Thursday, February 14, 2013

ನನ್ನೆದೆಯ ಬೀದಿಯಲೀಗ ನಿನ್ನೊಲವ ಮೆರವಣಿಗೆ ....


ಪ್ರೀತಿಯ ಮುದ್ದು ...
                       'ಒಲವೇ ನೀನೊಲಿದಾ ಕ್ಷಣದಿಂದಲೇ ...'ಇವತ್ಯಾಕೋ ನಾನು ನಾನಾಗಿಲ್ಲ ಗೆಳೆಯ ..ಎಲ್ಲೋ ಇರಬೇಕಿದ್ದ ನೀನು ನನ್ನೊಳಗೆ ಬಂದುಬಿಟ್ಟಿದ್ದೀಯಾ ! ಅದ್ಯಾವ ಪರಿ ಮನದೊಳಗೆ ಇಳಿದ್ಯೋ ನಾ ಕಾಣೆ ..ಆದರೆ ನಾ ಮಾತ್ರ ನಿನ್ನಲ್ಲಿ ಕಳೆದೇ ಹೋಗಿದ್ದೇನೆ ..ಹುಡುಕ ಹೊರಟರೂ ಸಿಗುವುದಿಲ್ಲಾ ಬಿಡು ...
ಹೀಗೊಬ್ಬ ಗೆಳೆಯನ ನಿರೀಕ್ಷೆ ಮಾಡಿರಲಿಲ್ಲ ..ಅನಿರೀಕ್ಷಿತವಾಗಿ ಮಾತನಾಡಿದ್ದೆ ಅವತ್ತಿನ ಸೋನೇ ಮಳೆಯಲ್ಲಿ ..ಬೆಚ್ಚಗಿನ ಕೊಡೆ ಹಿಡಿದಿದ್ದೆ ತೊಯುತ್ತಿದ್ದ ಹುಡುಗಿಗೆ ..ಆತ್ಮೀಯನಾದೆ ..ಕಡೆಗೊಂದು ದಿನ ಮುದ್ದು ಮುದ್ದಾಗಿ propose ನೂ ಮಾಡಿದ್ದೆ ..

'whenever you look into my eyes ,i forgot everything..
you made me to think of you hundred times a day
yes,im here to confess my love
I want to feel the warmth of your hand in the evening breeze
Iwant to feel the rain drop slowly sliding from your face..
Tell me dear ..will you be mine forever?'

 ಕಳೆದ ಇದೇ ದಿನ ಸಮುದ್ರ ದಂಡೆಯಲ್ಲಿ ನಿಂತು ಮಂಡಿಯೂರಿ ಹೀಗೆ ಕೇಳಿದ್ದೆ ...ನನ್ನೊಲವು ,ಪ್ರೀತಿ ಎಲ್ಲವೂ ನೀನಾಗಿದ್ದೆ ...

ಹುಚ್ಚು ಕೋಡಿ  ಮನಸು ಅದು ಹದಿನಾರರ  ವಯಸು ..ಹದಿನಾರು ದಾಟಿ ಬದುಕು ಕಟ್ಟಿಕೊಂಡ ಮೇಲೂ ಹರೆಯದ ಪ್ರೀತಿಯ ಪ್ರವಾಹ ಹೀಗೆಯೇ ಇದೆ ..ಸಾಗರ ಸೇರುವ ನದಿಯಂತೆ ಈ ಮನಸ್ಸಿಗೆ ನಿನ್ನ ಸೇರುವ ತವಕ ..ನಿನ್ನ ಮಡಿಲಲ್ಲಿ ಮಗುವಾಗಿ ಜಗವ ಮರೆವ ಬಯಕೆ ..ಹೀಗೆ ಹತ್ತಾರು ಆಸೆ ..ನೂರೆಂಟು ಕನಸು ಕಣೋ .....ಅದೇನೂ  ಮೋಡಿ  ಮಾಡಿದ್ದೀಯೋ ನಾ ಕಾಣೆ  ..ಮಗಳ ಬಗ್ಗೆ ಕೇಳೋಕೂ ಮುಂಚೆ ನಿನ್ನ ಬಗ್ಗೆ ಕೇಳುತ್ತಾರೆ ಅಪ್ಪ ಅಮ್ಮ ..ಇದೊಂದು ಮಧುರ ಹೊಟ್ಟೆಕಿಚ್ಚು ನಿನ್ನ ಮೇಲೆ


