ಅವಳದ್ದು ಮಧುರ ಪ್ರೀತಿ ... ಬಹುಷಃ ಅವನದ್ದು ಬಾಲಿಶ ಪ್ರೀತಿಯಾಗಿದ್ದೀತು !ಅಥವಾ ಆಕೆ ನಾಮಕರಣ ಮಾಡಿಕೊಂಡಿದ್ದ "ಪ್ರೀತಿ"ಅದಾಗಿರದೆ ಇದ್ದೀತು ...
ಅವಳು ಬದುಕಿನ ಬಗೆಗೆ ತೀರಾ ನಿರೀಕ್ಷೆ ಇಟ್ಟು ಕೊಂಡವಳು .. ಅವನು ಎಲ್ಲವನ್ನೂ ಫೆದರ್ ಲೈಟ್ ಎಂದು ಹೇಳೋನು ... ಅವಳದ್ದು ಸಾದಾ ಸೀದಾ ಬದುಕು ... ಅವನು 'royal ಲೈಫ್ 'ಲೀಡ್ ಮಾಡೋನು ..
ಚಿಕ್ಕ ಚಿಕ್ಕ ಖುಶಿಗಳನ್ನ ಅನುಭವಿಸೋ ಮನವಿದು ... ಆಕಾಶವನ್ನೇ ಕೈಗಿತ್ತರೂ ಕುಶಿ ಪಡದ ಮನ ಅದು .. !!
ಅದೇಕೋ ತುಂಬಾ ಇಷ್ಟವಾಗಿದ್ದ ಒಲವು ... ಅವಳೇ ತನ್ನೊಲವ ನಿವೇದನೆಯನ್ನೂ ಮಾಡಿಕೊಂಡಿದ್ದಳು (ಅದು ಪ್ರೀತಿ ಎಂದು ಖಾತ್ರಿಯಾದ ಮೇಲೇ )... ಅವನೂ ಪ್ರೀತಿಯ ಸಮ್ಮತಿಯನ್ನೆ ನೀಡಿದ್ದ ''ಇಷ್ಟು ದಿನ ಬೇಕಾಯ್ತೇನೆ ಹುಡುಗಿ'' ಎಂದು ತಲೆಗೊಂದು ಮೊಟಕಿ ...
ಅವರಿಬ್ಬರದ್ದು ಬರಿಯ ಸ್ನೇಹವಲ್ಲ ಎಂದು ನಂಗೂ ಗೊತ್ತಿತ್ತು ... ಹರೆಯದ ಪ್ರೀತಿ ,ಪ್ರೇಮವನ್ನು ಕಡಾಖಂಡಿತವಾಗಿ ನಿರಾಕರಿಸೋ ಅವಳು ಅದ್ ಹೇಗೆ ಅವನ ಪ್ರೀತಿಗೆ ಸೋತು ಶರಣಾದಳೋ ಕಾಣೆ !...
ಪ್ರೀತಿಪರವಶೆಯಲ್ಲಿ ,ಅವನ ಸಾಮಿಪ್ಯದಲ್ಲಿ ನಿಜಕ್ಕೊ ಖುಷಿಪಡುತ್ತಿದ್ದಳು ... ಮಾತೇ ಆಡದೇ ಮೌನದ ಚಿಪ್ಪಾಗಿದ್ದ ಅವಳು ಮಾತಾಡೋದನ್ನ ಕಲಿತಿದ್ದಳು ... ನಗೋದನ್ನ ಕಲಿತಿದ್ದಳು (ಈಗ ಅಳುವಿನಲ್ಲಿಯೂ! )... ಅವಳ ಈ ಖುಷಿಗಳ ರೂವಾರಿ ಅವನೆಂಬುದು ತಿಳಿದಿತ್ತು ..!ಕೈ ಹಿಡಿದು ಈ ಪುಟ್ಟ ಕೈ ನಂದೇ ಇದನ್ಯಾವತ್ತೂ ಬಿಡೋ ಪ್ರಶ್ನೆ ಇಲ್ಲ ಎಂದು ಅವನೆದೆಗೆ ಅವಳ ಕೈ ಇಟ್ಟು ಹೇಳಿದ್ದ ಹುಡುಗ ಅವನು ...
ಈಚೆಗೆ ಅವನಿಗಿಷ್ಟವಾಗದ ಅವಳ ಇಷ್ಟಗಳು ಅವಳಿಗೂ ಇಷ್ಟವಾಗುತ್ತಿರಲಿಲ್ಲ !ಇಷ್ಟಗಳಲ್ಲಿ ಬದಲಾವಣೆಯಾಗಿತ್ತು ... ಅವನ ಹಟಕ್ಕೆ ಅದು ಅನಿವಾರ್ಯವಾಗಿತ್ತು .. ಯಾವಾಗಲೂ ಸಿಂಪಲ್ ಇಷ್ಟ ಪಡೋ ಅವಳು ಇವನ ಸ್ಪೈಕ್ ,ಲೋವೆಸ್ಟ್ ಗಳನ್ನ ಇಷ್ಟ ಪಡೋಕೆ ಶುರು ಮಾಡಿದ್ದಳು !ನನ್ನ ಹುಡುಗ ಹೇಗಿರಬೇಕೆಂದು ಮೊದಲು ಹೇಳಿದ್ದ ಅವಳ ಈ ಹುಡುಗ dead opposit !!...
