Tuesday, August 13, 2013

ಸ್ತಬ್ಧ



ಮಂಜು ಮುಸುಕಿದ ಹಾದಿಯಲಿ ಮತ್ತದೇ ಮೌನದ ಒಬ್ಬಂಟಿ ಪಯಣದ ಜೊತೆಗೆ ಕನಸಿನೂರಿನ ಮನದ ಭಾವದ ಸಂತೆಯ ಮಾತೊಂದ ಹೇಳಬಂದೆ ನಾ....ಕೊನೆಗೂ ನಿನಗೆ ಪೂರ್ತಿಯಾಗಿ ಸೋತು....

ಮುದ್ದು ಗೆಳೆಯಾ,

ಆಶ್ಚರ್ಯವಾದೀತು ನಿನಗೀ ಸಂಭೋದನೆ .ವರ್ಷಗಳ ಹಿಂದೆ ನೀ ಬಯಸಿದ್ದ ನಿನ್ನದೇ ಹುಡುಗಿಯ ಭಾವವಿದು ಕಣೋ .ಇಷ್ಟದ ವಿಷಯದ ಬಗೆಗೆ ಒಂದೇ ಒಂದು ಮಾತಾಡು ಸಾಕು ಅಂತ ಪರಿ ಪರಿಯಾಗಿ ಬಿಕ್ಕಿದ್ದ ನಿನ್ನ ಮನಕ್ಕೊಂದು ಮುಷ್ಕರದ ನಡುವೆಯೂ ಮೌನವ ಮಾತ್ರ ಬಿಟ್ಟು ಅತೀ ಕಷ್ಟದಿಂದ ನಿನ್ನಿಂದೆದ್ದು (ನಿನ್ನ ಬದುಕಿಂದ) ಬಂದ ಅದೇ ಮೌನದ ಗೆಳತಿಯ ಭಾವವಿದು.

ಆದರೆ ನಿಂಗಿವತ್ತಿಲ್ಲಿ ಇದ ಕೇಳೋ ಮನವಿಲ್ಲದೇ ಇದ್ದೀತು ! ಆದರೂ ಮೌನದ ಮಾತೊಂದು ಮುರಿದು ನಾ ಮಾತಾಡಬಂದೆ ಅದೆಷ್ಟೋ ದಿನಗಳ ನಂತರ ಮತ್ತದೇ ಮೌನದ ಅರಮನೆಗೆ .ಇವತ್ತೀ ಭಾವವ ಹೇಳೋಕೆ ಧೈರ್ಯ ಬಂದಿದ್ದು ಮಾತ್ರ ನಿನ್ನ ವರ್ಷದ ಹಿಂದಿದ್ದ ಅದೇ ಕಾಳಜಿ ,ಪ್ರೀತಿಯ ಕಂಗಳ ಮತ್ತಿವತ್ತು ನೋಡಿದ ಮೇಲೆ .

ಅದೆಷ್ಟು ಚಂದದ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದೆ ..ನಿನ್ನದೇ ಕನಸುಗಳ,ನಿನ್ನ ಪುಟ್ಟ ಅರಮನೆಗೆ ಪ್ರೀತಿಯಿಂದ ಆಹ್ವಾನಿಸಿದ್ದ ಈ ಮುದ್ದು ರಾಜಕುಮಾರನ ಪ್ರೀತಿಯ ಅವತ್ತು ಒಪ್ಪಿಕೊಳ್ಳೋ ಮನಸು ,ಧೈರ್ಯ ಎರಡೂ ಇರಲಿಲ್ಲ ನಂಗೆ .ಗೋಗರೆದು ಕೇಳಿದ್ದ ಪ್ರೀತಿಯ ಚೂರನ್ನೂ ನಿನಗೆ ಕೊಡೋಕೆ ಇರದ ನನ್ನದೇ ಮನದ ಬಗೆಗೆ ನಂಗಿವತ್ತೂ ಬೇಜಾರಿದೆ .

ನಾ ಕಂಡ ಕನಸ ಬದುಕು ಎದುರುಗಿದೆ ಕಣೇ ..ಆದರೂ ನೀನಿಲ್ಲದ (ಸಿಗದ) ನೋವು ದಿನ ಕಾಡುತ್ತೆ ಅಂತ ತೀರಾ ಕೇಳದ ಸ್ವರದಲ್ಲಿ ಅವತ್ತಿದೇ ರಾತ್ರಿ ಬಿಕ್ಕಿದ್ದ ನಿನ್ನ ಧ್ವನಿಗೆ ಸ್ವಲ್ಪ ಮಟ್ಟಿಗೆ ಮನ ಕರಗಿದ್ದು ಸುಳ್ಳಲ್ಲ .ಆದರೆ ನಿನ್ನೆದುರು ನಾ ಸೋಲಲಾರೆ ಅನ್ನೋ ಹಠವೇ ಮನದ ಮಾತೊಂದ ಆಲಿಸೋಕೂ ಮುಂಚೆಯೇ ಆ ಸಣ್ಣ ಒಲವನ್ನ ತಳ್ಳಿಹಾಕಿತ್ತು .

