ಹಂಗೆ ಸುಮ್ನೆ ....
ಓದೋಕೂ ಮೊದ್ಲೇ ಹೇಳ್ತಿದೀನಿ ..ಓದ್ಕೊಂಡು ತೀರಾ ಕಾಲ್ ಎಳ್ಯೋ ಹಂಗಿಲ್ಲ ...ಕಾಲ್ ಎಳ್ಸ್ಕೊಂಡು ಎಳ್ಸ್ಕೊಂಡು ಉದ್ದ ಆಗ್ಬಿಟ್ಟಿದೆ ಅನ್ನೋ ಸಣ್ಣ ಅನುಮಾನ.
ಹೈಕ್ಲಾಸ್ ನೆಟ್ ಸ್ಪೀಡ್ ಗೊಂದು ಉದ್ದುದ್ದ ನಮಸ್ಕಾರ ಮಾಡಿ ....
ಅರ್ಪಣೆ,
ಯಾಕೆ ಹುಡ್ಗಿ ತುಂಬಾ ಫೀಲಿಂಗ್ ಸ್ಟೋರಿ ಬರೀತಿಯಾ ಅನ್ನೋ ಭಯಂಕರ ತರ್ಲೆಗಳಿಗಾಗಿ....
ಹೆಂಗಿದ್ರೂ ಪಿಟೀಲು ಬಾರ್ಸೋದ್ ಇದ್ದಿದ್ದೆ ಅಲ್ವಾ ?ಮತ್ಯಾಕೇ ಮುನ್ನುಡಿ .
ಮುನ್ನುಡಿ ,ಪೀಠಿಕೆ ಇಲ್ದೇ ಶುರು ಮಾಡೋಣ ..(ಸ್ವಲ್ಪ ಆದ್ರೂ ಕಣ್ಣು ,ಕಿವಿ ಉಳ್ಕೊಳ್ಳಿ ನಿಮ್ದು )
ಫೇಸ್ಬುಕ್,ವಾಟ್ಸ್ ಅಪ್ ,ಚಾಟ್ ಹಿಸ್ಟರಿ,ಕ್ಲಾಸ್ ರೂಮ್ ಸ್ಲೀಪ್, ಕ್ಯಾಂಪಸ್ ಗಾಸಿಪ್ಸ್,ಕಾಫಿ ಡೇ ,ರೈಡ್ಸ್ ಎಲ್ಲಾ ಮುಗ್ದು ಯಾಕೋ ತುಂಬಾ ಪ್ರೀ ಇದೀನಿ ಅನ್ಸೋಕ್ ಶುರುವಾದಾಗ ಮಾತ್ರ ಇಲ್ಲೊಂದು ಅಟೆಂಡೆನ್ಸ್ ಹಾಕೋದು ...ತುಂಬಾ ದಿನ ಆಯ್ತು ಕ್ಲಾಸ್ ಅಟೆಂಡ್ ಮಾಡಿ ಅಂತ ಈಗಷ್ಟೇ ಜೋರು ಮಾಡಿದ ಅಣ್ಣಂಗೆ ಒಂದು ಚಿಕ್ಕ ಗೆಸ್ಟ್ ಅಪಿಯರನ್ಸ್ ಕೊಟ್ಟು ಸಮಾಧಾನ ಮಾಡ್ಬಿಟ್ಟು ಹೋಗೋಕೆ ಬಂದೆ ....ಇಷ್ಟಕ್ಕೆ ನಿಮ್ಗೂ ಸುಸ್ತ್ ಆದ್ರೆ ನನ್ ಪುಣ್ಯ ..ಮತ್ತೆ ರೆಗ್ಯುಲರ್ ಕ್ಲಾಸ್ ಅಟೆಂಡ್ ಮಾಡು ಅನ್ನಲ್ವಲ್ಲಾ :ಫ್
ಪಾರ್ಟ್ ಟೈಮ್ ಸ್ಟುಡೆಂಟ್ (ಫುಲ್ ಟೈಮ್ ನಿರುದ್ಯೋಗಿ) ಆಗಿ ತುಂಬಾ ದಿನ ಆಗಿರೋದ್ರಿಂದಾನೇ ಇರ್ಬೇಕು ಹಿಂಗೆ ಸೋ ಕಾಲ್ಡ್ ಫೀಲಿಂಗ್ ಸ್ಟೋರಿಯ ಹಿಂದಿರೋ ಇನ್ಸ್ಪಿರೇಷನ್ .
ಯಾಕೋ ಜನ ಚೆಂಜ್ ಕೇಳ್ತಿದಾರೆ ...
ಅದ್ಕಾಗಿ ಇದು :ಫ್
ಯಾಕೋ ಗೊತ್ತಿಲ್ಲಪ್ಪ ..ಮೊದಲ್ ನೆನಪಿಗೆ ಬರೋದೆ ಆ ಹುಡ್ಗ (ಯಾವ್ ಹುಡ್ಗ ಅಂತ ಕೇಳೋ ಹಂಗಿಲ್ಲ .....ಹೆವೀ ಕನ್ಪ್ಯೂಷನ್ ಆಗುತ್ತೆ ಈ ಪ್ರಶ್ನೆ)
ಅವನ್ ನೆನ್ಪಾದ್ರೆ ಮುಗೀತು ಬಿಡಿ ...ಸಾಲು ಸಾಲು ಬ್ರೇಕಪ್ ಸ್ಟೋರೀಸ್ ಎದುರು ಬಂದಂಗೆ (ಹುಡ್ಗ ತುಂಬಾ ಬೋರಿಂಗ್ ಅಂದ್ಕೊಂಡ್ರಾ ...ಎಕ್ಸಾಟ್ಲೀ )
ಕಷ್ಟ ಪಟ್ಟು ಅವ್ನಾ ನೆನಪ್ ಮಾಡ್ಕೊಳ್ದೇ ಇದ್ದಾಗ ಹಿಂಗೆ ನಿಮ್ಮ ತಲೆ ತಿನ್ನೋಕೆ ಬರ್ತೀನಿ :ಫ್( ಆ ಹುಡ್ಗಾನೇ ಯಾವಾಗ್ಲೂ ನೆನಪಾಗ್ತಾ ಇರ್ಲಿ ಅಂದ್ರಾ ? ಏನೋ ...ಕೇಳ್ಸಿಲ್ಲಪ್ಪ ನಂಗೆ )
ಬದ್ಕಿದೀಯ ಅಂತ ಕೇಳ್ದ್ರೆ ತಕ್ಷಣಕ್ಕೊಂದು ಮೇಸೇಜ್ ಬರುತ್ತೆ ...ನೀವೇ ಇನ್ನೂ ಬದ್ಕಿರೋವಾಗ ನಾವ್ ಬದ್ಕಿರೋದು ಹೆಚ್ಚಲ್ಲ ಬಿಡಿ ಅಂತ ...!
