ಸಾಗರದಾ ಬೊರ್ಗರೆತ ,
ಅಲೆ ಅಲೆಯ ನೆಪ ಮಾತ್ರ.
ನೆಪ ಮಾತ್ರಕೀ ಮಿಂಚು
ಮನಮುಟ್ಟುವಾ ಸಂಚು.
ಮುಂಜಾವಿನೀ ಮಂಜು
ಮುಸ್ಸಂಜೆಯಾಗಾಸ .
ತೀರದಲ್ಲಾಯಾಸ ,
ಆಗದಿರಲಿ ವ್ಯತ್ಯಾಸ.
ನಾ ಬರದಿರಲ್ಲಿ
ಕಾಡಿ ಬೇಡದಿರೆನ್ನ ನಿನ್ನೊಳೊಂದಾಗುವಂತೆ .
ನಾನೇ ನಿನ್ನಲ್ಲಿ ಬಂದೆ
ಅಲೆಯಲ್ಲಿ ಬೆರೆತು ನಿನ್ನೊಳೊಂದಾದಂತೆ .
ನಡೆದಷ್ಟೂ ದೂರಕೆ
ಕನಸುಗಳಾ ಮೆರವಣಿಗೆ.
ಮನದ ಭಾರಕೆ
ನೆನಪಲೇ ಬರವಣಿಗೆ.
ಬಾಳ ಹಾದಿಯಲಿ ಒಂಟಿ ಪಯಣದಲಿ
ಒಬ್ಬಂಟಿ ನಡಿಗೆಯ ಬೇಸರ .
ಎಲ್ಲಿರುವೆ ಗೆಳೆಯಾ ?
ಕೈ ಹಿಡಿದು ನಡೆಸೋಕೆ ಬರುವೆಯಾ ಇನಿಯಾ?
ದೂರ ತೀರದ ಯಾನದಲಿ,
ಬಾಳ ದೋಣಿಯ ಪಯಣದಲಿ ,
ಹುಡುಕಿರುವೆ ನಾವಿಗನಾ,
ಈ ಹಡಗ ಯಜಮಾನನಾ.
ಫೋಟೋ ಕ್ರೆಡಿಟ್ಸ್ : ಬಾಲಣ್ಣ (ನಿಮ್ಮೊಳಗೊಬ್ಬ ಬಾಲು )
ಧನ್ಯವಾದ ಬಾಲಣ್ಣ .ಎಲ್ಲರನ್ನೂ ನೆನಪ ಅಲೆಯಲ್ಲಿ ತೇಲಿಸೋ ದಡದಲ್ಲಿರೋ ಹಾಯಿಯೊಂದರ ಸುಂದರ ಚಿತ್ರಕ್ಕೆ
ಗವ್ವನೆ ಕವಿದಿರುವ ಕತ್ತಲಲ್ಲಿ
ReplyDeleteಮುತ್ತಿನ ಮಣಿ ತೋರುವ ಬೆಳಕು
ತಿಮಿರವನ್ನು ನೂಕಿ ಮೀಟಿ ತೆಗೆಯುತ್ತದೆ
ಬಾಳಿನ ಹಾಯಿ ದೋಣಿಯ ಪಯಣ
ಭಾವ ಸಾಗರದಲ್ಲಿ ತೇಲುತ್ತ ಮುಳುಗೇಳುವ ನಿನ್ನ ಕವನಗಳ ಪ್ರತಿಸಾಲು ಒಂದು ಸುಂದರ ಅನುಭೂತಿಯನ್ನು ನೀಡುತ್ತದೆ
ಇಷ್ಟವಾದ ಸಾಲುಗಳು
"ನಡೆದಷ್ಟೂ ದೂರಕೆ
ಕನಸುಗಳಾ ಮೆರವಣಿಗೆ.
ಮನದ ಭಾರಕೆ
ನೆನಪಲೇ ಬರವಣಿಗೆ."
ಸೂಪರ್ ಬಿ ಪಿ
ಧನ್ಯವಾದ ಶ್ರೀಕಾಂತಣ್ಣ .