ಚಂದದ ಬದುಕು,ಬಣ್ಣ ಬಣ್ಣದ ಕನಸುಗಳು,ಪ್ರೀತಿಸೋ ಮನೆ ಎಲ್ಲವುಗಳ ಮುಂದೆಯೂ ಎದ್ದು ಕಾಣೋದು ನಿನ್ನ ಮುಖ ಅಂತ ದಿನೇ ದಿನೇ ಭಾವುಕನಾಗಿ ನುಡಿಯೋ ನಿನಗೆಲ್ಲಿ ಪೂರ್ತಿಯಾಗಿ ಕಳೆದು ಹೋಗ್ತೀನೋ ಅನ್ನೋ ಭಯಕ್ಕೆ ಏನೋ ನಿನ್ನ ನಾ ಪೂರ್ತಿಯಾಗಿ ನಿರ್ಲಕ್ಷಿಸತೊಡಗಿದ್ದೆ .

"ನಿನ್ನ ಬಿಚ್ಚುನುಡಿಯಲ್ಲಿ ಕಂಡೆ

ವಾಸ್ತವಿಕತೆಯನ್ನಾ...

ನಿನ್ನ ಮುಗುಳ್ನಗೆಯಲ್ಲಿ ಕಂಡೆ

ಸಣ್ಣ ಪ್ರೀತಿಯ ಸೆಲೆಯನ್ನಾ ..."

ಹೀಗೇ ಏನೇನೋ ಸಾಲುಗಳ ಗೀಚಿಬಿಟ್ಟಿದ್ದೆಯಲ್ಲೋ ಹುಡುಗ ..ಮನದ ಭಾವಗಳ ಮುಚ್ಚಿಟ್ಟುಕೊಳ್ಳೋ ಶತ ಪ್ರಯತ್ನದಲ್ಲಿ ಸೋತೆ ಅನಿಸಿದಾಗಲೆಲ್ಲಾ ನಿನ್ನ ಮೇಲಿನ ನನ್ನ ಸಿಟ್ಟು ತಿರುಗೋದು ಮುಖದ ಮಂದಹಾಸದ ಕಡೆಗೆ ! ನಗು ಅನ್ನೋ ಪದವೇ ಮುಖದಲ್ಲಿ ಸುಳಿಯೋಕೆ ಬಿಟ್ಟಿರಲಿಲ್ಲ ! ಯಾಕೋ ಹುಡುಗ ನಿನ್ನನ್ನಷ್ಟು ದ್ವೇಷಿಸಬಂದೆ !

ನಾನೇ ಕಟ್ಟಿಕೊಂಡ ನನ್ನದೇ ಮನದ ಬೇಲಿಯ ದಾಟಿಯೂ ನೀ ಬಂದಿದ್ದೆ ನೋಡು ..ಅದೇ ಇದ್ದೀತು ಈ ತರದ ಭಯಂಕರ ದ್ವೇಷದ ಕಾರಣ


 
ಕೊನೆಗೊಮ್ಮೆ ಭಾವಗಳೇ ಇಲ್ಲದ ಹುಡುಗಿ ನೀ ಅಂತ ಧಿಕ್ಕರಿಸಿ ಎದ್ದು ಹೊರ ನಡೆದಿದ್ದೆ ನೀ ...

ಮನಸ್ಸಿನ ಮೇಲೆ ನಡೆದು ತೀರಾ ಬೇಕೆಂದಾದ ಹೊರ ಹೋಗಿದ್ದ ನಿನ್ನ ಮೇಲೆ ನಂಗಾಗಿದ್ದ ನಿರಾಸೆ ಅಷ್ಟಿಷ್ಟಲ್ಲ :( ಸ್ವಲ್ಪ ಸ್ವಲ್ಪವಾಗಿ ನಿನ್ನತ್ತ ವಾಲುತ್ತಿದ್ದ ಮನಕ್ಕೆ ಮೌನದ ಮುಖವಾಡ ಹಾಕಿ ಪಕ್ಕಕ್ಕೆ ಸರಿಸಿದ್ದೆ ಅಷ್ಟೇ ...ಅದೂ ಒಂದಿಷ್ಟು ಹೇಳಲಾಗದ ನನ್ನದೇ ಪರಿಸ್ಥಿತಿಗಳಿಗೆ ಕಟ್ಟುಬಿದ್ದು ...ಆದರಲ್ಲೊಂದು ದೊಡ್ಡ ಒಲವಿತ್ತು ಅನ್ನೋದ ನೀ ಅರ್ಥ ಮಾಡಿಕೊಳ್ಳೋಕೆ ಸೋತಿದ್ದೆ ...ಯಾವತ್ತೂ ಸೋಲದ ನಾನೂ ನಿನ್ನೆದುರು ಸೋಲಲೇ ಬಾರದೆಂಬ ಹಠದಲ್ಲಿ ಪೂರ್ತಿಯಾಗಿ ಸೋತು ಹೋಗಿದ್ದ ನೀ ಎದ್ದು ಹೋದ ಆ ದಿನ .