ತುಂಬಾ ದಿನದಿಂದ ನಾಪತ್ತೆಯಾಗಿದ್ದ ಗೆಳತಿ ಕೂಡಾ ಮಧ್ಯ ರಾತ್ರಿ ಡೈಲಾಗ್ ಹೇಳಿ ಅಂತೂ ತಾನೂ ಬದ್ಕಿದೀನಿ ಅಂತ ತೋರ್ಸ್ತಾಳೆ .ಮಿಸ್ ಕಾಲ್ ಗೂ ದುಡ್ಡು ಹೋಗುತ್ತೆ ಅನ್ನೋ ತರ ಆಡಿ ಆಮೇಲೊಮ್ಮೆ ನಂಗ್ಯಾಕೋ ಮಿಸ್ ಕಾಲ್ ಕೊಡೋಕೂ ಮೂಡ್ ಇರ್ಲಿಲ್ಲ ಅಂತ ಭಯಂಕರ ಡೈಲಾಗ್ ಹೇಳಿ ರಾತ್ರಿ ಪೂರ್ತಿ ಯಾಕಪ್ಪ ಈ ಹುಡ್ಗಿ ಹೀಗೆ ಮಾತಾಡಿದ್ಲು ಅಂತ ಯೋಚ್ನೆ ಮಾಡಿ (ಯಾವ್ ಹುಡ್ಗನ ಜೊತೆ ಬ್ರೇಕ್ ಅಪ್ ಆಯ್ತಪ್ಪ ಇವ್ಳದ್ದು ಅಂತ),ಬೆಳಿಗ್ಗೆ ಕ್ಲಾಸ್ ಅಟೆಂಡ್ ಮಾಡೋದು ಲೇಟ್ ಆಗಿ ...ಉಫ಼್ ...ಯಾರೀಗ್ ಹೇಳೋಣಾ ನಮ್ಮ ಪ್ರಾಬ್ಲಮ್ಮು ....
ಅದೇ ಕಿತ್ತೊಗಿರೋ ಲೈಫ಼ು ,ಅದೇ ಕ್ಯಾಂಪಸ್,ತಾವೇ ಹುಡ್ಕಿದ್ದೇನೋ ಸಬ್ಜೆಕ್ಟ್ ಗಳನ್ನ ಅನ್ನೋ ತರ ಪೋಸ್ ಕೊಡೋ ಜುನಿಯರ್ ಲೆಕ್ಚರ್ಸ್ ,೨೪ ಗಂಟೆ ಕಡ್ಮೆ ಆಯ್ತೇನೋ ಅನ್ನೋ ಭಾವ ಕೊಡೋ ಅಸೈನ್ ಮೆಂಟ್ಸ್, ಕ್ಯಾಂಟೀನಿನಲ್ಲಿ ನಾವೇ ಊಹಿಸಿಕೊಳೋ ತಿಳಿಯದ ರೆಸಿಪಿ ,ತೀರಾ ರೆಗ್ಯುಲರ್(?) ಆಗಿ ಅಟೆಂಡ್ ಮಾಡೋ ಕ್ಲಾಸಸ್ ,ಲೇಟ್ ಎಂಟ್ರಿ ಕೊಡೋ ಹುಡುಗಂಗೆ ಗೋಳು ಹೊಯ್ಕೊಳೋ "ಓಊಊ" ಸೌಂಡ್ ,ಡೈಯಾಸ್ ನಲ್ಲಿ ಪೋಸ್ ಕೊಡೋ ಲೆಕ್ಚರ್ಸ್ ಇಂಗ್ಲೀಷ್ ನಲ್ಲಿ ಸರಿಯಾದ ವಾಕ್ಯ ಹುಡುಕೋಕೆ ಹೋಗಿ ಕಂಟ್ರೋಲ್ ಆಗದ ನಗು, ಆಮೇಲಿನ ಅರ್ಧ ಗಂಟೆ heart touching ಕೊರೆತ ಅಬೌಟ್ how to behave in the class,
ಮೊಸ್ಟ್ imp :ಇಂಟರ್ನಲ್ ಹಿಂದಿನ ದಿನ ಎದ್ದು ಬಿದ್ದು ಜೆರಾ಼ಕ್ಸ್ ಹುಡುಕೋ ಗೋಳು.
ಲೈಫ಼್ ನಲ್ಲಿ ನಾವೂ ಬ್ಯುಸಿ ಆಗ್ತೀವಿ ಅಂತ ಗೊತ್ತೇ ಇರ್ಲಿಲ್ಲ !!
feeling proud :P
ಗ್ಯಾಪ್ ನಲ್ಲೇ ಹೆವೀ ಚೇಂಜ್ ಆಗ್ಬಿಡ್ತು ಅಂದ್ರೆ ನಂಬ್ಲೇ ಬೇಕು ....
ಕ್ಲಾಸ್ ಅಂದ್ರೆನೇ ಗೊತ್ತಿರ್ಲಿಲ್ಲ ..ಈಗ ಬಂಕ್ ಅನ್ನೋ ಶಬ್ಧವ ಎಲ್ಲೋ ಕೇಳಿದಂಗೆ ಅನ್ನಿಸ್ತಿದೆ .
ಅಸೈನ್ ಮೆಂಟ್ಸ್, ರೆಗ್ಯುಲಾರಿಟಿ ಗೆ ಇನ್ನೊಂದು ಹೆಸ್ರು ನಾವೇ ಏನೋ ಅಂತನಿಸ್ತಿದೆ .
ಸ್ಪೈಕ್ಸ್, ಲೊ waist ಹುಡ್ಗನ ಎದ್ರು ತೀರಾ ಡೀಸೆಂಟ್ ಆಗಿ ಫ಼ಾರ್ಮಲ್ಸ್ ಹಾಕೋ ಹುಡ್ಗನೇ ಲೈಟ್ ಆಗಿ ಇಷ್ಟ ಆಗ್ತಿದಾನೆ ...
ಪರ್ಫ಼್ಯೂಮ್ ಹಾಕೋ ಹುಡುಗ್ರನ್ನ ನೋಡಿದ್ರೆ ಹೊಟ್ಟೆ ತೊಳ್ಸುತ್ತೆ ಈಗೀಗ !
