ಏನೋ ಕಳಕೊಂಡ ಭಾವದಲ್ಲಿತ್ತು ನಿನ್ನೆಯ ಇಳಿ ಸಂಜೆ.ಸುಮ್ಮನೆ ಟೆರೇಸ್ ನಲ್ಲಿ ಒಂದರ್ಧ ಗಂಟೆ ಕೂರೋಣ ಅಂತ ಹೋದ್ರೆ ಎದುರು ಮನೆಯ ಟೆರೇಸ್ನಲ್ಲಿ ನಿಂತಿದ್ದ ಕೆಂಪಂಗಿಯ ಹುಡುಗ ದುರುಗುಟ್ಟಿಕೊಂಡು ನೋಡುತ್ತಿದ್ದ. ಸಿಗರೇಟು ಸುಡೋಕೆ ಟೆರೇಸೇ ಬೇಕಿತ್ತಾ ಇವನಿಗೆ ಅಂತ ಗೊಣಗಿಕೊಂಡು ಕೆಳಗಿಳಿದು ಬಂದಿದ್ದೆ.ಎಲ್ಲಿಯೂ ಸಮಯ ಸರಿಯದೇ ಕ್ರಿಕೆಟ್ ಆದ್ರೂ ನೋಡೋಣ ಅಂತ ಹೋದ್ರೆ ಸರಿಯಾಗಿ ಅಲ್ಲಿಗೆ ಬ್ರೇಕ್ ಇತ್ತು! ಮತ್ತೆ ಪುಸ್ತಕವ ಹಿಡಿಯೋ ಮನಸ್ಸಾಗದೇ ಆ ಕಡೆ ಈ ಕಡೆ ಓಡಾಡುತ್ತಿದ್ದಾಗ ನೆನಪಾಗಿದ್ದು ಗೋಲ್ ಗಪ್ಪಾ ಅಂಕಲ್.ಅವಾಗ್ಲೇ ನೆನಪಾಗಿದ್ದು ನಾ ನನ್ನ ಹಳೆ ಹುಡುಗನನ್ನ ಮರೆತು ತುಂಬಾ ದಿನಗಳಾದ್ವಲ್ವಾ ಅಂತ!
ನನ್ನ ಇಂತಹುದೇ ಅದೆಷ್ಟೋ ಸಂಜೆಗಳ ಜೊತೆಯಾಗೋದು ಇದೆ ಗೋಲ್ ಗಪ್ಪಾ.ಮಾರು ಮಾರಿಗೊಂದು ಇದ್ರೂ ನಂಗೆನೋ ಈ ಗೋಲ್ಗಪ್ಪಾ ಅಂದ್ರೆ ಲವ್.(ಫಾರ್ ಯುವರ್ ಕೈಂಡ್ ಇನ್ಫೋ: ಗೋಲ್ಗಪ್ಪಾ ಮಾಡಿಕೊಡೋದು ಅಂಕಲ್).ಒಬ್ಬಳೇ ಹೋಗಿ ತಿಂದುಕೊಂಡು ಆ ಅಂಕಲ್ ಜೊತೆ ಮಾತಾಡಿಕೊಂಡು ಅವರನ್ನಷ್ಟು ನಗಿಸಿ ಬರೋದ್ರಲ್ಲೇನೋ ಚಂದದ ತೃಪ್ತ ಖುಷಿ ನಂಗೆ. ಮುಂದೆ ಯೋಚಿಸದೇ ಆ ಕಡೆ ಹೊರಟೆ.ದೂರದಿಂದಲೇ ಮುಗುಳ್ನಕ್ಕ ಅಂಕಲ್ "ಯಾಕೇ ಪುಟ್ಟಿ ತುಂಬಾ ದಿನ ಆಗಿತ್ತು ಈ ಕಡೆ ಬರದೆ "ಅಂತ ಕೇಳಿದಾಗ ಸಲಿಸಾಗಿ ಬಾಯಿಗೆ ಬಂದ "ಪರೀಕ್ಷೆಗಳಿದ್ವು ಅಂಕಲ್ ..ಬರೋಕಾಗಿರ್ಲಿಲ್ಲ" ಅಂತಂದಿದ್ದೆ ಹೌದು.ಆದರೆ ಅತೀ ಇಷ್ಟದ ಇದನ್ಯಾಕೆ ಇಷ್ಟು ದಿನ ಮರೆತು ಬಿಟ್ಟಿದ್ದೆ ಅಂತ ಯೋಚನೆಗೆ ಬಿದ್ದಿದ್ದೆ ನಾ.ಅದೂ ಊಟ ಬಿಟ್ರೂ ಇದನ್ನ ಬಿಡದಿದ್ದ ನಾನು!
ಮತ್ತೆ ರಾತ್ರಿ ಅಪ್ಪ ಅಮ್ಮಂಗೆ ಒಂದಿಡೀ ದಿನದ ನನ್ನನ್ನ ಒಪ್ಪಿಸೋವಾಗ ಹೇಳಿದ್ದೆ "ಅಮ್ಮಾ ಇವತ್ಯಾಕೋ ತುಂಬಾ ದಿನ ಆದ್ಮೇಲೆ ತಿಂದೆ ನೋಡು ..ಮತ್ತೂ ಖುಷಿ ಸಿಕ್ತು ".ಅದಕ್ಕೆ ಅಪ್ಪ ಕಾಲೆಳೆದಿದ್ರು ಇಷ್ಟು ದಿನ ಪಾಪ ಅವರ ಊಟಕ್ಕೆ ಕಡಿಮೆ ಆಯ್ತೇನೋ .ಇವತ್ತು ಅವರಿಗೂ ಒಳ್ಳೆಯ ವ್ಯಾಪಾರ ಬಿಡು ಅಂತೆಲ್ಲಾ. ಅಮ್ಮ ಮುಂದುವರೆಸಿ ಎಷ್ಟು ತಿಂದೆ ಅಂತ ಕೇಳಲ್ಲ ,ಆದರೆ ಪುಟ್ಟಿ ಸ್ವಲ್ಪ ದಿನಕ್ಕೆ ಪರೀಕ್ಷೆಗಳು ನಿಂಗೆ ಹುಷಾರು ನೆಗಡಿಯಾಗುತ್ತೆ ಅಂತೀನ್ನೆನೇನೋ ಮುಗಿಯದ ಅದೇ ಅತೀ ಕಾಳಜಿ.
