಗಿ ಕ್ಲಿಯರ್ ಮಾಡ್ಕೋ ಅಂದ್ರಾ ??:)
Deleteಬರ್ತಾ ಇರಿ ಬ್ಲಾಗ್ ಗೆ
ಚೋಲೋತ್ನಂಗ ಅಂದೀರ್ ನೋಡ್ರಿ...
ReplyDeleteನಮ್ ಬಗ್ಗ ನಾವನ್ನೋದೇನೈತಿ...
ಭಾಳ ಖರಿ ವಿಚಾರ ಬರ್ದೀರಿ..
ಹಿಂಗ ಬರೀತಾ ಇರ್ರಿ ಹಾಂ ಮತ್ತ...
ಶುಕ್ರಿಯಾ...
ಥ್ಯಾಂಕ್ಸ್ ರೀ ಯಪ್ಪಾ :)
Deleteಟ್ರೈ ಮಾಡೋನ್ರಿ ...ಬ್ಲಾಗ್ ಗಾ ಬರ್ತಾ ಇರ್ರಿ ಮತ್ತ ...
ಭಾಗ್ಯಮ್ಮಾ...
ReplyDeleteಹುಷಾರಪಾ....
ಹಿಂಗೆ ಬರೀತಾ ಹೋದ್ರೆ ನಮ್ ಕೈಗೆ ಸಿಗದ್ ಕಷ್ಟಾ ಅಗತ್ತೇನಪಾ ನೀನು...ಅಷ್ಟ ಮೇಲಕ್ ಹೇಗ್ ಬಿಡ್ತೀಯಾ... ಹಾ ಹಾ...
ಛಂದದ ಬರಹ...
ಇಷ್ಟ ಆಗ್ಲೇ ಬೇಕು ಬಿಡು...:)D
ಥ್ಯಾಂಕ್ಸ್ ಚಿನ್ಮಯ್ ಅಣ್ಣ .... ಬರ್ತಾ ಇರಿ ಬ್ಲಾಗ್ ಗೆ .... ಏನೋ ನಿಮ್ಮಂತವ್ರ ಆಶೀರ್ವಾದ :;);)
Deleteಭಾಗ್ಯ, ನೈಸು.... ನೈಸು....ರೈಟಿಂಗ್.... :))
ReplyDeleteಸುಮತಿ ಥ್ಯಾಂಕ್ಸ್ ಫಾರ್ ಕಮಿಂಗೂ :):).... ಬರ್ತಾ ಇರಿ
Deletethanks ಶ್ರೀ .... :)
ReplyDelete:) ನೈಸ್ ಭಾಗ್ಯ. ಹುಡುಗರ ಮನಸಿನೊಳಗೆ ಹೊಕ್ಕು ಬರದ್ದೆ ಬಿಡು:)
ReplyDeleteಥಾಂಕ್ಸ್ ಜಿ:)
Deleteಬರ್ತಾ ಇರಿ
ಹೌದು ಭಾಗ್ಯ, ಒಂದೆರಡು ಆತ್ಮೀಯ ಗೆಳತಿಯರನ್ನ ಬಿಟ್ಟರೆ ತೀರ ಹಚ್ಚಿಕೊಳ್ಳೊದು ಗೆಳೆಯರೇ.. ನಿನ್ನ ಬರಹ ಹಳೆಯ ನೆನಪುಗಳನ್ನ ಕೆದಕಿ ಹಾಕಿತು.. ಅಪ್ಪನಂತೆ ಕಾಳಜಿ ವಹಿಸುವ, ತಮ್ಮನಂತೆ ಗೋಳು ಹುಯ್ಯುವ, ಅಣ್ಣನಂತೆ ರೇಗಿಸುವ, ಹೆಗಲಿಗೆ ಹೆಗಲು ಕೊಡುವ ಗೆಳೆಯರಿಗೊಂದು ಸಲಾಮ್!
