Friday, December 28, 2012

ನಿಮ್ಮ ಆತ್ಮೀಯತೆಗೊಂದು ಸಲಾಮ್

ಬೆಳೆಗ್ಗೆ ಬೆಳಿಗ್ಗೆ exam !...BE ಲೈಫ್ ನಾ ಮೊದಲ ಪರೀಕ್ಷೆ ಬರೆಯ ಹೊರಟಿದ್ದೆ ..ಪರೀಕ್ಷೆ ಆದ್ರೂ daily routine ನಾ ಹೆಂಗೆ ಬಿಡೋಣಾ ಹೇಳಿ ?..ಫೇಸ್ ವಾಷ್ ಮಾಡೋಕೂ ಮುಂಚೆ ಫೇಸ್ ಬುಕ್ ನೋಡ್ಬೇಕು ..ದೇವ್ರಿಗೆ ಹಾಯ್ ಹೇಳೋಕೂ ಮುಂಚೆ ಫೇಸ್ ಬುಕ್  ಗೆ ಗುಡ್ ಮಾರ್ನಿಂಗ್ ಹೇಳಬೇಕಲ್ವಾ ?..ಹಂಗೇನೆ ನಿನ್ನೇನೂ ಬೆಳಿಗ್ಗೆ ೪ ಕ್ಕೆ ಸಿಸ್ಟಮ್ ಆನ್ ಆಗಿತ್ತು!
ಒಂದಿಪ್ಪತ್ತು notifications ,ಒಂದೈವತ್ತು messages ಗಳು ಅಣುಕಿಸುತ್ತಿತ್ತು .
ಯಪ್ಪಾ ..ಇದೇನಪ್ಪಾ ಅಂದುಕೊಂಡೆ ..ಆಮೇಲೆ ನೆನಪಾಗಿದ್ದು ..ನಂಗೂ ಹದಿನೆಂಟ್ ಆಯ್ತು ನಿನ್ನೇಗೆ ಅಂತ .೦ ೦
ಮರೆತೇ ಹೋಗಿತ್ತು ನೋಡಿ ..ಪರೀಕ್ಷೆಯ ಕಾರುಬಾರಿನಿಂದ mobile ಎಂಬ ಮುದ್ದು ಗೆಳೆಯ silent  ಆಗಿದ್ದ ೨ ದಿನದಿಂದ !..ಕಷ್ಟ ಪಟ್ಟು ಸೈಲೆಂಟ್ ಮಾಡಿದ್ದೆ ಬಿಡಿ .

'ಗೆಳೆತನ 'ದ ಮೊದಲ ಆತ್ಮೀಯತೆಯನ್ನು ತೋರಿಸಿದ್ದ ಗೆಳತಿ ಅರ್ಚನಾ ಮಾಡಿದ್ದ wishes ಗೆ ಕಣ್ಣಲ್ಲಿ ಮಾತು ಬಂದಿತ್ತು .this is the sentiment i have with u dear friend..!!
ನಿನ್ನ ಪರ್ಮಿಷನ್ ಕೇಳದೇ ನಿನ್ನ ಮಾತುಗಳನ್ನ ಇಲ್ಲಿ ಜೋಪಾನ ಮಾಡುತ್ತಿದ್ದೇನೆ ..sorry ಕೇಳು ಅನ್ಬೇಡ .. ನಾನ್ ಕೇಳಲ್ಲ..


