ಹಂಗೆ ಸುಮ್ನೆ ....
ಓದೋಕೂ ಮೊದ್ಲೇ ಹೇಳ್ತಿದೀನಿ ..ಓದ್ಕೊಂಡು ತೀರಾ ಕಾಲ್ ಎಳ್ಯೋ ಹಂಗಿಲ್ಲ ...ಕಾಲ್ ಎಳ್ಸ್ಕೊಂಡು ಎಳ್ಸ್ಕೊಂಡು ಉದ್ದ ಆಗ್ಬಿಟ್ಟಿದೆ ಅನ್ನೋ ಸಣ್ಣ ಅನುಮಾನ.
ಹೈಕ್ಲಾಸ್ ನೆಟ್ ಸ್ಪೀಡ್ ಗೊಂದು ಉದ್ದುದ್ದ ನಮಸ್ಕಾರ ಮಾಡಿ ....
ಅರ್ಪಣೆ,
ಯಾಕೆ ಹುಡ್ಗಿ ತುಂಬಾ ಫೀಲಿಂಗ್ ಸ್ಟೋರಿ ಬರೀತಿಯಾ ಅನ್ನೋ ಭಯಂಕರ ತರ್ಲೆಗಳಿಗಾಗಿ....
ಹೆಂಗಿದ್ರೂ ಪಿಟೀಲು ಬಾರ್ಸೋದ್ ಇದ್ದಿದ್ದೆ ಅಲ್ವಾ ?ಮತ್ಯಾಕೇ ಮುನ್ನುಡಿ .
ಮುನ್ನುಡಿ ,ಪೀಠಿಕೆ ಇಲ್ದೇ ಶುರು ಮಾಡೋಣ ..(ಸ್ವಲ್ಪ ಆದ್ರೂ ಕಣ್ಣು ,ಕಿವಿ ಉಳ್ಕೊಳ್ಳಿ ನಿಮ್ದು )
ಫೇಸ್ಬುಕ್,ವಾಟ್ಸ್ ಅಪ್ ,ಚಾಟ್ ಹಿಸ್ಟರಿ,ಕ್ಲಾಸ್ ರೂಮ್ ಸ್ಲೀಪ್, ಕ್ಯಾಂಪಸ್ ಗಾಸಿಪ್ಸ್,ಕಾಫಿ ಡೇ ,ರೈಡ್ಸ್ ಎಲ್ಲಾ ಮುಗ್ದು ಯಾಕೋ ತುಂಬಾ ಪ್ರೀ ಇದೀನಿ ಅನ್ಸೋಕ್ ಶುರುವಾದಾಗ ಮಾತ್ರ ಇಲ್ಲೊಂದು ಅಟೆಂಡೆನ್ಸ್ ಹಾಕೋದು ...ತುಂಬಾ ದಿನ ಆಯ್ತು ಕ್ಲಾಸ್ ಅಟೆಂಡ್ ಮಾಡಿ ಅಂತ ಈಗಷ್ಟೇ ಜೋರು ಮಾಡಿದ ಅಣ್ಣಂಗೆ ಒಂದು ಚಿಕ್ಕ ಗೆಸ್ಟ್ ಅಪಿಯರನ್ಸ್ ಕೊಟ್ಟು ಸಮಾಧಾನ ಮಾಡ್ಬಿಟ್ಟು ಹೋಗೋಕೆ ಬಂದೆ ....ಇಷ್ಟಕ್ಕೆ ನಿಮ್ಗೂ ಸುಸ್ತ್ ಆದ್ರೆ ನನ್ ಪುಣ್ಯ ..ಮತ್ತೆ ರೆಗ್ಯುಲರ್ ಕ್ಲಾಸ್ ಅಟೆಂಡ್ ಮಾಡು ಅನ್ನಲ್ವಲ್ಲಾ :ಫ್
ಪಾರ್ಟ್ ಟೈಮ್ ಸ್ಟುಡೆಂಟ್ (ಫುಲ್ ಟೈಮ್ ನಿರುದ್ಯೋಗಿ) ಆಗಿ ತುಂಬಾ ದಿನ ಆಗಿರೋದ್ರಿಂದಾನೇ ಇರ್ಬೇಕು ಹಿಂಗೆ ಸೋ ಕಾಲ್ಡ್ ಫೀಲಿಂಗ್ ಸ್ಟೋರಿಯ ಹಿಂದಿರೋ ಇನ್ಸ್ಪಿರೇಷನ್ .
