Wednesday, September 26, 2012

'ನಿಧಿ' ಎಂಬ ಖುಷಿ

       ಪ್ರೀತಿಯ ನಿಧಿ ಪುಟ್ಟಿ ,
      ಸರಿಸುಮಾರು ಹತ್ತು ವರ್ಷದ ನಂತರ ನಮ್ಮ ಮನೆಗೆ ಬಂದ ಮುದ್ದು ಪುಟ್ಟಿ ನೀನು ನಿಧಿ .ನನ್ನ ತಮ್ಮನ ನಂತರ ನಮ್ಮನೆಗೆ ಬಂದ ಪಾಪು ನೀನು .ತಮ್ಮನ ಪುಟ್ಟ ಪುಟ್ಟ ಹೆಜ್ಜೆಯ ನೆನಪು ಅಷ್ಟೊಂದಾಗಿ ಇಲ್ಲ .ಆದರೆ ನಿನ್ನ ಆಟ ,ತುಂಟಾಟ, ಕಿಲ ಕಿಲ ನಗು ,,ದೊಡ್ಡ ದೊಡ್ಡ ಅಳು ,ಕೈ ಕಾಲಿನ ಡಬ ಡಬ ,,ಎಷ್ಟೊಂದು ಮುದ್ದಾಗಿ ಮಾಡುತ್ತೀಯ ನೀ !!ನಿನ್ನ ಪ್ರತಿಯೊಂದು ಕೆಲಸವೂ ತುಂಬಾ ಚೆಂದ .
     ಅದಾಗಲೇ ನಿನಗೆ ಒಂದು ವರ್ಷಕ್ಕೆ ಇನ್ನೆರಡು ತಿಂಗಳುಗಳು ಬಾಕಿ !.9 ತಿಂಗಳು ನಿನ್ನ ಅಮ್ಮನ ಜೋಪಾನದಲ್ಲಿ ಇರಬೇಕಿದ್ದ ನಿನಗೆ ಅದೇನೂ ಅಷ್ಟು ಆತುರವೋ ನಾ ಕಾಣೆ !7 ತಿಂಗಳಿಗೇ ಅಮ್ಮನಲ್ಲಿ ಹಠ ಮಾಡಿ ಬಂದೆ !ಬಹುಷಃ ಹೊಸದನ್ನು ನೋಡುವ ಕುತೂಹಲ ನಿನ್ನನ್ನು  ಹಾಗೆ ಮಾಡಿತು .ಬೇಗ ಬೇಗ ಹೊರಗೆ ಬಂದೆ .ಆದರೆ ಆ ದಿನ ನಮಗಾದ tension ಅಷ್ಟಿಷ್ಟಲ್ಲ ಪುಟ್ಟಿ .ನಿನ್ನ ಅಮ್ಮ (ನನ್ನ ಅಕ್ಕ )ಹಿಂದಿನ ದಿನ ಅಷ್ಟೇ ಗಂಟೆಗಟ್ಟಲೆ ಫೋನಿನಲ್ಲಿ ನಿನ್ನ ಬಗ್ಗೆಯೇ ಮಾತಾಡಿದ್ದಳು .ಆದರೆ ಅವತ್ತೇ ನೀನು ಬರುತ್ತಿಯ ಎಂಬ ನಿರೀಕ್ಷೆ ಇದ್ದಿರಲಿಲ್ಲ.ನಿನ್ನಅಮ್ಮ ತುಂಬಾ ಕಷ್ಟಪಟ್ಟಳು ನಿನ್ನ ಮುದ್ದು ಮುಖ ನೋಡಲು  .. .ಏನೇ ಇರಲಿ ಬಹುಬೇಗ ನಿನ್ನ ಮುದ್ದು ಮುಖವನ್ನು ತೋರಿಸಿದೆ .ಎಲ್ಲರ ಮನ ಗೆದ್ದೆ !
                             ಈಗಲೂ ಅಷ್ಟೇ  ಬಹು ಚೂಟಿ ನೀನು .ಅಂಬೆ ಕಾಲಿಡುತ್ತಾ ಮನೆ ತುಂಬಾ ಓಡಾಡುತ್ತಿಯಂತೆ .ಏನೇನೋ ಮುದ್ದು ಮುದ್ದು ಮಾತಾ ಡುತ್ತಿಯಂತೆ !!.ನಿನ್ನನ್ನು ಒಂದು ಸಲ ಮಾತ್ರ ನೋಡಿದ್ದೇನೆ ಈ ಒಂದು ವರ್ಷದಲ್ಲಿ !!ಅದೇಕೋ ಪುಟ್ಟಾ ,..ನಿನ್ನ ಜೊತೆ ನಾನೂ ಮಗುವಾಗಿ ಆಟ ಆಡಬೇಕೆಂದು ಅನಿಸುತ್ತೆ .ನಿನಗೊಂದು ಹಾಯ್ ಹೇಳೋಣವೆಂದು ಕಂಪ್ಯೂಟರ್ ಮುಂದೆ ಕೂತರೆ ನಿನ್ನ ಅಪ್ಪ ಅಮ್ಮ ನಿನ್ನನ್ನು ನನ್ನೊಟ್ಟಿಗೆ ಮಾತನಾಡಿಸಲು ಹರಸಾಹಸ ಪಡುತ್ತಾರೆ .