ಇವತ್ತಿಲ್ಲಿ ನಿರುಪಾಯದ ಐವತ್ತು ಭಾವಗಳ ಒಡತಿಯಾಗಿ ಹೀಗೊಂದು ಬ್ಲಾಗ್ ಮುಖಪುಟದ ಖುಷಿಯ ಹಂಚಿಕೊಳ್ಳೋಕೆ ನಾ ಬಂದೆ ತುಂಬಾ ದಿನದ ನಂತರ ಮತ್ತೆ ಭಾವಗಳ ಅರಮನೆಗೆ..
(ನೀವು ತೀರಾ ಇಷ್ಟಪಟ್ಟಿದ್ದ ೭ ನಿರುಪಾಯದ ಭಾವಗಳ ಬದಿಗಿರಿಸೋಕೆ ಹೋಗಿ ಆ ಭಾವಗಳು ಬ್ಲಾಗ್ ಇಂದಾನೇ ಕಾಣೆಯಾದುದ್ದಕ್ಕೆ ಕ್ಷಮೆ ಕೇಳ್ತಾ )
ಕುಳಿತು ಮಾತಾಡಿದ್ದಿಲ್ಲ ...ಅಲ್ಲೆಲ್ಲೋ ಫೇಸ್ಬುಕ್ ಮೇಸೇಜ್ ಗಳಲ್ಲಿ ಅಪರೂಪಕ್ಕೆ ಮಾತಾಡಿದ್ದು ಬಿಟ್ಟರೆ ನಂಗ್ಯಾವ ಪರಿಚಯಗಳೂ ಇಲ್ಲ .ಬ್ಲಾಗ್ ಓದಿ ಕಾಮೆಂಟಿಸಿ ಸುಮ್ಮನಾಗೋ ಅಷ್ಟೇ ಪರಿಚಯ ಅವತ್ತು ನಂಗಿದ್ದಿದ್ದು..ಮಾತಾಡೋದು ಕಡಿಮೆ .ಸುಮ್ಮನೆ ಕುಳಿತು ಮಾತು ಕೇಳೋದೇ ಇಷ್ಟ ...ಹೀಗೋರಾವಾಗ ಬ್ಲಾಗ್ ನಲ್ಲಿ ಸಿಕ್ಕಿದ್ದ ಅಣ್ಣ ಪ್ರೀತಿಯಿಂದ ನನ್ನೆಲ್ಲಾ ಭಾವಗಳನೂ ಓದಿ ,ಮೆಚ್ಚಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿ ಕರೆದು ಮಾತಿಗೆ ಕೂರಿಸಿದ್ರು. ನನ್ನ ಮಾತು ಶುರುವಾಗಿದ್ದು ಇವತ್ತಿಲ್ಲಿ ಸುಮ್ಮನೆ ಕೂರೋಕೆ ಆಗದಷ್ಟು ಮಾತಾಡೋಕೆ ಬಂದಿದ್ದು ಅಲ್ಲಿಂದಲೇ ಏನೋ .
ವಾರದ ಹಿಂದಿನ ಭಾವವಿದು ...ನನಗಷ್ಟಾಗಿ ಪರಿಚಯವಿಲ್ಲದಿದ್ದರೂ ,ಅದೆಷ್ಟೋ ಬ್ಲಾಗ್ ಗಳ ನೋಡದಿದ್ದರೂ ಬ್ಲಾಗಿಗರ ಬಳಗದಲ್ಲಿ ನಾ ಪುಟ್ಟ ತಂಗಿ ಅನ್ನೋದರ ಅರಿವಿತ್ತು .ಆದರೆ ಒಮ್ಮೆಯೂ ಮಾತಾಡದೇ ಎದುರು ಬಂದಾಗ "ನೀವು ಅವರಲ್ವಾ?" ಅಂತ ನೀವೆಲ್ಲಾ ಗುರುತಿಸುತ್ತೀರ ಅನ್ನೋದು ಖಂಡಿತ ಗೊತ್ತಿರಲಿಲ್ಲ .ನಾನವತ್ತೂ ಹೇಳಿದ್ದೆ ..ನಂಗ್ಯಾರೂ ಗೊತ್ತಿಲ್ಲ .ಅಲ್ಲಿ ಬಂದು ಸುಮ್ಮನೇ ಮುಖ ಮುಖ ನೋಡೋದಾಗುತ್ತೆ ಅಂತ .ಆದರೆ ನಾನಂದುಕೊಂಡಿದ್ದು ತಲೆಕೆಳಗಾಗಿತ್ತು. ನಗುಮೊಗದಿ ಸ್ವಾಗತಿಸೋ ಅಣ್ಣಂದಿರು ..ಕೂಸೆ ಅಂತಾನೆ ಮಾತಾಡಿಸೋ ದೊಡ್ಡಣ್ಣ , ಅಕ್ಕಾ ಹೆಚ್ಚೋ ಅಣ್ಣ ಹೆಚ್ಚೋ ಅಂತ ಮುಖ ಊದಿಸಿ ಪ್ರೀತಿಯಿಂದ ಮನೆಗೆ ಆಮಂತ್ರಿಸೋ ಈ ಅಣ್ಣ ಅತ್ತಿಗೆ ,ಎಷ್ಟು ಹೊತ್ತಿಗೆ ಬರ್ತೀಯ, ಗೊತ್ತಾಗುತ್ತಾ ಬರೋಕೆ ಅಂತ ಕಾಳಜಿಸೋ ನಾ ಕಾಡಿ ಬೇಡಿ ಅಲ್ಲಿಯೇ ಉಳಿಸಿಕೊಂಡಿದ್ದ ಗೆಳೆಯ,ನೀನಲ್ಲಿಂದ ಬಂದಿದ್ದು ಖುಷಿ ಆಯ್ತು ಅಂತ ಪೂರ್ತಿಯಾಗಿ ಮಾತಿನಲ್ಲೇ ಕಟ್ಟಿ ಹಾಕೋ ಇವರುಗಳ ಜೊತೆಗಿನ ಆ ದಿನ ನಾನಂದುಕೊಂಡಿದ್ದು ನಾನಿಲ್ಲಿಗೆ ಬರದಿದ್ರೆ ಏನನ್ನೋ ಕಳಕೊಳ್ತಿದ್ದೆ ಅಂತ .