ಯಾಕೋ ಜನ ಚೆಂಜ್ ಕೇಳ್ತಿದಾರೆ ...
ಅದ್ಕಾಗಿ ಇದು :ಫ್
ಯಾಕೋ ಗೊತ್ತಿಲ್ಲಪ್ಪ ..ಮೊದಲ್ ನೆನಪಿಗೆ ಬರೋದೆ ಆ ಹುಡ್ಗ (ಯಾವ್ ಹುಡ್ಗ ಅಂತ ಕೇಳೋ ಹಂಗಿಲ್ಲ .....ಹೆವೀ ಕನ್ಪ್ಯೂಷನ್ ಆಗುತ್ತೆ ಈ ಪ್ರಶ್ನೆ)
ಅವನ್ ನೆನ್ಪಾದ್ರೆ ಮುಗೀತು ಬಿಡಿ ...ಸಾಲು ಸಾಲು ಬ್ರೇಕಪ್ ಸ್ಟೋರೀಸ್ ಎದುರು ಬಂದಂಗೆ (ಹುಡ್ಗ ತುಂಬಾ ಬೋರಿಂಗ್ ಅಂದ್ಕೊಂಡ್ರಾ ...ಎಕ್ಸಾಟ್ಲೀ )
ಕಷ್ಟ ಪಟ್ಟು ಅವ್ನಾ ನೆನಪ್ ಮಾಡ್ಕೊಳ್ದೇ ಇದ್ದಾಗ ಹಿಂಗೆ ನಿಮ್ಮ ತಲೆ ತಿನ್ನೋಕೆ ಬರ್ತೀನಿ :ಫ್( ಆ ಹುಡ್ಗಾನೇ ಯಾವಾಗ್ಲೂ ನೆನಪಾಗ್ತಾ ಇರ್ಲಿ ಅಂದ್ರಾ ? ಏನೋ ...ಕೇಳ್ಸಿಲ್ಲಪ್ಪ ನಂಗೆ )
ಬದ್ಕಿದೀಯ ಅಂತ ಕೇಳ್ದ್ರೆ ತಕ್ಷಣಕ್ಕೊಂದು ಮೇಸೇಜ್ ಬರುತ್ತೆ ...ನೀವೇ ಇನ್ನೂ ಬದ್ಕಿರೋವಾಗ ನಾವ್ ಬದ್ಕಿರೋದು ಹೆಚ್ಚಲ್ಲ ಬಿಡಿ ಅಂತ ...!
ತುಂಬಾ ದಿನದಿಂದ ನಾಪತ್ತೆಯಾಗಿದ್ದ ಗೆಳತಿ ಕೂಡಾ ಮಧ್ಯ ರಾತ್ರಿ ಡೈಲಾಗ್ ಹೇಳಿ ಅಂತೂ ತಾನೂ ಬದ್ಕಿದೀನಿ ಅಂತ ತೋರ್ಸ್ತಾಳೆ .ಮಿಸ್ ಕಾಲ್ ಗೂ ದುಡ್ಡು ಹೋಗುತ್ತೆ ಅನ್ನೋ ತರ ಆಡಿ ಆಮೇಲೊಮ್ಮೆ ನಂಗ್ಯಾಕೋ ಮಿಸ್ ಕಾಲ್ ಕೊಡೋಕೂ ಮೂಡ್ ಇರ್ಲಿಲ್ಲ ಅಂತ ಭಯಂಕರ ಡೈಲಾಗ್ ಹೇಳಿ ರಾತ್ರಿ ಪೂರ್ತಿ ಯಾಕಪ್ಪ ಈ ಹುಡ್ಗಿ ಹೀಗೆ ಮಾತಾಡಿದ್ಲು ಅಂತ ಯೋಚ್ನೆ ಮಾಡಿ (ಯಾವ್ ಹುಡ್ಗನ ಜೊತೆ ಬ್ರೇಕ್ ಅಪ್ ಆಯ್ತಪ್ಪ ಇವ್ಳದ್ದು ಅಂತ),ಬೆಳಿಗ್ಗೆ ಕ್ಲಾಸ್ ಅಟೆಂಡ್ ಮಾಡೋದು ಲೇಟ್ ಆಗಿ ...ಉಫ಼್ ...ಯಾರೀಗ್ ಹೇಳೋಣಾ ನಮ್ಮ ಪ್ರಾಬ್ಲಮ್ಮು ....