'ನಲ್ಮೆಯ ಗೆಳತೀ ...
ಐದಾರು ತಿಂಗಳುಗಳೇ ಕಳೆದು ಹೋತು ನಿನ್ನ ನೋಡಿ !!..ದಿನಪೂರ್ತಿ ಹರಟಿದ್ದು ,ಜೊತೆಯಾಗಿ ನಕ್ಕಿದ್ದು,ಕುಣಿದಿದ್ದು ,ನಲಿದಿದ್ದು ..ಎಲ್ಲಾ ಮೊನ್ನೆ ಮೊನ್ನೆ ಅಂತಿದ್ದು ..ವಾಸ್ತವ ಮರೆತು ನಿನ್ನೊಟ್ಟಿಗೆ ಗತದಲ್ಲೇ ಇರುವ ಬಯಕೆ ನಂದು !ಹಮ್ ...ಮುಂದೆ ಹೋಗ್ಲೇ ಬೇಕು ..ಜೀವ್ನಾ ನೋಡ್ಲೆ ಬೇಕು ..ಅಲ್ವಾ ?
ಇಲ್ಲಿ ಪಾನಿಪುರಿ ತಿನ್ನೋವಾಗ , ಮಸ್ತಿ ಮಾಡುತ್ತಿರೋ ಫ್ರೆಂಡ್ಸ್ ಗ್ರೂಪ್ ಕಂಡಾಗ ,boaring lectures ಕೇಳೋವಾಗ ..ದಿನಕ್ಕೊಮ್ಮೆ ಆದ್ರೂ ನೆನಪಾಗ್ತೀಯಾ ..ಅದ್ಯಾವ ಪರಿ ಮನದೊಳಗೆ ಇಳಿದ್ಯೋ ನಾ ಕಾಣೆ ..
hischool ಮೊದಲ ದಿನದಿಂದ ಹಿಡಿದು  ಮುಗ್ಯೋ ತನಕ ನಾವ್ ಮಾಡಿರೋ ಮಸ್ತಿ ಗೆ ಲೆಕ್ಕಾನೇ ಇಲ್ವಲ್ಲೆ ಕೂಸೇ ..ಕಾರಿಡಾರ್ ನಲ್ಲಿ juniars ಎದ್ರು dummy ಮಾಡೋದು ,ನಾಟಕ ,ಪ್ರಾಕ್ಟೀಸ್ ,ಸ್ಪೋರ್ಟ್ಸ್ ,ಅದೂ ಇದು ಅಂತ  ಕ್ಲಾಸ್ ಬಂಕ್ ಮಾಡೋದು ...ಪಕ್ಕಾ ಹುಡುಗರ್ ತರಾನೇ ಆಡ್ತಿದ್ವಿ ..ನಿದ್ದೆ ಬಂದ್ರೆ ಎಳ್ಸು ಅಂತ ಫಸ್ಟ್ ಬೆಂಚ್ ನಲ್ಲೆ ನಿದ್ದೆ ಮಾಡ್ತಿದ್ದಿದ್ದು ,ಸುಮ್ನೆ ನಿಂಗೆ smile ಮಾಡೋ ಹುಡುಗರ ಹೆಸರು ಹೇಳಿ ದಿನಪೂರ್ತಿ ಕಾಲೆಳೆದು ಗೋಳು ಹೊಯ್ಕೊಳೋದು almost language ಕ್ಲಾಸ್ ಗಳು ಕ್ಯಾಂಟೀನ್  ನಲ್ಲಿ! ..ನೀ ಮಾತಾಡೋಕೆ ಸಿಗೋದೆ ಆಗ ಮಾತ್ರ ..
ಇದೆಲ್ಲಾ ಗೋಲ್ಡನ್ ಡೇಸ್ ಅಂತಾರಲ್ಲ ಅದು ..ಪ್ರತಿ ದಿನ ಕಳೆದ ಮೇಲೆ save changes ಅನ್ನೋ option  ಇದ್ದಿದ್ರೆ  ಎಷ್ಟು ಚಂದ ಇರ್ತಿತ್ತು ಅಲ್ವಾ ?

