Tuesday, December 2, 2014

ಕನ್ನಡಿಯೊಳಗೊಂದು ಬಿಂಬ.


ನಿಜ ಹೇಳಬೇಕಂದ್ರೆ ನಾ ಯಾವತ್ತೂ ಒಂದಿಡೀ ಫಿಲ್ಮ್  ನೋಡಿಯೇ ಇಲ್ಲ. ಮೂರು ಗಂಟೆಯ ಮೂವೀ  ನನ್ನ ಲ್ಯಾಪ್ ಟಾಪ್ ಅಲ್ಲಿ ಹೆಚ್ಚಂದ್ರೆ ಒಂದುವರೆ ಗಂಟೆಗೆ ಮುಗಿದಿರುತ್ತೆ. ಅದಕ್ಕಾಗಿಯೋ ಏನೋ ನನ್ನನ್ನ ಥಿಯೇಟರ್ ಗೆ  ಅಥವಾ ಅವರು ನೋಡ್ತಿರೋವಾಗ ಕೂತು ನೋಡು ಬಾ ಅಂತ ಸುಮ್ಮನೆ ಮಾತಿಗೂ ಯಾವ ಗೆಳತಿಯರೂ ಕರೆಯಲ್ಲ.
ಅವತ್ತೂ ನಿದ್ದೆ ಬಾರದಿರಲಿ ಅನ್ನೋ ಕಾರಣಕ್ಕೆ ನೋಡ್ತಿದ್ದೆ ’Banglore Days' ಅನ್ನೋ ಮಲಯಾಳಂ ಮೂವಿಯನ್ನ. ನಿನ್ನೆ ಯಾಕೋ ಓದೋದು ಬೇಸರವಾಗಿ ಮತ್ತದೇ ಮೂವಿಯನ್ನ ಪೂರ್ತಿಯಾಗಿ ಒಬ್ಬಳೇ ಕೂತು ನೋಡಬೇಕನಿಸಿತ್ತು.
ನನ್ನಲ್ಲಿಷ್ಟು ಬದಲಾವಣೆ ಕಂಡಾಗ ’ಸ್ಟಡಿ ಹಾಲಿಡೇಸ್ ಗೆ ಇಷ್ಟೊಂದು ಶಕ್ತಿಯಿದ್ಯಾ ನೋಡಿದ್ದ ಮೂವಿಯನ್ನೆ ಮತ್ತೆ ನೋಡೋವಷ್ಟು.. ಅದೂ ನೀನು!!!!’ ಅಂತ ಕಾಲೆಳೆದಿದ್ದಳು ಗೆಳತಿ.

  ಯಾಕೋ ಅಲ್ಲಿಯ ’ಕುಟ್ಟನ್’,’ಕುಂಜು’,’ಅಜ್ಜು’  ಮೂವರು crazy cousins ಗಳ ಜೊತೆಗೆ ಹರವಿಟ್ಟ ಚಂದ ಚಂದದ ಆ ಭಾವಗಳು ನಂಗಿರೋ ನನ್ನ ever best cousins ಗಳ ನೆನಪಿಸಿಬಿಡ್ತು.

ಮತ್ತೆ ನೆನಪನ್ನ ಅದೇ ಅಡಿಗೆ ಮನೆಯ ತುಂಬೆಲ್ಲಾ ಹರವಿಟ್ಟು ಕೂತುಬಿಟ್ಟಿದ್ದೀನಿ.ಇನ್ನು ಅಮ್ಮ ಬಂದು ದೋಸೆ ಹಿಟ್ಟು ಖಾಲಿ ಈಗಾದ್ರೂ ಎದ್ದು ಹೋಗಿ ಅನ್ನೋ ತನಕವೂ ಅವಗಳು ಅಲ್ಲಿಯೇ ಇರುತ್ತೆ.
God made us cousins bcause he knew our moms couldn't handle us as sisters!