Deleteತೀರದಲಿ ಒಂಟಿಯಾಗಿ ಕುಳಿತಿರೋ ನಾವೆಯ ಭಾವವನ್ನ ನೀವಿಷ್ಟಪಟ್ಟಿದ್ದು ಖುಷಿ ಆಯ್ತು .
ಅಂದಹಾಗೆ ನಿಮ್ಮ ಕವಿತೆ ಸೂಪರ್ ಸೂಪರ್.
ಇದನ್ನೋದಿ ಇನ್ನೂ ಖುಷಿ ಆಯ್ತು .
ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ
ಭಾವನೆಗಳ ಸಾಲು ಸಾಲೇ ಕವನವಾಗಿ ರೂಪುಗೊಂಡಿವೆ!
ReplyDeleteಥಾಂಕ್ ಯು ಸರ್ .
Deleteನಿಮ್ಮನ್ನಿಲ್ಲಿ ನೋಡಿದ್ದು ಹಿಡಿಸಲಾಗದ ಖುಷಿ ಆಯ್ತು .
ಕಡಲ ತೀರದ ಭಾವವೊಂದನ್ನ ನೀವಿಷ್ಟಪಟ್ಟಿದ್ದು ನನ್ನ ಖುಷಿ .
ನಿರುಪಾಯಕ್ಕೆ ಸ್ವಾಗತ
ಕಳೆಯದಿರಲಿ ಕವನ
ReplyDeleteಯಾರದೋ ಆಶಯಕೆ
ಬದಲಾಗದಿರಲೆನ್ನ ಭಾವ,ಬಯಕೆ
ಮೋಡ ಮಳೆಯಾಗುವುದು
ನೋಡುಗರ ನುಡಿಗಲ್ಲ
ಪ್ರತಿಹನಿಯು ಮಡುವಾಗೊ ತೀವ್ರತನಕೆ
ಪ್ರಶಸ್ತಿ ಜಿ,
Deleteಕಳೆದಿದ್ದು ಕವನವಲ್ಲ
ತಲುಪಿಸಿದ್ದು ಯಾರದೋ ಆಶಯಕೂ ಅಲ್ಲ.
ಕಳೆಯದಿರಲಿ ಈ ಕಡಲ ತೀರ,
ಪಾದ ತೋಯಿಸೋ ಅಲೆಗಳ ನಾದ .
ಸಿಗಲೆನ್ನ ಭಾವಕ್ಕೊಂದು ಆಕಾರ
ಆಗಲಿ ಮನ ಮುಟ್ಟೋ ಚಿತ್ತಾರ
ಚೌಕಟ್ಟಿನ ಚಿತ್ತಾರಕ್ಕೆ ಬರೆದ ಸಣ್ಣ ಸಾಲುಗಳ ನೀವೋದಲು ಬಂದಿದ್ದು ನನ್ನ ಖುಷಿ .
ಮತ್ತೆ ಸಿಗೋಣ :)
ಅಚ್ಚುಕಟ್ಟಾದ ಕವನ ಪುಟ್ಟಕ್ಕಾ..
ReplyDeleteನಾವಿಕ ಬೇಗ ಸಿಗಲಿ... :D
ಥಾಂಕ್ ಯು ಮುದ್ದಕ್ಕಾ :)
Deleteನಿಮ್ಮ ಹಾರೈಕೆಗೊಂದು ಶರಣು .
ಭಾವಗಳ ವಿನಿಮಯದಲ್ಲಿ ಮತ್ತೆ ಜೊತೆಯಾಗೋಣ .
"ನಾ ಬರದಿರಲ್ಲಿ
ReplyDeleteಕಾಡಿ ಬೇಡದಿರೆನ್ನ ನಿನ್ನೊಳೊಂದಾಗುವಂತೆ .
ನಾನೇ ನಿನ್ನಲ್ಲಿ ಬಂದೆ
ಅಲೆಯಲ್ಲಿ ಬೆರೆತು ನಿನ್ನೊಳೊಂದಾದಂತೆ ."
