Tuesday, December 25, 2012

ನೀನ್ಯಾರೋ ಹುಡುಗಾ ...?!

ತುಂಬಾ ದಿನದಿಂದ ಇದೊಂದು ಪ್ರಶ್ನೆ ತಲೆ ತಿನ್ನುತ್ತಿತ್ತು ಗೆಳೆಯಾ ..ಯಾರೆದುರಿಗೋ ನನ್ನ ಕಣ್ಣೀರನ್ನು ಹಂಚಿಕೊಂಡಿರಲಿಲ್ಲ .ಆದರೆ ಅಂದು ಅಮ್ಮ ಬೇಕು ,ತುಂಬಾನೇ ನೆನಪಾಗ್ತಾ ಇದಾಳೆ ಎಂದು ಪಾಪು ತರ ಹಠ ಮಾಡಿದ್ದೆ ನಿನ್ನೆದುರು .ಆ ರಾತ್ರಿ ಅದೆಷ್ಟು ಸಮಾಧಾನಿಸಿದ್ದೆ ನೀ !!...
ಅವತ್ತೇ ಅಂದುಕೊಂಡಿದ್ದು ,ನನಗೆ ನಿನ್ನೊಟ್ಟಿಗಿರುವುದು ಬರಿಯ ಸ್ನೇಹವಲ್ಲ ..ನನ್ನ ಒಲವಿಗೆ ಕಣ್ಣ ಹನಿಗಳು ಸಾಕ್ಷಿಯಾಗಿತ್ತು .
ಈಗಲೂ ರೆಗಿಸ್ತೀಯಾ 'ಇವತ್ತು ಅಮ್ಮ ಬೇಡ್ವೆನೇ ನಿಂಗೆ .,ಮದ್ವೆ ಆದಮೇಲೆ ಏನ್ ಮಾಡ್ತೀಯಾ ?ಪಾಪ ಕಣೆ ನಿನ್ ಹುಡುಗ .ಸ್ವಲ್ಪ ಅವ್ನಿಗೂ ಪ್ರೀತಿ ಗೀತಿ ತೋರ್ಸು 'ಅಂತೆಲ್ಲಾ..  ನಕ್ಕು ಸುಮ್ಮನಾಗಿದ್ದೆ .ಈಗ ಗೊತ್ತಾಗಿದೆ ಗೆಳೆಯ  ನನ್ನ ಹುಡುಗನ ಬಗ್ಗೆ ನಿನಗ್ಯಾಕೆ ಅಷ್ಟೊಂದು ಕೇರ್ ಎಂದು !