ReplyDeleteಹೌದು ಭಾಗ್ಯ, ಒಂದೆರಡು ಆತ್ಮೀಯ ಗೆಳತಿಯರನ್ನ ಬಿಟ್ಟರೆ ತೀರ ಹಚ್ಚಿಕೊಳ್ಳೊದು ಗೆಳೆಯರೇ.. ನಿನ್ನ ಬರಹ ಹಳೆಯ ನೆನಪುಗಳನ್ನ ಕೆದಕಿ ಹಾಕಿತು.. ಅಪ್ಪನಂತೆ ಕಾಳಜಿ ವಹಿಸುವ, ತಮ್ಮನಂತೆ ಗೋಳು ಹುಯ್ಯುವ, ಅಣ್ಣನಂತೆ ರೇಗಿಸುವ, ಹೆಗಲಿಗೆ ಹೆಗಲು ಕೊಡುವ ಗೆಳೆಯರಿಗೊಂದು ಸಲಾಮ್!
ReplyDeleteಹೌದು ಭಾಗ್ಯ, ಒಂದೆರಡು ಆತ್ಮೀಯ ಗೆಳತಿಯರನ್ನ ಬಿಟ್ಟರೆ ತೀರ ಹಚ್ಚಿಕೊಳ್ಳೊದು ಗೆಳೆಯರೇ.. ನಿನ್ನ ಬರಹ ಹಳೆಯ ನೆನಪುಗಳನ್ನ ಕೆದಕಿ ಹಾಕಿತು.. ಅಪ್ಪನಂತೆ ಕಾಳಜಿ ವಹಿಸುವ, ತಮ್ಮನಂತೆ ಗೋಳು ಹುಯ್ಯುವ, ಅಣ್ಣನಂತೆ ರೇಗಿಸುವ, ಹೆಗಲಿಗೆ ಹೆಗಲು ಕೊಡುವ ಗೆಳೆಯರಿಗೊಂದು ಸಲಾಮ್!
ReplyDeleteನೆನಪಿದ್ಯಾ ನಿಂಗೆ...ಬಾಯಿ ಸೊಲೋ ಅಷ್ಟು ಮಾತಾಡೋದು,ಹರಟೋದು,ಸುತ್ತೋದು,ಕ್ರಿಕೆಟ್ ರಾತ್ರಿ ಇದ್ರೆ ಬೆಳ್ಗೆ ಹೊತ್ತಿಗೆ ಮನೆಯಲ್ಲಿ ಚಿಪ್ಸ್ ಡಬ್ಬಾನೂ ಖಾಲಿ:)
Deleteನಾವ್ ಸಲಾಂ ಹೊಡ್ಸ್ಕೊಲೋಣ ಕಣೆ ಇನ್ನು:)...ಸಲಾಂ ಹೊಡೆದಿದ್ದು ಸಾಕು ಅವ್ರ್ಗೆ:)
ಬರ್ತಾ ಇರು ಬ್ಲಾಗ್ ಗೆ
ಭಾಗ್ಯ ಹುಡುಗರ ಬಗ್ಗೆ ಸ್ವಲ್ಪ ಪಾಸಿಟೀವ್ ಆಗಿಯೂ ಬರಿ ಅಂದದ್ದೆ ನೀನು ಇಷ್ಟೆಲ್ಲಾ ಗೊಂದಲಕ್ಕೆ ಬೀಳ್ತೀಯಾ ಅಂದುಕೊಂಡಿರಲೇ ಇಲ್ಲ... ಅಲ್ವೆ ಓದೆ ಇನ್ನೊಂದು ಸಲ ನೀನು ಬರೆದದ್ದನ್ನ!
ReplyDeleteಆದರೆ ಹೇಳಲೇ ಬೇಕೆನಿಸಿದ್ದು ನಿನ್ನ ನಿರೂಪಣಾ ಶೈಲಿ ಪೊಸಿಟೀವ್ ಮತ್ತು ನೆಗೆಟೀವ್ ಗುಣಗಳನ್ನ ವಿಮರ್ಶೆ ಮಾಡಿ ಸರಿದೂಗಿಸಿಕೊಂಡು ಹೋಗಿದ್ದು ಇಷ್ಟವಾಯಿತು.. ಹಾಂ ಯಾವ್ದೂ ಅರ್ಥ ಆಗ್ಲಿಲ್ಲ ಅಂತ ಹೇಳ್ಬೇಡ್ ಇವಾಗ!
