ಅಜ್ಜಾ ,ಅಜ್ಜಿಯ ಕಣ್ರೆಪ್ಪೆಯ ಪ್ರೀತಿ ...ಅಪ್ಪಾ ಅಮ್ಮನ ಬದುಕ ಕನಸು ...ದೊಡ್ಡಪ್ಪ ದೊಡ್ದಮ್ಮನ ಸ್ವಂತ ಮಗನಂತಿರೋ ಮಗ ...
ಪ್ರೀತಿಯ ಮನೆಯ ಮುದ್ದಿನ ಪುಟ್ಟು ....ಅಜ್ಜನ ಮನೆಯಲ್ಲಿ ಯದ್ವಾ ತದ್ವಾ ಕಿಲಾಡಿ ಮಾಡೋ ಎಲ್ಲರನೂ ಸುಸ್ತಾಗಿಸೋ ,ಆಮೇಲಿನ ಒಂದೇ ಮಾತಿಂದ ಎಲ್ಲರೂ ನಗೋ ತರ ಮಾಡೋ ಮುದ್ದು ಮೊಮ್ಮಗ .
ನಂಗೆ ಈ ಕ್ಷಣಕ್ಕೆ ಪಾಪು ...ಮತ್ತೊಂದು ನಿಮಿಷಕ್ಕೆ ಕಾಟ ಕೊಡೋಕಂತಾನೇ ಇರೋನು .....ಎಲ್ಲಾ ವಿಷಯಗಳನೂ ಬಿಡದೇ ರಿಪೋರ್ಟ್ ಮಾಡ್ತಾ ....ಮುದ್ದು ಜಾಸ್ತಿಯಾದಾಗ ಗುದ್ತಾ ,ನಾ ಬೇಸರಿಸೋವಾಗ ದೊಡ್ಡೋರ ತರ ಸಮಾಧಾನಿಸ್ತಾ,
ತೀರಾ ಅನಿಸೋವಷ್ಟು ತಲೆ ತಿಂದು ಆಮೇಲೊಮ್ಮೆ ನನ್ನ ಸಿಟ್ಟಿಗೆ ಬೈಸಿಕೊಳ್ತಾ ...ಅವಾಗಾವಾಗ ಅಪ್ಪನ ಹತ್ರ ನನ್ನ ಬಗ್ಗೆ ದೂರು ಹೇಳ್ತಾ ...ನನ್ನೆಲ್ಲಾ ಡೈರಿಮಿಲ್ಕ್ ನಲ್ಲೂ ಒಂದೊಂದು ಬೈಟ್ ತಗೋಳ್ತಾ ,ನಿನ್ನ ಸಿಲ್ಕ್ ನಲ್ಲಿ ನಾ ಕೇಳಿದ್ರೂ ಒಂದೂ ಬೈಟ್ ಕೊಡ್ದೇ ಮುಖ ತಿರ್ಗಿಸ್ತಾ.....
ಎಲ್ಲಾ ಭಾವಗಳಿಗೂ ಜೊತೆಯಾಗಿರೋ ಗೆಳೆಯ, ನಗುವಿಗೆ ನಗುವ ಸೇರಿಸಿ ,ಅಳುವಲ್ಲೂ ನಗುವ ತರಿಸೋ ಆತ್ಮೀಯಾ , ಜೊತೆಗೆ ನಾನೂ ಇದ್ದೀನಿ ಅಂತಂದು ಅವಾಗಾವಾಗ ತೀರಾ ಅನ್ನೋ ಅಷ್ಟು ಕಾಲೆಳೆಯೋ ಅಣ್ಣಾ ,
ಒಟ್ನಲ್ಲಿ ನಾನು ನನ್ನಲ್ಲಿದ್ದೀನಾ ಅಥವಾ ನಿನ್ನೊಟ್ಟಿಗೆ ನಾ ಇದ್ದೀನಾ ಅನ್ನೋವಷ್ಟು ಗೊಂದಲ ಮೂಡೋ ತರ ಮಾಡೋ ಮುದ್ದು ತಮ್ಮಾ ...