ಈಗ ಇದ್ಯಾವ್ದು  ಇಲ್ಲ .ಬರಿಯ ಫೇಸ್ಬುಕ್ ,ಫೋನ್ ,skype ಇಷ್ಟೇ ನಿನ್ನ ಭೇಟಿಯ ಡೆಡ್ end ...ಅದೂ ತೀರಾ ಅಪರೂಪ ..ಆದ್ರೂ ಬಿಟ್ಟಿಲ್ಲ ನಿನ್ನ ನಾ ..ಒಂದೇ status ನಲ್ಲಿ ೧೦೦ ಕಾಮೆಂಟ್ಸ್ ಮಾಡೋ ಅಷ್ಟು  ತರಲೆ !ಕಾಲು ಎಳ್ಯೋ ರೇಂಜ್ ಗೆ ಉದ್ದ ಮಾತ್ರ ಅಲ್ಲ ಅಲ್ಲ ..ಸ್ವಲ್ಪ ದಪ್ಪಾನೂ ಆಗಿದ್ದೀಯಾ ..ಇನ್ನೂ ಚಾನ್ಸ್ ಇದೆ ಎಳ್ಯೋಕೆ ..ನಿನ್ನ ಒಲವು ,ನಲಿವು ,ಒಂದು ಮುಗುಳ್ನಗು ,ಒಂದು ಕಂಬನಿಯ ಮೌನದ ಮಾತನ್ನು ನೋಡಿದ ಮೇಲಂತೂ ಬರಿಯ ಗೆಳತಿಯಾಗಿ ಉಳಿದಿಲ್ಲ ..!ಹುಡುಗ ಆಗಿದ್ರೆ ನಿಜವಾಗ್ಲು ನನ್ನೀ ಗೆಳತಿಗೆ propose ಮಾಡ್ತಿದ್ದೆ ..ಹಾ ಹಾ .

ಆದ್ರೂ ನೀನ್ ತುಂಬಾ careless ಕಣೆ ...ಅದೆಷ್ಟು ಮರೆವು ನಿಂಗೆ ..ನೆನಪಿಗೆ ಬಂದಾಗಲೆಲ್ಲಾ ಮುಖದಲ್ಲೊಂದು smile ಬಿಟ್ಟೆ ಹೋಗ್ತೀಯಾ ...!!
really missing a friend like u BHAGO ..
ಪ್ರೀತಿಯ ಗೆಳತಿ ..
ಮತ್ತೊಮ್ಮೆ ಜನುಮ ದಿನದ ಶುಭಾಷಯಗಳು ..
ಚಿರಾಯುವಾಗು "


ಗೆಳತಿ ...ನಿಜಕ್ಕೂ ಟೈಪ್ ಮಾಡೋವಾಗ್ಲೂ ಕಣ್ಣ ಹನಿಗಳು ಇದನ್ನ ಮಬ್ಬಾಗಿಸ್ತಿದೆ ..ನಿನ್ನೀ ಆತ್ಮೀಯತೆ  ,ಸ್ನೇಹಕ್ಕೆ ಎನೇನ್ನಬೇಕೋ ತಿಳಿದಿಲ್ಲಾ ..badly missing you ..
ಇಬ್ಬರಿಗೂ ಬದುಕು ಕಟ್ಟಿ ಕೊಳ್ಳುವ ಕಾತರ ನೋಡು ..


ನಿಂಗೊತ್ತಾ ಗೆಳತಿ ನನ್ನೀ ಬ್ಲಾಗ್ ಲೋಕ ಅದೆಷ್ಟೋ ಆತ್ಮೀಯರನ್ನು ನನ್ನವರನ್ನಾಗಿಸಿದೆ ..ಬರವಣಿಗೆ ಚೆನಾಗ್ ಇಲ್ದೆ ಇದ್ರೂ ಬೆನ್ನು ತಟ್ಟೋ ಅಣ್ಣಂದಿರಾದ ಪ್ರಕಾಶ್ ಜಿ ,azaad ಸರ್ ,ಚಿನ್ಮಯಣ್ಣ ,ಶ್ರೀಕಾಂತ್ ಜಿ, ಶ್ರೀವತ್ಸ ,ಬಾಲು ಸರ್,ಬದರಿ ಸರ್ ,ಪ್ರಶಸ್ತಿ ,ವಿಜಯ್ ಜಿ ..ಇನ್ನೂ ತುಂಬಾ ಮಂದಿ ..ಇವರ ಪ್ರೋತ್ಸಾಹ ಯಾರನ್ನಾದ್ರು ಹುರಿದುಂಬಿಸುತ್ತೆ ...
ನಂಗೆ ಮೊದಲ wishes ಯಾರದು ಗೊತ್ತಾ ..ಪುಟ್ಟಿ ಅಂತಾನೇ ಕರಿತಾರೆ ..ಒಂದ್ ಸಲ ಮಾತಾಡಿದ್ರೆ ಆತ್ಮೀಯರು ಅನ್ನಿಸದೆ ಇರಲ್ಲ ..ನೋಡು .ನನ್ನೆಲ್ಲ ಮಾತಿಗೂ ಇವರದ್ದೊಂದು ಆತ್ಮೀಯ ಪ್ರತಿಕ್ರಿಯೆ ಕಾದಿರುತ್ತೆ ..ನೀನೆ ನೋಡು ಶ್ರೀಕಾಂತ್ ಅಣ್ಣನ ಮಾತನ್ನ ...ನಿಜಕ್ಕೂ ಮನ  ತುಂಬಿ ಬಂದಿತ್ತು ..