ನಿನ್ನ ಪ್ರೀತಿಯ ಅರಿವು ನಂಗಾಗಿದ್ದು ನೀ ಎದ್ದು ಹೋದ ಮೇಲೆ ...ದಿನವೂ ಮಾತಾಡೋ ಕೆ ನೀನಿದ್ದೆ....ನಾ ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಮತ್ತದೇ ಮಧುರ ಭಾವಗಳ ಹೊತ್ತು ಮಾತಾಡೋಕೆ ಬರುತ್ತಿದೆಯಲ್ಲ ಅನ್ನೋದ ನೆನಸಿಕೊಂಡ್ರೆ ನಾ ಮಾಡಿದ್ದ ತಪ್ಪು ,ಬೇಸರಗಳ ಮುಜುಗರ ಕಾಡುತ್ತಿತ್ತು ..

ಆದರೂ ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಇವತ್ತು ಎದುರು ಮಾತಾಡಬಂದೆ ನೋಡು ...attitude ಅಂದ್ರೆನೇ ನೀನು ಅಂತಿದ್ದ ಹುಡುಗ ಇಷ್ಟು ಬೇಸರಗಳ ನಂತರವೂ ನನ್ನಲ್ಲಿ ಮಾತಾಡ ಬಂದಿದ್ದಕ್ಕೊಂದು ಶರಣು ಕಣೋ ಗೆಳೆಯ.

ಆದರೆ ಇವತ್ತು ನಿನ್ನ ಕಂಗಳಲಿ ಪ್ರೀತಿಯ ಭಾವವೊಂದ ಹುಡುಕಿ ಸೋತೆ ನಾ ...ವರ್ಷಗಳ ಹಿಂದೆ ನಿನ್ನ ಬಿಟ್ಟು ಇನ್ನೇನೂ ಇರದಿದ್ದುದು ಇದೇ ಕಣ್ಣಲ್ಲೇ ಕಣೇ ಅಂತ ನಿನ್ನ ಪ್ರತಿನಿಧಿಸಿ ಅಣುಕಿಸಿತ್ತು ನಿನ್ನೀ ಕಂಗಳು ...

ಪ್ರೀತಿ ಕಂಗಳಲ್ಲಿ ದಿವ್ಯ ನಿರ್ಲಕ್ಷವೂ ಇರಲಿಲ್ಲವಲ್ಲೋ ಹುಡುಗ ! ಸ್ವಲ್ಪ ಸಮಾಧಾನವಾಗಿದ್ದು ಇಲ್ಲಿಯೇ .

ಮೌನದ ಭಾವವೊಂದ ಮನಬಿಚ್ಚಿ ಹೇಳೋಕೆ ಬಂದ ನಂಗೆ ನಿನ್ನ ಕಂಗಳಲ್ಲಿನ ತಟಸ್ಥ ಮೌನವ್ಯಾಕೋ ಸಹ್ಯವಾಗಲೇ ಇಲ್ಲ ..ನೀ ನನ್ನ ಕಣ್ಣಂಚ ಭಾವಗಳಿಗೆ ಸಂಭಂದಿಸಿದವನೇ ಅಲ್ಲ ಅನ್ನೋ ತರ ದೂರದ ತಿರುವು ನೋಡಿ ನಿನ್ನ ಮೌನ ಸಾಧಿಸಿದೆ .. ನಿನ್ನ ಮೌನ ಸಾಮ್ರಾಜ್ಯದ ಗೋಡೆಯ ಹಾರಿ ಬರೋ ಸಣ್ಣ ಪ್ರಯತ್ನ ಮಾಡದೇ ಹಾಗೆ ಕೈ ಕಟ್ಟಿ ಕುಳಿತುಬಿಟ್ಟೆ ..

ಇನ್ನೊಮ್ಮೆ ಪ್ರೀತಿಯ ನಿವೇದನೆ ಮಾಡಿಕೊಂಡು ಬಿಡೋ ..ಕಣ್ಮುಚ್ಚಿ ನಿನ್ನ ತೋಳಂಚ ಸೇರಿಬಿಟ್ಟೇನು ...