ನಂಗೆ ಅಣ್ಣ ಬೇಕಿತ್ತಮ್ಮಾ ಅಂತ ಪ್ರತಿ ಬಾರಿ ತಮ್ಮನ ರೇಗಿಸೋ ನಾನು ..ನಂಗೂ ಅಕ್ಕ ಬೇಕಿರ್ಲಿಲ್ಲ ಅಮ್ಮಾ ತುಂಬಾ ಕಾಟ ಕೊಡ್ತಾಳೆ ಇವ್ಳು ಅಂತ ಮತ್ತೆ ನನ್ನನ್ನೇ ಕೆಣಕೋಕೆ ಬರೋ ತಮ್ಮಾ...ಇಬ್ಬರೂ ಜೊತೆಯಾಗಿದ್ದಿದ್ದು ತೀರಾ ಕಡಿಮೆ .
ಜೊತೆಯಿದ್ದಾಗ ಮಾಡಿಕೊಂಡ ಜಗಳಗಳೆಷ್ಟೋ ...ತೋರಿದ ಸಿಟ್ಟುಗಳೆಷ್ಟೋ ..ಇವತ್ತು ಮನೆಯಲ್ಲಿ ಎಲ್ಲರೂ ನಮ್ಮಿಬ್ಬರ ಆ ದಿನಗಳ ಜಗಳಗಳ ಹೇಳೋವಾಗ ತಡೆಯದಷ್ಟು ನಗು ಬರುತ್ತಲ್ಲೋ ಪುಟ್ಟಾ ....
ಅಪ್ಪ ನಂಗೆ ಕೊಡಿಸೋ ಎಲ್ಲದ್ದಕ್ಕೂ ನಿನ್ನಿಂದೊಂದು ಡೈಲಾಗ್ ರೆಡಿ ಆಗಿರುತ್ತೆ ...."ಎಲ್ಲಾನೂ ನನ್ನಪ್ಪನೇ ಕೊಡಿಸ್ಬೇಕು ನಿಂಗೆ ..ಇರು ನಿನ್ನ ಹುಡ್ಗ ಸಿಗ್ಲಿ ಎಲ್ಲಾ ವಸೂಲಿ ಮಾಡ್ತೀನಿ" ಅಂತ ತೀರಾ ಗಂಭೀರವಾಗಿ ಹೇಳೋ ನಿನ್ನ ಮಾತುಗಳಿಗೆ ಇಡಿಯ ಮನೆ ಮಂದಿ ಮನ ಬಿಚ್ಚಿ ನಗ್ತಾರಲ್ಲೋ !...
Live to annoy me, pick on me, drive me nuts, but loves me to the core! Yes..... dats my Bro...!!!
You are my world of love .
ಎಲ್ಲರಲ್ಲೂ ನಗುವ ತರೋ ನೀನಂದ್ರೆ ಮುದ್ದು,ನೀನಂದ್ರೆ ನಗು ,ನೀನಂದ್ರೆ ಪ್ರೀತಿ ,ನೀನಂದ್ರೆ ಇಡೀ ಮನೆಯ ಉತ್ಸಾಹದ ಚಂದಿರನಲ್ಲೋ ಹುಡುಗ .
ಮನೆಯಲ್ಲಿ ಜಾಗ ಇಲ್ಲದಷ್ಟು ಪ್ರಶಸ್ತಿಗಳಿವೆ ನಿನಗಿಲ್ಲಿಯ ತನಕ ಸಿಕ್ಕಿರೋದು! ಆದರೂ ನೀ ನಂಗೆ ಸಿಕ್ಕಿದ್ದ ಯಾವುದೋ ಸಣ್ಣದೊಂದನ್ನೇ ಎಲ್ಲರಿಗೂ ತೋರಿಸಿ ಇದು ನನ್ನ ಅಕ್ಕಂದಂತ ಖುಷಿಪಡೋದ ನೋಡಿದ್ರೆ ನಂಗೆ ಹೇಳೋಕೆ ಮಾತೇ ಬರಲ್ಲ .
ನೀ ನನ್ನ ತಮ್ಮ ಅನ್ನೋ ಕಾರಣಕ್ಕೆ ಹೇಳಿದ್ದಲ್ವೋ ಪುಟ್ಟಾ ...ನೀನಂದ್ರೆ ನಿಜಕ್ಕೂ ಹೆಮ್ಮೆ ನಂಗೆ ...
