Wednesday, September 26, 2012

ಇಲ್ಲೊಬ್ಬರು ಆತ್ಮೀಯರು

ಹಬ್ಬ ಮುಗೀತು ,,,
ಊರಿಗೆ ಹೋಗಬೇಕೆಂದು ತುಂಬಾನೇ ಅಂದುಕೊಂಡಿದ್ದೆ .ಪರೀಕ್ಷೆ ಸನಿಹ ,ಕ್ಲಾಸ್, labs ಗಳ ದರ್ಬಾರಿನಿಂದಾಗಿ ಅಂದುಕೊಂಡಿದ್ದನ್ನು ಕೈ ಬಿಡಬೇಕಾಯಿತು .ನಾನಂದುಕೊಂಡಿದ್ದನ್ನು ಮಾಡದೇ  ಇರುವ ಕಾರ್ಯ ಮುಂದುವರೆಯಿತು .!
pg ಕ್ಲೋಸ್ ಆಗಿತ್ತು .ಕ್ಲಾಸ್ ಗಳನ್ನು ಹೇಗೆ attend ಮಾಡೋದು ಎಂಬ ಪ್ರಶ್ನೆ ತುಂಬಾ ತಲೆ ತಿಂತು !!..ಈಗಷ್ಟೇ ಬಂದು 1 ತಿಂಗಳಾಯಿತು .ಹೇಳಿಕೊಳ್ಳುವಂತಹ ಆತ್ಮೀಯ ಸ್ನೇಹಿತರು ಇನ್ನೂ ಆಗಿಲ್ಲ .
ಆಗ ನೆನಪಾದುದ್ದು ನಮ್ಮ ಊರೀನವರೆ ಆದ ಈಗ ಇಲ್ಲಿಯೇ stay ಆಗಿರುವ ಪರಿಚಿತರು .(ಈಗ ಪರಿಚಿತರಾಗಿ ಆತ್ಮೀಯರಾಗಿದ್ದಾರೆ ಎನ್ನಬಹುದು ).4 ದಿನ ಅವರ ಮನೆಯಿಂದಲೇ ಕಾಲೇಜ್ ಗೆ ಓಡಾಡಿದೆ !.ನಾನು ಬರ್ಲಾ ಹಬ್ಬಕ್ಕೆ ?ಅಂತ ಕೇಳಬೇಕೆಂದಿದ್ದೆ .ಆದರೆ ಅವರ ಆತ್ಮೀಯತೆ ನೋಡಿ ."ಹಬ್ಬಕ್ಕೆ ಬಾರಮ್ಮ ,ಮನೆ ಅಂತ ತಿಳ್ಕೊಂಡು "ಅಂತ ಆಮಂತ್ರಿಸಿದರು .!!
ನಿಜಕ್ಕೂ ಆಶ್ಚರ್ಯವಾಯಿತು .ಯಾಕಂದ್ರೆ ಊರು ಒಂದೇ ಆದ್ರು ನಾನ್ ಊರಿಗ್ ಹೋಗೋದೇ ಅಪರೂಪ .ಹೋದ್ರು ಮನೆ,ಹೊಳೆ ,ಬೆಟ್ಟ ,ಗುಡ್ಡ ,ಸ್ನೇಹಿತರೊಟ್ಟಿಗೆ ಸಮಯ ಸರಿದು ಹೋಗುತ್ತೆ .ಹೀಗಿರುವಾಗ ಜನರ ಪರಿಚಯ ಹೇಗೆ ಸಾದ್ಯ ಹೇಳಿ ?..ಅದೂ ನನ್ನಂತಹ ಮಾತೇ ಆಡದೇ ಸುಮ್ಮನಿರುವವಳಿಗೆ  !.ತೀರ ಇತ್ತೀಚಿಗೆ ಪರಿಚಿತರಾದರು .ತಿಳಿಯದ ಊರಿನಲ್ಲಿ ಸ್ವಲ್ಪ ಆತ್ಮೀಯತೆ ತೋರಿದ್ರೂ ಸಾಕು ಅಂತಿದ್ದೆ .ಆದರೆ ಇವರ ಪ್ರೀತಿ ಆತ್ಮೀಯತೆಗೆ ಮಾತುಗಳೇ ಬರುತ್ತಿಲ್ಲ ,ಹಬ್ಬದ ಸಂಬ್ರಮ ಮನೆಯ ಹಬ್ಬದಂತೆಯೇ ಅನಿಸಿತು .ಅವರ ಮಗ 'ತನು 'ತಮ್ಮನಂತೆಯೇ ಆಗಿದ್ದಾನೆ .ಅಕ್ಕಾ ನನ್ drawing ನೋಡು ,collections ನೋಡು ಅಂತ ಉತ್ಸಾಹದಿಂದ ತೋರಿಸುತ್ತಿದ್ದರೆ ತಮ್ಮನ ನೆನಪು ಆಗದಿರಲಿಲ್ಲ .ಇನ್ನು ಮಮತತ್ತೆ ಅಮ್ಮನಂತೆ ಆದರಿಸಿದರು .ಮನು ಆತ್ಮೀಯನಾದ .ಅವರ ಮನೆಯ ನಾಯೀ ಮರಿಗೆ ಅವರು ತೋರುವ ಪ್ರೀತಿ ಮೂಕವಿಸ್ಮಿತನನ್ನಾಗಿ ಮಾಡಿತು .ನನ್ನನ್ನು ಮನೆ ಮಗಳಂತೆ ನೋಡಿದ ಇವರ ತನಕ್ಕೆ ಮನಪೂರ್ವಕ ಧನ್ಯವಾದಗಳು .
ಅಷ್ಟೊಂದು ಮಾತಾಡಿ ಗೊತಿಲ್ಲದದ್ದರಿಂದ ನನ್ನ  ಮೌನ ಅವರಿಗೆ ಬೇಸರಿಸಿರಬಹುದು 
             ಜನರೊಂದಿಗಿನ interaction ಕಡ್ಮೆ ನಂದು .ಹೀಗಾಗಿ ಅಷ್ಟೊಂದು ಮಾತು ಬಂದಿಲ್ಲ .ಆದರೂ ಅವ್ರೆ ಮಾತಾಡಿಸುತ್ತ ,campus ,ಫ್ರೆಂಡ್ಸ್ ಬಗ್ಗೆ ಕೇಳುತ್ತಾ ಮಾತಾಡಿದಾಗ ಗಂಟೆಗಟ್ಟಲೇ ಮಾತಾಡಿದ್ದು ನಾನೇನಾ ?ಅನ್ನೋ ಸಂದೇಹ ಬೇರೆ .ಅದೆಷ್ಟೋ ಹರಟಿದೆ .ಮನೆಯಿಂದ ದೂರಾದ ಬೇಸರ ಸ್ವಲ್ಪ ಕಡಿಮೆಯಾದಂತಿತ್ತು .ಈ ದೂರದ ಊರಲ್ಲಿ ಪ್ರೀತಿ ತೋರುವ ಆತ್ಮೀಯರೊಬ್ಬರು ಸಿಕ್ಕಿದ್ದು ಖುಷಿಯಾಗಿದೆ .ಹತ್ತಿರದ ಬಂಧು ಆದರೂ ಸಹಾಯ ಮಾಡದೇ ತಮ್ಮ ಜೀವನ ಜಂಜಾಟದಲ್ಲಿ ಮುಳುಗಿ ಹೋಗಿರುವವರು ಒಂದು ಕಡೆ ಆದ್ರೆ ಕೇವಲ ಪರಿಚಿತರಾಗಿ "ನಮ್ಮೂರಿನ ಹುಡ್ಗಿ "ಎಂದು ಪ್ರೀತಿ ತೋರಿಸಿ ಆದರಿಸುವ ಇವರನ್ನು ನೋಡಿ ಖುಷಿಯಾಯಿತು .ಇವರೊಂದಿಗಿನ ಈ ದಿನಗಳ ಒಡನಾಟ ಮನದೊಳಗೆ ಹಾದು ಹೋದ ಮೌನ ಭಾವಕ್ಕೆ ಉತ್ತರ ಕೊಟ್ಟಿತ್ತು .
.ಮಾತು ಧಾತುವಿನ ಏರಿಳಿತದಲ್ಲಿನ ಸಮ್ಮಿಲನಕ್ಕೆ ನನಗೆ ಇಲ್ಲೊಬ್ಬ ಪರಿಚಿತರು ಆತ್ಮೀಯರಾಗಿದ್ದರೆ .

