Tuesday, September 24, 2013

ಮಂಜು ಸರಿದ ಮನದಿಂದ

ಕನಸ ಒಲವ ಜಾರಗೊಡದೆ ,ಕಣ್ಣ ರೆಪ್ಪೆಯ ಒದ್ದೆಯಾಗಿಸದೇ, ಒಂಟಿ ನಡಿಗೆಯ ಹಾದಿಯಲಿ,ಒಂಟಿ ಬೆಂಚಿನ ಮಧ್ಯದಲಿ ಕುಳಿತು ಮಂಜು ಮುಸುಕಿರೋ ಇದೇ ಜಾಗದಿ ,
ಮಂಜು ಸರಿದ ಮನಸ್ಸಿಂದ ಜೋಪಾನ ಮಾಡಬೇಕಿದೆ ನಾ ನಿನ್ನ....
ಕಟ್ಟಿಕೊಂಡ ಕಣ್ಣೀರ ಕಟ್ಟೆ ಒಡೆಯೋಕೂ ಮುನ್ನ...
ಯಾರದೋ ಬೇಸರಕೆ ಇನ್ಯಾರದೋ ಕಾಣಿಕೆ...
ಬೇಸರಿಸದಿರು ಗೆಳತಿ ಅನ್ನೋ ಅವನ ಕೋರಿಕೆ.!

      


 
ಒಂದೆ ಮನಸ ಒಂದೇ ಕನಸ
        ಪಡೆಯುತಿದೆ ಸಮಯ...
ಒಂದೆ ದಾರಿ ಒಂದೇ ಪ್ರೀತಿ
       ಎಣಿಸುತಿದೆ ನಯನ..

ಒಂಟಿ ನಡೆಗೆ ಜೊತೆಯಾಗಿ
          ಬರುವೆ ಎಂದೆ ನೀ...
ಭಾವಗಳ ತುಸು ಜಗಳದಿ
        ಮರೆತು ಹೋದೆ ನಾ...

ಅಂದು ನಿನ್ನ ಮನವ ಮುರಿದು
      ಕಟ್ಟಿಕೊಂಡೆ ಮನದ ಗೋಡೆ.
ಇಂದೆನ್ನ ಮನದ ಆಕ್ರಂದನಕೆ
      ಬಿಕ್ಕುತಿದೆ ಮೌನ ಕಣಿವೆ!

ಒಂಟಿ ಬೆಂಚೂ ಕಾಯುತಿದೆ
     ಹೃದಯ ಭಾರ ಇಳಿಸಲೆಂದು..
ಕಣ್ಣ ಅಂಚೂ ಮುಷ್ಕರಿಸಿದೆ
     ಭಾವ ಹನಿಯ ಧಿಕ್ಕರಿಸೆಂದು!
ಕಣ್ಣ ರೆಪ್ಪೆ ತೋಯದಿರಲಿ
     ಕನಸ ಒಲವ ಜಾರಗೊಡದೆ.

ಮೌನಿಯಾದೆ ನೀನು...
ಸುಮ್ಮನಾದೆ ನಾನು!.


 
(ಫೋಟೋ ಕ್ರೆಡಿಟ್ಸ್: ಶ್ರೀವತ್ಸ ಕಂಚೀಮನೆ.

ನನ್ನದೇ ಮನದೊಂದಿಗೆ ಸ್ಪರ್ಧೆಗೆ ನಿಂತಂತೆ ಭಾಸವಾಯ್ತು ಈ ಚಿತ್ರವ ನೋಡಿ ...ತುಂಬಾ ಭಾವಗಳ ಹಿಡಿದಿಟ್ಟಿರೋ ಚಿತ್ರಕ್ಕೊಂದು ಶರಣು...ಹಾಗೆಯೇ ಅದ ನನ್ನ ಬ್ಲಾಗಿಗೆ ಕೊಟ್ಟಿದ್ದಕ್ಕೂ ಧನ್ಯವಾದ ಜಿ)

  

12 comments:


  1. ಮೌನವನ್ನು ಎಷ್ಟು ರೀತಿ ಅರ್ಥೈಸಿಕೊಳ್ಳಬಹುದು... ಮೌನಿಯಾದೆ ನಾ ಮಾತಾಡದೆ.. ಸುಮ್ಮನಾದೆ ನೀ ಮಾತಾಡದೆ.. ಸೂಪರ್ ಸೂಪರ್ ಬಿ ಪಿ. ಒಂದು ಚಿತ್ರವನ್ನು ನೋಡಿ ಜಲಪಾತದಂಥ ಭಾವ ಹೊರಹೊಮ್ಮಿಸುವ ತಾಕತ್ ನಿನಗಿರುವಾಗ ಪದಗಳೇ ಸಾಲು ಸಾಲಾಗಿ ಅಕ್ಕ ಪಕ್ಕ ನೋಡದೆ ನಿಂತು ಬಿಡುತ್ತವೆ.. ತುಂಬಾ ಇಷ್ಟವಾದ ಸಾಲುಗಳು..

    ಮೌನಿಯಾದೆ ನೀನು...
    ಸುಮ್ಮನಾದೆ ನಾನು!.

    ನೋವಲ್ಲೂ ನಲಿವಲ್ಲೂ ಬೇಕಾಗುವ ಮಾತು ಕೆಲವೊಮ್ಮೆ ಬೇಡ ಎನ್ನಿಸುವಾಗ ಇಂಥಹ ಸುಂದರ ಸಾಲುಗಳು ತಲಕಾವೇರಿಯ ಒಂದು ಪುಟ್ಟ ಕೊಳದಲ್ಲಿ ಹುಟ್ಟುವ ಕಾವೇರಿಯ ಹಾಗೆ ಉಗಮವಾಗುತ್ತದೆ..