ನಂಗೇ ಗೊತ್ತಿರದ ಅದೆಷ್ಟೋ Apps ಗಳು ನಿಂಗೊತ್ತು..ನಾನರಿಯದ ಅದೆಷ್ಟೋ ಪುಸ್ತಕಗಳ ನೀ ಪಟ ಪಟ ಅಂತಾ ಹೇಳೋವಾಗ ಆಶ್ಚರ್ಯದಿಂದ ನಿನ್ನ ನೋಡೋದು ಮಾತ್ರ ನಂಗೆ ಗೊತ್ತು ...ಇವ ಯಾವಾಗಿದನ್ನೆಲ್ಲಾ ಕಲಿತ ,ಯಾವಾಗ ಇವುಗಳ ಓದಿದ ಅಂತ ತಲೆನಲ್ಲಿ ಹುಳ ಬಿಟ್ಕೊಂಡ್ರೂ ನೀ ಹೇಳಲ್ಲ .
ನಿನ್ನಲ್ಲೊಂದಿಷ್ಟು ಚಂದದ ಕನಸುಗಳಿವೆ ...ಆ ಕನಸುಗಳಿಗೆ ಜೊತೆಯಾಗಿ ನಾವೂ ಇದ್ದೀವಿ .
ನಂಗೆ " ಅಕ್ಕಾ " ಅನ್ನೊ ಪದವಿ ಕೊಟ್ಟಿರೋ, ನಾ ನನಗಿಂತ ಜಾಸ್ತಿ ಪ್ರೀತಿಸೋ ತಮ್ಮನ ಹ್ಯಾಪಿ ಬರ್ತ್ ಡೇ ಇವತ್ತು .....
ಜನುಮ ದಿನದ ಪ್ರೀತಿಯ ಶುಭಾಶಯಗಳು ಪುಟ್ಟಾ ..
ಖುಷಿಗಳಿರಲಿ ಬದುಕ ತುಂಬಾ ...
ಕನಸುಗಳಿಗೆ ಜೀವ ತುಂಬೋಕೆ ,ಕೈ ಹಿಡಿದು ನಡೆಸೋಕೆ ,ನಿನ್ನೊಟ್ಟಿಗೆ ನಾನೂ ನಡೆಯೋಕೆ ,ಪ್ರೀತಿಯ ಜಗಳವಾಡೋಕೆ, ಗೆಳತಿಯಾಗಿ,ಅಕ್ಕನಾಗಿ ಜೊತೆಯಿರ್ತೀನಿ ಯಾವತ್ತೂ :)
ಅಗೈನ್ ,ಹ್ಯಾಪಿ ಹ್ಯಾಪಿ ಬರ್ತ್ ಡೇ ...
ಪ್ರೀತಿಯಿಂದ ,
ಅಕ್ಕಾ.

ನಗುತಿರಲಿ ನಾಳೆಗಳು...
ReplyDeleteಕನಸ ಗೆಲುವಿಂದ - ಅರಿವಿನ ಬೆಳಕಿಂದ - ಒಲವ ಒಳ ಹರಿವಿಂದ...
ನಿನ್ನ ಮುದ್ದು ತಮ್ಮಂಗೆ ನನ್ನ ಕಡೆಯಿಂದಲೂ ಜನ್ಮ ದಿನದ ಪ್ರೀತಿಯ ಶುಭ ಹಾರೈಕೆಗಳ ತಿಳಿಸು... :)
ಥಾಂಕ್ ಯು ಜಿ ...
Deleteಹೀಗೊಂದು ಚಂದದ ಶುಭಾಶಯಕ್ಕೆ .
ನಿಮ್ಮ ಪ್ರೀತಿಯ ತಮ್ಮನಿಗೆ ನನ್ನದೂ ಶುಭಾಶಯಗಳು, ನೀವಿಬ್ಬರೂ ಪ್ರೀತಿಸುತ್ತ ಬಹುಕಾಲ ಬಾಳಿರಿ.
ReplyDeleteಸುನಾಥ್ ಕಾಕಾ ...
Deleteನಿಮ್ಮೀ ಹಾರೈಕೆಗೊಂದು ನಮನ .
ಥಾಂಕ್ ಯು
tammana bagge ukki harida bhavadhaareyalli naavella mindu eddevu Bhagya... bahala chennagide!!!