ಜೂನಿಯರ್ಸ್ ನಾ ಇಂಪ್ರೆಸ್ ಮಾಡೋಕಂತಾ ಬ್ರೇಕ್ ನಲ್ಲಿ ಸರ್ಕಸ್ ನಡೆಸೋ ಡಬ್ಬಾ ಸೀನಿಯರ್ಸ್ ನಾ ನೋಡಿ ಕರುಳು ಹಿಂಡುತ್ತೆ ಕಣ್ರೀ ಅಂದ್ರೇ ಯಾವ್ ರೇಂಜ್ ಗೆ ತಪ್ ತಿಳೀತೀರಾ ....
ತೀರಾ ಸೆಂಟಿಯಾಗಿ ಪ್ರಪೋಸ್ ಮಾಡೋ ಹುಡ್ಗನ್ನ ನೋಡಿ ಜೋರಾಗಿ ನಗ್ಬೇಕು ಅನ್ಸುತ್ತೆ ..ಪಾಪ ಹುಡ್ಗಂಗೆ ಒಳ್ಳೆದಾಗ್ಲಿ ಅಂದ್ರಾ ?
ಇನ್ನು ನಾವಂತೂ ಬಿಡಿ ....fully ಡೀಸೆಂಟ್ ಆಗ್ಬಿಟ್ವಿ ....ಹತ್ತು ಕ್ರಶ್ ಆಗ್ತಿದ್ದ ಜಾಗದಲ್ಲಿ ಒಂದೂ ಕ್ರಶ್ ಆಗ್ತಿಲ್ಲ ..ಯಾವ್ ಹುಡ್ಗನ್ ಮೂತಿನೂ ಸೆಟ್ ಆಗಲ್ಲ ...ಕ್ಯಾಂಪಸ್ಸೇ ನಮ್ದು ಅನ್ನೋ ಭಾವವ ಬಿಟ್ಟು ಯಾರದ್ದೋ ಕ್ಯಾಂಪಸ್ ಅಂತ ಬರೀ ಗೇಟ್ ತನ್ಕ ಮಾತ್ರ ಕೇಳೋ ಅಷ್ಟೇ ದೊಡ್ಡದಾಗಿ ಮಾತಾಡ್ತೀವಿ ....ಕ್ಯಾಂಟೀನ್ ನಡೀತಿರೋದು ನಮ್ದೇ ದುಡ್ದಲ್ಲೇನೋ ಅನ್ನೋ ಸಣ್ಣ ದೌಟ್ ಬೇರೇ ಇದೆ..
ಮನೆಯಲ್ಲೂ ಅಷ್ಟೇ ...ವಾಟ್ಸ್ ಅಪ್ ಬಿಟ್ಟು ಬೇರೇ ಏನನ್ನೂ ಕಣ್ಣೆತ್ತೂ ನೋಡಲ್ಲ(ಇನ್ನೇನ್ ಕೈ ಎತ್ತಿ ನೋಡಕ್ ಆಗುತ್ತಾ)...ತುಂಬಾ ಒಳ್ಳೆವ್ರಾಗಿದೀವಿ ಅನ್ಕೊಂಡ್ರಾ ...ಹಂಗೇನೂ ಇಲ್ಲ ..ವಾಟ್ಸ್ ಅಪ್ ಚಾಟ್ನಲ್ಲೇ ಟೈಮ್ ಮುಗ್ದಿರುತ್ತೆ ಅಷ್ಟೇ !..ಒಂದಿಷ್ಟು ಸೀಕ್ರೆಟ್ ಗ್ರುಪ್ ಗಳಲ್ಲಿ ಬೇಜಾನ್ ಕಾಲ್ ಎಳ್ಕೊಂಡು ,ದೇಶದ ಎಲ್ರದ್ದೂ ಕಾಲ್ ಎಳ್ದು ,ಬ್ಯಾಟರಿ ಲೋ ತೋರ‍್ಸಿ ಅದೇ ಸ್ವಿಚ್ ಆಫ಼್ ಆದ್ಮೇಲೆ ಮಲ್ಗಿದ್ರೆ ಅವತ್ತಿನ ದಿನ ಸಾರ್ಥಕ....
ಆದ್ರೂ ಸ್ವಲ್ಪ ಒಳ್ಳೆವ್ರಾಗ್ಬೇಕು ಇನ್ನಾದ್ರೂ (ಬ್ರಾಂಚ್ ಎಂಟರ್ ಆಗಿದೀವಿ ಅಂತಾನಾ ಕೇಳಿದ್ರೆ ನಿಮ್ಗೂ ನಮ್ ಲೆಕ್ಚರ್ಸ್ ಗೂ ಏನೂ ವ್ಯತ್ಯಾಸ ಇಲ್ಲ ಅಂತ ಘಂಟಾನುಘಂಟವಾಗಿ ಹೇಳ್ಬಿಡ್ತೀನಿ ಅಷ್ಟೇ ).
ಹಳೆ ಹುಡುಗರಿಗೆಲ್ಲಾ ಒಂದು ಸೈಲೆಂಟ್ ಬಾಯ್ ಹೇಳಿ ತೀರಾ ಉಲ್ಟಾ ಆದ ನಮ್ಮದೇ ಟೇಸ್ಟ್ ಗಳ್ನಾ ಟ್ರಾಕ್ ಗೆ ತರೋ ಶತ ಪ್ರಯತ್ನವ ಮಾಡ್ಲೇ ಬೇಕು ಇನ್ನು ....
ವಾಟ್ಸ್ ಅಪ್ ಗೆ ಬಾ,ಸ್ಕೈಪ್ ಗೆ ಬಾ, ಅಲ್ ಬಾ ಇಲ್ ಬಾ ಅಂತ ಬ್ಲಾ ಬ್ಲಾ ಮಾಡಿದ್ರೆ ಒದೆ ಬೀಳುತ್ತೆ ಅಷ್ಟೇ ....
ಒಂದ್ ರೌಂಡ್ ಅಜ್ನಾಥ ವಾಸ ಮುಗಿದ್ಮೇಲೆ ಸಿಗ್ತೀನಿ ಮತ್ತೆ ತಲೆ ತಿನ್ನೋಕೆ ..ಅಲ್ಲಿ ತನ್ಕ ಆ ತಲೆಗಳ್ನಾ ಜೋಪಾನ ಮಾಡ್ಕೊಳಿ.