ಅದರೂ ಅವಳ ಪ್ರೀತಿ ಅದು .... ಮಧುರ ಒಲವು
ಮಾತಿನಲ್ಲೇ ಸದಾ ಮುಳುಗಿರುತಿದ್ದ ನನಗೆ ಅವಳ ಗೆಳೆತನ ಆದದ್ದು ಹೇಗೆ ಎಂಬುದು ನನಗಿಂದೂ ತಿಳಿದಿಲ್ಲ ... ನಮ್ಮ ತರಲೆಗಳಿಗೆಲ್ಲ ಅವಳ ಮಂದಹಾಸವನ್ನು ಬಿಟ್ಟು ಬೇರೇನನ್ನೂ ಎದುರ ನೋಡೋ ಹಾಗಿರಲಿಲ್ಲ ... ಅಷ್ಟು ಸೌಮ್ಯ ಅವಳು ... ಎಲ್ಲರನ್ನೂ ಪ್ರೀತಿ ಮಾಡೋ ,ಇಷ್ಟ ಪಡೋ ಅವಳಿಗೆ ಅವನೂ ತುಂಬಾನೇ ಇಷ್ಟವಾಗಿದ್ದ ..
ಅವನ ಪ್ರೀತಿ ,ಆತ್ಮೀಯತೆಗೆ ಸೋತಿದ್ದಳು ... ಪ್ರೀತಿಯ ಸೆಳೆತಕ್ಕೆ ಅದಾಗಲೇ ಸಿಲುಕಿದ್ದಳು ... ಅವನೊಟ್ಟಿಗೆ ಈಜಿ ದಡ ಸೇರುವ ಭರವಸೆಯೊಂದಿಗೆ.... .ಆದರೆ... ?? ..
ಮೊದಲ ಒಲವು ,ಮೊದಲ ಭರವಸೆ ,ತನ್ಮಯಳಾಗಿ ನೋಡಿದ್ದ ಅವನ ಮುದ್ದು ಮುಖ ... ಪ್ರೀತಿಯ ಮೊದಲ ಸಲುಗೆಯ ಸ್ಮೃತಿ ಮರೆಯೋಕೂ ಮುಂಚೆನೇ ಆ ಪ್ರೀತಿ ಮುರಿದು ಬಿದ್ದಿತ್ತು ... ಅವಳ ಮುಗ್ದ ಮನವೂ ಮಗುಚಿ ಬಿದ್ದಿತ್ತು .. !!!
. ಒಲವಿನ ಹುಡುಗ ಅದ್ಯಾಕೋ ಮುನಿಸಿಕೊಂಡಿದ್ದ ...
ನೀ ನನ್ನ ಪ್ರೀತಿ ಅಲ್ಲವೆಂದು ಮುಖಕ್ಕೆ ಹೊಡೆದಂತೆ ಹೇಳಿದ್ದ ...ಅವಳ ಮುಗ್ದ ಪ್ರೀತಿಗೆ 'ಪಾಪು ಕಣೆ ನೀನು ... ನಿನ್ನನ್ನ ಇಷ್ಟ ಪಡ್ಬಾರ್ದಿತ್ತು ನಾನು ... ನನ್ನ ಕನಸಿನ ಹುಡುಗಿ ನೀನಲ್ಲ 'ಎಂದು ಕಾರಣ ಬೇರೆ ಹೇಳಿದ್ದ !!!ಅವನ ಒಲವು ಕವಲೊಡೆದಿದ್ದು ನಿಜವಾಗಿತ್ತು .... ಪ್ರೀತಿಯ ನವಿರು ಭಾವಗಳನ್ನ ಪ್ರತಿಫಲಿಸಬೇಕಿದ್ದ ಅವನ ಕಂಗಳಲ್ಲಿ ದಿವ್ಯ ನಿರ್ಲಕ್ಷ ಮಾತ್ರ ಕಾಣುತ್ತಿತ್ತು ...
ಹಠ ಹಿಡಿದು ಪಡೆಯೋ ಪ್ರೀತಿಗೆ ಅರ್ಥವಿಲ್ಲವೆಂಬುದು ಅವಳಿಗೆ ಗೊತ್ತು ...
ನಗುವುದನ್ನು ಮಾತನ್ನು ಕಲಿಸಿ ಈಗ ನನ್ನ ಗೆಳತಿಯನ್ನ ಮೂಕಿಯನ್ನಾಗಿ ಮಾಡಿ ,ನಗುವನ್ನೇ ಮರೆಸಿ ಹೋದ ನಿನ್ನೆಡೆಗೆ ನನ್ನ ಬೇಸರವಿದೆ ಗೆಳೆಯ ...
