ನಿಮಗದೆಷ್ಟು ಧಾರಾಳತನ ,
ಬೇಡವೆಂದರೂ ಬಂದು ಬೆಚ್ಚಗಿನ
ಗೂಡೊಂದ ಕಟ್ಟಿ
ಮನದಲ್ಲೊಂದು ಮಹಲು ಮಾಡಿ
ನೆನಪುಗಳ ಬುತ್ತಿಯನಿಲ್ಲೇ
ಬಿಟ್ಟು ಹೋಗೋ ನಲ್ಮೆಯ ಸ್ನೇಹಿತರಿಗಾಗಿ ....
ಭಾವಗಳೆಲ್ಲವಕ್ಕೂ ಜೊತೆ ನಿಂತು ಸ್ನೇಹದ ಮೊದಲ ಪ್ರೀತಿ ತೋರೋ
ಸಂತೆಯಲ್ಲಿಯೂ ಟೆಂಟ್ ಕಟ್ಟಬಲ್ಲ ಹುಡುಗಿ ,ಸಿಟ್ಟಿಗೂ ಮೈತ್ರಿ ಮಾಡಿಸೋ ,ಆಮೇಲೊಮ್ಮೆ ತಾನೇ ಸಿಟ್ಟಾಗಿ
ಆ ಸಿಟ್ಟನ್ನ ಕಣ್ಣ ಹನಿಗಳ ಜೊತೆ ಮೈತ್ರಿಯಾಗಿಸೋ ಗೆಳತಿ, ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಹಾಗೇ
ಮಾತಾಡಿಸೋ ಸಾಂತ್ವಾನಿಸೋ ಮರಿ ಗೆಳೆಯ , ತೀರಾ ಪರಿಚಿತನಲ್ಲದ ಬರಿಯ ಭಾವಗಳ ತೇರಲ್ಲಿ ಜೊತೆಯಾಗಿ ಪೂರ್ತಿ
ಬದುಕ ಭಾವಗಳನ್ನ ಹರವಿಟ್ಟು ಕಣ್ಣಂಚು ಮಾತಾಡೋ ತರ ಮಾಡಿದ್ದ ಸ್ನೇಹಿತ , ತಲೆಹರಟೆ ಮಾಡೋ ,ಕಾಲೆಳೆದು ಬೇಜಾರು ಕಣೋ ಅಂದಾಗ ರಿಯಲಿಸ್ಟಿಕ್ ಆಗಿರದ ಪ್ಲಾನ್ ಗಳ ಕೊಟ್ಟು ಫೋನ್ ನೋಡ್ಕೊಂಡು ನಗೊ ತರ ಮಾಡೋ ಈಚೆಗೆ ಪರಿಚಿತನಾಗಿ ಆತ್ಮೀಯ,
ಬದುಕ ಪಯಣದಲ್ಲಿ ಒಂದಿಷ್ಟು ಕಾಲ ಜೊತೆಯಾಗಿ ಒಂದಿಷ್ಟು ನನ್ನದೇ ಭಾವಗಳ ಮೂಲವಾಗಿ ತಿರುವಿನಲ್ಲಿ ಕೈ
ಮಾಡಿ ಮತ್ತೆಲ್ಲೊ ಜೊತೆಯಾಗೋ ಬರಿಯ ಸ್ನೇಹಿತನಾಗುಳಿಯದ ಆತ್ಮೀಯ , ಭಾವಗಳ ತೇರಲ್ಲಿ ಮುಖ ನೋಡದೇ ಹುಟ್ಟಿರೋ ಅದೆಷ್ಟೋ ಸ್ನೇಹ
,ಅದೆಷ್ಟೋ ಪ್ರೀತಿ.
ಮಾಡೋದು ಪೂರ್ತಿ ತಲೆಹರಟೆ
,ಜೊತೆಯಲ್ಲಿದ್ದಾಗ ಮಾಸದ ನಗು ,ಬಿಡದೇ ಕಾಲೆಳೆಯೋ ಚಟ ,ಕಾಡಿಸೋ ಮುದ್ದಿಸೋ ಮನ ,ಒಂದಿಷ್ಟು ಜಗಳ ,ಒಂದಿಷ್ಟು
ಖುಷಿಗಳ ಜೊತೆ ನೆನಪಾಗೋ ಭಾವವೊಂದೆ .
