(ಮತ್ತದೇ ಹಳೇ ...ಪುಟ್ಟ ಹಳ್ಳಿ ಹುಡುಗಿಯ ಮಾತಾಗಿ )
ಮನದ ಧಗೆ... ಬಿಸಿಲ ಕಾವು ....ಬೆಳಗಿನ ಸೂರ್ಯನೊಂದಿಗೇ ಜಾಗ ಇರದಿದ್ದರೂ ಮನ ಸೇರೋ ಬೆವರು!!
....ಕಾಡೋ ಭಾವದೊಂದಿಗೆ ಮನದೊಳಗೆ ಹಾದು ಹೋಗೋ ಸೆಕೆಯ ಸಿಟ್ಟು....
ಬಿಸಿಲ ಪಯಣದಲ್ಲೊಂದು ಖಾಯಂ ಸಹ ಪಯಣಿಗನ ಹುಡುಕಾಟ ....
ಮನ ಸುಟ್ಟಿದ್ದು ಸಾಲದೇ ಮೈಯನ್ನೂ ಸುಡ ಬರುತ್ತಿರೊ ಹತಾಶೆಯ ಬೇಗೆ......
ಬೇಯುವ ಬಿಡದೇ ಕಾಡುವ ಉರಿ ಬಿಸಿಲು....
ಮಾತೇ ಬರದಂತೆ ಬಾಯಾರಿಸೋ ಧಗೆ...
ಜೊತೆಗೆ ಕಾಡೋ ಒಂದಿಷ್ಟು ನಿನ್ನೆ ಮೊನ್ನೆಯ ನೆನಪು .....
ಎಲ್ಲವೂ ಸೇರಿ ಸಹಿಸಿಕೊಳ್ಳೋದು ಕಷ್ಟ ಆಗಿ ....ಸಹಿಸಲೇ ಬೇಕಾದ ಅನಿವಾರ್ಯತೆಗಾಗಿ ಒಂದು ಅನಿವಾರ್ಯತೆಯ ಮಾತು ....
ಬೆಳಿಗ್ಗೆ ಬೇಗ ಏಳೋ ಅಭ್ಯಾಸವೇ ಇಲ್ಲದಿರೋರು ಕೂಡಾ ೭ ಗಂಟೆಗೂ ಜಾಸ್ತಿ ನಿದ್ದೆ ಮಾಡೊಲ್ಲ ...ರಾತ್ರಿ ನಿದ್ದೆನೂ ಬರಲ್ಲ ....ಕನಸಲ್ಲಿ ರಾಜಕುಮಾರನೂ ಇರಲ್ಲ ...
ಕ್ಲಾಸ್ ನಲ್ಲಿ ಕೂತು ಬೋರಿಂಗ್ ಪಾಠ ಕೇಳೋಕೇ ನಿಜಕ್ಕೂ ಕಷ್ಟ ಆಗ್ತಿದೆ ..ಮೊದಲಾದ್ರೆ ಬೇಸಿಗೇ ರಜಾ ಇರ್ತಿತ್ತು ನಮ್ಮ ತರ್ಲೆ ಗಳನ್ನ ಸಹಿಸಿಕೊಂಡು ..ಈಗ ತರ್ಲೆ ಮಾಡೋರೂ ಇಲ್ಲ ...ಸಹಿಸಿಕೊಳ್ಳೋರೂ ಇಲ್ಲ ..
.
ಅದ್ಯಾಕೋ ಬೇಸಿಗೆ ರಜಾದ ಮನೆಯಲ್ಲಿನ ಆ ಮಜಾದ ಭಾವಗಳು ಇವತ್ತಿನ ಈ ಬಿಸಿಲ ಝಳಕ್ಕೆ ತಣ್ಣಗಿನ ನೀರಲ್ಲಿ ಸ್ನಾನ ಮಾಡೋಕಂತ ಮೇಲೆ ಬಂದಂತಿದೆ
ಯಾರಿಗ್ ಹೇಳೋಣಾ ನಮ್ಮ ಪ್ರಾಬ್ಲಮ್ ನಾ ....