 
ನನ್ನ ಮೌನಕ್ಕೆ ನಿನ್ನ ಮೌನದ ಸಾಥ್ ಬೇಡ ಮುದ್ದು ...ಪರವಾನಿಗೆ ಪಡೆಯದೇ ಪ್ರೀತಿಯ ಹೇಳಿಕೊಂಡು ಈಗ ಎಲ್ಲವ ಮರೆತು ನಿನ್ನಷ್ಟಕ್ಕೆ ನೀನಿರೋ ತರ ಭಾವಗಳ ತೋರ್ಪಡದೇ ಇರಬಲ್ಲೆ ಅನ್ನೋ ಭ್ರಮೆಯ ಬಿಟ್ಟು ಬಿಡು ...ಯಾಕಂದ್ರೆ ನಿನ್ನ ನಾಜೂಕು ಭಾವಗಳೆ ನನ್ನ ಬದುಕ ಚಿತ್ತಾರವಾದೀತು...ನಿನ್ನ ಪ್ರೀತಿಗೆ ಅವಳ ಎರಡರಷ್ಟು ಹಠ ತೋರಿದ್ದ ಅದೇ ಹುಡುಗಿಯಾಗಿ ಮತ್ತೆ ಕೇಳ್ತೀನಿ ಕಣೋ ...ಮತ್ತೊಮ್ಮೆ ಹೇಳಿಬಿಡು " you are my world ".

ಆದರೂ ಇವತ್ತಿನ ನಿನ್ನ ಬಿರುನಡೆಯಲ್ಲಿ ಕಂಡೆ

ಧೃಡತೆಯ ನಾ..

ಈ ತಿರುವಲ್ಲಿ ಮೌನವ ಗೆಲ್ಲೋಕೆ ಹೋಗಿ ಬದುಕಿಗೆ ಬೆನ್ನು ಮಾಡಿ ಕೊನೆಗೂ ನನ್ನ ಸೋಲಿಸಿ ಹೋದ ನಿನ್ನನ್ನೇ ಇನ್ನೊಂದು ತಿರುವಿನಲ್ಲಿ ನಿರೀಕ್ಷಿಸುತ್ತಾ ....
ನಿನ್ನವಳು.

 

 

34 comments:

  1. hum nice............avaradde prapancha namagali tusu jaagavideya?

    ReplyDelete
    Replies
    1. ಥಾಂಕ್ಸ್ ಜಿತೇಂದ್ರಣ್ಣಾ ....

      ಭಾವಗಳ ವಿನಿಮಯದಲ್ಲಂತೂ ಪಾಲಿದ್ದೇ ಇದೆ :)

      ಇನ್ನೊಂದು ಭಾವದ ಜೊತೆ ಮತ್ತೆ ಜೊತೆಯಾಗ್ತೀನಿ

      Delete
  2. Replies
    1. ಧನ್ಯವಾದ ಸುನಾಥ್ ಸರ್ :)

      ಪ್ರೋತ್ಸಾಹ ಹೀಗೆ ಇರ್ಲಿ ...

      ಭಾವಗಳ ಬವಿನಿಮಯದಲ್ಲಿ ನಾ ಮತ್ತೆ ಜೊತೆಯಾಗ್ತೀನಿ

      Delete
  3. ಯಪ್ಪಾ ಯಪ್ಪಾ

    ಪ್ರೇಮಿಯ ಮನದ ದುಗಡವನ್ನು ಹೊರಹಾಕುವ ಪರಿ ಸೂಪರ್.. ಎಲ್ಲಿಂದ ತರ್ತೀಯಾ ಈ ರೀತಿಯ ಭಾವ ಪುಂಜವನ್ನ.. ಮೊಗೆದಷ್ಟು ಸಿಹಿ ಕೊಡುವ ಊರು ಸಿಹಿಮೊಗ್ಗೆ ಅಥವಾ ಶಿವಮೊಗ್ಗೆ... ನಿನ್ನ ಬರಹಗಳನ್ನು ಮೊದಲಿಂದಲೂ ಓದುತ್ತಿರುವ ನನಗೆ ನೀ ಹೊರಹಾಕುವ ಪರಿ ಪರಿ ಭಾವಗಳು ಒಂದು ರೀತಿಯ ಅಚ್ಚರಿಯ ಕಡಲಲ್ಲಿ ತೇಲಿಸುತ್ತದೆ. ಬಯಸಿ ಬಂದ ಸಂಪತ್ತನ್ನು ಪಕ್ಕಕ್ಕೆ ಜರುಗಿಸಿ ಆಮೇಲೆ ಮನ ಹಿಂಡುವಂತೆ ಮನದಾಳದ ಮಾತನ್ನು ಹೊರಗೆಳೆಸಿ ಬರೆಯಿಸುವ ಪರಿ ಸೂಪರ್.. ನಿನ್ನ ಲೇಖನಕ್ಕೆ ಒಂದು ಶರಣು ಅನ್ನದೆ ಬೇರೆ ಪದಗಳು ನನಗೆ ತಾಕುತ್ತಿಲ್ಲ.. ಸೂಪರ್ ಬಿ ಪಿ.

    ReplyDelete
    Replies
    1. ಅವಳದ್ದು ಸಿಹಿಮೊಗೆ ಅಲ್ಲ ಜೀ.. ಚಿಕ್ಕಮಂಗಳೂರು..
      ಚಿಕ್ಕಮಂಗಳೂರ.. ಹಾಡು ನೆನ್ಪಿದೆಯಲ್ವಾ ? :-)

      Delete
    2. ಶ್ರೀಕಾಂತಣ್ಣಾ ....

