Friday, January 18, 2013

ಮನವೆಂಬ ಗುಜರಿಯಲ್ಲಿ ..ಹಳೇ ಪ್ರೀತಿ

  ಭಾನುವಾರದ ಹತ್ತು ಗಂಟೆ ....ಇನ್ನೂ ಮಲಗೇ ಇದ್ದೆ ..ಅಷ್ಟರಲ್ಲಿ ಹಳೇ  ಪಾತ್ರೆ ,ಹಳೇ ಪ್ಲಾಸ್ಟಿಕ್ ,ಹಳೇ ಪೇಪರ್ ,ಕೇಜಿಗೆ ೫ ರುಪಾಯಿ ಎಂಬ ಖಾದರ್ ಸಾಬನ ಸುಪ್ರಭಾತ  ಎಚ್ಚರಿಸಿತ್ತು ....
'ಮೊಗೆ ಮೊಗೆದು   ಕೊಡೋಕೊಂದಿಷ್ಟು ಪ್ರೀತಿ ಇದೆ  ..ಕೆಜಿಗೆ  ಎಷ್ಟ್ ಕೊಡ್ತೀಯಾ 'ಎಂದು  ಗೊಣಗಿ  ಮುಸುಕೆಳೆದಿದ್ದೆ !!..
 ನೆನಪನ್ನೂ ಕೊಡವಿ ಎದ್ದಿದ್ದೆ....
.ಮರೆತೇ ಹೋಗಿದ್ದ ಪ್ರೀತಿ (!!)

 ಒಲವಿನ ಗೆಳೆಯಾ ...(ಕೆಲ   ವರ್ಷಗಳ ಹಿಂದೆ )
      ಹಲವು ದಿನಗಳ  ನಂತರ  ಬಂದ ನಿನ್ನ ಈ ಪತ್ರ ಮತ್ತೆ ನಿನ್ನ ನೆನಪನ್ನ  ನೆನಪಿಸುತ್ತಿದೆ . ಆಕಸ್ಮಿಕವಾಗಿ ಬಂದೆ ..ಅನಿರೀಕ್ಷಿತವಾಗಿ ಬಿಟ್ಟು ಹೋದೆ !
ಇಂದು ಮತ್ತೆ ಮರಳುತೀನಿ ಎನ್ನುತ್ತಿದ್ದೀಯಾ ..ಆದರೆ ನಿನ್ನೀ ಪ್ರೀತಿಗೆ ನನ್ನಲ್ಲಿ ಅರ್ಥವಿಲ್ಲ .. ಬದಲು ಅಸಹ್ಯವಿದೆ ...ಪ್ರೀತಿಯೆಡೆಗಲ್ಲ ..ನಿನ್ನೆಡೆಗೂ  ಅಲ್ಲ ..ಗೊಂದಲದ ಜಾತ್ರೆ
ಕ್ಯಾಂಪಸ್ ನಲ್ಲಿ ಕೈ ಕೈ ಹಿಡಿದು ಓಡಾಡಿದ್ದು ,ಜೊತೆಯಾಗಿ ಹರಟಿದ್ದು ಒಂದಾಗಿ ನಕ್ಕಿದ್ದು ...ಮಾಡಿದ ಹಟಕ್ಕೆ ಜೊತೆಯಾಗಿ ಕಂಡ ಕನಸುಗಳಿಗೆ ಲೆಕ್ಕಾನೆ ಇರಲಿಲ್ಲ ಅಂದು ..
ಸಮುದ್ರ ತೀರದಲ್ಲಿ ನಿನ್ನ ತೋಳಿನಲ್ಲಿ ತಲೆಯಿರಿಸಿ ಮರೆಯಾಗುವ ಸೂರ್ಯನನ್ನು ನೋಡಿ ಮೈ ಮರೆತಿದ್ದು ..ಆ ಬೆಳಕಿನಲ್ಲಿಯೇ ಅಲ್ವಾ 'ನಿನ್ನ ತೋಳಿನಲ್ಲಿ ಸಾವು ಕೂಡಾ ಸಹನೀಯ ಮುದ್ದು 'ಎಂದಿದ್ದು ..!!
ಇವತ್ತಿಗೂ ಅವತ್ತಿಗೂ ಒಂದೇ ವ್ಯತ್ಯಾಸ
ಅಂದು ನಿನ್ನ ಬೆಚ್ಚಗಿನ ತೋಳಿತ್ತು ..ಇಂದು ನಿನ್ನ ಬೆಚ್ಚಗಿನ ನೆನಪಿದೆ .. ಅಷ್ಟೇ ..ಎಲ್ಲದಕ್ಕೂ ಅಳುವ ,ಹಠ ಮಾಡುವ ನಿನ್ನ ಹಳೆಯ ಮುದ್ದು  ನಾನಲ್ಲ ..ಇಷ್ಟೊಂದು ಗಟ್ಟಿಗಳನ್ನಾಗಿ ಮಾಡಿದ ನಿನ್ನೀ ಉಪಕಾರಕ್ಕೆ  ಧನ್ಯವಾದ ..

