ನಾಲ್ವರು ಹುಡುಗೀರು. ಯಾವಾಗಲೂ ಕೀಟಲೆ ಮಾಡ್ತಾ, ಪಕ್ಕಾ ಹುಡುಗರ ತರಹ ಹೇಗ್ ಹೇಗೋ ಇದ್ದುಬಿಡೋ, ಮನೆಯಲ್ಲೆಲ್ಲಾ "ನಿಜ್ವಾಗ್ಲೂ ಕೆಲಸವಿಲ್ವಾ ನಿಮಗೆ" ಅಂತೆಲ್ಲಾ ದಿನಕ್ಕೈದು ಬಾರಿ ಬೈಸಿಕೊಂಡು, ಅದಕ್ಕೂ ತಲೆ ಕೆಡಿಸಿಕೊಳ್ಳದೆ, ಮೇಕಪ್ , ಸನ್ ಬರ್ನ್ ಗಳ ಹಾವಳಿಯಿಲ್ಲದೇ ಸುಮ್ಮ ಸುಮ್ಮನೇ ಅಲೆದಾಡೋ ಬದುಕದು. ಅದರಲ್ಲೂ 'ಕೊನೆಯ ಸೆಮ್' ಅನ್ನೋ ತಲೆಪಟ್ಟಿ ಬಿದ್ದ ಮೇಲೆ ಅಲೆದಾಟಗಳೇ ಬದುಕು ಅನ್ನಿಸಿ ಬಿಟ್ಟು ಓಡಾಡ್ತಿರೋ ಒಂದಿಷ್ಟು ಚಂದ ಚಂದದ ಊರುಗಳಿವೆ.
ತೀರಾ ಇಷ್ಟವಾಗೋ ಅಲೆದಾಟಗಳ ದಾಖಲಿಸೋ ಮನಸ್ಸಾಗ್ತಿದೆ.
Kerala , You are loved and we are lovable.
ಒಂದಿಷ್ಟು ಖುಷಿ, ಒಂದಿಷ್ಟು ಕಾತರತೆ, ಮತ್ತೊಂದಿಷ್ಟು ಹೊಸತನಗಳ
ಹುಡುಕಾಟದಲ್ಲೇ ಅದೊಂದು ಅಪರಿಚಿತತೆಯ ಭಾವ ತಾಗುತ್ತಲ್ಲಾ, ಅಂತಹುದ್ದೇ ಒಂದು ಭಾವ ಕೈ
ಸೋಕಿದ್ದು ಮತ್ತದೇ ಕಡಲೂರಲ್ಲಿ. ಈಗೆಲ್ಲಾ ಕಡಲಂದ್ರೆ ತುಸು ಜಾಸ್ತಿಯೇ ಪ್ರೀತಿ ನಂಗೆ ಥೇಟ್
ಕಡಲೂರ ಆ ಹುಡುಗನಂತೆಯೇ. ಅದರಲ್ಲೂ ಬಿಟ್ಟು ಬಿಡದೇ ನೋಡಿದ್ದ ಒಂದಿಷ್ಟು ಮಲಯಾಳಿ ಮೂವಿಗಳು, ಅಲ್ಲೆಲ್ಲಾ ಕಾಣ ಸಿಗ್ತಿದ್ದ ಸಮುದ್ರ, ಬೋಟ್ ಹೌಸ್ ಗಳು, ಹಿನ್ನೀರು, ತೀರದಲ್ಲೆಲ್ಲಾ ಬಾಗಿ ನಿಲ್ಲೋ ತೆಂಗಿನ ಮರಗಳು ಎಲ್ಲವೂ ನಮ್ಮನ್ನಲ್ಲಿಯ ತನಕ ಎಳೆದುಕೊಂಡು ಹೋಗಿತ್ತು.
ಅದೊಂದು ಅನಿಶ್ಚಿತತೆಯ ಜೊತೆ ಹೊರಟಿದ್ದು 'ದೇವರ' ನಾಡಿಗೆ....
