Tuesday, September 4, 2012

ಸಾಗುತ ದೂರ ,
     ಆಗಷ್ಟೇ results ಬಂದಿತ್ತು .ಶಿರಸಿಯ ಬೆಲ್ ಪೂರಿ ಸೆಂಟರ್ ನಲ್ಲಿ ನಿಂತುಕೊಂಡು ಗಂಟೆಗಟ್ಟಲೆ ಮಾತಾಡುತ್ತ ,ಹರಟುತ್ತಾ ಇದ್ದ ದಿನಗಳು ನಿನ್ನೆ ಮೊನ್ನೆಯವು ಎನಿಸುತ್ತಿದೆ ,!ಆದರೆ ಆ ದಿನಗಳು ಕಳೆದು 10 20 ವಾರಗಳೇ ಆಗಿವೆ!!ಬೆಳಿಗ್ಗೆಯಿಂದ ಸಂಜೆಯ ವರೆಗೂnonstop ಮಾತಾಡುತ್ತ ,ಕೆಲವೊಮ್ಮೆ ಮುನಿಸಿಕೊಲ್ಲುತ್ತಾ ಚಿಲ್ಲು ಚಿಲ್ಲಾಗಿ ಇಡಿ campus ನಮ್ಮದೇ ಎಂದು ಓಡಾಡುತ್ತಿದ್ದ ಸ್ನೇಹಿತರೆಲ್ಲ ಚದುರಿದ್ದೇವೆ .ಹಾಗಂತ ಮಾತುಗಳು ,ವಿಷಯ ವಿನಿಮಯ ,ತುಂಟತನ ಮುಗಿದಿಲ್ಲ .ವಾರಕ್ಕೆ ಒಂದುಸಲ ಮಾತಾಡುತ್ತೇವೆ .ಅವರವರ campus ಬಗ್ಗೆ ಗಂಟೆಗಟ್ಟಲೇ ಹರಟುತ್ತೇವೆ*
        .ನಿನ್ನೆಯಷ್ಟೇ ಆತ್ಮೀಯ ಗೆಳತಿಯೊಬ್ಬಳು 'ಮನೆ ತುಂಬಾ ನೆನಪಾಗ್ತಾ ಇದೆ ಕಣೋ ,ಮಿಸ್ ಮಾಡ್ಕೊಂತ ಇದೀನಿ 'ಅಂದ್ಲು .ನನಗೂ ಹಂಗೆ ಅನಿಸ್ತಿದೆ .ಮನೆಯಲ್ಲಿ 'ಪುಟ್ಟಿ 'ಆಗಿ ಇದ್ದು ಈ ಹೊಸ ಊರಲ್ಲಿ pay in guest ಆಗಿ ಇರೋದು ಕೊಂಚ ಕಷ್ಟ ಅನಿಸ್ತ ಇದೆ ..ಏನ್ ಮಾಡೋಣ ಹೇಳಿ .ಓದ್ಬೇಕಂದ್ರೆ ಕೆಲವೊಂದಿಷ್ಟು sacrifice ಮಾಡ್ಬೇಕು .ಆವತ್ತು ಮನೆ ಇಂದ ಚಿಕ್ಕಮಗಳೂರ್ ಗೆ ಹೊರಟು ನಿಂತಾಗ ಎಲ್ಲರೂ ಬೇಸರಿಸಿದರು .ಆದ್ರೆ ನಾನು ಖುಷಿ ಪಟ್ಟೆ !.ಹೊಸ ಜಾಗ ,ever cool campus ,ಏನೋ ಒಂದು ತರದ ಹುರುಪಿತ್ತು .!
                ಹಂಗೆ ರೂಂ ಮೇಟ್ಸ್ ಕೂಡಾ ತಂಗಿ ತರ ಪ್ರೀತಿ ಮಾಡ್ತಾರೆ .pg ಮನೆ ಅಗ್ಬಿಟಿದೆ .!ಆದ್ರೆ ನನ್ನೂರ ನೆನಪು ಅವಾಗ್ ಅವಾಗ ಬರ್ತಾ ಇದೆ.ಮನೆಯ ಅಪ್ಪೆಹುಳಿ ,ತೆಳ್ಲೆವು ಎಲ್ಲದು ಸಿಕ್ಕಾಪಟ್ಟೆ ನೆನಪು   .ಸ್ವಲ್ಪ ಬೇಜಾರ್ ಅನ್ಸುತ್ತೆ .ಪುಟ್ಟ ತಮ್ಮ ,ಅಜ್ಜ ಅಜ್ಜಿ  ಮನೆಯ ಭಾಂದವ್ಯ ,,,,,,,realy missing something ಅನ್ಸ್ತಿದೆ .!ಬದುಕು ಬದಲಾಗಿದೆ ,dreams ಗಳು aims ಗಳಾಗ್ತಾ ಮುಂದೆ ಮುಂದೆ ಸಾಗ್ತಾ ಬಡ್ತಿ ಪಡೆದಿವೆ ! !still ಮನಸ್ಸಿನ ಒಂದು ಮೂಲೆ ಮನೆ ,ಆತ್ಮೀಯ ಗೆಳತಿಯರ ಬಗೆಗೆ ದಿನಕ್ಕೊಮ್ಮೆ ಯೋಚಿಸುತ್ತೆ .!!ಏನೇ ಇರ್ಲಿ ,ಬದುಕನ್ನ ನೋಡುವ ರೀತಿ ಬದಲಾಗಿದೆ .ದೂರ ಆಗಿದ್ರಿಂದ value ತಿಳಿತಿದೆ .!ಹೇಳ್ತಾರಲ್ವ ,ದೂರ ಇದ್ರೆ ಮಾತ್ರ we can feel ಅಂತ !!ನಿಜ್ವಾಗ್ಲು ಕಣ್ರೀ ...ಲೈಫೂ ಹಿಂಗೇನೆ
ಕಳೆದುಹೋದ ನನ್ನ ಮನೆಯನ್ನು ಇಲ್ಲಿ ಹುಡುಕುತ್ತಾ ,,,,,,,,,
ಸಿಕ್ಕಿದ್ರೆ ಹೇಳ್ತೀರ ಅಲ್ವಾ ???!