        ಸಮುದ್ರ ತೀರದಲ್ಲಿ ಅಲೆಗಳಿಗೆ ಮುತ್ತಿಕ್ಕುತ್ತಾ ಕಂಡ ಕನಸುಗಳಿಗೆ ಲೆಕ್ಕಾನೆ ಇಲ್ಲ ..ಜೊತೆಯಾಗಿ ನಕ್ಕಿದ್ದೆಷ್ಟೋ ,ಕೂಡಿ  ಹರಟಿದ್ದೆಷ್ಟೋ ...ನನ್ನೀ ಹುಸಿಮುನಿಸಿಗೆ ನಿನ್ನ ಒಲವೇ ಉತ್ತರ .. ಅವತ್ತು ನೀ ಕಣ್ಣಲ್ಲಿ ಕಣ್ಣಿಟ್ಟು 'ಜೀವದ ಗೆಳತಿ ..ಜೀವನದ ಸಂಗಾತಿಯಾಗು ಬಾ ' ಎಂದು ಪ್ರೀತಿಯಿಂದ  ಆಮಂತ್ರಿಸಿದಾಗ ಸಣ್ಣಗೆ ಕಂಪಿಸಿದ್ದೆ .. ಪ್ರೀತಿ ನೀನು ಕಣೋ ..ನಿನ್ನ  ತೋಳಿನಲ್ಲಿ ಮಲಗಿ  ನಕ್ಷತ್ರ ಎಣಿಸುತ್ತಾ ನನ್ನ ಚಂದಿರ ನೀನು ಅಂದಿದ್ದು ..ಮತ್ತೆ  ಈ ರಾತ್ರಿಯ ನೀರವತೆ ನಿನ್ನ ಕನವರಿಕೆಯನ್ನ ಜಾಸ್ತಿ ಮಾಡಿದೆ ..ನನ್ನಿಂದ ಆರೆಂಟು ತಾಸಿನ  ದೂರ ಇರುವ ನಿನ್ನೊಲವಿಗೋ ಹೀಗೆಯೇ ಅನಿಸುತ್ತಿದೆ ಎಂದು ಗೊತ್ತು ಗೆಳೆಯಾ .. ನಿನ್ನೆಡೆಗಿನ ವ್ಯಾಮೋಹ ದಿನೇ ದಿನೇ ಪ್ರೀತಿಯ ಪರವಶೆಯಲ್ಲಿ ತೋಯುತ್ತಿದೆ ..ಮಲಗಬೇಕೆಂದು ಹಾಸಿಗೆ ಸೇರಿದವಳಿಗೆ ನಿದ್ದೆ ಮಾಡೋಕೂ ಬಿಡ್ತಿಲ್ಲಾ ನೀನು ..
ನೆನಪುಗಳ ಬೆಚ್ಚಗಿನ ಹಾಸಿಗೆಯಲ್ಲಿ ಮಲಗಿ ಮಧುರ ಕನಸ್ಸೊಂದನ್ನು ಕಾಣಬೇಕಿದೆ ...
ನಿನ್ನ ಬಿಸಿಯುಸಿರಿಗೆ ನನ್ನೀ ಮುಂಗುರುಳು ನಾಚಿ ನೀರಾದ ಭಾವ ..ಕೆಂಪಾದ ಕೆನ್ನೆಗೇನೋ ಹಿತವಾದ ಭಾವ ..ಗಲ್ಲದಂಚಿನ ಮಚ್ಚೆಯ ಸವರಿ ಮೆಲ್ಲಗೆ ಮುತ್ತಿಟ್ಟ ಭಾವ ...