ಇಲ್ಲೊಂದಿಷ್ಟು ಸಂಭ್ರಮವಿತ್ತು ..ಎಲ್ಲರ ಮುಖದಲ್ಲೂ ಏನೋ ಒಂದು ಲವಲವಿಕೆಯಿತ್ತು...ತೀರಾ ಅನ್ನೋ ಖುಷಿಗಳಿದ್ವು ...ಹರಟೆಯಿತ್ತು,ಮಾತಿತ್ತು,ನಗುವಿತ್ತು,ಕಲರವವಿತ್ತು ....
ಮನೆಯಲ್ಲಿನ ಹಬ್ಬಕ್ಕಿಂತಲೂ ಇಲ್ಲಿಯ ಹಬ್ಬವೇ ತೀರಾ ಚಂದವಾಗಿತ್ತು ...
ಎಲ್ಲರೂ ಅವರ ಪುಸ್ತಕ ಬಿಡುಗಡೆಯಾಗ್ತಿದ್ದ ಖುಷಿಗಿಂತ ತುಸು ಜಾಸ್ತಿ ಖುಷಿಯಲ್ಲಿದ್ದರು..ಬ್ಲಾಗ್ ಮುಖ ಪುಟದ ಸ್ನೇಹದ ಅಲೆಯಲ್ಲಿ ಎಲ್ಲರದೂ ಮಿಂದೆದ್ದ ಚಂದದ ಭಾವ.ಪ್ರೀತಿ ಒಲವಲ್ಲಿ ಭಾವ ತೀವ್ರತೆಯಲ್ಲಿ ತೇಲುತ್ತಿದ್ದ ಈ ಭಾವ ವಾರದ ಹಿಂದೆ ನಯನ ಸಭಾಂಗಣದಲ್ಲಿ ಸೇರಿದ್ದ ಎಲ್ಲರಿಗೂ ದಕ್ಕಿತ್ತು ಅಂದರೆ ಅತಿಶಯೋಕ್ತಿ ಆಗಲಾರದು ..
ನಂಗಿಲ್ಲಿ ದಕ್ಕಿದ್ದು ಒಂದಿಷ್ಟು ಹೇಳಲಾಗದ ಖುಷಿಗಳು ..ನಾನ್ಯಾರಿಗೂ ಪರಿಚಯವಿಲ್ಲ ಅಂತ ಹಿಂದಿನ ದಿನವಷ್ಟೇ ತಮಾಷೆ ಮಾಡಿದ್ದಾಗ "ನನ್ನ ಕ್ಯಾಮರಾಕ್ಕಂತೂ ನೀ ಚಿರಪರಿಚಿತೆ" ಅಂತ ಕಾಲೆಳೆದಿದ್ದ ಅಣ್ಣ ಪ್ರೀತಿಯಿಂದ ಎಲ್ಲರಿಗೂ ಇವಳು ನನ್ನ ಎರಡನೇ ಮಗಳು ಅನ್ನೋವಾಗ ಮಾತಿರಲಿಲ್ಲ ನನ್ನಲ್ಲಿ. ಮನ ತುಂಬಿತ್ತು .ಎಲ್ಲರೂ ಕಾಕಾ ಅಂತಿದ್ದ ಈ ಹಿರಿಯರ ನೋಡಿ ,ಮಾತಾಡಿದಾದ ಅವರು ನಕ್ಕು ಚಂದದ ಶುಭಾಶಯವೊಂದ ಹೇಳಿದಾಗ ಸಿಕ್ಕ ಧನ್ಯತೆಯ ಭಾವಕ್ಕೆ ನೀವು ಕಾರಣರು ಅಣ್ಣಾ...ಮೊದಲ ಭೇಟಿಯ ಈ ಸಂಭ್ರಮದಲ್ಲಿ ಪ್ರೀತಿಯಾಯ್ತು ನನ್ನ ಮೇಲೆ ನಂಗೇ :ಫ್
ಇಲ್ಲೊಂದು ಚಂದದ ಗೆಳೆಯರ ಬಳಗವಿದೆ.ಎಲ್ಲರನೂ ಕಾಲೆಳೀತಾ ,ಎಲ್ಲರನೂ ನಗು ಮೊಗದಿ ಮೋಡಿ ಮಾಡೋ ಇವರುಗಳ ಜೊತೆ ಒಂದೆರಡು ಗಂಟೆ ಕುಳಿತು ಈ ಚಂದದ ಕಾರ್ಯಕ್ರಮದ ಖುಷಿಯ ದಕ್ಕಿಸಿಕೊಂಡಿದ್ದಾಗಿದೆ.ಈ ಪ್ರೀತಿಗೆ ,ಇವರೆಲ್ಲರ ಈ ಆತ್ಮೀಯತೆಗೆ ಹೇಳ ಬೇಕಿರೋ ಮಾತುಗಳೆಲ್ಲಾ ಇಲ್ಲೆಯೇ ಉಳಿದಿದೆ.ನಿಮ್ಮ ಈ ಪ್ರೀತಿ ಆ ದೇಶದಲ್ಲಿರೋ ಅಣ್ಣನನ್ನ ಇದೊಂದು ದಿನಕ್ಕಾಗಿ ಇಲ್ಲಿಯ ತನಕ ಎಳೆದುಕೊಂಡು ಬಂದಿದೆ ಅಂತಾದ್ರೆ ನಿಜಕ್ಕೂ ಹೆಮ್ಮೆಯಾಗುತ್ತೆ ನಿಮ್ಮೆಲ್ಲರ ಮೇಲೆ ..ಬ್ಲಾಗ್ ಪ್ರೀತಿಯೇ ಅಂತಹುದ್ದೇನೋ ..ಎಲ್ಲರನೂ ಕಾಡುತ್ತೆ ,ಎಲ್ಲರನೂ ಅಪ್ಪುತ್ತೆ ,ಎಲ್ಲರಿಗೂ ದಕ್ಕುತ್ತೆ ಕೂಡಾ....