ಇಷ್ಟವಾಯ್ತು :) :)..
ಅಬ್ಬಾ...ಭಾಗ್ಯಕ್ಕನೂ ಕವನ ಬರ್ಯಕ್ಕೆ ಶುರು ಹಚ್ಕಂಡಿದ್ದು ನೋಡಿ ಖುಷಿ ಆಯ್ತು...
ಜೈ...
ಒಳ್ಳೇದಾಗ್ಲಿ :)..
ನಮಸ್ತೆ :)
ಧನ್ಯವಾದ ಚಿನ್ಮಯಣ್ಣಾ .
Deleteನನ್ನೀ ಸಣ್ಣ ಸಣ್ಣ ಸಾಲುಗಳನ್ನೂ "ಕವಿತೆ" ಅಂತ ಕವನಗಳ ಸರದಾರ ಕರೆದಿದ್ದು ನನ್ನ ಖುಷಿ :)
ಭಾವಗಳ ಸಂತೆಯಲ್ಲಿ ಮತ್ತೆ ಜೊತೆ ಸೇರೋಣ .
ನಮಸ್ತೆ
ನಿಸರ್ಗದ ಅಚ್ಚರಿಯನ್ನು ಸಮೀಕರಿಸುತ್ತಾ, ಬಾಳ ಪಯಣವನ್ನು ನಿರೀಕ್ಷಿಸುತ್ತಾ ಹೆಣೆದ ಕವನ ನಮ್ಮ ಮನ ಸೂರೆಗೊಳ್ಳುತ್ತದೆ.
ReplyDeleteನಡೆದಷ್ಟೂ ದೂರಕೆ
ಕನಸುಗಳಾ ಮೆರವಣಿಗೆ.
ಮನದ ಭಾರಕೆ
ನೆನಪಲೇ ಬರವಣಿಗೆ.
ಇದು ಕವಿಯ ಭಾವವೂ ಹೌದು ಮತ್ತು ಬರೆದರೆ ಮನಸ್ಸು ಹಗುರಾಗುವ ಸರಳ ಪ್ರಕ್ರಿಯೆಯೂ ಹೌದು.
ಕಡೆಯ ಸಾಲಿನ ಪರಿಣಾಮವೇ ರೋಚಕ, ಬರೆದದ್ದು ಕವಿಯತ್ರಿ ಅದಕೆ 'ಯಜಮಾನ', ನಾನು ಬರೆದಿದ್ದರೆ' ಯಜಮಾನಿ' ವ್ಯತ್ಯಾಸವೇನಿಲ್ಲ.
ಮದುವೆಯಾದ ಮೇಲೆ
ಬರೀ ಉಳಿಗಮಾನ್ಯ ಪದ್ಧತಿ!
:-D
ಹಾ ಹಾ ..ಬದರಿ ಸರ್ ತುಂಬಾ ಹತ್ತಿರ ನಿಮ್ಮ ಪ್ರತಿಕ್ರಿಯೆ :)
Deleteನಿಜ ಭಾವಗಳ ಹರಾಜಲ್ಲಿ ಮನ ಹಗುರಾಗಿಸೋ ಹುನ್ನಾರ ನಂದು .
ಇದು ಕಡಲ ತೀರದ ಮುತ್ತು
ಭಾವದೊಳಗಿನ ಗಮ್ಮತ್ತು .
ನೀವಿಷ್ಟಪಟ್ಟಿದ್ದು ನನ್ನ ಖುಷಿ ಕೂಡಾ :)
ಭಾವಗಳ ವಿನಿಯೋಗದಲ್ಲಿ ಮತ್ತೆ ಜೊತೆಯಾಗ್ತೀನಿ
ಬದರಿಯವರ ಊಳಿಗಮಾನ್ಯದ ಪ್ರತಿಕ್ರಿಯೆ
Deleteತುಂಬಾ ಇಷ್ಟವಾಯಿತು....
