Tuesday, July 24, 2012

ಭಾವ ಭಾವನೆಯ ನಡುವೆ


ಗೆಳತಿ,

          ಇಂದೇಕೊ ತುಸು ಬೇಸರ. ಸಿಗದ ಆಗಸಕ್ಕೆ ಕೈ ಚಾಚಬೇಕೆಂಬ ತೀವ್ರ ಹಂಬಲ. ಈ ಸಂದಿಗ್ದ ಏಕಾಂತ ನಿರಂತರ!!
ಭಾವನೆಗಳ ಸುಂದರ ಲೋಕದಲ್ಲಿ ಒಂದಷ್ಟು ಆಲೋಚನೆ, ಇನ್ನೊಂದಿಷ್ಟು ತುಂಟತನ, ಮೊತ್ತೊಂದಿಷ್ಟು ಗಾಂಭೀರ್ಯ,

ಏಕಾಂಗಿಯಾಗಿ ನಿಂತು ಹಾಯಿ ದೂರ ನೋಡುತ್ತಿರುವಾಗ ಬದುಕಿನ ಸುಂದರ ಚಿತ್ರ ಕನಸಿನಂತೆ ಭಾಸ.
ಮನಸ್ಥಿತಿಯ ಅಲ್ಪಮಟ್ಟಿನ ಬದಲಾವಣೆ ಖಂಡಿತ ಆಗುವುದು ಆಭಾಸ!.

ಮುಸ್ಸಂಜೆಯ ಈ ಮೌನ ನಿಜಕ್ಕೂ ಅಸಹನೀಯ, ಇಬ್ಬರಿಗೂ ಬದುಕು ಕಟ್ಟಿಕೊಳ್ಳುವ ಕಾತರ!
ಏನೇ ಇರಲಿ,
                   ಭಾವ ನಾನಾದರೆ ಭಾವನೆ ನೀನು,

ಜೀವನದ ಯಶಸ್ಸು ನಿನ್ನದಾಗಲಿ... ಅದರ ಹಾದಿ ನನ್ನದಿರಲಿ

                                                                                                
                                                                        ಚಿರಾಯುವಾಗು.

3 comments:

  1. ಪದ್ಯವೋ ಅಥವಾ ಪದ್ಯದ ರಂಗು ಮೆತ್ತಿಕೊಂಡ ನಾಲ್ಕು ಸಾಲಿನ ಗಧ್ಯವೋ , ಒಂದು ಕ್ಷಣ ದ್ವಂದ್ವದಲಿ ಮಿಂದೆದ್ದ ಭಾವ ನಿಮ್ಮ ಭಾವ ಭಾವದ ನಡುವೆ . ಇಷ್ಟವಾಯಿತು :)
    i hope u might like my writings at

    http://www.pallakki.blogspot.in/

    ReplyDelete
  2. ಭಾವ ಭಾವನೆಗಳನ್ನು ಶಬ್ದಗಳಿಂದ ತಿಳಿಸುವುದು ಕಷ್ಟ ..ಹೀಗಾಗಿ ಚುಟುಕಾಗಿದೆ .

    ನಿಮ್ಮ ಬರಹಗಳು ಇಷ್ಟವಾದವು .ಧನ್ಯವಾದಗಳು

    ಭೇಟಿ ನೀಡುತ್ತಿರಿ

    ReplyDelete
  3. ಪದಗಳ ಕದನವಾಗಲಿ ಭಾವಗಳ ಕಾಳಗವಾಗಲಿ..ಅದರಲ್ಲಿ ಸಿಗುವ ಹಿತವೇ ಸುಂದರ..ಸೊಗಸಾಗಿದೆ..

    ReplyDelete