ನೆನಪಿದ್ಯಾ ನಿಂಗೆ ..  ಅಂದು campus ನಲ್ಲಿ rag ಮಾಡಿದ್ದಾಗ ನಾ ಮಾಡಿದ್ದ ಸಿಟ್ಟು ..ತಪ್ಪನ್ನಿಟ್ಟುಕೊಂಡು sorry ಕೇಳದ ನಿನ್ನ ಮೇಲೆ ಮುನಿಸಿಕೊಂಡಿದ್ದೆ .ನಿನ್ನ attitude ನಾ ಮೊದಲ ಪರಿಚಯ ಆಗಿತ್ತು ಅವತ್ತು .. ಅಮ್ಮ ಫೋನ್ ಮಾಡಿ ಮಗನ ಕಿಲಾಡಿಗಳಿಗೆ sorry ಅಂದಿದ್ದರು .'ಬೇಸರಿಸದಿರು ಪುಟ್ಟಿ ,ನನ್ನ ಮಗ ಸ್ವಲ್ಪ ತುಂಟ ..ನಿನ್ನೆ ನಿಂಗೆ rag ಮಾಡಿದ್ದು ,ನೀನು ಬೇಸರಿಸಿದ್ದು ಎಲ್ಲಾ ತಿಳಿಯಿತು .ನಿನ್ನ ಬೇಸರ ಅವನಿಗೂ ಬೇಸರ ತಂದಿದೆ ,'ಎಂದೆಲ್ಲಾ ನಿನ್ನ ಬಗ್ಗೆ ,ನಿನ್ನ attitude .ego  ಗಳ ಬಗ್ಗೆ ತಿಳಿಸಿದ್ದರು ..ನಂತರ ನೀ sorry ಕೇಳಿದ್ದೆ ಬಿಡು !..ಮತ್ತೆ ಸಿಕ್ಕಿತ್ತು ನಿನ್ನ ಸ್ನೇಹ ..
ಒಳ್ಳೆಯ ಗೆಳೆಯನಾದೆ .ಅದೆಷ್ಟೋ ಮಾತುಗಳು ,ಕೀಟಲೆಗಳು ,proposals ಗಳ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಿದ್ದೆವು !.ಅಂದು ನಾ committed ಜನಗಳಿಗೆ ಬೈದು ಲೆಕ್ಚರ್ ಹೇಳಿದ್ದೆ ನಿಂಗೆ ..ಅವರವರ ಜೀವನ ಬಿಡು ..ಯಾರೋ ಅಷ್ಟೊಂದು ಆತ್ಮೀಯತೆ ,ಪ್ರೀತಿ ತೋರಿಸುತ್ತಾರೆ ಎಂದಾಗ ಯಾಕ್ reject ಮಾಡಬೇಕು ಎಂದು ಒಂದೇ ಲೈನ್ ಲಿ ನಿನ್ನ ಅಭಿಪ್ರಾಯ ಮುಂದಿಟ್ಟಾಗ  ನಿಜಕ್ಕೂ ಮೆಚ್ಚಿದ್ದೆ !..
'ನಿನ್ನ BE ಲೈಫ್ ಮುಗಿಯೋ ತನಕ ನಿನ್ನನ್ನು ಯಾವ ಹುಡುಗಿಯೂ ನೋಡೋಕೆ ಬಿಡಲ್ಲ ನಾನು ,ಕ್ಯಾಂಪಸ್ ಲಿ ಕೈ ಕೈ ಹಿಡಿದು ಓಡಾಡೋಕೆ ಆಗಲ್ಲ ನಿಂಗೆ ,no crush ,no touch ,no warmth of love ,ನಿಜವಾಗಲು ಪಾಪ ಅನಿಸ್ತಿದೆ ..ಇದ್ಯಾವ್ದು ಇಲ್ದೆ ಸ್ಟೂಡೆಂಟ್ ಲೈಫ್ ಮುಗಿಸ್ಬೇಕಲ್ವೋ ನೀನು 'ಅಂದಾಗ calm ಆಗಿ ಬೇರೆ ಹುಡುಗಿ ಯಾಕೆ ಮುದ್ದಿನ  ಗೆಳತಿ ನೀ ಇರುವಾಗ ಎಂದು ನನ್ನ ಬಳಿಯೇ ತಂದಿದ್ದೆ !!ಅದೊಂದು ಸಲ ಭಾವುಕನಾಗಿ ಹೇಳಿದ್ದೆ ..ದಿನದಿಂದ ದಿನಕ್ಕೆ ನಿನ್ನನ್ನು ತುಂಬಾನೇ ಹಚ್ಚಿ  ಕೊಳ್ಳುತ್ತಿದ್ದೇನೆ ಗೆಳತಿ ,ನೀನು ಮಾತಾಡದೆ ಮುನಿಸಿಕೊಂಡ ದಿನ ತುಂಬಾನೇ ಬೇಸರ..ಇದಕ್ಕೆ ಏನೆಂದು  ಕರೆಯಲಿ ಹೇಳು  ಅಂತೆಲ್ಲ ಕೇಳಿದ್ದೆ ...ಅವತ್ತು ಖಾತರಿ ಆಗಿತ್ತು ನಿನಗೂ ಒಲವಿದೆ ಎಂದು !..ನೀನೇ  ಹೇಳಲಿ ಎಂದು ಸುಮ್ಮನಾದೆ ..
ತಮಾಷೆ ಜಗಳವಾಗಿ ನನ್ನ  ಕೋಪ ನಿನ್ನ ಸಿಟ್ಟಿಗೆ ಸೇರಿ ದಿನಕ್ಕೆರಡು ಸಲ 'ನಿನ್ನೊಂದಿಗೇನು ಮಾತು ಹೋಗೋ 'ಎಂದು ಎನ್ನುತ್ತಿದ್ದ  ಕಾಲ ಅದು .ಬಹುಶಃ ನಿನಗೂ ನನ್ನೊಲವು ಫೀಲ್ ಆಗಿತ್ತೇನೋ .ಅದೊಂದು ಫೈನ್  ರಾತ್ರಿ ಪ್ರೋಪೋಸೆ ಮಾಡಿದ್ದೆ ನೀ ....