ಗೋವಾದಿಂದ ಶುರುವಾದ ಪ್ಲಾನ್ ಪಾಂಡಿಚೇರಿಯ ದಾಟಿ ಬಂದು ತಲುಪಿದ್ದು ಕೇರಳಕ್ಕೆ. ಜೊತೆಯಾದದ್ದು ಮತ್ತೆ ಮೂವರು ಕ್ರೇಜಿ ಗೆಳತಿಯರು. ಅದೊಂದು ಪಕ್ಕಾ ಅನ್ ಪ್ಲಾನ್ಡ್ ಟ್ರಿಪ್. ಇನ್ನೂ ವೇಟಿಂಗ್ ಲಿಸ್ಟ್ ಅಲ್ಲೇ ಇದ್ದ ಟ್ರೈನ್
ಟಿಕೇಟ್, ಯಾವ ಯಾವ ಜಾಗಗಳ ನೋಡಬೇಕನ್ನೋದೂ ತಿಳಿಯದ, ಅಸಲು ಎಷ್ಟು ದಿನದ ಟ್ರಿಪ್
ಅನ್ನೋದೇ ಖಾತರಿಯಾಗಿರದ ಭಾವವ ಹೊತ್ತು ಪಯಣ ಹೊರಟಿತ್ತು. ನಮ್ಮದಿಷ್ಟು ನಗು, ಗಲಾಟೆ, ಗದ್ದಲ, ಮಾತಿನ ಜೊತೆ ಪಕ್ಕದಲ್ಲಿ ಕೂತಿದ್ದವರು ಕೂಡಾ 'ಹ್ಯಾಪಿ ಕೇರಳ' ಅಂತ ಬೀಳ್ಕೊಡೋ ಹೊತ್ತಿಗೆ ಎರ್ನಾಕುಲಂ ತಲುಪಿಯಾಗಿತ್ತು.
ಆಗ ಶುರುವಾಗಿತ್ತು ನಮ್ಮದಿಷ್ಟು ಪ್ಲಾನ್ ಗಳು. ಫೋರ್ಟ್ ಕೊಚ್ಚಿಯ ನೋಡೋಕೆ ಹೋಗೋದೋ ಅಥವಾ ವೈಪಿನ್ ಮೂಲಕ ಆ ಕಡಲ ಮಧ್ಯ ನಡೆಯೋದೋ ಅನ್ನೋ ಗೊಂದಲದಲ್ಲಿಯೇ ಮುಖ ಮಾಡಿದ್ದು ಕೊಚ್ಚಿಯ ಕಡಲ ಕಡೆಗೆ. ಬೆಳಿಗ್ಗೆ ಏಳಕ್ಕೇ ತಡೆಯೋಕಾಗದ ಸೆಕೆಯಲ್ಲಿ ಮಧ್ಯಾಹ್ನ ಹೇಗಿರೋದು ಭಗವಂತ ಅನ್ನೋ ಭಾವವೊಂದು ಬೇಸರ ಮೂಡಿಸೋಕೆ ಶುರುವಿಟ್ಟಿತ್ತು. ಆ ಊರ ಅಪ್ಪಮ್(ದೋಸೆ ತರಹದ್ದು) ರುಚಿ ಇನ್ನೂ ಬಾಯಲ್ಲಿರೋವಾಗಲೇ, ಮರೈನ್ ಡ್ರೈವ್ ಹೆಸರಲ್ಲಿ ಗಂಟೆಗಟ್ಟಲೇ ಕಾದಿದ್ದ ಬೋಟ್ ಕೊನೆಗೂ ನಿಧಾನವಾಗಿ ಹೊರಟಾಗ ಅದೊಂದು ನಿಟ್ಟುಸಿರು. ಕಡಲ ಮಧ್ಯವಿರೋ ಆ ಚಂದದ ಪ್ಯಾಲೇಸ್, ಅದೊಂದಿಷ್ಟು ಚಂದ ಚಂದದ ಚರ್ಚ್ ಗಳು, ಲುಲು ಮಾಲ್ ದಾಟಿ ಬಂದು ನಿಂತಿದ್ದು ನನ್ನಿಷ್ಟದ ಕಡಲ ತೀರಕೆ.