ಅಂದು ನೀನಾಡಿದ ಈ ಪಿಸು ಮಾತಿಗೆ ಮತ್ತೆ ನಿದ್ದೆಗೆ ಜಾರಬೇಕೆಂದು ಅನಿಸುತ್ತಿದೆ ಗೆಳೆಯ ...

  ' ಕಣ್ಮುಚ್ಚು ನನ ಗೆಳತಿ 
                     ಕನಸಲ್ಲಿ ಬರುವೆ ...
     ನಿದ್ದೆಯಲೂ ನಾಚಿ ಕೆಂಪಾಗುವ ನಿನ ಮೊಗವಾ ಕಂಡು
                                  ನಾ ಜಗವಾ ಮರೆವೆ .....'

ನಿನ್ನ  ಪ್ರೀತಿಯನ್ನ ಪ್ರೀತಿಯಿಂದ  ಜತನ ಮಾಡುತ್ತಾಳೆ ಈ ನಿನ್ನ ಪ್ರೀತಿ ...
                                                        ಪ್ರೀತಿಯ ಭರವಸೆಯೊಂದಿಗೆ ...
                                                                                        ಪ್ರೀತಿಯ ನಿನ್ನವಳು ...

30 comments:

  1. ಪ್ರೇಮಿಗಳ ದಿನಾಚರಣೆಗೆ ಇದಕಿಂತಲೂ ಒಳ್ಳೆಯ ಬರಹ ಸಿಗಲಾರದು. ಇಲ್ಲಿನ ನವಿರುತನ ಮತ್ತು ಅರ್ಪಣಾಭಾವವು ನನಗೆ ಹಳೆ ದಿನಗಳ ನೆನಪಿಸಿವೆ. ಅಲ್ಲಿಗೆ ಬರಹವೂ ಸಾರ್ಥಕ.

    ತುಂಬಾ ನೆಚ್ಚಿಗೆಯಾಯ್ತು.

    ReplyDelete
    Replies
    1. ಧನ್ಯವಾದ ಬದರಿ ಸರ್ ... ಬರೆದ ಭಾವ ಇಷ್ಟವಾದರೆ ಬರೆದಿದ್ದು ಸಾರ್ಥಕ ... ಖುಷಿ ಆಯ್ತು ... ಬ್ಲಾಗ್ ಗೆ ಬರ್ತಾ ,ತಪ್ಪು ಒಪ್ಪುಗಳನ್ನ ತಿಳಿಸಿ ಕೊಡ್ತಾ ಇರಿ

      Delete
  2. ಪ್ರೀತಿಯ ಭಾವ .. ಬರಹ ಎರಡು ಚಂದ ಪುಟ್ಟಿ... ತುಂಬಾ ಚೆನ್ನಾಗಿದ್ದು ..

    ReplyDelete
    Replies
    1. ಥ್ಯಾಂಕ್ಸ್ ಸಂಧ್ಯಾ ಅಕ್ಕ :)... ಬರ್ತಾ ಇರಿ

      Delete
  3. ಭಾಗ್ಯಮ್ಮಾ...
    ಛಂದ ಇದೆ :)...
    ಕೊನೆಯಲ್ಲಿ ಬರೆದ ಸಾಲುಗಳು ಬಹಳ ಇಷ್ಟ ಆಯ್ತು...
    ಈ ರೀತಿ ಭಾವಪೂರ್ಣವಾಗಿ ಬರೆಯುವುದು ನನಗೂ ಮಾದರಿಯಾಗಲಿ...
    ಧನ್ಯವಾದ...

    ReplyDelete
    Replies
    1. ಥ್ಯಾಂಕ್ಸ್ ಚಿನ್ಮಯ್ ಜಿ .... ಬ್ಲಾಗ್ ಗೆ ಬರ್ತಾ ಇರಿ ...