"you have given me life in everything i do,your smile warms my heart when i'm feeling sad or doubting my place in dis world , your words speak about how supportive you are in everything i do,ypur love and care fills me with the motivation i need...
you completed the part of me that i struggle to be perfect within myself,i'm incomplete without you!
dear ...i'm in love ...wid you...and my feelings are more than words can explain...tell me ..wil you b mine ??"
 ದಿನವೂ ರೇಗಿಸುತ್ತಾ ಕಾಲೆಯುತ್ತಿದ್ದ ಗೆಳೆಯ ನೀನೇನಾ?   ಎನಿಸದಿರಲಿಲ್ಲ .. ಹೀಗೆಲ್ಲ ಮಾತಾಡೋಕೂ ಬರುತ್ತೆ ನಿಂಗೆ !!
ಸುಮ್ಮನೆ ಸತಾಯಿಸಿದ್ದೆ ..ಪಾಪ ಕಣೋ ನಿನ್ ಹೆಂಡ್ತಿ ಗೆ ಏನ್ ಹೇಳ್ತೀಯಾ ಆಮೇಲೆ ಎಂದು ..ನನ್ನ ಪ್ರೀತಿ ನೀನು ಕಣೋ .ನಿನಗೂ ಗೊತ್ತು ಅದು ..ನಿನ್ನ ಪ್ರೀತಿ ,ನಾನಿದ್ದೇನೆಂಬ ಪ್ರೋತ್ಸಾಹ ,ಆತ್ಮೀಯತೆಗೆ ಯಾವತ್ತೋ ಕಳೆದು ಹೋಗಿದ್ದೆ  ನಿನ್ನಲ್ಲಿ !!... ಹೇಳಿರಲಿಲ್ಲ ಅಷ್ಟೇ ..
ಈಗಷ್ಟೇ ಬದುಕು ಕಟ್ಟಿಕೊಳ ಹೊರಟಿದ್ದೀಯ ..ನಿನ್ನ ಬದುಕಿನ ಪಾಳುದಾರಲಾಗಿ  ಬಾ ಎಂದು  ಪ್ರೀತಿಯ ಆಮಂತ್ರಣವನ್ನೂ ಕೊಟ್ಟಿರುವೆ !..ಗೆಳತಿ  ಎಂಬುದನ್ನು 'ಮುದ್ದು 'ಎಂದು replace ಮಾಡಿರುವೆ ನನ್ನ permission ಕೆಳದೇನೆ !! ಗೆಳೆಯ ಬೇಸರವಿಲ್ಲ ..ನಾನು ನಿನ್ನವಳು ...ಇಷ್ಟು ಮಾತ್ರ ಹೇಳಬಲ್ಲೆ ,,
i din't felt like this yet...
i don know what it is...
i cant able to say also..
its..
i love u..!
thanks for being mine ..
ಸ್ನೇಹಕ್ಕೊಂದು ನಾಮಕರಣ ಮಾಡಿದ್ದೀಯ ..ಬೆಚ್ಚಗಿನ ಆಪ್ತತೆ ನೀಡಿದ್ದೀ .. ನನ್ನ ಚಂದಿರ ನೀ ..ತಾರೆಗಳ ತೋಟವೇ ನಿನ್ನರಮನೆ ..ನಿನ್ನೀ ಪ್ರೀತಿಯ ನೋಟ ನನಗೊಂದು ಭರವಸೆ ನೀಡಿದೆ ..ಏನೆಂದು ಗೊತ್ತೇ ಗೆಳೆಯಾ ...??
ನೀನೆಂದೂ ನನ್ನವನೆಂದು ....