ತುಂಬಾ ಇಷ್ಟವಾಗೋ ಭಾವ
.....ಜೊತೆಯಲ್ಲೇ ಜೊತೆಯಾಗೋ ಈ ಸ್ನೇಹ ಭಾವ.
ಯಾರೊಂದಿಗೂ ಅಷ್ಟಾಗಿ ಮಾತಾಡದ
ಹುಡುಗಿ ಇಲ್ಲಿ ಮಾತ್ರ ಅವಳಲ್ಲವೇ ಅಲ್ಲ ಅನ್ನೋ ಅಷ್ಟು ಮಾತಾಡ್ತಾಳೆ ..ತೀರಾ ಮಾತಾಡೋ ಗೆಳತಿ ಕೂಡಾ
ಒಮ್ಮೊಮ್ಮೆ ಮೌನಿಯಾಗ್ತಾಳೆ ..ತೀರಾ ತಲೆ ಕೆಡಿಸಿಕೊಳ್ಳೋ ವಿಷಯಕ್ಕೆ ದೊಡ್ಡದೊಂದು ಅರ್ಥವಾಗದ ನಗು
ತೋರಿ ಗುಂಪಿನಲ್ಲಿ ಬೈಸಿಕೊಳ್ತಾನೆ ...ತುಂಬಾ ಕೂಲ್ ಆಗಿ ಮಾತಾಡೋ ಹುಡುಗ ಕೂಡಾ ತಪ್ಪಿಲ್ಲದ ಅವಳ ತಪ್ಪಿಗೆ
ಸಿಡಕ್ತಾನೆ....ಪ್ರೀತಿಯಲ್ಲಿ ಸೋತು ಬಂದ ಗೆಳತಿಗೆ ಒಮ್ಮೊಮ್ಮೆ ಸಮಾಧಾನಿಸಿದರೆ ಒಮ್ಮೊಮ್ಮೆ ದೊಡ್ಡ
ಲೆಕ್ಚರ್ ಕೊಡ್ತಾರೆ. ಮನದ ಚಿಕ್ಕ ಚಿಕ್ಕ ಭಾವಗಳ ಜೊತೆಯೂ ಹಾದಿ ಸವೆಸ್ತಾರೆ .
ಖುಷಿಯ ಮೊದಲ ಗೆಲುವ ಸಂದಾಯವಾಗೋದು
,ನೋವ ಮೊದಲ ಎಳೆಯ ಗುರುತು ಸಿಗೋದು,ಕಣ್ಣಂಚ ಭಾವದ ಕಟ್ಟೆ ಒಡೆಯೋದು ಇಲ್ಲಿ ಮಾತ್ರವೇನೋ
ಬಹುಶಃ ಎಲ್ಲಾ ಭಾವಗಳನ್ನೂ
ಮುಲಾಜಿಲ್ಲದೇ ಹಂಚಿಕೊಳ್ಳೋದು ಸ್ನೇಹದಲ್ಲಿ ಮಾತ್ರ ಸಾಧ್ಯವೇನೋ .
ಮಾಡಿಕೊಂಡ ಅದೆಷ್ಟೋ ಜಗಳಗಳ
ನಂತರವೂ ಮತ್ತದೇ ತುಂಟಾಟ ,ಅದೇ ಮುದ್ದು ,ಅದೇ ಆತ್ಮೀಯತೆ ...ಖುಷಿ ಅನಿಸುತ್ತೆ ಹೀಗೊಂದು ಸ್ನೇಹ ದಕ್ಕಿದ್ದು ...
ಮನದ ಬೇಸರಗಳ ಜೊತೆ ನೀವೂ ಹಾದಿ ಸವೆಸಿದ್ದೀರ
.ಖುಷಿಗಳ ಜೊತೆ ಡೇರಿಮಿಲ್ಕ್ ಹಂಚಿಕೊಂಡಿದ್ದೀರ ...ಮುರಿದುಬಿದ್ದ ಪ್ರೀತಿಯ ಭಾವಗಳ ಜೊತೆ ದೊಡ್ಡ ದೊಡ್ಡ
ಮಾತಿನ ಅಶ್ರುತರ್ಪಣ ಬಿಟ್ಟಿದ್ದೀರ !! ಯಾಕೋ ಕಾಣೇ ..ತೀರಾ ಅರ್ಥವಾಗದ ,ಬೆರೆಯದ ಸ್ವಭಾವಗಳಲ್ಲಿ ನಾ ಒಂಟಿ ಅನಿಸೋವಾಗಲೆಲ್ಲಾ ದೂರದಿಂದಲೇ ಮಾತಾಡಿ ಇಲ್ಲೇ
ಎಲ್ಲೋ ಇದ್ದೀರೇನೋ ಅನ್ನೋ ಭಾವವೊಂದ ನನಗಾಗಿ ಹೊತ್ತು
ಬಂದಿದ್ದೀರ .