Here begins a very cute memory with my ever crazy cousin.
              ನಾ ಅವಳೊಟ್ಟಿಗೆ ಆಟ ಆಡಿಲ್ಲ. ಅಪರೂಪಕ್ಕೆ ಜೊತೆಯಾಗ್ತಿದ್ದ ಆ ದಿನಗಳಲ್ಲಿ ಜಗಳವಂತೂ ದೂರದ ಮಾತು. ನಾ ತೀರಾ ಜೋಪಾನ ಮಾಡೋ ನನ್ನದೊಂದು ರೆಡ್ ಪ್ರಿಲ್ಲು ಪ್ರಿಲ್ಲು ಪ್ರಾಕ್ ಕೂಡಾ ಅವಳೆ ತೆಗೆಸಿಕೊಟ್ಟಿದ್ದು.
ಅವಳ ನೆನಪಾದಾಗಲೆಲ್ಲ ಮುಖದಲ್ಲಿ ನಗು ಮಾತ್ರ ಮೂಡೋವಷ್ಟು ಮುದ್ದು ಅವಳಂದ್ರೆ.
ನನ್ನ ಅವಳ ಮಧ್ಯ ಒಂದು ಜನರೇಷನ್ ಗೆ ಆಗೋವಷ್ಟು ವರ್ಷಗಳ ಗ್ಯಾಪ್ ಇದೆ.ಆದರೂ ಇಬ್ಬರ ಮಧ್ಯ  generation gap ಅನ್ನೋ ಯಾವ ಭಾವವೂ ಸುಳಿದಿಲ್ಲ.ನನ್ನೆನ್ನಾ ಟೀನ್ ಭಾವಗಳ ಹಂಚಿಕೊಳ್ಳೋಕೆ ,ಕಾಲೆಳೆದು ನಗೋಕೆ,ತೀರಾ ಅನ್ನೋವಷ್ಟು ಮುದ್ದು ಮಾಡಿಸಿಕೊಳ್ಳೋಕೆ ನಂಗವಳೇ ಬೇಕು ಈಗಲೂ.she is not my partner in crime.She is not my midnight companion. But she is the one who shares my memories of childhood, our shangai,our moments of happiness and triumph!

ಅಮ್ಮನ ಸೆರಗು ಹಿಡಿದುಕೊಂಡೇ ಇರ್ತಿದ್ದ ನಂಗೆ,ಯಾರೊಟ್ಟಿಗೂ ಅಷ್ಟಾಗಿ ಮಾತಾಡದ ತುಸು ಜಾಸ್ತಿ ಸಿಟ್ಟು ಮಾಡಿಕೊಂಡು ರಂಪ ಮಾಡ್ತಿದ್ದ ನಂಗೆ ಅವಳೊಂದು ದೀರ್ಘ ಆಲಾಪ.

ಅವಳದ್ದೊಂದು ಸಾದಾ ಸೀದ ಪ್ರಪಂಚ.
ಅವಳ ಫ಼ುಡ್ ಕೋರ್ಟ್ ಗೆ ಒಳಗೆ ಕಾಲಿಟ್ಟರೆ  ನಂಗಿನಿತು ಆಶ್ಚರ್ಯ. ರಾಶಿ ರಾಶಿ ಪುಸ್ತಕಗಳ  ಓದೋ ಗೀಳು ಅಂಟಿಸಿದ್ದೂ ಅವಳೇ.ಅಪ್ಪ ಅಮ್ಮ ಯಾವಾಗಲೂ ಬೈಯ್ಯೋ ನನ್ನ ಟ್ರೆಕ್ ,ಟ್ರಿಪ್ ಅನ್ನೋ ಪ್ರೀತಿಗಳಿಗೆ ಕಾರಣ ಅವಳೇ.ಭಾವಗಳನ್ನೆಲ್ಲಾ ಮರೆಮಾಚದೆ ಹಾಗೆಯೇ ಸೆರೆ ಹಿಡಿದು ಬಿಡೋ ಫೋಟೋಗಳ ತೆಗೆದು ಬೇಜಾರಾದಾಗಲೆಲ್ಲಾ ಅವುಗಳೊಳಗೆ ಇಣುಕಿ ನೋಡೋ ನನ್ನ ಫೋಟೋ ಪ್ರಪಂಚದ ಮೊದಲ ಕ್ಲಿಕ್ ಕೂಡಾ ಅವಳದೇ DSLRದು.
 ಇನ್ನು ಬೆಳಿಗ್ಗೆಯಿಂದ ಸಂಜೆಯ ತನಕ ಎಲ್ಲರ ತಲೆ ತಿಂದು ರಾತ್ರಿಯಿಂದ ಬೆಳಿಗ್ಗೆಯ ತನಕ ಓದೋ ನನ್ನ ಇವತ್ತಿನ so called study holidays ಗಳಲ್ಲೂ ನಾನವಳ ಪಕ್ಕಾ follower ಅನ್ನೋದು ಅಮ್ಮನ ಮಾತು.

