ಮತ್ತೆ ಬಂದಿದೆ ಮಹಿಳೆಗೊಂದು ದಿನ !!
ಹಾಗೆ ನೋಡಿದ್ರೆ ಎಲ್ಲಾ ದಿನವೂ ಮಹಿಳೆಯರ ದಿನವೇ ....
ಬೆಳಿಗ್ಗೆ ಎದ್ದು ಬಾಗಿಲಿಗೆ ನೀರು ಬಿಟ್ಟು ರಂಗೋಲಿ ಹಾಕೋದ್ರಿಂದ ಶುರು ಆಗಿ ರಾತ್ರಿ ಅರೆ ಊಟ ಮಾಡಿ ಮಗುವನ್ನು ಮಲಗಿಸಲು ಹೋಗೋ ತನಕ ಅದು ಅವಳಿಗೇ ಮೀಸಲಾದ ದಿನ ... ಅವಳದ್ದೇ ದಿನಗಳೇ...
ಬಿಡುವಿಲ್ಲದ ದಿನಚರಿ ....
ಕೆಲವೊಂದಿಷ್ಟು ಕನಸುಗಳು ... ಕಣ್ಣ ಮುಂದಿನ ಗುರಿ .... ಹೆಗಲ ಮೇಲೆ ಬೆಟ್ಟದಷ್ಟು ಜವಾಬ್ದಾರಿಗಳು ... ಅತ್ತೆ ಮಾವಂದಿರ ಮೇಲಿನ ಕಾಳಜಿ ,ಅಪ್ಪ ಅಮ್ಮನ ಮರೆಯಲಾರದ ವಾತ್ಸಲ್ಯ ,ಮಮತೆಯ ಮಡಿಲಿನ ಸಾರ್ಥಕ್ಯ ... ಸದಾ ನಗುವಿನ ಮುಖ :)
ಬ್ಯುಸಿ ಆಗಿರುವ ಈ ಮಹಿಳೆ ಯಾವ ಪ್ರಧಾನಿಗೂ ಕಮ್ಮಿ ಇಲ್ಲ ...
ತನ್ನ ತನಗಳನ್ನ ಸಂಭಂದಿಗಳಿಗಾಗಿ ಮೀಸಲಿಡೋ ಏಕೈಕ ವ್ಯಕ್ತಿ ಅವಳು ...
ಜಾರುವ ಕಣ್ಣ ಹನಿಗಳನ್ನೋರೆಸಿಕೊಳ್ಳುತ್ತಾ ಬಾಲಿಶ ನಗುವನ್ನು ಸೂಸೋ ನಿಷ್ಕಲ್ಮಶ ವ್ಯಕ್ತಿತ್ವ ...
ಸದಾ ಹಸನ್ಮುಖಿ ....
ಬಾಲ್ಯದಲ್ಲಿ ಅಪ್ಪನ ಮುದ್ದಿನ ಮಗಳು ,ಬೆಳೆಯುತ್ತಾ ಸಮಾಜ ದಿಟ್ಟಿಸೋ ಹುಡುಗಿ ,ಕೆಲವೊಂದಿಷ್ಟು ಮಾತುಗಳನ್ನು ಎದುರಿಸಿಯೂ ಒಳ್ಳೆಯ ಕೆಲಸವನ್ನು ಹಿಡಿಯೋ ಪ್ರೌಡೆ .... ನಂತರ ಮದುವೆಯಾಗೊ ಹುಡುಗನ ಮೇಲೆ ಹರಿಯೋ ಪ್ರೀತಿ ... ಅತ್ತೆ ಮಾವಂದಿರ ಮುದ್ದಿನ ಸೊಸೆ ... ಅಪ್ಪ ಅಮ್ಮನ ಕಣ್ಮಣಿ .... ಕೆಲವೊಂದಿಷ್ಟು ಜವಾಬ್ದಾರಿಗಳು ....ಕೆಲಸಕ್ಕೆಂದು ಓಡೋ ಧಾವಂತ ... ಅಮ್ಮನಾಗೋ ಖುಷಿ ...
ತನ್ನದೇ ಅದ ಹೊಸ ಪ್ರಪಂಚದ ರಾಣಿ ....ಪ್ರಧಾನಿಗಿಂತಲೂ ದೊಡ್ಡ ಪಟ್ಟ ನಿನ್ನದು
ಎಲ್ಲರನ್ನೂ ಎಲ್ಲವನ್ನೂ ನಗು ನಗುತಾ ನಿಭಾಯಿಸೋ ನಿನ್ನೀ ತಾಳ್ಮೆಗೆ ನನ್ನದೊಂದು ನಮನ ಗೆಳತಿ ...
ಓ ಕ್ಷಮಯಾ ಧರಿತ್ರಿ ,
ಪ್ರೀತಿ ಎಂದರೆ ನೀ ....