ಇರಿ ಮಾರಾಯ್ರೇ ..ಹೇಳಹೊರಟಿರೋದು ಗೋಲ್ಗಪ್ಪಾ ಪುರಾಣ ಅಲ್ಲ. ಆಗಲೇ conclusion ಗೆ ಬರಬೇಡಿ.
ಯಾಕೆ ನನ್ನ ಸಂಜೆಗಳು ಕಾಣದೇ ನಾಪತ್ತೆಯಾಗಿದ್ವು ಇಷ್ಟು ದಿನಗಳು ಅಂತ ಏನೋ ದೊಡ್ಡದಾಗಿ ಯೋಚನೆಗೆ ಬಿದ್ದೋರ ತರಹ ಫೋಸ್ ಕೊಟ್ಕೊಂಡು ಅದೇ ಬಾಲ್ಕನಿಯಲ್ಲಿ ಕೂತಿದ್ದಾಗ ಮೊಬೈಲ್ ಬೀಪ್ ಆಗಿತ್ತು ಉತ್ತರ ಸಿಕ್ಕಂತೆ.
ಎಲ್ಲೇ ಹೋದೆ ಕೋತಿ ನಿನ್ನನ್ನೆಷ್ಟು ಕರೆಯೋದು ವಾಟ್ಸ್ಅಪ್(whatsapp)ಗೆ ಅಂತ ಮುಖ ಕೆಂಪಗೆ ಮಾಡಿಕೊಂಡು ಮೆಸೇಜ್ ಮಾಡಿದ್ದ ಗೆಳತಿ.ಅಂದುಕೊಂಡೆ ಹೌದಲ್ವಾ ನಾನಿಷ್ಟು ದಿನ ಕಳೆದುಹೋಗಿದ್ದು ಇಲ್ಲಿಯೇ ಇದ್ದೀತು ಅಂತ.
ರಾತ್ರಿಯಾದ್ರೆ ಸಾಕು ನಿಧಿ ಸಿಕ್ಕೋ ತರಹ whatsappನಲ್ಲಿ ಬಿದ್ದುಕೊಳ್ಳೋ ಸ್ನೇಹಿತರಿಗೆ,ಅಣ್ಣಂದಿರಿಗೆ,ಅಕ್ಕಂಗೆ ಕಾಲೆಳೆಯೋಕೆ ಸಿಗೋದು ನಾ ಮಾತ್ರವೇನೋ ಅಂತ ಅನ್ನೋದೆ ನನ್ನ ದೊಡ್ಡ ಅನುಮಾನ! ತಾ ಮುಂದು ನಾ ಮುಂದು ಅಂತ ಕಿತ್ತಾಡ್ತಾ ಕಾಲೆಳೆಯೋ ಇವರುಗಳನ್ನೆಲ್ಲಾ ಇಷ್ಟು ದಿನಗಳ ಕಾಲ ಸಹಿಸಿಕೊಂಡಿರೋ ನಂಗೆ ನೀವು ಶಹಬ್ಬಾಶ್ ಅನ್ನಲೇ ಬೇಕು.ಹೇಳಿಲ್ಲ ಅಂದ್ರೆ ನಾನೇ ಹೇಳ್ಸ್ಕೊಂತೀನಿ :ಫ್
ಹೀಗೊಬ್ಬ ಚಂದದ ಗೆಳೆಯ ನನ್ನ ಕಾಡಬಂದು ತುಂಬಾ ದಿನಗಳಾದ್ವು ನೋಡಿ.ಟೈಪ್ ಮಾಡೋಕೆ ಬೇಜಾರು (ಅರ್ಧ ಒಪ್ಪಿಕೊಳ್ತೀನಿ ಸ್ವಲ್ಪ ಜಾಸ್ತಿ ಸೊಂಬೇರಿ ನಾ ಅಂತ)ಅನ್ನೋ ನಾನು ರಾತ್ರಿ ೧೦ಕ್ಕೆ ಮಾತು ಶುರು ಮಾಡಿ ೧:೩೦ಗೆ ಮಾತು ನಿಲ್ಲಿಸ್ತಿದ್ದೆ ಅಂತದ್ರೆ ನಿಮ್ಗೂ ಅರ್ಥ ಆದೀತು.
ಅವತ್ತಿವರೆ ನಂಗೆ "ಯಾಕೆ ದಿನಕ್ಕೆ ೪ forward ಮೆಸೇಜ್ ಮಾಡ್ತೀಯ..ಯಾವುದಾದ್ರೂ ಹುಡುಗನ್ನ ಹುಡ್ಕೋ ಮೆಸೇಜ್ ಖಾಲಿ ಮಾಡೋಕೆ"ಅಂತ ಕಾಲೆಳೆದಿದ್ರು.ಆದರೆ ಇವತ್ತು "ರಾತ್ರಿ ಒಂದಾದ್ರೂ whatsapp ನಲ್ಲೇ ಬಿದ್ದಿರ್ತೀಯ ..ಹುಡ್ಗಿ ಹಾಳಾದಂಗಿದೆ" ಅಂತಾ ಇನ್ನೇನೋ ಕಾಲೆಳೆಯ ಬರುತ್ತಾರೆ.ಮಾತಾಡ್ತಾ ಇರೋದು,ಏನೋ ಗಹನ ಚರ್ಚೆಯಲ್ಲಿ ತೊಡಗಿರೋದು ಇವರುಗಳ ಜೊತೆಯೇ ಆಗಿದ್ರೂ ತಲೆಗೊಂದೊಂದು ಕಾಮೆಂಟ್ ಗಳು ಬೀಳ್ತಿರುತ್ತೆ ಸುಮ್ ಸುಮ್ನೆ.