ಮನಸ್ಸು ಸಂತೆಯಾಗಿದೆ ..ಬರಿಯ ಗುಜರಿ ವಸ್ತುಗಳೇ ಜಾಸ್ತಿ ..ಬಹುಪಾಲು ನೀನು  ಬಿಟ್ಟು ಹೋದ (ಕೊಟ್ಟು ಹೋದ )ನೆನಪುಗಳು ಗುಜರಿ ಸೇರಿವೆ ..
                                                                  
   
ಕೆಲ ಮಧುರ ನೆನಪುಗಳು , ಕನವರಿಕೆಯ ಕನಸುಗಳನ್ನ ಜತನದಿಂದ ಎತ್ತಿಟ್ಟಿದ್ದೆ ಕೆಲ ದಿನಗಳ ಹಿಂದೆ ...ಬದಲಾದ ಕಾಲದೊಂದಿಗೆ ಅವೂ ಮೂಲೆ ಸೇರಿವೆ ..ಧೂಳಾದ ಮನದ ಗೋದಾಮಿನಲ್ಲಿ ಅವುಗಳನ್ನ ಹುಡುಕಿ ತೆಗೆಯಬೇಕಾದ ಜರೂರತ್ತೂ ಇಲ್ಲ ನಂಗೆ .ಗುಜರಿಯವನೂ ತೆಗೆದು ಹೋಗದಷ್ಟು ಹಾಳಾಗಿ ಹೋಗಿದೆ ಮನವಿಂದು  ..ಧೂಳು ಹಿಡಿದ ಮನ ,ಜಡಗಟ್ಟಿದ ಮನಸ್ಸು ,ಎಲ್ಲಿ ನೋಡಿದರಲ್ಲಿ ಜೇಡ ಬಲೆ ..!!ಬಿಡಿಸಲಾರದಷ್ಟು ಸಿಕ್ಕು ..ಸುಂದರ ಸೌಧವಾಗಬೇಕಿದ್ದ ಮನವಿಂದು ತುಂಬಲಾರದಷ್ಟು ಗುಜರಿ ನೆನಪುಗಳೊಂದಿಗೆ ದೊಡ್ಡ ಗುಜರಿಯಾಗಿದೆ ಈಗಷ್ಟೇ ಮಗುಚಿಬಿದ್ದ ಪ್ರೀತಿ (ಬಹುಷಃ ನಾ ನಾಮಕರಣ ಮಾಡಿದ್ದು !)ಯೊಂದಿಗೆ
ಹರೆಯದ ಪ್ರೀತಿ ನಿಜವಲ್ಲ ಎಂದು ಸಾಬೀತು ಮಾಡಿದ್ದೆ ಅವತ್ತು ..ನಿನಗೀ ಪ್ರೀತಿ ಒಂದು ಆಟ ಆಗಿರಬಹುದು ಗೆಳೆಯಾ ..ಆದರೆ ನನಗಿದೇ ಜೀವ ...ಜೀವನ ..ಬದುಕು ಕೂಡಾ ...ಆ ಹರೆಯದ ಪ್ರೀತಿಯೇ ನನ್ನ ಕನಸು ...ಕಲ್ಪನೆ ...ವಾಸ್ತವ ಕೂಡಾ !!..
ನಿನ್ನ ಹಳೆಯ ಪ್ರೀತಿಯ ನೆನಪಿನೊಟ್ಟಿಗೆ ಇದ್ದು ಬಿಟ್ಟೇನೂ ..ಆದರೆ ಪ್ರೀತಿಯ ಪರಿಶುದ್ದ ಮನಸ್ಸಿಗೆ ತೇಪೆ ಹಚ್ಚಿ ,ಪರಿಸ್ತಿತಿಯ ಅನಿವಾರ್ಯ ಅಂತೆಲ್ಲಾ ಸಬೂಬು ಹೇಳಿ ಹೋದ ನಿನ್ನೊಟ್ಟಿಗೆ ಮತ್ತೆ ಬರಲೊಲ್ಲೆ ನಾನು ..ಒಂದು ಸಲ ಕೊಟ್ಟು ಇನ್ನೊಮ್ಮೆ ವಾಪಾಸ್ ಪಡೆಯೋಕೆ ನನ್ನ ಪ್ರೀತಿ ವ್ಯವಹಾರವಲ್ಲ ..ಮೊಗೆ ಮೊಗೆದು ಕೊಡೊ ಅಷ್ಟು ಒಲವು ಹೊಂದಿದ್ದ ನನ್ನ ಪ್ರೀತಿ ನಿನ್ನ calculated quantity ಯ ಪ್ರೀತಿ (?)ಗೆ ಸಮ್ಮತಿಸಬಾರದಿತ್ತು ಕಣೋ ..
ಬದುಕು ನಡೆಸಲು ನೀ ಕೊಟ್ಟ ಹಳೇ ಪ್ರೀತಿ ಇದೆ ..ಅದರೊಟ್ಟಿಗೆ ಸಾಗಿದೆ ಪಯಣ ..ಭಾವನೆಗಳ ಜೊತೆ ಆಟ ಆಡದಿರು ..ಕಳೆದ ನೆನಪುಗಳು ಬರಿಯ ನನ್ನ ಮತ್ತು ನನ್ನ ಪ್ರೀತಿಯದ್ದು ಮಾತ್ರ ..
                       ನಿನಗಿದು ಸಂಭಂದಿಸಿದ್ದಲ್ಲ ......!!
.ಗುಜರಿಯಾದ ಮನದಲ್ಲಿ ನಿನ್ನ ಗುಜರಿ ಮುಖವಾಡಕ್ಕೆ ಜಾಗವಿಲ್ಲ ...ಮನದ ಬಾಗಿಲು ಮುಚ್ಚಿದೆ ಎಂಬುದು ತಿಳಿದಿರಬಹುದು ..ಹಾಗೆಯೇ ಮುಂದೆ ಸಹ ಹೋಗಬಹುದು ನೀ ...