ಸಿಕ್ಕ ಒಂದಿಷ್ಟು ಡೈರಿಮಿಲ್ಕ್ ನಲ್ಲಿ ಸಧ್ಯ ಲಾಲಿಪಾಪ್ ಪುಟ್ಟಿಯನ್ನಾಗಿ ಮಾಡಲಿಲ್ಲ ಇವರೆನ್ನ ಅಂದುಕೊಳ್ಳುತ್ತಿದ್ದಾಗಲೇ ಅಲ್ಲೆಲ್ಲೋ ಸಿಕ್ಕ ಲಾಲಿಪಾಪ್ ! ಮುಖ ಊದಿಸಿ ಪುಟ್ಟಿಯಲ್ಲ ನಾ ಅಂದ್ರೆ ನಿಂಗೆ ಅಂತಾನೆ ಅಲ್ಲಿಂದ ತಂದಿದ್ದು ಕಣೇ ನೀ ಇಲ್ಲಿ ಎಲ್ಲರಿಗೂ ಪುಟ್ಟಿನೇ ಅಂತ ಎಲ್ಲರೂ ನಗೋ ತರ ಮಾಡೋ ಬ್ಲಾಗಿನಿಂದಲೇ ಪರಿಚಿತನಾಗಿರೋ ಆತ್ಮೀಯ.ಖುಷಿಯಿದೆ ನಿಮ್ಮಗಳ ಎದುರು ಪುಟ್ಟ ಪುಟ್ಟಿಯಾಗಿರೋಕೂ...
ನಿಮ್ಮೆಲ್ಲರ ಜೊತೆ ಮಾತಾಡಿ ನಕ್ಕ ಆ ಚಂದದ ಬೆಳಗು ...ಕಲೆತು ,ಕುಳಿತು ,ಹರಟಿ ,ಜಗಳವಾಡಿ ಎಲ್ಲರೊಟ್ಟಿಗೆ ಊಟ ಮಾಡಿದ ಆ ಚಂದದ ಮಧ್ಯಾಹ್ನ .....ಅಣ್ಣ ಅತ್ತಿಗೆ ಪುಟ್ಟ ತಂಗಿಯ ಜೊತೆಗೆ ಮಗಳಾಗಿ, ತಂಗಿಯಾಗಿ,ಅಕ್ಕನೂ ಆಗಿ ಮಾತಾಡಿ , ರಾತ್ರಿಯನೂ ಬಿಡದೆ ಇಡೀ ದಿನ ನಕ್ಕ ಆ ದಿನ...
ಹೌದು...ಇಲ್ಲೊಂದು ಚಂದದ ಮನೆಯಿದೆ..ಭಾವಗಳ ಜೋಪಾನ ಮಾಡೋ ಆತ್ಮೀಯ ಮನೆಮಂದಿಯಿದ್ದಾರೆ.ಅಣ್ಣಂದಿರ ಪ್ರೀತಿ,ಅಕ್ಕಂದಿರ ಮುದ್ದು ,ತಂಗಿಯ ಕೀಟಲೆ,ಕಾಲೆಳೆಯೋ ,ನಗಿಸೋ ಗೆಳೆಯರ ದೊಡ್ಡ ಬಳಗ ಎಲ್ಲವೂ ಇದೆ ಈ ಕುಟುಂಬದಲ್ಲಿ.ಬರೆದಿದ್ದು ಬರಿಯ ೫೦ ಸಾದಾ ಸೀದಾ ಭಾವಗಳು ..ಪಡೆದಿದ್ದು ಒಂದು ದೊಡ್ಡ ಪ್ರೀತಿಯ ಪರಿವಾರ ಅನ್ನೋದರ ಅರಿವು ಸಿಕ್ಕಿದ್ದು ಮಾತ್ರ ಈಚೆಗೆ !!...ಮೊಗೆ ಮೊಗೆದು ಕೊಡೋ ನಿಮ್ಮ ಪ್ರೀತಿಗಳ ಹಾಗೆಯೇ ಜೋಪಾನ ಮಾಡ್ತೀನಿ ನಾ.
ಹೀಗೊಂದು ಚಂದದ ಮನೆಯ ಮುದ್ದಿನ ಪುಟ್ಟಿ ಅನ್ನೋ ಕೋಡಿನ ಜೊತೆಗೆ -
ಬರೆದಿರೋ ಐವತ್ತೂ ಭಾವಗಳ ಪ್ರೀತಿಯಿಂದ ಓದಿ ಪ್ರೋತ್ಸಾಹಿಸಿದ್ದೀರ..ತಪ್ಪುಗಳನ್ನೂ ಚಂದವಾಗೇ ತಿಳಿಸಿಕೊಟ್ಟಿದ್ದೀರ ..ಅಲ್ಲಿ ಮೊದಲ ಭೇಟಿಯಲ್ಲಿ ಆತ್ಮೀಯರಾಗಿದ್ದೀರ..
ಇರಲಿರಲಿ ಈ ಪ್ರೀತಿ ಚಿರಕಾಲ ಹೀಗೆ...