ಮಮತೆಯ ಪ್ರತಿರೂಪ ನೀ ...
ಧನ್ಯತೆಯ ಭಾವ ನೀ ...
ಮಾತು -ಧಾತುವಿನ ಸಮ್ಮಿಲನ ನೀ ...
ನಿನ್ನೀ ಸುಸಂಸ್ಕೃತ ಬದುಕಿಗೆ ,
ಗೌರವದ ಜೀವನ ಪ್ರೀತಿಗೊಂದು ನಮಸ್ಕಾರ ...
ಹೀಗೆಯೇ ಎಲ್ಲರನ್ನು ಪ್ರೀತಿಸೋ ನಿನ್ನ ಗುಣ ಸಮಾಜಕ್ಕೆ ಮಾದರಿಯಾಗಲಿ .... ಎಲ್ಲರೂ ನಮ್ಮವರೇ ತಾನೇ ... ಆದರಿಸೋ ಗೌರವಿಸೋ 'ನೀನು ನನ್ನಮ್ಮ ....
ನನ್ನ ಪ್ರೀತಿಯ ಅಕ್ಕ ....
ನಗುವನ್ನು ಹಂಚಿಕೊಳ್ಳೋ ಆತ್ಮೇಯೆ ....
ದುಃಖವನ್ನೂ ನಗುವಾಗಿ ಮಾರ್ಪಡಿಸೋ ಗೆಳತಿ ...
. ಶುದ್ಧ ತರಲೆ ಮಾಡೋ ತಂಗಿ .
.ಮುಗ್ಧ ಮನಸ್ಸಿನ ಸ್ವಚ್ಚಂದ ಕೂಸು ..
ಸಮಾಜದ ಹುಳುಕುಗಳನ್ನ ನಾಶ ಮಾಡೋ ಶಕ್ತಿ ಉಳ್ಳ ಜಗದ್ಮಾತೆ ....
ನೀ ಒಬ್ಬ ಹೆಣ್ಣು ....
ಹೆಮ್ಮೆ ಪಡು ಗೆಳತಿ ನೀ ಹೆಣ್ಣೆಂದು ....
ನಿನ್ನ ಸಮಾಜ ನಿಂತಿರೋದು ನಿನ್ನ ಮೇಲೆ ...
ಮಹಿಳೆ .... ಪ್ರೀತಿ .... ಒಲುಮೆ .... ಕರುಣೆ ... ಕ್ಷಮೆ ....
ಎಲ್ಲದ್ದಕ್ಕೂ ಅರ್ಥ ಒಂದೇ .... ಹೆಣ್ಣು :)
(on the onset of world women's day ,here is the dedication for all proud and happy womens:)...lets respect her feelings....lets feel her thoughts....)
(
ಪಂಜುವಿನಲ್ಲಿ ನನ್ನದೊಂದು ಪುಟ್ಟ ಲೇಖನ ....... ಪಂಜು ಬಳಗಕ್ಕೆ ಧನ್ಯವಾದ ....
ನಿಮ್ಮೀ ಪ್ರೋತ್ಸಾಹಕ್ಕೆ ನಾ ಆಭಾರಿ
http://www.panjumagazine.com/?p=1305)

ಉದಯರವಿ ಏಳುವಾಗ ಅವನಮ್ಮ ಹೇಳುತ್ತಾಳೆ "ಏಳು ಮಗುವೆ" ನೋಡು ನಿನಗಾಗಿ ಆಗಲೇ ಮಹಿಳಾಮಣಿ ಬಾಗಿಲು ಸಾರಿಸಿ ರಂಗೋಲಿ ಇಡುತಿದ್ದಾಳೆ, ಮನೆಯಲ್ಲಿರುವ ಎಲ್ಲಾರಿಗೂ ಕಾಫಿ ತಿಂಡಿ ಸಿದ್ಧ ಮಾಡಬೇಕು. ಅವಳಿಗೆ ನಿನ್ನ ಶಾಖ ಬೆಳಕು ಬೇಕು" ಸೂರ್ಯ ಉದಯಿಸುತ್ತಾನೆ.. ಮನೆಗೆಲಸ ಮುಗಿದಿರುತ್ತದೆ. ಸಂಜೆ ಆಗುತ್ತಿರುವಂತೆಯೇ ಮತ್ತೆ ರವಿಯ ಅಮ್ಮ ಹೇಳುತ್ತಾಳೆ ಕಂಡ ಬೇಗ ಮನೆಗೆ ಬಾ ನಿನಗಾಗಿ ಕಾಯುತ್ತಿರುವೆ. ಆ ಮಹಿಳಾ ಮಣಿಯು ಕೂಡ ಬೆಳಿಗ್ಗೆಯಿಂದ ದುಡಿದು ಸುಸ್ತಾಗಿದ್ದಾಳೆ ಸ್ವಲ್ಪ ತಂಪು ಬೇಕು.. ಚಂದ್ರ ಬರುತ್ತಾನೆ ತಂಪು ತರುತ್ತಾನೆ. ಹೀಗೆ ಪ್ರತಿಯೊಂದು ಕೆಲಸದಲ್ಲೂ ಹೆಣ್ಣಿನ ಪಾತ್ರ ಮಹತ್ತರವಾಗಿರುವ ಈ ಶಕ್ತಿಯನ್ನು ನೆನೆವ ಒಂದು ಸುಂದರ ದಿನ ಈ ಮಹಿಳಾ ದಿನ. ಈ ಆಚರಣೆಗೆ ನಿನ್ನ ಲೇಖನ ಚಂದವಿದೆ ಬಿ.ಪಿ. ಹಾಗೆ ಪಂಜುವಿನಲ್ಲಿ
ReplyDeleteಪ್ರಕಟಗೊಂಡಿದ್ದಕ್ಕೆ ಅಭಿನಂದನೆಗಳು.