31 comments:

 1. ಮನದ ಬಯಲಲ್ಲಿನ ಕಳೆದುಹೋದ ಹಳೆಪ್ರೀತಿಯ ಕಳೆಯಂತ ನೆನಪುಗಳನೆಲ್ಲ ಗುಡಿಸಿ, ಒಟ್ಟುಮಾಡಿ ಸುಟ್ಟು ಗೊಬ್ಬರವಾಗಿಸಿ, ಹೊಸ ಪ್ರೀತಿಯ ಗಿಡಕೆ ಪಾತಿಕಟ್ಟಿಬಿಡಿ...
  ಹೊಸ ಪ್ರೀತಿಯ ಹೂಗಳಿಂದ ಮನದ ತೋಟ ನಳನಳಿಸಲಿ...

  ReplyDelete
  Replies
  1. dhanyavaada shrivatsa ji:) ...preetiya madhura bhaava yavattoo haleyadu hosadu anno bedha kodalla...kushi atu .
   Bartaa iri:)

   Delete
 2. ಹರೆಯದ ಪ್ರೀತಿ(?!)ಯ ಆಟಕ್ಕೆ ಮನಸ್ಸನ್ನು ಇಷ್ಟು ರಾಡಿಯಾಗಿಸಬಾರದು ಗೆಳತಿ... ಮನಸ್ಸು ಸದಾ ನಳನಳಿಸುತ್ತಿರಬೇಕು...
  ಚಂದದ ಬರಹ ತಂಗೀ..