"
ಮತ  ಹಾಕಲು ಆಗಬೇಕು ಹದಿನೆಂಟು
ಅಲ್ಲಿಯ  ತನಕ ಸುಮ್ಮನೆ ತಿನ್ನಬೇಕು ಪೆಪ್ಪರಮೆಂಟು 
ಮನೋರಮೆಯಲ್ಲಿ ಇರಬೇಕಾದ ಪುಟ್ಟಿ
ಮಾಯ್ನೋರ್ಮನೆಯ ಭಾಗ್ಯಲಕ್ಷ್ಮಿಯಾಗಿ
ಬ್ಲಾಗಿನಲ್ಲಿ ಭಾಗ್ಯೋದಯಿಸಿರುವ
ಭಾಗ್ಯಾ ಪುಟ್ಟಿ ಹುಟ್ಟು ಹಬ್ಬದ ಶುಭಾಶಯಗಳು
ನಿನ್ನ ಎಲ್ಲಾ ಕನಸುಗಳು ನನಸಾಗಲಿ
ನನಸುಗಳೆಲ್ಲಾ ಸೊಗಸಾಗಲಿ
ಆ ಸೊಗಸಿನಲ್ಲಿ ಪದಗಳ ಭಾವ ಲಹರಿ  ಹರಿಯಲಿ "

ಶ್ರೀಕಾಂತ್ ಜಿ ನನ್ನೆಲ್ಲಾ ಭಾವಕ್ಕೆ ಪ್ರೋತ್ಸಾಹಿಸಿದ್ದೀರಿ ...ಈ ಪ್ರೋತ್ಸಾಹ ನಿರಂತರವಾಗಿರಲಿ ..ತುಂಬಾನೇ ಖುಷಿ ಆಯ್ತು .


ಸ್ವೀಟ್ teen ಮುಗೀತು ಗೆಳತಿ ..ಮುಂದಿನದೆಲ್ಲಾ ಬರಿಯ ಜವಾಬ್ದಾರಿಗಳು ಎಂಬುದನ್ನ ಸೂಕ್ಷ್ಮವಾಗಿ ತಿಳಿಸಿದಂತಿದೆ ..
you both made maa  ಡೇ ..ಹರಸಿ ಹಾರೈಸಿ ಶುಭಾಶಯವನ್ನಿತ್ತ ಎಲ್ರಿಗೂ ಇಲ್ಲಿಂದ ಧನ್ಯವಾದ ಹೇಳ ಹೊರಟಿದ್ದೇನೆ ...

ಇನ್ನೊಂದು ತಿಂಗಳು ಬರಿಯ exam ಗಳದ್ದೇ ಕಾರುಬಾರು ..ರೂಟೀನ್ ಚೇಂಜ್ ..ಪುಸ್ತಕಗಳ ಜೊತೆ ಇನ್ನಾದ್ರು ಮಾತಡ್ಲೇ ಬೇಕು ..ಕಷ್ಟ ಸುಖ ಮಾತಾಡ್ಕೊಂಡು ಮತ್ತೆ ವಾಪಸ್ ಆಗ್ತೀನಿ ಇನ್ನೊಂದು ತಿಂಗಳಲ್ಲಿ ..

ಹಂಗೆ ಸುಮ್ನೆ ಒಂದ್ wish ಮಾಡ್ಬಿಡಿ exam ಚೆನಾಗ್  ಆಗ್ಲಿ ಅಂತ ..