ಆದ ಅದೆಷ್ಟೋ ಕ್ರಶ್ ಗಳಿಗೆ ಕಾಲೆಳೆದು ,ತಿಳಿಯದ ಗೆಳೆತನಕ್ಕೊಂದು
ಸ್ನೇಹದ ಭಾವ ನೀಡಿ ,ಕಡಿಮೆ ಬಂದ ಅಂಕಗಳ ಬೇಸರಕ್ಕೆ ಧೈರ್ಯ ಹೇಳಿ
,ಪ್ರೀತಿಸೋ, ಆಸ್ಥೆ ವಹಿಸೋ ,ಕಾಳಜಿಸೋ ನಿಮಗೊಂದು ಪ್ರೀತಿಯ ಅಪ್ಪುಗೆ.
ಈ ಸ್ನೇಹಿತರ ಸ್ನೇಹ ಮಾತ್ರ ಸ್ನೇಹದ ವ್ಯಾಖ್ಯಾನವ ವ್ಯಾಖ್ಯಾನಿಸಬಲ್ಲದೇನೋ ...
ಸಾವಿರದ ಈ ಸ್ನೇಹ ಸಾವಿರಾರು ಬಂಧ ಗಳ ಬೆಸೆಯಲಿ ..
ಸ್ನೇಹ ಚಿರಾಯುವಾಗಲಿ ..
ಚಿರಕಾಲ ಇರಲಿ ಈ ಸ್ನೇಹ ಎಂದ ನಿನ್ನ ಬರಹ ಸರಳ ಮತ್ತು ಸುಂದರ.. ಸ್ನೇಹಿತರ ದಿನದ ಶುಭಾಶಯಗಳು ಪುಟ್ಟಾ...
ReplyDeleteಥಾಂಕ್ ಯು ಮುದ್ದಕ್ಕಾ ...ನಿಮಗೂ ಸ್ನೇಹ ದಿನದ ಪ್ರೀತಿಯ ಶುಭಾಶಯಗಳು
Delete.......ನೀ ಬಯಸೋ ಸವಿ ಸ್ನೇಹ ನಗುತಿರಲಿ ನಿನ್ನ ಬದುಕ ತುಂಬಾ ............ :)
ReplyDeleteಪ್ರೀತಿಯ ಹಾರೈಕೆಗೆ ಶರಣು :)
Deleteಭಾವಗಳ ವಿನಿಮಯದಲ್ಲಿ ಸಿಕ್ತಿರೋಣ
Happy friendship day chinnamari ... Katti kotta snehada bhaava Chennagide ...
ReplyDeleteಥಾಂಕ್ ಯು ಸಂಧ್ಯಕ್ಕಾ ...
Deleteನಾ ಕಟ್ಟಿ ಕೊಟ್ಟ ಭಾವ ಚಂದವಾಗೋಕೆ ಕಾರಣ ಇಷ್ಟು ಚಂದದ ಗೆಳತನ ಹಬ್ಬಿ ಬೆಳೆದಿದ್ದೆ ಇರಬೇಕು :)
ಭಾವಗಳ ತೇರಲ್ಲಿ ಮತ್ತೆ ಜೊತೆಯಾಗೋಣ
Happy friendship day chinnamari ... Katti kotta snehada bhaava Chennagide ...
ReplyDeleteಸುಂದರ ಲೇಖನ ಕೂಸೇ..ಒನ್ದು ಕಥೆ ಏನಾದ್ರೂ ಇರ್ತು ಅನ್ಕಂಡಿದ್ದಿ !!
ReplyDeleteಕವಿತೆ ಇದ್ದಲ ಸಾಕು ತಗ :) :) ಎಲ್ಲ ಮಾತುಗಳು ನಿಜ... ತೀರ ಒಂಟಿ ಅನಿಸಿದಾಗಲೆಲ್ಲ ಸಾಂತ್ವನ ಹೇಳಿದ್ದಂತು ಬಹಳ ನಿಜ :)
ಥಾಂಕ್ ಯು ಜಿ ...