ಮನದೊಳಗೆ ಹಾದು ಹೋದ ಮಧುರ ಭಾವಕ್ಕೊಂದು ಮಾತು ಸಿಕ್ಕಂತಿತ್ತು ನಿನ್ನೀ ಒಲವು ..

10 comments:

  1. ತಿರುಗುಬಾಣ ಚಿತ್ರದಲ್ಲಿ ಒಂದು ಹಾಡಿದೆ...ಸ್ನೇಹಕ್ಕೆ ಒಂದೇ ಮಾತು ಹೃದಯಗಳು ಆಡೋ ಮಾತು...ಈ ಮೌನ ಇನ್ನು ಏತಕೆ.." ಈ ಸಾಲುಗಳು ನಿಮ್ಮ ಲೇಖನ ಓದಿದಾಗ ನೆನಪಲ್ಲಿ ಹಾಡು ಹೋದವು...ಆ ಗೆಳೆತನದ ಒರೆತವೆ ಒಂದು ಬಗೆಯ ಆಹ್ಲಾದಕರ ಅನುಭವ...ಸುಲಲಿತವಾಗಿವೆ ಪದಗಳ ಜೋಡಣೆ...ವಾಕ್ಯ ರಚನೆ.ಮಧ್ಯೆ ಬರುವ ಇಂಗ್ಲಿಷ್ ವಾಕ್ಯಗಳು ಲೇಖನದ ಗೋಡೆಗಳನ್ನು ಗಟ್ಟಿಗೊಳಿಸಿದೆ..ಅಭಿನಂದನೆಗಳು

    ReplyDelete
  2. ಭಾಗ್ಯಮ್ಮಾ ...
    ಕಣ್ಣೇದುರು ಬಂದು ಹೇಳಿದಂತಿದೆ ಕಣೆ..
    ನಿನ್ನ ಆಪ್ತವಾದ ಬರವಣಿಗೆಯ ಶೈಲಿ ತುಂಬಾ ಇಷ್ಟವಾಗುತ್ತದೆ..
    ಮನಸ್ಸಿನ ಮಾತುಗಳಿಗೆಲ್ಲಾ ಶಬ್ಧಗಳು ಸಿಗುವುದು ತುಂಬಾ ಕಷ್ಟ..
    ಅದು ಹೇಗೆ ಬರೆಯುವೆಯೋ ನಾ ಕಾಣೆ..
    ನಾ ಅಂತೂ ನಿನ್ನ ಬರವಣಿಗೆಯ ಅಭಿಮಾನಿಯಾದೆ...
    ಚಿಕ್ಕವಳಾದದೂ ನಿನ್ನ ಬರವಣಿಗೆಯ ಶೈಲಿಗೊಂದು ಸಲಾಮ್..ಬರೀತಾ ಇರು...ಓದುವುದೇ ನಮ್ಮ ಕೆಲಸ..
    ತುಂಬಾ ಚೆನ್ನಾಗಿದ್ದು ಪುಟ್ಟಿ..
    ಮುಂದುವರೆಸು..
    ನಮಸ್ತೆ...

    ReplyDelete
  3. ಚೆಂದಿದ್ದು ಭಾಗ್ಯ.
    ತಪ್ಪು ಹುಡ್ಕಕ್ಕೆ ಹೇಳಿ ಹುಡುಕಿದ್ರೂ ಸಿಗ್ಲೆ ನಂಗೆತೂ :-)
    ಹೇಳ್ಲೇ ಏಕು ಅಂದ್ರೆ your ಅನ್ನೋದ್ರ ಬಗ್ಗೆ ypur ಅಂತಾಯ್ದು ಒಂದು ಕಡೆ !! ಅಷ್ಟೆ.