ಆಗ ಶುರುವಾಗಿತ್ತು ನಮ್ಮದಿಷ್ಟು ಪ್ಲಾನ್ ಗಳು. ಫೋರ್ಟ್ ಕೊಚ್ಚಿಯ ನೋಡೋಕೆ ಹೋಗೋದೋ ಅಥವಾ ವೈಪಿನ್ ಮೂಲಕ ಆ ಕಡಲ ಮಧ್ಯ ನಡೆಯೋದೋ ಅನ್ನೋ ಗೊಂದಲದಲ್ಲಿಯೇ ಮುಖ ಮಾಡಿದ್ದು ಕೊಚ್ಚಿಯ ಕಡಲ ಕಡೆಗೆ. ಬೆಳಿಗ್ಗೆ ಏಳಕ್ಕೇ ತಡೆಯೋಕಾಗದ ಸೆಕೆಯಲ್ಲಿ ಮಧ್ಯಾಹ್ನ ಹೇಗಿರೋದು ಭಗವಂತ ಅನ್ನೋ ಭಾವವೊಂದು ಬೇಸರ ಮೂಡಿಸೋಕೆ ಶುರುವಿಟ್ಟಿತ್ತು. ಆ ಊರ ಅಪ್ಪಮ್(ದೋಸೆ ತರಹದ್ದು) ರುಚಿ ಇನ್ನೂ ಬಾಯಲ್ಲಿರೋವಾಗಲೇ, ಮರೈನ್ ಡ್ರೈವ್ ಹೆಸರಲ್ಲಿ ಗಂಟೆಗಟ್ಟಲೇ ಕಾದಿದ್ದ ಬೋಟ್ ಕೊನೆಗೂ ನಿಧಾನವಾಗಿ ಹೊರಟಾಗ ಅದೊಂದು ನಿಟ್ಟುಸಿರು. ಕಡಲ ಮಧ್ಯವಿರೋ ಆ ಚಂದದ ಪ್ಯಾಲೇಸ್, ಅದೊಂದಿಷ್ಟು ಚಂದ ಚಂದದ ಚರ್ಚ್ ಗಳು, ಲುಲು ಮಾಲ್ ದಾಟಿ ಬಂದು ನಿಂತಿದ್ದು ನನ್ನಿಷ್ಟದ ಕಡಲ ತೀರಕೆ.
St Anthony church ,
Way from Ernakulam to Fort Cochin, PC: Archana
ಮುಳುಗೋ ಸೂರ್ಯನನ್ನ ಸೆರೆ ಹಿಡಿಯೋ ಕೆಲಸದಲ್ಲಿ ಗೆಳತಿ ನಿಂತಿದ್ರೆ ನಾ ಕಡಲ ಅಲೆಗಳ ಜೊತೆ
ಮಾತಿಗೆ ಕೂತಿದ್ದೆ. ಅಲ್ಲಿರೋ ಕನ್ನಡದವರನ್ನೆಲ್ಲಾ ಮಾತಾಡಿಸಿ, ಅವರ ಬಳಿಯೆಲ್ಲಾ
'ನಾಲ್ಕೇ ಜನ ಹುಡುಗೀರು ಬಂದಿದ್ದಾ, ಕ್ರೇಜಿ ಗರ್ಲ್ಸ್' ಅಂತೆಲ್ಲಾ ಹೇಳಿಸಿಕೊಂಡು ಬರೋ
ಹೊತ್ತಿಗೆ ಆ ಊರ ಸೆಕೆ ಕೂಡಾ ಅಭ್ಯಾಸವಾದಂತಿತ್ತು.