ಪ್ರೀತಿಯಿಂದ,
ನಿರುಪಾಯಿ ನಾ
ಮತ್ತೆ ಭಾವಗಳ ಅರಮನೆಗೆ ಬಂದು ಮನಸಿನ ಮಿಡಿತಗಳ ಹೊರ ಹಾಕುತ್ತ ಮೊಗೆ ಮೊಗೆದು ಕೊಡೋ ನಿಮ್ಮ ಪ್ರೀತಿಗಳ ಹಾಗೆಯೇ ಜೋಪಾನ ಮಾಡ್ತೀನಿ ನಾ ಎನ್ನುವುದನ್ನು ಖಾತ್ರಿ ಪಡಿಸುತ್ತ, ಇರಲಿರಲಿ ಈ ಪ್ರೀತಿ ಚಿರಕಾಲ ಹೀಗೆಈಂದು ಹೇಳಿದ ನೀವು ಎಂದಿಗು ನಮ್ಮ ಬರವಣಿಗೆ ಮನೆಯ ಭಾಗ್ಯ ಪುಟ್ಟಿನೆ. ಶುಭವಾಗಲಿ.
ReplyDeleteಥಾಂಕ್ ಯು ಜಿ ..
Deleteನಿರುಪಾಯದ ಐವತ್ತರ ಭಾವವ ನೀವೋದ ಬಂದು ಇಷ್ಟ ಪಟ್ಟು ಮತ್ತದೇ ಪುಟ್ಟಿಯ ಗುಂಪಿಗೆ ಸೇರಿಸಿದ್ದು ಖುಶಿ ಆಯ್ತು :)
ನಿರುಪಾಯದ ಇನ್ನೊಂದು ಭಾವದಲ್ಲಿ ಮತ್ತೆ ಸಿಕ್ತೀನಿ ನಾ
ಆಹಾ..ನಿಜ್ಜ..ತುಂಬಾ ಇಷ್ಟಆತು..ನೀ ಬರೆದದ್ದು, ನೀ ಬಂದದ್ದು,.. ಭೇಟಿಯಿಂದ ಆಗುವ ಮುದಕ್ಕಿನ್ತ ಭೇಟಿಯನಂತರ ಬೆಳೆವ ಆತ್ಮೀಯತೆ ತುಂಬಾ ಮಧುರ...:) ಅಲ್ದೆ ಫೇಸ್ಬುಕ್ ಅಲ್ಲಿ ನೋಡಿದವ್ರ ಅಲ್ಲಿ ಹುಡ್ಕ ಮಜಾನೇ ಬೇರೆ :)
ReplyDeleteಧನ್ಯವಾದ ಅದರ್ಶ...
Deleteನಿಜ ಭಾವವೊಂದ ಸಿಕ್ಕಿದ ನಂತರದ ಜೋಪಾನ ಮಾಡೋ ,ಸಲುಹೋ ಭಾವ ಚಂದ ಅನಿಸೀತು ನಂಗೂ.
ಅಲ್ಲೊಂದಿಷ್ಟು ಮೊದಲ ಭೇಟಿಯ ಸಂಭ್ರಮಗಳಲ್ಲಿ ನೀನೂ ಒಬ್ಬನಾಗಿದ್ದೆ ಅನ್ನೋದು ನನ್ನ ಖುಷಿ.
ಸಿಕ್ತಿರೋಣ ಮತ್ತೆ ಮತ್ತೆ ...ಭಾವಗಳ ತೇರಲ್ಲಿ ,ಭಾವದರಮನೆಯೆದುರು .
ಮೊದಲು 'ನಿರುಪಾಯದ ಐವತ್ತು ಭಾವಗಳ ಒಡತಿಗೆ' ಗೆ' ತುಂಬು ಹೃದಯದ ಅಭಿನಂದನೆಗಳು. 50 ಬರಹ ಅನ್ನೋದು 500ಕ್ಕೆ ಮುನ್ನುಡಿ.
ReplyDeleteಹೋದ ವಾರ ಪುಸ್ತಕ ಬಿಡುಗಡೆಯ ಸಂಭ್ರಮಕ್ಕೆ ನಮಗಾಗಿ ದೂರದಿಂದ ಆಗಮಿಸಿದ ನಿಮ್ಮ ಒಲುಮೆಗೆ ನಾನು ಚಿರರುಣಿ.
ದೇವರು ನಿಮ್ಮನ್ನು ತಣ್ಣಗೆ ಇಟ್ಟಿರಲಿ ಸದಾ.
ಬದರಿ ಸರ್,
Deleteಮೊದಲ ಧನ್ಯವಾದ ನಿಮಗೆ ..."ಪಾತ್ರ ಅನ್ವೇಷಣಾ" ಅನ್ನೋ ಚಂದದ ಬಹು ಪಾತ್ರಗಳ ಗುಚ್ಚವೊಂದ ಪಡೆದ ನಂತರದ,ನಿಮ್ಮೊಟ್ಟಿಗಿನ ಆ ಭೇಟಿಯ ನಂತರದ ಧನ್ಯತೆಯ ಭಾವ ನನ್ನದು.
ಮಾತಿಗೆ ಸಿಲುಕದ ಒಂದಿಷ್ಟು ಖುಶಿಗಳಿಗೆ ನೀವು ಕಾರಣರಾದ್ರಿ :)
ಎಲ್ಲರ ಭಾವಗಳನೂ ಬಿಡದೇ ಪ್ರೋತ್ಸಾಹಿಸೋ ನಿಮಗೊಂದು ಶರಣು .
ಪ್ರೀತಿಯಿಂದ,
ನಿರುಪಾಯಿ ನಾ
barahagala sankyeya jotege baravanigeya belavanigeyu agali :)....
ReplyDeleteಧನ್ಯವಾದ ಚಿನ್ಮಯ್ ಅಣ್ಣಾ ...