ಗ್ಯಾಪಲ್ಲಿ ಟೈಮ್ ಇದ್ರೆ ...ಮೊಬೈಲ್ ನಲ್ಲಿ ಬಿಟ್ಟಿ ಕರೆನ್ಸಿ ಇದ್ರೆ ಅವಾಗಾವಾಗ ನೀವೂ ಬದ್ಕಿದೀರ ಅಂತ ಹೇಳ್ತಿರಿ ...ಇಲ್ಲಾ ಫೋಟೋಕ್ಕೆ ಹಾರ ಹಾಕಿ ಕೈ ಮುಗ್ಯೋಕೆ ಗೊತ್ತಾಗಲ್ಲ ಅಂತಷ್ಟೇ.
* * *
ಹಳೆ ಹುಡ್ಗ ಯಾರಂತ ಕೇಳೋ ಹಂಗಿಲ್ಲ ....ಹೊಸ ಹುಡ್ಗನ್ ಹೆಸ್ರೂ ಕೇಳೋ ಹಂಗಿಲ್ಲ ....ಏನ್ ಹುಡ್ಗೀರಪ್ಪ ಅಂತ ಬೈಯ್ಯೋ ಹಂಗಿಲ್ಲ ...ಎಷ್ಟ್ ನೀಟ್ ಆಗಿ ಕೊರಿತಾಳೆ ಅಂತಾನೂ ಉಗ್ಯೋ ಹಂಗಿಲ್ಲ .....
ಟೊಟಲ್ಲಿ ..... ಉಫ಼್ .
(ಬ್ಲಾಗ್ ಅನ್ನೋದು ರಾಗಿ ಮುದ್ದೆ ಹೋಟೆಲ್ ಆಗ್ಬಾರ್ದು ...ಆವಾಗಾವಾಗ ಮಸಾಲ್ ಪುರಿನೂ ಮಾಡ್ತಿರ್ಬೇಕು ಅಂತ ನೀಟ್ ಆಗಿ ಡೈಲಾಗ್ ಹೇಳಿದ್ದ ಗೆಳೆಯಂಗೆ ......ಮಸಾಲ್ ಪುರಿನಲ್ಲಿ ಸ್ವಲ್ಪ ಪುರಿ ಕಡ್ಮೆ ಇದೆ ಅನ್ಸುತ್ತೆ ,,ಅಥ್ವಾ ಪಾನಿ ಪುರಿ ಆಯ್ತು ಅನ್ಸುತ್ತೆ ಕಣೋ ಸ್ವಲ್ಪ ಅಡ್ಜಸ್ಟ್ ಮಾಡ್ಕೋ :ಫ್ )

ಸೂಪರಬ್.... ಇಷ್ಟೊಂದು ಸ್ಪೀಡಿಗೆ , ಮನಸ್ಸು ಸಹ ಅಷ್ಟೇ ಸ್ಪೀಡಾಗಿ ಓದುವಂತಹ ಕಚಗುಳಿಯಿಡುವ ಪಂಚಿಂಗ್ ಡೈಲಾಗ್ ಕುಲಗೆಟ್ಟು ಹಾದಿ ತಪ್ಪಿದ ಮನಸ್ಸಿಗೆ ಶ್ಯಾನೆ ಖುಷಿ ಕೊಡುತ್ತೆ. ಖಂಡಿತ ಮುಂದೊಂದು ದಿನ ಇದೇ ರೀತಿ ಮುಂದುವರೆದರೆ ಕನ್ನಡ ಚಲನ ಚಿತ್ರ ಜಗತ್ತಿನಲ್ಲಿ ಸಂಭಾಷಣಕಾರಳಗಿ ನೆಲೆಗೊಳ್ಳುವಿರಿ.All the best.
ReplyDeleteಧನ್ಯವಾದಗಳು ಸರ್ ....
Deleteಏನೋ ತುಂಬಾ ಭಾವಗಳ ಅಲೆಯಲ್ಲಿ ನಾವೂ ಕೊಚ್ಚಿ ಹೋಗ್ತೀವಿ ಪ್ರತಿ ಸಲ ನಿರುಪಾಯಕ್ಕೆ ಬಂದಾಗ ಅಂತ ತೀರಾ ಬೇಸರಿಸಿದ ಪರಿಚಿತರ ಒತ್ತಾಯಕ್ಕೆ ಬರೆದಿದ್ದು ..
ನೀವಿಷ್ಟಪಟ್ಟಿದ್ದು ,ಮೊದಲ ಓದುಗರಾಗಿದ್ದು ಖುಷಿ ಆಯ್ತು ಸರ್.
ಪ್ರೀತಿ ,ಪ್ರೋತ್ಸಾಹ ಇರ್ಲಿ .
ಇನ್ನೊಂದು ಭಾವದಲ್ಲಿ ಮತ್ತೆ ಜೊತೆಯಾಗ್ತೀನಿ
ಚೆನ್ನಾಗಿದ್ದು :-)
ReplyDeleteಬ್ಲಾಗನ್ನೋದು ರಾಗಿ ಮುದ್ದೆ ಹೋಟೆಲ್ಲು.. ಹ ಹ.. ನಕ್ಕೂ ನಕ್ಕೂ ಸಾಕಾಯ್ತು :-) ನಿಮ್ಮಾ ಗೆಳೆಯಂಗೊಂದು ಸಲಾಂ :-)
ಅಂದಂಗೆ variety is spice of life ;-) carry on.
ಥಾಂಕ್ ಯು ಪ್ರಶಸ್ತಿ .....
Deleteರಾಗಿ ಮುದ್ದೆ ಡೈಲಾಗ್ ನಂಗೂ ಹಾರ್ಟ್ ಟಚ್ ಆಗಿದ್ದಕ್ಕೆ ಬರ್ಯೋ ತರ ಆಗಿದ್ದು :ಫ್
ತಪ್ಪು ಒಪ್ಪುಗಳ ಒಪ್ಪವಾಗಿ ತಿಳಿಸಿಕೊಡೋಕೆ ಬರ್ತಿರಿ .
ಭಾವಗಳ ತೇರಲ್ಲಿ ಜೊತೆ ಸಿಕ್ತಿರೋಣ ತಿಳಿದ ವಿಷಯಗಳ ಮಾತಾಡ್ತಾ ,ತಿಳಿಯದ ವಿಷಯಗಳ ಬಗೆಗೆ ಕೈ ಸುಟ್ಕೊಳ್ತಾ :ಫ್
ya... really for a time being i went my flash back...