ಅವಳ ಮನಸಿನ ಮಧುರ ಭಾವಗಳೊಂದಿಗೆ ನಿನ್ನ ಭಾವನೆಗಳನ್ನ ಸೇರಿಸಲೇ ಬಾರದಿತ್ತು ನೀನು ... ತಪ್ಪು ಯಾರದ್ದೋ ನಾ ಕಾಣೆ ... ಮನ ಮುರಿದಿದ್ದು ಮಾತ್ರ ಸತ್ಯ ... ಮೊದಲೇ ಪ್ರೀತಿಯೆಡೆಗೆ ತಿರಸ್ಕಾರವಿದ್ದ ಅವಳಿಗೆ ಇನ್ನು ಪ್ರೀತಿಯೆಡೆಗೆ ಅಸಹ್ಯ ಮೂಡಿದ್ರೆ ಅದಕ್ಕೆ ಕಾರಣ ನೀನಾಗ್ತೀಯ ಅಂತ ಹೇಳಬಲ್ಲೆ ...
ಅವಳ ಪ್ರೀತಿ ನೀನು ಕಣೋ ... ಭಾವನೆಗಳೊಂದಿಗೆ ಆಟ ಆಡದಿರು ....
ವರ್ಷದ ಮೊದಲ ಮಳೆಯಲ್ಲಿ ಯಾವಾಗಲೂ ಕುಣಿದು ಖುಶಿಸೋ ಗೆಳತಿ ಇವತ್ತು ಮಳೆಯಲ್ಲಿ ಸುಮ್ಮನೆ ಹನಿಗಳಿಗೆ ಮುಖವೊಡ್ಡಿ ನಿಂತಿದ್ದಾಳೆ .... ಗೆಳೆಯನ ನೆನಪಿಗೊಂದು ಅಶ್ರುತರ್ಪಣ ಬಿಟ್ಟು ಬರಲಿ ಎಂದು ನಾನೂ ಸುಮ್ಮನಿದ್ದೆ ...
ಸಾಧ್ಯ ಆದ್ರೆ ನನ್ನ ಹಳೆ ಗೆಳತಿಯನ್ನು ಮತ್ತೇ ನೋಡಬೇಕೆಂದಿದ್ದೆ ... ಆದರೆ ಎಲ್ಲರನ್ನೂ ಇಷ್ಟ ಪಡುತ್ತಿದ್ದ ಅವಳು ಈಗ ಅವಳನ್ನೂ ಇಷ್ಟಪಡುತ್ತಿಲ್ಲ !!... ಕನಸಿನ ಪುಟ್ಟ ಮನೆ ಅಡಿಪಾಯ ಹಾಕೋಕೂ ಮೊದಲೇ ನಿಂತಿದ್ದು ...
ಅವಳ ಪ್ರೀತಿಗೆ ಅವಳು ತೆತ್ತ ಪೆನಾಲ್ಟಿ ಮಾತ್ರ ಅವಳ ಪ್ರೀತಿಯ ಅವನು !!!
ಅವಳ ಗೊಂದಲದ ಪ್ರಶ್ನೆಗಳಿಗೆ ಉತ್ತರ ಕೊಡೊ ಪ್ರಯತ್ನ ಮಾಡದಿರು ಗೆಳೆಯ ... ಮತ್ತೇ ಒಲವಾದೀತು ನಿನಗೆ ... ಅಥವಾ ಬಿರುಕು ಬಿಟ್ಟ ಅವಳ ಹೃದಯ ಒಡೆದೀತು ಜೋಕೆ !!!
ಪ್ರೀತಿಯಲ್ಲಿ ಸೋತ ಹುಡುಗಿಯಿಂದ.....ಕಣ್ಣೀರಿನ ರುವಾರಿಯಾದ ಅವಳ ಪ್ರೀತಿಯೆಡೆಗೆ ....
ನಿನ್ನೆಡೆಗೆ ಇನ್ನೂ ಒಲವಿದೆ .... ಯಾಕಂದ್ರೆ ನೀನವಳ ಮೊದಲ ಪ್ರೀತಿ ... (ಕೊನೆಯ ಪ್ರೀತಿ ಸಹ )
ಇಲ್ಲಿ ಕಳೆದು ಹೋದ ಆ ಗೆಳತಿಯ ಪ್ರೀತಿ ಇನ್ನೆಲ್ಲೋ ಚಿಗುರಲಿ...
ReplyDeleteಗೆಳೆಯನಿಂದ ಸತ್ತ ಪ್ರೀತಿ ಬದುಕಿನೆಡೆಗಿನ ಪ್ರೀತಿಯ ಕೊಲ್ಲದಿರಲಿ...
ಚಂದದ ಬರಹ ಭಾಗ್ಯ...