ಅದೇ ಕಿತ್ತೊಗಿರೋ ಲೈಫ಼ು ,ಅದೇ ಕ್ಯಾಂಪಸ್,ತಾವೇ ಹುಡ್ಕಿದ್ದೇನೋ ಸಬ್ಜೆಕ್ಟ್ ಗಳನ್ನ ಅನ್ನೋ ತರ ಪೋಸ್ ಕೊಡೋ ಜುನಿಯರ್ ಲೆಕ್ಚರ್ಸ್ ,೨೪ ಗಂಟೆ ಕಡ್ಮೆ ಆಯ್ತೇನೋ ಅನ್ನೋ ಭಾವ ಕೊಡೋ ಅಸೈನ್ ಮೆಂಟ್ಸ್, ಕ್ಯಾಂಟೀನಿನಲ್ಲಿ ನಾವೇ ಊಹಿಸಿಕೊಳೋ ತಿಳಿಯದ ರೆಸಿಪಿ ,ತೀರಾ ರೆಗ್ಯುಲರ್(?) ಆಗಿ ಅಟೆಂಡ್ ಮಾಡೋ ಕ್ಲಾಸಸ್ ,ಲೇಟ್ ಎಂಟ್ರಿ ಕೊಡೋ ಹುಡುಗಂಗೆ ಗೋಳು ಹೊಯ್ಕೊಳೋ "ಓಊಊ" ಸೌಂಡ್ ,ಡೈಯಾಸ್ ನಲ್ಲಿ ಪೋಸ್ ಕೊಡೋ ಲೆಕ್ಚರ್ಸ್ ಇಂಗ್ಲೀಷ್ ನಲ್ಲಿ ಸರಿಯಾದ ವಾಕ್ಯ ಹುಡುಕೋಕೆ ಹೋಗಿ ಕಂಟ್ರೋಲ್ ಆಗದ ನಗು, ಆಮೇಲಿನ ಅರ್ಧ ಗಂಟೆ heart touching ಕೊರೆತ ಅಬೌಟ್ how to behave in the class,
ಮೊಸ್ಟ್ imp :ಇಂಟರ್ನಲ್ ಹಿಂದಿನ ದಿನ ಎದ್ದು ಬಿದ್ದು ಜೆರಾ಼ಕ್ಸ್ ಹುಡುಕೋ ಗೋಳು.
ಲೈಫ಼್ ನಲ್ಲಿ ನಾವೂ ಬ್ಯುಸಿ ಆಗ್ತೀವಿ ಅಂತ ಗೊತ್ತೇ ಇರ್ಲಿಲ್ಲ !!
feeling proud :P
ಗ್ಯಾಪ್ ನಲ್ಲೇ ಹೆವೀ ಚೇಂಜ್ ಆಗ್ಬಿಡ್ತು ಅಂದ್ರೆ ನಂಬ್ಲೇ ಬೇಕು ....
ಕ್ಲಾಸ್ ಅಂದ್ರೆನೇ ಗೊತ್ತಿರ್ಲಿಲ್ಲ ..ಈಗ ಬಂಕ್ ಅನ್ನೋ ಶಬ್ಧವ ಎಲ್ಲೋ ಕೇಳಿದಂಗೆ ಅನ್ನಿಸ್ತಿದೆ .
ಅಸೈನ್ ಮೆಂಟ್ಸ್, ರೆಗ್ಯುಲಾರಿಟಿ ಗೆ ಇನ್ನೊಂದು ಹೆಸ್ರು ನಾವೇ ಏನೋ ಅಂತನಿಸ್ತಿದೆ .
ಸ್ಪೈಕ್ಸ್, ಲೊ waist ಹುಡ್ಗನ ಎದ್ರು ತೀರಾ ಡೀಸೆಂಟ್ ಆಗಿ ಫ಼ಾರ್ಮಲ್ಸ್ ಹಾಕೋ ಹುಡ್ಗನೇ ಲೈಟ್ ಆಗಿ ಇಷ್ಟ ಆಗ್ತಿದಾನೆ ...
ಪರ್ಫ಼್ಯೂಮ್ ಹಾಕೋ ಹುಡುಗ್ರನ್ನ ನೋಡಿದ್ರೆ ಹೊಟ್ಟೆ ತೊಳ್ಸುತ್ತೆ ಈಗೀಗ !