ReplyDeletethank you sir :)
Deleteಭಾವಗಳ ಸಂತೆಯಲ್ಲಿ ಮತ್ತೆ ಸಿಕ್ತೀನಿ
ವಿಭಿನ್ನವಾಗಿ ಬರೆದಿದ್ದೀರಿ. ಚೆನ್ನಾಗಿದೆ.
ReplyDeleteನನ್ನ ಬ್ಲಾಗಿಗೂ ಭೇಟಿ ಕೊಡಿ
ಧನ್ಯವಾದ ಸರ್ .
Deleteಖಂಡಿತ ಬರೋಣ ..ಖುಷಿ ಆಯ್ತು .
ಉಫ್!
ReplyDeleteಮಧ್ಯರಾತ್ರಿ ಮೆಸೇಜ್ ಮಾಡಿದ್ದು ಈ ಲೆವೆಲ್ ಗೆ 'inspiration' ಕೊಡತ್ತೆ ಅಂದ್ಕೊಂಡಿರ್ಲಿಲ್ಲ... :P
ನಿನ್ನ patho 'ಭಾವ', ನನ್ನ ಹಳೇ 'ಬಾವ'... ಇದನ್ನೇ ನೋಡಿ ಬೋರ್ ಬಂದಿತ್ತಪ್ಪ...
ಮಸಾಲೆ ಪುರಿಗೆ ಖಾರ ಚೆನ್ನಾಗ್ ಬಿದ್ದಿದೆ.
ಸೂಪರ್ರ್ರ್ರ್ರ್!
ಕೊನೇಲೊಂದ್ ಕಿವಿಮಾತು : ತೀರಾ ರೆಗ್ಯುಲರ್ ಆಗ್ಬೇಡಾ.. ಉದ್ಧಾರ ಆಗೊಗ್ತಿಯಾ!!! ;)
ಹಾ ಹಾ ..ಅರ್ಚು ಬದ್ಕಿದೀಯ ? ..ನೀನ್ ಇಲ್ ಬಂದಿದ್ದು ಚೊಲೋ ಆತ್ ನೋಡಾ ...
Delete.ಹಿಂದಿನ ಪೊಸ್ಟ್ ನಲ್ಲಿ ಅಗಲಿದ ಗೆಳತಿಯ ಬಗ್ಗೆ ಬರ್ದಿದ್ದೆ ನಾ .. ..ಎಲ್ಲರದ್ದೂ ಒಂದೆ ಪ್ರಶ್ನೆ ..ಅರ್ಚನಾ ನಾ ಫ಼ೇಸ್ಬುಕ್ ನಲ್ಲಿ ನೋಡಿ ತುಂಬಾ ದಿನ ಆಯ್ತು ..ಏನಾಯ್ತು ಅವ್ಳ್ ಗೆ ಅಂತಾ :ಫ್
ಆಮೇಲಾಮೇಲೆ ನಂಗೂ ಲೈಟ್ ಆಗ್ ಡೌಟ್ ಅಗೋಕ್ ಶುರು ಆಯ್ತು ...
ಅಟೆಂಡೆನ್ಸ್ ಹಾಕಿ ತೋರಿಸ್ದೆ ನೀನಲ್ಲ ದೂರಾದ ಗೆಳತಿ ಅಂತ !!
ನೀವೇ ಉದ್ದಾರ ಅಗ್ತಿರ್ಬೇಕಾದ್ರೆ ನಾವ್ ಉದ್ದಾರ ಅಗೋದ್ ದೊಡ್ ವಿಷ್ಯ ಅಲ್ಲ ಕಣ್ರಿ !!
೧೦ ಗಂಟೆಗ್ ಎದ್ದು ೧೧:೧೦ ಕ್ಕೆ ಕ್ಲಾಸ್ ಗೆ ಬರೋ ಹುಡ್ಗ ಯಾಕೋ ಇಷ್ಟ ಆಗ್ತಿಲ್ಲ ಈವಾಗ ;)
ಮಾವನ್ ನೋಡೋಡ್ ಬಿಟ್ಟು ಬಾವನ್ ನೋಡೋಕ್ ಬಂದ್ರೆ ಹಂಗೆ ಆಗೋದು ..ಇನ್ನಾದ್ರೂ ಬಾವನ್ ನೋಡೋದ್ ಬಿಟ್ಟು ಮಾವನ್ ನೋಡೇ ಹುಡ್ಗಿ ..(ಬಾವ ಫ಼ುಲ್ ಬೋರಿಂಗ್).
ಸಿಗೋಣ ಮತ್ತೆ ...ಪುಸ್ತಕಗಳ ಜಾತ್ರೆಯಲ್ಲಿ
ಮಾತಿನ ಮಳೆಗೆ ನೆನಪುಗಳ ಕೊಡೆಯಡಿ ನಿಂತಿದ್ದರೂ ಒದ್ದೆಯಾದಂತೆ
ReplyDeleteಥಾಂಕ್ ಯು ಜಿ ..
Deleteನಿರುಪಾಯಕ್ಕೆ ಸ್ವಾಗತ.
ನೆನಪ ಮಳೆಯಡಿ ಕನಸ ಜಡಿ ಮಳೆಯಂತೆ :)
ಭಾವವ ಇಷ್ಟಪಟ್ಟಿದ್ದು ನನ್ನ ಖುಷಿ.
ಭಾವಗಳ ತೇರಲ್ಲಿ ಮತ್ತೆ ಸಿಕ್ತೀನಿ
ah...muddada bhavagala tuntatanada matugala chatapita ennuva lavalavikeya chaitanyada ee tale harate barahakkondu salam..
ReplyDeletenee heege baredare naavantu nirupaaya :-)
prayogakke oddikondiddu khushi aytu :-)
ಥಾಂಕ್ಸ್ ಚಿನ್ಮಯಣ್ಣಾ ...
Deleteಬರೆದ ಭಾವವೊಂದ ನೀವಿಷ್ಟಪಟ್ಟಿದ್ದು ಖುಷಿ ಆಯ್ತು ....