              ಬದುಕ ಯಾವುದೋ ತಿರುವಲ್ಲಿ ನಾ ಕಂಗಾಲಾಗಿ ಕೂತಿದ್ರೆ ಅಷ್ಟು ದೂರದಿಂದ ಧೈರ್ಯ ಹೇಳೋ, ನಿನ್ನಿಷ್ಟದ ವಿಷಯಗಳ ಜೊತೆ ಹೆಜ್ಜೆ ಹಾಕು ಅಂತೆಲ್ಲಾ ಬದುಕಿಗಿಷ್ಟು ಭರವಸೆ ತುಂಬೋದು ಅವಳು.
ಮಾತಂದ್ರೆ ಅಲರ್ಜಿ ಅಂತಿದ್ದವಳಿಗೆ ಸುಮ್ಮನಿರು ಮಹರಾಯ್ತಿ ಅನ್ನೋವಷ್ಟು ಮಾತು ಕಲಿಸಿದ್ದು ಅವಳೇ. ಸಂಬಂಧಗಳೆಲ್ಲ ಸುಮ್ಮನೆ ಪೊಳ್ಳು ಅಂತಂದು ಅವುಗಳಿಂದ ದೂರವೇ ಉಳಿಯೋ ನಂಗೆ ಎಲ್ಲಾ ಬಂಧಗಳನ್ನೂ ಪ್ರೀತಿಯಿಂದ ತಬ್ಬೋ,ಎಲ್ಲರೊಟ್ಟಿಗೂ ಪ್ರೀತಿಯಿಂದಲೇ ಮಾತಿಗೆ ಶುರುವಿಡೋ ಅವಳು ಒಂದು ಕೌತುಕ ಪ್ರಪಂಚ.
ಆ ಊರ ಬಿಟ್ಟು ಈ ಊರು ಸೇರಿದ ಮೇಲಿನ ಅದೆಷ್ಟೋ ಬದುಕ ಪಾಟಗಳಿಗೆ  ಸುಮ್ಮನೆ ದೂರ ನಿಂತು ನಕ್ಕುಬಿಡ್ತಾಳೆ nice to see the world in teen angles ಅಂತಂದು ನನ್ನ ಪ್ರತಿ ಭಾವಕ್ಕೂ ಬೆನ್ನು ತಟ್ಟೋ ಅವಳು.
ಈಗಲೂ ಅಷ್ಟೇ  ಬೇಜಾರಾದಾಗ ಅವಳಡ್ಡದಲ್ಲೊಮ್ಮೆ ಓಡಾಡಿ ಬಂದ್ರೆ ಮನಸೆಲ್ಲಾ ತಿಳಿ ನೀಲಿ ಮೇಲಿನ ಆಗಸದಂತೆಯೇ.

ಒಟ್ಟಿನಲ್ಲಿ  ಯಾವ್ ಯಾವಾಗ್ಲೋ ನಿದ್ದೆ ಮಾಡೋ, ಯಾವ್ ಯಾವ್ದೋ ಟೈಮ್ ಅಲ್ಲಿ ಓದೋ, ಬೋರ್ ಆದಾಗ ಸ್ನಾನ ಮಾಡ್ತಾ,ನೆನಪಾದಾಗ ಊಟ ಮಾಡೋ,ರೂಮ್ ಪೂರ್ತಿ ಶೀಟ್ ಗಳು,ಮುಖದ ತುಂಬೆಲ್ಲಾ ಟೆನ್ಷನ್ ಇರೋ  ಸ್ಟಡಿ ಹಾಲಿಡೇಸ್ ನನ್ನನ್ನಿಷ್ಟು ಬರೆಯೋ ತರಹ ಮಾಡ್ತು ಈಗ.
ಹೌದು ಅಮ್ಮ ಹೇಳೋ ಹಾಗೆ ನಾನವಳ ಡಿಟ್ಟೋ ಡಿಟ್ಟು ಅನ್ನೋದು ಅರಿವಾಯ್ತು ಕೂಡಾ :)
              ನಾವ್ ಕಸಿನ್ಸ್ ಗಳೆಲ್ಲಾ ಒಂದೇ ಫ್ರೇಮ್ ಅಲ್ಲಿ ಒಮ್ಮೆಯಾದ್ರೂ ಕಾಣಬೇಕನ್ನೋ ಆಸೆಯಿದೆ.ಆ ಭಾಗ್ಯ ಯಾವತ್ತು ದಕ್ಕುತ್ತೋ ಅನ್ನೋ ಕಾತರತೆಯಿದೆ ನನ್ನಲ್ಲಿ.ಮುಂದಿನ ವಾರ ಅವರೆಲ್ಲಾ ಒಟ್ಟಿಗೆ ಅಲ್ಲಿ ಸೇರೋವಾಗ ನಾ ಮಾತ್ರ ಇಲ್ಲಿ ಪರೀಕ್ಷೆ ಬರೆಯಬೇಕಲ್ಲಾ ಅನ್ನೋ ಹೊಟ್ಟೆಯುರಿಯಿದೆ.ಅವತ್ತೆನಾದ್ರೂ ನನ್ನ ಬಿಟ್ಟು ಅವರೆಲ್ಲಾ ಒಂದೇ ಫ್ರೇಮ್ ಅಲ್ಲಿ ಕಂಡರೆ ಮಾತ್ರ ಅವರುಗಳು sorry ಅನ್ನೋವಷ್ಟು ಅತ್ತುಬಿಡ್ತೀನಿ ಅಷ್ಟೇ.