ಥ್ಯಾಂಕ್ಸ್ ಜಿ :)ಪ್ರೀತಿಯಲ್ಲಿ ಸೋತವರು ಬದುಕಿನಲ್ಲಿ ಗೆಲ್ಲಲಿ ಎಂಬುದು ನನ್ನ ಆಶಯ ಕೂಡ .ಆದರೆ ಒಮ್ಮೆ ಪ್ರೀತಿಯಲ್ಲಿ ಸೋತ ಹುಡುಗಿ ಇನ್ಯಾರನ್ನೂ ಪ್ರೀತಿಸೋ ಮನಸ್ಸು ಮಾಡಲಾರಳು .... ಅಂದದ ಪ್ರತಿಕ್ರಿಯೆಗೆ ಧನ್ಯವಾದ
Deleteಪ್ರೀತಿ ಹರಿಯುವ ನೀರಿನಂತೆ ಹರಿದಷ್ಟು ಹರಿಯುತ್ತದೆ ನಿಂತರೆ ಪಾಚಿ ಕಟ್ಟುತ್ತದೆ. ಹರಯದ ಪ್ರೀತಿಯಲ್ಲಿ ಆಕರ್ಷಣೆ ಕಳೆದ ಮೇಲೆ ಉಳಿಯುವುದು ಬರಿ ಘರ್ಷಣೆ. ಬೇಕು ಎಂದಾಗ ಸಿಗದೇ ಬೇಡ ಎಂದಾಗ ಬರುವ ಈ ಚಂಚಲತನ ಎಲ್ಲಾ ಜೀವಿಗಳನ್ನು ಕಾಡುವ ಒಂದು ವೇದನೆ.
ReplyDeleteನಿನ್ನ ಬರಹದ ತೀಕ್ಷ್ಣತೆ ತೀವ್ರವಾಗಿದೆ. ಅಭಿನಂದನೆಗಳು
ಧನ್ಯವಾದ ಶ್ರೀಕಾಂತ್ ಜಿ .... ಒಲವಿನ ಮಹಾನದಿ ಆಗಬೇಕಿದ್ದ ಅವರ ಪ್ರೀತಿ ನಿಂತ ನೀರಾಗಬಾರದಿತ್ತು !!... ಹರೆಯದ ಪ್ರೀತಿ ನಿಜವಲ್ಲ ಬಿಡಿ .... ಚಂದದ ಪ್ರತಿಕ್ರಿಯೆ :)
Deleteಭಾಗ್ಯ, ಇಷ್ಟ ಆಯ್ತು....
ReplyDeleteಅವನು, ಅವಳು.....
ಅವನಿಲ್ಲ....ಅವಳೂ ಕಳೆದುಹೋದಳು....
ಥ್ಯಾಂಕ್ಸ್ ಸುಮತಿ .... ಅವರ ನಡುವೆ ಮೌನವಾಗಿ ಮಾತು ಬೆಳೆದಿತ್ತು .... ಮೊದಲೇ ಮಾತು ಬಾರದ ಅವಳು ,ಅವನಿಲ್ಲದೇ ಕಳೆದೇ ಹೋದಳೇ ?
Deleteನಾವು ಕಳೆದು ಹೋದ ಪ್ರೀತಿಗಳ ಹುಡುಕಾಟದಲ್ಲೇ ಬಹಳ ನೊಂದಿರುತ್ತೇವೆ. ಜಗತ್ತಿನಲ್ಲಿ ಯಾರ ಪ್ರೀತಿಯೂ ಕಳೆದು ಹೋಗಲೇ ಬಾರದು.
ReplyDeleteಆದರೆ ನಿಜವಾದ ಪ್ರೀತಿ ಅದು ಎಲ್ಲೇ ಸಂಭವಿಸಿದರೂ ಅದು ಸಾಕ್ಷಾತ್ಕಾರವಾಗಲಿ ಎನ್ನುವುದು ನನ್ನ ಆಶಯವಷ್ಟೇ. ನಿಜವಾದ ಒಲುಮೆಗೆ ಜಯ ಸಿಕ್ಕಲೇ ಬೇಕು...
ನಿಜ ಬದರಿ ಸರ್ .... ಒಲವು ಜಾರಬಾರದಿತ್ತು .... ಮನ ಮುರಿಯಬಾರದಿತ್ತು .... ಧನ್ಯವಾದ ... ಬರ್ತಾ ಇರಿ :)
Deleteಭಾವನೆಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದೀರಿ. ಈ ಪ್ರೀತಿಯೇ ಹೀಗೆ, ಒಗಟಿನ ಹಾಗೆ. ಹುಟ್ಟುವವರೆಗೆ ಒದ್ದಾಟ, ಹುಟ್ಟಿದ ಮೇಲೆ ಹುಚ್ಚಾಟ.