ಹುಡುಗಿಯರ ಬಗ್ಗೆನೂ ಹೇಳೋಕೆ ತುಂಭಾ ಇದೆ ಅದನ್ನೂ ಬರಿ, ಹುಡುಗರನ್ನು ಎಟಿಯಮ್ ತರಹ ಬಳಸಿಕೊಂಡ ಹುಡುಗಿಯರು ಅದೆಷ್ಟೋ.. ದೇವದಾಸ್ ಸ್ತಿತಿಗೆ ತಲುಪಿದವರೆಷ್ಟೊ... ಅದೇ ರೀತಿ ಹುಡುಗಿಯ ಪ್ರೀತಿಯಿಂದಾನೆ ಬದುಕುಳಿದ ಹುಡುಗರು ಅದೆಷ್ಟೋ.. ನಾನು ಹೀಗೆ ಹೇಳುತ್ತಾ ಹೋದರೆ ಮತ್ತೆ ಗೊಂದಲ ಶುರುವಾಗಿ ಬಿಡುತ್ತೆ...
ಬರೆಯುತ್ತಾ ಇರು... ಮುಂದಿನ ಬರಹಕ್ಕಾಗಿ ಕಾಯುತ್ತಿರುವೆ.....
ಥಾಂಕ್ಸ್ ಮನಸ್ವಿ ...ತುಂಬಾ ದಿನದ ನಂತರ ನನ್ನ ಬ್ಲಾಗ್ ಗೆ ಬಂದ್ರಿ ...ಖುಶಿ ಆತು ...
Deleteನಿಜ ಒಪ್ಪೋಣ ನಿಮ್ಮ ಮಾತನ್ನ....ಅದ್ರೂ ಪ್ರೀತಿ ಅಂದ್ರೆ ನೆನಪಾಗೋದು ಪರಿಶುದ್ದ ಸ್ನೇಹದ ಎಲ್ಲವನೂ ಇಶ್ಟ ಪಡೋ ಹುಡುಗಿ ಮಾತ್ರ ...ಮುರಿದು ಬಿದ್ದ ಪ್ರೀತಿಯಲ್ಲಿ ದೊಡ್ದ ಪಾಲಿರೊದು ಹುಡುಗಂದು:)
ಪ್ರಾಮಾಣಿಕ ಭಾವ ನಂದು:)
ಬರ್ತಾ ಇರಿ ..ನಮಸ್ತೆ
>> ನಿಮ್ಮಲ್ಲಿ ಬತ್ತಿಯ ಹೊಗೆಯಿದೆ ...
ReplyDelete. brandnes froster ಅಂತ ನೀವೇ ಇಟ್ಟುಕೊಂಡ ತೀರ್ಥದ ಸ್ವಾದವಿದೆ :)..
.ಜಿಮ್ ಗೆ ಹೋಗಿ six pack ತೋರ್ಸೋ craze ಇದೆ ....
ಕಿಲೋ ಮೀಟರ್ ದೂರ ಇದ್ರೂ ತಾಕೋ perfume ನಾ smell ಇದೆ ....
ಲೋ ಮಗಾ ಅಲ್ನೋಡೋ ಫಿಗರ್ ಅನ್ನೋ ಭಂಡತನವಿದೆ ...
spikes ,ಲೋವೆಸ್ಟ್ ಹಾಕ್ಕೊಂಡು VIP ಬ್ರಾಂಡ್ ತೋರ್ಸೋ ಹುಚ್ಚಿದೆ
ವೀಲಿಂಗ್ ಅಂತ ಮಾಡೋ ನೂರಾರು ಸ್ಕೋಪ್ ಗಳಿವೆ :)....
ಹುಡ್ಗೀರ ಒಂದೇ ಸ್ಮೈಲ್ ಗೆ ಕಳೆದೊಗೋ ಮುಗ್ಧ ಮನಸ್ಸೂ ಇದೆ ಕಣ್ರೋ ನಿಮ್ಗೆ :)
<< ಅಬ್ಬಾ !! :-) Already so many comments..so no more comments ;-) Good going..
ಥಾಂಕ್ಸ್ ಪ್ರಶಸ್ತಿ ಜಿ .....ಇಷ್ಟ ಪಟ್ಟಿದ್ದಕ್ಕೆ...