      ನಿಮ್ಮೀ ಪ್ರೋತ್ಸಾಹಕ್ಕೊಂದು ಶರಣು ...ಪ್ರೀತಿ ಪ್ರೇಮದ ಭಾವಗಳನ್ನೆನೋ ಬರೆಯಬಹುದು ..ಆದರೆ ಇದ ಬಿಟ್ಟು ಉಳಿದ ಭಾವಗಳ ಪೋಣಿಸೋವಲ್ಲಿ ಎಲ್ಲಿ ಎಡವ್ತೀನೋ ಅನ್ನೋ ಭಯ ಇದ್ದೆ ಇದೆ ..ಆದರೂ ಬೇರೋಂದು ತರಹದ ಭಾವವ ಹೇಳೋ ಪ್ರಯತ್ನ ಅಂತೂ ನಡೆಯುತ್ತೆ :)

      ಥಾಂಕ್ ಯು . ಅಗೈನ್

      Delete
    3. ಪ್ರಶಸ್ತಿ ...

      ನನ್ನೂರು ಶಿವಮೊಗ್ಗ ಅಲ್ಲಾ :ಫ್ ..ಸೋ ನಂಗೆ ನೋ ಹಾಡು ...
      ಆದರೇ ನಿಮ್ಮೂರು (ತಾಲೂಕು ಅಟ್ಲೀಸ್ಟ್ ) ಶಿವಮೊಗ್ಗ :ಫ್

      ಸೋ ಹಾಡು ಸಲ್ಲಬೇಕಿರೋದು ನಿಮ್ಗೇನೇ (ಬೇಕಿತ್ತಾ ಹಾಡು ಹೇಳೋದು ) ;)

      ಭಾವಗಳ ತೇರಲ್ಲಿ ಸಿಕ್ತಿರೋಣ

      Delete
  4. ಮೌನ ಮಾತಾಗಿದೆ.. ಮಾತುಗಳು ಮನತಾಕಿದೆ ಮುದ್ದಕ್ಕಾ...
    ಆ ಹುಡುಗ ಇದನ್ನು ಓದಿದರೆ ಮರುಕ್ಷಣವೇ ನಿನ್ನ ಕಿವಿಯಲ್ಲಿ ಪಿಸುದನಿಯಲಿ ಉಸುರದಿರಲಾರ ಅವನ ಮನದ ಮಾತ... ಚಂದ ಇದೆ ನಿನ್ನಂತೆ...

    ReplyDelete
    Replies
    1. ಥಾಂಕ್ ಯು ಪುಟ್ಟಕ್ಕಾ ...

      ಭಾವಗಳನ್ನ ಪ್ರೀತಿಯಿಂದ ಓದಿ ಅದಕ್ಕೊಂದು ಸ್ವಗತದ ಅರಿವು ಕೊಡೋ ನಿಮಗೊಂದು ಶರಣು ...

      ಮತ್ತದೇ ಪ್ರೀತಿಯ ನಿರೀಕ್ಷೆ ಆ ಹುಡುಗಿಯದೂ ಸಹ ..

      ಭಾವಗಳ 'ವಿನಿ'ಮಯದಲ್ಲಿ ಮತ್ತೆ ಮತ್ತೆ ಸಿಕ್ತಿರೋಣ ;)

      Delete
  5. ಪುಟ್ಟು ,

    ಏನೆಂದು ಹೇಳಲೇ ನಿನ್ನೀ ಚಂದದ ಭಾವ ಗುಚ್ಛಕ್ಕೆ ....

    ಇನ್ನೊಮ್ಮೆ ಪ್ರೀತಿಯ ನಿವೇದನೆ ಮಾಡಿಕೊಂಡು ಬಿಡೋ ..ಕಣ್ಮುಚ್ಚಿ ನಿನ್ನ ತೋಳಂಚ ಸೇರಿಬಿಟ್ಟೇನು ...

    ಇದನ್ನ ಓದಿದರೆ ಆ ಹುಡುಗ ಬರದೇ ಇದ್ದಾನೆಯೇ ???

    ReplyDelete
    Replies
    1. ಥಾಂಕ್ ಯು ಸಂಧ್ಯಕ್ಕಾ ...

      ಪದ ಗುಚ್ಚ ಮನ ಮುಟ್ಟಿತಂದ್ರೆ ಬರೆದಿದ್ದು ಸಾರ್ಥಕ :)

      ಭಾವಗಳ ಓದಿ ಅದಕ್ಕೊಂದು ಚಂದದ ಪ್ರತಿಕ್ರಿಯೆ ಕೊಡೊ ನಿಮಗೊಂದು ನಮನ :)

      ಭಾವಗಳ ತೇರಲ್ಲಿ ಮತ್ತೆ ಸಿಕ್ತೀನಿ

      Delete
  6. ಮುದ್ದು ಗೆಳೆಯಾ ಎಂದು ಆರಂಭವಾಗುವ ಬರಹ, ತೀರಾ ಬೇಕೆಂದಾದ ಹೊರ ಹೋಗಿದ್ದ ಆತನಿಗೆ ಮರಳಿ ಮತ್ತೊಂದು ಅವಕಾಶದಂತೆ ಇನ್ನೊಮ್ಮೆ ಪ್ರೀತಿಯ ನಿವೇದನೆ ಮಾಡಿಕೋ. ಎನ್ನುವ ಸಹೃದಯತೆಯೂ ತೋರುತ್ತದೆ.