    ಕಾಲೇಜಿನ ೪ ವರ್ಷ ಅದೇ ಗೆಳೆಯರ ಜೊತೆಗೆ ಕಳೆದಿರ್ತೀವಿ. ಅಷ್ಟು ದೀರ್ಘ ಕಾಲ ಜೀವನದ ಬೇರ್ಯಾವ ಕಾಲಘಟ್ಟದಲ್ಲೂ ಸಿಕ್ಕಿರಲ್ಲ. ಅವಾಗ್ಲೇ ಮೂಡೋ ಮರೆಯದ ಸ್ನೇಹ, ಪ್ರೀತಿ ಇವೆಲ್ಲಾ ಒಂತರಾ ಮಧುರ ನೆನಪುಗಳು. ಇದ್ಯಾವುದೂ ಇಲ್ಲದೆಯೂ ಆ ೪ ವರ್ಷ ಕಳೆದವರು ಇದ್ದರೂ ಪ್ರತಿಯೊಬ್ಬರಿಗೂ ಈ ತರದ ಅನುಭವ ಕಂಡು ಕೇಳಾದರೂ ಗೊತ್ತಿರುತ್ತದೆ. ಪಾತ್ರಗಳು ನಾವೇ ಅನ್ನುವಷ್ಟು ಚೆಂದದ ನಿರೂಪಣೆ. ಬರೀತಿರು ಹಿಂಗೆ :-)

    ReplyDelete
  4. ನಿಮ್ಮ ಲೇಖನದಲ್ಲಿ ಸ್ನೇಹ ಮತ್ತು ಪ್ರೀತಿಯ ಬಗ್ಗೆ ವಿಶ್ಲೇಷಣೆ ಚೆನ್ನಾಗಿ ಮೂಡಿಬಂದಿದೆ. ನನ್ನ ಕಾಲೇಜು ದಿನಗಳ ನೆನಪಾಯ್ತು.ನಿಮ್ಮ ಬರಹ ಹೀಗೆ ಮುಂದುವರೆಯಲಿ. ಆಸ್ವಾದಿಸಲು ನಾವಿದ್ದೇವೆ.

    ReplyDelete
  5. ಭಾಗ್ಯ ಮನಸಿನ ಅಪ್ಯಾಯತೆ ತಾಕಲಾಟಕ್ಕೆ ಗೆಳೆಯನೆಂಬ ಎದುರು ಆಟಗಾರ.. ಅದೂ ನಲುಮೆಯ ನವಿರು ಹೊಡೆದಾಟ...ಚನ್ನಾಗಿದೆ ಲೇಖನ,,, ಮುಂದುವರೆಯಲಿ ಪಯಣ... ನಾವೂ ಇದ್ದೀವಿ ಜೊತೆಗೆ ...ಪ್ರೋತ್ಸಾಹಕ್ಕೆ.

    ReplyDelete
  6. ಚಂದ ಬರ್ದಿದ್ದಿ ಕೂಸೇ...ಈ ಕೂಸು ಕೂಡ ಪ್ರೀತಿ ಬಗ್ಗೆ ಅದೆಷ್ಟು ಮುದ್ದಾಗಿ ಬರೆಯುತ್ತೆ...ಖುಷಿಯಾಯ್ತು..
    ಮೊದಮೊದಲ ಪ್ರೀತಿಯ ನವಿರು ನಿರೂಪಣೆ ಮಸ್ತಾಗಿ ಮಾಡಿದ್ದಿಯಾ..
    ಓದುತ್ತಾ ಹೋದಂತೆ...ಎಲ್ಲೊ ಒಂದು ಕಡೆ ನಮ್ಮೊಳಗೂ ನಿನ್ನ ಮಧುರ ಭಾವನೆಯನ್ನು ಅಚ್ಚಾಗಿಸುವಲ್ಲಿ ಗೆದ್ದಿದ್ದಿಯಾ...

    ಸೂಪರ್...