Deleteನಿಜ ಸ್ನೇಹವೆಂದರೆ ಅದೆ ..ತೀರಾ ಒಂಟಿ ಅನಿಸಿದಾಗ ನೆನಪುಗಳಿಂದಾದರೂ ಹತ್ತಿರ ಅನಿಸಬಲ್ಲ ,ಒಬ್ಬಂಟಿ ಭಾವಗಕ್ಕೆ ಜೊತೆಯಾಗವಬಲ್ಲ ಭಾವ ಅದೊಂದೆಯೇನೋ ...
ಭಾವಗಳ ಜಾತ್ರೆಯಲ್ಲಿ ಮತ್ತೆ ಸಿಗೋಣ
Happy friendship day.....tumbaa chennaagide nimma baraha..
ReplyDeletethank you and wish you the same :)
Deleteನಿರುಪಾಯದ ಹೊಸ ಗೆಳತಿಗೆ ಸ್ವಾಗತ :)
ಭಾವಗಳ ತೇರಲ್ಲಿ ಜೊತೆಯಾಗ್ತಿರೋಣ
:-):-)
ReplyDeleteಥಾಂಕ್ ಯು ಜಿ ...
Deleteಹ್ಯಾಪಿ ಫ್ರೆಂಡ್ ಶಿಪ್ ಡೇ ..
ಸ್ನೇಹಪೂರ್ಣ ಶುಭಾಶಯಗಳು.
ReplyDeleteಥಾಂಕ್ ಯು ಜಿ :)
DeleteHappy friendship day :-)ನೀನೆ ಹೇಳ್ದಂಗೆ ಸ್ನೇಹ ಚಿರಾಯುವಾಗಲಿ :-)
ReplyDeleteಥಾಂಕ್ ಯು ಪ್ರಶಸ್ತಿ ..
Deleteಮೊದ್ಲೇ ಹೇಳ್ದಂಗೆ ಸಾವಿರದ ಸ್ನೇಹ ಬೆಸೆಯಲಿ ಸಾವಿರ ಬಂಧಗಳ
ಹಾಯ್ ಭಾಗ್ಯಾ ಜಿ ,
ReplyDeleteನಿಮ್ಮ ಬ್ಲಾಗು ಮತ್ತು ಸ್ನೇಹಪೂರ್ವಕ ಲೇಖನ
ಮುದ್ದು ಮುದ್ದಾದ ಭಾವನೆಗಳ ಮಳೆಸುರಿಸಿ
ನನ್ನ ಹೃದಯಕ್ಕೆ ಹತ್ತಿರವಾಯಿತು.ಧನ್ಯವಾದಗಳು
ಧನ್ಯವಾದ ಕನಸು :೦
Deleteಅದೆಷ್ಟೋ ದಿನದ ನಂತರ ( ಅದೂ ಸ್ನೇಹಿತರ ದಿನದಿ) ನಿರುಪಾಯಿಯ ಭಾವವ ನೀವೋದ ಬಂದಿದ್ದು ನನ್ನ ಖುಷಿ :)
ಪ್ರೀತಿ ಪ್ರೋತ್ಸಾಹ ಹೀಗೆಯೇ ಇರ್ಲಿ ...
ಸ್ನೇಹ ಚಿರಾಯುವಾಗಲಿ ..
ReplyDeleteಎಂಬ ಮಾತು ತುಂಬಾ ಹಿಡಿಸಿತು.ಮನಸ್ಸನ್ನು ಅರ್ಥೈಸಿಕೊಳ್ಳುವ ಶಕ್ತಿ ಇಲ್ಲದವರು ಸ್ನೇಹವನ್ನು ಅಲ್ಲಗಳೆಯುತ್ತಾರೆ ಇದನ್ನು ಅನುಭವಿಸಿದವ ನಾನು. ಅದು ಚಿರವಾದರೆ ಎನು ಚೆಂದ. ತುಂಬ ಮನಸಿಗೆ ಹಿಡಿಸಿತು... ಹೀಗೆ ಬರೆಯುತ್ತಿರಿ.
ಥಾಂಕ್ ಯು ಜಿ ...
Deleteಕಳಕೊಂಡ ಸ್ನೇಹ ಅದೆಲ್ಲೋ ಒಂದು ಕಡೆ ನೆನಪಾಗಿಯಾದರೂ ಉಳಿಯುತ್ತೆ ಅಲ್ವಾ ?