    ಹುಡುಗಿಯಾಗಿ ಮತ್ತೆ ಕೇಳ್ತೀನಿ ಕಣೋ ... ಎನ್ನುವಾಗ ಹೆಣ್ಣುಮಕ್ಕಳ ಕ್ಷಮಾಯಾ ಧರಿತ್ರಿಯಂತ ಮನಸ್ಸಿನ ಅನಾವರಣವಾಗುತ್ತದೆ.

    ReplyDelete
    Replies
    1. ಥಾಂಕ್ ಯು ಬದರಿ ಸರ್ ...

      ಭಾವವ ಓದೋದಲ್ಲದೇ ಸರಿಯಾಗಿ ಅರ್ಥೈಸಿಕೊಳೋ ನಿಮಗೊಂದು ಶರಣು ..

      ಭಾವಗಲ ಸಂತೆಯಲ್ಲಿ ಮತ್ತೆ ಜೊತೆಯಾಗ್ತೀನಿ

      Delete
  7. Replies
    1. ಥಾಂಕ್ ಯು ಜಿ ...

      ನಿರುಪಾಯಕ್ಕೆ ಸ್ವಾಗತ ...
      ಭಾವಗಳ ಜಾತ್ರೆಯಲ್ಲಿ ನಾ ಮತ್ತೆ ಜೊತೆಯಾಗ್ತೀನಿ

      Delete
  8. ಹಾಯ್ ಭಾಗ್ಯಾ ಜಿ,
    ಅದೆಷ್ಟು ಚಂದದ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದಯಾ..!!
    ಲೇಖನಾ ಸೋ ನೈಸ್ N ಸೂಪರ್ಬ ..!! .ತುಂಭಾ ಇಷ್ಟಾ ಆಯ್ತು ಭಾವ ತುಂಬಿದ ಲೇಖನ.ಥ್ಯಾಂಕ್ಯೂ.

    ReplyDelete
    Replies
    1. ಥಾಂಕ್ ಯು ಕನಸು ...

      ನಿರುಪಾಯದ ಭಾವಗಳ ಪ್ರೀತಿಯಿಂದ ಓದೋ ,ಖುಷಿಸೋ ನಿಮಗೊಂದು ನಮನ ...
      ಬರೆದ ಭಾವ ನಿಮಗಿಷ್ಟ ಆದ್ರೆ ಅದು ಪೂರ್ತಿಯಾಗಿ ನನ್ನ ಖುಷಿ :)

      ಭಾವಗಳ ತೇರಲ್ಲಿ ಮತ್ತೆ ಮತ್ತೆ ಸಿಕ್ತಿರೋಣ

      Delete
  9. ಸೊಗಸಾದ ಬರಹ ಗೆಳತಿ ...ಪ್ರೀತಿ ಮಾಡಲ್ಲೆ ಅಂತನೇ ಇಷ್ಟು ಚೊಲೋ ಬರಿತೆ , ಇನ್ನು ಮಾಡಿದ್ರೆ ಕಥೆ ಎಂತುದೋ .... :)
    ಅಥವಾ ನಂಗೆ ಗೊತ್ತಿಲ್ಯೋ ... ಮುರಿಡುಬಿದ್ದ ನಂತರದ ಪ್ರೇಮಪತ್ರ ಅನ್ಲಕ್ಕೆನೋ....ಎಂಥವನೇ ಆದ್ರು ವಾಪಸ್ಸು ಓಡಿ ಬರೋ ಲೆವೆಲ್ಲಿಗಿದ್ದು :)

    ReplyDelete
    Replies
    1. ಥಾಂಕ್ಸ್ ಆದರ್ಶ ...
      ಹಾ ಹಾ ...ಪ್ರೀತಿ ಮಾಡಿದ್ರೆ ಬ್ರೇಕ್ ಅಪ್ ಸ್ಟೋರಿ ಬರಿತಿದ್ನಾ ;)
      ಬರೆದ ಭಾವವ ಪ್ರೋತ್ಸಾಹಿಸಿದ್ದು ,ಇಷ್ಟಪಟ್ಟಿದ್ದು ಖುಷಿ ಆಯ್ತು ..