    ReplyDelete
  7. ಅಮ್ಮನ ನೆನಪನ್ನು ಅಳಿಸಬಲ್ಲ ಅಂತಹ ಬಾಂಧವ್ಯ ಬೇಗ ಪ್ರಾಪ್ತವಾಗಲಿ ಗೆಳತಿ. ಒಳ್ಳೆಯ ನೆನಪುಗಳನ್ನು ಕೆಣಕುವ ಬರಹ.

    ReplyDelete
  8. ಸುಂದರ.
    "ಸ್ನೆಹದ ಕಡಲಲ್ಲಿ, ಪ್ರಿತಿಯ ದೋಣಿಯಲಿ ಸಾಗುತಿರೆ ಜೀವನ,
    ಗೆಳೆಯ ನೀ ಹೀಗೆ ಕಾಡುತಿರೆ ನಾನಂತು ನಿರುಪಾಯ" ಎನ್ನುವಂತಿದೆ. ನಿಮ್ಮ ಬ್ಲಾಗಿನ ಶೀರ್ಶಿಕೆ ಈ ಬರಹಕ್ಕೆ ತುಂಬಾ ಹತ್ತಿರವಾಗಿದೆ.ಪ್ರೀತಿಯ ಸಿಂಚನ ಸುಮಧುರವಾಗಿದೆ.

    ReplyDelete
  9. ನಂಗಂತು ತುಂಬಾ ಇಷ್ಟ ಆಯ್ತು. ಇದು ನಾನು ನಿಮ್ಮ ಬ್ಲಾಗ್ನಲ್ಲಿ ಓದುತ್ತಿರುವ ಮೊದಲ ಬರಹ... ತುಂಬಾ ಮೆಚ್ಚಿದ್ದೇನೆ. ಆ ಪಾತ್ರಗಳು ಹಾಗೆ ನವಿರಾಗಿ ಓದಿಸಿಕೊಂಡು ಹೋಯ್ತು..ಹೀಗೆ ಬರಿತಾ ಇರಿ...... :)

    ReplyDelete
  10. ಸ್ನೇಹದ ಆಂತರ್ಯದಲ್ಲಿ ಹುದುಗಿದ್ದ ತಾಯಿಯನ್ನೇ ಮರೆಸುವ ಪ್ರೀತಿಯನ್ನು ಕೊಡಬಲ್ಲ ಅದ್ಭುತ ಶಕ್ತಿಯಿರುವ ಗೆಳೆಯನ ಒಲವನ್ನು ಒಪ್ಪಿ ನೀ ಗೆದ್ದೆ... ಕೆಲವು ಹೆಣ್ಣುಮಕ್ಕಳು ಆಂತಹ ಗೆಳಯರನ್ನು "best friend"ಗಳಾಗೇ ಉಳಿಸಿಕೊಂಡು ಅವರ ಒಲವನ್ನು ಕೊನೆವರೆಗೂ ಗುರುತಿಸದೆ, ಯಮಹಾ ಗಾಡಿಯಲ್ಲಿ wheely ಮಾಡುವ ಲುಚ್ಛಾಗಳ ಶೋಕಿಯ ಡವ್ವಿಗೆ ತಮ್ಮ ಪ್ರೇಮವನ್ನು ಧಾರೆಯೆರೆಯುತ್ತಾರೆ... ಕೆಲವು ಗಲಾಟೆಗಳು, ಗೋಜಲುಗಳು, ಕೆರೆತಗಳು, ಕೊರೆತಗಳ ಬಳಿಕ ತೆಪ್ಪಗೆ ತಮ್ಮ ತಂದೆ-ತಾಯಿ ತೋರಿಸಿದ software engineerಅನ್ನು ಮದುವೆಯಾಗಿ Americaಗೆ parcel ಆಗುತ್ತಾರೆ... ಪ್ರೀತಿ ಎನ್ನುವುದು ಅವರಿಗೆ ಇನ್ನು ಎಂದೂ ಸಿಗದ ಮಾಯಾಮೃಗವಾಗೇ ಉಳಿದುಬಿಡುತ್ತದೆ.

    ReplyDelete