ನೆನಪು ಒಂದಿಷ್ಟು ಖುಷಿಗಳ ಮಾತ್ರ ಉಳಿಸಲಿ :)
ಭಾವಗಳ ತೇರಲ್ಲಿ ಸಿಕ್ತಿರೋಣ
ಸರಳ ವ್ಯಾಖ್ಯಾನಕೂ ಸಿಗದ ಬಂಧ ಸ್ನೇಹ. ಒಂದು ಬ್ಲಾಗ್ ಬರಹದ ಮೂಲಕ ಅದೆಷ್ಟು ಚೆನ್ನಾಗಿ ಬಿಡಿಸಿಟ್ಟಿದ್ದೀರಾ ನೀವು. ನಿಮ್ಮಂತಹ ಬರಹಗಾರ್ತಿಯರ ಬರಹಗಳನ್ನು ಓಡುವುದೇ ಚೆನ್ನ. :)
ReplyDeleteಧನ್ಯವಾದ ಬದರಿ ಸರ್ ..
Deleteಬ್ಲಾಗ್ ಕುಟುಂಬದ ಇಷ್ಟೂ ಸ್ನೇಹಿತರ ಜೊತೆ ಹೀಗೊಂದು ಸಣ್ಣ ಸ್ನೇಹದ ವಿನಿಯೋಗವಷ್ಟೇ :)
ನೀವೋದ ಬಂದು ಖುಷಿ ಪಟ್ಟಿದ್ದು ನನ್ನ ಖುಷಿ :)
ಭಾವಗಳ ತೇರಲ್ಲಿ ಮತ್ತೆ ಸಿಗೋಣ
ನೆನ್ನೆ ನಾನು ಹೇಳಿದ ಅಷ್ಟೂ ಪ್ರೆಂಡ್ ಷಿಪ್ ವಿಷ್ ಗಳಲ್ಲಿ ಎಲ್ರೂ ಹೇಳಿದ್ದೊಂದೇ. ಶಿವೂ, ಒಂದು ಕವನಾ ಹೇಳೋ, ಒಂದೇ ಒಂದು ಒಳ್ಳೇ ಲೆಟರ್ ಮೇಲ್ ಮಾಡೋ ಅಂತ. ಅವರಿಗೆಲ್ಲ ನಾನು ಹೇಳಿದ್ದು 'ಸ್ನೇಹವನ್ನ ಅಕ್ಷರಗಳಲ್ಲಿ, ಭಾವಗಳಲ್ಲಿ ಹಿಡಿಯೋಕ್ಕಾಗಲ್ಲ, ಬರೀ ಅನುಭವಿಸಬೇಕು , ಆರಾಧಿಸಬೇಕು ಅಷ್ಟೆ' ನಿಮ್ಮ ಈ ಬರಹವನ್ನ ಓದಿದ ಮೇಲೆ ನಾನೇ ದಡ್ಡ ಅನ್ನಿಸ್ತಿದೆ. ಸ್ನೇಹಿತರ ದಿನದ ಶುಭಾಷಯಗಳು ತಮಗೆ...
ReplyDeleteಥಾಂಕ್ ಯು ಶಿವು ಸರ್ ...
Deleteನಿರುಪಾಯದ ಭಾವವ ನೀವೋದ ಬಂದ ಖುಷಿ ನಂದು .
ನೀವು ಹೇಳಿದ್ದು ನಿಜ ..ಸ್ನೇಹದ ವ್ಯಾಖ್ಯಾನವ ಸ್ನೇಹ ಮಾತ್ರ ವ್ಯಾಖ್ಯಾನಿಸಬಲ್ಲದೇನೋ ಅಲ್ವಾ ?
ಭಾವಗಳ ಸಂತೆಯಲ್ಲಿ ನಾ ಮತ್ತೆ ಜೊತೆಯಾಗ್ತೀನಿ
This comment has been removed by the author.
Deleteನಿನ್ನ ಲೇಖನದಲ್ಲಿ ಕೇವಲ ಪ್ರೀತಿ,ವಿರಹದ ಭಾವ ಇರುತ್ತದೆ ಅಂದುಕೊಂಡಿದ್ದೆ .. ಸ್ನೇಹದ ಭಾವವನ್ನು ಇಷ್ಟೊಂದು ಚೆನ್ನಾಗಿ ಅನುಭವಿಸಬಲ್ಲೆ ನೀನು ..