ಜಗಮಗಿಸೋ ಆ ದೀಪಗಳ ಕೆಳಗೆ ಇಡೀ ಊರು ಗೊತ್ತೇನೋ ಅನ್ನೋ ತರಹ ಮಧ್ಯ ರಾತ್ರಿಯ ತನಕ ಸುಸ್ತೇ ಆಗದಂತೆ ಓಡಾದಿದ್ದಿದೆ. ಆ ಊರ ನೆನಪನ್ನೆಲ್ಲಾ ಜೋಡಿಸಿಕೊಂಡು ಮಾತಿಗೆ ಕೂತಿದ್ದಾಗ ಕಾಡಿದ್ದು Alleppey.
ಚಂದ ಚಂದದ ಬೋಟ್ ಹೌಸ್ ಗಳು, ಹಿನ್ನೀರ ಮಧ್ಯದ ಓಡಾಟ ಎಲ್ಲವೂ ಮೋಡಿ ಮಾಡಿದಂತಿತ್ತು. ಮತ್ತೆ ಮರುದಿನದ ಹಾದಿ ಹಿಡಿದಿದ್ದು ಅಲೇಪಿ ಕಡೆಗೆ. ಅದೊಂದು ಬೋಟ್ ಹಿಡಿದು ಐದಾರು ತಾಸು ಹಿನ್ನೀರ ಮಧ್ಯ ಕಳೆದು ಹೋಗಿದ್ದವರಿಗೆ ಆ ಊರ ಬಿಟ್ಟು ಬರೋ ಮನಸ್ಸೇ ಆಗಿರಲಿಲ್ಲ. ಪಕ್ಕದಲ್ಲೇ ಸಾಗೋ ಇನ್ನೊಂದಿಷ್ಟು ಬೋಟ್ ಗಳ ಜೊತೆ, ಮಧ್ಯದಲ್ಲೆಲ್ಲೋ ಕುಡಿದ ಆ ಸಿಹಿ ಸಿಹಿ ಎಳನೀರು, ಬೋಟ್ ಅಣ್ಣನ ಬಳಿ ಬನಾನ ಫ್ರೈ ಬೇಕಂತ ಹಠ ಹಿಡಿದ ಪರಿ, ಟೇಸ್ಟ್ ಮಾಡಿದ್ದ TODDY (unofficial Kerala drink) ಎಲ್ಲವೂ ಸೇರಿ ಮತ್ತೊಂದು ಸಂಜೆ ಸರಿದು ಹೋಗೋಕೆ ರೆಡಿಯಾಗಿತ್ತು. ಮತ್ತೆ ಮುಳುಗೋ ಕೆಂಪು ಕೆಂಪು ಸೂರ್ಯನನ್ನ ನೋಡೋಕೆ Alleppey Beach ಸಿದ್ಧಗೊಂಡಂತಿತ್ತು.
ದಿನಮಣಿ ಮುಗಿಯೋ ಹೊತ್ತಿಗೆ
Alleppey Beach, PC: Archana
ತೀರಾ ದೊಡ್ಡವೆನಿಸೋ ಸಮುದ್ರ, ಗಜಿಬಿಜಿ ಅನ್ನೋವಷ್ಟು ಜನಗಳ ಮಧ್ಯವೂ ಚಂದ ಅನ್ನಿಸೋ ತೀರವದು. ಸಂಜೆ ಸರಿದು ಕತ್ತಲಾಗಿ ನಾವಲ್ಲಿಂದ ಹೊರಟಾಗ ಕಳೆದು ಹೋಗಿದ್ದ ಇನ್ನಿಬ್ಬರು ಗೆಳತಿಯರು. ಆ ಜನಗಳ ಮಧ್ಯ ಹುಡುಕ ಹೊರಟು ನಾವೂ ಕಳೆದು ಹೋಗಿ .... ಕೊನೆಗೂ ಅಲ್ಲೆಲ್ಲೋ ಜೊತೆಯಾಗಿ ಮತ್ತೆ ಆ ಹೊಸ ಊರ ಸುತ್ತೋಕೆ ಹೊರಟಾಗಿತ್ತು.