ಸ್ಪೆಶಲ್ಲಾಗಿ ಏನಾದರೊಂದು ಪಂಚ್
ಇಟ್ಟಿಡ್ತಾರೆ....
thats Badari sir :)
Deleteಅವರ ಕಡೆಯಿಂದೊಂದು ಧನ್ಯವಾದ ನಿಮಗೆ
ಪ್ರೀತಿಯ ಸಿಹಿಗಾಳಿಯಲಿ ತೇಲುವ ಭಾವಗಳ ಹಾಯಿ ದೋಣಿ ಮನದ ತೀರ ತಟ್ಟುವಲ್ಲಿ ಯಶಸ್ವಿ ಪುಟ್ಟಿ ... ನಿನ್ನ ಪುಟ್ಟ ಸಾಲುಗಳ ಮೆರವಣಿಗೆ ಚಂದ ಚಂದ ...
ReplyDeleteಥಾಂಕ್ ಯು ಸಂಧ್ಯಕ್ಕಾ ...
Deleteಪುಟ್ಟ ಸಾಲುಗಳನ್ನ ನೀವಿಷ್ಟಪಟ್ಟು ಪುಟಗಟ್ಟಲೇ ಬರೆಯೋ ತರದ ಭಾವವೊಂದ ಅಲ್ಲಿಂದಲೇ ಸಲೀಸಾಗಿ ವರ್ಗಾಯಿಸಿದ್ರಿ ನಂಗಿಲ್ಲಿ :)
ಆತ್ಮೀಯ ಪ್ರತಿಕ್ರಿಯೆ ಖುಷಿ ಕೊಡ್ತು .
ಇನ್ನೊಂದು ಭಾವದೊಂದಿಗೆ ಮತ್ತೆ ಜೊತೆಯಾಗ್ತೀನಿ
ಸಮುದ್ರ ತಟದಲ್ಲಿ ಬಾಳ ನಾವಿಕನ ಹುಡುಕಾಟ .. ಚೆನ್ನಾಗಿದೆ .. ನಿಮ್ಮ ಹೊಸ ಪ್ರಯತ್ನ ಇದು .. ಮುಂದುವರೆಯಲಿ /... liked that last 2 paras..
ReplyDeleteಥಾಂಕ್ ಯು ಗಿರೀಶ್ ಜಿ :)
Deleteಸಮುದ್ರ ತೀರದಲ್ಲಿ ಕಾಣದ ಗೆಳೆಯನ ಹುಡುಕಾಟ ...
ಬಂದ ದಾರಿಯಲ್ಲೇ ವಾಪಾಸ್ಸಾಗೋಕೆ ಬಿಡದ ಹಾಯಿಯೊಂದಿಗಿನ ಜಗ್ಗಾಟ...
ನಿರಂತರ ಪಯಣ ..
ದಿಗಂತದೆಡೆಗೆ.
ಸಣ್ಣ ಸಾಲುಗಳನ್ನ ಇಷ್ಟಪಟ್ಟು ಪ್ರೋತ್ಸಾಹಿಸಿದ್ರಿ .
ಖುಷಿ ಆಯ್ತು
ನಡೆದಷ್ಟೂ ದೂರಕೆ
ReplyDeleteಕನಸುಗಳಾ ಮೆರವಣಿಗೆ.
ಮನದ ಭಾರಕೆ...
ತುಂಬ ಚೆಂದದ ಸಾಲುಗಳು...ಕವಿತೆ ತುಂಬಾ ಚೆನಾಗಿದ್ದು ....ಲೇಖನಗಳಿಗಿಂತ ಕವಿತೆಯಲ್ಲಿ ಜಾಸ್ತಿ ನೈಪುಣ್ಯತೆ ಕಾಣ್ತಾ ಇದ್ದು :)
ಧನ್ಯವಾದ ಜಿ .
Deleteಹಾ ಹಾ ...ಲೇಖನ ಬಿಟ್ಟು ಕವಿಯಾಗು ಅನ್ನೋ ಹುನ್ನಾರವಾ ನಿಮ್ದು ? :)
ಭಾವಗಳನ್ನ ನೀವಿಷ್ಟಪಟ್ಟ ಖುಷಿ ನಂದು :)
ಮತ್ತೆ ಸಿಕ್ತೀನಿ
ReplyDeleteನಡೆದಷ್ಟೂ ದೂರಕೆ
ಕನಸುಗಳಾ ಮೆರವಣಿಗೆ.