      ಧನ್ಯವಾದ

      Delete
  4. ನನ್ನೆದೆಯ ಬೀದಿಯಲೀಗ ನಿನ್ನೊಲವ ಮೆರವಣಿಗೆ ... ಚನ್ನಾಗಿದೆ..

    ನಿನ್ನ ಪ್ರೀತಿಯನ್ನ ಪ್ರೀತಿಯಿಂದ ಜತನ ಮಾಡುತ್ತಾಳೆ ಈ ನಿನ್ನ ಪ್ರೀತಿ ...
    ಪ್ರೀತಿಯ ಭರವಸೆಯೊಂದಿಗೆ ...
    ಪ್ರೀತಿಯ ನಿನ್ನವಳು ...

    ತುಂಬಾ ಚನ್ನಾಗಿದ್ದು..

    ಇದರ ಜೊತೆಗೆ ಇಷ್ಟವಾದ ಇನ್ನೊಂದು ಸಾಲಿದೆ...
    ".ಗಲ್ಲದಂಚಿನ ಮಚ್ಚೆಯ ಸವರಿ ಮೆಲ್ಲಗೆ ಮುತ್ತಿಟ್ಟ ಭಾವ "

    ಇದನ್ನು ಓದಿ ನಿನ್ನ ಫೋಟೋವನ್ನ ಮತ್ತೊಮ್ಮೆ ಸರಿಯಾಗಿ ನೋಡಿದ್ದಂತೂ ಸುಳ್ಳಲ್ಲ....

    ಹಾಗೇ ಸುಮ್ನೆ... ಕುತೂಹಲ ನೋಡು....

    ತುಂಬಾ ಮಧುರವಾದ ಬರಹ ಭಾಗ್ಯಾ....

    ReplyDelete
    Replies
    1. ಹಾ ಹಾ ... ರಾಘವ ಜಿ ಫೋಟೋ ನೋಡಿ ಕುತೂಹಲ ತಣಿಯಿತು ಅಂದು ಕೊಳ್ತೀನಿ :)

      ಪ್ರೀತಿಯ ಭಾವವೇ ಮಧುರ ಆದದ್ದು ಅಲ್ವಾ ?...

      ಧನ್ಯವಾದ ಇಷ್ಟ ಪಟ್ಟಿದ್ದಕ್ಕೆ ... ಬರ್ತಾ ಇರಿ

      Delete
  5. ಒಲವು, ಪ್ರೀತಿ ವ್ಯಕ್ತಗೊಳಿಸಲು ನಿಗದಿತ ದಿನ ಬೇಕೇ?!
    ಅದು ನಿರಂತರ... ನಿತ್ಯ ನೂತನ. ನಿಮ್ಮ ಭಾವನೆಗಳ ಮಹಾಪೂರವೇ ಹರಿದಿದೆ ಇಲ್ಲಿ... ಇಷ್ಟ ಆಯ್ತು...

    ReplyDelete
    Replies
    1. ಥ್ಯಾಂಕ್ಸ್ ಜಿ ... ಪ್ರೀತಿಯ ಒರತೆಯೇ ಅಂತದ್ದು .... ನಿಗದೀತ ದಿನಕ್ಕೆಂದು ಬರೆದಿದ್ದಲ್ಲ ... ಎಲ್ಲಾ ದಿನವೂ ಒಲವಿನ ದಿನವೇ ಅಂತೀರಾ ?:)

      ಬ್ಲಾಗ್ ಗೆ ಬರ್ತಾ ಇರಿ

      Delete
  6. ತುಂಬಾ ಚೊಲೊ ಇದ್ದು....ಪ್ರೇಮಿಗಳ ದಿನಕ್ಕೆ ಒಳ್ಳೆಯ ಬರಹ...ಭಾವನಾಲಹರಿಯೇ ಹರಿದಿದ್ದು ಇಲ್ಲಿ....

    ಅದು ನಿಂದೆ ಫೋಟೋವ ಎಂತ ಕಥೆ?