Deleteಬೆಳೆಸೋಕೆ ಬರ್ತಿರಿ ..ಕಲಿಯೋದು ,ತಿಳಿಯೋದು,ತಿಳಿಸೋದೂ ತುಂಬಾ ಇದೆ ನಿಮ್ಮಿಂದ .
ಐವತ್ತು ಲೇಖನಗಳು.. ವಾವ್ ಒಂದು ಅನರ್ಘ್ಯ ಅನುಭವ.. ಮನದಾಳ ಕಡಲಲ್ಲಿ ಬರುವ ಭಾವದ ಅಲೆಗಳನ್ನು ಮೊಗೆ ಮೊಗೆದು ಬಡಿಸುತ್ತಾ ಸಾಗಿದ ನಿನ್ನ ಬರಹಗಳು ಚಿರನೂತನ.ಐವತ್ತು ಲೇಖನಗಳನ್ನು ಸಾಲಾಗಿ ಜೋಡಿಸಿದರೆ ಒಂದಕ್ಕಿಂತ ಒಂದು ವಿಭಿನ್ನ.. ದಿನವು ನಮ್ಮನ್ನೇ ನೋಡಿಕೊಂಡಂತೆ.. ಹೇಳುವ ಭಾವವನ್ನು ವಿವಿಧ ಅವತಾರಗಳಲ್ಲಿ ಹೇಳುವ ನಿನ್ನ ಬರವಣಿಗೆಯ ಶೈಲಿಗೆ ನನ್ನ ಅಭಿನಂದನೆಗಳು. ಸೂಪರ್ ಬಿಪಿ.. ನಿನ್ನ ಬರಹಗಳು ಬೆಳಗಲಿ, ಹೊಳೆಯಲಿ ಮಿಂಚಲಿ.. ಸುವರ್ಣ ಲೇಖನದ ಮೈಲಿಗಲ್ಲು ಮುಟ್ಟಿದ್ದಕ್ಕೆ ಅಭಿನಂದನೆಗಳು.. ನಿನ್ನಂತಹ ಮುದ್ದಾದ ಪುಟ್ಟಿಯನ್ನು ಬ್ಲಾಗ್ ಲೋಕಕ್ಕೆ ಕೊಟ್ಟ ನಿನ್ನ ಮಾತಾ ಪಿತರಿಗೆ ಮತ್ತು ತಾಯಿ ಸರಸ್ವತಿಗೆ ಶಿರಸಾ ನಮನಗಳು!!!
ReplyDeleteಶ್ರೀಕಾಂತಣ್ಣ ...
Deleteಹೀಗೊಂದು ಧನ್ಯತೆಯ ಪೂರ್ತಿ ಭಾವಕ್ಕೆ ಜೊತೆಯಾಗಿದ್ದು ,ಜೊತೆ ಸಿಕ್ಕಿದ್ದು ನೀವು :)
ಬರಿಯ ಭಾವಗಳ ತೇರಲ್ಲಿ ಹುಟ್ಟಿದ ಈ ಪ್ರೀತಿ ನನ್ನನ್ನಿಷ್ಟರ ಮಟ್ಟಿಗೆ ಮೌನಿಯಾಗಿಸುತ್ತೆ ,ಮನವಿಷ್ಟರ ಮಟ್ಟಿಗೆ ಖುಷಿ ಪಡುತ್ತೆ ಅನ್ನೋ ಸಣ್ಣ ಕಲ್ಪನೆ ಕೂಡಾ ನಂದಾಗಿರಲಿಲ್ಲ.
ಮಾತಿಗೂ,ಮೌನಕ್ಕೂ ದಕ್ಕದ ಈ ಪ್ರೀತಿಗಳಿಗೊಂದು ನಮನ .
ಪ್ರೀತಿಯಿಂದ ,
ಪುಟ್ಟಿ
ನಿಮ್ಮ ಭಾವಪೂರ್ಣ ಪ್ರೀತಿಗೆ ನಾನು ಋಣಿಯಾಗಿದ್ದೇನೆ.
ReplyDeleteಸುನಾಥ್ ಕಾಕಾ ...
Deleteಎಲ್ಲರೂ ನಿಮ್ಮನ್ನ ಕಾಕಾ ಅನ್ನೋವಾಗ ನಿಮ್ಮಲ್ಲೇನೋ ವಿಶೇಷತೆಯಿದೆ ಅನ್ನೊದರ ಅರಿವಾಗಿತ್ತು ..ಆದರದರ ಅನುಭವವಾಗಿದ್ದು (ಸಿಕ್ಕಿದ್ದು) ಮೊನ್ನೆಯ ನಯನ ಸಭಾಂಗಣದಲ್ಲಿ .
ನಿಮ್ಮೊಟ್ಟಿಗಿನ ಆ ಐದು ನಿಮಿಷದ ಮಾತುಗಳು ನನ್ನನ್ನೇನೋ ಮೋಡಿ ಮಾಡಿತ್ತು .
ಖುಷಿ ಆಯ್ತು...ಹೆಮ್ಮೆಯಾಯ್ತು ಹೀಗೊಂದು ಬ್ಲಾಗ್ ಲೋಕದ ಕಾಕ ನ ಮಾತಾಡಿಸಿದ ಮೇಲೆ .
ಅದಕ್ಕೆಯೇನೋ ನಿಮ್ಮನುಮತಿಯ ಕೇಳದೇ ನನ್ನಲ್ಲೂ ಕಾಕ ಅಂತ ಕರೆಯೋಕಾದುದ್ದು.
ಇರಲಿರಲಿ ಈ ಪ್ರೀತಿ ಚಿರಕಾಲ ಹೀಗೆ.
ಹೊಸ ಭಾವ - ಹೊಸ ಬಂಧಗಳೆಲ್ಲ ಬೆಳೆಯುತ್ತ ಬೆಳೆಯುತ್ತ ಬದುಕು ಹೊಸ ತೀರದೆಡೆಗೆ ಖುಷಿಯ ಅಲೆಗಳಲಿ ತೇಲುತಿರಲಿ...:)
ReplyDeleteಧನ್ಯವಾದ ಶ್ರೀವತ್ಸಾ..ಹೀಗೊಂದು ಹಾರೈಕೆಗೆ .