ReplyDeleteಥಾಂಕ್ ಯು ಗಿರೀಶ್ ಜಿ ..
Deleteಹಾ ಹಾ ..ಎಲ್ರೂ ಪ್ರೀತಿ ,ಪ್ರೇಮ ,ಬ್ರೇಕ್ ಅಪ್ ಅಂದ್ರೆ ನಿರುಪಾಯ ಅನ್ಕೊಂಡಿರೋ ಹಾಗಿದೆ ಅಲ್ವಾ ? ;)
ಇಷ್ಟು ಚಂದದ ಸ್ನೇಹ ಬಳಗದ ಪುಟಾಣಿ ಗೆಳತಿಯಾಗಿ ಹೇಳಿದ ಭಾವವಷ್ಟೇ ..ನೀವಿಷ್ಟಪಟ್ಟಿದ್ದು ನನ್ನ ಖುಷಿ
Happy friendship...day.
ReplyDeleteಥಾಂಕ್ ಯು ಜಿ ...
Deleteನಿರುಪಾಯದ ಸ್ನೇಹ ದಿಬ್ಬಣಕೆ ಸ್ವಾಗತ :)
ಹಾಯ್ ಪುಟಾಣಿ....
ReplyDeleteಹರಟೆ.. ತಮಾಶೆ... ಜಗಳ.... ಬೇಸರ...
ಸಮಾಧಾನ.. ನೆವರಿಕೆ.. ಚೆಲ್ಲಾಟ.. ಕೂಗಾಟ...
ಎಲ್ಲ ಸೇರಿಸ ಗುಬ್ಬಿ ಗೂಡ ಚಿಲಿಪಿಲಿ ಈ ಸ್ನೇಹಲೋಕ...
ಅದು ತಂದುಕೊಟ್ಟ ಖುಷಿ.. ಅದರ ಭಾವವನ್ನ ಎಷ್ಟು ಚನ್ನಾಗಿ ಬಿಂಬಿಸಿದ್ದೀಯೇ...
ಮನಸೆಲ್ಲಾ ಖುಷ್ ಖುಷ್....
ಥಾಂಕ್ ಯು ರಾಘವ್ ಜಿ ,
Deleteನಿಜ ...ಸ್ನೇಹ ಲೋಕದ ಗೆಳೆತನದ ಆತ್ಮೀಯತೆ ,ಸ್ನೇಹಕ್ಕೂ ಮೀರಿದ ಭಾವ ಬೆಸುಗೆ ಯಾರೊಂದಿಗೂ ಬೆರೆಯದ ಮನವನ್ನೂ ಕೂಡಾ ಒಂದಾಗಿಸುತ್ತೆ :)
ಸ್ನೇಹಿತೆಯ ಈ ಭಾವವ ನೀವೋದ ಬಂದು ಖುಷಿ ಪಟ್ಟಿದ್ದು ನನ್ನ ದೊಡ್ಡ ಖುಷಿ ..
ಇನ್ನೊಂದು ಭಾವದ ಜೊತೆ ನಾ ಮತ್ತೆ ಜೊತೆಯಾಗ್ತೀನಿ
This comment has been removed by the author.
ReplyDeleteಭಾಗ್ಯಾ,
ReplyDeleteಮತ್ತೊಂದು ಸುಂದರ ಬರಹ ಎಂದಿನಂತೆ , ನನ್ನದೇ ಕೊನೆ ಕಾಮೆಂಟ್ (most probably :D), ಅದೂ ಎಂದಿನಂತೆ.
ಗೆಳೆತನದ ಹಬ್ಬಕ್ಕೆ ನಿರುಪಾಯದಲ್ಲಿ ಒಂದು ದಿಬ್ಬಣವನ್ನು ನಿರೀಕ್ಷಿಸುತ್ತಿದ್ದೆ ನಾ ಎಂದರೆ ಸುಳ್ಳಲ್ಲ,(ಆರನೇ ಇಂದ್ರಿಯ D). ಆದರೂ ಈ ಪೋಸ್ಟನ್ನು ನೋಡಿದಾಗ ಆದ ಖುಷಿ ಆ ನಿರೀಕ್ಷೆ ಸತ್ಯವಾಗಿದ್ದಕ್ಕಿಂತ ದೊಡ್ಡದು.