5 comments:


 1. ಚಲನ ಚಿತ್ರಗಳು ಯಾವತ್ತಿಗೂ ಬದುಕಿನ ಇನ್ನೊಂದು ಮಗ್ಗಲನ್ನು ತೆರೆದು ಕೊಳ್ಳುವ ಸಹಾಯಕ ವಾಣಿ. ಒಂದು ಚಲನ ಚಿತ್ರ ನೋಡಿ ನಿನ್ನ ಮನಸ್ಸು ಕೆಲ ವರ್ಷಗಳ ಹಿಂದಕ್ಕೆ ಓಡಿ.. ಅಲ್ಲಿನ ನೆನಪುಗಳನ್ನು ಹೆಕ್ಕಿ ತೆಗೆಯುತ್ತಾ ನಿನಗೆ ಸ್ಫೂರ್ತಿ ಕೊಡುತ್ತೆ ಅಂದರೆ ಸೂಪರ್ ಅಲ್ವೇ..

  ಹೌದು ಕಿರಿಯ ಹಿರಿಯ ಮಕ್ಕಳು ಓರಗೆಯವರು ಇವರೆಲ್ಲಾ ಒಂದು ಬಾರಿ ಕೂಡಿ ಕೊಂಡಾಗ ಸಿಗುವ ಮಜವೇ ಮಜಾ.ನೆನಪಿನ ಒದ್ದೆಬಟ್ಟೆಯನ್ನು ನಿಧಾನವಾಗಿ ಹಿಂಡಿ ಹಿಂಡಿ ಹರವಿಕೊಳ್ಳುವ ಇಂಥ ಬರಹಗಳು ನಿಜಕ್ಕೂ ಮನಸ್ಸಿನ ಭಾವಗಳನ್ನು ಹಗುರಗೊಳಿಸುತ್ತದೆ.. ಇಷ್ಟವಾಯಿತು

  ReplyDelete
 2. ಈ ಚಿತ್ರವನ್ನು ನಾನೂ ನೋಡುತ್ತೇನೆ.
  ಕಸಿನ್ಸ್ ಬಗ್ಗೆ ಒಳ್ಳೆಯ ಮೆಲುಕು.

  ReplyDelete
 3. >> ಯಾವ್ ಯಾವ್ದೋ ಟೈಮ್ ಅಲ್ಲಿ ಓದೋ, ಬೋರ್ ಆದಾಗ ಸ್ನಾನ ಮಾಡ್ತಾ,ನೆನಪಾದಾಗ ಊಟ ಮಾಡೋ,ರೂಮ್ ಪೂರ್ತಿ ಶೀಟ್ ಗಳು,ಮುಖದ ತುಂಬೆಲ್ಲಾ ಟೆನ್ಷನ್ ಇರೋ ಸ್ಟಡಿ ಹಾಲಿಡೇಸ್ ನನ್ನನ್ನಿಷ್ಟು ಬರೆಯೋ ತರಹ ಮಾಡ್ತು ಈಗ.<<
  Nice bhagyamma..

  ReplyDelete
 4. ಇಷ್ಟ ಕಷ್ಟಗಳ ನಡುವೆ ಮನಸು ಮಾತಾಡಿದೆ..

  ReplyDelete