Deleteನೀವುಗಳು ಜೊತೆ ಇರೋ ತನಕ ನಗುವಿಗೇನೂ ಕೊರತೆ ಕಾಡದು.
ಇರಲಿ ಈ ಬಾಂಧವ್ಯ ಯಾವತ್ತಿಗೂ ಜೊತೆಗೆ ..ನಿಮ್ಮಗಳ ಜೊತೆ,ನಿಮ್ಮೆಲ್ಲರ ಸೇರಿ.
ಸಿಕ್ತೀನಿ ಮತ್ತೊಂದು ಭಾವದಲ್ಲಿ ...
ನಿರುಪಾಯಿ ನಾ....
ಭಾಗ್ಯ ಪುಟ್ಟಾ,
ReplyDeleteಎಂದಿನಂತೆ ಸುಂದರ ಲೇಖನ, ಇಷ್ಟವಾಗುವ ಅದೇ ಭಾವಪೂರ್ಣ ಶೈಲಿ. ಏಳು ಕಳೆದರೇನು, ಅಂತಹ ಎಪ್ಪತ್ತನ್ನು ಬರೆಯಬಲ್ಲೆ ನೀ. ಏನೇ ಇರಲಿ, ೫೦ ತುಂಬಿದ್ದಕ್ಕೆ ಧನ್ಯವಾದಗಳು. ಐವತ್ತು ನೂರಾಗಲಿ, ನೂರು ಸಾವಿರವಾಗಲಿ ಎಂಬುದು ಹೃದಯಪೂರ್ವಕ ಹಾರೈಕೆ.
ಇನ್ನು ಪುಸ್ತಕ ಬಿಡುಗಡೆ ಸಮಾರಂಭ, ಅದೊಂದು ಸಂಭ್ರಮ. ಎಷ್ಟೋ ಜನರನ್ನು ಮೊದಲ ಬಾರಿ ಭೇಟಿಯಾದ ಸಂಭ್ರಮ. ಎಷ್ಟೋ ಜನರನ್ನು ಮತ್ತೆ ಭೇಟಿಯಾಗುವ ಸಂಭ್ರಮ. ಈ ಸಂಭ್ರಮಗಳ ಮಧ್ಯೆ ನಾನೇ ಕಳೆದುಹೋದಂತಿತ್ತು ನನ್ನ ಮಟ್ಟಿಗೆ. :) ಆಗಿದ್ದು ಬರೀ ಖುಷಿ ಎಂದರೆ ಉಂಟಾದ ಭಾವವನ್ನು ಅರ್ಧ ಮಾತ್ರ ಹೇಳಿದಂತೆ. ಬೆಳಗಿನ ಸಮಾರಂಭ, ಮಧ್ಯಾಹ್ನದ ಊಟ ಎಲ್ಲವೂ ಅದ್ಭುತವೇ, ಈ ಬರಹದಂತೆಯೇ.
ಖುಶಿ ಆಯ್ತು ಓದಿ, ಬರೀತಾ ಇರಿ.
ಜಿ,
Deleteಧನ್ಯವಾದ ನಿರುಪಾಯದ ೫೦ರ ಖುಷಿಗೆ ನೀವಿತ್ತ ಶುಭಾಶಯಕ್ಕೆ ...ಗೊತ್ತಿಲ್ಲ ಮುಂದೆ ಭಾವಗಳ ಜೊತೆ ಮಾತಾಡ್ತೀನೋ ಇಲ್ವೋ ಅಂತ ..
ಆದರೆ ಕಳೆದು ಹೋದ ಈ ಏಳು ಭಾವಗಳ ಮೇಲೆ ತೀರಾ ಅನ್ನೋ ಅಷ್ಟು ಒಲವಾಗಿತ್ತು ನಂಗೆ :(
ಕಾರ್ಯಕ್ರಮದ ಬಗ್ಗೆ ಬರಿಯ ಖುಷಿ ಆಯ್ತು ಅಂತಂದ್ರೆ ನನ್ನ ಭಾವಕ್ಕೂ ಎಲ್ಲೋ ಧಕ್ಕೆ ಬಂದಂತೆ ಅನ್ನಿಸೀತು ..
ಆದರಿಷ್ಟೇ ಇರಲಿ ...ಖುಷಿ ಕೊಡ್ತು ನಯನ ಸಭಾಂಗಣದ ಆ ಬೆಳಗು ಆತ್ಮೀಯ ಬ್ಲಾಗಿಗರೊಡಗೂಡಿ..ಭಾವಮಂಥನದಲ್ಲಿ
ಭಾವ ಬರಹ ಐವತ್ತಾಯಿತು... ಬೆಳೆ ಬೆಳೆದು ನೂರಾಗಲಿ....
ReplyDeleteಮುಂದೆ ನಿನ್ನ ಪುಸ್ತಕ ಬಿಡುಗಡೆಯಾಗುವ ಹೊತ್ತಿಗೆ ನಾನು ಬಂದೇ ಸಿದ್ದ......
ಆ ಕಾಲವೇನು ದೂರವಿಲ್ಲ.....
ರಾಘವಣ್ಣಾ ...
Deleteನಿಮ್ಮೀ ಹಾರೈಕೆಗೊಂದು ನಮನ ..
ನೀವೆಲ್ಲಾ ಜೊತೆ ಇದ್ದಾಗ ಯಾವುದೂ ಕಷ್ಟ ಅನಿಸಲಾರದು :)
ಇರಲಿ ಈ ಬಂಧ ಹೀಗೆಯೇ ..ನಿಮ್ಮೊಟ್ಟಿಗಿರೋವಾಗ ಪ್ರೀತಿಯಾಗುತ್ತೆ ನನ್ನ ಮೇಲೆ ನಂಗೂ .