ಸಖತ್ತಾದ ಲೇಖನಕ್ಕೆ ಸೂಪರ್ರಾದ ಪ್ರತಿಕ್ರಿಯೆ ಶ್ರೀಕಾಂತ್ ಜೀ.
Deleteಭಾಗ್ಯ ಹೇಳುವಂತೆ ಹೇಳ್ಬೇಕಂದ್ರೆ ಧನ್ಯವಾದ ಜೀ :-) :-)
ನಿಮ್ಮ ಪ್ರತಿಕ್ರಿಯೆ ನೋಡೋಕೆ ನಂಗೊಂದು ಖುಷಿ :)
Deleteಸುಂದರ ..... ಇಷ್ಟವಾಯ್ತು ನಿಮ್ಮ ಸೂರ್ಯ ಚಂದ್ರರ ಹೋಲಿಕೆ :)
ಧನ್ಯವಾದ ಜಿ :);)
ಪ್ರಶಸ್ತಿ ಜಿ :)ನಿಮ್ಗೂ ಧನ್ಯವಾದ ...
Deleteನನ್ ಹೆಸ್ರಿಗಿದೆ ಕಣ್ರೀ ಆ ಪೇಟೆಂಟ್ ;)copy ಮಾಡ್ ಬಿಟ್ರಾ :)ಇರ್ಲಿ ಇರ್ಲಿ
ಹೆತ್ತು ಹೊತ್ತು , ಸಾಕಿದ ತಾಯಿಗೆ ನಮನ.
ReplyDeleteಮಾ ತುಜೇ ಸಲಾಂ...
Good dedication to all the women.
thanks prashasti....ಬರ್ತಾ ಇರಿ ಬ್ಲಾಗ್ ಗೆ :)
ReplyDeleteಅವಳಿಲ್ಲದೇ ಜಗವಿಲ್ಲ ಎನ್ನುವುದನ್ನು ತುಂಬಾ ಮಾರ್ಮಿಕವಾಗಿ ನಿರೂಪಿಸಿದ್ದೀರಾ. ಆಕೆಯ ಶ್ರಮ ಕೆಲವೊಮ್ಮೆ ಗುರುತಿಸಲ್ಪಡದಿದ್ದರೂ ಆಕೆ ಕೊರಗುವುದೇ ಇಲ್ಲ. ಸಿಕ್ಕ ಪುಟ್ಟ ಶೋಷಣೆಗಳಿಗೂ ಹಾಕೆ ಸೊಪ್ಪು ಹಾಕುವುದೇ ಇಲ್ಲ.
ReplyDeleteಒಳ್ಳೆಯ ಲೇಖನ.
ಯಾಕಂದ್ರೆ ಆಕೆ ಹೆಣ್ಣು ಅಲ್ವಾ :)
Deleteಎಲ್ಲವನ್ನೂ ಸಹಿಸೋ ಗುಣವುಳ್ಳವಳು ...
ಥ್ಯಾಂಕ್ಸ್ ಬದರಿ ಸರ್ :)ಬರ್ತಾ ಇರಿ
ಪಂಜುವಿನ ಪುಟಗಳಲ್ಲಿ ನೋಡಿದೆ...
ReplyDeleteಖೂಷಿಯಾಯಿತು.
ಲೇಖನವೂ ಚನ್ನಾಗಿದೆ....
ನಿರೂಪಣೆ ಎದೆಗೆ ನವಿರಾಗಿ ಹಚ್ಚಿದ ಗಂಧದಂತೆ..
ಚನ್ನಾಗಿದೆ...
ಧನ್ಯವಾದ ರಾಘವ್ ಜಿ ಆತ್ಮೀಯ ಪ್ರತಿಕ್ರಿಯೆಗೆ
Delete:)thanks chinmay ji
ReplyDelete