ReplyDeleteಧನ್ಯವಾದ ವಿಜಯ್ ಸರ್ .... ತಪ್ಪು ಒಪ್ಪುಗಳನ್ನ ತಿಳ್ಸಿ ಕೊಡ್ತಾ ಇರಿ :)
Deleteಹರೆಯದ ಆಕರ್ಷಣೆಗಳೆಲ್ಲ ಪ್ರೀತಿಯಲ್ಲ. ಹಾಗಂತ ನಿಜವಾದ ಪ್ರೀತಿ ಆಗಲ್ಲ ಆ ವಯಸ್ಸಿನಲ್ಲಿ ಅಂತಾನೂ ಅಲ್ಲ. ಆಕರ್ಷಣೆಗಳ ಅರ್ಥ ತಿಳಿದಿರಬೇಕಷ್ಟೇ. ಆದ್ರೆ ಪುಟ್ಟ ಮನಸ್ಸು ಎಡವುತ್ತೆ ಕೆಲವೊಮ್ಮೆ. ಒಂದು ಅಂತ್ಯದಲ್ಲಿ ಮತ್ತೊಂದು ಆದಿಯೂ ಇರುತ್ತೆ ನನ್ನ ಪುಟ್ಟ ಗೆಳತಿ... ಮೊದಲ ಮಳೆಗೆ ಮುಖವೊಡ್ಡಿ ನಿಂತ ನಿನ್ನ ದುಃಖಗಳೆಲ್ಲ ಮಳೆಯಲ್ಲಿ ಕೊಚ್ಚಿ ಹೋಗಲಿ. ಶುಬ್ರಾಕಾಶದಂತೆ ಮತ್ತೆ ತಿಳಿಯಾಗಲಿ ಮನಸ್ಸು.. ಎಲ್ಲ ಸರಿಯಾಗುತ್ತೆ. ಬದುಕು ಕೈ ಹಿಡಿದು ನಡೆಸಲಿ ನಿನ್ನ. ಎಡವಿದ್ದು ಸಣ್ಣ ತಿರುವಲ್ಲಿ , ಹೆದರುವ ಅವಶ್ಯಕತೆಯಿಲ್ಲ. ಬದುಕ ತುಂಬಾ ನಿನ್ನ ಜಾಗೃತೆಯಿಂದ ನಡೆಸುವ ಕೈಗಳಿವೆ..
ReplyDeleteಭಾಗ್ಯಾ ಪುಟ್ಟ ಚಂದದ ಬರಹ..
ಪ್ರೀತಿಯಿಂದ ,
ಸಂಧ್ಯಾ
ಧನ್ಯವಾದ ಸಂಧ್ಯಕ್ಕ ಪ್ರೀತಿಯ ಪ್ರತಿಕ್ರಿಯೆಗೆ
Deleteಎಡವಿದ್ದು ಸಣ್ಣ ತಿರುವೇ ಅದರೂ ಆದದ್ದು ಸಣ್ಣ ನೋವಿನ ಗಾಯವಲ್ಲ :)ಮನವನ್ನ ಘಾಸಿ ಗೊಳಿಸಿದ ಕಲೆಯಾಗಿ ಉಳಿದು ಹೋದ ದೊಡ್ಡ ಗಾಯ .... ಅವಳ ಜೀವನ ಕೈ ಹಿಡಿಯಲಿ ಎಂಬುದು ನನ್ನ ಆಶಯ ಸಹ
ಹರೆಯದ ಪ್ರೀತಿ ಅಂತ್ಯವಾಗುವ ಬಗೆ ಹೀಗೆಯೇ... ಚಂದದ ನಿರೂಪಣೆ ತಂಗ್ಯವ್ವಾ...
ReplyDeleteಥ್ಯಾಂಕ್ಸ್ ಅಕ್ಕಯ್ಯ :)ಆದ್ರೂ ಆ ಪ್ರೀತಿ ಅಂತ್ಯವಾಗ್ಬರ್ದಿತ್ತು ಅಲ್ವಾ ?
Deleteಪ್ರೀತಿಗಿಂತ ಬದುಕು ದೊಡ್ಡದು, ಕಾಲ ಅದಕ್ಕಿಂತಲೂ
ReplyDeleteಕಾಲ ಕಲಿಸುತ್ತದೆ ಮತ್ತೆ ಪ್ರೀತಿಸುವುದನ್ನ, ಬದುಕು ಪ್ರೀತಿಯಾಗುತ್ತದೆ ಕಾಲನ ಪಾಠದಲ್ಲಿ
ನೊಂದ ಮನಸ್ಸಿಗೆ ಸಾಂತ್ವನ ಸಿಗಲಿ ಮಳೆ ಹನಿಗಳ ತಂಪಿನಲಿ
ಚೆಂದನೆಯ ಬರಹ...
ಥ್ಯಾಂಕ್ಸ್ ರಘು ಅಣ್ಣ :)ನನ್ನ ಬ್ಲಾಗ್ ಗೆ ಸ್ವಾಗತ
Deleteಕಾಲನ ಕೈನಲ್ಲಿ ಎಲ್ಲರೂ ಚಿಕ್ಕ ಪಾತ್ರಗಳೇ ಬಿಡಿ ....
ನೊಂದ ಮನಕ್ಕೆ ಸಾಂತ್ವಾನ ಸಿಗಲಿ
ಪ್ರೀತಿ ಎನ್ನುವುದೊಂದು ಮಧುರ ಅನುಭೂತಿ. ಹೀಗೇನೇ ಅಂತ ಮೇರೆ ಕಟ್ಟಿ ಹೇಳೋಕಾಗಲ್ಲ..