  ReplyDelete
  Replies
  1. mududida manakke nalanaliso bhaava elliyadu ..dhanyaavada sushma akka...barta iri

   Delete
 3. ಪ್ರೀತಿ ಎಂಬ ಹೆಸರೇ ಚುಂಬಕ....
  ಹಳೆಯ ದಿನಗಳ ನೆನಪು ಇನ್ನೂ ಮಧುರ. ಅದು ಎಂದೆಂದೂ ಮನದಲ್ಲಿ ಹಸಿರಾಗಿರತ್ತೆ, ಭಾವನೆಗಳ ಮಹಾಪೂರ ಹರಿದಿದೆ ನದಿಯಾಗಿ......

  ReplyDelete
  Replies
  1. ಧನ್ಯವಾದ .. ಒಲವಿನ ಭಾವವೇ ಹಾಗೇನೋ :)

   ಬರ್ತಾ ಇರಿ

   Delete
 4. ಹೃದಯವೇ ನಿನ್ನ ಹೆಸರಿಗೆ ಬರವೆ ನನ್ನೇ ನಾ...ಎನ್ನುವ ಬೆಳ್ಳಿ ಮೋಡಗಳು ಎನ್ನುವ ಸಿನೆಮಾದ ಹಾಡು ನೆನಪಿಗೆ ಬಂತು.. ಗಾಯ ಮಾಯವಾಗಬಹುದು ಕಲೆಯಲ್ಲ ಅನ್ನುವ ಮಾತು ಎಷ್ಟು ನಿಜ.ಹೃದಯದ ಭಾವಗಳನ್ನ ನಿರ್ಭಾವ ಮಾಡಿ, ಮಧುರತೆಯನ್ನು ಬಾಳಿಗೆ ಒಂದು ನೆನಪಿನ ಪಾಠವನ್ನು ಹೃದಯದ ಕವಾಟಗಳ ಪರದೆಯ ಮೇಲೆ ಬರೆದು ತಿದ್ದುವಂತೆ ಮಾಡಿದ ರೀತಿಯನ್ನುm, ಬರೆದ ರೀತಿ ಬಹಳ ಆಪ್ತವೆನಿಸಿತು. ಬಾವಿಯಲ್ಲಿ ನೀರು ನೋಡಿ ಕುಡಿಯಲೆಂದು ಹೋದಾಗ..ತಿಳಿಯಾದ ನೀರು ನಿಧಾನವಾಗಿ ಬಗ್ಗಡವಾದ ಬಗೆಯನ್ನು ಹೆಣೆದಿರುವ ರೀತಿ ಭಾಗ್ಯ ಪುಟ್ಟಿ ಎನ್ನಲಾಗದೆ ಭಾಗ್ಯಮ್ಮ್ನೋರು ಎನ್ನುವಂತೆ ಆಗಿದೆ ಸೂಪರ್ ಕಣೋ...ಇಷ್ಟವಾಯಿತು ಬರಹ!

  ReplyDelete
  Replies
  1. ಧನ್ಯವಾದ ಶ್ರೀಕಾಂತ್ ಜಿ ... ಪ್ರೌಢ ಬರಹ ಬರೆಯೋದು ಕಷ್ಟದ ಕೆಲಸ ಅಲ್ವಾ ... ಹಾಗಾಗಿ ನನ್ನೀ ಬ್ಲಾಗಿಗರ ಭಾಗ್ಯಾ ಪುಟ್ಟಿ ಆಗಿಯೇ ಇರೋ ಆಸೆ ನಂದು ... :):)

   Delete
 5. ಧನ್ಯವಾದ ಶ್ರೀಕಾಂತ್ ಜಿ .... ಅಷ್ಟೊಂದು ಪ್ರೌಢ ಬರಹ ಬರದು ...

  ಪ್ರೀತಿ ವಿಷಯಕ್ಕೆ ಬಂದಾಗ ಬಹುಷಃ ಕಲೆ ಮಾತ್ರವಲ್ಲ ...ಸಣ್ಣ ಗಾಯ ಕೂಡಾ ಮಾಸೋಲ್ಲ ..ಮಗ್ಗುಲು ಬದಲಿಸಿ ಬದಲಿಸಿ ನೆನಪಾಗುತ್ತೆ ..ಆತ್ಮೀಯ ಪ್ರತಿಕ್ರಿಯೆಗೆ ಆಭಾರಿ ...

  ಬರ್ತಾ ಇರಿ ..ಬೆನ್ನು ತಟ್ತಾ ಇರಿ ...

  ವಿಷಯ ವಸ್ತು ಸರಿ ಇಲ್ಲದಿದ್ದಾಗ ಕಿವಿನೂ ಹಿಂಡ್ತಾ ಇರಿ ;)

  ಖುಷಿ ಆಯ್ತು

  ReplyDelete
 6. ಕಳೆದ ನೆನಪುಗಳು ಬರಿಯ ನನ್ನ ಮತ್ತು ನನ್ನ ಪ್ರೀತಿಯದ್ದು ಮಾತ್ರ ....ನಿನಗಿದು ಸಂಭಂದಿಸಿದ್ದಲ್ಲ ......!!
  ಸಾಲುಗಳು ತುಂಬಾ ಹಿಡಿಸಿದವು....ಕಳೆದುಕೊಂಡ ಪ್ರೀತಿಯನ್ನು ಹೊಸ ಪ್ರೀತಿಯಲ್ಲಿ ಹುಡುಕುವುದೇ ಜೀವನ....ಪೂರ್ತಿ ಒಲವು ಸಿಗದಿದ್ದರೂ ನೆನಪುಗಳಿಗೆಲ್ಲ ನೀನೆ ಹಕ್ಕುದಾರಳು....ಅದರಿಂದ ಮೇಲೆ ಹೊಸಪ್ರೇತಿಯ ಗೋಡೆ ಕಟ್ಟು...ಹೊಸಪ್ರೀತಿಯ ವಾಸದಲ್ಲಿ(ಸಹ :)) ಮುದನೀಡಬಹುದು :)

  ReplyDelete
  Replies
  1. ಕೆಲ ಭಾವ ಗಳು ಮಾತ್ರ ಮಾತಿಗ್ ಸಿಕ್ಕೋದು ಅಲ್ವಾ ... ಸಿಕ್ಕಾಗ ನದಿಯಾಗಿ ಹರಿದು ಬಿಡುತ್ತೆ ಅಷ್ಟೇ ... ಬರ್ತಾ ಇರಿ ... ಕುಶಿ ಆಯ್ತು :)

   Delete
 7. ಮನ ಸೆಳೆಯುವ ಬರಹ ಭಾಗ್ಯಮ್ಮ. ಯಾಕೋ ಹಳೆಯ ದಿನಗಳನ್ನೆಲ್ಲಾ ಮತ್ತೆ ನೆನಪು ಮಾಡುವ ಹುನ್ನಾರವೇ ನಿಮ್ಮದು? ಹೀಗೆ ಬರೆಯುತಿರಿ.

  ReplyDelete
  Replies
  1. ಧನ್ಯವಾದ ಬದರಿ ಜಿ :)
   ಪ್ರೋತ್ಸಾಹ ಹೀಗೆ ಇರ್ಲಿ :)

   Delete
 8. ಶುದ್ಧ ...
  ಹೃದಯದ ಪ್ರೀತಿಗೆ ಯಾವಾಗಲೂ ಮೋಸವಿಲ್ಲ...

  ಇದರಿಂದ ..
  ಪ್ರೀತಿಸುವ ಸಂಗಾತಿ ಬದುಕಿನ ಪೂರ್ತಿ ಜೊತೆಯಾಗಬಹುದು...
  ಅಥವಾ..

  ಸುಂದರ ನೆನಪುಗಳು ಯಾವಾಗಲೂ ಜೊತೆಯಲ್ಲಿರುತ್ತವೆ...

  ಚಂದದ ಲೇಖನ... ಜೈ ಹೊ !