    ReplyDelete
    Replies
    1. ಥ್ಯಾಂಕ್ಸ್ ಆದರ್ಶ ....ಪ್ರೇಮಿಯ ಪ್ರೀತಿಯ ಭಾವವನ್ನ ಕೇಳಿ ಮಾತ್ರ ಗೊತ್ತು :)

      ಚಿತ್ರ ಕೃಪೆ :ಅಂತರ್ಜಾಲ ;)

      ಪ್ರತಿಕ್ರಿಯೆಗೆ ಆಭಾರಿ ... ಬರ್ತಾ ಇರಿ

      Delete
  7. This comment has been removed by the author.

    ReplyDelete
  8. ಸೂರ್ಯನ ಬೆಳಕು ಪ್ರತಿಯೊಂದು ಜೀವಿಯನ್ನು ತಲುಪುತ್ತದೆ.ಹಾಗೆಯೇ ಒಲವು ಕೂಡ..ಅದರ ಹರಿವು ಬೇರೆ ಬೇರೆಯಾಗಿದ್ದರೂ, ಪಾತ್ರ ಬೇರೆಯಾಗಿದ್ದರೂ ಅದು ಬೆಸೆಯುವ ಬಂಧ ಅಮೋಘ....ತುಂಬಾ ನವಿರಾದ ಕುಸುರಿ ಕೆಲಸದ ಹಾಗೆ ಮೂಡಿರುವ ಭಾವಪೂರ್ಣ ಲೇಖನ ಸೊಗಸಾಗಿದೆ.ಪ್ರೇಮಿಗಳ ದಿನ ಎನ್ನುವುದಕ್ಕಿಂತಲೂ ಒಲವು ತುಂಬಿದ ಹೃದಯವಂತ ಮನಗಳು ಒಬ್ಬರನ್ನು ಒಬ್ಬರು ನೆನಪಿಸಿಕೊಳ್ಳುವ ದಿನ ಬರಿ ಒಂದು ದಿನವಾಗಿರದೆ ಅವಿರತವಾಗಿರಲಿ ಎನ್ನುವ ಆಶಯ ಸದಾ ಇರಲಿ. ತುಂಬಾ ಸೊಗಸಾಗಿದೆ ಬಿ.ಪಿ. ಅಭಿನಂದನೆಗಳು

    ReplyDelete
    Replies
    1. ಒಲವಿನ ದಿನಕ್ಕೊಂದು ಒಲುಮೆಯ ಶುಭಾಶಯ ಹೇಳೋಣವೆಂದು ... ಒಲವಿನ ಪ್ರೀತಿಯೇ ಹಾಗೆ ಅಲ್ವಾ ... ಅದರ ಸ್ವಾದ ಸಮುದ್ರದ ಅಲೆಯಂತೆಯೇ ಸರಿ ... ಭೋರ್ಗರಿತಾನೆ ಇರುತ್ತೆ ... ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದ

      Delete
  9. ಭಾಗ್ಯ -
    ಎಂದಿನಂತೆ ಚೆಂದದ ಬರಹ...

    ReplyDelete
    Replies
    1. ಥ್ಯಾಂಕ್ಸ್ ಶ್ರೀವತ್ಸ ... ಬರ್ತಾ ಇರಿ

      Delete
  10. ನಂಗಿಷ್ಟ ಆಯ್ತು ಈ ಪರಿಯ ಪ್ರೀತಿ... :))

    ReplyDelete
    Replies
    1. ಥ್ಯಾಂಕ್ಸ್ ಸುಮತಿ ... ಪ್ರೀತಿಯ ಪರವಶೆಯ ಪರಿ ಇಷ್ಟಪಟ್ಟಿದ್ದಕ್ಕೆ :)

      Delete
  11. ನನ್ನೀ ಹುಸಿಮುನಿಸಿಗೆ ನಿನ್ನೊಲವೇ ಉತ್ತರ ತುಂಬಾ ಚಂದದ ಸಾಲು
    ಇಷ್ಟ ಆತು..

