ಗೆಳತಿ,
ಇಂದೇಕೊ ತುಸು ಬೇಸರ. ಸಿಗದ ಆಗಸಕ್ಕೆ ಕೈ ಚಾಚಬೇಕೆಂಬ ತೀವ್ರ ಹಂಬಲ. ಈ ಸಂದಿಗ್ದ ಏಕಾಂತ ನಿರಂತರ!!
ಭಾವನೆಗಳ ಸುಂದರ ಲೋಕದಲ್ಲಿ ಒಂದಷ್ಟು ಆಲೋಚನೆ, ಇನ್ನೊಂದಿಷ್ಟು ತುಂಟತನ, ಮೊತ್ತೊಂದಿಷ್ಟು ಗಾಂಭೀರ್ಯ,
ಏಕಾಂಗಿಯಾಗಿ ನಿಂತು ಹಾಯಿ ದೂರ ನೋಡುತ್ತಿರುವಾಗ ಬದುಕಿನ ಸುಂದರ ಚಿತ್ರ ಕನಸಿನಂತೆ ಭಾಸ.
ಮನಸ್ಥಿತಿಯ ಅಲ್ಪಮಟ್ಟಿನ ಬದಲಾವಣೆ ಖಂಡಿತ ಆಗುವುದು ಆಭಾಸ!.
ಮುಸ್ಸಂಜೆಯ ಈ ಮೌನ ನಿಜಕ್ಕೂ ಅಸಹನೀಯ, ಇಬ್ಬರಿಗೂ ಬದುಕು ಕಟ್ಟಿಕೊಳ್ಳುವ ಕಾತರ!
ಏನೇ ಇರಲಿ,
ಭಾವ ನಾನಾದರೆ ಭಾವನೆ ನೀನು,
ಜೀವನದ ಯಶಸ್ಸು ನಿನ್ನದಾಗಲಿ... ಅದರ ಹಾದಿ ನನ್ನದಿರಲಿ
ಚಿರಾಯುವಾಗು.
ಪದ್ಯವೋ ಅಥವಾ ಪದ್ಯದ ರಂಗು ಮೆತ್ತಿಕೊಂಡ ನಾಲ್ಕು ಸಾಲಿನ ಗಧ್ಯವೋ , ಒಂದು ಕ್ಷಣ ದ್ವಂದ್ವದಲಿ ಮಿಂದೆದ್ದ ಭಾವ ನಿಮ್ಮ ಭಾವ ಭಾವದ ನಡುವೆ . ಇಷ್ಟವಾಯಿತು :)
ReplyDeletei hope u might like my writings at
http://www.pallakki.blogspot.in/
ಭಾವ ಭಾವನೆಗಳನ್ನು ಶಬ್ದಗಳಿಂದ ತಿಳಿಸುವುದು ಕಷ್ಟ ..ಹೀಗಾಗಿ ಚುಟುಕಾಗಿದೆ .
ReplyDeleteನಿಮ್ಮ ಬರಹಗಳು ಇಷ್ಟವಾದವು .ಧನ್ಯವಾದಗಳು
ಭೇಟಿ ನೀಡುತ್ತಿರಿ
ಪದಗಳ ಕದನವಾಗಲಿ ಭಾವಗಳ ಕಾಳಗವಾಗಲಿ..ಅದರಲ್ಲಿ ಸಿಗುವ ಹಿತವೇ ಸುಂದರ..ಸೊಗಸಾಗಿದೆ..
ReplyDelete