Sunday, November 11, 2012

ತೀರ ಸೇರದ ನಾವೆ ,,!


           ಪ್ರೀತಿಯ ಗೆಳತಿ ,!
                         ನೀನೊಂದು ಒಗಟು ಕಣೆ .,ಬದುಕು ಗೊಂದಲಗಳ ಜಾತ್ರೆಯಾದಾಗ ಬಂದವಳು ನೀನು ...ಹೀಗೊಬ್ಬ ಗೆಳತಿಯ ನಿರೀಕ್ಷೆ ಮಾಡಿರಲಿಲ್ಲ .ಬರಿಯ ಮಾತು, ಹರಟೆ ,ಮಸ್ತಿಯ ಸಾಮ್ರಾಜ್ಯದಲ್ಲಿ ಮುಳುಗಿ ಹೋಗಿದ್ದೆ .ಆಗ ಮೌನವಾಗಿ ಬಂದವಳು ನೀನು .ನಿನ್ನೀ ಮೌನ ನನಗ್ಯಾಕೋ ಇಷ್ಟ !ಕೆಲವೊಮ್ಮೆ ಕಷ್ಟ ಕೂಡ !!.ನಿನಗೆ ಅಂದು ಕ್ಯಾಂಪಸ್ ನಲ್ಲಿ ಸುಮ್ಮನೆ ರಾಗ್ ಮಾಡಿದ್ದೆ .ಅಂದು ನೀನು ಪ್ರತಿಕ್ರಯಿಸಿದ ರೀತಿ ನಿಜಕ್ಕೂ ಮರೆಯಲಾರದ್ದು ಗೆಳತಿ .
  ಬಿಡು ,,, ಆ ದಿನಗಳು ಕಳೆದು 2 3 ವರ್ಷಗಳೇ ಸರಿದಿವೆ .!
ಬದುಕು ಸರಿದಿದೆ !.ಕನಸುಗಳು ಕವಲೊಡೆದಿದೆ !ಬೇಕೆಂದಿದ್ದು ಸಿಗುವಷ್ಟು ಹತ್ತಿರದಲ್ಲಿದ್ದೇನೆ !..ಆದರೆ ನೀನು ಮಾತ್ರ ಅಂದಿನಿಂದ ದೂರಾಗಿದ್ದೀಯಾ !!,,ಏಕೆ ಹೀಗೆ ದೂರ ಸರಿದೆ ?
ಕಳೆದು ಹೋದ ವರ್ಷಗಳ ನೆನಪು ಮಾಸಲು ಮಾಸಲು ,,ಆ ನೆನಪಲ್ಲಿ ನಿನ್ನ ಮುದ್ದು ಮುಖ ಸ್ಪಷ್ಟ ,,ಇದಕ್ಕೆ ಏನೆನ್ನಬೇಕು ನೀನೆ ಹೇಳು ,
,ನಂಗೊತ್ತು ,,,,ನಿನ್ನ ಪುಟ್ಟ ಮನಸ್ಸಿನಲ್ಲಿ ಕೆಟ್ಟ ಕನಸುಗಳಿಲ್ಲ .ಮನದ ಬೇಸರ ,ಮಾಸದ ಮುಗುಳ್ನಗು ,ನಿನ್ನೀ ಹುಸಿ ಮುನಿಸು ...................ನನ್ನ ಒಲವು !
ಏನೆಂದು ಕರೆಯಲಿ ನಿನ್ನ ನಾ ....ಗೆಳತಿ ?ಪ್ರೀತಿ?ಆತ್ಮೀಯ?ನಲ್ಲೆ?,,ಇದಕ್ಕಾದರೂ ಉತ್ತರಿಸು ನೀ .
yes ,im here to confess my love to u .
you made  me think of u hundred times a day !!
tell me ,will u be MINE forever ???

ಮನದೊಳಗೆ ಹಾದು ಹೋದ ನನ್ನೀ ಭಾವನೆ ನಿನ್ನ ಗಂಭೀರತೆ ,ಲಾಸ್ಯ ,ಸೂಕ್ಷ್ಮತೆ ಗಳಲ್ಲಿ ಕಳೆದೇ ಹೋಗಿದೆ ಗೆಳತಿ
                                        ಉತ್ತರಿಸಿ ಹೋಗು ಒಮ್ಮೆ ನೀನು
                                                  ನಗು ನಗುತ ಸಾಗಲಿ ನಿನ್ನ ಪಯಣ .
                                                                                      ನಿನ್ನ ನಿರೀಕ್ಷೆಯಲ್ಲಿ ....,
                                                                                                       ನಿರಾಸೆಗೊಳಿಸದಿರು ಗೆಳತಿ ...,