ಮೊದಲೇ ತುಂಬಾ ಅನ್ನೋ ಅಷ್ಟು ಉರಿಯೋ ನಂಗೆ ಇವರುಗಳ ಇಲ್ಲದ ಕಾಮಿಡಿಗಳಿಗೆ ಮೈ ಪರಚಿಕೊಳ್ಳೋ ಅಷ್ಟು ಸಿಟ್ಟು ಬರೋದು.ಎಲ್ಲರಿಗೂ ಒಂದು ಸೈಲೆಂಟ್ ಬಾಯ್ ಅಂದು ಮುದ್ದು ಗೆಳೆಯನನ್ನ ಮೊಬೈಲ್ ನಿಂದ ತೆಗೆದು ೪ ದಿನಗಳಾದ್ವು!!
ಇವತ್ತೂ ಮತ್ತವ ಗೋಲ್ಗಪ್ಪಾ ತಿನ್ನೋಕೆ ಅಂತಾ ಬಿಡುವು ಕೊಡೋದರ ಮೂಲಕ ನೆನಪಾದ.ದಿನವೂ ಹಾಗೆ ಒಂದಲ್ಲ ಒಂದು ಕೆಲಸದಲ್ಲಿ ನೆನಪಾಗ್ತಾನೆ ಪಕ್ಕಾ ಹಳೆಯ ಹುಡುಗನ ತರಾನೆ!
ಎಲ್ಲವೂ ಇದೆ ಇಲ್ಲಿ.ಎಲ್ಲರೂ ಇದ್ದಾರೆ.ಅನ್ ಲಿಮಿಟೆಡ್ ಟಾಕ್ಸ್, ಅನ್ ಲಿಮಿಟೆಡ್ ನಗು..ಒಂದಿಷ್ಟು ಕ್ರೇಜಿ ಗೆಳೆಯರ ಗುಂಪಿದ್ರೆ ಸಾಕು ಲೈಫ್ ಬರ್ಬಾದ್ ಆದಂಗೇ.
LKG ಕ್ರಶ್ ಇಂದ ಶುರುವಾಗೋ ಕಾಲೆಳೆಯೋ ಕೆಲಸ ಬಂದು ನಿಲ್ಲೋದು ಬೆಳಿಗ್ಗೆ ಕ್ಯಾಂಪಸ್ ನಲ್ಲಿ ಸ್ಮೈಲ್ ಮಾಡಿದ್ದ ಸೀನಿಯರ್ ಹುಡುಗನ ತನಕ!ಇನ್ನು ಕ್ಲಾಸಿನಲ್ಲಿರೋ ಒಂದು ತರಲೆ whatsapp ಗೆಳೆಯರ ಗುಂಪಲ್ಲಿ ಖಾಯಂ ಸದಸ್ಯತ್ವ ಸಿಕ್ಕಿದ್ರೆ ಕಥೆ ಮುಗಿದಂತೆ!.ಏನಾಗುತ್ತಿದೆ ಅಂತ ನೋಡೋಕೆ ಹೋಗಿದ್ರೂ ಅವತ್ತಿಡಿ ಅವರ ಬಗೆಗೆ ಮಾತಾಡೋ,ಅವರನ್ನ ತೀರಾ ಅನ್ನೋ ಅಷ್ಟು ಗೋಳು ಹೊಯ್ಯೋ ಈ ಕ್ಲಾಸಿನ ಗುಂಪಿಂದ ತಪ್ಪಿಸಿಕೊಂಡು ಬಂದ್ರೆ ಏನೋ ಸಾಧಿಸಿದ ಖುಷಿ.
ಸುಮ್ಮನೆ ಕಾಲೆಳೀತಾ ಕೂರೋದು ನಂಗಿಷ್ಟ ಆಗಲ್ಲ.ಒಮ್ಮೊಮ್ಮೆ ಉಸಿರುಗಟ್ಟಿಸಿ ಬಿಡೋ ಇವರುಗಳಿಂದ ನೆಮ್ಮದಿ ಸಿಕ್ಕಿ ಒಂದೆರಡು ತಿಂಗಳುಗಳಾದ್ವೇನೋ.
ಇಡಿಯ ಕ್ಲಾಸಿನ ಯುನಿಟಿಯ ಅರಿವು ಸಿಗೋದು ಇಲ್ಲಿಯೇ. ದಿನಕ್ಕೊಬ್ಬರಂತೆ ಟಾರ್ಗೆಟ್ ಮಾಡಿಕೊಳ್ಳೋ ಇವರುಗಳು ಕಾಲೆಳೆಯೋವಾಗ ಮಾತ್ರ ಎಲ್ಲರೂ ಒಂದೇ.ಎಲ್ಲಾ ಸೀಕ್ರೆಟ್ ಗಳು ಬಯಲಾಗೋದು ಇಲ್ಲಿಯೇ.ಏನೋ ತಮಾಷೆಗೆ ಶುರುವಾದ ವಿಷಯ ಚೌಕಟ್ಟಿನಿಂದ ಹೊರ ಬಂದು ಆಮೇಲಲ್ಲಿ ಸರಿಯಾಗಿ ಬೈದ ಮೇಲೆ ಎಲ್ಲಾ ತಣ್ಣಗಾಗಿ ಮಲಗೋದು.
