Saturday, September 8, 2012

ನನ್ನೊಳಗಿನ ನಾನು

                            ಕಲ್ಪನೆಗೆ ವಾಸ್ತವಕ್ಕೆ ಎಷ್ಟು ವ್ಯತ್ಯಾಸ ನೋಡಿ ,,, ,ಕನಸಿನಲ್ಲಿ ಎಲ್ಲವನ್ನು ಪಡೆದವ ನೈಜದಲ್ಲಿ ಏನೂ ಇಲ್ಲದೆ ಗೊಂದಲದಲ್ಲಿ !!
ಕನಸಿನಲ್ಲಿ ಕಂಡ ರಾಜಕುಮಾರ ಎದುರು ಬರಲಾರ .ಬಂದರೂ ಮಾತನಾಡಲಾರ ,ಮಾತನಾಡಿದರೂ ಅನುಮೋದಿಸಲಾರ !.ರಾತ್ರಿಯ ಸುಂದರ ಸ್ವಪ್ನದಲ್ಲಿ ಎಷ್ಟೊಂದು ತಲೆ ಇರದ ಕನಸುಗಳು,,ವಿದ್ಯಾರ್ಥಿ ಜೀವನ ಮುಗಿಸಿ ಪ್ರತಿಷ್ಟಿತ ಕೆಲಸದಲ್ಲಿ ಇರುವಂತೆ ,ಏನೇನೋ ಮುಂದಿನ ಅರಿವಿಲ್ಲದ ಚಿತ್ರಗಳು,,ಹೇಳ್ತಾ ಹೋದರೆ ಪುಟಗಟ್ಟಲೆ ಇಂಥ ಕನಸುಗಳ ಆಕಾರ ..
                 ಬಿಡುವಿಲ್ಲದ boaring ಕ್ಲಾಸ್ ಗಳು ,homeworks ,ಪ್ರಾಜೆಕ್ಟ್ಸ್ ,assignments ಗಳು ,ಹಾಗೆ ಬರುವ exams ,,ಹೀಗೆ ಪರಂಪರೆ ಮುಂದುವರೆದಿದೆ .ಆದರೆ ಇಷ್ಟು ದಿನ ಒಂಟಿ ಎನಿಸಿಲ್ಲ .ನಾನು ನನ್ನ ಪಾಡಿಗೆ ಓದಿಕೊಂಡಿದ್ದೆ .ಈಗ ನಿಮ್ಮೆಲ್ಲರ ಬರಹಗಳನ್ನು ನೋಡಿದಾಗಿನಿಂದ ನನ್ನೊಳಗಿನ' ನಾನು '   ನಿಮ್ಮಂತೆಯೇ ಬರೆಯಲು ,ನಿಮ್ಮ ನೆನಪಿನ ಬುತ್ತಿಗಳನ್ನು ಓದಲು ಪ್ರಾರಂಬಿಸಿ ಸುಮಾರು ದಿನಗಳಾಗಿವೆ .ಈಗೀಗ ಯೋಚನೆಗಳು ,ಜವಾಬ್ದಾರಿಗಳು ಬರತೊಡಗಿವೆ .ನಾನೂ ಕೊಂಚ ಬದಲಾಗಿದ್ದೇನೆ .ಮೊದಲಿನ ಹುಡುಗಾಟ ಇಲ್ಲ .ಬದಲಾವಣೆ ಆಗಿದೆ .
                         ಅವರವರ ಭಾವಕ್ಕೆ ಎಂದು ಹೇಳುತ್ತಾರಲ್ಲ ...ಹಾಗೆ !!      .ಎಲ್ಲರನ್ನು ಮಾತಾಡಿಸುತ್ತಿದ್ದೆ .ಈಗ ಮಾತಾಡಿಸಿದವರನ್ನು ಮಾತ್ರ ಬೇಕಾದಷ್ಟು ಮಾತಾಡಿಸಿ ಸುಮ್ಮನಾಗುತ್ತೇನೆ.ಆಶ್ಚರ್ಯ ಎನಿಸುತ್ತೆ.ಪ್ರಬುದ್ದ ಯೋಚನೆಗಳೇ ಬರುತ್ತವೆ .silly silly ಜಗಳಗಳಿಲ್ಲ .ಕೋಪ ಬೇಸರಗಳಿಲ್ಲ ..ಅಮ್ಮನ ಜೊತೆ ಕಲಹವಿಲ್ಲ .ಮನೆಯಲ್ಲಿ ದಿನಕ್ಕೊಮ್ಮೆ ಅಮ್ಮ ಹೇಳುತ್ತಿದ್ದರು "ನಿಧಾನ ಮಾತಾಡು ,ಚೀರಾಡಬೇಡ" ಎಂದು.ಆದರೆ ಇವತ್ತು ಮಾತುಗಳೇ ಕಡಿಮೆಯಾಗಿವೆ ,ಇನ್ನು ಹಾರಾಟವೆಲ್ಲಿ !!ಅದ್ಯಾಕೋ ಗೊತ್ತಿಲ್ಲ ಮಾತಿಗಿಂತ ಮೌನ ಇಷ್ಟ ಆಗ್ತಾ ಇದೆ .ಕನಸುಗಳ ಜಗತ್ತಿನಲ್ಲಿ ನನ್ನದೊಂದು ಪುಟ್ಟ ಮನೆಯನ್ನು ಮಾಡಬೇಕೆಂದಿದ್ದೇನೆ ..ವಾಸ್ತವದ ಜಗತ್ತಿಗಿಂತ ನನ್ನ ಪುಟ್ಟ ಕನಸಿನ ಜಗತ್ತು ಬಹು ಸುಂದರ ,