Alleppey ಹಿನ್ನೀರು ಮತ್ತೊಂದು ದಿನ ನಮ್ಮನ್ನಲ್ಲಿಯೇ ಇರಿಸಿಕೊಂಡಿತ್ತು. ಆದರೆ ಮತ್ತೆ ಬೋಟ್ ಗೆ ಅಷ್ಟು ದುಡ್ಡು ಕೊಡೋ ಇಷ್ಟವಿಲ್ಲದೆ ಆಯ್ದುಕೊಂಡಿದ್ದು ferry drive. ಆ ಕಡಲ ಸಾರಿಗೆಗೆ, ಮಧ್ಯ ಮಧ್ಯ ಸಿಗ್ತಿದ್ದ ferry station ಗಳ ನೋಡ್ತಾ ಕೂತಿದ್ದವರಿಗೆ ಅಲ್ಲಿಯವರ ಓಡಾಟದ ಬದುಕು, ಆ ಕಷ್ಟಗಳು ಅರ್ಥವಾದಂತಿತ್ತು. ಹಿನ್ನೀರ ದಡದಲ್ಲೆಲ್ಲಾ ಪ್ರತಿ ಮನೆಯ ಎದುರೂ ಒಂದೊಂದು ದೋಣಿ, ಓಡಾಟಕ್ಕೆಲ್ಲಾ ಅದೇ ಅವರ ಸಾರಿಗೆ. ಆಗಾಗ ಬರೋ ಒಂದೊಂದು ferry.
ಎರಡನೇ ದಿನದ ಅಲೆಪೀ ಬೇರೆಯದೇ ರೀತಿ ಕಾಣಿಸಿತ್ತು ನಮಗಲ್ಲಿ. ಅದೊಂದು ಕೌತುಕವ ಹೊತ್ತುಕೊಂಡು ಮತ್ತೆ ಮರಳಿಯಾಗಿತ್ತು ರೂಮಿಗೆ.
Sail away from the safe harbor. Explore, Dream, Discover.
ಸಹಿಸೋಕಾಗದ ಸೆಕೆ, ಮತ್ತೆ ಮತ್ತೆ ಬೇಕನ್ನಿಸೋ ಎಳನೀರು, ಬಾಯಲ್ಲಿ ನೀರೂರಿಸೋ ಪರೋಟ, ನಿರಾಸೆ ಮೂಡಿಸೋ ಬನಾನ ಫ್ರೈ, ಅಪ್ಪಮ್ ಘಮ, TODDYಯ ಹ್ಯಾಂಗ್ ಓವರ್, ತೀರಾ ಚಂದವೆನ್ನಿಸೋ ಸಮುದ್ರಗಳು, ಆ ಊರಲ್ಲೇ ಮತ್ತೆ ಮತ್ತೆ ಇರಬೇಕನ್ನೋ ತರಹದ ಮೋಡಿ ಮಾಡೋ ಹಿನ್ನೀರು, ferry ಡ್ರೈವ್, marine ಡ್ರೈವ್, ಮುಗಿಯದ ಮಾತುಗಳು, ಅದೊಂದಿಷ್ಟು ತಲೆಹರಟೆಗಳು ಎಲ್ಲದರ ಜೊತೆ ಮತ್ತೆ ಮರಳಿಯಾಯ್ತು ನಮ್ಮ ಲೋಕಕ್ಕೆ.
Much love,
Bye bye Kerala.
ಇನ್ನೊಂದಿಷ್ಟು ಕಪಿ ತನಗಳು, ಮತ್ತೊಂದಿಷ್ಟು adventure ಗಳು ನಮಗಾಗಿ ಕಾಯ್ತಿವೆ.