ReplyDeleteಥಾಂಕ್ ಯು ಪ್ರದೀಪ್..
Deleteತುಂಬಾ ದಿನಗಳ ನಂತರ ನಿಮ್ಮನ್ನಿಲ್ಲಿ ನೋಡಿದ್ದು ಖುಷಿ ಆಯ್ತು
ತಮ್ಮನ ಪ್ರೀತಿ ನಿಮ್ಮ ಲೇಖನದಲ್ಲಿ ಸೊಗಸಾಗಿ ಮೂಡಿ ಬಂದಿದೆ. ನಿಮ್ಮ ಅಕ್ಕ-ತಮ್ಮನ ಬಾಳು ಬಂಗಾರವಾಗಲಿ.
ReplyDeleteಥಾಂಕ್ ಯು ಜಿ...
Deleteನಿಮ್ಮಿ ಹಾರೈಕೆಗೊಂದು ಶರಣು
ಚಂದದ ಬರವಣಿಗೆ.............
ReplyDeleteಬಾಂಧವ್ಯ ಹೀಗೆ ಇರಲಿ ಎಂದೆಂದಿಗೂ...
ಧನ್ಯವಾದ ಪ್ರಕಾಶಣ್ಣಾ ...
Deleteತಮ್ಮನಿಗೆ ಅಕ್ಕನಾಗಿ ಆ ಮೂಲೆಯಿಂದ ನೀ ಕೊಟ್ಟಿರೋ gift
ReplyDeleteಅದ್ಭುತ.... ನಿಮ್ಮ ಪ್ರೀತಿಯಲ್ಲಿ ತುಂಬಾ ಸೊಬಗಿದೆ....
ಒನಪಿದೆ..... ನೂರ್ಕಾಲ ಖುಷಿಯಿಂದಿರಿ ಪ್ರೀತಿ ಜೀವಗಳಾ....
ರಾಘವ್ ಜಿ...
Deleteಚಂದದ ಹಾರೈಕೆಗೊಂದು ಶರಣು ..
ಮುದ್ದು ತಮ್ಮನಿಗೆ ಏನು ಕೊಟ್ರೂ ಕಮ್ಮೀ ಅನಿಸಿಬಿಡುತ್ತೆ ನಂಗಿಲ್ಲಿ .
This is the best wish I ever read. I hope your mom get to read this. She would be so proud for both of you. Be blessed...always
ReplyDeletethank you vanitakka :)
Deletethanks for all your wishes and love
ayyo ee outdated akkaaa adyaavaaga update agtaalo eno, Preetiya tangi, mattu tamma,,, chorryyyyy.... :( :( baisikondru paravaagilla...
ReplyDeleteHappy Birthday Putani... :) :)
ಥಾಂಕ್ ಯು ಸಂಧ್ಯಕ್ಕ ...
Deleteನಿಮ್ಮೀ ಪ್ರೀತಿಗೆ ,ಹಾರೈಕೆಗೆ ಮಾತಿಲ್ಲ ನನ್ನಲ್ಲಿ :)
ಖುಷಿ ಆಯ್ತು
ತಮ್ಮಂದಿರ ನಗುವಲ್ಲಿ ಗೆಲುವು ಕಾಣೋ ಅಕ್ಕಂದಿರು ನಾವು.. ಇಷ್ಟವಾಯಿತು ಬರಹ...
ReplyDeleteಸಿಕ್ಕಾಪಟ್ಟೆ ಲೇಟ್ ಆಯಿತು ... ಆದರೂ ತಮ್ಮನಿಗೆ ಹ್ಯಾಪಿ ಬರ್ತ್ಡೇ
ಥಾಂಕ್ ಯು ಮುದ್ದಕ್ಕ...
Deleteನಿಜ .ತಮ್ಮ ಅಂದ್ರೆ ಪ್ರೀತಿ,ಅವನಂದ್ರೆ ಮುದ್ದು,ಅವನಂದ್ರೆ ಪುಟ್ಟ..ಇನ್ನೂ ಏನೇನೋ.
ನಿಮ್ಮ ಈ ಪ್ರೀತಿಗೆ ಶರಣು
nice one keep on writing.