  ReplyDelete
  Replies
  1. ಧನ್ಯವಾದ ಪ್ರಕಾಶಣ್ಣ :)
   ನಿಜ .... ಪ್ರೀತಿಯ ನೆನಪುಗಳೊಂದಿಗೂ ಜೀವನ ನಡೆಸಿ ಬಿಡಬಹುದು ಪ್ರೀತಿ ಕೈ ಕೊಟ್ಟಾಗ
   ಇಷ್ಟವಾಯ್ತು ನಿಮ್ಮ ಮಾತು ... ಬರ್ತಾ ಇರಿ
   ನಮಸ್ತೆ

   Delete
 9. hmm...endinante atmeeyavada shaili...munduvareyalu:-)

  ReplyDelete
 10. ಪ್ರೀತಿ ಆಕಸ್ಮಿಕವಾಗಿ ಒಲಿದುಬಿಡುತ್ತೆ...
  ಒಲಿದು ಬಂದ ಕ್ಷಣ ಮೊಗೆದುಕೊಳ್ಳೊಕೇನೋ ಮೊಗೆದುಕೊಂಡು ಬಿಡ್ತೀವಿ.... ಅದು ದೊಡ್ಡ ವಿಷ್ಯ ಅಲ್ಲಾ...
  ನಿಭಾಯಿಸೋದು ಮುಖ್ಯ....
  ಇಲ್ಲೇ ಮನಸ್ಸುಗಳಿಗೆ ಪೆಟ್ಟು ಬೀಳೋದು....
  ಮತ್ತು ಪೆಟ್ಟು ಬಿದ್ದಷ್ಟು ಮನಸ್ಸು ಪಕ್ವವಾಗೋದು....

  ಆದರೆ ಪ್ರೀತಿ ವಿಚಾರದಲ್ಲಿ ಪದೇ ಪದೇ ಪೆಟ್ಟು ತಿನ್ನೋಕೆ ಯಾರೂ ಇಷ್ಟಪಡೋಲ್ಲಾ...

  ಮನಸ್ಸಿನಲ್ಲಿ ಪ್ರೀತಿಯ ಒರತೆ ಒಂದು ಬಾರಿ ಎದ್ದರೆ ಅದು ಯಾವತ್ತೂ ಆರೋದಿಲ್ಲ..... ಹನಿ ಹನಿಯಾಗಿ ನುಸುಳೋ ಪ್ರೀತಿ ಒರತೆಯನ್ನ ಕೂಡಿಡಲು ಅಂಥದ್ದೇ ಇನ್ನೊಂದು ಪುಟ್ಟ ಹೃದಯ ಸಿಗಲಿ...

  ಚಿಕ್ಕವಾಗಿ ಚಂದನೆಯ ಬರಹ....

  ReplyDelete
  Replies
  1. ರಾಘವ್ ಜಿ .... ನಿಮ್ಮ ಹಾರೈಕೆ ಹೀಗೆ ಇರ್ಲಿ :)

   Delete
 11. ಈ ಪ್ರೀತಿಯ ಬಗ್ಗೆ ಬರೆಯೋದು ನಂಗಂತೂ ಸ್ವಲ್ಪ ಕಷ್ಟವೇ ಭಾಗ್ಯ.
  ಪ್ರೀತಿ ಅಂದಾಕ್ಷಣ ಹಳೆಯ ನೆನಪುಗಳು, ಪ್ರೀತಿಯಾದ ಸ್ನೇಹ, ಸ್ನೇಹವಾಗೂ ಉಳಿಯದೆ ಪ್ರೀತಿಯ ಬಯಕೆಯಲ್ಲಿ ದೂರಾದ ಗೆಳೆತನ,
  ಕಾಲೇಜಲ್ಲಿ ನೋಡಿದ ಹಲತರದ , ಹಲವಷ್ಟು ತೀವ್ರತೆಯ ಪ್ರೀತಿಯ ನೆನಪುಗಳು ಸುಳಿದಾಡುತ್ತವೆ.
  ಕೆಲವರ ಪಾಲಿಗೆ ಇದು ಜೀವನಕ್ಕೆ ಗುರಿ, ದಿಕ್ಕೊಂದನ್ನು ಕೊಟ್ಟಷ್ಟು ಮಧುರ. ಇನ್ನುಳಿದವರ ಪಾಲಿಗೆ ಜೀವನದಲ್ಲಿ ಆಸಕ್ತಿಯನ್ನೇ ಮರೆಸಿ ಜೀವನದ ದಿಕ್ಕೇ ಬದಲಿಸಿದ ಪಾಪಿ.