ಇನ್ನಿಲ್ಲಿ ಎಲ್ಲಾ ಲೆಕ್ಚರರ್ಸ್ ಗೂ ಒಂದೊಂದು ಇಡೀ ದಿನದ ಕಾಮೆಂಟ್ ಕಾರ್ಯ ಸಾಗ್ತಿರುತ್ತೆ.ಅಲ್ಲೆಲ್ಲಾ ಸುಮ್ಮನೆ ಏನೇನೋ ಫನ್ನಿ ಫನ್ನಿ ಕಾಮೆಂಟ್ ಮಾಡೋದು ,ಮಾಡೋ ಕಾಮೆಂಟ್ ಗಳಿಗೆ ಎಲ್ಲರೂ ಲೈಕ್ ಕೊಡೋದು...ಹೀಗೆ ಏನೇನೂ ಕಾಂಪಿಟೇಶನ್ ಮೇಲೆ ಮಾಡ್ತಿರ್ತೀವಿ.
ಎಲ್ಲಾ ಭಾವಕ್ಕೂ ಒಂದೊಂದು ಚಂದದ smily ಗಳು ಇರುತ್ತೆ ಇಲ್ಲಿ.ಮೊದಲ ವ್ಯಾಮೋಹಕ್ಕೆ ಕಾರಣ ಈ smily ಗಳೇ ಏನೋ. ತೀರಾ ಕಾಲೆಳೆಯೋ ಗೆಳೆಯಂಗೆ ಕೊಲೆಯಾಗುತ್ತೆ ಅಂತ ಚಾಕು ತೋರಿಸಬಹುದು,ಇಷ್ಟವಾಗದ್ದನ್ನ ಶೂಟ್ ಮಾಡಬಹುದು(ನಂಗೆಲ್ರೂ ಬದನೆಕಾಯಿ ಶೂಟರ್ ಅಂತಾರೆ ಇಲ್ಲಿ).ಅಲ್ಲೊಬ್ಬ ಗೆಳತಿ ಪಂಚ್ ಮಾಡಿದ್ರೆ ಪಂಚ್ ಬ್ಯಾಕ್ ಮಾಡೋಕೆ ಆಗೋದು ಇಲ್ಲಿ ಮಾತ್ರವೇನೋ.ಇನ್ನೊಂದಿಷ್ಟು ಮಹಾನುಭಾವರು ಚಂದಿರನನ್ನೂ ಜೊತೆ ಕಳಿಸಿ ಶುಭ ರಾತ್ರಿ ಹೇಳಿದ್ರೆ ಮತ್ತೊಂದಿಷ್ಟು ಜನ ಕಾಫಿಯ ಜೊತೆ ಮುಂಜಾನೆಯ ಸ್ವಾಗತಿಸೋಕೆ ರೆಡಿ ಇರ್ತಾರೆ.ರಾತ್ರಿ ಬೆಳಗನ್ನದೇ ಇಡೀ ದಿನದ ಎಲ್ಲಾ ಭಾವಕ್ಕೂ ಇಲ್ಲೊಂದಿಷ್ಟು ಸ್ಮೈಲ್ಸ್.ಕತ್ತೆ ,ನಾಯಿ ಅಂತ ಪ್ರೀತಿಯಿಂದ ಬೈಯೋಕೂ ಇಲ್ಲಿ ಸಿಂಬಲ್ಸ್ ಇದೆ!
ಪ್ರೀತಿ,ನಗು,ಮುದ್ದು,ಹಗ್,ಸಿಟ್ಟು,ಕಾಯೋ ಬೇಸರ ಎಲ್ಲಕ್ಕೂ ಒಂದೊಂದು ಸ್ಮೈಲಿ ಗಳು ಸಿದ್ಧವಾಗಿ ನಿಂತಿವೆ.ನಕ್ಕು ನಕ್ಕು ಕಣ್ಣಲ್ಲಿ ನೀರು ಬರುತ್ತೆ ಅಂತಾದಾಗ್ಲೂ ಅದು ಅಭಿವ್ಯಕ್ತವಾಗೋದು ಸಿಂಬಲ್ ಇಂದಾನೆ.
ವಾಯ್ಸ್ ಮೇಸೇಜ್ ಅನ್ನೋ ಇಷ್ಟದ ಆಪ್ಷನ್ ಒಂದು ಮಾತ್ರ ನಾ ದಿನಕ್ಕೆ ೫೦ ಮಾಡ್ತೀನಿ ನೀಟ್ ಆಗಿ.ಅಲ್ಲೆಲ್ಲೋ ದೂರವಿರೋ ಅಕ್ಕ ದಿನಕ್ಕೆರಡು ಮುದ್ದು ಮಾತು,ದಿನಕ್ಕೆರಡು ಪೆದ್ದು ಮಾತಲ್ಲಿ ಮೆಸೇಜ್ ಹಾಕೋವಾಗ ನಾ whatsapp ಯೂಸ್ ಮಾಡ್ತಿರೋದೂ ಸಾರ್ಥಕ ಅನ್ನೋ ಭಾವ.ಮನೆಗೆ ಹೋದಾಗ ಅಪ್ಪಂಗೂ ಹೇಳಿಕೊಟ್ಟು ಅವರ ಮೊಬೈಲ್ ಗೂ ಇನ್ಸ್ಟಾಲ್ ಮಾಡಿ ಬಂದಿದ್ದೆ.ದಿನಕ್ಕೆ ನಾಲ್ಕು ಕಾಲ್ ಮಾಡಿ ಊಟ ಆಯ್ತ,ತಿಂಡಿ ಆಯ್ತ ,ಕ್ಲಾಸ್ ಹೆಂಗಿತ್ತು ...ಅಂತೆಲ್ಲಾ ವಿಚಾರಿಸೋ ಅಪ್ಪ ಅಮ್ಮಂಗೆ ಹೀಗೊಂದು ಹೇಳಿದ್ದರ ಹಿಂದಿನ ಕಾರಣ ಪೀಜಿಯಲ್ಲೆಲ್ಲಾ ನಂಗೆ ಪಾಪು ಪಾಪು ಅಂತ ಆಡಿಕೊಳ್ಳೋದು.ಅಪ್ಪ ಬಿಡದೆ ದಿನಕ್ಕೆ ನಾಲ್ಕು ಬಾರಿ ವಿಚಾರಿಸಿಕೊಳ್ಳೋವಾಗ್ ಖುಷಿ ನಂದಾಗಿದ್ರೂ ಇವರುಗಳ ನಾನ್ ಸ್ಟಾಪ್ ಕಾಮೆಂಟ್ ಗೆ ಹೆದರಿದ್ದೆ ನಾ.ಈಗ ಅಪ್ಪನೂ ಖುಷಿಯಾಗಿ ವಾಯ್ಸ್ ಮೆಸೇಜ್ ಮಾಡೋವಾಗ ನಂಗೆನೋ ಖುಷಿ.
