Sunday, September 9, 2012

ನನಗಿಬ್ಬರು ಹೊಸ ಅಕ್ಕಂದಿರು 
                  ಭವಿಷ್ಯದ ಓದಿಗಾಗಿ ಮನೆಬಿಟ್ಟು 15 ದಿನಗಳೇ ಕಳೆದು ಹೋಯಿತು !!ಬಂದ ಒಂದು ವಾರ ಅಳುವುದರಲ್ಲಿಯೇ ಕಳೆದುಹೋಯಿತು ಕೂಡಾ !!ಅಮ್ಮನನ್ನು ಬಿಟ್ಟು 8 ತಾಸುಗಳ ದಾರಿ ಹಿಡಿದು  ಇಷ್ಟು ದೂರ ಬಂದುದ್ದಾಗಿದೆ,,, ತಿರುಗಿ ನೋಡದಷ್ಟು ದೂರ .ಮನದಲ್ಲಿ ಮನೆಯನ್ನೇ ತುಂಬಿಕೊಂಡು ಬೇಸರಿಸುತ್ತಲೇ ಬಂದೆ .ಹೊಸ ಜಾಗ   ಹೊಂದಿಕೊಳ್ಳಲು ತುಂಬಾ ಸಮಯ ಹಿಡಿಯುತ್ತೆ ,ಬೇಸರಿಸದೆ ಖುಷಿಯಾಗಿ ಇರು ,,ಗೊತ್ತಿರದ ಜಾಗದಲ್ಲಿ ಯಾರನ್ನೂ ಅಷ್ಟೊಂದಾಗಿ ಹಚ್ಚಿಕೊಳ್ಳಬೇಡ ,,,ಹೀಗೆ ಏನೇನೋ ನೂರಾರು ಮಾತುಗಳನ್ನು ಹೇಳಿ ಬಿಳ್ಕೊಟ್ತಿದ್ದರು !
                        ಬಂದ ದಿನ ಬೇಜಾರ್ ಆಗಿತ್ತು .ತುಂಬಾ ಅಳುತ್ತಿದ್ದೆ .ಕ್ಲಾಸ್ ಶುರುವಾಗಿರಲಿಲ್ಲ .ಸುಮ್ಮನೆ  ಕುಳಿತಿದ್ದೆ .ಆಗ ನನ್ನನ್ನು ಮಾತಾಡಿಸಿ ,ಆತ್ಮೀಯತೆ ತೋರಿಸಿದ್ದು ನನ್ನ pg seniars  !ನಾನ್ಯಾರೋ ಅವರ್ಯಾರೋ ?? ತಂಗಿ ತರಹ ಪ್ರೀತಿ ಮಾಡುತ್ತಾರೆ .ಅವರ ಆತ್ಮೀಯತೆಗೆ ಮಾತುಗಳೇ ಬರುತ್ತಿಲ್ಲ .ಮನೆಯ ನೆನಪು ಅಷ್ಟೊಂದು ಕಾಡುತ್ತಿಲ್ಲ .ಇವರನ್ನು ನೋಡುತ್ತಿದ್ದರೆ ನನಗೆ ನನ್ನ ಮನೆಯ ಅಕ್ಕಂದಿರೆ ನೆನಪಾಗುತ್ತಾರೆ .ಸ್ವಂತ ಅಕ್ಕಂದಿರಿಲ್ಲದಿದ್ದರು ನನಗೆ ಸ್ವಂತ ಎನಿಸುವಷ್ಟು ಆತ್ಮೀಯತೆ ತೋರುವರು ನನ್ನ ಮನೆಯ ಅಕ್ಕಂದಿರು ..ಇಲ್ಲಿಯೂ ಹಾಗೆಯೇ .ಯಾವುದೇ ಹುಳುಕಿಲ್ಲದೆ ನನಗೆಂದೆ ಅವರ ಕೆಲವು ಸಮಯ ,ವಸ್ತು ಗಳನ್ನು ಕೊಡುತ್ತಿದ್ದರೆ ನಿಜಕ್ಕೂ ಮನೆಯ ಭಾವ ಅನುಭವ !!...
                 ಅಮ್ಮಾ  ..ನನ್ನ ಬಗ್ಗೆ ಚಿಂತಿಸದಿರು ,ಒಳ್ಳೆಯ ಮನೆ ,ಒಳ್ಳೆಯ ಪರಿಸರ ನನ್ನದಾಗಿದೆ .ಹಾಗೆಯೇ ಎಂದಿನಂತೆ ಓದು ಸಾಗಿದೆ .ಒಮ್ಮೆ ಸ್ನೇಹಿತರಂತೆ ಮಾತಾಡುವ seniars ರೂಮ್ ಮೇಟ್ಸ್ ಗಳು ಇನ್ನೊಮ್ಮೆ ಅಕ್ಕಂದಿರಾಗಿ ಆದರಿಸುತ್ತಾರೆ ,!ಮಗದೊಮ್ಮೆ ಮನೆಯವರಂತೆ ಸಾಂತ್ವಾನಿಸುತ್ತಾರೆ ..ತುಂಬಾ ನಗಿಸುತ್ತಾರೆ .ಕೆಲವೊಮ್ಮೆ ಕಾಲೆಯುತ್ತಾರೆ ..ಯಾರೊಂದಿಗೂ ಅಷ್ಟಾಗಿ ಮಾತಾಡದ ನಾನು ಇಲ್ಲಿ ತುಂಬಾ ಮಾತಾಡುತ್ತಿದ್ದೇನೆ .ಮಾತಾಡದಿದ್ದರೆ ಇವರು ಬಿಡುವುದಿಲ್ಲ .ನಿನ್ನ ಜೊತೆ ಲೆಕ್ಕವಿಲ್ಲದಷ್ಟು ಸಾರಿ ಹೇಳ್ತಿದ್ದೆ ..ನನಗೊಬ್ಬ ಅಕ್ಕ ಬೇಕಿತ್ತೆಂದು !!ಆದರೆ ನನಗೇ  ಅಕ್ಕ ಎಂಬ ಪದವಿ ಕೊಟ್ಟಿದ್ದೆ ನೀನು .ಏನೇ ಆಗಲಿ ಅಮ್ಮ,,,,,,,, ನನಗೆ ಇಲ್ಲಿ ಇಬ್ಬರು ಆತ್ಮೀಯ  ಅಕ್ಕಂದಿರು ...ಕೇರ್ ಮಾಡುತ್ತಾ ಮನಸ್ಸಿಗೆ ಹತ್ತಿರದವರಾಗಿದ್ದಾರೆ ಎನ್ನಲು ಖುಷಿ ಪಡುತ್ತೇನೆ.


                                  

1 comment:

  1. ಸಂಬಂಧ ಬರಿ ರಕ್ತದಿಂದಲೇ ಇರಬೇಕು ಎನ್ನುವ ಮಾತುಗಳು ಹಳೆಯದು. ಕೆಲವು ನಂಟುಗಳು ಬಿಡಿಸಲಾರದ್ದು..ಈ ಬ್ಲಾಗ್ ಲೋಕದಲ್ಲೂ ನಿಮಗೆ ಬೇಕಷ್ಟು ಮನೆಯ ಮಂದಿ ಸಿಗುತ್ತಾರೆ...ಸುಂದರ ಬರಹ...

    ReplyDelete