    ReplyDelete
    Replies
    1. ಥ್ಯಾಂಕ್ಸ್ ಪದ್ಮಾ .... ನನ್ನ ಬ್ಲಾಗ್ ಗೆ ಸ್ವಾಗತ .... ಬರ್ತಾ ಇರಿ :)

      Delete
  12. ಸ್ವಲ್ಪ ತಡವಾಗಿ ಓದಿದೆ ತಂಗ್ಯವ್ವ..ಕ್ಷಮೆ ಇರಲಿ ..
    ತುಂಬಾ ಚೆನ್ನಾಗಿ ಬರ್ದಿದ್ದಿಯಾ... ಪ್ರೇಮದ ತಲ್ಲಣಗಳ ನವಿರು ನಿರೂಪಣೆ ಮನ ತಟ್ಟಿತು..

    ReplyDelete
    Replies
    1. ಧನ್ಯ ವಾದ ಸುಷ್ಮಕ್ಕ :)... ಸರಿ ತಪ್ಪುಗಳನ್ನ ತಿಳಿಸಿ ಕೊಡ್ತಾ ಇರಿ :)

      Delete
  13. ಉತ್ತಮ ಬ್ಲಾಗಿತಿ ಆಗೋ ಲಕ್ಷಣಗಳು ಕಾಣ್ತಾ ಇದ್ದು ಭಾಗ್ಯ.. ಶುರುನಲ್ಲಿ ಬರೆಯಕ್ಕಿದ್ರೆ ಇರ ಹುರುಪು, ಶೈಲಿ, ಸೌಂದರ್ಯ, ಆಸಕ್ತಿ ಎಲ್ಲಾ ಕ್ರಮೇಣ ಕಡ್ಮೆ ಆಗ್ತು ಕೆಲೋರಲ್ಲಿ.. ಆ ತರ ಆಗ್ದೆ ಹೋದಂಗೆ ನೋಡ್ಕ ಅಷ್ಟೆ :-)

    ReplyDelete
  14. ಧನ್ಯವಾದ ಪ್ರಶಸ್ತಿ ... ಇಷ್ಟದ ಕೆಲಸ ... ಬ್ಲಾಗ್ ಗೆ ಬರ್ತಾ ಇರಿ ... :)

    ReplyDelete
  15. nimma preetiya ಬರಹ thumba chennagide bhagya avare ... nimma preetiya pari kandu beragade :) thumba danyavadagalu

    ReplyDelete
    Replies
    1. thanks deepika.... nanna blog ge swaagata ...preetiya pariyanna ishta pattu odiddakke mattomme dhanyavaada ..bartaa iri

      Delete
  16. ಭಾವನೆಗಳಿಗೆಲ್ಲಾ ಅಕ್ಷರಗಳ ರೂಪಕೊಡಲಾಗದು ಎನ್ನುವುದು ಕೆಲವೊಮ್ಮೆ ನಿಮ್ಮಂಥವರ ಭಾವಪೂರ್ಣ ಪದಗಳ ಅನಾವರಣ ಕಂಡು ಮರುಪರಿಶೀಲಿಸಬೇಕಾಗುತ್ತದೆ. ಚನ್ನಾಗಿದೆ ಅನುಭವ ಅನುಭಾವ.

    ReplyDelete
    Replies
    1. ಧನ್ಯವಾದ ಅಜಾದ್ ಜಿ :)
      ಅನುಭವದ ಮಾತಲ್ಲ ಇದು :)ಅನುಭವಿಗಳಿಂದ ಕೇಳಿ ತಿಳಿದ ಮಾತು ಮಾತ್ರ :)
      ಭಾವವನ್ನು ಇಷ್ಟ ಪಟ್ಟಿದ್ದು ಕುಶಿ ಆಯ್ತು :)
      ಬರ್ತಾ ಇರಿ
      ನಮಸ್ತೆ

      Delete