ಇದಷ್ಟು ಮೇಸೇಜ್ ಕಾಲಾಹರಣವಾದ್ರೆ ಇಲ್ಲೊಂದಿಷ್ಟು ತರಲೆ ಗೆಳೆಯ ಗೆಳತಿಯರಿದ್ದಾರೆ. ಅವರುಗಳ ಬಗೆಗೆ ಹೇಳದಿದ್ದೆ ಪೂರ್ತಿಯಾಗದ ಭಾವ .whatsapp dare ಅನ್ನೋ ಡಬ್ಬಾ ಗೇಮ್ ನಲ್ಲಿ ಮೊದಲು ಬಲಿಯಾಗೊದೇ ನಾನು.(ಪಾಪ ನಾನು)ಅಲ್ಲೇನೋ ಕಾಮೆಂಟ್ ಮಾಡಿ ಆಮೇಲವರ ಟ್ರಿಕ್ ಅರಿವಾಗ ಅವರುಗಳು ಹೇಳೋ ಸ್ಟೇಟಸ್ ಹಾಕೋ ಅನಿವಾರ್ಯತೆಗೆ ಸಿಕ್ಕಿಬಿಡ್ತೀನಿ.ಮೊನ್ನೆ ಮೊನ್ನೆ ಗೆಳತಿಯೊಬ್ಬಳ ಸ್ಟೇಟಸ್ ಗೆ ಕಾಮೆಂಟ್ ಹಾಕಿದ ತಪ್ಪಿಗೆ ನನ್ನ ಸ್ಟೇಟಸ್"I still love my ex" ಅಂತ ಹಾಕಬೇಕಿತ್ತು .ಯಾವತ್ತೂ ಮಾತಾಡಿಸಿರದ ಯಾರ್ಯಾರೋ ಬಂದು ಯಾರದು ಹುಡುಗ ಅಂತೆಲ್ಲಾ ಕೇಳೋವಾಗ ಬಿದ್ದು ಬಿದ್ದು ನಕ್ಕಿದ್ದೆ.ನನ್ನ ತರಹವೇ ಬಕ್ರಾ ಆಗಿದ್ದ ಗೆಳೆಯನೊಬ್ಬನ ಸ್ಟೇಟಸ್"I still hate my ex" ಅಂತ ಬಂದಿತ್ತು..ಎಲ್ಲರೂ ನೋಡಿ ಇಬ್ಬರಿಗೂ ಎರಡು ದಿನ ನೀಟ್ ಆಗಿ ಕಾಲೆಳೆದಾದ ಮೇಲೆ ಇಬ್ಬರೂ ಸೇರಿ ಆ ಗೆಳತಿಗೆ ಹೊಗೆ ಹಾಕಿದ್ದಾಯ್ತು! ಹೀಗೇ ಏನೇನೋ ಒಂದಿಷ್ಟು ಇಲ್ಲದ ಹುಡುಗರ ಹೆಸರು ಹೇಳಿ ಕಾಲೆಳೆಯೋ ನಮ್ಮಗಳ ಪರಂಪರೆ ಇಲ್ಲಿಯೂ ಮುಂದುವರೆದಿದ್ದು ವಿಶೇಷ ಅಷ್ಟೇ.!
ಹೇಳೋಕೊದ್ರೆ ಮುಗಿಯದಷ್ಟು ಕಥೆಗಳಿವೆ ಇಲ್ಲಿ ..
ಯಾವಾಗ್ಲೂ ಇಲ್ಲಿಯೇ ಬಿದ್ದುಕೊಂಡಿರೋ ಹುಡುಗಂಗೆ "ಬದುಕಿದೆಯೇನೋ ನಿಂಗೆ ಅಂದ್ರೆ "nope dude ..I have whatsapp" ಅಂತ ತಮಾಷೆ ಮಾಡಿ ಎಲ್ಲರೂ ನಗೋ ತರ ಮಾಡ್ತಾನೆ.ಅಲ್ಲಿನ್ನೊಬ್ಬ ಗೆಳೆಯ ಬ್ರೋಕನ್ ಹಾರ್ಟ್ ಬಗ್ಗೆ ಹಾರ್ಟ್ ಟಚಿಂಗ್ ಪಂಚ್ ಕೊಡ್ತಾನೆ.ಇನ್ನು ನನ್ನ ಬಳಿ ಇರದ ಒಂದಿಷ್ಟು ಕಾಂಟಾಕ್ಟ್ ಗಳು ಅಲ್ಲೆಲ್ಲಿಂದಲೋ ಬಂದು ಹಾಯ್ ಅಂದು ತಲೆ ಕೆರೆದುಕೊಳ್ಳೋ ತರಹ ಮಾಡ್ತಾರೆ ಯಾರಿರಬಹುದು ಅಂತ.