ಅಂದ ಹಾಗೆ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಂತಲ್ಲ ..ಜನ ಚೇಂಜ್ ಕೇಳ್ತಿದ್ರು ;)
ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ ನಾ
ಮೊದಲು ನನಗೆ ಮನಸೆಳೆದಿದ್ದು ಇಲ್ಲಿನ ಲವಲವಿಕೆಯ ನಿರೂಪಣೆ. ಹರಟೆ ರೂಪಕ್ಕೂ ಒಗ್ಗುವ ಈ ಬರಹ ಸಲೀಸಾಗಿ ಓಡಿಸಿಕೊಂಡು ಹೋಗುತ್ತದೆ. ನಮ್ಮ ದಿನ ಪತ್ರಿಕೆಗಳ ಸಪ್ಲಿಮೆಂಟರಿ ಬರಹಗಲ ಶೈಲಿಯೇ ಇದು. Lets see ನಿಮ್ಮ ಬರಹಗಳು ಪತ್ರಿಕೆಗಳನ್ನು ಅಲಂಕರಿಸಲಿ. ಈಗೀಗ ಎಲ್ಲ ಪತ್ರಿಕೆಗಳೂ ಬರಹ ಅಥವಾ ನುಡಿಯಲ್ಲಿ ಈಮೈಲ್ ಒಪ್ಪಿಕೊಳ್ಳುತ್ತವೆ.
ReplyDeleteಶುಭವಾಗಲಿ, ಗೌರಿ ಗಣೇಶ ಹಬ್ಬದ ಶುಭಾಷಯಗಳು.
ಧನ್ಯವಾದ ಬದರಿ ಸರ್ ...
Delete"ಬರಹಗಾರ್ತಿ"ಆಗಿ ಸ್ವಲ್ಪ ಹಾಳಾಗು ಅಂದ್ರಾ :ಫ್ .
ಅದ್ಯಾಕೋ ನಮ್ಮದೇ ಅರಮನೆಯಲ್ಲಿ ಮೆರೆಯೋದೆ ಇಷ್ಟ ಆಗುತ್ತೆ ಪತ್ರಿಕೆಗಳಿಗಿಂತ :)
ಭಾವವೊಂದ ನೀವೋದ ಬಂದ ಖುಷಿ ನಂದು .
ಪ್ರೀತಿ ಪ್ರೋತ್ಸಾಹ ಇರ್ಲಿ
ಇನ್ನೊಂದು ಭಾವದಲ್ಲಿ ನಾ ಮತ್ತೆ ಜೊತೆಯಾಗ್ತೀನಿ
ನಿಮ್ಮೆಲ್ಲರ ಪಜೀತಿ ನೋಡಿ ಅಯ್ಯೋ ಅನ್ನಿಸ್ತಿದೆ .. ಪಾಪ ಇಂಜಿನೀಯರಿಂಗ್ ಮಾಡ್ತಿದ್ದಿರೋ ಅಥವಾ ಇನ್ನು ಸ್ಕೂಲ್ ಅಲ್ಲೇ ಇದ್ದಿರೋ ಅಂತ .. ಏನೋ ಒಳ್ಳೆ hod ಸಿಕ್ಕಿದ್ದಾರೆ ಬಿಡಪ್ಪ :-(
ReplyDeleteso ,ಹೊಸ ಹೊಸ ರೀತಿಲಿ ಬರೆಯೋದಕ್ಕೆ ಶುರು ಮಾಡಿದ್ದೀಯ .. ಮುಂದುವರೆಯಲಿ
ಥಾಂಕ್ ಯು ಗಿರೀಶ್ :)
Deleteನಮ್ಮಗಳ ಗೋಳು ನೋಡಿ ಅಯ್ಯೋ ಅನ್ನಿಸಿಯೂ ಮತ್ತೆ ನೀನೂ ಅಲ್ಲೆ ಸಿಕ್ಕಿ ಹಾಕ್ಕೊಂಡೆ ಅಂತ ಪಾಪ ಅನ್ನಿಸ್ತಿದೆ ನಂಗೂನೂ :ಫ್
ನಿಂಗೂ ಒಂದು ಆಲ್ ದಿ ಬೆಸ್ಟ್ ..ನಮ್ಮ hod ತರದ್ದೇ hod ನಿಮ್ಗೂ ಸಿಗ್ಲಿ ಅಂತ ಬಾಯ್ ತುಂಬಾ ವಿಶ್ ಮಾಡ್ತೀನಿ :ಫ್
ಭಾವಗಳ ಸಂತೆಯಲ್ಲಿ ಮತ್ತೆ ಜೊತೆಯಾಗ್ತೀನಿ
uff...superb aagi barediddeera.... speed aagi odisikonDu hogatte...
ReplyDeleteಥಾಂಕ್ ಯು ದಿನಕರ್ ಸರ್ .
Deleteತುಂಬಾ ದಿನದ ನಂತರ ನಿರುಪಾಯದ ಭಾವವೊಂದ ನೀವೋದ ಬಂದ ಖುಷಿ ನಂದು .
ಭಾವಗಳ ವಿನಿಮಯದಲ್ಲಿ ಮತ್ತೆ ಸಿಗೋಣ
ಈ ಪ್ರಕಾರವಾಗಿ ಯದ್ವಾ-ತದ್ವಾ ಡೀಸೆಂಟ್ ಆಗಿ ಬರೀತಿದ್ದ ಹೆಣ್ಮಗಳೊಬ್ಬಳ ಬ್ಲಾಗನ್ನ ಹಾಳು ಮಾಡಿದ ಕೀರ್ತಿ ನಮಗೆ ಸಲ್ಲುತ್ತದೆ ಎಂದು ಹೇಳಲು, ಎರಡೂವರೆ ಹನಿ ಕಣ್ಣೀರೀನೊಂದಿಗೆ ನಾವು ಭಯಂಕರವಾಗಿ ವಿಷಾದಿಸುತ್ತೇವೆ :'(
ReplyDeleteಹಾಹಾಹಾಹಾ :d ಭಾಗ್ಯಾ ಲವ್ಡ್ ಇಟ್ :-) ಚಂದ ಬರೀತಿಲ್ಲೇ {ಹವ್ಯಕ ಅಕ್ಸೆಂಟಿನಲ್ಲಿ ಸೆಂಟ್ ಹಾಕ್ದೇ}
ಆ ನಿಮ್ ಹುಡುಗನ ಆತ್ಮಕ್ಕೆ ಬೇಗಾ ಶಾಂತಿ ಸಿಗುವ ಲಕ್ಷಣಗಳು ಕಾಣ್ತಿಲ್ಲ ಬಿಡಮ್ಮ :p {ಗ್ಯಾಪಲ್ ನಂದೂ ಒಂದ್ :p }
ಜನಾ ಚೇಂಜ್ ಕೇಳ್ತಿದಾರೆ ಅಂತ, ಬರೀ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನೇ ನೋಡಿ ತಿಳೀಬೇಕಿಲ್ಲ :p
ನಿನ್ನ ಬ್ಲಾಗಿನ ಸದರೀ ಪೋಸ್ಟಿನ ಅಧೋಗತೀಯನ್ನ ನೋಡಿದರೂ ಸಾಕು ;-) :P {ಸೈಡಲ್ ಇನ್ನೊಂದ್ :P }
ಕೊನೆಗೊಂದು :D ಭಾವದೊಂದಿಗೆ, "ಮಸಾಲಾಪೂರಿ ಫುಲ್ ಮೀಲ್ಸ್ ನಷ್ಟೇ ಖುಷಿ ಕೊಟ್ಟಿತು, ಗ್ಯಾಪಲ್ ಅವಾಗಾವಾಗ ತಲೆ ಕೆಟ್ಟಾಗೆಲ್ಲ ಹೀಗೆ ಬರೀತಾ ಇರು ಮಾರಾಯ್ತಿ"
ಅಂದ ಹಾಗೆ, ಅದದೇ ಹಳೇ ರಾಗಿಮುದ್ದೆ, ಅದೇ ಹಳೇ ಬಸ್ಸಾರು ತಿಂದು ತಿಂದು ಜಿದ್ದುಗತ್ತಿದ್ದ ನಾಲಿಗೆಗೆ ಉಪ್ಪು-ಹುಲಿ-ಖಾರ-ಸಿಹಿ ಎಲ್ಲವನ್ನು ಟೇಸ್ಟಿಸಿದ್ದಕ್ಕೆ ಥ್ಯಾಂಕ್ಸ್ .......