ರಜಾ ಶುರು ಆದ್ರೆ ಬೆಟ್ಟಾ ತಿರ್ಗೋದು ...ಅಮ್ಮ ದೊಡ್ಡಮ್ಮನ ಬೈಗುಳದ ಮಧ್ಯೆನೂ ...ಮಾವಿನ ಕಾಯಿ ,ಊರಲ್ಲಿರೋ ಮುಳ್ಳೆ ಹಣ್ಣು
,ನೇರಳೆ ಹಣ್ಣು
,ಕೌಳಿ ಹಣ್ಣೂ ಕೂಡಾ ನಮ್ಮನ್ನ ಮಿಸ್ ಮಾಡ್ಕೊಳ್ತಾ ಇದ್ಯಂತೆ ಈಗ ...ಆ ಗೇರನ್ನ ಸುಡೋಕೆ ಹೋಗಿ ಕೈ ಸುಟ್ಟುಕೊಳ್ಳೋದು ,ಮಾವಿನ ಹುಳಿ ಜಾಸ್ತಿ ಆಗಿ ಮುಖ ದಪ್ಪ ಆಗೋದು ...ರಜಾ ಬಂದ್ರೆ ನಮ್ಮ ಹಿಂದೆನೇ ಓಡೋ ಅಪ್ಪ ಅಮ್ಮನನ್ನ ನೆನೆಸ್ಕೊಂಡ್ರೆ ಈಗ್ಲೂ ನಗೂ ತಡ್ಯೋಕಾಗಲ್ಲ :)ರಜಾ ಬರ್ದೆ ಇರ್ಲಿ ಅಂತ ದೇವ್ರನ್ನ ಕೇಳೋ ಅಷ್ಟು ಕಾಟ ಕೊಡ್ತಿದ್ವಿ ಅಂದ್ರೆ
just imagine
:)
೧ ರೂಪಾಯಿ ಪೆಪ್ಸಿ ಗೆ ಒಂದು ಕಿಲೋಮೀಟರ್ ದೂರ ಅಜ್ಜನೊಟ್ಟಿಗೆ ಹೋಗೋದು...ಅದೂ ಸರಿಯಾಗಿ ಸೂರ್ಯ ನೆತ್ತಿಗೆ ಬರೋ ಸಮಯಕ್ಕೆ :) ಯಾಕಂದ್ರೆ ನಮ್ಮ ಓಡಾಟ ಮುಗಿಯೋದೆ ಸೂರ್ಯನ ಸುಡು ನೋಟ ನಮ್ಮ ಮೇಲೆ ಬಿದ್ದಾಗ ತಾನೆ ....ಅಜ್ಜ ನಾ ಕರೆದಲ್ಲೆಲ್ಲಾ ಬೇಸರಿಸದೇ ಬರೋರು ಅನ್ನೋದು ಪಕ್ಕಾ ಗೊತ್ತಿತ್ತು ...ಹೀಗಾಗೆ ನನ್ನೆಲ್ಲಾ ಕಿಲಾಡಿಗಳಿಗೂ ಅಜ್ಜನೇ ಬೈಸಿಕೊಳ್ಳೋದು :) ಇದು ೨ ತಿಂಗಳ ರಜಾದಲ್ಲಿ ಒಂದುವರೆ ತಿಂಗಳ ಖಾಯಂ
routine ..
.ಅದ್ಯಾಕೋ ಆ ಚಿಲ್ಲು ಚಿಲ್ಲು ಭಾವಗಳೇ ಮೊದಲು ಮನಸ್ಸಿಗೆ ಮೂಡೋದು ..ಅದೇ ತುಂಬಾ ಇಷ್ಟ ಆಗೋದು :)
ಒಂದು ದಿನ ಬೆಟ್ಟ ನಮ್ಮ
target ಆದ್ರೆ ಇನ್ನೊಂದು ದಿನ ಹೊಳೆ ....