ಜೂನಿಯರ್ಸ್ ನಾ ಇಂಪ್ರೆಸ್ ಮಾಡೋಕಂತಾ ಬ್ರೇಕ್ ನಲ್ಲಿ ಸರ್ಕಸ್ ನಡೆಸೋ ಡಬ್ಬಾ ಸೀನಿಯರ್ಸ್ ನಾ ನೋಡಿ ಕರುಳು ಹಿಂಡುತ್ತೆ ಕಣ್ರೀ ಅಂದ್ರೇ ಯಾವ್ ರೇಂಜ್ ಗೆ ತಪ್ ತಿಳೀತೀರಾ ....
ತೀರಾ ಸೆಂಟಿಯಾಗಿ ಪ್ರಪೋಸ್ ಮಾಡೋ ಹುಡ್ಗನ್ನ ನೋಡಿ ಜೋರಾಗಿ ನಗ್ಬೇಕು ಅನ್ಸುತ್ತೆ ..ಪಾಪ ಹುಡ್ಗಂಗೆ ಒಳ್ಳೆದಾಗ್ಲಿ ಅಂದ್ರಾ ?
ಇನ್ನು ನಾವಂತೂ ಬಿಡಿ ....fully ಡೀಸೆಂಟ್ ಆಗ್ಬಿಟ್ವಿ ....ಹತ್ತು ಕ್ರಶ್ ಆಗ್ತಿದ್ದ ಜಾಗದಲ್ಲಿ ಒಂದೂ ಕ್ರಶ್ ಆಗ್ತಿಲ್ಲ ..ಯಾವ್ ಹುಡ್ಗನ್ ಮೂತಿನೂ ಸೆಟ್ ಆಗಲ್ಲ ...ಕ್ಯಾಂಪಸ್ಸೇ ನಮ್ದು ಅನ್ನೋ ಭಾವವ ಬಿಟ್ಟು ಯಾರದ್ದೋ ಕ್ಯಾಂಪಸ್ ಅಂತ ಬರೀ ಗೇಟ್ ತನ್ಕ ಮಾತ್ರ ಕೇಳೋ ಅಷ್ಟೇ ದೊಡ್ಡದಾಗಿ ಮಾತಾಡ್ತೀವಿ ....ಕ್ಯಾಂಟೀನ್ ನಡೀತಿರೋದು ನಮ್ದೇ ದುಡ್ದಲ್ಲೇನೋ ಅನ್ನೋ ಸಣ್ಣ ದೌಟ್ ಬೇರೇ ಇದೆ..
ಮನೆಯಲ್ಲೂ ಅಷ್ಟೇ ...ವಾಟ್ಸ್ ಅಪ್ ಬಿಟ್ಟು ಬೇರೇ ಏನನ್ನೂ ಕಣ್ಣೆತ್ತೂ ನೋಡಲ್ಲ(ಇನ್ನೇನ್ ಕೈ ಎತ್ತಿ ನೋಡಕ್ ಆಗುತ್ತಾ)...ತುಂಬಾ ಒಳ್ಳೆವ್ರಾಗಿದೀವಿ ಅನ್ಕೊಂಡ್ರಾ ...ಹಂಗೇನೂ ಇಲ್ಲ ..ವಾಟ್ಸ್ ಅಪ್ ಚಾಟ್ನಲ್ಲೇ ಟೈಮ್ ಮುಗ್ದಿರುತ್ತೆ ಅಷ್ಟೇ !..ಒಂದಿಷ್ಟು ಸೀಕ್ರೆಟ್ ಗ್ರುಪ್ ಗಳಲ್ಲಿ ಬೇಜಾನ್ ಕಾಲ್ ಎಳ್ಕೊಂಡು ,ದೇಶದ ಎಲ್ರದ್ದೂ ಕಾಲ್ ಎಳ್ದು ,ಬ್ಯಾಟರಿ ಲೋ ತೋರ‍್ಸಿ ಅದೇ ಸ್ವಿಚ್ ಆಫ಼್ ಆದ್ಮೇಲೆ ಮಲ್ಗಿದ್ರೆ ಅವತ್ತಿನ ದಿನ ಸಾರ್ಥಕ....
ಆದ್ರೂ ಸ್ವಲ್ಪ ಒಳ್ಳೆವ್ರಾಗ್ಬೇಕು ಇನ್ನಾದ್ರೂ (ಬ್ರಾಂಚ್ ಎಂಟರ್ ಆಗಿದೀವಿ ಅಂತಾನಾ ಕೇಳಿದ್ರೆ ನಿಮ್ಗೂ ನಮ್ ಲೆಕ್ಚರ್ಸ್ ಗೂ ಏನೂ ವ್ಯತ್ಯಾಸ ಇಲ್ಲ ಅಂತ ಘಂಟಾನುಘಂಟವಾಗಿ ಹೇಳ್ಬಿಡ್ತೀನಿ ಅಷ್ಟೇ ).