                                               
                                   ಮತ್ತೆ ಮತ್ತದೇ ನೆನಪು ...,,
                                                 ನೆನಪುಗಳ ಬೆಚ್ಚನೆಯ ಪಯಣ ,,
                                                                  ಜೊತೆಯಾಗಿ ಹೋಗೋಣ ಬಾ ಗೆಳತಿ ,,,ಉತ್ತರ ಹೊಳೆಯದ ಗೊಂದಲ ನನ್ನದು ಗೆಳೆಯ ,,,
    ಸ್ನೇಹದ ಸಲುಗೆಯ ಸರಿಸಿ,ಆತ್ಮೀಯತೆಯನ್ನು ಮರೆಸಿ ...ಬದುಕಿನೊಂದಿಗೆ ಆರಮಗಿದ್ದೀಯಾ ಅಂದುಕೊಂಡಿದ್ದೆ !ಬೆಳಿಗ್ಗೆ ಇಂದ ಸಂಜೆಯ ತನಕ ಬದುಕೇ ಕಾಣೆಯಾಗಿದೆ !
ಬದುಕನ್ನು ನಯವಾಗಿ ಪ್ರೀತಿಸುವವಳು ನಾನು ,,,ಕಾಲಿಗೆ ಗಾಳಿ ಕಟ್ಟಿ ಕೊಂಡು ಬದುಕಿನ race ನಲ್ಲಿ ಮುಂದೆಯೇ ಇರಬೇಕೆಂಬ ಧಾವಂತವೇನೂ ಇಲ್ಲವೇ ಇಲ್ಲ !
ನಿನ್ನೀ ಬದುಕಿನ ಬಗ್ಗೆ ತೀವ್ರವಾದ ಆಲೋಚನೆಯಾಗಲಿ ,ಗೊಂದಲವಾಗಲಿ ಬೇಡ ಗೆಳೆಯ ನನ್ನ ಭಾವುಕತೆ ,ಮುಗ್ಧತೆ ,ಸರಳತೆಯನ್ನುಸಾರಾಸಗಟವಾಗಿ  ಅಲ್ಲಗಳೆದ ನಿನ್ನ ಕಾತುರ ಜಗತ್ತಿನಲ್ಲಿ ಒಂದಾಗಲು ಒಲ್ಲೆ ನಾನು !
ಬದುಕಿನಿಂದ ನಿರೀಕ್ಷೆಗಳು ಕಡಿಮೆಯಾಗಿವೆ !!
ಬೆಚ್ಚಗಿನ ಆಪ್ತತೆ ,ಧಾರಾಳ ಸ್ನೇಹ ,ಒಂಚೂರು ಒಲವು ಇಷ್ಟಿದ್ದರೆ ನನ್ನ ಬದುಕು ಸಂತುಷ್ಟ ..
ಸಾದ್ಯವಾದರೆ ನನ್ನ ಪ್ರಶ್ನೆಗೆ ಉತ್ತರಿಸು ನೀ ,,,
                             ಕವಲೊಡೆದ ಒಲವು ...
                              ಮಾಸಿದ ನಿಲುವು ....
                              ಬರಿಯ ಗೊಂದಲದ ದಿನಗಳಿಂದ ಏನು ಪಡೆದೆ ನೀ ???
                                                                               ..ನೆನಪುಗಳ ಹಾದಿಯಲ್ಲಿ ನಿನ್ನನ್ನು ನಿರೀಕ್ಷಿಸುತ್ತಾ ..,,

6 comments:

 1. ಒಲವಿನ ಬಗೆಗೆ ನಿಮ್ಮ ಅಕ್ಷರಗಲಿ ಮೂಡಿದ ಬರಹ ನೆಚ್ಚಿಗೆಯಾಯ್ತು.

  ಆಪ್ತ ಶೈಲಿಯ ಈ ತರಹದ ಬರಹಗಳೇ ನಿಮ್ಮ ಶಕ್ತಿಯಾಗಲಿ.

  ReplyDelete
 2. ಧನ್ಯವಾದಗಳು ಬ್ಲಾಗ್ ಗೆ ಬರ್ತಾ ಇರಿ
  ಖುಷಿಯಾಯಿತು

  ReplyDelete
 3. ಚಂದಿದ್ದು ಕೂಸೆ...ಬರಿತಾ ಇರು...

  ReplyDelete
 4. ಭಾಗ್ಯ...

  ತುಂಬಾ ಸುಂದರ ಬರವಣಿಗೆ...

  ಇಷ್ಟವಾಯ್ತು...
  ಮುಂದುವರೆಯಲಿ ಬರವಣಿಗೆಯ ಪಯಣ .....

  ReplyDelete
 5. ದೇಹಕೆ ಉಸಿರೇ ಸದಾ ಭಾರ..ಎನ್ನುವಾಗ.ಸಿಗುವ ನಲ್ಮೆಯ ಗೆಳೆತನದ ಸಾಂಗತ್ಯ ಎಂತಹ ನಿರ್ವಾತ ಪ್ರದೇಶದಲ್ಲೂ ತಂಗಾಳಿ ತರಬಲ್ಲದು...ಸುಂದರವಾಗಿದೆ ನಿಮ್ಮ ಯೋಚನಾ ಲಹರಿ..ಮುಂದುವರೆಸಿ..

  ReplyDelete