ಮಧ್ಯಾಹ್ನ ಅಪ್ಪನ ಕೋಲು ಮತ್ತವನ ಕಾಲು ಕಾಣೋ ತನಕಾನೂ ಅಲ್ಲಿಯೆ ನಮ್ಮ ಬೀಡು ..ಮನೆಗೆ ಬಂದು ಒಂದಿಷ್ಟು ಮಂತ್ರಾಕ್ಷತೆ ಹಾಕಿಸಿಕೊಂಡು ಊಟ ಮಾಡೋವಾಗ್ಲೂ ನಿಲ್ಲದ ಅಮ್ಮ ,ದೊಡ್ಡಮ್ಮನ ಮಾತಿನ ಛಾಟಿಗೆ ಮತ್ತೆ ನಮ್ಮ ಸಹಾಯಕ್ಕೆ ಬರೋದು ಮುದ್ದು ಅಜ್ಜ ..."ಈಗ ಆಡ್ದೆ ಇನ್ಯಾವಾಗ ಆಡ್ತಾರೆ ..ಬಿಡಿ ಪಾಪ ರಜಾದಲ್ಲೂ ಮನೆನಲ್ಲೇ ಕೂರಿಸಬೇಡಿ "ಅಂತ ಪ್ರೀತಿ ಮಾಡ್ತಾರೆ :)ಪಾಪ ನನ್ನಜ್ಜ ....
ಲಗೋರಿ ಆಟ ಆಡಿ ಬೀಳೋದು ,ಸಣ್ಣ ಸಣ್ಣ ಹೊಡೆದಾಟ ,ಸಿಟ್ಟು ಮಾಡಿಕೊಂಡು ಆಟ ಬಿಟ್ಟು ಮನೆಗೆ ಬರೋದು ...ಅಮ್ಮನ ಬಳಿ ಇಷ್ಟುದ್ದದ
complaint ಹೇಳೋದು ...ಅಮ್ಮ ಮಾಡಿಟ್ಟಿರೋ ಚಿಪ್ಸ್ ನಾ ಎರಡೇ ದಿನಕ್ಕೆ ಖಾಲಿ ಮಾಡೋದು, ಮತ್ತೆ ಮರುದಿನ ಹೋಗಿ ಅಮ್ಮಾ ತಿನ್ನೋಕೆ ಕೊಡು ಅನ್ನೋದು ....
ಒಂದಿಷ್ಟು ಚಿಕ್ಕ ಚಿಕ್ಕ ಖುಷಿಗಳು ....
ಇನ್ನು ಅಜ್ಜನ ಮನೆಗಂತ ಹೋದ್ರೆ ಮುಗಿದೇ ಹೋಯ್ತು ..ನನ್ನದೇ ಅಧಿಪತ್ಯ ಅಲ್ಲಿ ...ಏನ್ ಮಾಡಿದ್ರೂ ಯಾರೂ ಕೇಳೊರಿಲ್ಲ ...ಜೋರು ಮಾಡೋ ಅಮ್ಮನಿರಲ್ಲ...ಬೈಯ್ಯೊ ಅಪ್ಪ ಇರಲ್ಲ ...ಎಷ್ಟೆ ಹೊತ್ತಿಗೆ ಮನೆಗೆ ಹೋದ್ರು ಪ್ರೀತಿಯ ಊಟ ಬಡಿಸೊ ಅತ್ತೆ ,ಪಕ್ಕ ಕೂತು ಮಾತಾಡೋ ಮಾವ .... ಪಕ್ಕಾ ಅಣ್ಣಂದಿರಂತೆ ಗೋಳು ಹೊಯ್ಕೊಳೋ ಬಾವಂದಿರು....ಅವರೊಟ್ಟಿಗೆ ನೋಡೋ ಕ್ರಿಕೆಟ್ ...ಸುತ್ತೋ ಬೆಟ್ಟ ಗುಡ್ಡ ....ನಾ ಹೇಳಿದಂತೆ ಕೇಳೋ ಆಟದ ರೂಲ್ಸ್ .ಮಾವ ನಂಗತ ತರೋ ಚಾಕ್ಲೆಟ್ಸ್ ...ನಂಗೆ ಮಾತ್ರ ಸಿಗೋ ದೊಡ್ಡ ಪಾಲಿನ ನೇರಳೆ ಹಣ್ಣು :)..ವಾಹ್ !!