ReplyDeleteಹುಡುಗ ಕೆಲವೊಮ್ಮೆ ಹುಡುಗಿ ಕೆಲವೊಮ್ಮೆ ತನ್ನ ತನವನ್ನು ಬಿಟ್ಟು ಅವರವರಿಗಾಗಿ ಬದಲಾಗಿಬಿಡ್ತಾರೆ..
ಅದರ ಜೊತೆ ಜೊತೆಗೇನೇ ನಿರೀಕ್ಷೆಗಳೂ ಬೆಳೆದು ಬಿಡುತ್ವೆ... ಅಲ್ಲೇ ಯಡವಟ್ಟಾಗೋದು... ಪ್ರತೀ ಸಲ ಾ ನಿರೀಕ್ಷೆಗಳಿಗೆ ಸಣ್ಣ ಸಣ್ಣ ಪೆಟ್ಟು ಬಿದ್ದಾಗ್ಯೂ ಹೃದಯ ದೊಡ್ಡದಾಗಿ ಚೀರಿ ಬಿಡುತ್ತೆ...
ಎಲ್ಲೋ ಕಳೆದು ಹೋದ ಪ್ರೀತೀನಾ ಮತ್ತೆಲ್ಲೋ ಹುಡುಕಿಕೊಳ್ಳೊದೆಂದ್ರೆ ಕಷ್ಟ...
ಆಕೆಯದು ಮೊದಲ ಪ್ರೀತೀನೋ ಆಕರ್ಷಣೇನೋ..
ಅದನ್ನ ಸೋಲು ಅಂತ ಯಾಕಂದ್ಕೋಬೇಕು.
ಪಾಠ ಅಂದ್ಕೊಂಡ್ರೆ? ಸಂಧ್ಯಾ ಅಂದಿದ್ದು ನಿಜ..
ಎಡವಿದ್ದು ಸಣ್ಣ ತೀರದಲ್ಲಿ...
ಮುಂದಿದೆ ಮಹಾನದಿ...
ಅಂದದ ಬರಹ..... ಶುಕ್ರಿಯಾ...
ಆತ್ಮೀಯ ಪ್ರತಿಕ್ರಿಯೆಗೊಂದು ಶುಕ್ರಿಯಾ .. ಪ್ರೀತಿಯಲ್ಲಿ ನಿರೀಕ್ಷೆ ಇರಬಾರದಿತ್ತು ಅಂತೀರಾ ?.... ಪ್ರೀತಿಯ ಅಲೆಗೆ ದೂರವಾದ ಇಬ್ಬರನ್ನ ಸೇರಿಸೋ ಶಕ್ತಿ ಸಿಗಲಿ :)
Deleteಬರ್ತಾ ಇರಿ
ಹುಚ್ಚು ಪ್ರೀತಿ. ಪ್ರೀತಿಯಲ್ಲಿ ಜನ ಮೈಮರೆಯುತ್ತಾರೆ ಅದು ಹೇಗೆ ಅನ್ನುವುದು ಯಾರಿಗೂ ತಿಳಿಯದ ವಿಷಯ. ನಾವೇನು ನಮ್ಮ ಅಂತಸ್ತೆನು ಅಂತ ತಿಳಿಯದೆ ಪ್ರೀತಿಯ ಮೋಡಿಗೆ ಬಲಿಯಾಗುತ್ತಿರುವುದು ನಿಜಕ್ಕೊ ವಿಷಾದದ ಸಂಗತಿ. ಪ್ರೀತಿಯಲ್ಲಿ ಜಾತಿ ಭೇದವಿಲ್ಲ, ಸಿರಿತನ ಬಡತನವಿಲ್ಲ ಅಂತ ಹೇಳುವವರು ಅದೆಷ್ಟು ಜನ ಆದರೆ ಸ್ವಲ್ಪ ಮುಂದಿನ ಜೀವನದ ಬಗ್ಗೆ ನಿಧಾನವಾಗಿ ಯೋಚಿಸಿದರೆ ನಾವು ಯಾರನ್ನ ಪ್ರೀತಿಸಲು ಯೋಗ್ಯವಾಗಿದ್ದೇವೆ ಅನ್ನುವುದು ಸ್ವಲ್ಪ ಮಟ್ಟಿಗಾದರೂ ತಿಳಿಯುತ್ತೆ. ಆದರೆ ಸದ್ಯದ ಪರಿಸ್ತಿತಿ ಹೇಗಿದೆ ಅಂದರೆ ಯೋಚಿಸುವುದರೊಳಗೆ ಹುಡುಗಿ ಬಸುರಿಯಾಗಿರುತ್ತಾಳೆ. ಪ್ರೀತಿಯ ನಿಜವಾದ ಅರ್ಥ ತಿಳಿಯುವುದರೊಳಗೆ ಅನರ್ಥವಾಗಿರುತ್ತದೆ. ಸ್ವಲ್ಪ ಯೋಚಿಸಿ ಒಬ್ಬ ಮಧ್ಯಮ ವರ್ಗದ ಹುಡುಗ ಶ್ರೀಮಂತ ವರ್ಗದ ಹುಡುಗಿಯನ್ನ ಪ್ರೀತಿಸುತ್ತಾನೆ, ಅವಳೂ ಇವನನ್ನ ಪ್ರಿತಿಸುತ್ತಾಳೆ ಅಂತ ಇಟ್ಟುಕೊಳ್ಳೋಣ ಆದರೆ ಮದುವೆಯಾದ ಮೇಲೆ ಅವನು ಅವಳಳನ್ನ ಸುಖವಾಗಿ ನೋಡಿಕೊಳ್ಳಬಹುದೇ? ಅವಳು ಪ್ರಿತಿಗಾಗಿ ಎಲ್ಲ ತ್ಯಾಗ ಮಾಡಿ ಬಂದರೂ ಮುಂದಿನ ಜೀವನದಲ್ಲಿ ಚಿಕ್ಕ ಪುಟ್ಟ ಕಾರಣಕ್ಕಾಗಿ ಜಗಳ ಶುರುವಾಗಿ ಡಿವೋರ್ಸ್ ತನಕವೂ ಹೋಗಬಹುದು. ಪ್ರೀತಿ ಅಂದರೆ ಏನು ಅನ್ನುವುದನ್ನ ಸರಿಯಾಗಿ ಅರ್ಥಮಾಡಿಕೊಳ್ಳಿ ಮೊದಲು. ಒಂದು ಹುಡುಗಿ ನೋಡೋಕೆ ತುಂಬಾ ಸುಂದರವಾಗಿದ್ದಾಳೆ ಅಂದರೆ ಅವಳನ್ನ ಲವ್ ಮಾಡೋರು ಅದೆಷ್ಟೋ ಜನ ಅದೇ ರೀತಿ ಒಬ್ಬ ಹುಡುಗ ಸ್ಮಾರ್ಟ್ ಆಗಿ ಒಳ್ಳೆ ಬೈಕ್ ತಗೊಂಡು ಸುಂಯ್ ಅಂತ ಹೋದ್ರೆ ಅದೆಷ್ಟು ಹುಡುಗಿಯರ ಕಣ್ಣು ಬಿಳೋಲ್ಲ. ಇವೆಲ್ಲ ಪ್ರೀತಿನ ಸ್ವಲ್ಪ ವಿಚಾರ ಮಾಡಿ, ಬರೀ ಆಕರ್ಷಣೆಯೆಂದರೆ ಪ್ರಿತಿಯಲ್ಲ ಅನ್ನುವುದನ್ನ ತಿಳಿದುಕೊಳ್ಳಿ. ನಿಮ್ಮ ಬದುಕನ್ನ ನೀವೇ ಯಾಕೆ ಹಾಳು ಮಾಡಿಕೊಳ್ತಾ ಇದ್ದೀರಾ? ಕೆಲ ಕ್ಷಣದ ಸುಖ ನಿಮ್ಮ ಇಡೀ ಜೀವನವನ್ನೇ ಹಾಳು ಮಾಡಿಬಿಡುತ್ತದೆ.
ReplyDeleteಪ್ರೀತಿ ಮಾಡೋದು ತಪ್ಪಲ್ಲ, ನಿಧಾನವಾಗಿ ಯೋಚಿಸಿ ನಿಮ್ಮ ಯೋಗ್ಯತೆಗೆ ಅನುಗುಣವಾಗಿ ಪ್ರೀತಿ ಮಾಡಿ.
ಇಂಥಹ ಕಥೆಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಬೇಕು. ಕಥೆಯ ಜೊತೆಗೆ ಉತ್ತಮ ಸಂದೇಶಗಳನ್ನ ಕೂಡ ಓದುಗರಿಗೆ ನೀಡಿ. ಇದರಿಂದ ಮನೋರಂಜನೆಯ ಜೊತೆಗೆ ಸ್ವಲ್ಪ ಬುದ್ದಿಯೂ ಸುಧಾರಿಸಲಿ.
ಶುಭವಾಗಲಿ.
ಧನ್ಯವಾದ ... ಪ್ರಯತ್ನ ಮಾಡೋಣ :)
Deleteಬರ್ತಾ ಇರಿ ತಪ್ಪು ಒಪ್ಪುಗಳನ್ನ ತಿಳಿಸೋದಕ್ಕೆ
ನಿಮ್ಮ ಕಲ್ಪನೆಯ ಹುಡುಗನಂತಹವನು ನಿಮ್ಮ ಗೆಳತಿಗೆ ಸಿಗಲಿ.. ಈ ಕ್ಷಣಿಕ ಪ್ರೀತಿಯ ಗಾಯ ಮಾಸಲಿ.. ಬರಹ ಚೆನ್ನಾಗಿದೆ..
ReplyDeleteಕಲ್ಪನೆಯ ಹುಡುಗ ಕಲ್ಪನೆಯಲ್ಲಿ ಮಾತ್ರ ಉಳಿಯೋನು ಗೆಳೆಯ .... ವಾಸ್ತವಕ್ಕೆ ಬರಲಾರ :)ಬಂದರೂ ಅನುಮೋದಿಸಲಾರ :)
Deleteಥ್ಯಾಂಕ್ಸ್ ಇಷ್ಟ ಪಟ್ಟಿದ್ದಕ್ಕೆ
ಭಾವಫೂರ್ಣ ಬರಹ...