& Finally ......... :P :P :P :P :P
ರಾಘಾ ....
Deleteಮೊದಲ ಧನ್ಯವಾದ ನಿಂಗೆ (ಜಾಸ್ತಿ ಆಯ್ತು ಅಂದ್ಯಾ ...ಇರ್ಲಿ ಇಟ್ಕೊಳೋ).
ಎಲ್ಲಾ ಓಕೆ ..ಇನ್ ಅರ್ಧ ಹನಿ ಕಣ್ಣೀರ್ ಯಾಕೆ?
ನಿಜ .ಜನ ಚೇಂಜ್ ಬೇಕಂತ ಕೇಳಿರ್ಲಿಲ್ಲ ಆದ್ರೂ ಓದುಗರ ಸಂಖೆ ಈರುಳ್ಳಿ ಬೆಲೆ ತರಾ ಏರಿದೆ ಈ ಬ್ಲಾಗಿಗೆ ಅಂದ್ರೆ ನಂಬ್ಲೇ ಬೇಕು ನೀನು.
ಇನ್ನು ಹುಡ್ಗನ್ ವಿಷ್ಯಕ್ ಬಂದ್ರೆ...ಈಗ್ಲೇ ಹೊಗೆ ಹಾಕ್ಸೋ ಯೋಚ್ನೆ ಇಲ್ಲ ಕಣೋ ...ಪಾ ಎಲ್ ಇದಾನೋ ಏನೋ ..ಬದ್ಕೋಂಡಿರ್ಲಿ (ಗ್ಯಾಪಲ್ ನಂದೂ ಒಂದು :ಫ್)
ರಾಗಿ ಮುದ್ದೆನೂ ಓದೋಕೆ ಅವಗಾವಾಗ ಬರ್ತಿರು ಅಂದ್ರೆ ಒದೆ ಬೀಳುತ್ತೆ ಅಂತಾನೂ ಗೊತ್ತು ...ಆದ್ರೂ ಬರ್ತಿರು ;)
ಇನ್ನೊಂದು ಪಕ್ಕಾ ಲೋಕಲ್ ನಿರುಪಾಯದ ಭಾವದಲ್ಲಿ ಜೊತೆಯಾಗ್ತೀನಿ
ನವಿರು ನಗೆಯೊಂದ ಮೂಡಿಸಿದ ಬರಹ ಭಯಂಕರ ಇಷ್ಟ ಆತು...:)
ReplyDeleteಥಾಂಕ್ಸ್ ವತ್ಸಾ ...
Deleteಭಯಂಕ ಇಷ್ಟ ಆಗಿದ್ದು ಭಯಂಕರ ಖುಷಿ ಆತು :)
ಭಾವಗಳ ತೇರಲ್ಲಿ ಸಿಕ್ತಿರೋಣ
ವಯೋಮಾನದಲ್ಲಿ ಕಾಣೋದೆಲ್ಲ ಕಾಮನಬಿಲ್ಲೇ.. ಬರುವ ಕೊಡುವ ಬಿಲ್ಲು ಕಟ್ಟುತ್ತಾ ಕಟ್ಟುತ್ತಾ ಜೀವನದ ಮೃದು ಸಂತಸಗಳನ್ನು ಕಳೆದುಕೊಳ್ಳುವ ಈ ಹೊತ್ತಿನಲ್ಲಿ ತಿರಗ ಮುರುಗ ಮಾತುಗಳನ್ನು ಹಾಕಿ ತಲೆಗೆ ದೊಡ್ಡ ಅನಕೊಂಡ ಬಿಟ್ಟು ಮುಂದೆ ಬನ್ನಿ ಒಂದು ಕೈ ನೋಡ್ಕೋತೀನಿ ಅಂತ ಹೇಳಬೇಕು ಅನ್ನಿಸುವಂತೆ ಮಾಡುವ ನಿನ್ನ ಬರಹಕ್ಕೆ ನನ್ನ ಹಾಟ್ಸ್ ಆಫ್. ಸೂಪರ್ ಬಿಪಿ ಕಲಾವಿದರ ಕುಂಚದಲ್ಲಿ ಅರಳುವ ಚಿತ್ರದಂತೆ ಯಾವ ವಿಷ್ಯ ಬರೆದರೂ ಅದರಲ್ಲಿನ ತುಂಟನ ಇಣುಕು ನೋಡುವಂತೆ ಮಾಡುವ ತಾಕತ್ ನಿನ್ನಲಿದೆ. ಸೂಪರ್
ReplyDeleteಥಾಂಕ್ಸ್ ಶ್ರೀಕಾಂತಣ್ಣ .
Deleteಹೀಗೊಂದು ಭಾವವ ಬರೆಯೋಕೆ ನೀವು ಕಾರಣರಾದ್ರಿ :)
ನಿಜ ..ವಯೋ ಸಹಜ ಚೇಷ್ಟೆಗಳ ಸುತ್ತಾ ಏನೋ ಹೇಳೋಕೆ ಬಂದು ಕೊನೆಗೆ ನಾನೇ ಜೋಕರ್ ಆದೆ ಇಲ್ಲಿ ಅಷ್ಟೇ.