really missing something :(
ಈಗ ಮನೆಗೆ ಹೋದ್ರೆ ಅದೇ ಮುದ್ದು ತೋರೋ ಅಜ್ಜ ಇದ್ದಾರೆ ...ಉಳಿದವರೆಲ್ಲರದೂ ಬದಲಾದ ಭಾವ....ಕೆಲಸ ಮಾಡಿ ಕೊಡ್ತೀನಿ ಕೊಡಮ್ಮ ಅಂದ್ರೆ ಬೇಡ ಪುಟ್ಟಿ ಸುಮ್ಮನೆ ಕೂತುಕೊಂಡು ಮಾತಾಡು ಅನ್ನೊ ಅಮ್ಮ ! ತರ್ಲೆ ಮಾಡಿದ್ರೂ ಬೈಯದೇ ನಕ್ಕು ಬಿಡೋ ಅಪ್ಪ !...ಅಪ್ಪ ಅಮ್ಮನಂತೆ ಪ್ರೀತಿ ಮಾಡೋ ದೊಡ್ಡಪ್ಪ ದೊಡ್ದಮ್ಮ....ಹತ್ತಿರ ಕೂರಿಸಿಕೊಂಡು ಕಣ್ಣೀರಾಗೋ ಅಜ್ಜಿ ...ತರ್ಲೆ ತಮ್ಮ ಕೂಡಾ ಹೊಡೆದಾಡೋಕೆ ಬರಲ್ಲ ...ನಾನೂ ಆಟಕ್ಕೆ ಬರ್ತೀನಿ ಅಂದ್ರೆ ಹೋಗಕ್ಕ ನೀ ದೊಡ್ಡವಳಾಗಿದ್ದೀಯಾ ಅಂದು ಆಟಕ್ಕೇ ಸೇರಿಸಿಕೊಳ್ಳಲ್ಲ :(
ದೊಡ್ಡವಳಾದ್ರೆ ಆಟ ಆಡ್ಬಾರ್ದಾ
:(
....ರಜಾ ಅಂದ್ರೆ ಮನೆ ಒಂದು ರಣರಂಗ ಆಗ್ತಿತ್ತು ಆಗ ,ಮನೆಯಲ್ಲಿ ಒಬ್ಬೊಬರಿಗೆ ಒಂದು ಟೀವಿ ಬೇಕಿತ್ತು ರಾತ್ರಿ ..ಆದರಿವತ್ತು ತಮ್ಮ ಮಾತ್ರ ಬೇಸಿಗೆ ರಜಾ ಅಂತ ಮನೆಯಲ್ಲಿರೋದು ...ಕಾರುಬಾರೆಲ್ಲ ಅವಂದೆ ...
IPL ಬಿಟ್ಟು ಬೇರೆ ಏನನ್ನೂ ನೋಡೋಕೆ ಬರದ ಪ್ರಾಣಿ ಅದು..ಪಾಪ ಅವನೇನು ಮಾಡಿಯಾನು ....ದಿನಕ್ಕೊಂದು ಫೋನ್ ಮಾಡಿ "ಅಕ್ಕಾ
holidays are too boaring" ಅಂತ ಹೇಳ್ತಾನೆ !!ನಾ ಖುಷಿಸುತ್ತಿದ್ದ ರಜಾ ಇವತ್ತು ಬೇಜಾರಾಗೋ ಅಷ್ಟು ಬದಲಾಗೋಯ್ತಾ ??!! ಬರಿಯ ಏಳೆಂಟು ವರ್ಷಕ್ಕೆ !!!