ಅಷ್ಟೊಂದು ರಂಪ ಮಾಡುತ್ತಿಯಂತೆ .ಏನಾದರೊಂದು ಮಾತಾಡುತ್ತಿದ್ದ ನನ್ನ ಅಕ್ಕ (ನಿನ್ನ ಅಮ್ಮ !) ಈಗ ಫೋನಿನಲ್ಲಿ' ನಿಧಿ ಹಂಗೆ ಮಾಡಿದ್ಲು ಇವತ್ತು ,ಏನೋ ಮಾತನಾಡಿದಳು'ಅಂತೆಲ್ಲ ಗಂಟೆಗಟ್ಟಲೆ ನಿನ್ನ ಬಗೆಗೆ ಮಾತಾಡುತ್ತಾಳೆ .ನಿನ್ನ ಬಗ್ಗೆ ನೂರು ಮಾತು ಹೇಳದೆ ಹೋದರೆ ಅವಳಿಗೆ ಸಮಾಧಾನವಿಲ್ಲ ನಿನ್ನ ಚಿಕ್ಕ ಪುಟ್ಟ ಕೆಲಸವನ್ನೂ ಗಂಟೆಗಟ್ಟಲೇ ವರ್ಣಿಸುತ್ತಾಳೆ ..!!.ನಿನ್ನೆಲ್ಲಾ ಕಾರ್ಯಗಳೂ ನಮಗೊಂದು ಅಚ್ಚರಿ !ಖುಷಿ .ನಿನ್ನ ಅಪ್ಪ ನಿನ್ನ ಎಲ್ಲಾ ಭಂಗಿಗಳನ್ನು ಸೆರೆ ಹಿಡಿದು ಖುಷಿ ಪಟ್ಟರೆ ಅಮ್ಮ ನಮ್ಮೊಂದಿಗೆ ಹೇಳಿ ಖುಷಿಸುತ್ತಿದ್ದಾಳೆ !!ಒಟ್ಟಿನಲ್ಲಿ ಪುಟ್ಟಾಣಿ ನಿಧಿ ಬಗ್ಗೆ ಎಷ್ಟು ಮಾತಾಡಿದರೂ ಕಮ್ಮಿನೇ !
                                      ಅಜ್ಜನಮನೆಯಲ್ಲಿ ಕೆಲ ತಿಂಗಳು  ಮಾತ್ರ ಇದ್ದು ನಿನ್ನ ಮನೆಗೆ ಹೊರಟೆ ನೀ ,ಆ ಸ್ವಲ್ಪ ದಿನಗಳೇ ನಾವೆಲ್ಲಾ ನಿನ್ನನ್ನು ಎತ್ತಿಕೊಂಡೆ ಇದ್ದೆವು .ನಿನ್ನ ಮನೆಯಲ್ಲೂ ಕೂಡ ಪುಟ್ಟಿ ,,ನಿನ್ನನ್ನು ರಾಜಕುಮಾರಿ ಎಂದೇ ಓಡಾಡಿಸುತ್ತಾರೆ .ಮುತ್ತಜ್ಜ  ,ಅಜ್ಜ ಅಜ್ಜಿಯಂದಿರು ನಿನಗೆ ಕೆಳಗೆ ಬಿಡದೇ ಎತ್ತಿಕೊಂಡೆ ಓಡಾಡಿಸುತ್ತರೆಂದು ಅದೆಷ್ಟು ಮುದ್ದು ನೀನು !.ಅಜ್ಜನಮನೆಯಲ್ಲಿ ನಗು ಮೂಡಿಸಿ ,ಮನೆಯಲ್ಲಿ ಮುದ್ದಿನ ಸೋನು ಆಗಿ ನಿನ್ನದೇ ರಾಜ್ಯಭಾರ ಮಾಡುತ್ತಾ ಎಲ್ಲರೂ ನಿನ್ನ ಮಾತನ್ನೇ ಕೇಳುವಂತೆ ಮಾಡಿದ್ದೀಯಾ ??ನೀನು ಸುಮ್ಮನೆ ಅತ್ತರೂ ಎಲ್ಲರೂ ನಿನ್ನಮ್ಮನನ್ನು ಬಯ್ಯುತ್ತಾರೆ ನೋಡು ನಿನ್ನ ಈ ರಗಳೆ ನಿನ್ನಮ್ಮನಿಗೂ ರಗಳೆ .ಆದರೆ ಪುಟ್ಟಿ ಸದಾ ನಗುತ್ತ ,ಎಲ್ಲರನ್ನು ನಿನ್ನ ತೊದಲು ತೊದಲು ಪುಟಾಣಿ ಮಾತುಗಳಿಂದ ನಗಿಸುತ್ತಾ ಅವರ ತಲೆಬಿಸಿಗಳನ್ನು ನಿನ್ನ ಮುಖ ನೋಡಿದಕೂಡಲೇ ಮರೆಸುತ್ತಿದ್ದಿಯ .ಬೇಗ ದೊಡ್ಡವಳಾಗಬೇಡ ನೀನು ..ನಿನ್ನ ಪುಟ್ ಪುಟಾಣಿ ಮಾತುಗಳನ್ನು ನೋಡುವುದು ,ಕೇಳುವುದು ಇನ್ನೂ ಬಾಕಿ ಉಳಿದಿದೆ .