whatsappನಲ್ಲಿ P.hD ಮಾಡ್ತಿರೋ ಹುಡುಗ್ರಾ ಮುಂದಿನ ಅಡ್ವಾನ್ಸ್ಡ್ Appನಲ್ಲಿ ನಮ್ಮ ಬಳಿ ಇರದ ಕಾಂಟಾಕ್ಟ್ ಗಳನ್ನ allow ಮಾಡದ ತರಹ ಮಾಡಿಬಿಡ್ರಪ್ಪ ಪುಣ್ಯ ಬರುತ್ತೆ ನಿಮ್ಮಗಳಿಗೆ :)
ಬಿಡದೇ ಕಾಡ್ತಿರೋ ಈ ಗೀಳಿಂದ ನಾನಂತೂ ಎದ್ದು ಬಂದೆ .ಇನ್ನು ನೀವುಗಳು ಏನೇ ಅಂದ್ರೂ ನಾನಲ್ಲಿ ಬರಲ್ಲ ..ಕಾಲೆಳೆಯೋಕೆ ಬೇರೆಯರವರನ್ನ ಹುಡುಕೋ ನಿಮ್ಮಗಳ ಕೆಲಸಕ್ಕೊಂದು ದೊಡ್ಡ ನಮನ ಹೇಳಿ ,ನಿಮ್ಮಗಳಿಗೆ ಹೇಳದೆಯೇ ಅಲ್ಲಿಂದ ಹೊರಬಿದ್ದೆ.ಮತ್ತೆ ಅಲ್ಲಿ ಬಾ ಅಂದ್ರೆ ನೀವ್ಯಾರು ಅಂತೀನಿ ಅಷ್ಟೇ :ಫ್ ಮಿಸ್ ಮಾಡಿಕೊಳ್ಳೋ ಫನ್ ಗಳ ನಂತರವೂ ನಂಗೊಂದು ಲೈಫ್ ಇದೆ(ಹೆವೀ ಡೈಲಾಗ್ ಅಂತ ಗೊತ್ತು ನಂಗೂನೂ) .
ಅದೆಷ್ಟೋ ಹುಡುಗರ ಲೈಫ್,ಟೈಮ್ ನನ್ನಾ ಉಳಿಸಿದ ಕೀರ್ತಿಯಾದ್ರೂ ಸಿಗ್ಲಿ ನಂಗೆ ..ಮತ್ತೆ ಈ ಹಳೆ ಹುಡುಗ ತೀರಾ ಕಾಡಿದ ದಿನ ವಾಪಸ್ಸಾಗ್ತೀನಿ(ಒಂದೆರಡು ತಿಂಗಳ ನಂತರ).ಅಲ್ಲಿಯ ತನಕ ಕೆಲಸವಿಲ್ಲದ ಒಂದಿಷ್ಟು ಗ್ರುಪ್ ಗಳಿಗೆ,ಒಂದಿಷ್ಟು ನಾನ್ ಸ್ಟಾಪ್ ಸುದ್ದಿಗಳಿಗೆ ಬದುಕು ತುಂಬುತ್ತಿರೋ ಮಚ್ಚಾಸ್ ಅಂಡ್ ಮಚ್ಚಿಸ್ ..ಮಿಸ್ ಮಾಡ್ಕೊಳಿ ನನ್ನನ್ನ :ಫ್ ಅದ್ಯಾವುದೋ ಕಿತ್ತೊಗಿರೋ ಸಾಂಗ್ ಜೊತೆಗೆ .

:)
ReplyDeleteಥಾಂಕ್ ಯು ಜಿ .
Deleteತಪ್ಪು ಒಪ್ಪುಗಳ ತಿಳಿಸಿಕೊಡೋಕೆ ಬರ್ತಿರಿ :)
Cyber generation ಅಂದರೆ ಏನೂ ಅಂತ ಈಗ ಗೊತ್ತಾಯ್ತು!
ReplyDeleteಸುನಾಥ್ ಕಾಕಾ :)
Deleteಥಾಂಕ್ ಯು.
ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ
"ಮತ್ತೆ ಈ ಹಳೆ ಹುಡುಗ ತೀರಾ ಕಾಡಿದ ದಿನ ವಾಪಸ್ಸಾಗ್ತೀನಿ"
ReplyDeleteಹುಡುಗರನ್ನೆಲ್ಲಾ ಕನ್ಪ್ಯೂಸನ್ನಲ್ಲಿಟ್ಟು ಹೋಗ್ತಿದೀಯೇನೋ.... (ಹಳಬರೋ ಹೊಸಬರೋ...)
ಕಾಲೆಳೀತಿಲ್ಲಾ....... ಸುಮ್ನೇ......
ಮಸ್ತ್ ಮಸ್ತ್ ಡುಮ್ಕಾ...
ಹಾ ಹಾ ರಾಘವ್ ಜಿ ಹುಡುಗ ಯಾರಾದ್ರೆ ಏನು ..ಮತ್ತೆರಡು ತಿಂಗಳಿಗೆ ವಾಪಸ್ಸಾಗ್ತೀನಿ ಅಂದಿದ್ದಕ್ಕೆ ಖುಶಿ ಪಡ್ಬೇಕಲ್ವಾ ಅವ್ರು ;)
Deleteಹುಡುಗರ ಮಾತು ಬೇಡ ಕಣ್ರಿ ಈಗ :ಫ್
ಥಾಂಕ್ ಯು ...
ಭಾವಗಳ ವಿನಿಮಯದಲ್ಲಿ ಮತ್ತೆ ಜೊತೆಯಾಗ್ತೀನಿ
ನೀ ವಾಟ್ಸಾಪಲ್ಲಿ ಇದ್ದಿದ್ದ್ಯಾ ? !!
ReplyDeleteಅಂದಂಗೆ ನಿಮ್ಮ ಗೋಲ್ಗೊಪ್ಪವಾಲಾನೆ ಲಕ್ಕಿ ಬಿಡು ;-) ಅವ್ನು ಅಂಕಲ್ಲಾ ಹುಡ್ಗನ ಅಂತ ನಾವೇನು ಕೇಳಿರ್ಲೆ ;-)
ಪ್ರಶಸ್ತಿ ,
Deleteಹಾ ಹಾ ...ವಾಟ್ಸ್ ಆಪ್ ನಮ್ಮಗಳ ಜೊತೆ ಇತ್ತು ಇಷ್ಟು ದಿನ :ಫ್ ಹೀಗಿರೋವಾಗ ನಾ ಅಲ್ಲಿ ಇದ್ದಿದ್ನಾ ಅಂತಾ ಕೇಳ್ತೀರ!! ಅಲ್ಲೇ ಬಿದ್ಕೊಂಡಿರ್ತಿದ್ದೆ ಇಷ್ಟು ದಿನ .