ಆದ್ರೂ ಬರೆದ ಭಾವಕ್ಕೆ ಎಂದಿನಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸ ಬಂದ್ರಿ .ಖುಷಿ ಆಯ್ತು.
ತಪ್ಪು ಒಪ್ಪುಗಳ ಹೀಗೇ ಹೇಳಿ ಕೊಡ್ತಿರಿ ಕಿವಿ ಹಿಂಡಿ :)
ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಕ್ತೀನಿ
ಅದ್ಯಾವ ಮನೋವೇಗದಲ್ಲಿ ಬರೆದಾಕಿದ್ದೀಯ.. ಲೈಪು ಕೆಟ್ಟೋಗತ್ತೆ ಹುಷಾರೆಲೇ.... ಅದ್ಬುತ ಬರಹ
ReplyDeleteಥಾಂಕ್ಸ್ ಬಾವಾ ಜಿ ...
Delete,ಬದುಕ ಭಾವ,ಪ್ರೀತಿಯ ಭಾವ ,ಬೇಸರದ ಭಾವ ಅಂತ ಲೈಟ್ ಆಗಿ "ಬಾವ"ನ ಮೇಲೆ ಬೇಸರ ಗೊಂಡಿದ್ರು ಜನಾ ;)
ಅದ್ಕಾಗಿ ಇದು ...ಹೀಗಾದ್ರೂ ಲೈಫ಼್ ಕೆಡ್ಲಿ ಸ್ವಲ್ಪ .....
ಭಾವಗಳ ಅಲೆಯಲ್ಲಿ ಕೊಚ್ಚಿಹೋಗಲ್ಲ ಅಂತ ಹೇಳಬಂದು ಇಷ್ಟ್ ಆಯ್ತು ನೋಡಿ .
ಭಾವಗಳ ಜಾತ್ರೆಯಲ್ಲಿ ನಾ ಮತ್ತೆ ಜೊತೆಯಾಗ್ತೀನಿ
ಎಕ್ಸ್ಪ್ರೆಸ್ ಬಸ್ಸು ಹೋದಂಗೆ ಹೋಗ್ತು ಬರಹ ... ಸುಮಾರ್ ಸಿಕ್ರೆಟ್ ಗೊತಾತು ನಿಂದು ...
ReplyDeleteZara Hatke se socha hai :) Nice one :)
ಥಾಂಕ್ಸ್ ಬಾವಾ ಜಿ ...
Delete,ಬದುಕ ಭಾವ,ಪ್ರೀತಿಯ ಭಾವ ,ಬೇಸರದ ಭಾವ ಅಂತ ಲೈಟ್ ಆಗಿ "ಬಾವ"ನ ಮೇಲೆ ಬೇಸರ ಗೊಂಡಿದ್ರು ಜನಾ ;)
ಅದ್ಕಾಗಿ ಇದು ...ಹೀಗಾದ್ರೂ ಲೈಫ಼್ ಕೆಡ್ಲಿ ಸ್ವಲ್ಪ .....
ಭಾವಗಳ ಅಲೆಯಲ್ಲಿ ಕೊಚ್ಚಿಹೋಗಲ್ಲ ಅಂತ ಹೇಳಬಂದು ಇಷ್ಟ್ ಆಯ್ತು ನೋಡಿ .
ಭಾವಗಳ ಜಾತ್ರೆಯಲ್ಲಿ ನಾ ಮತ್ತೆ ಜೊತೆಯಾಗ್ತೀನಿ
ReplyDeleteಲೇ ಅದೇನೇ ಬರದ್ದೆ...
ಜಸ್ಟ್ ಸೂಪರ್ ಬಂಗಾರ ....
(ರೇಟ್ ಜಾಸ್ತಿ ಇದ್ದು .. !!! ಈಗೀಗ ನಿಂಗ್ ಡಾಲರ್ ಅಂದ್ರು ನಡಿತು ಅಲ್ದಾ.. :P )
ನಿಂತು ಯೋಚನೆ ಮಾಡೋ ಹಾಗೆ ಮಾಡ್ತಿದ್ದ ಬರಹಗಳನ್ನ ಬದಿಗಿಟ್ಟು ನಾನ್ ಸ್ಟಾಪ್ ಓಡಿಸಿಕೊಂಡು ಹೋಗಿದ್ದು ಚಂದ..
and one more thing ನಾನು ಬದ್ಕಿದ್ದಿ .. :) :)
ಹಾ ಹಾ ಥಾಂಕ್ಸ್ ಸಂಧ್ಯಕ್ಕಾ ...(ಡಾಲರ್ ಅಂದ್ರೂ ಥಾಂಕ್ಸ್ ಅಂತಾಳೆ ಹುಡ್ಗಿ ನೋಡಿ ಎಷ್ಟ್ ಒಳ್ಳೆಯವ್ಳು ಅಂತಾ :ಫ್)
Deleteಫ಼ೈನಲ್ಲಿ ..ನೀವೂ ಬದ್ಕಿದೀರ ಅಂತ ಕೇಳಿ ತುಂಬಾ ಖುಷಿ ಆಯ್ತು ...
ಇಲ್ಲ ಅಂದ್ರೆ ಎರಡ್ ಹನಿ ಕಣ್ಣೀರ ಜೊತೆ ಭಾವಪೂರ್ಣ ಶ್ರದ್ದಂಜಲಿ ಹೇಳ್ಬೇಕಂತ ಇದ್ದೆ ಸಧ್ಯದಲ್ಲೆ.
ಕಣ್ಣೀರ್ ಉಳ್ಸ್ಬಿಟ್ರಿ ನೀವು .
ಯಾಕೋ ನಿಮ್ಮನ್ನ ನಿಲ್ಲಿಸಿ ಕಷ್ಟ ಕೊಟ್ಟೆ ಅಂತ ಅನ್ಸೋಕೆ ಶುರು ಆಗಿತ್ತು ..
ಅದೂ ಅಲ್ದೇ ಓಡಿದ್ರೆ ದೇಹಕ್ಕೆ ಒಳ್ಳೆದಂತೆ :ಫ್
ಭಾವ ಇಷ್ಟ ಆಗಿದ್ದು ಖುಷ್ ಆಯ್ತು.
ಭಾವಗಳ ಪಯಣದಲ್ಲಿ ಸಹ ಪಯಣಿಗಳಾಗಿ ಮತ್ತೆ ಸಿಕ್ತೀನಿ .