  ನಿನ್ನ ಲೇಖನದ ಬಗ್ಗೆ ಆಗಲೇ ಹಿರಿಯರೆಲ್ಲಾ ಹೇಳಿದ್ದ. ಹಂಗಾಗಿ ನಾ ಹೇಳ ಅಂತದ್ದು ಎಂತೂ ಇಲ್ಲೆ.
  ಚೆಂದ ಬರದ್ದೆ, ಬರೀತಿರು ಅಂತ ಹೇಳಲಕ್ಕು ಅಷ್ಟೇ :-)

  ReplyDelete
  Replies
  1. ಥ್ಯಾಂಕ್ಸ್ ಪ್ರಶಸ್ತಿ ..ಪ್ರೀತಿಯ ಭಾವವೇ ಅಂತದ್ದು ... ಎಲ್ಲರನ್ನು ಸೇರಿಸೋ ಶಕ್ತಿಯೂ ಅದಕ್ಕಿದೆ ... ಎಲ್ಲವನ್ನೂ ದೂರ ಮಾಡೋ ಭಾವವೂ ತಿಳಿದಿದೆ
   . ಬರ್ತಾ ಇರಿ ತಪ್ಪು ಒಪ್ಪುಗಳನ್ನ ತಿಳಿಸಿ ಕೊಡ್ತಾ ಇರಿ ...

   Delete
 12. wonderfull writing bhagya.....very touching...keep writing..:)

  ReplyDelete
 13. ಹಿರಿಯರೆಲ್ಲ ತಪ್ಪುಗಳನ್ನ ತಿಳಿಸಿ ಹರಸಿದ್ದಾರೆ, ನಾನೆನೂ ಹೆಳುವುದು ಉಳಿದಿಲ್ಲ. ತುಂಬಾ ಸುಂದರ ಬರಹ ಎಂದಸ್ಟೆ ಹೇಳಬಲ್ಲೆ.ಹೀಗೆ ಬರೆಯುತ್ತಿರಿ.ಶುಭವಾಗಲಿ.

  ReplyDelete
  Replies
  1. ಥ್ಯಾಂಕ್ಸ್ ಜಿ :)ಬರ್ತಾ ಇರಿ ...

   Delete
 14. ಹಳೇ ಪ್ರೀತಿ ಬೆನ್ನ ಮೇಲೆ ಆದ ದೊಡ್ಡ ಕುರು ಇದ್ದ ಹಾಗೆ... ನೋವು ಮರೆಯಲು ನಿದ್ದೆ ಮಾಡಬೇಕು... ನಿದ್ದೆ ಬರಬೇಕೆಂದರೆ ಬೋರಲು ಮಲಗಬೇಕು... ಅವಳನ್ನು ತೋಳ ತೆಕ್ಕೆಯಲ್ಲೇ ಹಿಡಿದು ಅಂಗಾತ ಮಲಗಿ, ಅವಳ ಪಿಸು ಮಾತುಗಳ ಲಾಲಿ ಕೇಳಿ ಹಾಗೇ ಪ್ರೇಮ ನಿದ್ರೆಗೆ ಜಾರುತ್ತಿದ್ದವನಿಗೆ, ಏಕಾಂಗಿಯಾಗಿ ಬೋರಲು ಮಲಗಿದಾಗ ನಿದ್ದೆ ಬರುವುದು ಕಷ್ಟ... ಮಲಗುವತನಕ ನೋವು ಮರೆಯುವುದಿಲ್ಲ... ನೋವು ಇರುವತನಕ ನಿದ್ದೆ ಬರುವುದಿಲ್ಲ...

  ReplyDelete
  Replies
  1. ಧನ್ಯವಾದ :)ನನ್ನ ಬ್ಲಾಗ್ ಗೆ ಸ್ವಾಗತ ... ಇಷ್ಟವಾಯ್ತು ನಿಮ್ಮ ಪ್ರತಿಕ್ರಿಯೆ ...
   ಬರ್ತಾ ಇರಿ

   Delete