ಅಂದಹಾಗೆ ನಿಧಿ ನನ್ನ ಅಕ್ಕನ ಮಗಳು .8 ತಿಂಗಳ ಪಾಪು .ತುಂಬಾ ತುಂಟಿ .ನಾನವಳನ್ನು ಕೆಲ ತಿಂಗಳ ಹಿಂದೆ ನೋಡಿದ್ದೇನೆ .ಈಗ ಅಂಬೆಗಾಲಿಡುತ್ತ ,ಮುದ್ದು ಮುದ್ದು ಮಾತಾಡುತ್ತಾಳಂತೆ .ಅವಳನ್ನೊಮ್ಮೆ ಮುದ್ದಿಸಬೇಕೆಂಬ ಆಸೆ .ಆದರೆ ನನ್ನಿಂದ 8 10 ತಾಸುಗಳ ಹಾದಿಯಷ್ಟು ದೂರ ಇದ್ದಾಳೆ ಅವಳು .ಏನೇ ಆಗಲಿ ನಿಧಿ ಪುಟ್ಟಾ ಈ ರಜಾದಲ್ಲಿ ನಾವಿಬ್ಬರೂ ಆಟ ಆಡೋಣ ,ಮಾತಾಡೋಣ ,
ರಜಾವನ್ನೇ ಎದುರು ನೋಡುತ್ತಾ  ,,,, 
ನಿನ್ನ ನಿರೀಕ್ಷೆಯಲ್ಲಿ .

1 comment:

  1. ಮಗುವಾಗಿದ್ದಾಗ ಇರುವ ಸಂತಸವೇ ಬೇರೆ..ಕಂಡ ಮನೆ ಒಳಗೆ ಹೊರಗೆ ಆಡಿದರೆ ಬೀಸಣಿಗೆಯೇ ಬೇಡವೆಂದು ಜಾನಪದ ನುಡಿ
    ಹೇಳುತ್ತದೆ..ಅಂತಹ ಒಂದು ಕುಟುಂಬದ ಕೊಂಬೆಯನ್ನು ಬೆಳೆಸುವ ಜವಾಬ್ಧಾರಿ ಹೊತ್ತ ಆ ಕಂದನ ಆರಂಭಿಕ ದಿನಗಳು ಬಹಳ ಮುದ ನೀಡುತ್ತದೆ.ಸುಂದರವಾಗಿದೆ ನಿಮ್ಮ ಬರಹದಲ್ಲಿ ಮೂಡಿದ ಬಾಲ್ಯ.

    ReplyDelete