ಮನದ ಭಾರಕೆ
ನೆನಪಲೇ ಬರವಣಿಗೆ.
ಎಷ್ಟು ಚಂದನೆಯ ಸಾಲುಗಳು ನೋಡು...
ಕಾಲಿಗೆ ತಾಗಿ ಹೋಗೋ ಪ್ರತಿ ಅಲೆಯೂ ಒಂದೊಂದು
ಮಧುರ ನೆನಪುಗಳ ಬರುವ ಕನಸುಗಳ ಅನುಭೂತಿಯಾಗಲಿ..
ಒಬ್ಬಂಟಿ ನಡಿಗೆಯ ಬೇಸರ ಬೇಗ ಕಳೆಯಲಿ....
ಗಿಳೀ... ಇದು ನಿನ್ನ ಮೊದಲ ಕವನವಾದರೂ ತುಂಬಾ ಹಾಯಾಗಿದೆ...
ಚಂದ ಚಂದ......
ಧನ್ಯವಾದ ರಾಘವ್ ಜಿ :)
Deleteನಿಮ್ಮೀ ಪ್ರೋತ್ಸಾಹವೇ ನನ್ನ ಬರೆಯೋಕೆ ಪ್ರೇರೇಪಿಸುತ್ತೇನೋ ಅರಿಯೆ .
ಅವಗಾವಾಗೂ ಕಿವಿನೂ ಹಿಂಡ್ತಾ ಇರಿ :)
ಹಾ ಹಾ ...ಒಬ್ಬಂಟಿ ಬೇಸರ ಬೇಗ ಕಳೆಯಲಿ ಅನ್ನೋ ನಿಮ್ಮ ಹಾರೈಕೆಗೊಂದು ಶರಣು .
ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ
ಒಂದು ಸುಂದರ ಕವಿತೆಯಲ್ಲಿ ಎಷ್ಟು ಭಾವನೆ ವ್ಯಕ್ತಪಡಿಸಲು ಸಾಧ್ಯವೋ ಅಷ್ಟೂ ಭಾವನೆಗಳು ತಿಳಿನೀಲ ಆಗಸದಿ ಮೆರವಣಿಗೆ ಹೊರಡುವ ಮೊದಗಳಂತೆ ಸಾಲಿನಂತೆ ಚಿತ್ತಾರ ಮೂಡಿಸಿದೆ , ಒಳ್ಳೆಯ ಕವಿತೆಗೆ ಅಭಿನಂದನೆಗಳು ತಂಗ್ಯವ್ವ ಇಷ್ಟವಾದ ಕವಿತೆಯಲ್ಲಿ ಮನ ಕೆಣಕಿದ
ReplyDeleteನಡೆದಷ್ಟೂ ದೂರಕೆ
ಕನಸುಗಳಾ ಮೆರವಣಿಗೆ.
ಮನದ ಭಾರಕೆ
ನೆನಪಲೇ ಬರವಣಿಗೆ.
ಸಾಲುಗಳು
ಥಾಂಕ್ಸ್ ಬಾಲಣ್ಣ :)
Deleteಕಡಲ ತಡಿಯ ಕಿನಾರೆಯ ಭಾವವನ್ನ ನೀವಿಷ್ಟ ಪಟ್ಟಿದ್ದು ನನ್ನ ಖುಷಿ :)
ನಿಮ್ಮ ಫೋಟೋಕ್ಕೆ ಹಾಗೇ ನಿಮಗೂ ಒಂದು ಜೈ .
ನಿಮ್ಮ ಕ್ಯಾಮರಾಕ್ಕೊಂದು ನಮನ.
ಮತ್ತೊಮ್ಮೆ ನಮನ.
ಮತ್ತೆ ಸಿಕ್ತೀನಿ ಇನ್ನೊಂದು ಭಾವದಲ್ಲಿ :)
ಸುಂದರ ಕವನ....