ಮನೆ ಪ್ರಶಾಂತವಾಗಿದೆ ...ಅವತ್ತಿನ ಯುದ್ದವಿಲ್ಲ..ಕಿಲಾಡಿ ಮಾಡೋ ಮಕ್ಕಳಿಲ್ಲ ...ಕಿರುಚಿ ಹಾರಾಡಿ ಗೋಳು ಹೊಯ್ಯೋರಿಲ್ಲ ...ಆದರೆ ...ಅವರ ಮನಸ್ಸಲ್ಲೂ ಕೂಡಾ ಎನೋ ತಳಮಳ ಸ್ಪಷ್ಟವಾಗಿ ಕಂಡಿತ್ತು ಇವತ್ತು ..."ಇದ್ಯಾಕೋ ಬೇಸಿಗೆ ರಜಾ ಅಂತಾನೆ ಅನಿಸ್ತಿಲ್ಲ ಪುಟ್ಟಿ "ಅನ್ನೊ ಅಮ್ಮನ ಈ ಮಾತು ಇಷ್ಟು ಭಾವವನ್ನಿಲ್ಲಿ ಹೇಳೋ ತರ ಮಾಡಿದ್ದು ..
ನಂಗದೇ ಪುಟ್ಟ ಹಳ್ಳಿಯ ಹುಡುಗಿಯಾಗಿರೋದೆ ಇಷ್ಟ ...ಅಜ್ಜ ಅಜ್ಜಿಯ ಮುದ್ದಿನ ಮೊಮ್ಮಗಳಾಗಿ ,ಅಮ್ಮ ಬೈಯದೇ ಯಾವೊಂದು ಕಡ್ಡಿಯನ್ನೂ ಅಲ್ಲಾಡಿಸದ ಸೋಂಬೇರಿ ಮಗಳಾಗಿ,ಅಪ್ಪನ ಜೋರಿಗೆ ಮಾತ್ರ ಹೆದರೋಳಾಗಿ ,ದೊಡ್ಡಪ್ಪ ದೊಡ್ಡಮ್ಮನ ತರ್ಲೆ ಪುಟ್ಟಿಯಾಗಿ,.....
ಮಾವ ಅತ್ತೆಗೆ ಮಗಳಾಗಿ ,ಬಾವಂದಿರಿಗೆ ಗೋಳು ಹೊಯ್ಯೋ ತಂಗಿಯಾಗಿ ,ನನ್ನದೇ
domination ನಡಿಸೋ ಬಜಾರಿಯಾಗಿ,ಬೆಟ್ಟ ಸುತ್ತಿ,ಹೊಟ್ಟೆ ತುಂಬೋ ಅಷ್ಟು ಹಣ್ಣು ತಿನ್ನೋ ಅದೇ ಪುಟ್ಟ ಹಳ್ಳಿಯ ಪುಟ್ಟ ಹುಡುಗಿಯಾಗಿರೋದೇ ನಂಗಿಷ್ಟ :(
ಹೌದು ನಂಗದೆ ಪುಟ್ಟ ಹಳ್ಳಿಯ ಪ್ರೀತಿಯ ಪುಟ್ಟಿಯಾಗಿರೋದೆ ಇಷ್ಟ :(
ಬದುಕ ಬಸ್ಸಿನಲ್ಲಿ ಮಸ್ತಿಯ,ತಲೆಬಿಸಿ ಇರದ ಈ ನಿಲ್ದಾಣದಲ್ಲೊಂದು ಕಾಯಂ ತಂಗುದಾಣವಿರಬೇಕಿತ್ತು ಅಲ್ವಾ??....ಬಿಸಿಲ ಕಾವಿರಲ್ಲ ...ಮನದಲ್ಲೊಂದೂ ನೋವಿರಲ್ಲ ....ಸುಸ್ತಿನ ಭಾವ ಇರಲ್ಲ ....
ನಾನಂತು ನನ್ನ ಟಿಕೇಟ್ ನಾ ಈ ಸ್ಟಾಪ್ ಗೆ ರಿಸರ್ವ್ ಮಾಡ್ತಿದ್ದೆ ಕಣ್ರೀ....ಪರ್ಮನೆಂಟ್ ಆಗಿ :)
ನನ್ನನ್ನ ಪ್ರೀತಿಸೋ ,ಇಷ್ಟ ಪಡೋರು ಮಾತ್ರಾ ಇರೋ ಮತ್ತದೇ ನಿಲ್ದಾಣಕ್ಕೆ .....