ಹಳೆ ಹುಡುಗರಿಗೆಲ್ಲಾ ಒಂದು ಸೈಲೆಂಟ್ ಬಾಯ್ ಹೇಳಿ ತೀರಾ ಉಲ್ಟಾ ಆದ ನಮ್ಮದೇ ಟೇಸ್ಟ್ ಗಳ್ನಾ ಟ್ರಾಕ್ ಗೆ ತರೋ ಶತ ಪ್ರಯತ್ನವ ಮಾಡ್ಲೇ ಬೇಕು ಇನ್ನು ....
ವಾಟ್ಸ್ ಅಪ್ ಗೆ ಬಾ,ಸ್ಕೈಪ್ ಗೆ ಬಾ, ಅಲ್ ಬಾ ಇಲ್ ಬಾ ಅಂತ ಬ್ಲಾ ಬ್ಲಾ ಮಾಡಿದ್ರೆ ಒದೆ ಬೀಳುತ್ತೆ ಅಷ್ಟೇ ....
ಒಂದ್ ರೌಂಡ್ ಅಜ್ನಾಥ ವಾಸ ಮುಗಿದ್ಮೇಲೆ ಸಿಗ್ತೀನಿ ಮತ್ತೆ ತಲೆ ತಿನ್ನೋಕೆ ..ಅಲ್ಲಿ ತನ್ಕ ಆ ತಲೆಗಳ್ನಾ ಜೋಪಾನ ಮಾಡ್ಕೊಳಿ.
ಗ್ಯಾಪಲ್ಲಿ ಟೈಮ್ ಇದ್ರೆ ...ಮೊಬೈಲ್ ನಲ್ಲಿ ಬಿಟ್ಟಿ ಕರೆನ್ಸಿ ಇದ್ರೆ ಅವಾಗಾವಾಗ ನೀವೂ ಬದ್ಕಿದೀರ ಅಂತ ಹೇಳ್ತಿರಿ ...ಇಲ್ಲಾ ಫೋಟೋಕ್ಕೆ ಹಾರ ಹಾಕಿ ಕೈ ಮುಗ್ಯೋಕೆ ಗೊತ್ತಾಗಲ್ಲ ಅಂತಷ್ಟೇ.
* * *
ಹಳೆ ಹುಡ್ಗ ಯಾರಂತ ಕೇಳೋ ಹಂಗಿಲ್ಲ ....ಹೊಸ ಹುಡ್ಗನ್ ಹೆಸ್ರೂ ಕೇಳೋ ಹಂಗಿಲ್ಲ ....ಏನ್ ಹುಡ್ಗೀರಪ್ಪ ಅಂತ ಬೈಯ್ಯೋ ಹಂಗಿಲ್ಲ ...ಎಷ್ಟ್ ನೀಟ್ ಆಗಿ ಕೊರಿತಾಳೆ ಅಂತಾನೂ ಉಗ್ಯೋ ಹಂಗಿಲ್ಲ .....
ಟೊಟಲ್ಲಿ ..... ಉಫ಼್ .
(ಬ್ಲಾಗ್ ಅನ್ನೋದು ರಾಗಿ ಮುದ್ದೆ ಹೋಟೆಲ್ ಆಗ್ಬಾರ್ದು ...ಆವಾಗಾವಾಗ ಮಸಾಲ್ ಪುರಿನೂ ಮಾಡ್ತಿರ್ಬೇಕು ಅಂತ ನೀಟ್ ಆಗಿ ಡೈಲಾಗ್ ಹೇಳಿದ್ದ ಗೆಳೆಯಂಗೆ ......ಮಸಾಲ್ ಪುರಿನಲ್ಲಿ ಸ್ವಲ್ಪ ಪುರಿ ಕಡ್ಮೆ ಇದೆ ಅನ್ಸುತ್ತೆ ,,ಅಥ್ವಾ ಪಾನಿ ಪುರಿ ಆಯ್ತು ಅನ್ಸುತ್ತೆ ಕಣೋ ಸ್ವಲ್ಪ ಅಡ್ಜಸ್ಟ್ ಮಾಡ್ಕೋ :ಫ್ )