ಮತ್ತೆ ಸಿಗೋಣಾ ....
14 comments:

 1. ಭಾಗ್ಯ...ಹೊಸವರ್ಷದ ಹಾರ್ದಿಕ ಶುಭಾಶಯಗಳು...
  ಬ್ಲಾಗ್ ಲೇಖನ ವಿಭಿನ್ನ ಗೆಳತಿಯ ಕಳಕಳಿ..ಸಮೂಹ ಮಾಧ್ಯಮದ ನಂಟು ಎಲ್ಲಾ ಭಾವನೆಗಳ ಹೂರಣ...

  ReplyDelete
 2. ತುಂಬಾ ಚನ್ನಾಗಿದೆ....

  ಎಷ್ಟೋ ಸಲ ನಮ್ಮ ಹುಟ್ಟು ಹಬ್ಬ ನಮಗೆ ಮರೆತೇ ಹೋಗಿರುತ್ತೆ.......
  ಆದರೆ ನಮ್ಮ ಗೆಳೆಯ ಪ್ರಪಂಚ ಮರೆತಿರೋದಿಲ್ಲಾ.....
  ರಾತ್ರಿ 12 ಗಂಟೆಗೆ ಸರಿಯಾಗಿ ಬಡಿಬಡಿದು ಎಬ್ಬಿಸುವ ಗೆಳತಿಯ ಫೋನ್.....
  ಎಷ್ಟೋ ವರ್ಷದಿಂದ ಪತ್ತೆನೇ ಇಲ್ಲದ ಗೆಳೆಯನ ಶುಭಾಶಯ.....
  ಚಂದವಾಗಿ ಸ್ವಾದವಾಗಿ ತುಂಬಾ ತುಂಬಾ ತುಂಬಾ ಆತ್ಮೀಯವಾಗಿ ಬರೆದು ಕಳಿಸಿದ ಪತ್ರ.... ಹೀಗೆ ದಿನವಡೀ ಆಶ್ಚರ್ಯಗಳ ಸಂತೆ ತುಂಬಿರುತ್ತೆ....
  ನನ್ನ ಹುಟ್ಟು ಹಬ್ಬದ ದಿನ ಬಂದ ಪತ್ರಗಳೆಲ್ಲಾ ಇನ್ನು ನಮ್ಮನೆಯ ಗೋಡೇ ಕಪಾಟಿನ ಬಾಕ್ಸಿನಲ್ಲಿ ಹಾಗೇ ಇವೆ ಬೆಚ್ಚಗೆ....
  ಆಗಾಗ ಓದಿ ಓದಿ ಕಣ್ಣೀರಾಗೋಕೆ ಬೇಕೇ ಬೇಕಲ್ಲಾ....
  ತುಂಬಾ ಚನ್ನಾಗಿದೆ ನಿಮ್ ಬರಹ....

  ಹುಟ್ಟು ಹಬ್ಬದ ಶುಭಾಶಯಗಳು....
  ಮೃದು ಮಧುರ ಹಾರೈಕೆಗಳೊಂದಿಗೆ...
  ...................ರಾಘವ್.

  ReplyDelete
 3. Odi mugiyuvashtaralli kannanchina hanigalu jaribiddu ninni bhavake sakshiyadavu....

  ReplyDelete
 4. ಹೃದಯಸ್ಪರ್ಶಿ ಬರಹ.ತಿಳಿಯದೆಯೆ ಕಣ್ಣು ಒದ್ದೆಯಾದದ್ದಂತೂ ನಿಜ.ಮನದಾಳದ ಮಾತುಗಳನ್ನ ಶಬ್ದಗಳಲ್ಲಿ ತುಂಬಾ ಸುಂದರವಾಗಿ ಬಿಂಬಿಸಿದ್ದೀರ.ನನಗೂ ನನ್ನ ಹೈ ಸ್ಕೂಲ್ ದಿನಗಳು ನೆನೆಪಾದವು.ಕಳೆದುಕೊಂಡ ಸ್ನೇಹಿತರ ನೆನಪುಗಳು,ಕಳೆದ ಸುಂದರ ದಿನಗಳು ಮತ್ತೆ ಮರುಕಳಿಸಿದವು.ಮತ್ತೊಂದು ಸುಂದರ ಬರಹಕ್ಕೆ ಒಂದು ಸಲಾಮ್.ಶುಭವಾಗಲಿ.ನಿಮ್ಮ ಬರಹಗಳು ದಿನದಿಂದ ದಿನಕ್ಕೇ ಇನ್ನೂ ಸುಂದರವಾಗಿ ಮೂಡಿಬರುತ್ತಿರಲಿ.