    ನಿನ್ನ ಕವಿ(ಯತ್ರಿ) ಮನಕ್ಕೆ ನಮನ

    ReplyDelete
  2. ಮನದ ಮೌನ ಕಣಿವೆಯ ಮೂಕ ಭಾವ... ಕಟ್ಟಿಕೊಂಡ ಗೋಡೆಗೆ ಪ್ರತಿಧ್ವನಿಯೇನೋ..

    Super photo Vatsa..

    ReplyDelete
  3. ಚಿತ್ರದ ಕೃಪೆಯೆ ಕವನವಾಗಿ ಹೊರಬಂದಿರುವ ರೀತಿ ಚೆನ್ನಾಗಿದೆ. "ಇಂದೆನ್ನ ಮನದ ಆಕ್ರಂದಕೆ" ಮುದ್ರಿಸುವಾಗ ತಪ್ಪಿರುವಂತೆ ಅನಿಸುತ್ತದೆ ಆಕ್ರಂದನ ಮಾಡಿ ಇದನ್ನ.

    ಒಂಟಿ ಬೆಂಚೂ ಕಾಯುತಿದೆ
    ಹೃದಯ ಭಾರ ಇಳಿಸಲೆಂದು..
    ಕಣ್ಣ ಅಂಚೂ ಮುಷ್ಕರಿಸಿದೆ
    ಭಾವ ಹನಿಯ ಧಿಕ್ಕರಿಸೆಂದು!

    ಈ ಸಾಲುಗಳಲ್ಲಿ ನೈಜತೆಯ ಭಾವ ಹೊರ ಹೊಮ್ಮಿರುವುದು ಇಷ್ಟವಾಯಿತು. ಮುಂದುವರೆಯಲಿ ನಿಮ್ಮ ಬರವಣಿಗೆಯ ಪಯಣ.

    ReplyDelete
  4. ಮೌನಿಯಾದವನನ್ನೂ ಮಾತಾಡಿಸುವ ಪ್ರತಿ ಸಾಲುಗಳು ಇಷ್ಟವಾಗುತ್ತವೆ.

    ReplyDelete
  5. ಮೌನದ ಭಾವ ಕವನದಲ್ಲಿ ಪ್ರತಿಫಲಿಸಿದೆ!

    ReplyDelete
  6. ಚೆಂದದ ಭಾವ, ಚೆಂದದ ಚಿತ್ರ ,ಚೆಂದದ ಬರಹ :)

    ReplyDelete
  7. ತುಂಬಾ ಒಳ್ಳೆಯ ಭಾವನಾತ್ಮಕ ಕವನ. ಕೊನೆಯ ಸಾಲು ಮೌನಿಯಾದೆ ನೀನು...ಸುಮ್ಮನಾದೆ ನಾನು....ನನಗೆ ಇಷ್ಟವಾಯಿತು.ಹೇಗೆ ಚಿತ್ರಕ್ಕೆ ಕೆಲವೊಮ್ಮೆ ವಿವರಣೆ ಬೇಡವೋ ಹಾಗೆ ಕೆಲವೊಮ್ಮೆ ಮೌನಕ್ಕೂ....

    ReplyDelete
  8. ಮಂಜು ಸರಿದ ಮನಸ್ಸಿಂದ ಜೋಪಾನ ಮಾಡಬೇಕಿದೆ ನಾ ನಿನ್ನ....
    ಕಟ್ಟಿಕೊಂಡ ಕಣ್ಣೀರ ಕಟ್ಟೆ ಒಡೆಯೋಕೂ ಮುನ್ನ...

    ಎಷ್ಟು ಚನ್ನಾಗಿ ಪೋಣಿಸಿದ ಪದಗಳು...

    ಒಂಟಿ ಭಾವಗಳಿಗೇನೆನ್ನಲಿ....
    ನೂರೆಂಟು ಒಗಟು ಅರ್ಥಗಳು....
    ಅರ್ಥೈಸಿಕೊಂಡಷ್ಟು ಒಗಟಾಗಿ......
    ಒಗಟನ್ನು ಬಿಡಿ ಬಿಡಿಸಿದಷ್ಟು ಅರ್ಥ ಹುಟ್ಟಿಕೊಳ್ಳುವ ಭಾವ ಅದು..

    ಚನ್ನಾಗಿದೆ...
    ಹಾಗೆಯೇ ತುಂಬಾ ಪರಿಚಿತ ಜಾಗ ಅದು...
    ಒಂಟಿ ಬೆಂಚುಗಳು..
    ಆದರದು ಅಷ್ಟು ಖಾಲಿ ಇದ್ದಿದ್ದನ್ನು ನೋಡಿದ್ದು ಮಾತ್ರ ಇಲ್ಲೇ.....

    ReplyDelete
  9. ಭಾವನಾತ್ಮಕ ಲೇಖನಗಳಿಂದ ಈಗ ಅಂತ ಕವನಗಳೆಡೆಗೆ ಸಾಗಿದೆ ನಿನ್ನ ಪಯಣ .. ಒಳ್ಳೆಯ ಪ್ರಯತ್ನ.. ಮುಂದುವರೆಯಲಿ

    ReplyDelete