DeleteBalasubrahmanya Nimmolagobba Balu ವಾಸ್ತವದ ಸುಂದರ ಬರವಣಿಗೆ, ಕಾಲೇಜಿನ ದಿನಗಳ ಮೆಲುಕು ಚೆನ್ನಾಗಿದೆ, ಹುಡುಗರ ವಿವಿಧ ಮುಖಗಳ ಸುಂದರ ಅನಾವರಣ ಇಲ್ಲಿ ಆಗಿದೆ. ನನ್ನ ಕಾಲೇಜಿನ ದಿನಗಳ ನೆನಪು ಮೂಡಿಸಿತು. ಮತ್ತಷ್ಟು ಬರಲಿ. ಅಭಿನಂದನೆಗಳು ಒಳ್ಳೆಯ ಬರವಣಿಗೆಗೆ.
ReplyDeleteಧನ್ಯವಾದ ಬಾಲು ಸರ್....ನಂಗೊತ್ತಿರೋ ಒಂದೆರಡು ಮುಖಗಳನ್ನಷ್ಟೆ ಹೇಳೊ ಪ್ರಯತ್ನ ಮಾಡಿದ್ದೇನೆ ....ಇನ್ನುಳಿದ ಮುಖಗಳ ಪರಿಚಯವಿಲ್ಲ:)
Deleteಖುಷಿ ಆಯ್ತು ....ನಮಸ್ತೆ
ಮತ್ತೊಮ್ಮೆ ನನ್ನ ಶಾಲಾ ದಿನಗಳನ್ನೂ ಕಾಲೇಜ್ ಮಸ್ತೀ ಕ್ಷಣಗಳನ್ನೂ ನೆನಪಿಸಿದ ಪುಟ್ಟ ಗೆಳತಿಗೆ ಶರಣು ಶರಣು..
ReplyDeleteಥಾಂಕ್ಸ್ ಬದರಿ ಸರ್....ಈ ಪುಟ್ಟ ಗೆಳತಿಯ ಬರಹವನ್ನು ಓದಿ ಇಷ್ಟ ಪಟ್ಟಿದ್ದಕ್ಕೆ ಶರಣು ಶರಣಾರ್ಥಿ:)
Deleteಸುಮ್ಮನೆ ಓದಿ(ಡಿ)ಸಿಕೊಂಡು ಹೋಗೋ ಬರಹ.. ಈ ತರಹ ಹುಡುಗರ ಬಗ್ಗೆ ಯಾರದ್ರೂ ಬರೆಯಬಹುದು ಅನ್ನುವ ಕಲ್ಪನೆ ಕೂಡ ಇರಲಿಲ್ಲ. ಕಾಲೇಜಿನ ಗಾಸಿಪ್, ಟ್ರೆಕಿಂಗ್, ಮಸ್ತಿ ಜೊತೆ ಶುರುವಾಗಿ "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ" ಅದೇ ರೀತಿ ನಮಗೂ ಒಂದು ಕಾಲ ಬರುತ್ತೆ ಅನ್ನೋ ಹುಸಿ ಕೋಪ.