ಅಂದ ಹಾಗೆ ..ಯಾರಿಗ್ ಗೊತ್ತು ಆಮೇಲೆ ನೀವುಗಳು ಮತ್ತಿನ್ನೇನೋ ಅಂದು ವಿಂಕಲ್ ಮಾಡೋದು ಬೇಡ ಅಂತ ನಾನೆ ಹೇಳ್ದೆ ಗೋಲ್ ಗಪ್ಪಾ ಅಂಕಲ್ ಬಗ್ಗೆ ;)
ಧನ್ಯವಾದ..ಭಾವಗಳ ತೇರಲ್ಲಿ ಸಿಕ್ತಿರೋಣ
ದೇವ್ರು ಒಳ್ಳೇದು ಮಾಡ್ಲಿ.. ನಾವು ಫೇಸ್ಬುಕ್ ಗೀಳನ್ನ ಸ್ವಲ್ಪ ಕಡಿಮೆ ಮಾಡಿ, ವಾಟ್ಸ್ ಅಪ್ ಗೆ ದಾಸರಾಗಿ ಬಹಳ ಕಾಲ ಆಯ್ತು.. ಕಿರಿ ಕಿರಿ ಅನ್ನಿಸೋ ಯಾವ ಕಾಂಟಾಕ್ಟ್ ಕೂಡ ನಮ್ ಹತ್ರ ಇಲ್ದೆ ಇರೋದ್ರಿಂದ ಬೇಕಿರೋ ನಮ್ಮದೇ ಗೆಳೆಯರ ಜೊತೆ ಆರಾಮಾಗಿ ಮಾತಾಡ್ಕೊಂಡು, ನಕ್ಕೊಂಡು, ನಲ್ಕೊಂಡು, ಕಾಲೆಳೆಕೊಂಡು, ಎಳೆಸ್ಕೊಂಡು ಜಾಲಿಯಾಗಿ ಇದಿವಿ ಅಂತಾನೆ ಹೇಳ್ಬೋದು.. ಇದು ಬೋರಾಗೋ ತನಕ ಅಡ್ಡಿ ಇಲ್ಲ. ಬೋರಾದ್ರೆ ಇನ್ನು ಬೇಕಾದಷ್ಟು ಚಾಟಿಂಗ್ ಆಪ್ಸ್ ಗಳ ಸೇವೆ ಇದೆಯಲ್ಲ.
ReplyDeleteವಾಟ್ಸ್ ಅಪ್ ಬಿಟ್ ಹೋಗಿದಿರಿ.. ಸಾರ್ಥಕವಾಗಲಿ ನಿಮ್ ಜೀವನ.. ಚೆಂದದ ಬರಹ
ಹ ಹ. ಸತೀಶ್.. ಬೋರಾದಾಗ ಫೇಸ್ಬುಕ್ಕು, ವಾಟ್ಸಾಪುಗಳೆರಡರಿಂದಲೂ ಒಂದು ವಾರದ ಮಟ್ಟಿಗೆ ದೂರ ಬಂದುಬಿಡಿ.. ಆಗ ಸಿಗೋ ಶಾಂತಿಯೇ ಬೇರೆ :-)
Deleteಹಾ ಹಾ ...ಸತೀಶ್ ಜಿ ,
Deleteಉದ್ದಾರ ಆಗು ಅಂದ್ರಾ ? ಉದ್ದಾರ ಆದಂಗೆ ಹಾಗಿದ್ರೆ ಬಿಡಿ ;)
ನಿಜ ...ವಾಟ್ಸ್ ಅಪ್ ಅನ್ನೋದು ನಂಗೀಗಲೂ ಇಷ್ಟವೇ ..ಆದರೆ ಅಲ್ಲೆಲ್ಲೋ ಕಾಡೋ ಇಡೀ ದಿನದ ಮಾತುಗಳು ,ಹರಟೆ ,ಕುಸ್ತಿ-ಮಸ್ತಿಯ ಆಚೆಗೆ ಒಂದಿಷ್ಟು ದಿನ ಸುಮ್ಮನಿರೋಣ ಅಂತ ಹೊರ ಬಂದಿದ್ದು .
ಸಧ್ಯಕ್ಕೆ ಬ್ರೇಕ್ ಅಪ್ ಮಾಡ್ಕೊಂಡಾಗಿದೆ ..ಈ ಬ್ರೇಕ್ ಅಪ್ ನಲ್ಲೂ ಏನೋ ಖುಷಿ ಇದೆ :)
ಭಾವಗಳ ಸಂತೆಯಲ್ಲಿ ಮತ್ತೆ ಸಿಕ್ತೀನಿ
ಪ್ರಶಸ್ತಿ ..ಯಾರದು ಶಾಂತಿ :ಫ್ (just kidding )
Deleteನಿಜ ನೀವು ಹೇಳಿದ್ದು ...
ಎರಡನೇ ಪ್ರತಿಕ್ರಿಯೆಗೊಂದು ಥಾಂಕ್ ಯು
ಒಂದಿನ ಫುಲ್ಲು ಮಾತಡನ ಬಿಡು ಶಾಂತಿ ಬಗ್ಗೆ ;-)
Deleteಮಜಾ ಬರೊ ಬರಹ....ನನ್ಗೊತ್ತು ಯಾರು "I still hate my ex " ಅನ್ತ ಸ್ಟೇಟಾಸ್ ಹಾಕ್ಕೊ0ಡಿದ್ದು....
ReplyDeleteಕಾಲೆಲ್ಯೊದು, ಮೊಬೈಲ್ ನೋಡ್ತಾ ಮುಗುಳ್ನಗೋದು, More fun, little emotions, Unlimited Lolz...