ಹಾಗೆ ಸುಮ್ನೆ ,
          ಬೇಸರಕ್ಕೆ ಒಂದಷ್ಟು ಮಾತುಗಳು ,,,ನೀವು ಬೇಸರಿಸದಿರಿ .

4 comments:

  1. ನಮಸ್ತೆ...ಮನೆಯಿಂದ ಆರೇಳು ತಾಸಿನ ಹಾದಿಹಿಡಿದು ಹೊಸ ಆಸೆಯ ಹೊತ್ತು ಬಂದವಿರಿಗೆಲ್ಲವೂ ಈ ನೆನಪುಗಳು ಕಾಡುವುದು ಸಹಜ...ಪದವಿ ಮುಗಿಸಿ ಹೊರಹೋಗುವ ಹೊತ್ತಿಗೆ ಇದು ನಮ್ಮನೆಯಾಗಿ,ಕೆಲಸ ಮಾಡುವ ಜಾಗ ಪರಸ್ಥಳ ಎಂದೆನಿಸುತ್ತದೆ..ಮುಂದೆ ಕೆಲದಿನಗಳಲ್ಲಿ ಆದೂ ನಮ್ಮನೆ ಎನಿಸುತ್ತದೆ ...ಹೀಗೆ...ಇದು ನಿರಂತರ...

    ಬ್ಲಾಗಾಭಿಯಾನಕ್ಕೆ ಶುಭವಾಗಲಿ...ಬರವಣಿಗೆ ಶೈಲಿ ಆಪ್ತವೆನಿಸಿತು..ಮುಂದುವರೆಸಿ...

    ವಂದನೆಗಳೊಂದಿಗೆ
    ನಿಮ್ಮನೆ ಹುಡುಗ,
    ಚಿನ್ಮಯ ಭಟ್

    ReplyDelete
  2. ವಿಧ್ಯಾಬ್ಯಾಸ ನಿಮಿತ್ತ ಊರು ಬಿಡುವ ಪ್ರತಿಯೊಬ್ಬರ ಮನೋವೇದನೆಯಿದು... ಪುಟ್ಟ ಬರಹದಲ್ಲೇ ಪುಟಗಟ್ಟಲೆ ಭಾವವನ್ನು ತುಂಬಿದ್ದೀರಿ.. ಚೆನ್ನಾಗಿದೆ.. ದಯವಿಟ್ಟು ಮುಂದುವರೆಸಿ,
    ಹುಸೇನ್(nenapinasanchi.wordpress.com)

    ReplyDelete

  3. ಧನ್ಯವಾದಗಳು ,,

    ಬ್ಲಾಗ್ ಗೆ ಬರ್ತಾಯಿರಿ .

    ReplyDelete
  4. ಹಾರುತ ದೂರ ದೂರ ಮೇಲೇರುವ ಹಕ್ಕಿ ತನ್ನ ಗೂಡನ್ನು ಒಮ್ಮೆ ನೋಡಿದಾಗ ಮೂಡುವ ಮಾತುಗಳು ನಿಮ್ಮ ಬ್ಲಾಗ್ನಲ್ಲಿ ಪದಗಳಾಗಿವೆ..ಸುಂದರವಾಗಿದೆ..

    ReplyDelete