ರಾತ್ರಿ 12 ಆಯ್ತು. ತಲೆ ಇರದ ಕನಸಿನ ರಾಜಕುಮಾರ ಬರುವ ಸಮಯ.ಅವನಷ್ಟಕ್ಕೆ ಅವನು ಮಾತಾಡುತ್ತಿರುತ್ತಾನೆ ಕಣ್ಣಲ್ಲೇ ನಗುತ್ತಾನೆ !! .ಈ ಮೌನದ ರಾತ್ರಿಯಲ್ಲಿ ನನ್ನೊಳಗಿನ  ಈ  ನಾನು  ನನಗೇನೋ ಇಷ್ಟ ಆಗಿದ್ದೇನೆ .ಇನ್ನು ನನ್ನ ಕನಸಿನ ಪ್ರಪಂಚದಲ್ಲಿ ಒಂದಿಷ್ಟು ಮಾತಾಡುತ್ತೇನೆ .

10 comments:

 1. ಬರವಣಿಗೆ ಮುಂದುವರೆಸಿ , ಬರಹ ಶೈಲಿ ಚೆನ್ನಾಗಿದೆ. ಮತ್ತಷ್ಟು ಉತ್ತಮ ಬರಹ ನಿಮ್ಮಿಂದ ಬರಲಿ. ಬ್ಲಾಗ್ ಲೋಕದಲ್ಲಿ ಉತ್ತಮ ಸಾಧನೆ ಮಾಡಿ.

  ReplyDelete
 2. ಧನ್ಯವಾದಗಳು ...

  ಭೇಟಿ ನೀಡಿ ಮಾರ್ಗದರ್ಶನ ಮಾಡುತ್ತಿರಿ

  ReplyDelete
 3. ಹೌದಲ್ದಾ.. ಕಲ್ಪನೆಗೂ ವಾಸ್ತವಕ್ಕೂ ಎಷ್ಟೊಂದು ವ್ಯತ್ಯಾಸ..
  ನಿಮ್ಮಾ ಕನಸಿನ ರಾಜಕುಮಾರ ಬರೋ ಹೋತ್ತಾತು ನೋಡಿ ಈಗ ಮತ್ತೆ :-)..

  ಸಿದ್ದಾಪುರ ಅಂದ ತಕ್ಷಣ ನೆನ್ಪಾತು.. ನನ್ನ ಸಹಪಾಠಿ ಒಬ್ಬ ಮತ್ತೆ junior ಒಬ್ಳು ಸಿದ್ದಾಪುರದವು ಇದ್ದಿದ್ದ.. ಅವ್ರೂ ಹಿಂಗೇ ಕವಿತೆ,ಕಥೆ ಬರೀತಿದ್ದ..

  ಚೆಂದದ ಬ್ಲಾಗು.. ಹಿಂಗೇ ಬರೀತಿರಿ :-)

  ReplyDelete
 4. ಧನ್ಯವಾದಗಳು .

  ಕನಸಿನ ರಾಜಕುಮಾರನ ಜೊತೆ ಮಾತಿಲ್ಲ ಕತೆಯಿಲ್ಲಾ ...........

  ಹಾಗಾದ್ರೆ ಸಿದ್ದಾಪುರದವು ಭಾವಜೀವಿಗಳು ,ನಿಮ್ಮ ಸ್ನೇಹಿತರ(ಸಿದ್ದಾಪುರದ ) ಬರಹಗಳ ಲಿಂಕನ್ನು ಪರಿಚಯಿಸಿ pls .

  ಬ್ಲಾಗ್ ಗೆ ಭೇಟಿ ನೀಡಿ ತಪ್ಪುಗಳನ್ನು ತಿದ್ದುತ್ತಿರಿ .

  ReplyDelete
 5. Chanagide akka bardiro shayli.. nanig ansiddu ondkade bardidbeku ankotidini..... Thanks for inspiring..

  ReplyDelete
 6. nangunoo baryo abhyaasa hosade tamma ,,inspiration sigo ashtara mattige baryak baralla ,,anyhw thanks fr d connect ..blog ge bartiru

  ReplyDelete
 7. idondu blogu nimma siddapuraddu .. http://naageechidakavana.blogspot.in/

  ReplyDelete
 8. chennagide ,,,ishtavaayitu kooda ,,tilisiddakke dhanyavaadagalu

  ReplyDelete
 9. ಕನಸಲ್ಲಿ ಬರುವ ಸನ್ನಿವೇಶಗಳೇ ಹಾಗೆ..ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ....ಸುಂದರ ಸುಲಲಿತವಾಗಿವೆ ನಿಮ್ಮ ಬರಹಗಳು..

  ReplyDelete