ಮುಂದೆ ಬತ್ತಿಯ ಹೊಗೆ, ತೀರ್ಥದ ಸ್ವಾದ, ಸಿಕ್ಸ್ ಪ್ಯಾಕ್ ಕ್ರೇಜ್, vip ಬ್ರಾಂಡಿನ ಹುಚ್ಚು, "ಲೋ ಮಗಾ ಅಲ್ನೋಡೋ ಫಿಗರ್" ಅನ್ನುವ ಹುಚ್ಚು ಮನಸಿನ ಮಾತುಗಳನ್ನ ಓದಿದಾಗ ಯಪ್ಪಾ ಇದೇನಿದು ಹುಡುಗಿಯರು ಇಷ್ಟೆಲ್ಲಾ ಮುಂದುವರೆದಿದ್ದಾರೆ ಅಂತ ಅನಿಸಿದರೂ "ಹುಡ್ಗೀರ ಒಂದೇ ಸ್ಮೈಲ್ ಗೆ ಕಳೆದೊಗೋ ಮುಗ್ಧ ಮನಸ್ಸೂ ಇದೆ ಕಣ್ರೋ ನಿಮ್ಗೆ :)" ಅಂದಾಗ ನಿಜಕ್ಕೊ ಹುಡುಗರನ್ನ ತುಂಬಾ ಅರ್ಥ ಮಾಡಿಕೊಂಡಿದೀರ ಅಂತ ಅನಿಸಿದ್ದಂತೂ ನಿಜ. "impress ಮಾಡೋಕೆ ಇಷ್ಟೊಂದು ಕಷ್ಟ ಪಡ್ಬೇಕಲ್ಲೋ ನೀವು" ಅನ್ನುವ ಹುಡುಗರ ಪಾಡು ನಿಜಕ್ಕೂ ಹೇಳತೀರದು. ಮುಂದೆ ಹುಡುಗರ ಮನಸ್ಸಿನ ಭಾವನೆಗಳ ಕಲ್ಪನೆ ಚೆನ್ನಾಗಿದೆ. ಪ್ರೀತಿ ಪ್ರೇಮ ಅನ್ನೋ ಹುಚ್ಚು ಕಲ್ಪನೆಗಳು ಸುಂದರವಾಗಿ ಮೂಡಿಬಂದಿದೆ. "
ReplyDelete"ಎಲ್ಲವನ್ನೂ ಕೂಲ್ ಆಗಿ ತಗೊಳೋ ನಿಮ್ಮ ಈ ಸ್ವಭಾವಾನೇ ನಂಗೆ ತುಂಬಾ ಇಷ್ಟ ಆಗೋದು" ನಿಜ.. ಅದಕ್ಕೆ ಹೇಳೋದಲ್ವಾ ಬಿಂದಾಸ್ ಬಾಯ್ಜ್ ಅಂತ. "ಕುಶಿಯಾದಾಗ ಪಾರ್ಟಿ ಮಿಡ್ ನೈಟ್ ತನಕ !! ,ಬೇಜಾರಾದಾಗ ಫಿಲೋಸೋಪಿ ಹೇಳ್ತೀರ ,ನೋವಾದಾಗ ಅಣ್ಣನಂತೆ ಸಮಾಧಾನ ಮಾಡ್ತೀರ .... ಮಾರ್ಕ್ಸ್ ಕಡ್ಮೆ ಬಂದ ಬೇಜಾರಲ್ಲಿ ನಾವಿದ್ರೆ .... ಪಾಸ್ ಆಗಿದ್ದಕ್ಕೆ ಪಾರ್ಟಿ ಕೊಡ್ಸ್ತೀವಿ ಬನ್ನಿ ಅಂತ ಕರೀತೀರ .... :)" ನಿಜ ಕಣ್ರೀ. ಒಂದು ಹುಡುಗಿ ೯೫ ಮಾರ್ಕ್ಸ್ ತಗೊಂಡ್ರೆ ಎನಲೊ ಅದ್ರಲ್ಲಿ ಮೂರು ಹುಡುಗ್ರು ಪಾಸ್ ಆಗ್ತಿದ್ರು ಅನ್ನೋ ಹುಡುಗರು ಇವರು.
ನಿಜಕ್ಕೂ ನಿಮ್ಮ ಗೆಳೆಯರು "ಭಾಗ್ಯ"ವಂತರು ಕಣ್ರೀ. ನಿಜ ಹೇಳಲಾ ನನಗೆ ಇದೆಲ್ಲ ಓದಿ ಹೊಟ್ಟೆಕಿಚ್ಹಾಗ್ತಿದೆ ನಾನ್ಯಾಕೆ ನಿಮ್ಮ ಗೆಳೆಯನಾಗಲಿಲ್ಲ ಅಂತ.