  ಮನದಲಿ ಇರಲು ನೆನಪುಗಳ ಸರಮಾಲೆ,
  ಜೀವನವೆಲ್ಲಾ ಸುಂದರ ತೂಗುಯ್ಯಾಲೆ.
  ಸಿಗಲಿ ಜೀವನದಲಿ ಎಲ್ಲ ಸುಖ ಸಂತೋಷ,
  ಹೀಗೆ ನಗುನಗುತ ಬಾಳಿ ನೂರು ವರುಷ.

  ReplyDelete
 5. ಭಾಗ್ಯ...

  ಜನುಮ ದಿನದ ಶುಭಾಶಯಗಳು...
  ತಡವಾಗಿ ಶುಭಾಶಯ ಕೋರುತ್ತಿರುವೆ...

  ಪರೀಕ್ಷೆಗಳೂ ಚೆನ್ನಾಗಿ ಆಗಲಿ..
  ಆಶೀರ್ವಾದಗಳು...

  ಚಂದದ ಬರಹ... ಅಭಿನಂದನೆಗಳು..

  ReplyDelete
 6. "ನಗಿಸಲು ನೀನು ನಗುವೆನು ನಾನು..ನಾನೊಂದು ಗೊಂಬೆಯೂ ನೀ ಸೂತ್ರಧಾರಿ.." ಗಾಳಿಮಾತು ಚಿತ್ರದ ಹಾಡು ನೆನಪಿಗೆ ಬಂತು..ಬ್ಲಾಗ್ ಲೋಕ ಎಂದರೆ ಗಾಳಿ ಮಾತೆ ಅಲ್ಲವೇ...ಪುಟ್ಟ ತಂಗಿಯರನ್ನು ಕೊಟ್ಟ ಈ ಲೋಕದಲ್ಲಿ ಎಷ್ಟು ಆತ್ಮೀಯವಾಗಿ ಬರೆದಿದ್ದೀಯ..ತುಂಬಾ ಖುಷಿ ಆಯಿತು..ಮಾಡಲು ಖುಷಿಯಾಗುವುದು ಆತ್ಮೀಯರಿಗೆ ಶುಭಾಶಯ ತಿಳಿಸಿದಾಗ..ಇನ್ನೂ ಸಂತಸವಾಗುವುದು ಅದನ್ನ ಎಲ್ಲರೊಡನೆ ಹಂಚಿಕೊಂಡಾಗ..ತುಂಬಾ ಆತ್ಮೀಯತೆ ನಿನ್ನ ಲೇಖನ...ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು...ಹಾಗು ನಿನ್ನ ಪರೀಕ್ಷೆಗಳಿಗೆ ಒಂದು ಆಲ್ ದಿ ಬೆಸ್ಟ್

  ReplyDelete
 7. ಹದಿನೆಂಟರ ವಯಸ್ಸು ಅದೂ ಒಂದು ಪರೀಕ್ಷೆಯೇ :) ಜೊತೆಗೆ ಬಿ ಇ ಪರೀಕ್ಷೆ. ನೀವು ಎರಡೂ ಪರೀಕ್ಷೆಯಲ್ಲಿ ಪಾಸಾಗಿ ಜೀವನದ ಹಾದಿಯಲ್ಲಿ ಯಶಸ್ಸನ್ನು ಸಾಧಿಸಿ ಎಂದು ಹಾರೈಸುವೆ.