ಪ್ರೀತಿಯಿಂದ
ಐವತ್ತು ಸಂಚಿಕೆ ಪೂರೈಸಿದ ಖುಷಿಗೆ ಪ್ರೀತಿಯ ಶುಭಾಶಯಗಳು...
ReplyDeleteಇನ್ನಷ್ಟು ಮತ್ತಷ್ಟು ಚಂದದ ಬರಹಗಳ ನಿರೀಕ್ಷಿಸುತ್ತ...
ಸುಮತಿಯಕ್ಕಾ,
Deleteಧನ್ಯವಾದ ನಿಮ್ಮೀ ಮಾತುಗಳಿಗೆ ...
ಮತ್ತೊಂದು ಭಾವದಲ್ಲಿ ಮತ್ತೆ ಜೊತೆಯಾಗ್ತೀನಿ ನಾ ,,
ಪ್ರೀತಿಯಿಂದ
ಪುಟ್ಟಿ..ನಿನ್ನ ಲೇಖನ ಮತ್ತೊಮ್ಮೆ ನಿನ್ನ ಮುದ್ದು ಮುಖವನ್ನು ನನ್ನ ಮುಂದೆ ತಂದು ನಿಲ್ಲಿಸಿತು...ಬಹಳ ಆತ್ಮೀಯ ಮತ್ತು ಭಾವಪೂರ್ಣ ನಿವೇದನೆ...ದೇವರು ನಿನ್ನ ಬ್ಲಾಗ್ ನ ಐನೂರರ ಲೇಖನ ಬರುವಂತಾಗಲಿ ಎಂದು ಹಾರೈಸುತ್ತೇನೆ.
ReplyDeleteಅಜಾದ್ ಜಿ,
Deleteಹೀಗೊಂದು ಮೊದಲ ಭೇಟಿಯ ಖುಷಿ :)
ತುಂಬಾ ಖುಷಿ ಆಯ್ತು ನಿಮ್ಮೊಟ್ಟಿಗೆ ಮಾತಾಡಿ...
ಬ್ಲಾಗಿಗರ ಈ ಪ್ರೀತಿಯಲ್ಲಿ ನಾನೆಲ್ಲೋ ಕಳೆದೋದ ಭಾವ..
ಮಾತಿಗೆ ದಕ್ಕದ ಖುಷಿಗೆ ನೀವು ಸಿಕ್ಕಿದ್ರಿ ಅಲ್ಲಿ ಅಂತಷ್ಟೇ ಹೇಳಬಲ್ಲೆ ನಾ..
ಪ್ರೀತಿಯಿಂದ
This comment has been removed by the author.
ReplyDeleteಭಾಗ್ಯ ಭಟ್ ತಂಗಿ ನಿನ್ನ ಬರವಣಿಗೆಯಲ್ಲಿ ಪ್ರಬುದ್ದತೆ ಇದೆ, ಬರವಣಿಗೆಯ ಸಂಖ್ಯೆ ಮತ್ತಷ್ಟು ಹೆಚ್ಚಲಿ, ಪ್ರೀತಿಯ ವಿಶ್ವಾಸದ ಮನದಲ್ಲಿ ನೆ ಬರೆದರೂ ಅದು ಚಂದವೇ, ಬ್ಲಾಗ್ ಪರ್ಪಂಚದಲ್ಲಿ ನಿನ್ನಂತಹ ತಂಗಿಯರು ಉತ್ತಮವಾಗಿ ಬರೆಯುತ್ತಿರುವುದು ನಮಗೆಲ್ಲಾ ಖುಷಿಯ ವಿಚಾರ, ಶುಭವಾಗಲಿ ತಂಗಿ ಪ್ರಬುದ್ದ ಬರವಣಿಗೆ ಮುಂದುವರೆಯಲಿ .
ReplyDeleteಬಾಲಣ್ಣ ... ಇಲ್ಲೊಂದು ಧನ್ಯತೆಯ ಭಾವಕ್ಕೆ ನೀವೂ ಕಾರಣರಾದ್ರಿ :)
Deleteಖುಷಿ ಆಯ್ತು ..
ಆದ್ರೂ ಕೊನೆಗೂ ನಿಮ್ಮ ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳೋಕೆ ಆಗಲೇ ಇಲ್ಲ ನೋಡಿ :)
ಇರಲಿರಲಿ ಈ ಪ್ರೀತಿ ಯಾವತ್ತೂ ಹೀಗೇ..
ಪ್ರೀತಿಯಿಂದ,
ತಂಗಿ
ಪುಟ್ ಪುಟಾಣಿ ..
ReplyDeleteಐವತ್ತರ ಸಂಭ್ರಮಕ್ಕೊಂದು ನೂರು ಮುತ್ತುಗಳು.. ಭಾವಗಳಲ್ಲಿ ಒಂದಾದವರು ನಾವಾದರೂ ಬಾಂಧವ್ಯದ ಬೇರು ರಕ್ತ ಸಂಬಂಧಕ್ಕಿಂತ ಆಳವಾಗಿಬಿಟ್ಟಿದೆ. ನಿನ್ನ ಪ್ರತಿ ಬೆಳವಣಿಗೆಯ ಖುಷಿ ನನ್ನ ಕಣ್ಣಲ್ಲೂ ...
ಇಂಥ ಹತ್ತು ಹಲವು ಬರಹಗಳು , ಭಾವಗಳು ನಿನ್ನಿಂದ ಬರಲಿ.. ಚೆಂದನೆಯ ಬರಹ ಶೈಲಿ ಪುಟ್ಟಿ ನಿಂದು .. ಬರಹಗಳಲ್ಲಿ ಬೆಳವಣಿಗೆಯಿದೆ , ಪ್ರಬುದ್ಧತೆಯಿದೆ , ಬರವಣಿಗೆಯ ಸಂಖ್ಯೆಗಳಲ್ಲಿ ಬೆಳವಣಿಗೆಯಾಗಲಿ ..