      ಭಾವಗಳ ವಿನಿಯೋಗದಲ್ಲಿ ನಾ ಮತ್ತೆ ಜೊತೆಯಾಗ್ತೀನಿ

      Delete
  10. ಇದ್ದಾಗ ಇದ್ದದ್ದರ ಬೆಲೆ ಕಾಣದ ನಾವು ಅದು ಇರದಂತಾದಾಗಲೇ ಅದಕ್ಕಾಗಿ ಕನವರಿಸಿ, ಕೊರಗುತ್ತೇವೆ.
    ಭೂತದ ಭಾವಗಳ ನಿವೇದನೆಯಲ್ಲೇ ತೇಲಿ ಹೋಗೋ ನಿರೂಪಣೆ ಮತ್ತೆ ವಾಸ್ತವಕ್ಕೆ ಬಂದಂತಾಗಿದ್ದು ಕೆಳಗಿನ ಸಾಲುಗಳಲ್ಲಿ..
    >>
    ಈ ತಿರುವಲ್ಲಿ ಮೌನವ ಗೆಲ್ಲೋಕೆ ಹೋಗಿ ಬದುಕಿಗೆ ಬೆನ್ನು ಮಾಡಿ ಕೊನೆಗೂ ನನ್ನ ಸೋಲಿಸಿ ಹೋದ ನಿನ್ನನ್ನೇ ಇನ್ನೊಂದು ತಿರುವಿನಲ್ಲಿ ನಿರೀಕ್ಷಿಸುತ್ತಾ ....
    ನಿನ್ನವಳು.
    <<
    ಚೆಂದ ಇದೆ..

    ReplyDelete
    Replies
    1. ಥಾಂಕ್ಸ್ ಪ್ರಶಸ್ತಿ ...
      ಗತದ ತಪ್ಪನ್ನ ವಾಸ್ತವದಲ್ಲಿ ಸರಿಪಡಿಸಿಕೊಳ್ಳೋ ಭಾವವೊಂದ ನೀವಿಷ್ಟಪಟ್ಟ ಖುಷಿ ನಂದು ..

      ಭಾವಗಳ ಜಾತ್ರೆಯಲ್ಲಿ ಮತ್ತೆ ಜೊತೆಯಾಗೋಣ .

      Delete
  11. ಮೌನ ಮಾತಾದಾಗ ಉಕ್ಕಿ ಹರಿಯುವ ಭಾವಧಾರೆಗೆ ತಡೆಯೊಡ್ಡುವ ಸಾಮರ್ಥ್ಯ ಯಾರಿಗೂ ಇಲ್ಲ. ಅದೆಷ್ಟೋ ಮನದ ಭಾವಗಳು ಒಮ್ಮೆಲೆ ಹೊರಬಂದಿದೆ.

    "ಇನ್ನೊಮ್ಮೆ ಪ್ರೀತಿಯ ನಿವೇದನೆ ಮಾಡಿಕೊಂಡು ಬಿಡೋ ..ಕಣ್ಮುಚ್ಚಿ ನಿನ್ನ ತೋಳಂಚ ಸೇರಿಬಿಟ್ಟೇನು " ಈ ಮಾತು ಕೇಳಿದಾಗ ಕಲ್ಲು ಹೃದಯ ಕೂಡ ಕರಗೀತು.

    ಮೌನದ ಹುಡುಗಿಯ ಈ ಪರಿಯ ನಿವೆದನೆ ಕೇಳಿದರೆ ಆ ಹುಡುಗ ಎಲ್ಲಿದ್ದರು ಬಂದು ತಬ್ಬಿ ಕಣ್ಣೀರಿಡುವುದಂತೂ ನಿಜ.
    ಉತ್ತಮ ಬರಹ ಎಂದಿನಂತೆ.

    Give me some sunshine
    Give me some rain
    Give me another chance
    I wanna grow up once again.

    ಶುಭವಾಗಲಿ.

    ReplyDelete
    Replies
    1. ಥಾಂಕ್ಸ್ ಗಣೇಶ್ ಜಿ ...
      ಬರೆದ ಭಾವವ ಇಷ್ಟಪಟ್ಟಿದ್ದು ಖುಷಿ ಆಯ್ತು ...

      ನಿಜ ,ಮೌನದ ಮಾತಲ್ಲಿ ಉಕ್ಕಿ ಹರಿಯೋ ಭಾವಗಳಿಗೆ ಇರೋ ಸೆಳೆತವೇ ಅಂತದ್ದೇನೋ ..

      ಭಾವಗಳ ತೇರಲ್ಲಿ ಮತ್ತೆ ಸಿಕ್ತೀನಿ

      Delete
  12. ಈ ತಿರುವಲ್ಲಿ ಮೌನವ ಗೆಲ್ಲೋಕೆ ಹೋಗಿ ಬದುಕಿಗೆ ಬೆನ್ನು ಮಾಡಿ ಕೊನೆಗೂ ನನ್ನ ಸೋಲಿಸಿ ಹೋದ ನಿನ್ನನ್ನೇ ಇನ್ನೊಂದು ತಿರುವಿನಲ್ಲಿ ನಿರೀಕ್ಷಿಸುತ್ತಾ ....