  ReplyDelete
 8. ಸ್ವಲ್ಪ ತಡವಾಗಿ ಹುಟ್ಟುಹಬ್ಬದ ಶುಭಾಷಯ ಹೇಳ್ತಾ ಇದ್ದೀನಿ...ಚೆನ್ನಾಗಿರಿ..ಭಾಗ್ಯ.. :)

  ReplyDelete

 9. ಭಾವ ತುಂಬಿದ ಶುಭಾಶಯ ಪತ್ರ ತುಂಬಾ ಹಿಡಿಸಿತು.....................

  ReplyDelete
 10. ನಾನು ಬ್ಲಾಗಲ್ಲಿ ಬರಿತಿ, ಬ್ಲಾಗ್ ಹೆಂಗೆ ಮಾಡದು ಭಾವಾ ಕೇಳಿದಾಗ ಇಷ್ಟೆಲ್ಲಾ ಬರಿತೀಯ ಅಂತ ಅಂದುಕೊಂಡಿರಲೇ ಇಲ್ಲ.. ಪೋನಿನಲ್ಲಿ ಮಾತಾಡೋದು ಸಹ ಪಕ್ಕದಲ್ಲಿ ಯಾರಾದರೂ ಮಾತಾಡುತ್ತಿದ್ದರೆ ಅಥವಾ ಸದ್ದಿದ್ದರೆ ಕೇಳದಷ್ಟು ಸಣ್ಣದಾಗಿ ಮಾತಾಡುತ್ತೀಯ ನೀನು, ಆದರೆ ನಿನ್ನ ಬರವಣಿಗೆಯ ಶೈಲಿ, ಆತ್ಮೀಯತೆ ತುಂಬಿದ ಬರಹಗಳು, ಅನುಭವಗಳನ್ನ ಚಾಚೂ ತಪ್ಪದೆ ಹೇಳೊದು... ತುಂಬಾ ಇಷ್ಟವಾಗಿ ಬಿಡುತ್ತೆ.. ಬ್ಲಾಗ್ ಲೋಕದ ಪ್ರೀತಿಯೇ ಹಾಗೆ.. ಮೊಗೆದಷ್ಟು ದೊರೆಯುತ್ತಾ ಹೋಗುತ್ತದೆ, ಪರೀಕ್ಷೆಗಳು ಹೇಗೆ ನೆಡಿತಾ ಇದೆ? ಪರೀಕ್ಷೆಗಳನ್ನ ಚನ್ನಾಗಿಯೇ ಮಾಡಿರುತ್ತೀಯ.. ಹಾರೈಕೆ ಸದಾ ಇರುವಾಗ ಮತ್ತೆ ಅದನ್ನು ಹೇಳೋದು ಬೇಡವೆನ್ನಿಸುತ್ತೆ, ತಡವಾಗಿ ಕಮೆಂಟಿದ್ದಕ್ಕೆ ಏನು ಅಂದುಕೊಳ್ಳಬೇಡ... ಇನ್ನೂ ಒಳ್ಳೊಳ್ಳೆಯ ಬರಹಗಳು ನಿನ್ನಿಂದ ಮೂಡಿ ಬರಲಿ...

  ReplyDelete
 11. ಭಾಗ್ಯ...
  ಜನುಮ ದಿನದ ಶುಭಾಶಯಗಳು...
  ತಡವಾಗಿ ಶುಭಾಶಯ ಕೋರುತ್ತಿರುವೆ...
  ``ಭಾವ ತುಂಬಿದ ಶುಭಾಶಯ ಪತ್ರ ತುಂಬಾ ಹಿಡಿಸಿತು.............``

  ReplyDelete
 12. ಹರಸಿ ಹಾರೈಸಿ ಶುಭಾಶಯವನ್ನಿತ್ತ ಎಲ್ಲರಿಗೂ ಧನ್ಯವಾದ ...

  ಒಲವು ,ಪ್ರೀತಿ ಹೀಗೆಯೇ ಇರಲಿ ...

  ತಪ್ಪು ಒಪ್ಪುಗಳನ್ನು ತಿಳಿಸಿ ತಿದ್ದಿ ತೀಡಿ ...

  ವಿಶ್ವಾಸ ವೃದ್ದಿಸಲಿ ...

  ReplyDelete