ಪ್ರೀತಿಯಿಂದ ..
ಸಂಧ್ಯಕ್ಕ .. :)
ಮುದ್ದಕ್ಕಾ...
Deleteಏನಂತಾ ಹೇಳಲೇ ನಿನ್ನೀ ಪ್ರೀತಿಗೆ ...
ಮಾತಿಲ್ಲ ನನ್ನಲ್ಲಿ ...ಭಾವಗಳನ್ನೆಲ್ಲಾ ಬಿಡದೇ ಜೋಪಾನ ಮಾಡೋ ನೀ ಈ ಬಾರಿಯೂ ನಂಗೆ ಸಿಕ್ಕಿದ್ದು ಬರಿಯ ೪ ೫ ಗಂಟೆ ಅನ್ನೋ ಸಣ್ಣ ಬೇಜಾರಿದ್ರೂ ಪ್ರತಿ ದಿನವೂ ನೀ ಹೇಳಿದ ರಕ್ತ ಸಂಬಂಧಕ್ಕೂ ಮೀರಿದ ಭಾವವ ಹೊತ್ತು ಮಾತು ಶುರುವಿಡೋ ಈ ಅಕ್ಕಾ ಅಂದ್ರೆ ನಂಗೇನೋ ಒಲವು.
ಆದರೂ ಅಣ್ಣನ ಮನೆಯಲ್ಲಿ ಈ ಪ್ರೀತಿಯ ಅಣ್ಣನೊಟ್ಟಿಗೆ ರಾತ್ರಿ ಪೂರ್ತಿ ಮಾತಾಡೋವಾಗ,ನಗೋವಾಗ ಇಬ್ಬರಿಗೂ ನೀ ನೆನಪಾಗಿದ್ದೆ .
ಮತ್ಯಾವತ್ತಾದ್ರೂ ಇಬ್ಬರೂ ತಂಗಿಯರೂ ಜೊತೆ ಸೇರೋಣ ಈ ಅಣ್ಣನ ಪ್ರೀತಿಯಲ್ಲಿ ಪಾಲು ಹಂಚಿಕೊಳ್ಳೋಕೆ.
with a hug full of love,
ಮತ್ತೊಮ್ಮೆ ಪ್ರೀತಿಯ ಧನ್ಯವಾದ ಯಾವಾಗ್ಲೂ ಜೊತೆಯಿರೋ ,ಎಲ್ಲಾ ಭಾವಗಳಿಗೂ ಪ್ರೋತ್ಸಾಹಿಸೋ ಈ ಮುದ್ದಕ್ಕಂಗೆ,
ಪುಟ್ತಂಗಿ,
ಮುದ್ದೇ..
ReplyDeleteನಿನ್ನ ಭಾವ ಬರಹ ಚಂದವೋ ಚಂದ... ಅಯ್ಯೋ ಮಿಸ್ ಮಾಡಿಕೊಂಡೆನಲ್ಲ ಈ ಭಾವಗಳನ್ನ , ಸಂತೋಷಗಳನ್ನ ಎಂಬ ಭಾವ ನನ್ನದು. ನಿರುಪಾಯದ ನಿರೂಪಣೆ ಎಂದಿನಂತೆ ಚಂದ ಮತ್ತು ಚಂದ...
ಬದುಕ ಖುಷಿಗೆ ಕಾರಣವಾಗುವ ಇನ್ನಷ್ಟು ಭಾವಗಳು ನಿರುಪಾಯದ ಭಾವಗಳಿಗೆ ಜೊತೆಯಾಗಲಿ ಎಂಬ ಹಾರೈಕೆ....
ಥಾಂಕ್ ಯು ಮುದ್ದಕ್ಕಾ :)
ReplyDeleteನಿಮ್ಮೀ ಪ್ರೀತಿ ಹಾರೈಕೆಗೊಂದು ಶರಣು.
ನಿರುಪಾಯದ ಅದೆಷ್ಟೋ ಭಾವಗಳ ಜೊತೆಯಾಗಿದ್ದೀರ,ಅದೆಷ್ಟೋ ಭಾವಗಳ ಮೂಲವೂ ಆಗಿದ್ದೀರ ;)
ಇರಲಿ ಮುದ್ದಕ್ಕನ ಈ ಚಂದದ ಸಲುಗೆ ,ಪ್ರೀತಿ ಯಾವಾಗಲೂ ಹೀಗೆ.
ಇನ್ನೊಂದು ಭಾವದಲ್ಲಿ ಮತ್ತೆ ಜೊತೆಯಾಗ್ತೀನಿ.
ಪ್ರೀತಿಯಿಂದ,
ಐವತ್ತರ ಅಜ್ಜಿಗೆ ಶುಭಾಶಯ ;-)..
ReplyDeleteಬದಿಗಿರಿಸೋಕೆ ಹೋಗಿ ಮರೆಯಾದ ಭಾವಗಳಿಗೆ ಬೇಸರಿಸದಿರು ಭಾಗ್ಯ.. ಮರೆಯಾಗೋದು ಭಾವಗಳಲ್ಲ. ಹೊಳವುಗಳಷ್ಟೇ.. ಕಾಡೋ ಭಾವಗಳು ಬರೆಸೇ ಬರೆಸುತ್ತೆ.. ಪಕ್ವವಾಗಲು ಸಮಯ ಕೊಡಬೇಕಷ್ಟು..
ಐವತ್ತು, ನೂರಾಗಿ , ಐನೂರಾಗಲಿ ಅನ್ನೋ ಶುಭಾಶಯ :-)