ಮತ್ತೊಂದು ಊರು, ಮತ್ತಿಷ್ಟು ಅಲೆದಾಟಗಳ ಹುಡುಕಾಟದಲ್ಲಿ...
keralada hotel na color color neeru.. masale doseya jote vada! kerala nanu nodiddu 2008ralli.matte avella nenpaytu blogalli geechi 7years agoytu..
ReplyDeletepravasa katana chanag iddu.. keep writing..
Super :)
ReplyDeleteHinge khushi khushi aag iru yavaglu
Super :)
ReplyDeleteHinge khushi khushi aag iru yavaglu
Chanda :)
ReplyDeleteಭಾಗ್ಯಾ -
ReplyDeleteಖುಷಿಯ ಅಲೆಗಳಲಿ ತೋಯ್ವ ಪಾದಗಳ ಒದ್ದೆ ಆರದಿರಲಿ...
ಹತ್ತೂರ ನೀರು ಅರಗಿ ನೆನಪ ದೀಪಗಳಾಗಿ ಬದುಕ ತೇರಿನ ಅಲಂಕಾರವಾಗಲಿ...
;;;;
ನೋಡಿದ ಎಷ್ಟೋ ಊರ ಕಡಲಲೆಗಳು ನೆನಪಾದವು...
ಪ್ರತಿ ಊರ ಅಲೆಯ ಘಮವೂ ಬೇರೆ ಬೇರೆ...
ಖುಷಿಯಾಯಿತು ಓದಿ - ಖುಷಿಯಾಗಿರು...
ಭಾಗ್ಯಮ್ಮನ ಬ್ಲಾಗಲ್ಲೊಂದು ಬನಾನ ಫ್ರೈ ಕಥೆ, ಮಾಯ್ನೋರಮನೆಯಲ್ಲೊಂದು ಪ್ರವಾಸ ಕಥನ !! ಮಸ್ತ್.. ಅಂತೂ ಕೇರಳಕ್ಕೋಗಿ ಎಣ್ಣೆ ಹಾಕಿದಿ ಅಂತಾತು :P Anyhow ಸಕತ್ ಬರಹ :-) Enjoy
ReplyDeleteನಿಮ್ಮ unplanned but successful ಪ್ರವಾಸದ ಬಗೆಗೆ ಓದಿ ಖುಶಿಯಾಯಿತು. ಬದುಕೂ ಸಹ ಇದೇ ತರಹಾ ಉಲ್ಲಾಸಪಯಣವಾಗಿರಲಿ ನಿಮಗೆ!
ReplyDeletenice article. :)
ReplyDeleteNice
ReplyDeleteಯೋಚನೆ ಮಾಡದೆ ಪಯಣಿಸುವ ಪಯಣದ ಅನುಭವವೇ ಮಸ್ತ್
ReplyDeleteಹೊತ್ತು ಗೊತ್ತು ಸಿದ್ಧವಿಲ್ಲದ ಪಟ್ಟಿ.. ಆದರೆ ಆ ಪಯಣ ಮುಗಿದ ಮೇಲೆ ಅದನ್ನು ಮೆಲುಕು ಮಜಾ ಅದರ ತಾಕತ್ತೇ ಬೇರೆ
ಜೊತೆಯಲ್ಲಿ ಜೀವದ ಗೆಳೆತನದ ಶಕ್ತಿಗಳು ಇದ್ದಾಗ ಈ ರೀತಿಯ ಪ್ರವಾಸಿ ಕಥಾನಕ ಸಿದ್ಧವಾದ ಚಿತ್ರಕಥೆಯ ರೀತಿಯಲ್ಲಿ ಬಿಚ್ಚಿಕೊಳ್ಳುತ್ತೆ
ಚಿತ್ರಗಳು, ಬರಹ, ಕಥಾನಕ, ತರಲೆಗಳು ಎಲ್ಲವೂ ಮೇಳೈಸಿ ಬಂದಿರುವ ಲೇಖನ ಸೊಗಸಾಗಿದೆ
ಕಡಲೆಂದರೆ ಏನೋ ಸೆಳೆತ ಅಲ್ಲಾ....