"ಕಾಲೆಸ್ತ್ರೋಲ್ (ಕೊಬ್ಬು )ಕಡ್ಮೆ ಮಾಡ್ಕೊಂಡು ಮಾತಾಡಿ ,ಮತ್ತದೇ ಎವರ್ ಮಸ್ತಿ ಯ ಮನೆಯಲ್ಲಿಯೇ ಅಪ್ಪ ಅಮ್ಮನೊಟ್ಟಿಗೆ
ಸಿಟ್ಟು ಪ್ರದರ್ಶನ ಮಾಡುತ್ತಾ ,roaming ಮಾಡ್ತಾ ಇರೋ unlimited ಖುಷಿಯ ಲೈಫ್ ಗೆ ಒಮ್ಮೆ ಹೋಗಿ ಬರೋಣ ಕಣ್ರೋ ... ಪ್ಲೀಸ್" ಹೋಗೋದಾದ್ರೆ ಹೇಳಿ ನಾನೂ ಬರ್ತೀನಿ.ನಿಮ್ಮ ಗೆಳೆಯರ ಪಟ್ಟಿಯಲ್ಲಿ ನಾನೋಬ್ಬನಾಗಿ ಸೇರಿ ಈ ಹಾಳಾದ ಟೆನ್ಶನ್ ಜಗತ್ತನ ಬಿಟ್ಟು ಸ್ವಚ್ಚಂದ ಹಕ್ಕಿಯಾಗಿ ನೀಲಿ ಬಾನಿನಲ್ಲಿ ಯಾರ ಹಂಗಿಲ್ಲದೆ ತೇಲಿ ಬರೋಣ.
ನಿಮ್ಮೆಲ್ಲ ಆತ್ಮೀಯ ಗೆಳೆಯರಿಗೆ ಈ ಬರಹದ ಮೂಲಕ ಪ್ರೀತಿಯ ಸಲಾಂ ಹೇಳಿದಿರ. ಹಿಡಿಸಿತು(ಹುಡುಗರ ಬಗ್ಗೆ ಹೊಗಳಿದ್ದೀರ ಅಂತ ಅಲ್ಲ, ಅವರ ಎಲ್ಲ ಭಾವನೆಗಳನ್ನ ಚೆನ್ನಾಗಿ ವಣ್ರಿಸಿದ್ದೀರಾ ಅಂತ.) ನಿಮ್ಮ ಪ್ರತಿಯೊಂದು ಬರಹದಲ್ಲೂ ಹೊಸತನವಿರುತ್ತೆ, ಹೊಸ ಅನುಭವಗಳಿರುತ್ತೆ. ಚೆನ್ನಾಗಿದೆ. ಇದೇ ರೀತಿ ಬರೆಯುತ್ತಿರಿ, ಓದಲು ನಾವಿದ್ದೇವೆ. ಮತ್ತೊಂದು ಹೊಸ ಅನುಭವದ ನೀರೀಕ್ಷೆಯಲ್ಲಿ ಇರುತ್ತೇನೆ.
ಶುಭವಾಗಲಿ.
ಥಾಂಕ್ಸ್ ಗಣೇಶ್ ಜಿ :)
Deleteನಿಮ್ಮೀ ಆತ್ಮೀಯ ಪ್ರತಿಕ್ರಿಯೆಗೊಂದು ಸಲಾಂ....
ನಿಜ ಹುಡುಗರಿಗೆ ಬೈಬೇಕೆಂದು ಹೊರಟಿದ್ದೆ ....ಆದರೆ ಅವರ ಒಳ್ಳೆ ಗುಣಗಳು ಪೊಸಿಟಿವ್ ಕಡೆಗೆ ತಂದು ಇಲ್ಲಿ ನಿಲ್ಲಿಸಿತ್ತು ....
ಪ್ರತಿಯೊಂದು ಲೈನ್ ನನ್ನೂ ಇಷ್ಟ ಪಟ್ಟು ಓದಿದ್ದೀರಿ ....
ಹೊಟ್ಟೆ ಉರಿ ಪಟ್ಕೊಂಬೇಡಿ ...ನೀವೂ ನನ್ನ ಸ್ನೇಹಿತರೇ....
ಪ್ರೋತ್ಸಾಹ ಹೀಗೇ ಇರ್ಲಿ ....
ಖುಷಿ ಆಯ್ತು ...ಬರ್ತಾ ಇರಿ
ನಮಸ್ತೆ
sooper...... :)
ReplyDeletethanks samanvayakka:)ನನ್ನ ಬ್ಲಾಗ್ ಗೆ ಸ್ವಾಗತ ....ಬರ್ತಾ ಇರಿ
Deleteintha hudugru uddara agodu kasta saadya ri.
ReplyDeleteಪಾಪ ನಮ್ ಹುಡ್ಗ್ರು ಬಿಡಿ ....ಉದ್ದಾರ ಆಗ್ತಾರೆ ...ಬರ್ತಾ ಇರಿ ಬ್ಲಾಗ್ ಗೆ:)
Delete