3 comments:

  1. ಹಮ್... ಕಾಣದ ಊರಿನಲ್ಲಿ ನಮ್ಮವರು ಸಿಕ್ಕಿದರೆ ಆಗುವ ಸಂತಸ ಅಷ್ಟಿಷ್ಟಲ್ಲ.....ಬಂದು ಒಂದು ತಿಂಗಳಿಗೇ ಅಷ್ಟು ಆತ್ಮೀಯರು ಸಿಕ್ಕಿದ್ದು ನಿನ್ನ ಅದ್ರಷ್ಟ...
    ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ವಂದನೆಗಳು...ಬರಿತಾ ಇರು ...

    ReplyDelete
  2. ಅಪರಿಚಿತರು ಪರಿಚಿತರಾದಾಗ ಆಗುವ ಸಂತಸದ ಅನುಭವವನ್ನ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಿರಾ.ಮತ್ತಷ್ಟು ಬರೆಯಿರಿ.ವಮದನೆಗಳು.

    ReplyDelete
  3. ಕಾಣದ ಊರಲಿ ನೀ ಕುಳಿತಿರುವೆ..ಅಂತ ನಾವು ದೇವರಲ್ಲಿ ಮೊರೆ ಇಟ್ಟರೆ..ಆ ದೇವರು..ಯೋಚನೆ ಬೇಡ..ಕಂಡೂರಿನಲ್ಲೇ ಆತ್ಮೀಯರು ಇರುತ್ತಾರೆ ಎನ್ನುವುದನ್ನು ತೋರಿಸುತ್ತಾನೆ...ನಿಷ್ಕಲ್ಮಶ ಪರಿಚಯ, ಮನಸು ಎಂತಹ ಸ್ಥಳಗಳಲ್ಲೂ ಪರಿಚಯವಾಗಿ ಆತ್ಮೀಯವಾಗಿಬಿಡುತ್ತೆ ಎನ್ನುವ ಮಾತಿಗೆ ನಿಮ್ಮ ಅನುಭವವೇ ಸಾಕ್ಷಿ...ಸೊಗಸಾಗಿದೆ..

    ReplyDelete