ReplyDeleteಅಲೆಗಳ ಜೊತೆ ಹೃದಯಕ್ಕೆ ಅಪ್ಪಳಿಸೋ ನೆನಪುಗಳು........
(ನೀವೇ ನಾಲ್ಕು ಕೋತೊಗಳು ಅಂದ್ಕೊಂಡೆ....)
yaake next post baraddille? waiting for more write ups from you -Vanitakka
ReplyDeleteನಿಮ್ಮ ಬರಹದ ಬಗ್ಗೆ ಎರಡು ಮಾತಿಲ್ಲ ಅನ್ನುವುದು ಹಾಗಿರಲಿ ಒಂದು ವರೆ ಮಾತುನೂ ಇಲ್ಲ ಎನ್ನುವುದೇ ಸೂಕ್ತ. ಚಂದದ ಬರಹದಲ್ಲಿ ನಿಗದಿಯಿರದ ಪಯಣಕ್ಕೆ ನಿಮ್ಮ ಬರಹವನ್ನು ಓದುವವರನ್ನು ಕರೆದೊಯ್ಯುವ ನಿಮ್ಮ ಜಾಣ್ಮೆಯ ಬರಹದಲ್ಲಿ ನಾನು ಸಹ ಊರೂರು ಸುತ್ತಿ ಬಂದ ಹಾಗಾಯಿತು. ನಿಮ್ಮ ಖುಷಿಯನ್ನು ಹಂಚಿಕೋಡ ಬಗೆ ತುಂಬಾ ಸೊಗಸಾಗಿದೆ ಮತ್ತು ಯಾವಾಗಲೂ ಹೀಗೆ ಆ ಖುಷಿಯೆನ್ನುವುದು ನಿಮ್ಮ ಬದುಕಲ್ಲಿ ಕಾಲು ಮುರಿದು ಬಿದ್ದಿರಲಿ.
ReplyDeleteಕೊನೆಯಲ್ಲಿ ನನ್ನದು ಕಳಕಳಿಯ ವಿನಂತಿ, ನಿಮ್ಮ ಬರಹಗಳು ಲೇಖನಿಯಿಂದ ಹೊರಬಂದು ಓದುಗರನ್ನು ತಣಿಸಲಿ ಹಾಗಾಗಿ ಬರವಣಿಗೆಯನ್ನು ಮುಂದುವರೆಸಿ. ಅದಲ್ಲದೆ ನಿಮ್ಮ ಬರಹದಲ್ಲಿ ದಯವಿಟ್ಟು ಆಂಗ್ಲ ಭಾಷೆಯ ಶಬ್ಧಗಳನ್ನು ಬಳಸದಿರಿ. ಶುದ್ಧ ಕನ್ನಡದಲ್ಲಿರಲಿ ನಿಮ್ಮ ಬರಹ. ಇದರಿಂದಾಗಿ ಓದುಗರ ಮೇಲು ಕನ್ನಡ ಶಬ್ಧಗಳ ಅರಿವು ಮೂಡಿ ಕನ್ನಡದ ಉಳಿವಿಗೆ ನಾಂದಿಯಾಗಲಿ. ಕನ್ನಡವನ್ನು ಉಳಿಸಿ ಬೆಳೆಸುವತ್ತ ಹೆಜ್ಜೆಯಿಟ್ಟು ನಾವು ಕನ್ನಡದ ಸೇವೆ ಮಾಡೋಣ. ಧನ್ಯವಾದಗಳು.
Check on Google Rank SEO Checker
ReplyDeleteFully Funded Scholarships in Canada Apply Now
Computer Science Solved Mcqs Pdf Download Here
See Coming Football Big Day