ReplyDeleteಬರೆಯುತ್ತಿರು ಅನ್ನಬಹುದಷ್ಟೇ...ಬೇರೇನೂ ತೋಚುತ್ತಿಲ್ಲ...
ಈ ತರಹ ಬರಹಗಳು ನನಗೂ ಮಾದರಿಯಾಗಲಿ...
ನಮಸ್ತೆ :)
ಥ್ಯಾಂಕ್ಸ್ ಇಷ್ಟ ಪಟ್ಟಿದ್ದಕ್ಕೆ...
Deleteಬರ್ತಾ ಇರಿ ಚಿನ್ಮಯಣ್ಣ ... ನಮಸ್ತೆ
Superb.....:)
ReplyDeletethanks kavyakka...ನನ್ನ ಬ್ಲಾಗ್ ಗೆ ಸ್ವಾಗತ... ಬರ್ತಾ ಇರಿ
Deleteಸಿಂಪಲ್ಲಾಗ್ ೧ ಲವ್ ಸ್ಟೋರಿ..
ReplyDeleteಸಿಂಪಲ್ಲಾಗೇ ಹೇಳಕ್ಕು ಅಂದ್ರೆ ಚೆಂದಿದ್ದು :-)
ಇಡೀ ಕತೆಯಲ್ಲಿ ನಂಗೆ ಕಾಡಿದ್ದು
>>
ವರ್ಷದ ಮೊದಲ ಮಳೆಯಲ್ಲಿ ಯಾವಾಗಲೂ ಕುಣಿದು ಖುಶಿಸೋ ಗೆಳತಿ ಇವತ್ತು ಮಳೆಯಲ್ಲಿ ಸುಮ್ಮನೆ ಹನಿಗಳಿಗೆ ಮುಖವೊಡ್ಡಿ ನಿಂತಿದ್ದಾಳೆ .... ಗೆಳೆಯನ ನೆನಪಿಗೊಂದು ಅಶ್ರುತರ್ಪಣ ಬಿಟ್ಟು ಬರಲಿ ಎಂದು ನಾನೂ ಸುಮ್ಮನಿದ್ದೆ ...
ಸಾಧ್ಯ ಆದ್ರೆ ನನ್ನ ಹಳೆ ಗೆಳತಿಯನ್ನು ಮತ್ತೇ ನೋಡಬೇಕೆಂದಿದ್ದೆ ... ಆದರೆ ಎಲ್ಲರನ್ನೂ ಇಷ್ಟ ಪಡುತ್ತಿದ್ದ ಅವಳು ಈಗ ಅವಳನ್ನೂ ಇಷ್ಟಪಡುತ್ತಿಲ್ಲ !!... ಕನಸಿನ ಪುಟ್ಟ ಮನೆ ಅಡಿಪಾಯ ಹಾಕೋಕೂ ಮೊದಲೇ ನಿಂತಿದ್ದು ...
ಅವಳ ಪ್ರೀತಿಗೆ ಅವಳು ತೆತ್ತ ಪೆನಾಲ್ಟಿ ಮಾತ್ರ ಅವಳ ಪ್ರೀತಿಯ ಅವನು !!!
ಅವಳ ಗೊಂದಲದ ಪ್ರಶ್ನೆಗಳಿಗೆ ಉತ್ತರ ಕೊಡೊ ಪ್ರಯತ್ನ ಮಾಡದಿರು ಗೆಳೆಯ ... ಮತ್ತೇ ಒಲವಾದೀತು ನಿನಗೆ ... ಅಥವಾ ಬಿರುಕು ಬಿಟ್ಟ ಅವಳ ಹೃದಯ ಒಡೆದೀತು ಜೋಕೆ !!!
<<
ಸಖತ್ ಆಗಿದ್ದು.. ಒಂದು ವೇಗದಲ್ಲಿ ಸಾಗ್ತಾ ಇದ್ದ ಕತೆಗೆ ಭರ್ಜರಿ ಸತ್ವ ಸಿಕ್ಕಂಗೆ ಅನ್ಸಿದ್ದು ಅವಾಗ್ಲೆ..
"ಪಂಜು" ಲಿ ಪ್ರಕಟ ಆಗಿದ್ದಕ್ಕೆ ಅಭಿನಂದನೆಗಳು.
ಮಹಿಳಾ ದಿನದ್ದೂ ಶುಭಾಶಯ :-) ಹಿಂಗೇ ಬರಿತಾ ,ಬೆಳಿತಾ ಹೋಗು..
ಥ್ಯಾಂಕ್ಸ್ ಪ್ರಶಸ್ತಿ ಜಿ :)
Deleteವಿಶ್ವಾಸ ,ಹಾರೈಕೆ ಹೀಗೇನೆ ಇರ್ಲಿ ...
ಕುಶಿ ಅತು ... ಬರ್ತಾ ಇರಿ