ReplyDeletethank you ji
Deleteಚೆಂದದ ಬರಹ. ಭಾವೂಕ ಬರಹ ಚೆನ್ನಾಗಿದೆ. ಹುಟ್ಟುಹಬ್ಬದ ಶುಭಾಶಯ ತಮ್ಮನಿಗೆ.
ReplyDeleteಥಾಂಕ್ ಯು ವೀಣಾ ಅಕ್ಕ...
Deleteಖುಶಿ ಆಯ್ತು.
ಅಪ್ಪ ಅಮ್ಮನ ವಂಶವಾಹಿನಿಯನ್ನು ಹೊತ್ತು ನಡೆಯುವ ಮಕ್ಕಳು ಎಷ್ಟು ಸುಲಭವಾಗಿ ಬೆಳೆದು ಮರವಾಗಿ ಆಸರೆಯಾಗಿ ನಿಲ್ತಾರೆ.. ಸೂಪರ್ ಬಿಪಿ. ಪ್ರತಿ ಪದ ಓದುವಾಗಲೂ ಅಲ್ಲವೇ ಎಷ್ಟು ಸುಂದರ ಬಾಲ್ಯದ ದಿನಗಳು, ಬಾಲ್ಯದ ನೆನಪುಗಳು, ಜೊತೆಯಲ್ಲಿ ಹುಟ್ಟಿ ಜೊತೆಯಲ್ಲಿಯೇ ನಡೆಯುವ ಅಕ್ಕ ತಂಗಿ ಅಣ್ಣ ತಮ್ಮ ಎನ್ನುವ ಬಾಂಧವ್ಯಗಳು ಮೂಡಿಸುವ ಚಿತ್ತಾರ ನಿಜಕ್ಕೂ ಸೊಗಸು. ಮುದ್ದಿಸುವ ಅಕ್ಕ ನೀನಿರುವಾಗ ಪುಟಾಣಿ ತಮ್ಮನಿಗೆ ಇದಕ್ಕಿಂತ ಇನ್ನೇನು ಬಲ (ಬಾಲ) ಬೇಕು ಹಾರೋಕೆ ಅಲ್ಲವೇ.. ಪುಟ್ಟ ತಮ್ಮನಿಗೆ ತಡವಾಗಿಯಾದರೂ ಸರಿ ಹುಟ್ಟು ಹಬ್ಬದ ಶುಭಾಶಯಗಳು..
ReplyDeleteಶ್ರೀಕಾಂತಣ್ಣಾ...
Deleteಮಾತಿಲ್ಲ ನನ್ನಲ್ಲಿ ..ನಿಮ್ಮೀ ಪ್ರೀತಿಯ ಹಾರೈಕೆಗೊಂದು ಶರಣು ..
ಖುಷಿ ಆಯ್ತು ..ತುಂಬಾ ತುಂಬಾ
ಭಾಗ್ಯ ಪುಟ್ಟಿ...ಹೆಮ್ಮರದ ಕೊಂಬೆ ಟೊಂಗೆಗಳು ಮರದ ಉಸಿರು ನೀರಾಡುವುದು ಸಹಜ. ಆದರೆ ಆ ಭಾವವನ್ನು ಸದಾ ನೆನಪಲ್ಲಿ ಇಟ್ಟುಕೊಳ್ಳುವುದೇ ಅಲ್ಲದೇ ಪೂರಕ ಚರ್ಯೆಗಳಲ್ಲಿ ಸಾರ್ಥಕತೆ ತೋರಿದರೆ ಅದು ನಿಜ ಕರ್ತವ್ಯ...ಬಹಳ ಚನ್ನಾಗಿ ಸಾಂಸಾರಿಕ ಜವಾಬ್ದಾರಿಯನ್ನು ಬಿಂಬಿಸಿದ್ದೀಯಾ.....ಇಷ್ಟ ಆಯ್ತು...
ReplyDeleteಅಜಾದ್ ಅಣ್ಣಾ..
Deleteಪ್ರೀತಿಯ ಹಾರೈಕೆಗೆ ,ಚಂದದ ಶುಭಾಶಯಕ್ಕೆ ಧನ್ಯವಾದಗಳು :)
ಭಾವಗಳ ತೇರಲ್ಲಿ ನಾ ಮತ್ತೆ ಸಿಕ್ತೀನಿ ಭಾವಗಳ ಜೊತೆ ಜೊತೆಗೆ