ಧನ್ಯವಾದಗಳು ಈ ಸುಂದರ ಬರಹ ಬರೆದದ್ದಕ್ಕೆ( :) ), ಗೆಳೆತನದ ದಿನದ ಶುಭಾಷಯ ಹೇಳಿದ್ದಕ್ಕೆ , ಹೀಗೆ ಇರಲಿ ಈ ಪಯಣ :)
ಸುಬ್ರಹ್ಮಣ್ಯಾ ,...
Deleteಕಾಮೆಂಟ್ ಕೊನೆಯದಾದ್ರೂ ನಿರುಪಾಯದ ಎಲ್ಲಾ ಭಾವಗಳ ಓದಿ ಪ್ರೋತ್ಸಾಹಿಸ್ತೀರಲ್ಲಾ ..
ಆ ಖುಷಿ ಕೇವಲ ನಂದು ಮಾತ್ರಾ :)
ನಿಮ್ಮ ಆರನೇ ಇಂದ್ರಿಯಕ್ಕೊಂದು ಶರಣು ...ನಿರುಪಾಯದ ಸ್ನೇಹ ದಿಬ್ಬಣದ ಭಾವಗಳ ಇಷ್ಟಪಟ್ಟಿದ್ದಕ್ಕೊಂದು ಶರಣು:)
ಪ್ರೀತಿ ಪ್ರೋತ್ಸಾಹ ಹೀಗೇ ಇರೋ ತನಕ ಪಯಣ ಸಾಗ್ತೀರುತ್ತೆ ಅಂತಷ್ಟೇ ಹೇಳಬಲ್ಲೆ ನಾ .
ಭಾವಗಳ ವಿನಿಮಯದಲ್ಲಿನ ಭೇಟಿಯಲ್ಲಿ ಮತ್ತೆ ಸಿಗೋಣ
ಮದುವೆಯ ಪವಿತ್ರ ಬಂಧನದಲ್ಲೂ ಕೂಡ ಈ ಸ್ನೇಹಕ್ಕೆ ವ್ಯಾಖ್ಯಾನವಿದೆ. "ಸಖಾ ಸಪ್ತಪದೀ ಭವ" ಅಂತ ಸಪ್ತಪದಿಯ ಕೊನೆಯ ಹೆಜ್ಜೆಯಿಡುವಾಗ ನಮ್ಮ ಈ ಸಂಬಂಧ ಸ್ನೇಹದಂತೆ ಇರಲಿ ಅಂತ ಕೋರುತ್ತೆವೆ. ಅದೆಷ್ಟೊ ವಿಷಯಗಳನ್ನ ಮನೆಯವರಲ್ಲಿಯೂ ಕೂಡ ಹೇಳದೆ ಸ್ನೇಹಿತರಲ್ಲಿ ಮಾತ್ರ ಹಂಚಿಕೊಳ್ಳುತ್ತೇವೆ. ಹಾಗಾಗಿ ಮದುವೆಯಲ್ಲಿ ನಾವು ಪತಿ ಪತ್ನಿಯಾದರೂ ನಮ್ಮ ಈ ಸಂಬಂಧ ಸ್ನೇಹಮಯವಾಗಿರಲಿ ಅಂತ ಇದೆ. ನಿಜಕ್ಕೂ ಈ ಸ್ನೇಹ ಅನ್ನುವುದು ಪವಿತ್ರ ಬಂಧನವೇ ಸರಿ. ಸುಂದರ ಬರಹ.
ReplyDeleteಶುಭವಾಗಲಿ.
ಸ್ನೇಹದಲ್ಲಿ ರೋಷ ದ್ವೇಷ ಎಲ್ಲಾ ಯಾಕೆ ಆಸೆ ಬಣ್ಣ ವೇಷವೆಲ್ಲ ಒಂದೇ ಎನ್ನುವ ಹಾಡಿನಂತೆ.. ಗೆಳೆತನ ಹಲವು ಹತ್ತು ರೂಪಗಳಲ್ಲಿ ಕಾಣ ಸಿಗುತ್ತದೆ. ಮಳೆ ಬಂದಾಗ ಕೊಡೆಯಂತೆ ಕಂಡರೆ.. ಇನ್ನೊಮ್ಮೆ ಬಿಸಿಲಲ್ಲಿ ನೆರಳುಣಿಸುವ ಮರದಂತೆ ಕಾಣ ಸಿಗುತ್ತದೆ. ಸುಂದರ ಬರಹ ಬಿಪಿ ಇಷ್ಟವಾಯಿತು
ReplyDelete