ReplyDeleteಅಭಿನಂದನೆಗಳು... ಚಂದದ ಸಾಲುಗಳಿಗೆ
ಥಾಂಕ್ಸ್ ಪ್ರಕಾಶಣ್ಣಾ ,
Deleteನಿಮ್ಮನ್ನಿಲ್ಲಿ ನೋಡಿ ತುಂಬಾ ಖುಷಿ ಆಯ್ತು .
ನನ್ನ ಭಾವಗಳನ್ನ ಇಷ್ಟಪಟ್ಟಿದ್ದು ಇನ್ನೂ ಖುಷಿ .
ಮತ್ತೆ ಸಿಗೋಣ
ನಿಮ್ಮ ಗದ್ಯವೇ ಪದ್ಯದಂತೆ, ಇನ್ನು ಪದ್ಯ.. ಕೇಳಬೇಕೆ..? ಗದ್ಯವೂ ಹೃದ್ಯ, ಪದ್ಯವೂ ಹೃದ್ಯ..
ReplyDeleteಥಾಂಕ್ಸ್ ಅಜಯ್ .
ReplyDeleteಇದು ಕಾಂಪ್ಲಿಮೆಂಟಾ ,ಕಾಮೆಂಟಾ ತಿಳೀಲಿಲ್ಲ ನಂಗೆ :)
ಹಾ ಹಾ ,ನನ್ನೀ ಸಣ್ಣ ಸಾಲುಗಳು ನಿಮಗೆ ಹೃದ್ಯ ಅನಿಸಿದ್ದಕ್ಕೆ ನಾ ಆಭಾರಿ .
ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಕ್ತೀನಿ
ಭಾಗ್ಯಾ -
ReplyDeleteನಿನ್ನ ಬದುಕ ನೌಕೆಗೆ ನೀನೆ ನಾವಿಕಳಾಗು...
ನೋವ ಅಲೆಯ ಬೇಧಿಸಿ, ಪಯಣದಾಯಾಸ ನೀಗಿಸಿ, ನಗೆಯ ಹಂಚಿಕೊಳ್ಳಲೋಸುಗ ಜತೆಗೆ ಬರಲೊಬ್ಬ ನಿನ್ನಿಷ್ಟದ ಸಹನಾವಿಕ...
ನೆನಪು ಕನಸುಗಳಲಿ ಹಿತವಾಗಿ ಸಾಗಲಿ ಬದುಕ ಬರವಣಿಗೆ...:)
:::
ಚಂದದ ಭಾವ ಬರಹ...ಅಷ್ಟೇ ಚಂದದ ಛಾಯಾಚಿತ್ರ...
ಥಾಂಕ್ಸ್ ವತ್ಸಾ ,
Deleteನಿಮ್ಮೀ ಹಾರೈಕೆಗೊಂದು ಶರಣು .
ಭಾವಗಳೊಟ್ಟಿಗೆ ಮತ್ತೆ ಜೊತೆಯಾಗ್ತೀನಿ
ಕನಸುಗಳ ಮೆರವಣಿಗೆ ನನಸಾಗಿ ಮೆರೆಯಲಿ.. ಚೆಂದದ ಭಾವ ಪುಟ್ಟಕ್ಕ.
ReplyDeleteಥಾಂಕ್ ಯು .
Deleteನಿರುಪಾಯಕ್ಕೆ ಸ್ವಾಗತ :)
ಥಾಂಕ್ಸ್ ..
Deleteನಿರುಪಾಯಕ್ಕೆ ಸ್ವಾಗತ ನಿಮಗೆ
ಸುಂದರ ಸಾಲುಗಳು.
ReplyDeleteಸಾಗುತಿರಲಿ ನಿನ್ನೀ ಪಯಣ
ಇರುವುದಲ್ಲೋಂದು ತೀರ,
ನಿನ್ನಾಗಮನಕೆ ಕಾಯುತಿಹನಾ
ಒಲವಿನ ರಾಜಕುಮಾರ.
thank you :)
Delete