    ಕೊನೆಯಲ್ಲಿ ನಿರೀಕ್ಷೆಯ ನೆಲದ ಮೇಲೆ.... ಭಾವಪೂರ್ಣ ಬರಹ ಸುಂದರವಾಗಿದೆ.

    ReplyDelete
    Replies
    1. ಧನ್ಯವಾದ ...

      ಸ್ಥಬ್ದದ ಭಾವವ ನೀವೋದ ಬಂದಿದ್ದು ಖುಷಿ ಆಯ್ತು ..

      ಭಾವಗಳ ಜೊತೆ ನಾ ಮತ್ತೆ ಭೇಟಿಯಾಗ್ತೀನಿ

      Delete
  13. yaar ..it has became some time.. that i didnt come here. but nowread every bit of it..letter by letter. Bhagya - just one word..beatiful..beautiful

    ReplyDelete
    Replies
    1. thank you sis ..welcome back .
      ಪ್ರೀತಿ ಪ್ರೋತ್ಸಾಹ ಹೀಗೇಯೇ ಇರ್ಲಿ ..

      ಭಾವಗಳ ತೇರಲ್ಲಿ ಮತ್ತೆ ಮತ್ತೆ ಸಿಕ್ತಿರ್ತೀನಿ ನಿರುಪಾಯದ ಹುಡುಗಿಯಾಗಿ

      Delete
  14. ಪ್ರೀತಿಯನ್ನು ತುಂಬಾ ಸೊಗಸಾಗಿ ವರ್ಣಿಸಿದ್ದೀರಿ. ನಿಮ್ಮ ಬರಹ ಇಷ್ಟವಾಯಿತು.

    ReplyDelete
    Replies
    1. ಥಾಂಕ್ ಯು ...
      ನಿರುಪಾಯದ ಹೊಸ ಅತಿಥಿಗೆ ಸ್ವಾಗತ ..

      ತಪ್ಪು ಒಪ್ಪುಗಳ ಒಪ್ಪವಾಗಿ ತಿಳಿಸಿಕೊಡೋಕೆ ಬರ್ತಿರಿ .

      ಇನ್ನೊಂದು ಭಾವದಲ್ಲಿ ನಾ ಮತ್ತೆ ಜೊತೆಯಾಗ್ತೀನಿ

      Delete
  15. ಥಾಂಕ್ಸ್ ಚಿನ್ಮಯಣ್ಣಾ ...

    "ಔಟ್ ಪುಟ್" ನಲ್ಲಿ ಭಾವಗಳ ಬರೆಯೋಕೆ ಪುರುಸೊತ್ತಿಲ್ಲದಿದ್ದರೂ ಬ್ಲಾಗಿಗರ ಭಾವಗಳ ಖುಷಿಯಿಂದ ಓದೋಕೆ ಬರ್ತಿರಲ್ಲ ಅನ್ನೋ ಖುಷಿ ನಂದು ....

    ಭಾವಗಳ ತೇರಲ್ಲಿ ಸಿಕ್ತಿರೋಣ

    ReplyDelete
  16. ಚಂದದ ಭಾವಬರಹ ಗೆಳತಿ...

    ಆದರೆ ನಿನ್ನ ಭಾವಗಳ ಮೂಲ ಮತ್ತೆ ಅವನೇ ಆದನಲ್ಲೇ..! ;)

    ReplyDelete
    Replies
    1. ಶರಣು ಕಣೇ ..

      ನಿಜ ...ಒಂದಿಷ್ಟು ಭಾವಗಳ ಹಕ್ಕುದಾರ ಅವನೇ ಆಗಿರೋವಾಗ ನಿರುಪಾಯದ ಭಾವಗಳ ಜೊತೆ ಕಾಣಿಸಲೇಬೇಕಲ್ವಾ ?

      ತುಂಬಾ ದಿನದ ನಂತರ ಮತ್ತೆ ನಿರುಪಾಯಿಯ ಸ್ಥಬ್ದದ ಭಾವವ ನೀ ಓದೋಕೆ ಬಂದ ಖುಷಿ ನಂದು ..

      ಭಾವಗಳ ಸಂತೆಯಲ್ಲಿ ಟೆಂಟ್ ಕಟ್ಟೋಕಲ್ದೇ ಇದ್ರೂ ವ್ಯಾಪಾರಕ್ಕಾದ್ರೂ ಬರ್ತಿರು ಅವಾಗಾವಾಗ ;)

      ಇನ್ನೊಂದು ಬೇರೆಯ ಭಾವದ ಜೊತೆ ನಾ ಮತ್ತೆ ಜೊತೆಯಾಗ್ತೀನಿ ನಿನ್ನ

      Delete
  17. ahaa manada bhavagalannu horahaakuva pari adenithu sundara... entavaru karagi ododi barabeku anta maatina modi nimma barahadallide... tumba hidisithu neenu bareyuva pari.. tumba savadhana, nidhana bhavagalu chendaagi henedu... oduvude sogasu hudugi... :)

    Rukmini Nagannavar

    ReplyDelete