ಸೂಪರ್ ಬರಹ :)
ಆದಿ ,ಥಾಂಕ್ ಯು ..
Deleteನಿಜ ವಾಟ್ಸ್ ಆಪ್ ಅಂದ್ರೆ ಎನೋ ಒಂದಿಷ್ಟು ಮಾತು ಕಥೆ ..ಕಾರು-ಬಾರು :ಫ್ ಏನಂತೀಯ ?
ಚಂದದ ಪ್ರತಿಕ್ರಿಯೆ ಖುಷಿ ಆಯ್ತು..
ವಾಟ್ಸ್ ಅಪ್ ಬಿಟ್ಟ ನಂತರವೂ ಭಾವಗಳ ಸಂಜೆಯಲ್ಲಿ ಮತ್ತೆ ಮತ್ತೆ ಸಿಕ್ತಿರ್ತೀನಿ
ಹಾಯ್ ಭಾಗ್ಯ ಜಿ,
ReplyDeleteಇಷ್ಟು ಚೆಂದದ ಲೇಖನ ಬರೆದು
ನೀವು ಹೀಗೆ ಕಾಡಿದರೆ ನಾನಂತು ನಿರುಪಾಯ...
ಚೆನ್ನಾಗಿದೆ ಲೇಖನ.
ಥಾಂಕ್ ಯು ಕನಸು ..
Deleteತುಂಬಾ ದಿನಗಳಾದ ಮೇಲೆ ಮತ್ತೆ ನೀವಿಲ್ಲಿ ಸಿಕ್ಕಿದ್ದು ಖುಷಿ ಆಯ್ತು..ಭಾವಗಳ ತೇರಲ್ಲಿ ಮತ್ತೆ ಮತ್ತೆ ಸಿಕ್ತಿರ್ತೀನಿ
ಒಂದು ಒಳ್ಳೆಯ ಭಾವಪೂರ್ಣ ಬರಹ. ಓದುತ್ತಾ ಹೋದಂತೆ ಸುಮ್ ಸುಮ್ನೆ ನೆನಪುಗಳ ಕಾಡುತ್ತವೆ
ReplyDeleteಥಾಂಕ್ ಯು ಸರ್ ..
Deleteತುಂಬಾ ದಿನಗಳ ನಂತರ ನಿರುಪಾಯಿಯ ಭಾವವ ನೀವೋದಿ ಇಷ್ಟ ಪಟ್ಟಿದ್ದು ಖುಷಿ ಆಯ್ತು.
ಭಾವಗಳ ತೇರಲ್ಲಿ ನಾ ಮತ್ತೆ ಸಿಕ್ತೀನಿ
ಚಂದ ಕೂಸೇ..
ReplyDeleteಹೌದಲ್ವ ಎಲ್ಲಾನೂ ಬಿಟ್ಟು ಒಮ್ಮೆ ಗಾಯಬ್ ಆಗಬೇಕು..
ನಾನೂ ಆಗ್ತೀನಿ ನೋಡ್ತಿರು ಹುಡುಗಿ ... :)
ಹೊಟ್ಟೆ ಕಿಚ್ಚು ಹೊಟ್ಟೆ ಉರಿ ಇನ್ನೊಬ್ಬರನ್ನು ನೋಡಿ ಮನಸ್ಸು ಬೇಸರಿಸುವುದು ಇದೆಲ್ಲ ಬಹಳ ದಶಕಗಳ ಹಿಂದೆ ಬಿಟ್ಟು ಬಂದ ಸರಕು. ಮಗಳೇ ನಿನ್ನ ಈ ಲೇಖನವನ್ನು ತಡವಾಗಿ ಓದಿದಾಗ ಯಾಕೋ ಕಾಣೆ ಅವೆಲ್ಲ ಒಟ್ಟಿಗೆ ನನ್ನ ಹತ್ತಿರ ನುಗ್ಗಿ ಬರುತ್ತಿದೆಯೇನೋ ಅನ್ನುವ ಅನುಮಾನ.
ReplyDeleteನ್ಯಾಯವೇ ದೇವರು ಎನ್ನುವ ಚಿತ್ರದಲ್ಲಿ "ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್" ಅಂತಾರೆ. ಇದು ಎಷ್ಟು ನಿಜ. ಈ ಕಾಲದ ಶಾಲಾ ಕಾಲೇಜು ಮಕ್ಕಳ ದಿನಚರಿ ಸ್ನೇಹ ಪ್ರೀತಿ ಎಲ್ಲವನ್ನು ಕಂಡಾಗ ಮತ್ತೊಮ್ಮೆ ಕಾಲೇಜಿಗೆ ಹೋಗಿ ಇದನ್ನೆಲ್ಲಾ ಅನುಭವಿಸಬೇಕು ಎನ್ನಿಸುತ್ತದೆ.
ರಾಗ ದ್ವೇಷಗಳು ಇರದ ಬರಿ ಬದುಕನ್ನು ಪ್ರೀತಿಸುವ ಒಂದು ಉನ್ನತ ಕಾಲಮಾನದ ಸದಸ್ಯರಾಗಿ ಇದೆಲ್ಲ ನೋಡುವುದು ಆಹಾ ಬಹಳ ಕುಶಿ ಕೊಡುತ್ತದೆ.
ಬರೆದ ಪ್ರತಿ ಸಾಲು ಇಷ್ಟವಾಯಿತು.. ತಂತ್ರಜ್ಞಾನವಿರದ ನಮ್ಮ ಓದಿನ ದಿನಕ್ಕೆ ಒಮ್ಮೆ ಹೋಗಿ ಬಂದಂತೆ ಆಯಿತು.. ಸೂಪರ್ ಮಗಳೇ ಇನ್ನೊಂದು ಸೂಪರ್ ಲೇಖನ ನಿನ್ನಿಂದ